Tag: ಭಗವಾಧ್ವಜ

  • Shiggaon| ವಿವಾದದ ಬಳಿಕ ಸಂತೆ ಮೈದಾನದಲ್ಲಿ ಹಸಿರು ಬಾವುಟ, ಭಗವಾಧ್ವಜ ತೆರವು

    Shiggaon| ವಿವಾದದ ಬಳಿಕ ಸಂತೆ ಮೈದಾನದಲ್ಲಿ ಹಸಿರು ಬಾವುಟ, ಭಗವಾಧ್ವಜ ತೆರವು

    ಹಾವೇರಿ: ಶಿಗ್ಗಾಂವಿ (Shiggaon) ಸಂತೆ ಮೈದಾನದಲ್ಲಿ ಭಗವಾಧ್ವಜ (Bhagwa Dhwaj) ಹಾಗೂ ಹಸಿರು ಬಾವುಟವನ್ನು ಹಾರಿಸಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಎರಡೂ ಬಾವುಟವನ್ನು ಸಿಬ್ಬಂದಿ ತೆರವುಗೊಳಿಸಿದ್ದಾರೆ.

    ಈ ಹಿಂದೆ ಸಂತೆ ಮೈದಾನದಲ್ಲಿ ನಡೆದ ಕಾರ್ಯಕ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಭಾಷಣ ಮಾಡುವ ವೇಳೆ, ಶಿಗ್ಗಾಂವಿ ಸಂತೆ ಮೈದಾನದಲ್ಲಿ ಮುಸ್ಲಿಂ ಧ್ವಜ ಬಂದಿದೆ. ಇದುವರೆಗೂ ಈ ಧ್ವಜ ಇರಲಿಲ್ಲ. ಈ ಕ್ಷೇತ್ರದಲ್ಲಿ ಹೇಳೋರು ಕೇಳೋರು ಇಲ್ವಾ? ನಾವೂ ಸಂತೆ ಮೈದಾನದಲ್ಲಿ ಭಗವಾಧ್ವಜ ಹಾರಿಸುತ್ತೇವೆ. ಇದೆಲ್ಲ ನಿಲ್ಲಬೇಕೆಂದರೆ ಭರತ್ ಬೊಮ್ಮಾಯಿಯನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಭಾರತ ಬರಲಿ, ಬಾರದೇ ಇರಲಿ ನಾವು ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುತ್ತೇವೆ: ಪಾಕಿಸ್ತಾನ

    ಈ ಹಿನ್ನೆಲೆ ರಾತ್ರೋರಾತ್ರಿ ಲೈಟ್ ಕಂಬಕ್ಕೆ ಹಿಂದೂಪರ ಸಂಘಟನೆಗಳು ಹಸಿರು ಬಾವುಟದ ಮೇಲೆ ಇನ್ನಷ್ಟು ಎತ್ತರಕ್ಕೆ ಭಗವಾಧ್ವಜವನ್ನು ಹಾರಿಸಿದ್ದರು. ಭಾರೀ ವಿವಾದದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಎರಡು ಧ್ವಜಗಳನ್ನೂ ಇಳಿಸಿದೆ. ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಸೂಚನೆ ಮತ್ತು ಚುನಾವಣಾ ಆಯೋಗದ ಸೂಚನೆ ಮೇರೆಗೆ ಸಿಬ್ಬಂದಿ ಧ್ವಜ ಇಳಿಸಿದ್ದಾರೆ. ಸಂತೆ ಮೈದಾನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಗೋಕಾಕ್‌ ಜಿಲ್ಲೆಗೆ ಆಗ್ರಹಿಸಿ ನಿರಂತರ ಹೋರಾಟ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

  • ಮಸೀದಿ ಬಳಿಯಿರುವ ಭಗವಾಧ್ವಜ ತೆರವುಗೊಳಿಸಲು ಪ್ಲ್ಯಾನ್ ಆರೋಪ; ಮಾಜಿ ಶಾಸಕನ ವಿರುದ್ಧ ಕೇಸ್

    ಮಸೀದಿ ಬಳಿಯಿರುವ ಭಗವಾಧ್ವಜ ತೆರವುಗೊಳಿಸಲು ಪ್ಲ್ಯಾನ್ ಆರೋಪ; ಮಾಜಿ ಶಾಸಕನ ವಿರುದ್ಧ ಕೇಸ್

    ಹಾವೇರಿ: ಮಸೀದಿ ಮುಂಭಾಗದಲ್ಲಿರುವ ಭಗವಾಧ್ವಜ (Bhagwadhwaja) ತೆರವುಗೊಳಿಸಲು ಪ್ಲ್ಯಾನ್‌ ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮತ್ತು ರಬ್ಬಾನಿ ಸವಣೂರ ವಿರುದ್ಧ ಪ್ರಕರಣ ದಾಖಲಾದ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏನಿದು ಧ್ವಜ ವಿವಾದ?
    ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಮಸೀದಿ (Mosque) ಬಳಿ ಇರುವ ಭಗವಾಧ್ವಜವನ್ನು ತೆರವುಗೊಳಿಸುವ ವಿಚಾರವಾಗಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಶಿಗ್ಗಾಂವಿಯ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ರಬ್ಬಾನಿ ಸವಣೂರ ಅವರ ಸಂಭಾಷಣೆ ನಡೆದಿದೆ ಎಂಬ ಆರೋಪಗಳೂ ಕೇಳಿಬಂದಿತ್ತು. ಇದನ್ನೂ ಓದಿ: ರಾತ್ರೋರಾತ್ರಿ ಇತಿಹಾಸ ಪ್ರಸಿದ್ಧ ಪಿಲಿಚಾಮುಂಡಿ ದೈವಸ್ಥಾನದ ನಿರ್ಮಾಣ ಹಂತದ ಭಂಡಾರಮನೆ ಧ್ವಂಸ

    ಈ ಕುರಿತ ದೂರವಾಣಿ ಸಂಭಾಷಣೆ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಹಾವೇರಿ ಪೊಲೀಸರು ಮಾಜಿ ಶಾಸಕ ಖಾದ್ರಿ ಹಾಗೂ ರಬ್ಬಾನಿ ಸವಣೂರ ವಿರುದ್ಧ ಹುಲಗೂರು ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಧ್ವನಿಮುದ್ರಣ ಮಾಡಿಕೊಂಡು ಆಡಿಯೋ ಎಫ್‌ಎಸ್‌ಎಲ್ ವರದಿಗೆ ಕಳಿಸಲು ನಿರ್ಧಾರ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಾರಡಗಿ ಗ್ರಾಮದಲ್ಲಿ ಮಸೀದಿ ಬಳಿಯ ಭಗವಾ ಧ್ವಜ ಇರುವ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬೇರೆ ರಾಜ್ಯಗಳಲ್ಲಿ ಬಿಜೆಪಿ ಎಷ್ಟೆಷ್ಟು ಇನ್ವೆಸ್ಟ್‌ಮೆಂಟ್ ಮಾಡಿದೆ ಎಂಬುದನ್ನು ಬಹಿರಂಗ ಪಡಿಸಲಿ – ಸ್ವಪಕ್ಷಕ್ಕೆ ಹೆಬ್ಬಾರ್ ಸವಾಲು

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಎರಡು ಕೋಮುಗಳ ಮಧ್ಯೆ ದ್ವೇಷ ವೈಮನಸ್ಸಿನ ಭಾವನೆ ಹೆಚ್ಚಿಸುವ ಪ್ರಯತ್ನ ನಡೆದಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಒಳಸಂಚು ರೂಪಿಸಿರುವ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ರಬ್ಬಾನಿ ಸವಣೂರು ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ವಿಶೇಷ ಟೀಂನಿಂದ 1,000 ಕ್ಕೂ ಅಧಿಕ ಸಿಸಿಟಿವಿ ಪರಿಶೀಲನೆ

  • ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

    ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

    – ಖುದ್ದು ಮಹಿಳೆಯರೇ ಧ್ವಜ ಹೊಲಿದು ಹಂಚಿಕೆ

    ಬೀದರ್: ಮಂತ್ರಾಕ್ಷತೆ ಬಳಿಕ ಮನೆ ಮನೆಗೆ ಭಗವಾಧ್ವಜ (Bhagwa Dhwaja) ವಿತರಣೆ ಮಾಡಲಾಗುತ್ತಿದೆ. ಬೀದರ್‌ನ ರಾಮಭಕ್ತರು ಈ ಕೆಲಸ ಮಾಡುತ್ತಿದ್ದಾರೆ. ಜನವರಿ 22ರಂದು ಪ್ರತಿ ಮನೆ ಮನೆಯ ಮೇಲೂ ಭಗವಾಧ್ವಜ ಹಾರಾಡುವಂತೆ ಮಾಡುತ್ತಿದ್ದಾರೆ.

    ಬೀದರ್‌ನ (Bidar) ಈ ಮಹಿಳಾ ಭಕ್ತರು ಶ್ರೀರಾಮನಿಗಾಗಿ (Sri Ram) ಬರೋಬ್ಬರಿ ಒಂದು ಸಾವಿರ ಭಗವಾಧ್ವಜ ಹಾರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

    ಬೀದರ್ ತಾಲೂಕಿನ ಕಾಡವಾದ ಗ್ರಾಮದ ರಾಮನ ಪರಮ ಭಕ್ತೆಯರು ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆ ವಿತರಣೆಯಿಂದ ಪ್ರೇರಣೆಗೊಂಡಿದ್ದಾರೆ. ಈ ಪ್ರೇರಣೆಯಿಂದ ಒಂದು ಸಾವಿರ ಭಗವಾ ಧ್ವಜಗಳನ್ನ ಸ್ವತಃ ತಾವೇ ಹೊಲಿದು ಹಂಚಿಕೆ ಮಾಡುತ್ತಿದ್ದಾರೆ. ಬಾಲ ರಾಮನ ಪ್ರತಿಷ್ಠಾಪನೆಯ ದಿನ ಗ್ರಾಮದ ಎಲ್ಲಾ ಮನೆಗಳ ಮೇಲೂ ಭಗವಾಧ್ವಜ ಹಾರಾಡಬೇಕೆಂದು ಪಣ ತೊಟ್ಟು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಗೆ ಆಗಮಿಸುವ ಗಣ್ಯರಿಗೆ ಕ್ಯೂಆರ್ ಕೋಡ್ ಪಾಸ್ ಕಡ್ಡಾಯ- ಸ್ಕ್ಯಾನ್ ಆದ ಬಳಿಕವಷ್ಟೇ ಪ್ರವೇಶ

    ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಈಗಾಗಲೇ ಧ್ವಜದ ಬಟ್ಟೆ ವಿತರಿಸಿದ್ದಾರೆ. 500 ಧ್ವಜ ತಯಾರಿಸಿದ್ದು 1 ಸಾವಿರಕ್ಕೂ ಹೆಚ್ಚು ಭಗವಾಧ್ವಜ ತಯಾರಿಸುವ ಪಣ ತೊಟ್ಟಿದ್ದಾರೆ. ರಾಮನ ಪರಮ ಭಕ್ತೆಯರಾಗಿರುವ ಇಂದುಮತಿ ಮರಕಂದಾ, ಸವಿತಾ ನಿನ್ನಿ, ಶ್ರೀದೇವಿ ಮೀನಕೇರಿ, ಸವಿತಾ ಶೀಲವಂತ, ಪದ್ಮಾವತಿ ಕಾರ್ಕನಳ್ಳಿ, ಅಂಬಿಕಾ ಹೂಗಾರ ಎಂಬುವರು ಧ್ವಜ ತಯಾರಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ದಿನ ಬೀದರ್‌ನ ಈ ಗ್ರಾಮದ ಪ್ರತಿ ಮನೆಗಳ ಮೇಲೆ ಭಗವಾಧ್ವಜ ಹಾರಿಸುವ ಮೂಲಕ ಮಹಿಳೆಯರು ರಾಮನಿಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos 

  • ಅಖಂಡ ಭಾರತ ಕೇಸರಿಮಯ ಆಗಲಿದೆ – ವಿಶ್ವ ಹಿಂದೂ ಪರಿಷತ್‌ ಮುಖಂಡ ಗುಡುಗು

    ಅಖಂಡ ಭಾರತ ಕೇಸರಿಮಯ ಆಗಲಿದೆ – ವಿಶ್ವ ಹಿಂದೂ ಪರಿಷತ್‌ ಮುಖಂಡ ಗುಡುಗು

    – ಭಗವಾಧ್ವಜ ಅಳವಡಿಸಲು 20 ಲಕ್ಷದ ಬಾಂಡ್ ಬರೆಸಿಕೊಂಡರೆಂದು ದಿನೇಶ್ ಮೆಂಡನ್ ಅಸಮಾಧಾನ

    ಉಡುಪಿ: ಇಲ್ಲಿನ ಹಿಂದೂ ಸಮಾಜೋತ್ಸವಕ್ಕೆ ನಗರದಲ್ಲಿ ಕೇಸರಿ ಪತಾಕೆ ಮತ್ತು ಭಗವಾಧ್ವಜ (Bhagwa Flag) ಅಳವಡಿಸಲು ಪೊಲೀಸ್ ಇಲಾಖೆ (Udupi Police Department) 10 ಮತ್ತು 20 ಲಕ್ಷದ ಬಾಂಡ್ ಬರೆಸಿಕೊಂಡಿದ್ದಾರೆ ವಿಶ್ವ ಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ಅಸಮಾಧಾನ ಹೊರಹಾಕಿದ್ದಾರೆ.

    ಉಡುಪಿ (Udupi) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2024ರಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಭಗವಾಧ್ವಜ ಹಾಕುತ್ತೇವೆ. ಆಗ ಎಷ್ಟು ಲಕ್ಷ ಬಾಂಡ್‌ ಬರೆಸಿಕೊಳ್ಳುತ್ತೀರಿ..? ಎಂದು ಪ್ರಶ್ನಿಸಿದರಲ್ಲದೇ, ನಾಉ ಒಂದು ಕೋಟಿ ರೂಪಾಯಿ ಬಾಂಡ್‌ ಕೊಡಲು ಸಿದ್ಧರಿದ್ದೇವೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಪ್ರತಿಭಟನಾ ನಿರತ ಕಾರ್ಯಕರ್ತರು ಪೊಲೀಸ್ ವಶಕ್ಕೆ – ಮುನಿರತ್ನ ಏಕಾಂಗಿಯಾಗಿ ಪ್ರತಿಭಟನೆ

    2024ಕ್ಕೆ ಶ್ರೀರಾಮಂದಿರ (Sri Rama Mandira) ಉದ್ಘಾಟನೆಗೊಳ್ಳಲಿದೆ. ಆಗ ನಗರ ಮಾತ್ರವಲ್ಲ, ಪ್ರತಿಯೊಬ್ಬರ ಮನೆಯಲ್ಲೂ ಭಗವಾಧ್ವಜ ಹಾರಾಡುತ್ತದೆ. ಆಗ ಪೊಲೀಸ್ ಇಲಾಖೆ ಹಿಂದೂಗಳ ಮನೆ-ಮನೆಗೆ ಭೇಟಿ ನೀಡಿ 10 ಲಕ್ಷ ಅಲ್ಲ, 10 ಕೋಟಿ ರೂ. ಬಾಂಡ್ ಬರೆಸಿಕೊಂಡರೂ ನಾವು ಸಹಿ ಹಾಕಲು ಸಿದ್ಧರಿದ್ದೇವೆ. ಮುಂದೊಂದು ದಿನ ಅಖಂಡ ಭಾರತ ಕೇಸರಿಮಯ ಆಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್‌? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?

    ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ಕಿರುಕುಳ ನೀಡುತ್ತಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ವಿಹೆಚ್‌ಪಿ ಮುಖಂಡ ಶರಣ್ ಪಂಪ್ ವೆಲ್‌ಗೂ ನಿರ್ಬಂಧ ಹಾಕಿದೆ. ಹಿಂದೂಗಳನ್ನು ಕೆಣಕಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಸೀದಿ ಮೇಲೆ ಭಗವಾಧ್ವಜ ಹಾರಿಸಿ ಪರಾರಿಯಾದ ಕಿಡಿಗೇಡಿಗಳು

    ಮಸೀದಿ ಮೇಲೆ ಭಗವಾಧ್ವಜ ಹಾರಿಸಿ ಪರಾರಿಯಾದ ಕಿಡಿಗೇಡಿಗಳು

    ಬೀದರ್: ಯಾರು ಇಲ್ಲದ ವೇಳೆ ಮಸೀದಿ (Mosque) ಮೇಲೆ ಕಿಡಿಗೇಡಿಗಳು ಭಗವಾಧ್ವಜ (Bhagwa Dhwaj) ಹಾರಿಸಿ ಪರಾರಿಯಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರಾ ಕೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೊರ ವಲಯದ ಜಾಮೀಯಾ ಮಸೀದಿ (Jamia Masjid) ಮೇಲೆ ರಾತ್ರಿ ಭಗವಾಧ್ವಜ ಹಾರಿಸಿ ಕಿಡಿಗೇಡಿಗಳು ಪರಾರಿಯಾಗಿದ್ದು ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ವಿಷಯ ತಿಳಿದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಬಸವಕಲ್ಯಾಣ ಗ್ರಾಮೀಣ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಭಗವಾಧ್ವಜ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.

     

    ಗ್ರಾಪಂ ಕಚೇರಿಯಲ್ಲಿ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ಮಾಡಿದ ಸಿಪಿಐ ನ್ಯಾಮೇಗೌಡ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಕಿಡಿಗೇಡಿಗಳನ್ನು‌ ಕೂಡಲೇ ಬಂಧಿಸುತ್ತೇವೆ. ಯಾರು ಅಶಾಂತಿಗೆ ಕಾರಣವಾಗಬಾರದು‌‌‌ ಎಂದು ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿ ಜೊತೆ ದೋಸ್ತಿ – ಜೆಡಿಎಸ್‌ನಲ್ಲಿ ಅಸಮಾಧಾನ ಸ್ಫೋಟ

    ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು: ಅಮೃತ್ ದೇಸಾಯಿ

    ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು: ಅಮೃತ್ ದೇಸಾಯಿ

    ಧಾರವಾಡ: ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು? ಎಂದು ಧಾರವಾಡ ಬಿಜೆಪಿ ಶಾಸಕ ಅಮೃತ್ ದೇಸಾಯಿ ಪ್ರಶ್ನಿಸಿದ್ದಾರೆ.

    ಈಶ್ವರಪ್ಪ ಮುಂದೊಂದು ದಿನ ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಬಹುದು ಎಂದಿದ್ದಾರೆ. ಅವರು ರಾಷ್ಟ್ರಧ್ವಜ ತೆಗೆಯುತ್ತೇವೆ ಎಂದಿಲ್ಲ. ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು? ಎಲ್ಲರಿಗೂ ರಾಷ್ಟ್ರಧ್ವಜ ಮುಖ್ಯ. ಈಶ್ವರಪ್ಪ ನೂರಾರು ವರ್ಷಗಳ ಬಳಿಕ ಭಗವಾಧ್ವಜ ಹಾರಬಹುದು ಎಂದಿದ್ದಾರೆ ಎಂದು ಧಾರವಾಡದಲ್ಲಿ ಅಮೃತ್ ದೇಸಾಯಿ ಹೇಳಿಕೆ ನೀಡಿದರು. ಇದನ್ನೂ ಓದಿ: ನಟ ಚೇತನ್ ಗೆ ಷರತ್ತುಬದ್ಧ ಜಾಮೀನು

    ಹಿಜಬ್ ವಿವಾದ ಕುರಿತು ಮಾತನಾಡಿದ ದೇಸಾಯಿ, ದೇಶದ ಕಾನೂನು ಗೌರವಿಸುವವರು ಈ ದೇಶದಲ್ಲಿ ಇರಲಿ. ಇಲ್ಲವೇ ದೇಶ ಬಿಟ್ಟು ಹೋಗಲಿ. ಕಳೆದೊಂದು ತಿಂಗಳಿನಿಂದ ಹಿಜಬ್ ವಿವಾದ ಆಗಿದೆ. ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೂ ಕೆಲವರು ಅದನ್ನು ಪಾಲಿಸುತ್ತಿಲ್ಲ ಎಂದರು. ಇದನ್ನೂ ಓದಿ: ಕೋರ್ಟ್ ಮೆಟ್ಟಿಲೇರಿದ ಟಿವಿ ವ್ಯಾಲ್ಯೂಮ್ ವಿವಾದ..!

    ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ತರಗತಿಗೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಕೋರ್ಟ್ ಆದೇಶವನ್ನೇ ಉಲ್ಲಂಘಿಸುವ ಸೊಕ್ಕಿನ ಮಾತು ಆಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.