Tag: ಭಗವಂತ್ ಖೂಬಾ

  • ಅಕ್ರಮ ಗಣಿಗಾರಿಕೆ ಆರೋಪ; ಭಗವಂತ್ ಖೂಬಾಗೆ 25 ಕೋಟಿ ದಂಡ ವಿಧಿಸಿ ನೋಟಿಸ್

    ಅಕ್ರಮ ಗಣಿಗಾರಿಕೆ ಆರೋಪ; ಭಗವಂತ್ ಖೂಬಾಗೆ 25 ಕೋಟಿ ದಂಡ ವಿಧಿಸಿ ನೋಟಿಸ್

    ಕಲಬುರಗಿ: ಅಕ್ರಮ ಗಣಿಗಾರಿಕೆ ಮಾಡಿದ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ ಭಗವಂತ್‌ ಖೂಬಾ (Bhagwanth Khuba) ಅವರಿಗೆ ಕಲಬುರಗಿ ಜಿಲ್ಲೆಯ ಕಾಳಗಿ ತಹಶೀಲ್ದಾರ್‌ (Tahsildar) 25.30 ಕೋಟಿ ರೂ. ದಂಡ ಪಾವತಿಸುವಂತೆ ಸೂಚಿಸಿ ನೋಟಿಸ್ ನೀಡಿದ್ದಾರೆ.

    ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದಲ್ಲಿ 2014ರ ಜು.19 ರಿಂದ 2019ರ ಜು.18ರ ವರೆಗೆ ವಚ್ಚಾ ಗ್ರಾಮದ ಸರ್ವೆ ನಂ.24/4 ರಲ್ಲಿ 2 ಎಕರೆಗೆ ಅನುಮತಿ ಪಡೆದು 8 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಂಜೀವಕುಮಾರ್ ತಿಪ್ಪಣ್ಣ ಜವಕರ್ ಎಂಬವರು ಇದರ ವಿರುದ್ಧ ದೂರು ನೀಡಿದ್ದರು.

    ದೂರಿನ ಆಧಾರದ ಮೇಲೆ ಗಣಿ ಇಲಾಖೆ ಹಾಗೂ ಕಾಳಗಿ ತಹಶೀಲ್ದಾರ ಜಂಟಿ ಪರಿಶೀಲನೆ ನಡೆಸಿದಾಗ, ಅಕ್ರಮ ಗಣಿಗಾರಿಕೆ ನಡೆದಿದೆ ಅನ್ನೋದು ತಿಳಿದುಬಂದಿದೆ. ಬಳಿಕ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ವರದಿ ಬಳಿಕ 25.30 ಕೋಟಿ ರೂ. ದಂಡ ಪಾವತಿಸುವಂತೆ ಮೂರು ಬಾರಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ನೋಟಿಸ್ ಪ್ರಶ್ನಿಸಿ ಖೂಬಾ ಕಾನೂನು ಮೊರೆ ಹೋಗಿದ್ದಾರೆ.

  • ನನ್ನನ್ನು ಮುಗಿಸಬೇಕು ಅಂತ ಭಗವಂತ್‌ ಖೂಬಾ ಪಿತೂರಿ ಮಾಡಿದ್ದಾರೆ: ಪ್ರಭು ಚೌಹಾಣ್‌ ಗಂಭೀರ ಆರೋಪ

    ನನ್ನನ್ನು ಮುಗಿಸಬೇಕು ಅಂತ ಭಗವಂತ್‌ ಖೂಬಾ ಪಿತೂರಿ ಮಾಡಿದ್ದಾರೆ: ಪ್ರಭು ಚೌಹಾಣ್‌ ಗಂಭೀರ ಆರೋಪ

    – ಯುವತಿ ದೂರಿನ ಹಿಂದೆ ಖೂಬಾ ಕೈವಾಡವಿದೆ ಎಂದ ಬಿಜೆಪಿ ಶಾಸಕ

    ಬೀದರ್: ನನ್ನನ್ನು ಮುಗಿಸಬೇಕು ಎಂದು ಭಗವಂತ್‌ ಖೂಬಾ (Bhagwanth Khuba) ಪಿತೂರಿ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್‌ ಖೂಬಾ ವಿರುದ್ಧ ಮಾಜಿ ಸಚಿವ ಪ್ರಭು ಚೌಹಾಣ್‌ (Prabhu Chavan) ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಇತ್ಯರ್ಥವಾಗಿದ್ದರೂ ರಾಜಕೀಯ ಷಡ್ಯಂತ್ರದಿಂದಾಗಿ ಇದನ್ನು ದೊಡ್ಡದು ಮಾಡಲಾಗುತ್ತಿದೆ. ಖೂಬಾರನ್ನು ನಾನು ಸಾಯೋತನಕ ಬಿಡಲ್ಲ ಎಂದು ಶಪಥ ಮಾಡಿದ್ದಾರೆ. ಇದನ್ನೂ ಓದಿ: ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ – ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು

    ಈ ಪ್ರಕರಣದ ಹಿಂದೆ ಭಗವಂತ್ ಖೂಬಾ ಕೈಯಿದ್ದು, ಈ ಟೀಂ ನಾಯಕರು ಭಗವಂತ್ ಖೂಬಾ. ಹುಡುಗಿ ಬಗ್ಗೆ ಏನು ಇಲ್ಲಾ ಸಮಸ್ಯೆ ಇಲ್ಲಾ. ಇದು ನಮ್ಮ ವಿರುದ್ಧ ಮಾಡಿರುವ ಕೆಲಸ ಎಂದು ಖೂಬಾ ಫೋಟೊ ತೋರಿಸಿ ಚೌಹಾಣ್ ಕಿಡಿಕಾರಿದ್ದಾರೆ.

    2013 ಸೇರಿದಂತೆ ಕೆಲವು ಬಾರಿ ಸೋಲಿಸಲು ಪ್ರಯತ್ನ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವರಿಂದ ದೋಖಾ ಆಗಿದ್ದು, ಅವರು ಮುಂದೆ ಬರಲ್ಲಾ. ಹಿಂದೆ ಪಿತೂರಿ ಮಾಡತ್ತಾರೆ. ಇದರಲ್ಲಿ ನಮ್ಮ ಮಗಳೂ ಇದ್ದಾಳೆ. ಆದರೆ, ಅವರಿಗೆ ಆಮಿಷೆ ತೋರಿಸಿದ್ದಾರಾ ಏನು ಗೊತ್ತಿಲ್ಲ. ನೂರಕ್ಕೆ ನೂರು ನಾನು ಸಾಯೋತನಕ ಈ ಟೀಂನ ಬಿಡಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ

    ಕಾನೂನು ಕ್ರಮ ಮಾಡಿಸುತ್ತೇನೆ. ಇದು ಬರೀ ಟ್ರೈಲರ್ ಅಷ್ಟೆ. ಪಿಕ್ಚರ್ ಬಾಕಿ ಇದೆ ಎಂದು ಖೂಬಾ ವಿರುದ್ಧ ಬಿಜೆಪಿ ಶಾಸಕ ಗುಡುಗಿದ್ದಾರೆ.

  • ಕೇಂದ್ರ ಸಚಿವ ಖೂಬಾಗೆ ಬಿಗ್‌ ಶಾಕ್‌ – ಕಿರಿಯ ವಯಸ್ಸಿನ ಸಾಗರ್ ಖಂಡ್ರೆ ವಿರುದ್ಧ ಸೋಲು

    ಕೇಂದ್ರ ಸಚಿವ ಖೂಬಾಗೆ ಬಿಗ್‌ ಶಾಕ್‌ – ಕಿರಿಯ ವಯಸ್ಸಿನ ಸಾಗರ್ ಖಂಡ್ರೆ ವಿರುದ್ಧ ಸೋಲು

    ಬೀದರ್: ಹ್ಯಾಟ್ರಿಕ್ ಗೆಲುವಿನ ನೀರಿಕ್ಷೆಯಲ್ಲಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಮುಖಭಂಗ ಅನುಭವಿಸಿದ್ದಾರೆ. ಕಿರಿಯ ವಯಸ್ಸಿನ ಸಾಗರ್‌ ಖಂಡ್ರೆ (Sagar Khandre) ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

    1.28 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಹಾಲಿ ಸಂಸದ ಭಗವಂತ್ ಖೂಬಾರನ್ನು ಸಾಗರ್‌ ಸೋಲಿಸಿದ್ದಾರೆ. ಕಳೆದ ಬಾರಿಯ ಸೋಲಿನ ಸೇಡನ್ನು ಈಶ್ವರ್ ಖಂಡ್ರೆ ಮಗನ ಮುಖಾಂತರ ತೀರಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ

    ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಸತ್ತಿನಲ್ಲಿ ನಾನು ಧ್ವನಿ ಎತ್ತುತ್ತೇನೆ. ನಮ್ಮ ತಂದೆ ವರ್ಚಸ್ಸು, ಗ್ಯಾರಂಟಿಯ ಅನುಷ್ಠಾನದಿಂದಾಗಿ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಜಯದ ಬಗ್ಗೆ ಸಾಗರ್‌ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

    ಬೀದರ್‌ ಕ್ಷೇತ್ರದಲ್ಲಿ ಭಗವಂತ್‌ ಖೂಬಾ ವಿರುದ್ಧದ ಅಲೆ ಇತ್ತು. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಖೂಬಾ ವಿರುದ್ಧ ಜನ ಅಸಮಾಧಾನ ಹೊರಹಾಕಿದ್ದರು. ಹೊಸ ಹಾಗೂ ಯುವ ನಾಯಕನಿಗೆ ಜನ ಅವಕಾಶ ನೀಡಿದ್ದಾರೆ. ಇದನ್ನೂ ಓದಿ: ಚಾಮರಾಜನಗರ: ಕಾಂಗ್ರೆಸ್‌ ಸಚಿವರ ಪುತ್ರನಿಗೆ ಚೊಚ್ಚಲ ಜಯ

  • ಭಗವಂತ್ ಖೂಬಾಗೆ ಟಿಕೆಟ್ ಬೆನ್ನಲ್ಲೇ ಚೌಹಾಣ್‌ಗೆ ಎದೆನೋವು!

    ಭಗವಂತ್ ಖೂಬಾಗೆ ಟಿಕೆಟ್ ಬೆನ್ನಲ್ಲೇ ಚೌಹಾಣ್‌ಗೆ ಎದೆನೋವು!

    ಬೀದರ್: ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಿಂದ ಹಲವರು ಅಸಮಾಧಾನಗೊಂಡಿದ್ದಾರೆ. ವಿರೋಧದ ನಡುವೆಯೂ ಭಗವಂತ ಖೂಬಾಗೆ ಮತ್ತೆ ಬೀದರ್​ ಟಿಕೆಟ್​ (Bidar Ticket) ಸಿಕ್ಕಿದೆ. ಈ ಬೆನ್ನಲ್ಲೇ ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabu Chauhan) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಭು ಚೌಹಾಣ್ ಅವರು 3 ದಿನಗಳ‌ ಹಿಂದೆ ಮುಂಬೈ ನಗರಕ್ಕೆ ತೆರಳಿದ್ದರು. ಗುರುವಾರ ಸಂಜೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಮುಂಬೈ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರಿಗೆ ಕಿರು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಯಶಸ್ವಿಯಾಗಿದೆ. ಪ್ರಸ್ತುತ ಚೌಹಾಣ್ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.‌ ಇನ್ನೆರಡು ದಿನಗಳಲ್ಲಿ ಗುಣಮುಖರಾಗಿ ಹೊರಬರಲಿದ್ದಾರೆ ಎಂದು ಚೌಹಾಣ್‌ ಆಪ್ತವಲಯ ಮಾಹಿತಿ ನೀಡಿದೆ.  ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

    2022ರಲ್ಲೂ ಕೂಡಾ ಉಸಿರಾಟದ ಸಮಸ್ಯೆಯಿಂದ ಚೌಹಾಣ್ ಆಸ್ಪತ್ರೆ ಸೇರಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಗೆ ಬೀದರ್‌ ಕ್ಷೇತ್ರದಿಂದ ಭಗವಂತ್ ಖೂಬಾಗೆ ಟಿಕೆಟ್ ನೀಡಬೇಡಿ ಎಂದು ಪ್ರಭು ಚೌಹಾಣ್ ಪಟ್ಟು ಹಿಡಿದಿದ್ದರು. ಅಲ್ಲದೇ ವೇದಿಕೆಯಲ್ಲೇ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಕಾಲಿಗೆ ಬಿದ್ದು ಬೇಡಿಕೊಂಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಮತ್ತೆ ಬೀದರ್​ ಟಿಕೆಟ್​ ಭಗವಂತ್ ಖೂಬಾಗೆ ನೀಡಿದೆ.

  • ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಡಿಕೆಶಿಯನ್ನು ಮುಖ್ಯಮಂತ್ರಿಯಾಗಲು ಬಿಡಲ್ಲ: ಭಗವಂತ್ ಖೂಬಾ

    ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಡಿಕೆಶಿಯನ್ನು ಮುಖ್ಯಮಂತ್ರಿಯಾಗಲು ಬಿಡಲ್ಲ: ಭಗವಂತ್ ಖೂಬಾ

    ಬೀದರ್: ಸಿದ್ದರಾಮಯ್ಯ (Siddaramaiah) ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ಜೊತೆಗೆ ಲೋಕಸಭಾ ಚುನಾವಣೆಯ ಬಳಿಕ ಈ ಸರ್ಕಾರದಲ್ಲಿ ಅಸ್ಥಿರತೆಯ ವಾತಾವರಣ ನಿರ್ಮಾಣವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೀದರ್‌ನಲ್ಲಿ (Bidar) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ 5 ವರ್ಷದ ಸಲುವಾಗಿ ರಾಜ್ಯದ ಜನತೆ ಆಯ್ಕೆ ಮಾಡಿದ್ದಾರೆ, ನಾನು ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಸಿದ್ದರಾಮಯ್ಯನವರು ಸ್ಪಷ್ಟವಾಗಿ ಹೇಳಬೇಕು. ಇಲ್ಲವಾದರೆ ಇಬ್ಬರ ಮಧ್ಯ ಅಧಿಕಾರ ಹಂಚಿಕೆಯಾಗಿದೆ ಎಂದು ಸಿಎಂ ಹೇಳಲಿ ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು. ಅಲ್ಲದೇ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರನ್ನು ಎಷ್ಟು ದಿನ ಸಿಎಂ ಆಗಿ ಇರಲು ಬಿಡುತ್ತೀರಿ ಎಂದು ಹೇಳಬೇಕು. ಇಬ್ಬರ ಮಧ್ಯೆ ಯಾವ ರೀತಿಯ ಒಪ್ಪಂದ ಆಗಿದೆ ಎಂದು ಸಾರ್ವಜನಿಕವಾಗಿ ಹೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮಹಿಳೆಯರ `ಶಕ್ತಿ’ಗೆ ಶೀಘ್ರವೇ ಹೊಸ ಮಾರ್ಗಸೂಚಿ – ವಾರಕ್ಕೆ ಮುಂಚೆ ಬುಕ್ಕಿಂಗ್ ಕಡ್ಡಾಯ ಸಾಧ್ಯತೆ

    ಸಿಎಂ ಸಿದ್ದರಾಮಯ್ಯ ಅಕ್ಕಿಗಾಗಿ ಕೇಂದ್ರದ ಕಡೆ ಬೊಟ್ಟು ಮಾಡಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ನೇತಾರ. 5 ಗ್ಯಾರಂಟಿಗಳ ಮೂಲಕ ಷರತ್ತುಗಳು ಇಲ್ಲದೆ ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಬದ್ಧತೆ ಇದ್ದರೆ ಅಕ್ಕಿಗಾಗಿ ಕೇಂದ್ರದ ಕಡೆ ಬೊಟ್ಟು ಮಾಡುವುದನ್ನು ಬಿಡಿ ಎಂದು ಚಾಟಿ ಬೀಸಿದರು. ಇದನ್ನೂ ಓದಿ: ಮೋದಿ ಮುಂದೆ ಮಾತಾಡೋ ಧಮ್ ಇದ್ದಿದ್ದು ಬಿಎಸ್‌ವೈಗೆ ಮಾತ್ರ – ರಾಮಲಿಂಗಾ ರೆಡ್ಡಿ

    ಚುನಾವಣೆ ಪೂರ್ವದಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೀರಿ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಪ್ರತಿ ಕುಟುಂಬಗಳಿಗೆ ನೀಡುತ್ತಿದ್ದು, ನಿಮ್ಮ ಗ್ಯಾರಂಟಿಯಂತೆ ಇನ್ನೂ 10 ಕೆಜಿ ಹೆಚ್ಚಿಸಿ. ಸಿದ್ದರಾಮಯ್ಯನವರು ಯಾವ ರಾಜ್ಯದಿಂದಾರೂ ಅಕ್ಕಿ ಹೊಂದಿಸಲಿ. ಆದರೆ ರಾಜ್ಯದ ಪ್ರತಿ ಕುಟುಂಬಗಳಿಗೆ ಒಟ್ಟು 15 ಕೆಜಿ ಅಕ್ಕಿ ನೀಡಲಿ ಎಂದು ಹೇಳಿದರು. ಇದನ್ನೂ ಓದಿ: ಕೋಮು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ – ಶೀಘ್ರದಲ್ಲೇ ಸರ್ಕಾರಿ ಉದ್ಯೋಗ

    ರಾಜ್ಯ ಸರ್ಕಾರ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಜೊತೆಗೆ ಓಲೈಕೆ ರಾಜಕಾರಣ ಮಾಡಿ ಸರ್ಕಾರದ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಿದೆ. ಒತ್ತಾಯಪೂರ್ವಕವಾಗಿ ಮತಾಂತರ ನಿಷೇಧ ಎನ್ನವುದು ಕಾಯ್ದೆಯಲ್ಲಿ ಇದೆ. ಹಾಗಿದ್ದರೆ ಓಲೈಕೆ ಮಾಡಿ ಮತಾಂತರ ಕಾಯ್ದೆ ವಾಪಸ್ ಪಡೆಯುವ ದುರುದ್ದೇಶ ಇದೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಬುಲ್ಡೋಜರ್ ಸದ್ದು – ರಾಜಕಾಲುವೆ ಒತ್ತುವರಿ ತೆರವು ವೇಳೆ ಭಾರೀ ಹೈಡ್ರಾಮಾ

    ಕೆಟ್ಟ ಆಲೋಚನೆಯಿಂದ ದೇಶವನ್ನು ಜೋಡಿಸುವ ಕೆಲಸ ಮಾಡುತ್ತಿಲ್ಲ, ಒಡೆಯುವ ಕೆಲಸವನ್ನು ಮಾಡುತ್ತಿದ್ದೀರಿ. ರಾಹುಲ್ ಗಾಂಧಿ ಇಚ್ಛೆಯಂತೆ ರಾಜ್ಯವನ್ನು ಮತ್ತೊಮ್ಮೆ ಅಶಾಂತಿಗೆ ತಳ್ಳುತ್ತೀದ್ದೀರಿ. ಸರ್ಕಾರ ಬದಲಾವಣೆಯಾಗುವುದು ಹೊಸದೇನಲ್ಲ. ಆದರೆ ಹಿಂದಿನ ಸರ್ಕಾರ ಮಾಡಿದ ನಿರ್ಣಯಗಳನ್ನು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವುದು ಮುಂದಿನ ದಿನಗಳಲ್ಲಿ ಜನ ಛೀಮಾರಿ ಹಾಕುತ್ತಾರೆ. ಪಠ್ಯ ಪುಸ್ತಕಗಳಲ್ಲಿ ಮಹಾನ್ ನಾಯರ ಜೀವನ ಚರಿತ್ರೆಯನ್ನು ಯುವ ಪೀಳಿಗೆಗೆ ಹೇಳಲು ಮಾಡಿದ್ದೆವು. ಆದರೆ ದೇಶ ಅಖಂಡವಾಗಿ ಇರುವುದು ಅವರಿಗೆ ಬೇಡವಾಗಿದೆ. ಹೀಗಾಗಿ ದೇಶದಲ್ಲಿ ಸಮಾಜವನ್ನು ಛಿದ್ರ ಛಿದ್ರ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ- ವಿಜಯೇಂದ್ರ ಹೀಗಂದಿದ್ಯಾಕೆ..?

  • ನನ್ನ ಬೆನ್ನಿಗೆ ಚೂರಿ ಹಾಕ್ತೀರಿ, ಎಷ್ಟು ಕಿರುಕುಳ ಕೊಡ್ತೀರಿ: ಖೂಬಾ ವಿರುದ್ಧ ಪ್ರಭು ಚವ್ಹಾಣ್ ಕೆಂಡಾಮಂಡಲ

    ನನ್ನ ಬೆನ್ನಿಗೆ ಚೂರಿ ಹಾಕ್ತೀರಿ, ಎಷ್ಟು ಕಿರುಕುಳ ಕೊಡ್ತೀರಿ: ಖೂಬಾ ವಿರುದ್ಧ ಪ್ರಭು ಚವ್ಹಾಣ್ ಕೆಂಡಾಮಂಡಲ

    ಬೀದರ್: ನಮ್ಮ ಪಕ್ಷದ ಕೇಂದ್ರ ಸಚಿವರಾಗಿ ನನ್ನ ಬೆನ್ನಿಗೆ ಚೂರಿ ಹಾಕುತ್ತೀರಿ, ನನಗೆ ಎಷ್ಟು ಕಿರುಕುಳ ಕೊಡುತ್ತೀರಿ ಎಂದು ಸಚಿವ ಪ್ರಭು ಚವ್ಹಾಣ್ (Prabhu Chauhan) ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ವಿರುದ್ಧ ಕೆಂಡ ಕಾರಿದ್ದಾರೆ.

    ಬೀದರ್‌ನಲ್ಲಿ (Bidar) ಸುದ್ದಿಗೋಷ್ಠಿ ಮಾಡಿದ ಚವ್ಹಾಣ್, ನಮ್ಮ ಚುನಾವಣೆ ಬಂದಾಗ ವಿರೋಧ ಮಾಡುತ್ತೀರಿ, ನಿಮ್ಮ ಚುನಾವಣೆ ಬಂದಾಗ ಕ್ಷೆಮೆ ಕೇಳುತ್ತೀರಿ. ಇದು ಯಾವ ರಾಜನೀತಿ ಸ್ವಾಮಿ? ಎಂದು ಖೂಬಾಗೆ ಪ್ರಶ್ನೆ ಮಾಡಿದರು.

    ನಮ್ಮ ಪಾರ್ಟಿ ಎಂಪಿ, ಸಚಿವನಾಗಿ, ನನ್ನ ಸೋಲಿಸಲು ಕುತಂತ್ರ ಮಾಡುತ್ತಿದ್ದೀರಿ. ಹೀಗಾಗಿ ನಾನು ಪ್ರಧಾನಿ ಮೋದಿಗೆ, ನಡ್ಡಾ, ಅಮಿತ್ ಶಾ, ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರಿಗೂ ನಿಮ್ಮ ವಿರುದ್ಧ ದೂರು ಕೊಡುತ್ತೇನೆ. ನನ್ನನ್ನು ಸೋಲಿಸಲು ಪ್ರಯತ್ನ ಮಾಡುತ್ತೀರಿ, ನಾನೇನು ತಪ್ಪು ಮಾಡಿದ್ದೇನೆ ಸ್ವಾಮಿ? ನೀವು ಪ್ರಭು ಚವ್ಹಾಣ್‌ಗೆ ದ್ರೋಹ ಮಾಡಿಲ್ಲಾ, ಪ್ರಧಾನಿ ಮೋದಿಗೆ, ಬೊಮ್ಮಾಯಿಗೆ, ಪಕ್ಷಕ್ಕೆ ದ್ರೋಹ ಮಾಡಿದ್ದೀರಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ; ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ – ಸುರ್ಜೇವಾಲ ಸ್ಪಷ್ಟನೆ

    ನಿಮ್ಮ ಮೇಲೆ ಭರವಸೆ ಇಲ್ಲ. ಹೀಗಾಗಿ ನನಗೆ ಜೀವ ಬೆದರಿಕೆ ಇದ್ದು ನಾನು ನಿಮ್ಮ ವಿರುದ್ಧ ಎಸ್‌ಪಿಗೆ, ಐಜಿಗೆ ದೂರು ನೀಡುತ್ತೇನೆ ಎಂದು ಬೀದರ್‌ನಲ್ಲಿ ಸಚಿವ ಪ್ರಭು ಚವ್ಹಾಣ್ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೀವೇ ಸಿಎಂ ಆಗಿ – ಡಿಕೆಶಿ ಪಟ್ಟು, ಧರ್ಮ ಸಂಕಟದಲ್ಲಿ ಖರ್ಗೆ

  • ಭಗವಂತ್ ಖೂಬಾ ವಿರುದ್ಧ ಕಿರುಕುಳ ಆರೋಪ ಮಾಡಿ ಗಳಗಳನೆ ಅತ್ತ ಪ್ರಭು ಚವ್ಹಾಣ್

    ಭಗವಂತ್ ಖೂಬಾ ವಿರುದ್ಧ ಕಿರುಕುಳ ಆರೋಪ ಮಾಡಿ ಗಳಗಳನೆ ಅತ್ತ ಪ್ರಭು ಚವ್ಹಾಣ್

    ಬೀದರ್: ಕೇಂದ್ರದ ಮಂತ್ರಿಯಾಗಿ ತಾಯಿಗೆ ಮೋಸ ಮಾಡಿದ್ದಾರೆ. ತಾಯಿಗೆ ಮೋಸ ಮಾಡಿದವರನ್ನು ಆ ದೇವರೇ ನೋಡಿಕೊಳ್ಳುತ್ತಾನೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ವಿರುದ್ಧ ಕಿರುಕುಳ ಆರೋಪ ಮಾಡಿ ಸಚಿವ ಪ್ರಭು ಚವ್ಹಾಣ್ (Prabhu Chauhan) ಕಣ್ಣೀರು ಹಾಕಿದ್ದಾರೆ.

    ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭು ಚವ್ಹಾಣ್, ನಮ್ಮಗೆ ಬಹಳ ನೋವಾಗಿದೆ. ಅವರ ಚುನಾವಣೆಯಲ್ಲಿ ಸಂಸದರ ಎಲ್ಲಾ ಕ್ಷೇತ್ರದಲ್ಲಿ ಓಡಾಡಿದ್ದೇನೆ. ಅವರಿಗೆ ಟಿಕೆಟ್ ನೀಡಲು ಸೇರಿದಂತೆ ತನುಮನ ಧನ ನೀಡಿ ಖೂಬಾಗೆ ಸಹಾಯ ಮಾಡಿದ್ದೇನೆ. ಆದರೆ ನಮ್ಮನ್ನು ಸೋಲಿಸಲು ನಮ್ಮ ಕಾರ್ಯಕರ್ತರಿಗೆ ರಾಜೀನಾಮೆ ಕೊಡಿಸಿದ್ದಾರೆ. ಕೇಂದ್ರ ಮಂತ್ರಿಯಾಗಿ ಈ ರೀತಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದ ಚುನಾವಣಾ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಅಲ್ಲ: ಬಿಎಸ್‍ವೈ

    ಎಲ್ಲರಿಗೂ ಕೇಂದ್ರ ಸಚಿವ ಖೂಬಾ ವಿರುದ್ಧ ದೂರು ನೀಡುತ್ತೇನೆ. 30 ಸಾವಿರ ಲೀಡ್ ಬರುತ್ತಿತ್ತು ಆ ರೀತಿ ಕೆಲಸ ಮಾಡಿದ್ದೇನೆ. ನಮ್ಮ ಕಾರ್ಯಕರ್ತರಿಗೆ ಪೋನ್ ಮಾಡಿ ಪ್ರಭು ಚವ್ಹಾಣ್‌ಗೆ ವೋಟ್ ಮಾಡಬೇಡ ಎಂದು ಅವಾಜ್ ಹಾಕುತ್ತಾರೆ ಎಂದು ಪ್ರಭು ಚವ್ಹಾಣ್ ಆರೋಪಿಸಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

  • ಮೇ 13ಕ್ಕೆ ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಹೇಗೆ ಪ್ರಹಾರ ಮಾಡುತ್ತೆ ನೋಡಿ: ಭಗವಂತ್ ಖೂಬಾ

    ಮೇ 13ಕ್ಕೆ ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಹೇಗೆ ಪ್ರಹಾರ ಮಾಡುತ್ತೆ ನೋಡಿ: ಭಗವಂತ್ ಖೂಬಾ

    ಬೀದರ್: ಮೇ 13 ರಂದು ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಏರಿ ಹೇಗೆ ಪ್ರಹಾರ ಮಾಡುತ್ತೆ ನೋಡಿ ಎಂದು ಕಾಂಗ್ರೆಸ್ (Congress) ಪ್ರಣಾಳಿಕೆಯಲ್ಲಿ ಬಜರಂಗದಳ (Bajrang Dal) ಬ್ಯಾನ್ ವಿಚಾರಕ್ಕೆ ಬೀದರ್‌ನಲ್ಲಿ (Bidar) ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಮಂಗಳವಾರ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪೂರ್‌ದಲ್ಲಿರುವ ಐತಿಹಾಸಿಕ ಹನುಮಾನ್ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿ ಕಾಂಗ್ರೆಸ್ ಭಜರಂಗದಳ ಬ್ಯಾನ್ ಅಸ್ತ್ರಕ್ಕೆ ಟಾಂಗ್ ನೀಡಲಿದ್ದಾರೆ. ಹನುಮಾನ್ ಚಾಲೀಸಾ ಪಠಣೆ ಮಾಡುವ ಮೂಲಕ ಪರೋಕ್ಷವಾಗಿ ಬಜರಂಗದಳ ಬ್ಯಾನ್‌ಗೆ ಕೌಂಟರ್ ಕೊಡಲಿರುವ ಕೇಂದ್ರ ಸಚಿವ ಭಗವಂತ್ ಖೂಬಾ, ನಾನು ಹನುಮಾನ್ ಭಕ್ತನಾಗಿ ಕಾರ್ಯಕರ್ತರ ಜೊತೆ ಪವಿತ್ರ ಸ್ಥಳದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುತ್ತೆನೆ ಎಂದರು.

    ಬಜರಂಗದಳ ಹಾಗೂ ಬಜರಂಗಿಗೆ ಸಂಬಂಧವಿಲ್ಲ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖೂಬಾ, ಕಾಂಗ್ರೆಸ್ ಬ್ಯಾಕ್ ಪುಟ್‌ಗೆ ಹೋಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಕೂಡಾ ಲಿಂಗಾಯತರ ಬಗ್ಗೆ ಮಾತನಾಡಿ ಬ್ಯಾಕ್ ಪುಟ್ ಅನುಸರಿಸಿದರು. ಕಾಂಗ್ರೆಸ್ ರಿವರ್ಸ್ ಗೇರ್‌ನಲ್ಲಿ ನಡೆಯುವ ಪಕ್ಷವಾಗಿದ್ದು ಎಲ್ಲಾ ಹೇಳಿಕೆಯ ಜೊತೆಗೆ ರಿವರ್ಸ್ ಹೋಗುತ್ತದೆ. ಹೀಗಾಗಿ ಚುನಾವಣೆಯಲ್ಲೂ ಕಾಂಗ್ರೆಸ್ ರಿವರ್ಸ್ ಆಗುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ, ಆದರೆ ಸಕ್ರಿಯ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್

    ಭಾಲ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 4 ಲಕ್ಷ ರೂ. ಮೌಲ್ಯದ ಸಾರಾಯಿ ಹಂಚಲು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ಧ ಭಗವಂತ್ ಖೂಬಾ ಆರೋಪ ಮಾಡಿದರು. ಇದನ್ನೂ ಓದಿ: ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ

  • ರಾಹುಲ್ ಗಾಂಧಿ ಒಬ್ಬ ಚೈಲ್ಡ್: ಭಗವಂತ್ ಖೂಬಾ

    ರಾಹುಲ್ ಗಾಂಧಿ ಒಬ್ಬ ಚೈಲ್ಡ್: ಭಗವಂತ್ ಖೂಬಾ

    ಬೀದರ್: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಒಬ್ಬ ಚೈಲ್ಡ್. ಮೊದಲನೆಯದಾಗಿ ಅವರಿಗೆ ಪ್ರಬುದ್ಧತೆ ಇಲ್ಲ ಎಂದು ಬೀದರ್‌ನ (Bidar) ಪಶು ವಿವಿಯಲ್ಲಿ  (Veterinary, Animal and Fisheries Sciences University) ಕೇಂದ್ರ ಸಚಿವ ಭಗವಂತ್ ಖೂಬಾ (Bhagawanth Khuba) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಹುಲ್ ಗಾಂಧಿಯವರಿಗೆ ದೇಶದ ಮೇಲೆ ಅಭಿಮಾನ ಹಾಗೂ ದೇಶದ ವ್ಯವಸ್ಥೆ ಬಗ್ಗೆ ತಿಳುವಳಿಕೆ ಇಲ್ಲ ಎಂದು ಕುಟುಕಿದರು. ಇದನ್ನೂ ಓದಿ: ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ

    ದೇಶದ ಹೊರಗಡೆ ಹೋಗಿ ಪ್ರಚಾರವನ್ನು ಅನೇಕ ರೀತಿ ಪಡೆಯುತ್ತಾರೆ. ಇನ್ನೂ ಕೆಲವರು ಬಟ್ಟೆ ಬಿಚ್ಚಿ ಪ್ರಚಾರ ಪಡೆಯುತ್ತಾರೆ. ನಮ್ಮ ದೇಶವನ್ನು ನಿಂದಿಸಿ, ಸಂವಿಧಾನ (Constitution) ಹಾಗೂ ಪ್ರಜಾಪ್ರಭುತ್ವಕ್ಕೆ (Democrosy) ಪ್ರಶ್ನೆ ಮಾಡುತ್ತಾರೆ. ಒಬ್ಬ ನಾಗರಿಕನ ಜವಾಬ್ದಾರಿಯನ್ನೂ ರಾಹುಲ್ ನಿರ್ವಹಣೆ ಮಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಯುವತಿಯ ಹತ್ಯೆ – ದಲಿತಳು ಎಂದು ಕೊಲೆ ಆರೋಪ

  • ಗೊಬ್ಬರ ಸಿಗದಿದ್ದರೆ ನಾನೇನು ಮಾಡಲಿ – ಅಲವತ್ತುಕೊಂಡ ರೈತನ ಮುಂದೆ ಸಚಿವ ಉಡಾಫೆ ಮಾತು

    ಗೊಬ್ಬರ ಸಿಗದಿದ್ದರೆ ನಾನೇನು ಮಾಡಲಿ – ಅಲವತ್ತುಕೊಂಡ ರೈತನ ಮುಂದೆ ಸಚಿವ ಉಡಾಫೆ ಮಾತು

    ಬೀದರ್: ರಾಜ್ಯದ ಹಲವೆಡೆ ರಸಗೊಬ್ಬರ ಸಮಸ್ಯೆ ಇದೆ. ರೈತರು ಪರದಾಡ್ತಾ ಇದ್ದಾರೆ. ಆದ್ರೆ ಈ ವಿಚಾರದಲ್ಲಿ ಕೇಂದ್ರದ ರಸಗೊಬ್ಬರ ಸಚಿವ ಭಗವಂತ್ ಖೂಬಾ ದಿವ್ಯನಿರ್ಲಕ್ಷ್ಯ ವಹಿಸಿದ್ದಾರೆ. ಜೊತೆಗೆ ರೈತರೊಬ್ಬರು ನಮ್ಮ ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದರು. ಇದಕ್ಕೆ ಖಾರವಾಗಿ ಪ್ರತ್ಯುತ್ತರ ನೀಡಿದ್ದು ಗೊಬ್ಬರ ಸಿಗದಿದ್ದರೆ ನಾನೇನು ಮಾಡಲಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.

    ರಸಗೊಬ್ಬರ ವಿತರಣೆ ವಿಚಾರವಾಗಿ ತಮಗೆ ಕರೆ ಮಾಡಿದ ರೈತ ಶ್ರೀಮಂತ ಪಾಟೀಲ್ ಜೊತೆ ಭಗವಂತ್ ಖೂಬಾ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಜೊತೆಗೆ ಸಚಿವರು ಮತ್ತು ರೈತರ ನಡುವಿನ ಸಂಭಾಷಣೆಯ ಆಡಿಯೋ ಕೂಡ ವೈರಲ್ ಆಗಿದೆ. ರೈತನಿಗೆ ಅವಾಚ್ಯ ಶಬ್ಧಗಳಿಂದ ಖೂಬಾ ನಿಂದಿಸಿದ್ದಾರೆ ಎಂದು ಆರೋಪವಿದ್ದು, ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ಇದನ್ನೂ ಓದಿ: ಭೂಸ್ವಾಧೀನ ಮಾಡಿಕೊಂಡ ಜಮೀನು ಮಾರುಕಟ್ಟೆ ದರದಲ್ಲಿ ಖರೀದಿಸಲು ರೈತರರಿಂದ ಸಚಿವ ಮುರುಗೇಶ್ ನಿರಾಣಿಗೆ ಒತ್ತಾಯ

    ಭಗವಂತ್ ಖೂಬಾ ಬೀದರ್ ಸಂಸದರು ಕೂಡ ಹೌದು. ಹೀಗಾಗಿ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಹೆಡಗಾಪುರದ ರೈತ ಶ್ರೀಮಂತ ಪಾಟೀಲ್, ಸಚಿವರಿಗೆ ಫೋನ್ ಮಾಡಿ ಸರ್ ನಮ್ಮೂರಲ್ಲಿ ಗೊಬ್ಬರ ಸಿಗುತ್ತಿಲ್ಲ ಸಮಸ್ಯೆ ಬಗಹರಿಸಿ ಎಂದು ಕೇಳಿದ್ದಾರೆ. ಇದಕ್ಕೆ ಉಡಾಫೆ ಉತ್ತರ ನೀಡಿದ ಅವರು, ಅದಕ್ಕೆ ನಾನೇನು ಮಾಡ್ಲಿ. ರಾಜ್ಯಕ್ಕೆ ಕಳಿಸೊದಷ್ಟೇ ನನ್ನ ಕೆಲಸ. ಅಲ್ಲಿನ ಶಾಸಕನ್ನು ಕೇಳಿ. ಸಾವಿರಾರು ನೌಕರರು ಇದ್ದಾರೆ ಅವರು ನೋಡ್ಕೋತಾರೆ, ಅವರನ್ನೇ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ ಎಂದಿದ್ದಾರೆ. ಇದರಿಂದ ಸಿಟ್ಟಾದ ರೈತ, ಮುಂದಿನ ಬಾರಿ ಹೇಗೆ ಆರಿಸಿ ಬರ್ತೀರಿ ನೋಡ್ತಿನಿ ಎಂದಿದ್ದಾರೆ. ಇದಕ್ಕೆ, ಮುಂದಿನ ಬಾರಿ ಹೇಗೆ ಗೆಲ್ಲೋದು ನನಗೆ ಗೊತ್ತಿದೆ. ಪ್ರತಿಯೊಬ್ಬ ರೈತರಿಗೂ ಗೊಬ್ಬರ ಸಿಕ್ಕಿದ್ಯಾ ಅಂತಾ ನಾನು ನೋಡೋಕೆ ಆಗುತ್ತಾ ಎಂದು ಅವಾಜ್ ಹಾಕಿದ್ದಾರೆ. ಈ ಅಡಿಯೋ ವೈರಲ್ ಆಗುತ್ತಿದೆ.

    Live Tv