Tag: ಭಗತ್ ಸಿಂಗ್ ಕೋಶಿಯಾರಿ

  • ಮುಂಬೈ ವಿವಾದ – ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆ ಒಪ್ಪಲ್ಲ ಎಂದ ಸಿಎಂ ಶಿಂದೆ

    ಮುಂಬೈ ವಿವಾದ – ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆ ಒಪ್ಪಲ್ಲ ಎಂದ ಸಿಎಂ ಶಿಂದೆ

    ಮುಂಬೈ: ರಾಜಧಾನಿ ಬಗ್ಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಏಕನಾಥ್‌ ಶಿಂದೆ ವಿರೋಧಿಸಿದ್ದಾರೆ.

    ರಾಜ್ಯಪಾಲರು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳಿದ್ದಾರೆ. ಆದರೆ ನಾವು ಅವರ ಹೇಳಿಕೆಗಳನ್ನು ಒಪ್ಪುವುದಿಲ್ಲ. ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ಹುದ್ದೆ. ಅವರು ಸಂವಿಧಾನದ ನೈತಿಕತೆಯ ಅಡಿಯಲ್ಲಿ ಮಾತನಾಡಬೇಕು. ಮುಂಬೈಗೆ ಮರಾಠಿಗರ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾಗುವುದಿಲ್ಲ ಎಂದು ಶಿಂದೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ

    ಮುಂಬೈಯನ್ನು ಮಹಾರಾಷ್ಟ್ರದ ರಾಜಧಾನಿಯನ್ನಾಗಿ ಮಾಡಲು 105 ಜನರು ಆಂದೋಲನದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಮುಂಬೈನ ಮರಾಠಿ ಅಸ್ಮಿತೆ ಕಾಪಾಡುವಲ್ಲಿ ಶಿವಸೇನಾ ಸಂಸ್ಥಾಪಕ ದಿವಂಗತ ಬಾಳ ಠಾಕ್ರೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶಿಂದೆ ತಿಳಿಸಿದ್ದಾರೆ.

    ʻನಾನು ಇಲ್ಲಿನ ಜನರಿಗೆ ಹೇಳಬಯಸುತ್ತೇನೆ. ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಹೊರಹಾಕಿದರೆ ನಿಮ್ಮ ಬಳಿ ಹಣವಿರುವುದಿಲ್ಲ. ಮುಂಬೈ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲʼ ಎಂದು ಕೋಶಿಯಾರಿ ಹೇಳಿಕೆ ನೀಡಿದ್ದರು.

    ಕೋಶಿಯಾರಿ ಅವರ ಹೇಳಿಕೆ ವಿವಾದಕ್ಕೆ ತಿರುಗಿತು. ಮಹಾರಾಷ್ಟ್ರದಲ್ಲಿ ರಾಜ್ಯಪಾಲರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಯಿತು. ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೂಡ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸದಿದ್ದರೆ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತದೆ – CJI

    ತಮ್ಮ ಹೇಳಿಕೆ ವಿವಾದ ಪಡೆದ ನಂತರ ಎಚ್ಚೆತ್ತ ಕೋಶಿಯಾರಿ ಅವರು ಸ್ಪಷ್ಟನೆ ನೀಡಿದರು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮರಾಠಿ ಮಾತನಾಡುವ ಜನರ ಶ್ರಮವನ್ನು ತುಚ್ಛೀಕರಿಸುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ

    ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ

    ನವದೆಹಲಿ: ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟಕ್ಕ್ರೆ ಹಣ ಬರುವುದಿಲ್ಲ ಎಂಬ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಹೇಳಿಕೆ ವಿವಾದಕ್ಕೆ ಸಿಲುಕಿದೆ.

    ಮುಂಬೈನ ಅಂಧೇರಿಯಲ್ಲಿ ಶುಕ್ರವಾರ ನಡೆದ ದಿವಂಗತ ಶಾಂತಿದೇವಿ ಚಂಪಲಾಲ್ಜಿ ಕೊಠಾರಿ ಅವರ ಹೆಸರನ್ನು ಚೌಕ್‍ಗೆ ಹೆಸರಿಸುವ ಕಾರ್ಯಕ್ರಮಕ್ಕೆ ಕೋಶಿಯಾರಿ ಅವರು ಅಗಮಿಸಿದ್ದರು. ಈ ವೇಳೆ ಭಾಷಣ ಮಾಡಿದ ಅವರು, ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಓಡಿಸಿದ್ರೆ, ರಾಜ್ಯದಲ್ಲಿ ಹಣ ಉಳಿಯುವುದಿಲ್ಲ. ಅದು ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ ಎಂದಿದ್ದರು. ಇದನ್ನೂ ಓದಿ: ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣ – ಸ್ಥಳೀಯರಿಂದ ವಿರೋಧ 

    ಕೋಶಿಯಾರಿ ಅವರು ಮಾರ್ವಾಡಿ ಮತ್ತು ಗುಜರಾತಿ ಸಮುದಾಯವನ್ನು ಶ್ಲಾಘಿಸಿದ್ದು, ಅವರು ಎಲ್ಲಿಗೆ ಹೋದರೂ ಆಸ್ಪತ್ರೆಗಳು, ಶಾಲೆಗಳು ಇತ್ಯಾದಿಗಳನ್ನು ರಚಿಸುವ ಮೂಲಕ ಸ್ಥಳದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಈ ಹೇಳಿಕೆ ವಿರೋಧಿಸಿದ ಶಿವಸೇನೆ ಮತ್ತು ಕಾಂಗ್ರೆಸ್‍ನ ಹಲವಾರು ನಾಯಕರು ಕೋಶಿಯಾರಿ ಅವರನ್ನು ಟೀಕಿಸಿದ್ದಾರೆ. ಕಷ್ಟಪಟ್ಟು ದುಡಿಯುವ ಮರಾಠಿ ಜನರನ್ನು ರಾಜ್ಯಪಾಲರು ಅವಮಾನಿಸಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಖಂಡಿಸಿದ್ದಾರೆ. ಬಿಜೆಪಿ ಪ್ರಾಯೋಜಿತ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಕೂಡಲೇ, ಮರಾಠಿಗರಿಗೆ ಅವಮಾನವಾಗುತ್ತಿದೆ ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಸ್ನೇಹಿತರೊಂದಿಗೆ ಪತ್ನಿಯನ್ನೇ ಗ್ಯಾಂಗ್‌ರೇಪ್‌ಗೈದ 

    ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಸಚಿನ್ ಸಾವಂತ್ ಕೂಡ ಈ ಕೋಶಿಯಾರಿ ಅವರ ಭಾಷಣದ ವೀಡಿಯೋವನ್ನು ಟ್ವೀಟ್ ಮಾಡಿ ರಾಜ್ಯಪಾಲರು ಈ ಹೇಳಿಕೆ ನೀಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]