Tag: ಭಗತ್ ಸಿಂಗ್

  • ಮನೆಯಲ್ಲಿ ಭಗತ್ ಸಿಂಗ್ ಪಾತ್ರದ ಅಭ್ಯಾಸ – ನೇಣಿಗೆ ಕೊರಳು, ಬಾಲಕ ಸಾವು

    ಮನೆಯಲ್ಲಿ ಭಗತ್ ಸಿಂಗ್ ಪಾತ್ರದ ಅಭ್ಯಾಸ – ನೇಣಿಗೆ ಕೊರಳು, ಬಾಲಕ ಸಾವು

    ಚಿತ್ರದುರ್ಗ: ಭಗತ್ ಸಿಂಗ್ (Bhagat Singh) ಪಾತ್ರವನ್ನು ಅಭ್ಯಾಸ ಮಾಡುತ್ತಿದ್ದ ವೇಳೆ ನಿಜವಾಗಿಯೂ ಬಾಲಕ ನೇಣಿಗೀಡಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

    ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿಜಯಂತಿ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಣ್ಣ ಮಕ್ಕಳು ದೇಶಕ್ಕಾಗಿ ಹೋರಾಡಿದ ವೀರ ಮಹಾನಿಯರ ವೇಷಧರಿಸಿ ನಾಟಕ, ನೃತ್ಯ, ಭಾಷಣ ಮಾಡುವುದನ್ನು ಶಾಲೆಗಳಲ್ಲಿ ನಾವು ನೋಡಿರುತ್ತೇವೆ. ಇದನ್ನೂ ಓದಿ: ಬಂಡೆಮಠದ ಶ್ರೀ ಆತ್ಮಹತ್ಯೆ ಕೇಸ್ – ನಗ್ನವಾಗಿರುವ ಮೂರನೇ ವೀಡಿಯೋ ಬಹಿರಂಗ

    ಇದೇ ರೀತಿ ಈ ಬಾರಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ (Karnataka Rajyotsava) ಪ್ರಯುಕ್ತ ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಬಾಲಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ಸಂಜಯ್ ಗೌಡ(12) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕವಾಡಿದ 12ರ ಬಾಲಕ

    ಎಸ್‌ಎಲ್‌ವಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಸಂಜಯ್, ಭಗತ್ ಸಿಂಗ್ ಪಾತ್ರದಲ್ಲಿ ಅಭಿನಯಿಸಲು ಭಾರೀ ಸಿದ್ಧತೆ ನಡೆಸುತ್ತಿದ್ದ, ಮನೆಗೆ ಬಂದ ಬಳಿಕವೂ ಶನಿವಾರ ರಿಹರ್ಸಲ್‌ಗೆ ಮುಂದಾಗಿದ್ದ ಸಂಜಯ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದಾನೆ. ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಮಂಚದಿಂದ ಜಿಗಿದಿದ್ದಾನೆ. ಜಿಗಿದ ರಭಸಕ್ಕೆ ಸ್ಥಳದಲ್ಲಿಯೇ ಸಂಜಯ್ ಸಾವನ್ನಪ್ಪಿದ್ದಾನೆ.

    ನಂತರ ಮನೆಗೆ ಬಂದ ಪೋಷಕರು ಮಗ ಫ್ಯಾನಿನಲ್ಲಿ ನೇತಾಡುತ್ತಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೀಗ ಈ ಸಂಬಂಧ ಚಿತ್ರದುರ್ಗ ಬಡಾವಣೆ ಠಾಣೆಗೆ ಸಂಜಯ್ ಪೋಷಕರು ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು : ನರೇಂದ್ರ ಮೋದಿ

    ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು : ನರೇಂದ್ರ ಮೋದಿ

    ಚಂಡೀಗಢ: ಹರಿಯಾಣದ ಚಂಡೀಗಢ ವಿಮಾನ ನಿಲ್ದಾಣಕ್ಕೆ (Chandigarh airport) ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ (Bhagat Singh) ಅವರ ಹೆಸರನ್ನು ಮರುನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ತಿಳಿಸಿದ್ದಾರೆ.

    ಪ್ರತಿ ತಿಂಗಳ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ (Mann Ki Baat) ಮೂಲಕ ದೇಶವನ್ನುದ್ದೇಶಿ ಇಂದು ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹೆಸರನ್ನು ಚಂಡೀಗಢ ವಿಮಾನ ನಿಲ್ದಾಣಕ್ಕೆ ಇಡುವ ಮೂಲಕ ಗೌರವ ಅರ್ಪಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ವಿವಾಹಿತ ಬಾಯ್‌ಫ್ರೆಂಡ್‌ಗೆ ಹಾಸ್ಟೆಲ್‌ಮೇಟ್ಸ್ ಬೆತ್ತಲೆ ವೀಡಿಯೋ ಕಳಿಸಿದ BED ಪದವೀಧರೆ- ಇಬ್ಬರೂ ಅರೆಸ್ಟ್

    ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಖಟ್ಕರ್ ಕಲಾನ್‍ನಲ್ಲಿ ಪಂಜಾಬ್ ಮುಖ್ಯಮಂತ್ರಿ (Punjab Chief Minister) ಭಗವತ್ ಮಾನ್ ಅವರು ಅದ್ದೂರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಸಮಾರಂಭದ ನಿಮಿತ್ತ ಖಟ್ಕರ್ ಕಲಾನ್ ಹಳದಿಮಯವಾಗಿತ್ತು. ಇಲ್ಲಿ ಬಸಂತಿ ಅಥವಾ ಹಳದಿ ಬಣ್ಣ ಸ್ವಾತಂತ್ರ್ಯ ಹೋರಾಟದೊಂದಿಗೆ ಗುರುತಿಸಿಕೊಂಡ ಬಣ್ಣ, ಸ್ವಾತಂತ್ರ್ಯ ಹೋರಾಟಗಾರರು ಇದೇ ಬಣ್ಣವನ್ನು ಸಂಕೇತವಾಗಿ ಬಳಸುತ್ತಿದ್ದರು. ಭಗವತ್ ಮಾನ್ (Bhagwant Mann) ಅವರು ಕೂಡ ಸದಾ ಹಳದಿ ಬಣ್ಣದ ಪೇಟವನ್ನೇ ಧರಿಸುತ್ತಾರೆ.

    ಕೇಂದ್ರಾಡಳಿತ ಪ್ರದೇಶದ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ಪ್ರಸ್ತಾಪ ನಡೆದಿರುವುದು ಇದೇ ಮೊದಲಲ್ಲ. ಬಿಜೆಪಿ ನೇತೃತ್ವದ ಹರಿಯಾಣ ವಿಧಾನಸಭೆಯಲ್ಲಿ 2016ರ ಏಪ್ರಿಲ್‍ನಲ್ಲಿ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಿತ್ತು. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಶೀಘ್ರದಲ್ಲೇ ಪತ್ರ ಬರೆದು ಮನವಿ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]

  • ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು!

    ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು!

    ಚಂಡೀಗಢ: ಚಂಡೀಗಢದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಹೆಸರಿನಿಂದ ಮರುನಾಮಕಾರಣ ಮಾಡಲು ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ನಿರ್ಧರಿಸಿದೆ.

    ಈ ಬಗ್ಗೆ ಉಭಯ ಸರ್ಕಾರಗಳ ಸಭೆ ನಡೆದಿದ್ದು, ಹರಿಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಉಪಸ್ಥಿತರಿದ್ದರು.

    ಈ ಬಗ್ಗೆ ಪಂಜಾಬ್‍ನ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿ, ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರನ್ನು ಇಡಲು ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳೆರಡು ಒಪ್ಪಿಕೊಂಡಿವೆ. ಈ ವಿಷಯದ ಕುರಿತು ಇಂದು ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಅವರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಾವರ್ಕರ್ ಪಾರ್ಕ್ ನಿರ್ಮಾಣ – ಸ್ವಾತಂತ್ರ್ಯ ಸೇನಾನಿ ಎಂದು ಒಪ್ಪಿದ್ದ ಕಾಂಗ್ರೆಸ್ಸಿಗರು

    ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹೆಸರಿಡಲು ಸಲಹೆ ನೀಡಿರುವುದು ಇದೇ ಮೊದಲಲ್ಲ. 2016ರಲ್ಲಿ ಹರಿಯಾಣ ವಿಧಾನಸಭೆಯು ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರಿಡಲು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು. ಇದನ್ನೂ ಓದಿ: ಸಿದ್ದರಾಮಯ್ಯಗೆ ಡಿಕೆಶಿಯವರೇ ಮೊಟ್ಟೆ ಹೊಡೆಸಿರಬೇಕು: ಕಟೀಲ್

    Live Tv
    [brid partner=56869869 player=32851 video=960834 autoplay=true]

  • ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ

    ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ

    ಛತ್ತೀಸಗಢ: ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಕುರಿತು ಪಂಜಾಬ್‌ ಸಂಸದರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ.

    ಶಿರೋಮಣಿ ಅಕಾಲಿ ದಳ ಪಕ್ಷದ ಸಂಸದ ಸಿಮ್ರಂಜಿತ್‌ ಸಿಂಗ್‌ ಮಾನ್‌ ಈ ಹೇಳಿಕೆ ನೀಡಿದ್ದು, ಭಾರೀ ವಿವಾದ ಸೃಷ್ಟಿಯಾಗಿದೆ. ಭಗತ್ ಸಿಂಗ್ ಇಂಗ್ಲಿಷ್ ನೌಕಾ ಅಧಿಕಾರಿಯನ್ನು ಕೊಂದರು. ಅಮೃತಧಾರಿ ಸಿಖ್ ಕಾನ್‌ಸ್ಟೆಬಲ್ ಚನ್ನನ್ ಸಿಂಗ್‌ನನ್ನು ಕೊಂದರು. ಆ ಸಮಯದಲ್ಲಿ ಅವರು ರಾಷ್ಟ್ರೀಯ ಅಸೆಂಬ್ಲಿಯ ಮೇಲೆ ಬಾಂಬ್ ಎಸೆದರು. ಈಗ ನೀವೇ ಹೇಳಿ.. ಭಗತ್ ಸಿಂಗ್ ಭಯೋತ್ಪಾದಕನೋ ಅಲ್ಲವೋ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದ ಗೋಡೆ ಕುಸಿದು 5 ಸಾವು – 9 ಮಂದಿಗೆ ಗಾಯ

    ಸಂಸದ ಮಾನ್ ಅವರು ಪಂಜಾಬ್ ರಾಜಕೀಯದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದಲೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತವರು ಸಂಗ್ರೂರ್‌ನಿಂದ ಉಪಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ, ತಮ್ಮ ಗೆಲುವಿಗೆ ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಕಾರಣ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಕಾಶ್ಮೀರದಲ್ಲಿ ಭಾರತೀಯ ಸೇನೆಯ ದೌರ್ಜನ್ಯದ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಮತ್ತೊಂದು ಕಡೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು.

    ಬಿಹಾರ ಮತ್ತು ಛತ್ತೀಸ್‌ಗಢದಲ್ಲಿರುವ ಬುಡಕಟ್ಟು ಜನರು ನಕ್ಸಲರು. ಅವರನ್ನು ಹತ್ಯೆ ಮಾಡಬೇಕು ಎಂದು ಸಹ ಸಿಮ್ರಂಜಿತ್ ಸಿಂಗ್ ಮಾನ್ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ದೇಶದ ಟಾಪ್‌ ಕಾಲೇಜುಗಳ ಪಟ್ಟಿ ಔಟ್‌ – ಕರ್ನಾಟಕದ ಯಾವ ಕಾಲೇಜುಗಳಿಗೆ ಎಷ್ಟನೇ ಸ್ಥಾನ?

    ಭಗತ್‌ ಸಿಂಗ್‌ ಕುರಿತು ಮಾನ್‌ ಹೇಳಿಕೆಗೆ ಪಂಜಾಬ್‌ ಆಡಳಿತಾರೂಢ ಎಎಪಿ ಕಿಡಿಕಾರಿದೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ. ತಮ್ಮ ಹೇಳಿಕೆಗೆ ಅವರು ಕ್ಷಮೆಯಾಚಿಸಬೇಕು ಎಂದು ಎಎಪಿ ಒತ್ತಾಯಿಸಿದೆ.

    ಭಗತ್‌ ಸಿಂಗ್‌ ಅವರನ್ನು ಭಯೋತ್ಪಾದಕ ಎಂದು ಕರೆದಿರುವುದು ನಾಚಿಕೆಗೇಡಿನ ಸಂಗತಿ. ಶಹೀದ್-ಎ-ಆಜಂ ಭಗತ್ ಸಿಂಗ್ ಒಬ್ಬ ವೀರ, ದೇಶಭಕ್ತ, ಕ್ರಾಂತಿಕಾರಿ ಮತ್ತು ನಿಜವಾದ ಮಣ್ಣಿನ ಮಗ. ಇಂಕ್ವಿಲಾಬ್ ಜಿಂದಾಬಾದ್” ಎಂದು ಎಎಪಿ ಸಂಸದ ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂದು ಭಗತ್ ಸಿಂಗ್, ನಾಳೆ ಗಾಂಧಿಯವರ ಪಾಠ ತೆಗೆಯಬಹುದು: ಡಿಕೆಶಿ

    ಇಂದು ಭಗತ್ ಸಿಂಗ್, ನಾಳೆ ಗಾಂಧಿಯವರ ಪಾಠ ತೆಗೆಯಬಹುದು: ಡಿಕೆಶಿ

    ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕದ ಪರಿಷ್ಕರಣೆಯ ಕುರಿತು ಚರ್ಚೆಗಳು ನಡೆಯುತ್ತಿದ್ದು, ಹತ್ತನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಮಾಡಲಾಗುತ್ತಿರುವ ಬದಲಾವಣೆಯ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಭಗತ್ ಸಿಂಗ್ ಕುರಿತ ಪಾಠವನ್ನು ಪಠ್ಯದಿಂದ ತೆಗೆಯಲು ನಿರ್ಧರಿಸಿರುವುದು ದೇಶವಿರೋಧಿ ಕ್ರಮ ಎಂದು ಹೇಳಿರುವ ಡಿ.ಕೆ ಶಿವಕುಮಾರ್, ಇಂದು ಭಗತ್ ಸಿಂಗ್ ಪಾಠ ತೆಗೆದುಹಾಕುತ್ತಿದ್ದಾರೆ, ನಾಳೆ ಮಹಾತ್ಮ ಗಾಂಧಿ ಅವರನ್ನು ತೆಗೆದುಹಾಕುತ್ತಾರೆ ಎಂದು ಪಠ್ಯಪುಸ್ತಕ ಪರಿಷ್ಕರಣೆಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏಪ್ರಿಲ್‌ನಲ್ಲಿ ಕಲ್ಲಿದ್ದಲು ಕೊರತೆ ಆಗಿಲ್ಲ ಅಂತ ಸಚಿವ ಸುನಿಲ್ ಕುಮಾರ್ ಸುಳ್ಳು ಹೇಳಿದ್ರಾ?

    ಬ್ರಿಟಿಷ್ ವಸಾಹತುಶಾಹಿಯಿಂದ ನಮ್ಮನ್ನು ಮುಕ್ತಗೊಳಿಸಿದವರ ತ್ಯಾಗ, ಬಲಿದಾನವನ್ನು ನಾವು ಎಂದಿಗೂ ಮರೆಯಬಾರದು ಎಂದು ಟ್ವೀಟ್‍ನಲ್ಲಿ ತಿಳಿಸಿರುವ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ಕೊಡುಗೆ ನೀಡಿದವರ ಕುರಿತ ಪಾಠವನ್ನು ಪಠ್ಯದಿಂದ ಕೈಬಿಡುವ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆಗೆ ಭಗತ್ ಸಿಂಗ್ ಹೆಸರು: ಕೇಜ್ರಿವಾಲ್

    ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆಗೆ ಭಗತ್ ಸಿಂಗ್ ಹೆಸರು: ಕೇಜ್ರಿವಾಲ್

    ನವದೆಹಲಿ: ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆಗೆ ಶಾಹೀದ್ ಭಗತ್ ಸಿಂಗ್ ಅವರ ಹೆಸರನ್ನು ಇಡಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೆಹಲಿಯ ಸೈನಿಕ ಶಾಲೆಗೆ ಶಹೀದ್ ಭಗತ್ ಸಿಂಗ್ ಹೆಸರಿಡಲಾಗುವುದು. ಸಶಸ್ತ್ರ ಪಡೆಗಳ ಪೂರ್ವ ಸಿದ್ಧತಾ ಶಾಲೆಯು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜರೋಡಾ ಕಲಾನ್‍ನಲ್ಲಿ 14 ಎಕರೆ ಕ್ಯಾಪಸ್‍ನ್ನು ಹೊಂದಿದೆ ಎಂದರು.

    2021ರ ಡಿಸೆಂಬರ್ 20ರಂದು ದೆಹಲಿಯಲ್ಲಿ ವಿದ್ಯಾರ್ಥಿಗಳನ್ನು ಸಶಸ್ತ್ರ ಪಡೆಗಳಿಗೆ ಸಿದ್ಧಪಡಿಸುವ ಶಾಲೆ ಬಗ್ಗೆ ಘೋಷಿಸಲಾಗಿತ್ತು.  ಈ ಶಾಲೆಗೆ ಭಗತ್ ಸಿಂಗ್ ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆ ಎಂದು ಹೆಸರಿಸಲಾಗುವುದು. ಇದು ವಸತಿ ಶಾಲೆಯಾಗಲಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ: ಕಾಂಗ್ರೆಸ್ ಆಗ್ರಹ

    9ನೇ ತರಗತಿಗೆ ಪ್ರವೇಶ ಪಡೆಯಲು ಮಾರ್ಚ್ 27ರಂದು ಅರ್ಹತಾ ಪರೀಕ್ಷೆ ನಡೆಯಲಿದ್ದು, ಮರುದಿನ 11ನೇ ತರಗತಿಗೆ ದಾಖಲಾತಿ ಪರೀಕ್ಷೆ ನಡೆಯಲಿದೆ. ಎರಡನೇ ಹಂತದಲ್ಲಿ ಸಂದರ್ಶನ ನಡೆಸಲಾಗುವುದು. ಇಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳು, ನೌಕಾಪಡೆ ಅಧಿಕಾರಿಗಳು ಮತ್ತು ವಾಯುಪಡೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ವಾಟಾಳ್ ನಾಗರಾಜ್ ವಿರುದ್ಧ ಎಫ್‍ಐಆರ್

  • ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ

    ಚಂಡೀಗಢ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ ನೀಡಲಾಗುವುದು ನೂತನ ಆಪ್ ಸರ್ಕಾರ ಘೋಷಣೆ ಮಾಡಿದೆ.

    ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರತಿ ವರ್ಷ ಮಾರ್ಚ್ 23 ರಂದು ಸಾರ್ವಜನಿಕ ರಜೆ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ

    ಭಗತ್ ಸಿಂಗ್ ಒಬ್ಬ ಭಾರತೀಯ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲದೇ ಅತ್ಯಂತ ಪ್ರಸಿದ್ಧ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದರು. ಭಗತ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಜನರು ಅವರ ಹುಟ್ಟೂರು ಖಟ್ಕರ್ ಕಲಾನ್‌ಗೆ ತೆರಳಿ ನಮನ ಸಲ್ಲಿಸಲು ಅನುಕೂಲವಾಗಲು ರಜೆ ಘೋಷಿಸಲಾಗಿದೆ ಎಂದು ವಿಧಾನ ಸಭೆಯಲ್ಲಿ ಭಗವಂತ್ ಮಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ

    ಭವಗಂತ್ ಮಾನ್ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಮಾರ್ಚ್ 16ರಂದು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಕಾರ್ಯಕ್ರಮವನ್ನು ಕೂಡಾ ಭಗತ್ ಸಿಂಗ್‌ರ ಊರು ಖಟ್ಕರ್ ಕಲಾನ್‌ನಲ್ಲಿಯೇ ಆಯೋಜಿಸಲಾಗಿತ್ತು.

  • ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಚಂಡೀಗಢ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ನಡೆದ ಸಮಾರಂಭದಲ್ಲಿ ಭಗವಂತ್ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (AAP) ಇತರ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಪಂಜಾಬ್‌ ಸಂಸ್ಕೃತಿ ಪ್ರತೀಕವಾಗಿ ಎಲ್ಲರೂ ಹಳದಿ ಪೇಟವನ್ನು ಧರಿಸಿ ಗಮನ ಸೆಳೆದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ಈ ವೇಳೆ ಮಾತನಾಡಿದ ಭಗವಂತ್‌ ಮಾನ್‌, ರಾಜ್ಯದ ಇತಿಹಾಸದಲ್ಲಿ ಸುವರ್ಣ ಅಧ್ಯಯವೊಂದು ಪ್ರಾರಂಭವಾಗಿದೆ. ಇದು ಉಡ್ತಾ ಪಂಜಾಬ್‌ ಬದಲಿಗೆ ಪ್ರಗತಿಪರ ಪಂಜಾಬ್‌ ಆಗಲಿದೆ ಎಂದು ಅಭಿಪ್ರಾಯಪಟ್ಟರು. ʻಉಡ್ತಾ ಪಂಜಾಬ್‌ʼ ಎನ್ನುವ ಮೂಲಕ 2016ರಲ್ಲಿ ಪಂಜಾಬ್‌ನಲ್ಲಿ ವ್ಯಾಪಿಸಿದ್ದ ಡ್ರಗ್‌ ದಂಧೆ ಕುರಿತು ಉಲ್ಲೇಖಿಸಿದರು.

    ನಾನು ಇಂದು ಯಾರನ್ನೂ ತಿರಸ್ಕರಿಸಲು ಬಂದಿಲ್ಲ. ನಾನು ಪಂಜಾಬ್‌ನಲ್ಲಿ ಪ್ರತಿಯೊಬ್ಬರಿಗೂ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮ ಪಕ್ಷಕ್ಕೆ ಮತ ಹಾಕದವರಿಗೂ ನಾನು ಮುಖ್ಯಮಂತ್ರಿ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೃದಯಸ್ಪರ್ಶಿ ಫೋಟೋ ಜೊತೆಗೆ ಭಗವಂತ ಮಾನ್‌ಗೆ ಶುಭಕೋರಿದ ಹರ್ಭಜನ್ ಸಿಂಗ್

    ಅಹಂಕಾರಕ್ಕೆ ಒಳಗಾಗಬೇಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಮಗೆ ಮತ ಹಾಕದವರನ್ನೂ ನಾವು ಗೌರವಿಸಬೇಕು ಎಂದು ಪಕ್ಷದ ಶಾಸಕರಿಗೆ ಕರೆ ನೀಡಿದರು.

    ಪ್ರೀತಿ ನಮ್ಮ ಜನ್ಮಸಿದ್ಧ ಹಕ್ಕು. ನಮ್ಮ ತಾಯ್ನಾಡನ್ನು ನಾವು ಯಾಕೆ ಪ್ರೀತಿಸಬಾರದು? ಹಿಂದೆ ಅರಮನೆಗಳಲ್ಲಿ ಪ್ರಮಾಣ ವಚನ ಸಮಾರಂಭಗಳು ನಡೆಯುತ್ತಿದ್ದವು. ನನ್ನ ಹೃದಯದಲ್ಲಿ ಭಗತ್‌ಸಿಂಗ್‌ ಅವರಿಗೆ ವಿಶೇಷ ಸ್ಥಾನವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್

    48 ವರ್ಷ ವಯಸ್ಸಿನ ಭಗವಂತ್‌ ಮಾನ್‌ ಅವರು 1970ರ ನಂತರ ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ. ಅವರು ಮಂಗಳವಾರ ಲೋಕಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

  • ಭಗವಂತ್ ಮಾನ್ ಭರ್ಜರಿ ಜಯ- ಭಗತ್ ಸಿಂಗ್ ಹುಟ್ಟೂರಲ್ಲಿ ಪ್ರಮಾಣ ವಚನ

    ಭಗವಂತ್ ಮಾನ್ ಭರ್ಜರಿ ಜಯ- ಭಗತ್ ಸಿಂಗ್ ಹುಟ್ಟೂರಲ್ಲಿ ಪ್ರಮಾಣ ವಚನ

    ಚಂಡೀಗಢ: ಪಂಜಾಬ್‍ನ ಎಎಪಿಯ ಸಿಎಂ ಅಭ್ಯರ್ಥಿಯಾಗಿರುವ ಭಗವಂತ್ ಮಾನ್ 58,206 ಮತದ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಪಂಜಾಬ್‍ನ ವಿಧಾನಸಭೆ ಚುನಾವಣೆಯಲ್ಲಿ ಆಪ್ ಪಕ್ಷ ಸ್ಪಷ್ಟ ಬಹುಮತ ಗಳಿಸಿದ್ದು, ಪಂಜಾಬ್‍ನಲ್ಲಿ ಅಧಿಕಾರ ಹಿಡಿಯಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಭಗವಂತ್ ಮಾನ್ ದುರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ದಲ್ವಿರ್‍ಸಿಂಗ್ ಗೋಲ್ಡಿ 24,306 ಮತಗಳಿಸಿದ್ದು, ಭಗವಂತ್ ಮಾನ್‍ಗೆ 82,023 ಮತಗಳನ್ನು ಗಳಿಸಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭವು ರಾಜಭವನದಲ್ಲಿ ನಡೆಯುವುದಿಲ್ಲ. ಬದಲಿಗೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನವಾನ್‍ಶಹರರ ಜಿಲ್ಲೆಯ ಖಟ್ಕರ್ಕಲನ್‍ನಲ್ಲಿ ನಡೆಸಲಾಗುವುದು. ದಿನಾಂಕವನ್ನು ನಂತರದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?

    ಯಾವುದೇ ಸರ್ಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಯವರ ಚಿತ್ರವಿರುವುದಿಲ್ಲ, ಬದಲಿಗೆ ಭಗತ್ ಸಿಂಗ್ ಮತ್ತು ಬಿಆರ್ ಅಂಬೇಡ್ಕರ್ ಅವರ ಚಿತ್ರಗಳು ಇರುತ್ತವೆ ಎಂದು ಘೋಷಿಸಿದರು.

    ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ವ್ಯವಹಾರದ ಆದೇಶವೆಂದರೆ ಶಾಲೆಗಳು, ಆರೋಗ್ಯ, ಉದ್ಯಮ, ಕೃಷಿಯನ್ನು ಲಾಭದಾಯಕವಾಗಿಸುವುದಾಗಿದೆ. ಜೊತೆಗೆ ಮಹಿಳೆಯರ ಸುರಕ್ಷತೆ ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ಸುಧಾರಿಸುವುದಾಗಿದೆ ಎಂದ ಅವರು, ಒಂದು ತಿಂಗಳೊಳಗೆ ಪಂಜಾಬ್‍ನಲ್ಲಿ ಬದಲಾವಣೆಯನ್ನು ಕಾಣುತ್ತೀರಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್

    ಆಮ್ ಆದ್ಮಿ ಪಕ್ಷವು ಪಂಜಾಬ್‍ನಲ್ಲಿ 117 ವಿಧಾನಸಭಾ ಸ್ಥಾನಗಳ ಪೈಕಿ 91 ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.

  • ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಬದಲಿಗೆ ಅಂಬೇಡ್ಕರ್‌, ಭಗತ್‌ ಸಿಂಗ್‌ರ ಫೋಟೋ ಅಳವಡಿಕೆ: ಕೇಜ್ರಿವಾಲ್‌

    ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಬದಲಿಗೆ ಅಂಬೇಡ್ಕರ್‌, ಭಗತ್‌ ಸಿಂಗ್‌ರ ಫೋಟೋ ಅಳವಡಿಕೆ: ಕೇಜ್ರಿವಾಲ್‌

    ನವದೆಹಲಿ: ದೆಹಲಿಯ ಸರ್ಕಾರಿ ಕಚೇರಿಗಳಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ ಅವರ ಫೋಟೋಗಳನ್ನು ಮಾತ್ರ ಅಳವಡಿಸಲಾಗುವುದು. ಇನ್ಮುಂದೆ ರಾಜಕಾರಣಿಗಳ ಯಾವುದೇ ಫೋಟೋಗಳು ಇರಬಾರದು ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

    ದೆಹಲಿ ಸರ್ಕಾರದ ಪ್ರತಿಯೊಂದು ಕಚೇರಿಗಳಲ್ಲಿ ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ ಅವರ ಫೋಟೋಗಳನ್ನು ಮಾತ್ರ ಅಳವಡಿಸಲಾಗುವುದು. ಯಾವುದೇ ಮುಖ್ಯಮಂತ್ರಿ ಅಥವಾ ರಾಜಕಾರಣಿಗಳ ಫೋಟೋಗಳನ್ನು ಹಾಕುವುದಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳು ಮಾಫಿಯಾವನ್ನು ರಕ್ಷಿಸುತ್ತಿದೆ: ಮಾಯಾವತಿ

    ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಏಕೆಂದರೆ ಅವರಿಬ್ಬರು ಒಂದೇ ಕನಸು, ಗುರಿಯನ್ನು ಹೊಂದಿದ್ದವರು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಂಬೇಡ್ಕರರು ಭಾರತ ಸಂವಿಧಾನ ಶಿಲ್ಪಿ ಮತ್ತು ಮೊದಲ ಕಾನೂನು ಮಂತ್ರಿ ಎಂಬುದು ನಮಗೆಲ್ಲ ತಿಳಿದಿದೆ. ಬಡವರಾಗಲಿ ಅಥವಾ ಶ್ರೀಮಂತರಾಗಿರಲಿ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಅಂಬೇಡ್ಕರ್‌ ಅವರ ಕನಸನ್ನು ನನಸು ಮಾಡಲಾಗುವುದು ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ. ಇದನ್ನೂ ಓದಿ: UP Election: ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಆರ್‌ಪಿಎನ್ ಸಿಂಗ್ – ಬಿಜೆಪಿ ಸೇರ್ಪಡೆ ಸಾಧ್ಯತೆ

    ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ನೋಡಿರುತ್ತೇವೆ. ಆದರೆ ಇನ್ಮುಂದೆ ಈ ಪರಿಪಾಠ ಇರುವುದಿಲ್ಲ ಎಂದು ಹೇಳಿದ್ದಾರೆ.