Tag: ಭಕ್ತೆ

  • ಭಕ್ತೆ ಮೇಲೆ ಅತ್ಯಾಚಾರ – ಸ್ವಯಂಘೋಷಿತ ದೇವಮಾನವ ಸ್ವಾಮಿ ವೈರಾಗ್ಯಾನಂದ ಅರೆಸ್ಟ್‌

    ಭಕ್ತೆ ಮೇಲೆ ಅತ್ಯಾಚಾರ – ಸ್ವಯಂಘೋಷಿತ ದೇವಮಾನವ ಸ್ವಾಮಿ ವೈರಾಗ್ಯಾನಂದ ಅರೆಸ್ಟ್‌

    ಭೋಪಾಲ್: ಮಧ್ಯಪ್ರದೇಶದ ರಾಜಧಾನಿಯಲ್ಲಿ ಮಹಿಳಾ ಭಕ್ತೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ಸ್ವಾಮಿ ವೈರಾಗ್ಯಾನಂದ ಗಿರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ವೈರಾಗ್ಯಾನಂದ ಗಿರಿ ಅವರನ್ನು ಗ್ವಾಲಿಯರ್‌ನಲ್ಲಿ ಬಂಧಿಸಿದ್ದು, ಅವರನ್ನು ಭೋಪಾಲ್‌ಗೆ ಕರೆತರಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಎಸಿಪಿ) ರಿಚಾ ಚೌಬೆ ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿವರ ಘೋಷಿಸಿಕೊಂಡ ಪ್ರಧಾನಿ ಮೋದಿ – ಎಷ್ಟಿದೆ ಗೊತ್ತಾ?

    ಜುಲೈ 17 ರಂದು ಆರೋಪಿ ದೇವಮಾನವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೋಮವಾರ ಭಕ್ತೆ ದೂರು ನೀಡಿ ನೀಡಿದ್ದಾರೆ.

    ಮದುವೆಯಾಗಿ ಬಹಳ ದಿನಗಳಿಂದ ಮಕ್ಕಳಾಗಿರಲಿಲ್ಲ. ಕೆಲವು ವಿಧಿವಿಧಾನಗಳ ಮೂಲಕ ಗರ್ಭಿಣಿಯಾಗುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ವೈರಾಗ್ಯಾನಂದರ ಆಶೀರ್ವಾದ ಪಡೆಯಲು ಹೋಗಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ- ಜೆಡಿಯು ಮೈತ್ರಿಗೆ ಗುಡ್‌ಬೈ – ನಿತೀಶ್‌ ರಾಜೀನಾಮೆಗೆ ಕಾರಣ ಏನು?

    ವೈರಾಗ್ಯಾನಂದ ನೀಡಿದ ನೈವೇದ್ಯವನ್ನು ಸೇವಿಸಿ ಮೂರ್ಛೆ ಹೋದಾಗ ದೇವಮಾನವ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಾಮಾಜಿಕ ಕಳಂಕದ ಭಯದಿಂದ ತಕ್ಷಣ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಸ್ವಯಂಘೋಷಿತ ದೇವಮಾನವ ಸ್ವಾಮಿ ವೈರಾಗ್ಯಾನಂದ ಗಿರಿ ಕಳೆದ ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಅವರ ಗೆಲುವಿಗಾಗಿ ದೇವಮಾನವ ಯಜ್ಞ ಕೂಡ ಆಯೋಜಿಸಿದ್ದ. ಇದನ್ನೂ ಓದಿ: ಬಿಜೆಪಿ- ಜೆಡಿಯು ಮೈತ್ರಿಗೆ ಗುಡ್‌ಬೈ – ನಿತೀಶ್‌ ರಾಜೀನಾಮೆಗೆ ಕಾರಣ ಏನು?

    Live Tv
    [brid partner=56869869 player=32851 video=960834 autoplay=true]

  • ನಿತ್ಯಾನಂದನ ವಿರುದ್ಧ ಫ್ರಾನ್ಸ್ ಸರ್ಕಾರದಿಂದ ತನಿಖೆ

    – 285 ಕೋಟಿ ರೂ. ವಂಚನೆ ಆರೋಪ

    ಫ್ರಾನ್ಸ್: ಎಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ಫ್ರೆಂಚ್ ಸರ್ಕಾರವು ಸ್ವಯಂ ಘೋಷಿತ ದೇವಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ವಿರುದ್ಧ ತನಿಖೆ ಆರಂಭಿಸಿದೆ.

    ಫ್ರೆಂಚ್ ಪ್ರಜೆ, ನಿತ್ಯಾನಂದನ ಮಾಜಿ ಭಕ್ತೆ ನೀಡಿದ ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿದೆ. ನಿತ್ಯಾನಂದನ ತನಗೆ 285 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಮಾಜಿ ಭಕ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಫ್ರಾನ್ಸ್‍ನ ಆಂತರಿಕ ಸಚಿವಾಲಯವು ನಿತ್ಯಾನಂದನ ವಿರುದ್ಧ ವಂಚನೆಯ ವಿವರಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ

    ತನಿಖೆಯ ಭಾಗವಾಗಿ, ಫ್ರೆಂಚ್ ಸರ್ಕಾರವು ನಿತ್ಯಾನಂದನ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಕೋರಿದೆ ಎಂದು ವರದಿಯಾಗಿದೆ. ಫ್ರಾನ್ಸ್ ಮೂಲದ ಅನೇಕ ಭಕ್ತರು ದೂರು ನೀಡಿದ ನಂತರ, ಎಮ್ಯಾನುಯೆಲ್ ಮ್ಯಾಕ್ರೋನ್ ಸರ್ಕಾರವು ಇಂಟರ್-ಪೋಲ್ ಅನ್ನು ತನಿಖೆ ಆರಂಭಿಸಿದೆ. ಹೊತೆಗೆ ನವದೆಹಲಿಯಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿಗೆ ದೂರಿನ ವಿವರಣೆ ನೀಡಲಾಗಿದೆ. ಈ ಮೂಲಕ ಮಾಹಿತಿ ಸಂಗ್ರಹಿಸಲು ಫ್ರಾನ್ಸ್ ಸರ್ಕಾರದೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ನಿತ್ಯಾನಂದನ ಜೊತೆಗಿರುವ ಫೋಟೋ ನಕಲಿ – ಚಿನ್ಮಯಿ ಶ್ರೀಪಾದ ಸ್ಪಷ್ಟನೆ

    ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ಹಲವು ಆಶ್ರಮಗಳ ನಂತರ ಇದೀಗ ತನ್ನದೇ ದೇಶವನ್ನು ಕಟ್ಟಲು ಹೊರಟಿದ್ದಾನೆ. ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿದ್ದು, ಇದು ತನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್‍ಪೋರ್ಟ್‍ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ.

    ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿದ್ದ.

  • ಸಾಯಿ ಬಾಬಾ ಭಕ್ತೆಯಾದ ರಷ್ಯಾ ಮಹಿಳೆ- ಪಂಥದ ಮುಖ್ಯಸ್ಥೆ ನೀಡಿದ ಉಪವಾಸದ ಸವಾಲು ಪೂರೈಸಲು ಹೋಗಿ ಸಾವು

    ಸಾಯಿ ಬಾಬಾ ಭಕ್ತೆಯಾದ ರಷ್ಯಾ ಮಹಿಳೆ- ಪಂಥದ ಮುಖ್ಯಸ್ಥೆ ನೀಡಿದ ಉಪವಾಸದ ಸವಾಲು ಪೂರೈಸಲು ಹೋಗಿ ಸಾವು

    ಮಾಸ್ಕೋ: ಸಾಯಿ ಬಾಬಾ ಪಂಥದ ಭಕ್ತೆಯಾಗಿದ್ದ ರಷ್ಯಾ ಮಹಿಳೆಯೊಬ್ಬರು ಉಪವಾಸದ ಸವಾಲು ಪೂರೈಸಲು ಹೋಗಿ ಸಾವನ್ನಪ್ಪಿದ್ದಾರೆ.

    ಒಳಾಂಗಣ ವಿನ್ಯಾಸಕಿ ಎಲೆನಾ ಸ್ಮೊರೊಡಿನೋವಾ(35) ತನ್ನ ಪತಿಯೊಂದಿಗೆ ವಿಚ್ಛೇದನವಾದ ಬಳಿಕ ಸಾಯಿ ಬಾಬಾ ಭಕ್ತೆಯಾಗಿದ್ದರು. ದಕ್ಷಿಣ ಕೇಂದ್ರ ರಷ್ಯಾದ ನೋವೋಸಿಬಿಸ್ರ್ಕ್ ನಗರದಲ್ಲಿ 2 ವರ್ಷಗಳ ಹಿಂದೆ ಎಲೆನಾ ಸಾಯಿ ಬಾಬಾ ಅನುಯಾಯಿಯಾದ ನಂತರ ಆಕೆ ನಮ್ಮೆಲ್ಲರಿಂದ ದೂರವಿದ್ದಳು ಎಂದು ಸಂಬಂಧಿಕರು ಹಾಗೂ ಸ್ನೇಹಿತರು ಹೇಳಿದ್ದಾರೆ.

    ಸೈಬೀರಿಯಾದವರಾದ ಎಲೆನಾ ತುಂಬಾ ಉತ್ಸಾಹ ಹಾಗೂ ಸಂತೋಷದಿಂದ ಇರುತ್ತಿದ್ದ ವ್ಯಕ್ತಿಯಾಗಿದ್ದರು. ಆದ್ರೆ ಪಂಥ ಸೇರಿದ ನಂತರ ಸಂಪೂರ್ಣ ಬದಲಾಗಿದ್ದರು. ಈ ಪಂಥವನ್ನ ಮಾಜಿ ಫ್ಯಾಶನ್ ಡಿಸೈನರ್ ಹಾಗೂ ಮನಶಾಸ್ತ್ರಜ್ಞೆ ಲೋಲಾ ಮುನ್ನಡೆಸುತ್ತಿದ್ದಳು. ಲೋಲಾ ತಾನು 2011 ರಲ್ಲಿ ವಿಧಿವಶರಾದ ಸತ್ಯ ಸಾಯಿ ಬಾಬಾ ಪ್ರತಿನಿಧಿ ಎಂದು ಹೇಳಿಕೊಂಡಿದ್ದಳು.

    ಲೋಲಾ ಎಲೆನಾಗೆ ದೀರ್ಘ ಉಪವಾಸ ಮಾಡುವ ಸವಾಲು ನೀಡುತ್ತಿದ್ದಳು. ಹಾಗೂ ತನ್ನ ಸ್ನೇಹಿತರ ಸಂಪರ್ಕದಿಂದ ದೂರವಿರಲು ಹೇಳುತ್ತಿದ್ದಳು ಎಂದು ಎಲೆನಾ ಸ್ನೇಹಿತರೊಬ್ಬರು ಹೇಳಿದ್ದಾರೆ.

    ಲೋಲಾ ನೀಡಿದ್ದ ಹಲವಾರು ಉಪವಾಸದ ಸವಾಲುಗಳನ್ನ ಎಲೆನಾ ಪೂರೈಸಿದ್ದರು. ಆದ್ರೆ ಕೊನೆಯ ಹಾಗೂ ಕಠಿಣ ಸವಾಲಾಗಿ ಮೂರು ವಾರಗಳ ಉಪವಾಸ ಮಾಡಲು ಹೇಳಿ ಮೊದಲೆರಡು ವಾರ ನೀರು ಕೂಡ ಸೇವಿಸದಂತೆ ಹೇಳಿದ್ದಳು. ಎಲೆನಾ ತಾನು ಈ ಸವಾಲನ್ನ ಕೈಬಿಡುತ್ತೇನೆ ಎಂದು ಲೋಲಾ ಗೆ ಹೇಳಿದ್ದರು. ಆದ್ರೆ ಅಪೌಷ್ಟಿಕತೆ ಹಾಗೂ ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಲೋಲಾ ಬೇಕೆಂತಲೇ ಎಲೆನಾಗೆ ತೊಂದರೆ ಮಾಡಲು ಹೀಗೆ ಮಾಡಿದ್ದಾಳೆ ಎಂದು ಎಲೆನಾ ಸ್ನೇಹಿತರು ಹೇಳಿದ್ದಾರೆ. ಸಂಪರ್ಕದ ಮೇಲೆ ನಿಷೇಧವಿದ್ದರೂ ಎಲೆನಾ ಬಾಯ್‍ಫ್ರೆಂಡ್ ಆಕೆಗೆ ಮೆಸೇಜ್ ಮಾಡಲು ಇಷ್ಟಪಡುತ್ತಿದ್ದ. ಇದರಿಂದ ಲೋಲಾಗೆ ಹೊಟ್ಟೆಉರಿ ಇತ್ತು ಎಂದು ಎಲೆನಾ ಸ್ನೇಹಿತರು ಅನುಮಾನಿಸಿದ್ದಾರೆ.

     

    ಎಲೆನಾ ಸಾವಿನ ನಂತರ ಲೋಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ಎದುರಿಸುವ ಸಾಧ್ಯತೆಯಿರೋದ್ರಿಂದ ಸದ್ಯ ತಲೆಮರೆಸಿಕೊಂಡಿದ್ದಾಳೆ.