Tag: ಭಕ್ತಿ

  • ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಮುಂದೆ ತಲೆಬಾಗಿ ನಿಲ್ಲುತ್ತೆ ಗೋವು

    ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಮುಂದೆ ತಲೆಬಾಗಿ ನಿಲ್ಲುತ್ತೆ ಗೋವು

    ಉಡುಪಿ: ಜನ ದೇವರನ್ನು ಭಕ್ತಿಯಿಂದ ನೋಡುತ್ತಾರೆ. ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಉಡುಪಿಯಲ್ಲಿ ಜನರ ಜೊತೆ ದನವೂ ದೇವರಿಗೆ ತಲೆ ತಗ್ಗಿಸಿ ಪೂಜೆ ಮಾಡಿದೆ.

    ಉಡುಪಿಯ ಪ್ರಸಿದ್ಧ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಹಸುವೊಂದು ನಿತ್ಯವೂ ಪೂಜೆ ಸಲ್ಲಿಸುತ್ತಿದೆ. ಆಶ್ಚರ್ಯ ಆದ್ರೂ ಸತ್ಯ. ಹಸು ನಿತ್ಯವೂ ಬ್ರಾಹ್ಮಿ ಮುಹೂರ್ತದಲ್ಲಿಯೇ ನಡೆಯುವ ಪೂಜೆಯ ಸಂದರ್ಭ ಶ್ರೀ ನಾಗ ದೇವರ ಕಟ್ಟೆಯ ಎದುರಿನ ಮೆಟ್ಟಿಲಿನ ಮಧ್ಯದಲ್ಲಿ ಶಿರಬಾಗಿ ನಮಿಸಿ ನಿಲ್ಲುತ್ತದೆ. ಕಳೆದ ಹಲವು ದಿನಗಳಿಂದಲೂ ನಡೆಯುತ್ತಿರುವ ಈ ವಿದ್ಯಮಾನ ನೋಡಿದ ದೇಗುಲಕ್ಕೆ ಆಗಮಿಸುವ ಭಕ್ತರು ಬೆರಗಾಗಿದ್ದಾರೆ.

    ಪ್ರತಿ ದಿನ ಮುಂಜಾನೆ ದೇವಳದ ಶ್ರೀನಾಗ ದೇವರ ಕಟ್ಟೆಯ ಎದುರು ಬಂದು ನಿಲ್ಲುವ ಈ ಗೋವು ಅಪರಾಹ್ನದ ದೇಗುಲದಲ್ಲಿ ನಡೆಯುವ ಮಹಾಪೂಜೆಯವರೆಗು ಕೂಡ ನಿಂತ ಸ್ಥಳವನ್ನು ಬಿಟ್ಟು ತೆರಳದೇ ಇರುವುದು ಭಕ್ತರ ಆಶ್ಚರ್ಯಕ್ಕೆ ಕಾರಣವಾಗಿದೆ. ಜನ ಮಾಡೋದನ್ನು ನೋಡಿ ಹೀಗೆ ಮಾಡುತ್ತಿರಬಹುದಾ? ಅಥವಾ ವಿಶೇಷ ಶಕ್ತಿಯೊಂದು ಇದರ ಹಿಂದೆ ಅಡಗಿದ್ಯಾ ಅನ್ನೋದು ಸದ್ಯ ಕುತೂಹಲದ ವಿಷಯ.

    ಕುಂಭಾಸಿ ದೇವಸ್ಥಾನದ ಭಕ್ತ ದಿವಾಕರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೆಲವು ಮೂಕಪ್ರಾಣಿಗಳು ಮನುಷ್ಯರು ಮಾಡುವುದನ್ನು ಅನುಕರಣೆ ಮಾಡುತ್ತವೆ. ಆದರೆ ಗೋವು ಆ ಜಾತಿಗೆ ಸೇರಿಲ್ಲ. ಗೋವು ಅನುಕರಣೆ ಮಾಡುವ ನಿದರ್ಶನ ನನ್ನ ಅನುಭವದ ಪ್ರಕಾರ ಇದೇ ಮೊದಲು. ಕುಂಭಾಸಿ ಸಿದ್ಧಿವಿನಾಯಕ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವರು. ಪ್ರತಿದಿನ ಇಲ್ಲಿ ದನ ದೇವರಿಗೆ ಭಕ್ತಿಯನ್ನು ಅರ್ಪಿಸುತ್ತಿದೆ. ಇದರಿಂದ ಕುಂಭಾಸಿ ಗಣಪತಿ ಮೂಕಪ್ರಾಣಿಗಳಿಗೂ ಒಲಿದಿದ್ದಾನೆ ಎಂಬೂದು ಭಕ್ತನಾಗಿ ನನ್ನ ಅಭಿಪ್ರಾಯ ಎಂದು ಹೇಳಿದರು.

  • ಹತ್ತಿ ಗಿಡದಲ್ಲಿ ಮೂಡಿದ ಹೆಣ್ಣಿನ ಮುಖದ ಆಕೃತಿ- ಪೂಜೆ ಮಾಡಲು ಮುಗಿಬಿದ್ದ ಜನ

    ಹತ್ತಿ ಗಿಡದಲ್ಲಿ ಮೂಡಿದ ಹೆಣ್ಣಿನ ಮುಖದ ಆಕೃತಿ- ಪೂಜೆ ಮಾಡಲು ಮುಗಿಬಿದ್ದ ಜನ

    – ಜಡೆಯ ರೂಪದಲ್ಲಿ ತಳಕು ಹಾಕಿಕೊಂಡಿರೋ ಕೊಂಬೆಗಳು

    ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರದ ಸದಾಶಿವನಗರದ ವಸತಿ ಪ್ರದೇಶದಲ್ಲಿ ಹತ್ತಿ (ಅರಳೆ) ಗಿಡದಲ್ಲಿ ಹೆಣ್ಣಿನ ಮುಖದ ಆಕೃತಿ ಮೂಡಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ಸದ್ಯ ಗಿಡದಲ್ಲಿ ಹೆಣ್ಣಿನ ಮುಖ ಮೂಡಿದ ನಂತರ ಜನರು ಹತ್ತಿ ಗಿಡದಲ್ಲಿ ದೇವಿಯ ಮುಖ ಮೂಡಿದೆ ಎಂದು ಪೂಜೆ ಮಾಡಲು ಮುಗಿಬಿದ್ದಿದ್ದಾರೆ.

    ಮೂರು ದಿನಗಳ ಹಿಂದೆ ಗಿಡದಲ್ಲಿ ಅಸ್ಪಷ್ಟವಾಗಿ ಗೋಚರಿಸುತ್ತಿದ್ದ ಮುಖದ ಆಕೃತಿ ಇದೀಗ ಸಂಪೂರ್ಣವಾಗಿ ಕಾಣುತ್ತಿದ್ದು, ಹತ್ತಿ ಗಿಡ ತುಂಬಾ ದೊಡ್ಡದಾಗಿ ಬೆಳೆಯುತ್ತಿದೆ. ಗಿಡದಲ್ಲಿ ಸುಮಾರು 12 ಅಡಿ ಎತ್ತರದಲ್ಲಿ ಮುಖದ ಆಕಾರ ಮೂಡಿದೆ.

    ಅಕ್ಕಪಕ್ಕದ ಮನೆಯವರು ಕೂಡ ಎಂದೂ ಈ ಗಿಡಕ್ಕೆ ಪೂಜೆ ಮಾಡಿದವರಲ್ಲ. ಆದರೆ ಇದೀಗ ಮುಖದ ಆಕೃತಿಯನ್ನು ಕಂಡ ನಂತರ ಸ್ಥಳೀಯರು ಇದೂ ಏನೋ ದೈವಿಚ್ಛೆ ಎಂದು ಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ವಿಷಯ ಹರಡಿದಂತೆಲ್ಲಾ ಜನರು ಗುಂಪು ಗುಂಪಾಗಿ ಬಂದು ನೋಡಿ ಆಶ್ಚರ್ಯ ಮತ್ತು ಭಕ್ತಿ ತೋರುತ್ತಿದ್ದಾರೆ. ಹಾಗೇ ಗಿಡದ ಒಂದು ಕಡೆ ಜಡೆಯ ರೂಪದಲ್ಲಿ ಕೊಂಬೆಗಳು ತಳಕು ಹಾಕಿಕೊಂಡು ಆಶ್ಚರ್ಯ ಮೂಡಿಸಿವೆ.

  • ವಿಡಿಯೋ: ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ದೇವರ ಪಲ್ಲಕ್ಕಿ ಹೊತ್ತ ಭಕ್ತ

    ವಿಡಿಯೋ: ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ದೇವರ ಪಲ್ಲಕ್ಕಿ ಹೊತ್ತ ಭಕ್ತ

    ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದ ಕಲ್ಮೇಶ್ವರನ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತಿದ್ದ ವ್ಯಕ್ತಿ ಕೆಂಡ ಹಾಯುವಾಗ ಆಯತಪ್ಪಿ ಬಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

    ಪ್ರತಿ ವರ್ಷದಂತೆ ಗ್ರಾಮದಲ್ಲಿ ಕಲ್ಮೇಶ್ವರ ದೇವರ ಪಲ್ಲಕ್ಕಿ ಉತ್ಸವದ ಜೊತೆಯಲ್ಲಿ ಕೆಂಡದೋಕುಳಿ ನಡೆಯುತ್ತದೆ. ಈ ಜಾತ್ರೆಯಲ್ಲಿ ಭಕ್ತಾದಿಗಳು ಕೆಂಡವನ್ನು ಬಣ್ಣದಂತೆ ಎರಚಾಡಿ ದೇವರಿಗೆ ಭಕ್ತಿ ಸಮರ್ಪಣೆ ಮಾಡ್ತಾರೆ. ಸೋಮವಾರ ಮಧ್ಯರಾತ್ರಿ ದೇವರ ಪಲ್ಲಕ್ಕಿ ಹೊತ್ತಿದ್ದ ಇಬ್ಬರಲ್ಲಿ ಹಿಂದೆ ಇದ್ದ ವ್ಯಕ್ತಿ ಕೆಂಡ ಹಾಯುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಬಂದು ಪಲ್ಲಕ್ಕಿಯನ್ನ ಮೇಲಕ್ಕೆತ್ತಿ ತೆಗೆದುಕೊಂಡು ಹೋಗಿದ್ದಾರೆ. ಕೆಳಗೆ ಬಿದ್ದ ವ್ಯಕ್ತಿಯೂ ಕೂಡ ತಕ್ಷಣ ಮೇಲೆದ್ದು ಓಡಿದ್ದಾರೆ.

    ಸಾಮಾನ್ಯವಾಗಿ ಜಾತ್ರೆ ಹಾಗೂ ರಥೋತ್ಸವಗಳು ಸಂಜೆ ಹೊತ್ತಿನಲ್ಲಿ ನಡೆಯುತ್ತವೆ. ಆದರೆ ಕಲ್ಮೇೀಶ್ವರನ ರಥೋತ್ಸವ ಮಧ್ಯರಾತ್ರಿ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ದೇವಾಲಯದ ಪ್ರಾಂಗಣದಲ್ಲಿ ಒಂದೆಡೆ ಸೇರಿ ಕೆಂಡದೋಕುಳಿಯಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಬೆಂಕಿಯನ್ನ ಹೂವಿನಂತೆ ಕೈಯಲ್ಲಿ ಹಿಡಿದು ಎರಚಾಡೋದು ನೋಡಿದರೆ ಎಂಥವರಿಗೆ ಒಂದು ಕ್ಷಣ ಮೈ ಜುಮ್ ಅನ್ನಿಸುತ್ತದೆ.

    https://youtu.be/G5xd_E0k2V4

     

     

  • ಈ ಜಾತ್ರೆಯಲ್ಲಿ ಕಬ್ಬಿಣದ ಸರಪಳಿ ಬೆನ್ನಿಗೆ ಚುಚ್ಕೊಂಡು ರಥ ಎಳೀತಾರೆ!

    ಈ ಜಾತ್ರೆಯಲ್ಲಿ ಕಬ್ಬಿಣದ ಸರಪಳಿ ಬೆನ್ನಿಗೆ ಚುಚ್ಕೊಂಡು ರಥ ಎಳೀತಾರೆ!

    ಕೊಪ್ಪಳ: ಜಿಲ್ಲೆಯ ಹೊಸಲಿಂಗಾಪುರ ಗ್ರಾಮದ ಕರಿಮಾರಿಯಮ್ಮ ದೇವಿಯ ಜಾತ್ರಾಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಭಕ್ತಾದಿಗಳು ದೇಹದಂಡನೆ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದ್ರು.

    ವಿಚಿತ್ರ ಅಂದ್ರೆ ಕಬ್ಬಿಣದ ಸರಪಳಿಯನ್ನು ಬೆನ್ನಿಗೆ ಚುಚ್ಚಿಕೊಂಡು ದೇವರ ರಥ ಎಳೆದಿದ್ದು ನೋಡುಗರನ್ನ ನಿಬ್ಬೆರಗಾಗಿಸಿತು. ಇನ್ನೂ ಕೆಲವರು ಕಾರು ಎಳೆದ್ರೆ ಮತ್ತೆ ಕೆಲವರು ಗಲ್ಲಕ್ಕೆ ಮಾರುದ್ದ ತ್ರಿಷೂಲ ಚುಚ್ಚಿಕೊಂಡು ಹರಕೆ ತೀರಿಸಿದ್ರು. 23 ವರ್ಷಗಳಿಂದ ನಡೆದುಕೊಂಡು ಬರ್ತಿರುವ ಈ ವಿಶಿಷ್ಟ ಜಾತ್ರೆಗೆ ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯದ ಭಕ್ತರು ಬಂದು ತಮ್ಮ ಹರಕೆ ತೀರಿಸ್ತಾರೆ.

    23 ವರ್ಷಗಳಿಂದ ಈ ರೀತಿ ದೇವರ ರಥ ಎಳೆಯುತ್ತಿದ್ದೇವೆ. ಇದರಿಂದ ನಾವು ಅಂದುಕೊಂಡಿದ್ದೆಲ್ಲಾ ಆಗಿದೆ. ಅಂದ್ರೆ ಒಳ್ಳೆಯದೇ ಆಗಿದೆ. ಬೆನ್ನಿಗೆ ಚುಚ್ಚಿಕೊಂಡ್ರೆ ಏನೂ ಆಗಲ್ಲ. ಮೂರೇ ದಿನದಲ್ಲಿ ಗಾಯ ವಾಸಿಯಾಗತ್ತೆ ಅಂತಾ ಭಕ್ತ ನಾಗರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

    ಮನೆತನದಲ್ಲಿ ಏನಾದ್ರೂ ಸಮಸ್ಯೆಗಳು ಬಂದ್ರೆ ಅಥವಾ ಏನಾದ್ರೂ ತೊಂದ್ರೆಗಳು ಬಂದಲ್ಲಿ ಕಬ್ಬಿಣದ ಸರಪಳಿಯನ್ನು ಬೆನ್ನಿಗೆ ಚುಚ್ಚಿ ಕಾರು ಅಥವಾ ರಥ ಎಳೆಯೋದು ಹೀಗೆ ಏನಾದ್ರು ಒಂದು ರೀತಿಯಲ್ಲಿ ದೇವರ ಸೇವೆ ಮಾಡಿದ್ದಲ್ಲಿ ನಮ್ಮಲ್ಲಿರುವ ತೊಂದರೆಗಳು ಅಥವಾ ಕಷ್ಟಗಳು ನಿವಾರಣೆಯಾಗುತ್ತವೆ ಅಂತಾ ಭಕ್ತ ಚಂದ್ರಶೇಖರ್ ಹೇಳಿದ್ದಾರೆ.

  • ದೇವರನ್ನು ಹುಡುಕಿಕೊಂಡು ಕಾಶ್ಮೀರಕ್ಕೆ ಹೋಗುವ ಡೋಂಗಿ ಆಸ್ತಿಕ ನಾನಲ್ಲ :ಸಿಎಂ

    ದೇವರನ್ನು ಹುಡುಕಿಕೊಂಡು ಕಾಶ್ಮೀರಕ್ಕೆ ಹೋಗುವ ಡೋಂಗಿ ಆಸ್ತಿಕ ನಾನಲ್ಲ :ಸಿಎಂ

    ಉಡುಪಿ: ದೇವರನ್ನು ಕಾಶ್ಮೀರಕ್ಕೆ ಹುಡುಕಿಕೊಂಡು ಹೋಗುವ ಡೋಂಗಿ ಆಸ್ತಿಕ ನಾನಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಡಾ. ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಶ್ರೀಗಳ ನೇತೃತ್ವದಲ್ಲಿ ನಡೆದ ಬಾರ್ಕೂರು ಬಂಟ ಮಹಾಸಂಸ್ಥಾನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು.ಮಹಾಸಂಸ್ಥಾನ ಲೋಕಾರ್ಪಣೆ ಮಾಡಿದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾನು ದೇವರನ್ನು ನಂಬದ ನಾಸ್ತಿಕನಲ್ಲ. ಹಾಗಂತ ಕೆಲ ಆಸ್ತಿಕರ ಡೋಂಗಿತನ ನನ್ನಲ್ಲಿಲ್ಲ ಎಂದು ಅವರು ಹೇಳಿದರು. ಕಷ್ಟ ಬಂದಾಗ ನನ್ನೂರ ದೇವರು ಸಾಕು. ಮೈಸೂರಿನಲ್ಲಿ ಸಾಕಷ್ಟು ದೇವಸ್ಥಾನಗಳಿಗೆ ಹೋಗ್ತೇನೆ. ಎಲ್ಲಾ ಮಾಡಿ ಆತ್ಮಶುದ್ಧಿಯೇ ಇಲ್ಲದಿದ್ದರೆ ಮಾಡಿದ್ದೆಲ್ಲ ವ್ಯರ್ಥ ಎಂದು ಹೇಳಿದರು.

    ದೇವರನ್ನು ಒಲಿಸಲು ಉದ್ದುದ್ದದ ಮಂತ್ರ- ಸಂಸ್ಕೃತದ ಶ್ಲೋಕ ಹೇಳಬೇಕಾಗಿಲ್ಲ. ದೇವರ ಆರಾಧನೆ ಮಾಡಲು ಶುದ್ಧ ಮನಸ್ಸು ಬೇಕು ಎಂದರು.

    ನೂರಾರು ದೈವಗಳನ್ನು ಒಂದೇ ಸೂರಿನಡಿಯಲ್ಲಿ ನಂಬಿ- ಸೇವೆ ನೀಡುವ ವ್ಯವಸ್ಥೆಯನ್ನು ಬಾರ್ಕೂರಿನಲ್ಲಿ ಮಾಡಲಾಗಿದೆ.ಇದು ಕರಾವಳಿಯ ಬಂಟ ಸಮುದಾಯದದಲ್ಲಿ ಬಹಳ ಚರ್ಚೆಯಲ್ಲಿದೆ. ಸಂಸ್ಥಾನ- ಸ್ವಾಮೀಜಿ ನೇಮಕ ವ್ಯವಸ್ಥೆಗೆ ಭಾರೀ ವಿರೋಧವಿದೆ. ಈ ನಡುವೆ ಸಿಎಂ ಸಂಸ್ಥಾನ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು.

    ಸಿದ್ದರಾಮಯ್ಯ ತುಳುನಾಡಿನ ಸಾಂಪ್ರದಾಯಿಕ ಬಂಟ ಸಮುದಾಯದ ಪೇಟ ತೊಟ್ಟು ಓಡಾಡಿದರು. ಸಂಸ್ಥಾನದಲ್ಲಿರುವ ದೈವಸ್ಥಾನ- ನಾಗನ ಗುಡಿಗಳಿಗೆ ಭೇಟಿಕೊಟ್ಟು ಮಾಹಿತಿಗಳನ್ನು ಸಂಗ್ರಹ ಮಾಡಿದರು. ಈ ಸಂದರ್ಭ ತನ್ನ ಆಸ್ತಿಕತೆಯ ಬಗ್ಗೆ ಮಾತನಾಡಿದರು.