Tag: ಭಕ್ತಾಧಿಗಳು

  • ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಖಾಸಗಿ ಬಸ್ – 42 ಭಕ್ತಾಧಿಗಳ ಸ್ಥಿತಿ ಗಂಭೀರ

    ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಖಾಸಗಿ ಬಸ್ – 42 ಭಕ್ತಾಧಿಗಳ ಸ್ಥಿತಿ ಗಂಭೀರ

    ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 42 ಭಕ್ತಾಧಿಗಳ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ (Tamilnadu) ಕೃಷ್ಣಗಿರಿ (Krishnagiri) ಜಿಲ್ಲೆಯಲ್ಲಿ ನಡೆದಿದೆ.

    ಇಂದು (ಡಿ.27) ಬಸ್ ಧರ್ಮಪುರಿ ಸಮೀಪದ ಇಟ್ಟಿಯಂಪಟ್ಟೆ ಗ್ರಾಮದಿಂದ ಹೋಗುತ್ತಿದ್ದ ಓಂ ಶಕ್ತಿ ದೇವಸ್ಥಾನಕ್ಕೆ ತೆರಳುತ್ತಿತ್ತು. ಈ ವೇಳೆ ಕೃಷ್ಣಗಿರಿ ಜಿಲ್ಲೆಯ ಉತಂಗರೈ ಚೆನ್ನಮಲೈ ಶಾಲೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ಬಿದ್ದಿದೆ. ಬಿದ್ದ ಪರಿಣಾಮ ದೇವಸ್ಥಾನಕ್ಕೆ ತೆರಳುತ್ತಿದ್ದ 42 ಭಕ್ತಾದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: 28ನೇ ವಯಸ್ಸಿನಲ್ಲಿದ್ದಾಗ ಒಂದೇ ದಿನ 300 ಪುರುಷರೊಂದಿಗೆ ಸೆಕ್ಸ್‌ ಮಾಡಿದ್ದೆ – ಲಿಲ್ಲಿಗೆ ಜಾಸ್ಮಿನ್‌ ಕೌಂಟರ್‌

    ತಕ್ಷಣವೇ ಸ್ಥಳೀಯರು ಗಾಯಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದು, ಉತಂಗರೈ (Uthangarai) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂತುರು ಮಳೆಯಿಂದಾಗಿ ಖಾಸಗಿ ಬಸ್ ಅಪಘಾತಕ್ಕೀಡಾಗಿದ್ದು, ಅಪಘಾತದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸದ್ಯ ಉತಂಗರೈ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ವ್ಹೀಲಿಂಗ್ ಮಾಡ್ತಾ ಕ್ಯಾಂಟರ್‌ಗೆ ಡಿಕ್ಕಿ – ಇಬ್ಬರು ಯುವಕರ ದಾರುಣ ಸಾವು; ಬೈಕ್‌ ಅಪ್ಪಚ್ಚಿ!

  • ಭೀಮನಮಾವಾಸ್ಯೆ ಪ್ರಯುಕ್ತ ದೇಗುಲದ ಮುಂದೆ ಕ್ಯೂ- ಮಾರುಕಟ್ಟೆಯಲ್ಲಿ ಜನರು ಭರ್ಜರಿ ವ್ಯಾಪಾರ

    ಭೀಮನಮಾವಾಸ್ಯೆ ಪ್ರಯುಕ್ತ ದೇಗುಲದ ಮುಂದೆ ಕ್ಯೂ- ಮಾರುಕಟ್ಟೆಯಲ್ಲಿ ಜನರು ಭರ್ಜರಿ ವ್ಯಾಪಾರ

    ಬೆಂಗಳೂರು: ಒಂದು ವಾರಗಳ ಲಾಕ್‍ಡೌನ್ ಮುಗಿಯಲು ಇನ್ನೊಂದೇ ದಿನ ಬಾಕಿ ಇದೆ. ಆದರೆ ಇಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದಾರೆ.

    ಬುಧವಾರ ಬೆಳಗ್ಗೆ 5 ಗಂಟೆಗೆ ಬೆಂಗಳೂರು ಲಾಕ್‍ಡೌನ್ ಅಂತ್ಯವಾಗಲಿದೆ. ಆದರೆ ಇಂದು ಭೀಮನ ಅಮಾವಾಸ್ಯೆ. ಹೀಗಾಗಿ ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದ ಮುಂದೆ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದಾರೆ. ಇತ್ತ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯಲ್ಲಿರುವ ಬಂಡಿ ಮಹಾಕಾಳಿ ದೇಗುಲದಲ್ಲಿ ಅಪಾರ ಜನರು ಬಂದಿದ್ದಾರೆ. ಲಾಕ್‍ಡೌನ್ ಇದ್ದರೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವರ ದರ್ಶನ ಮಾಡಲು ನೂರಾರು ಜನರು ಬಂದಿದ್ದಾರೆ.

    ಇನ್ನೂ ಭೀಮನಮಾವಾಸ್ಯೆ ಪ್ರಯುಕ್ತ ಮಾರುಕಟ್ಟೆಯಲ್ಲಿ ಜನರು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಕೊರೊನಾ ಎಫೆಕ್ಟ್ ನಡುವೆಯೂ ಜನರು ಮಾಸ್ಕ್ ಧರಿಸುವುದನ್ನು ಮರೆತು ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಆನಂದ್ ಪುರ ಮಾರುಕಟ್ಟೆಯಲ್ಲೂ ಮಾಸ್ಕ್ ಹಾಗೂ ಮುಂಜಾಗೃತ ಕ್ರಮಕೈಗಳದೇ ವ್ಯಾಪಾರದಲ್ಲಿ ಜನರು ಫುಲ್ ಬ್ಯುಸಿಯಾಗಿದ್ದಾರೆ. 12 ಗಂಟೆಯ ತನಕ ವ್ಯಾಪಾರಕ್ಕೆ ಅವಕಾಶ ಇರುವುದರಿಂದ  ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ.

    ಮೈಸೂರು ರಸ್ತೆಯ ಫ್ಲೈಓವರ್ ಕೆಳಭಾಗದಲ್ಲಿ ತರಕಾರಿ, ಹಣ್ಣು, ಸೊಪ್ಪು ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಆಗ ಸಾಮಾಜಿಕ ಅಂತರ ಕಾಯದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

    ಇತ್ತ ಶ್ರೀರಾಮಪುರದಲ್ಲಿ ಎಂದಿನಂತೆ ಜನರ ಹಾಗೂ ವಾಹನಗಳ ಸಂಚಾರವಿದೆ. ದೇವಸ್ಥಾನ ಸಹ ಒಪನ್ ಆಗಿದೆ. ಯಾವುದೇ ರೀತಿಯ ಸಾಮಾಜಿಕ ಅಂತರ ಕೂಡ ಇಲ್ಲದೆ ಜನರು ಗುಂಪು ಗುಂಪಾಗಿ ನೆರೆದಿದ್ದಾರೆ. ಟೌನ್ ಹಾಲ್ ಮುಂದೆ ವಾಹನಗಳ ಓಡಾಟ ಜೋರಾಗಿದೆ. ಮೈಸೂರು ರಸ್ತೆ, ಕಾರ್ಪೊರೇಷನ್, ಜಯನಗರ ಭಾಗದ ಎಲ್ಲ ವಾಹನಗಳು ಟೌನ್ ಹಾಲ್ ಮುಂದೆ ಸಂಚಾರ ಮಾಡುತ್ತಿವೆ.

  • ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

    ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

    ತುಮಕೂರು: ನಡೆದಾಡುವ ದೇವರು, ಕಲಿಯುಗದ ಬಸವಣ್ಣ ಶತಾಯುಷಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ತುಮಕೂರು ಸಿದ್ದಗಂಗಾ ಮಠದತ್ತ ಹರಿದು ಬರುತ್ತಿದ್ದು, ಭಕ್ತರಿಗಾಗಿ ಅಚ್ಚುಕಟ್ಟಾಗಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.

    ಶಿವಕುಮಾರ ಸ್ವಾಮೀಜಿಗಳು ಮಠಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ತಪ್ಪಬಾರದು. ತಡವಾದರೂ ದಾಸೋಹ ಸಿಗದೇ ಭಕ್ತರು ತೆರಳಬಾರದು ಎಂದು ಹೇಳುತ್ತಿದ್ದರು. ನಡೆದಾಡುವ ದೇವರ ಈ ವಾಕ್ಯ ಈಗಲೂ ಪಾಲನೆಯಾಗುತ್ತಿದ್ದು, ಅಂತಿಮ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಹಾಗೂ ಪ್ರಸಾದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ರಾತ್ರಿಯಿಂದಲೇ ಪ್ರಸಾದವನ್ನ ತಯಾರಿಸಿ, ಊಟದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ನೀಡಲಾಗುತ್ತಿದೆ.  ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ದಾಸೋಹದಲ್ಲಿ ಸಹಾಯ ಮಾಡಲು ಹಲವಾರು ಭಕ್ತರು ಕೂಡ ಕೈ ಜೋಡಿಸುತ್ತಿದ್ದಾರೆ. ದೇವರ ಮೇಲಿನ ಪ್ರೀತಿಗಾಗಿ ದಾಸೋಹ ಕೇಂದ್ರಕ್ಕೆ ಬಂದು ತರಕಾರಿ ಕತ್ತರಿಸಿಕೊಟ್ಟು, ಭಕ್ತ ಸಮೂಹ ಪ್ರಸಾದ ತಯಾರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಸಿದ್ದಗಂಗಾ ಮಠದಲ್ಲಿ ಒಟ್ಟು 10 ಕಡೆ ದಾಸೋಹ ವ್ಯವಸ್ಥೆ ನಡೆಯುತ್ತಿದ್ದು, ಹೊಸ ಮಠ ದಾಸೋಹ ಭವನ ಹಾಗೂ ಹೊಸ ಮಠದ ಶ್ರೀಗಳ ಕಚೇರಿಯ ಬಳಿ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಹೊಸ ಮಠದ ಹಿಂಭಾಗದಲ್ಲಿ 3 ಕಡೆ, ಕ್ಯಾತಸಂದ್ರ ಸರ್ಕಲ್, ಮಠದ ಹಿಂದಿನ ಗೇಟ್, ಬಂಡೇಪಾಳ್ಯ, ಶ್ರೀನಗರ ಕ್ರಾಸ್ ಹಾಗೂ ವಜ್ರಮಹೋತ್ಸವ ಕಟ್ಟಡದ ಬಳಿ ತಲಾ ಒಂದೊಂದರಂತೆ ಒಟ್ಟು 10 ಕಡೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

    ಸಿದ್ದಗಂಗಾ ಮಠಕ್ಕೆ ಬಂದ ಭಕ್ತರು ಖಾಲಿ ಹೊಟ್ಟೆಯಲ್ಲಿ ಹೋಗಬಾರದೆಂದು ಅನ್ನದಾಸೋಹ 24 ಗಂಟೆಯಿಂದ ನಡೆಯುತ್ತಿದೆ. ಇವರೆಗೆ 2.5 ಲಕ್ಷ ಜನ ಅನ್ನ ದಾಸೋಹ ಸಹ ಪಡೆದಿದ್ದಾರೆ. ಉಪ್ಪಿಟ್ಟು, ಕೇಸರಿ ಬಾತ್, ಅನ್ನ, ಸಾಂಬರ್ ಸೇರಿದಂತೆ ಹಲವು ಪದಾರ್ಥಗಳು ಸಿದ್ಧವಾಗುತ್ತಲೇ ಇದೆ. ಸಿದ್ದಗಂಗಾ ಮಠದಲ್ಲಿ ಅಡವಿ ಶ್ರೀಗಳು ಆರಂಭಿಸಿದ ಅನ್ನ ದಾಸೋಹ ಪದ್ಧತಿ ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದು, ಇಂದು ಕೂಡ ಮುಂದುವರಿದಿದೆ.  ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಕೇವಲ ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ತುಮಕೂರು ನಾಗರೀಕರ ವೇದಿಕೆಯಿಂದ ಉಚಿತ ಊಟ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಉಪಹಾರ ಮತ್ತು ಊಟವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 60 ಕಡೆ ರೈಸ್ ಮಿಲ್ ಮಾಲೀಕರ ಸಂಘ ಊಟ, ಉಪಹಾರ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಹಾಗೆಯೇ ಜಿಲ್ಲೆಯ ಹಲವೆಡೆ ಹೋಟೆಲ್‍ಗಳ ಬಂದ್ ಹಿನ್ನಲೆ ಊಟ, ಉಪಹಾರಕ್ಕೆ ಸಮಸ್ಯೆಯಾಗದಂತೆ ನಾಗರೀಕರು ಹಾಗು ಸಂಘ, ಸಂಸ್ಥೆಗಳು ಕಾಳಜಿ ವಹಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಗೂ ಬಸ್ ನಿಲ್ದಾಣದ ಬಳಿ ಊಟ, ಉಪಹಾರ ವ್ಯವಸ್ಥೆ ಮಾಡಲಾಗಿದೆ.

    https://www.youtube.com/watch?v=mxA9HE4qgJQ

    https://www.youtube.com/watch?v=WTHN3QhN8Zg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಕಳೆದ ರಾತ್ರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಈ ವೇಳೆ ಜನ ಸಾಗರದಿಂದ ಮಹಿಳೆಯರು ವೃದ್ಧರು ಅವಕಾಶ ಸಿಗದೇ ಇಂದು ಬೆಳಗ್ಗೆ ಶ್ರೀಗಳ ದರ್ಶನಕ್ಕೆ ಮುಂದಾಗಿದ್ದಾರೆ.

    ರಾತ್ರಿ ವೇಳೆ ಬಂದಿರುವ ಭಕ್ತರು ಸಿದ್ದಗಂಗಾ ಮಠದ ಆವರಣದಲ್ಲಿಯೇ ಕೆಲಕಾಲ ವಿಶ್ರಾಂತಿಯನ್ನ ಪಡೆದರು. ಇಂದು ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಭಕ್ತರ ದಾಸೋಹಕ್ಕೆ ಯಾವುದೇ ಸಮಸ್ಯೆಯಾಗದೇ ಇರಲು ಮಠದ ಸುತ್ತಲೂ ಹತ್ತು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: 70ರ ದಶಕದಲ್ಲೇ ಗದ್ದುಗೆ ನಿರ್ಮಾಣಕ್ಕೆ ಜಾಗ ಸೂಚಿಸಿದ್ದ ಶ್ರೀ: ಭವನದ ವಿಶೇಷತೆ ಏನು?

    ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ಮಠದ ಭಕ್ತರಿಂದ ತುಮಕೂರು ಸುತ್ತಮುತ್ತಲಿನ ಹಲೆವೆಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ದೂರದ ಊರಿನಿಂದ ಸಿದ್ದಗಂಗಾ ಮಠಕ್ಕೆ ಹೋಗುವ ಜನರಿಗಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ ವೇಳೆಯೇ 1 ಲಕ್ಷಕ್ಕೂ ಹೆಚ್ಚು ಭಕ್ತರು ಅಂತಿಮ ದರ್ಶನ ಪಡೆದಿದ್ದಾರೆ. ಸರದಿ ಸಾಲಿನಲ್ಲಿ ಬಂದು ಭಕ್ತರು ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.

    ನಟಿ ಸುಮಲತ, ಮಗ ಅಭಿಷೇಕ್ ಗೌಡ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ, ದೊಡ್ಡಣ್ಣ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಸಾಗರೋಪಾದಿಯಲ್ಲಿ ಬರುತ್ತಿರುವ ಭಕ್ತಾದಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷದ ಅಂಗವಾಗಿ ಕೋಟಿ ಶಿವಲಿಂಗದಲ್ಲಿ ಬ್ರಹ್ಮ ರಥೋತ್ಸವ

    ಹೊಸ ವರ್ಷದ ಅಂಗವಾಗಿ ಕೋಟಿ ಶಿವಲಿಂಗದಲ್ಲಿ ಬ್ರಹ್ಮ ರಥೋತ್ಸವ

    ಕೋಲಾರ: ನೂತನ 2019ರ ವರ್ಷವನ್ನು ಲಕ್ಷಾಂತರ ಜನರು ಶಿವನ ಸನ್ನಿಧಿ ಕೋಟಿಶಿವಲಿಂಗ ಕ್ಷೇತ್ರದಲ್ಲಿ ವಿಶಿಷ್ಠವಾಗಿ ಆಚರಣೆ ಮಾಡಿದ್ರು. ಹೊಸ ವರ್ಷದ ವಿಶೇಷವಾಗಿ ಕ್ಷೇತ್ರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರೆವೇರಿತು.

    ಸೋಮವಾರ ಬೆಳಗ್ಗಿನಿಂದಲೇ ಕೋಲಾರದ ಜನರು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಿದರು. ಕೋಲಾರದ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರ ಶ್ರೀ ಕೋಟಿ ಶಿವಲಿಂಗ ಕ್ಷೇತ್ರಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿ ಹೊಸ ವರ್ಷವನ್ನ ಬರಮಾಡಿಕೊಂಡರು. ಭಕ್ತರು ಕೋಟಿ ಶಿವಲಿಂಗಗಳ ದರ್ಶನ ಪಡೆದು, ಆ ಶಿವನ ನೆನೆಯುತ್ತಾ ಹೊಸ ವರ್ಷ ಹರುಷ ತರಲಿ ಎಂದು ಬೇಡಿಕೊಂಡಿದ್ದಾರೆ.

    ಕರ್ನಾಟಕದ ಜನರು ಮಾತ್ರವಲ್ಲದೆ ನೆರೆಯ ಆಂದ್ರ, ತಮಿಳುನಾಡು ಹಾಗೂ ಕೇರಳದಿಂದಲೂ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರು ಕೋಟಿಲಿಂಗ ದರ್ಶನ ಪಡೆದು ಪುನೀತರಾದ್ರು. ಈ ಹೊಸ ವರ್ಷದ ನಿಮಿತ ಕ್ಷೇತ್ರದಲ್ಲಿ ನಡೆದ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿ ಉತ್ಸವಕ್ಕೆ ಇನ್ನಷ್ಟು ಮೆರಗನ್ನು ತಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಜಾತ್ರೆ ಗುರುವಾರದಿಂದ ಆರಂಭ

    ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಜಾತ್ರೆ ಗುರುವಾರದಿಂದ ಆರಂಭ

    ಹಾಸನ: ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಗುರುವಾರದಿಂದ ಚಾಲನೆ ದೊರೆಯಲಿದೆ.

    ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ರ ನಂತರ ಗೊನೆಯುಳ್ಳ ಬಾಳೆಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ನವೆಂಬರ್ 1 ರಿಂದ 9ರ ವರೆಗೆ ಈ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದ್ದು, ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಇದರಿಂದಾಗಿ ಕೇವಲ 7 ದಿನ ಮಾತ್ರ ದೇವಿಯ ದರ್ಶನ ಸಿಗಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಲ್. ನಾಗರಾಜ್ ಹೇಳಿದ್ದಾರೆ.

    ಆಮೆಗತಿಯಲ್ಲಾದರೂ ಜಿಲ್ಲಾಡಳಿತ ಭಕ್ತರಿಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದರೆ, ಇದೇ ಮೊದಲ ಬಾರಿಗೆ ಕೇಳಿ ಬಂದ ಪವಾಡ ಬಯಲು ಕೂಗು ಸೇರಿದಂತೆ ಅನೇಕ ವಿರೋಧಾಭಾಸಗಳ ನಡುವೆ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.

    ಈ ಬಾರಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ದರ್ಶನ ಆರಂಭ ಒಂದು ವಿಶೇಷವಾಗಿದ್ದು, ಆಶ್ವೀಜ ಮಾಸದ ಮೊದಲ ಗುರುವಾರ ಅಂದರೆ ನಾಳೆ ದೇವಾಲಯದ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ಮೈಸೂರು ಅರಸು ವಂಶಸ್ಥರು ಬಾಳೆಕಂಬ ಕಡಿದ ಕೂಡಲೇ ವರ್ಷದಿಂದ ಮುಚ್ಚಿದ್ದ ದೇವಿಯ ಗರ್ಭಗುಡಿಯ ಬಾಗಿಲು ಸಚಿವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ತೆರೆಯಲಿದೆ.

    ಬೇರೆ ಬೇರೆ ನಗರದಿಂದ ಭಕ್ತಾಧಿಕಗಳು ಆಗಮಿಸುವ ಕಾರಣ ಪೊಲೀಸ್ ಇಲಾಖೆಯಿಂದಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಪ್ರತಿದಿನ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸರಗಳ್ಳತನವನ್ನು ತಡೆಯುವ ದೃಷ್ಟಿಯಿಂದ ದೇವಾಸ್ಥಾನದಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಆದರೂ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಭಕ್ತಾಧಿಗಳು ಸಾಧ್ಯವಾದಷ್ಟು ಕಡಿಮೆ ಒಡವೆಯನ್ನು ಹಾಕಿಕೊಂಡು ಬರಬೇಕು ಎಂದು ಜಿಲ್ಲಾ ಪೊಲೀಸ್ ವರಷ್ಟಾಧಿಕಾರಿ ಡಾ. ಪ್ರಕಾಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv