Tag: ಬ್ಲ್ಯಾಕ್ ಮ್ಯಾಜಿಕ್

  • ಸಿನಿಮಾ ರಂಗದಲ್ಲಿ ಬೆಳೆಯೋಕೆ ಮಾಟ-ಮಂತ್ರ ಮಾಡಿಸ್ತಿದ್ದರಂತೆ ಕಂಗನಾ ರಣಾವತ್

    ಸಿನಿಮಾ ರಂಗದಲ್ಲಿ ಬೆಳೆಯೋಕೆ ಮಾಟ-ಮಂತ್ರ ಮಾಡಿಸ್ತಿದ್ದರಂತೆ ಕಂಗನಾ ರಣಾವತ್

    ದಿನದಿಂದ ದಿನಕ್ಕೆ ಕಂಗನಾ ರಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಸಾಕಷ್ಟು ಸದ್ದು ಮಾಡುತ್ತಿದೆ. ಒಂದೊಂದು ಸಲ ಆ ಶೋ ಸ್ಪರ್ಧಿಯಿಂದಲೋ ಅಥವಾ ಮತ್ತೊಂದು ಸಲ ಸ್ವತಃ ಕಂಗನಾ ಹಾಡುವ ಮಾತಿನಿಂದಲೂ ವಿವಾದವಂತೂ ಆಗುತ್ತದೆ. ಪ್ರತಿ ಬಾರಿಯೂ ಪೂನಂ ಪಾಂಡೆ ಒಂದಿಲ್ಲೊಂದು ಗೋಳು ತೋಡಿಕೊಂಡು ಸುದ್ದಿ ಆಗುತ್ತಿದ್ದರು. ಈ ಬಾರಿ ಖ್ಯಾತ ನಟಿ ಪಾಯಲ್ ಸರದಿ. ಅವರ ಬದುಕಿನಲ್ಲಿ ಆದ ಅಚ್ಚರಿಯ ಸುದ್ದಿಯೊಂದನ್ನು ಹೇಳಿ ಸ್ವತಃ ಕಂಗನಾ ರಣಾವತ್ ಗೆ ಬೆಚ್ಚಿ ಬೀಳಿಸಿದ್ದಾಳೆ. ಇದನ್ನೂ ಓದಿ : ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಈ ಶೋನಲ್ಲಿ ಪಾಯಲ್ ಎಲಿಮಿನೇಷನ್ ಹಂತ ತಲುಪಿದ್ದಾರೆ. ಹಾಗಾಗಿ ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಗೊತ್ತಿರದ ಸತ್ಯ ಸಂಗತಿಯೊಂದನ್ನು ತಿಳಿಸಿ ಎಂದು ಕಂಗನಾ ಕೇಳಿದರು. ಅದಕ್ಕೆ ಉತ್ತರವಾಗಿ ಪಾಯಲ್, ತಾವು ಮಾಟ-ಮಂತ್ರ ಮಾಡಿಸಿದ್ದನ್ನು ಬಹಿರಂಗಪಡಿಸಿದರು. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    “ನಾನು ಸಿನಿಮಾ ರಂಗದಲ್ಲಿ 15 ವರ್ಷಗಳಿಂದ ಇರುವೆ. ಇಲ್ಲಿ ಸೋಲು ಮತ್ತು ಗೆಲುವನ್ನೂ ಕಂಡಿರುವೆ. ಒಂದು ಹಂತದಲ್ಲಿ ನನ್ನ ವೃತ್ತಿ ಜೀವನ ಮುಳುಗತೊಡಗಿತ್ತು. ಆವಾಗ ನಾನು ಮಾಟ ಮಾಡಿಸಲು ಮುಂದಾದೆ. ಮುಂಬಯಿನಲ್ಲಿ ವಶೀಕರಣ ಮಾಡುವಂತಹ ವ್ಯಕ್ತಿಯನ್ನು ಸಂಪರ್ಕಿಸಿ ಒಬ್ಬ ನಿರ್ಮಾಪಕನ ಜತೆ ಕೆಲಸ ಮಾಡುವುದಕ್ಕಾಗಿ ನಾನು ವಶೀಕರಣ ಮಾಡಿದೆ’’ ಎಂದು ಹೇಳಿದರು ಪಾಯಲ್. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಇದೇ ಸಂದರ್ಭದಲ್ಲಿ ಕಂಗನಾ ರಣಾವತ್ ಕೂಡ ತಮ್ಮ ಜೀವನದಲ್ಲಿ ನಡೆದ ಬ್ಲ್ಯಾಕ್ ಮ್ಯಾಸಿಕ್ ವಿಷಯವೊಂದನ್ನು ಹಂಚಿಕೊಂಡರು. ‘ಕಂಗನಾ ರಣಾವತ್ ಕೂಡ ಬ್ಲ್ಯಾಕ್ ಮ್ಯಾಸಿಕ್ ಮೂಲಕ ಬಾಲಿವುಡ್ ನ ಅನೇಕರನ್ನು ವಶೀಕರಣ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ನನ್ನ ಬಾಯ್ ಫ್ರೆಂಡ್ ಕೂಡ ನನ್ನ ಮೇಲೆ ಇದೇ ರೀತಿ ಆರೋಪ ಮಾಡಿದ್ದ. 2016ರಲ್ಲಿ ನಾನೂ ಕೂಡ ಮಾಟ ಮಂತ್ರದ ಕಾರಣಕ್ಕಾಗಿ ಸಾಕಷ್ಟು ಸುದ್ದಿ ಆದೆ’ ಎಂದು ಹೇಳಿದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಕೊನೆಗೆ ಇದೆಲ್ಲವನ್ನೂ ಮಾಡಬೇಡಿ. ನಿಮಗೆ ಸೌಂದರ್ಯವಿದೆ. ಸೆಳೆಯುವಂತಹ ಶಕ್ತಿಯಿದೆ. ಬುದ್ಧಿವಂತರು, ಪ್ರತಿಭಾವಂತರು ಅದರ ಮೂಲಕ ಜನರನ್ನು ಗೆಲ್ಲಿರಿ. ಈ ಗೆಲುವು ಯಾವತ್ತಿಗೂ ಶಾಶ್ವತವಾಗಿ ಇರುತ್ತದೆ ಎಂದು ಪಾಯಲ್ ಗೆ ಬುದ್ದಿ ಹೇಳಿದರು ಕಂಗನಾ ರಣಾವತ್.

  • ಸೋದರಳಿಯನ ಮಾಟಮಂತ್ರಕ್ಕೆ ವೃದ್ಧ ದಂಪತಿ ಸುಟ್ಟು ಭಸ್ಮ

    ಸೋದರಳಿಯನ ಮಾಟಮಂತ್ರಕ್ಕೆ ವೃದ್ಧ ದಂಪತಿ ಸುಟ್ಟು ಭಸ್ಮ

    ಭೋಪಾಲ್: ಸೋದರಳಿಯನ ಮಾಟಮಂತ್ರಕ್ಕೆ ಅಭ್ಯಾಸಕ್ಕೆ ವೃದ್ಧ ದಂಪತಿ ಸುಟ್ಟು ಕರಲಕಾದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

    ಸುಮೇರ್ ಸಿಂಗ್ ಕುಲಸ್ತೆ (60) ಮತ್ತು ಅವರ ಪತ್ನಿ ಸಿಯಾಬಾಯಿ ಮೃತರಾಗಿದ್ದಾರೆ. 27 ವರ್ಷದ ದಯಾರಾಮ್ ಕುಲಸ್ತೆ ಬಂಧಿತ ಆರೋಪಿಯಾಗಿದ್ದಾನೆ. ಸೋದರಳಿಯನ ಬ್ಲ್ಯಾಕ್‌ ಮ್ಯಾಜಿಕ್‍ಗೆ ದಂಪತಿ ಬಲಿಯಾಗಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಜನವರಿ 9 ಮತ್ತು 10ರ ಮಧ್ಯರಾತ್ರಿ ಚೌರೈ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ದಂಪತಿಯನ್ನು ಕೊಂದು ಅವರ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ಆರೋಪಿಯನ್ನು ಸೋಮವಾರ ಬರೇಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿನೋಟಿಯಾ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‍ಪಿ) ಶಿವೇಂದ್ರ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಮೃತ ದಂಪತಿ ಮಾಡಿದ ‘ ಬ್ಲ್ಯಾಕ್‌ ಮ್ಯಾಜಿಕ್’ನಿಂದಾಗಿ ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿ ದಯಾರಾಮ್ ಕುಲಸ್ತೆ ಅನುಮಾನದಿಂದ ಈ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಘಟನೆಯ ನಂತರ ದಯಾರಾಮ್ ನಾಪತ್ತೆಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಂಬಾಕು ಮಿಶ್ರಿತ ನೀರು ಕುಡಿಸಿ ತಿಂಗಳಿಗೆ ಲಕ್ಷಾಂತರ ಹಣ ಮಾಡ್ತಿದ್ದ ಫರೀದಾ ಪರಾರಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಂಬಾಕು ಮಿಶ್ರಿತ ನೀರು ಕುಡಿಸಿ ತಿಂಗಳಿಗೆ ಲಕ್ಷಾಂತರ ಹಣ ಮಾಡ್ತಿದ್ದ ಫರೀದಾ ಪರಾರಿ

    ಧಾರವಾಡ: ಅಮಾಯಕ ಜನರಿಗೆ ತಂಬಾಕು ಮಿಶ್ರಿತ ನೀರು ಕುಡಿಸಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ ವಂಚಕಿ ಫರೀದಾ ಪಬ್ಲಿಕ್ ಟಿವಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಶೆಡ್ ಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾಳೆ.

    ಮೂಲತಃ ಹುಬ್ಬಳ್ಳಿಯ ನಿವಾಸಿಯಾಗಿರುವ ಫರೀದಾ ಧಾರವಾಡದ ಕುಂದಗೋಳ ಕ್ರಾಸ್ ಬಳಿ ದೆವ್ವ, ಪಿಶಾಚಿ ಬಿಡಿಸುತ್ತೇನೆ ಎಂದು ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದಳು. ದೆವ್ವ, ಪೀಡೆ, ಭೂತ, ಪಿಶಾಚಿ ಹೀಗೆ ಯಾವುದೇ ದುಷ್ಟ ಶಕ್ತಿ ಇದ್ರೂ ದೂರ ಮಾಡ್ತೀವಿ ಅಂತಾ ಈಕೆ ನಂಬಿಕೆ ಹುಟ್ಟಿಸಿದ್ದಳು. ಕೇವಲ ಒಂದು ಗ್ಲಾಸ್ ನೀರು ಕುಡಿಸುವುದರ ದುಷ್ಟ ಶಕ್ತಿ ಸಂಹಾರ ಮಾಡುತ್ತೇನೆ ಎಂದು ಮಂಕುಬೂದಿ ಎರಚಿ ಚೆನ್ನಾಗಿ ದುಡ್ಡು ಮಾಡುತ್ತಿದ್ದಳು.

    ಕೇವಲ ಎರಡು ತಿಂಗಳಲ್ಲಿ ನಾಲ್ಕು ಅಥವಾ ಐದು ಬಾರಿ ತನ್ನ ಬಳಿಗೆ ಬರುವಂತೆ ಹೇಳಿ ಅವರಿಗೆ ನೀರು ಕುಡಿಸುತ್ತಿದ್ದಳು. ಈ ನೀರು ಕುಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಜನರಿಗೆ ವಾಂತಿ ಆಗುತ್ತದೆ.  ಅದಕ್ಕೆ ಪೂರ್ವ ಸಿದ್ಧತೆಯಾಗಿ ಬಂದವರಿಗೆಲ್ಲ ಒಂದೊಂದು ಬಕೆಟ್‍ಗಳನ್ನು ರೆಡಿ ಮಾಡಿ ಇಟ್ಟಿರುತ್ತಿದ್ದಳು. ವಾಮಿಟ್ ಮಾಡಿದ್ರೆ ದೆವ್ವ ದೇಹ ಬಿಟ್ಟು ಹೋಗುತ್ತದೆ ಎಂದು ಫರೀದಾ ಹೇಳುತ್ತಿದ್ದಳು.

    ಹಸಿರು ಮಿಶ್ರಿತ ತಂಬಾಕು ನೀರು: ಫರೀದಾ ಬಳಿ ಬರೋ ಜನ 20 ರೂಪಾಯಿ ಕೊಟ್ಟು ಕೂಪನ್ ತೆಗೆದುಕೊಂಡು ನಿಲ್ಲಬೇಕು. ಆಮೇಲೆ 100 ರೂಪಾಯಿ ಕೊಟ್ಟು ಚೆಕ್ ಮಾಡಿಸಬೇಕು. ತನ್ನ ಬಳಿ ಬರೋ ಜನರ ಕಣ್ಣುಗಳನ್ನು ಚೆಕ್ ಮಾಡಿ, ನಂತರ ತಲೆ ಮೇಲೆ ಕೈ ಇಟ್ಟು ನೀರು ಕುಡಿಸುತ್ತಾಳೆ. ಈ ನೀರಿನಲ್ಲಿ ಹಸಿರು ತಂಬಾಕು ಮಿಕ್ಸ್ ಮಾಡಿರೋದ್ರಿಂದ ಸಹಜವಾಗಿ ಜನರಿಗೆ ವಾಮಿಟ್ ಆಗುತ್ತದೆ.

     

    ಇಂದು ಬೆಳಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಭಯಗೊಂಡ ಫರೀದಾ ಈಗ ನಾಪತ್ತೆಯಾಗಿದ್ದಾಳೆ. ಇನ್ನೂ ದಂಧೆ ನಡೆಸುತ್ತಿದ್ದ ಶೆಡ್‍ಗೆ ಬೀಗ ಹಾಕಲಾಗಿದೆ.

  • ಒಂದು ಗ್ಲಾಸ್ ನೀರು ಕುಡಿದ್ರೆ ಎಲ್ಲವೂ ಮಾಯ-ದೆವ್ವ, ಪಿಶಾಚಿ, ಪೀಡೆ ಬಿಡಿಸ್ತಾಳಂತೆ ಹುಬ್ಬಳ್ಳಿಯ ಖತರ್ನಾಕ್ ಲೇಡಿ!

    ಒಂದು ಗ್ಲಾಸ್ ನೀರು ಕುಡಿದ್ರೆ ಎಲ್ಲವೂ ಮಾಯ-ದೆವ್ವ, ಪಿಶಾಚಿ, ಪೀಡೆ ಬಿಡಿಸ್ತಾಳಂತೆ ಹುಬ್ಬಳ್ಳಿಯ ಖತರ್ನಾಕ್ ಲೇಡಿ!

    ಧಾರವಾಡ: ನಿಮಗೆ ಯಾವುದೇ ಕಷ್ಟ ಇದ್ದರೂ ಒಂದು ಗ್ಲಾಸ್ ನೀರು ಸಾಕು. ದೆವ್ವ, ಭೂತ ಹಿಡಿದಿದ್ರೆ ಈ ಒಂದು ಗ್ಲಾಸ್ ನೀರು ಕುಡಿದ್ರೆ ಸಾಕು. ದೆವ್ವ ಭೂತ ಪಿಶಾಚಿ ಏನೂ ಇರಲ್ಲ. ಇಂಥದೊಂದು ಕಟ್ಟುಕಥೆ ಹೇಳಿಕೊಂಡು ಮುಗ್ಧ ಜನರಿಂದ ಹಣ ವಸೂಲಿ ಮಾಡ್ತಿದ್ದಾರೆ ಓರ್ವ ಖತರ್ನಾಕ್ ಲೇಡಿ.

    ಭಯಾನಕ ಕಟ್ಟು ಕಥೆ ಕಟ್ಟಿ ಹುಬ್ಬಳ್ಳಿಯಲ್ಲಿ ಫರೀದಾ ಎಂಬ ಮಹಿಳೆ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದಾಳೆ. ಫರೀದಾ ಮೂಲತಃ ಹುಬ್ಬಳ್ಳಿಯ ನಿವಾಸಿ. ನಗರದ ಹೊರವಲಯದ ಅದರಗುಂಚಿಯ ಬಯಲು ಪ್ರದೇಶದಲ್ಲಿನ ಒಂದು ಮನೆ ಮಾಡಿಕೊಂಡಿದ್ದಾಳೆ. ಹೈವೆ ಬಳಿಯೇ ಕುಂದಗೋಳ ಕ್ರಾಸ್‍ನ ಬಳಿ ಇರುವ ಈಕೆಯ ಜಾಗಕ್ಕೆ ಪ್ರತಿನಿತ್ಯ ನೂರಾರು ಜನರು ಬಂದು ಹೋಗುತ್ತಾರೆ.

    ದೆವ್ವ, ಪೀಡೆ, ಭೂತ, ಪಿಶಾಚಿ ಹೀಗೆ ಯಾವುದೇ ದುಷ್ಟ ಶಕ್ತಿ ಇದ್ರೂ ದೂರ ಮಾಡ್ತೀವಿ ಅಂತಾ ಈಕೆ ನಂಬಿಕೆ ಹುಟ್ಟಿಸಿದ್ದಾಳೆ. ಕೇವಲ ಒಂದು ಗ್ಲಾಸ್ ನೀರು ಕುಡಿಸುವುದರ ದುಷ್ಟ ಶಕ್ತಿ ಸಂಹಾರ ಮಾಡುತ್ತೇನೆ ಎಂದು ಮಂಕುಬೂದಿ ಎರಚಿ ಚೆನ್ನಾಗಿ ದುಡ್ಡು ಮಾಡ್ತಿದ್ದಾಳೆ.

    ಕೇವಲ ಎರಡು ತಿಂಗಳಲ್ಲಿ ನಾಲ್ಕು ಅಥವಾ ಐದು ಬಾರಿ ತನ್ನ ಬಳಿಗೆ ಬರುವಂತೆ ಹೇಳಿ ಅವರಿಗೆ ನೀರು ಕುಡಿಸುತ್ತಾಳೆ. ಈ ನೀರು ಕುಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಜನರಿಗೆ ವಾಂತಿ ಆಗುತ್ತದೆ. ಅದಕ್ಕೆ ಪೂರ್ವ ಸಿದ್ಧತೆಯಾಗಿ ಬಂದವರಿಗೆಲ್ಲಾ ಒಂದೊಂದು ಬಕೆಟ್‍ಗಳನ್ನು ರೆಡಿ ಮಾಡಿ ಇಟ್ಟಿರುತ್ತಾಳೆ. ವಾಮಿಟ್ ಮಾಡಿದ್ರೆ ದೆವ್ವ ದೇಹ ಬಿಟ್ಟು ಹೋಗುತ್ತದೆ ಎಂದು ಫರೀದಾ ಹೇಳುತ್ತಾಳೆ.

    ಹಸಿರು ಮಿಶ್ರಿತ ತಂಬಾಕು ನೀರು: ಫರೀದಾ ಬಳಿ ಬರೋ ಜನ 20 ರೂಪಾಯಿ ಕೊಟ್ಟು ಕೂಪನ್ ತೆಗೆದುಕೊಂಡು ನಿಲ್ಲಬೇಕು. ಆಮೇಲೆ 100 ರೂಪಾಯಿ ಕೊಟ್ಟು ಚೆಕ್ ಮಾಡಿಸಬೇಕು. ತನ್ನ ಬಳಿ ಬರೋ ಜನರ ಕಣ್ಣುಗಳನ್ನು ಚೆಕ್ ಮಾಡಿ, ನಂತರ ತಲೆ ಮೇಲೆ ಕೈ ಇಟ್ಟು ನೀರು ಕುಡಿಸುತ್ತಾಳೆ. ಈ ನೀರಿನಲ್ಲಿ ಹಸಿರು ತಂಬಾಕು ಮಿಕ್ಸ್ ಮಾಡಿರೋದ್ರಿಂದ ಸಹಜವಾಗಿ ಜನರಿಗೆ ವಾಮಿಟ್ ಆಗುತ್ತದೆ.

    ಪ್ರತಿನಿತ್ಯ ಫರೀದಾ 10 ರಿಂದ 20 ಸಾವಿರ ರೂ.ವರೆಗೂ ಅಂದರೇ ಒಂದು ತಿಂಗಳಿಗೆ 6 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾಳೆ. ಇಷ್ಟೆಲ್ಲಾ ದಂಧೆ ನಡೆಸುತ್ತಿರುವ ಫರೀದಾ ನಿರಂತರವಾಗಿ ಅಮಾಯಕ ಜನರಿಗೆ ಮೋಸ ಮಾಡುತ್ತಿದ್ದಾಳೆ.