Tag: ಬ್ಲ್ಯಾಕ್ ಮೇಲ್

  • 80,000 ನಗ್ನ ಫೋಟೋಸ್‌, ಸೆಕ್ಸ್‌ ಮಾಡಿ ಬೌದ್ಧ ಬಿಕ್ಕುಗಳ ಟ್ರ್ಯಾಪ್‌ – 100 ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅರೆಸ್ಟ್‌

    80,000 ನಗ್ನ ಫೋಟೋಸ್‌, ಸೆಕ್ಸ್‌ ಮಾಡಿ ಬೌದ್ಧ ಬಿಕ್ಕುಗಳ ಟ್ರ್ಯಾಪ್‌ – 100 ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅರೆಸ್ಟ್‌

    – ಹಿರಿಯ ಸನ್ಯಾಸಿಯಿಂದ ಮಗು ಹುಟ್ಟಿದೆ ಅಂತ ಹೇಳಿದ ಮಹಿಳೆ

    ಬ್ಯಾಂಕಾಕ್: ಲೈಂಗಿಕ ಸಂಪರ್ಕ ಸಾಧಿಸುವ ಮೂಲಕ ಬೌದ್ಧ ಬುಕ್ಕುಗಳಿಗೆ (Buddhist Monks)  ಹನಿಟ್ರ್ಯಾಪ್ ಮಾಡಿ, ಅವರಿಂದ ಮಹಿಳೆಯೊಬ್ಬಳು ದೇಗುಲಗಳಿಗೆ ಸೇರಿದ ಸುಮಾರು 100 ಕೋಟಿ ರೂ. ಹಣ ಪೀಕಿರುವ ಘಟನೆ ಉತ್ತರ ಬ್ಯಾಂಕಾಕ್‌ನಲ್ಲಿ (North Bangkok) ನಡೆದಿದೆ.

    ಈ ಹಿನ್ನೆಲೆ ವಿಲಾವನ್ ಎಮ್ಹಾವತ್ (30) ಎಂಬಾಕೆಯನ್ನು ಬಂಧಿಸಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಬೌದ್ಧ ಸನ್ಯಾಸಿಗಳು ತಮ್ಮ ಬ್ರಹ್ಮಚರ್ಯ ಪ್ರತಿಜ್ಞೆ ಮುರಿದಿರೋದು ಗಮನ ಸೆಳೆದಿದೆ. ಇದು ಬೆಳಕಿಗೆ ಬಂದ ನಂತರ ಹಗರಣದಲ್ಲಿ ಸಿಲುಕಿದ್ದ ಕನಿಷ್ಠ 9 ಹಿರಿಯ ಸನ್ಯಾಸಿಗಳನ್ನ ಸನ್ಯಾಸಿತ್ವದಿಂದ ಹೊರಹಾಕಲಾಗಿದೆ ಎಂದು ರಾಯಲ್ ಥಾಯ್ ಪೊಲೀಸ್ (Thailand Police) ಕೇಂದ್ರ ತನಿಖಾ ಬ್ಯೂರೋ ತಿಳಿಸಿದೆ.

    ʻಹನಿʼ ಲೇಡಿ ಯಾರು?
    30ರ ಹರೆಯದ ವಿಲಾವನ್ ಎಮ್ಸಾವತ್‌ (Wilawan Emsawat) ಎಂಬಾಕೆಯನ್ನ ಉತ್ತರ ಬ್ಯಾಂಕಾಕ್‌ನಲ್ಲಿರುವ ನೋಂಥಬುರಿಯಲ್ಲಿ ಬಂಧಿಸಲಾಗಿದೆ. ʻಮಿಸ್ಡ್‌ ಗಾಲ್ಫ್‌ʼ ಫೇಮಸ್‌ ಆಗಿದ್ದ ವಿಲಾವತ್‌ 9 ಸನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಆಕೆಯ ಫೋನ್‌ ಪರಿಶೀಲನೆ ನಡೆಸಿದ ಬಳಿಕ ಬೌದ್ಧ ಬಿಕ್ಕುಗಳೊಂದಿಗೆ ಸಂಪರ್ಕ ಹೊಂದಿದ್ದ ವಿಡಿಯೋಗಳು ಲಭ್ಯವಾಗಿದೆ. ಅವರಿಂದ ಬ್ಲ್ಯಾಕ್‌ ಮೇಲ್‌ ಮಾಡಿ ಪಡೆದ ಹಣವನ್ನ ಗ್ಯಾಮ್ಲಿಂಗ್‌ಗೆ ಬಳಸಿದ್ದಾಳೆ ಎಂಬುದೂ ತಿಳಿದುಬಂದಿದೆ.

    ಲೈಂಗಿಕ ಸಂಪರ್ಕ ಸಾಧಿಸಿ ಬ್ಲ್ಯಾಕ್‌ಮೇಲ್
    ಮೊದಲು ಹಿರಿಯ ಬೌದ್ಧಬಿಕ್ಕುಗಳನ್ನು ತನ್ನ ಬಲೆಗೆ ಬೀಳಿಸಿಕೊಳ್ತಿದ್ದ ವಿಲಾವನ್‌ ಲೈಂಗಿಕ ಸಂಪರ್ಕ ಸಾಧಿಸುತ್ತಿದ್ದಳು. ನಂತರ ವಿಷಯ ಬಹಿರಂಗಗೊಳಿಸುವುದಾಗಿ ಬ್ಲ್ಯಾಕ್‌ಮೇಲ್ (Blackmail) ಮಾಡಿ ಹಣಕ್ಕೆ ಬೇಡಿಕೆಯಿತ್ತಿದ್ದಳು. ಬೆದರಿಕೆಗೆ ಅಂಜಿ ಬಿಕ್ಕುಗಳು ದೇಗುಲಗಳ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣವನ್ನು ಈಕೆಯ ಖಾತೆಗೆ ವರ್ಗಾಯಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    80,000 ನಗ್ನ ಫೋಟೋ, 102 ಕೋಟಿ ಸುಲಿಗೆ
    ಮೂಲಗಳ ಪ್ರಕಾರ, ವಿಲಾವನ್‌ ಕಳೆದ ಮೂರು ವರ್ಷಗಳಲ್ಲಿ ಸುಮಾರು 385 ಮಿಲಿಯನ್‌ ಬಹ್ತ್‌ ಅಂದ್ರೆ 102 ಕೋಟಿ ರೂ.ಗಳಷ್ಟು ಸುಲಿಗೆ ಮಾಡಿದ್ದಾಳೆ. ಈ ಹಣವನ್ನ ಆನ್‌ಲೈನ್‌ ಜೂಜಿನಲ್ಲಿ ಕಳೆದುಕೊಂಡಿದ್ದಾಳೆ ಎಂಬ ಮಾಹಿತಿಯೂ ಸಿಕ್ಕಿದೆ. ಜೊತೆಗೆ ಆಕೆಯ ಫೋನ್‌ನಲ್ಲಿ ಸನ್ಯಾಸಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ 80,000ಕ್ಕೂ ಅಧಿಕ ಫೋಟೋಗಳು ಮತ್ತು ವಿಡಿಯೋಗಳನ್ನ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಗು ಕೊಟ್ಟ ಸನ್ಯಾಸಿ
    ಮತ್ತೊಂದು ವರದಿಯ ಪ್ರಕಾರ, ವಿಲಾವನ್ ಎಮ್ಸಾವತ್ ಲೈಂಗಿಕ ಕ್ರಿಯೆ ನಡೆಸಿದ ಸನ್ಯಾಸಿಗಳಲ್ಲಿ ಒಬ್ಬರಿಂದ ತನಗೆ ಮಗು ಜನಿಸಿದೆ ಎಂಬುದಾಗಿಯೂ ಹೇಳಿಕೊಂಡಿದ್ದಾಳೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಕಳೆದ ಜೂನ್‌ ತಿಂಗಳ ಮಧ್ಯದಲ್ಲಿ ಹಿರಿಯ ಸನ್ಯಾಸಿಯೊಬ್ಬರು ಮಹಿಳೆಯಿಂದ ಬ್ಲ್ಯಾಕ್‌ ಮೇಲ್‌ಗೆ ಒಳಗಾಗಿ ಇದ್ದಕ್ಕಿದ್ದಂತೆ ಸನ್ಯಾಸತ್ವ ತೊರೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ನಾಪತ್ತೆಯಾಗಿದ್ದರು. ಈ ಬೆಳವಣಿಗೆ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಥೈಲ್ಯಾಂಡ್‌ನಲ್ಲಿ ಶೇ.90ಕ್ಕಿಂತ ಹೆಚ್ಚು ಬೌದ್ಧ ಸಮುದಾಯದ ಜನರಿದ್ದಾರೆ. ಸುಮಾರು 2,00,000 ಸನ್ಯಾಸಿಗಳಿದ್ದು, 85 ಸಾವಿರ ಬೌದ್ಧ ಬಿಕ್ಕುಗಳ ಶಿಷ್ಯರಿದ್ದಾರೆ. ಸದ್ಯ ಸನ್ಯಾಸಿಗಳನ್ನೇ ಗುರಿಯಾಗಿಸಿದ್ದ ಈ ಪ್ರಕರಣ ಬೌದ್ಧ ಸಮುದಾಯದವನ್ನ ಬೆಚ್ಚಿ ಬೀಳಿಸಿದೆ.

  • ಮಂಡ್ಯದಲ್ಲಿ ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ – ವಿಕೃತ ಕಾಮಿ ಅಂದರ್‌!

    ಮಂಡ್ಯದಲ್ಲಿ ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ – ವಿಕೃತ ಕಾಮಿ ಅಂದರ್‌!

    ಮಂಡ್ಯ: ತನ್ನ ಬಳಿ ಕ್ರೀಡೆ ಹಾಗೂ ಚಿತ್ರಕಲೆ (Sports, Painting) ಕಲಿಯಲು ಬರುತ್ತಿದ್ದ ಪ್ರೌಢ ಶಾಲೆಯೊಂದರ ವಿದ್ಯಾರ್ಥಿನಿಯರ ಬೆತ್ತಲೆ ಚಿತ್ರ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವಿಕೃತ ಕಾಮುಕನೊಬ್ಬನನ್ನು ಪೊಲೀಸರು (Mandya Police) ಬಂಧಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಅಮೃತಹಳ್ಳಿಯ ಯೋಗಿ ಬಂಧಿತ ಆರೋಪಿಯಾಗಿದ್ದಾನೆ. ಅಲ್ಲದೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೂ ಎಸಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಶಾಲೆಯಿಂದ ಹೊರಗೆ ಉಳಿದಿದ್ದ ನನ್ನನ್ನು ರಾಜಪ್ಪ ಮೇಸ್ಟ್ರು ಶಾಲೆಗೆ ಸೇರಿಸದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ

    ಈ ಸಂಬಂಧ ನಾಲ್ವರು ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ (Child Rights Protection Unit) ಕಾನೂನು ಪರಿವೀಕ್ಷಣಾಧಿಕಾರಿ ಎಸ್‌.ಎಂ. ಶೈಲಜಾ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು 15 ರಿಂದ 17 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹತ್ರಾಸ್ ಸತ್ಸಂಗದಿಂದ ನಾಸಿಕ್‌ನ ಕುಂಭಮೇಳದವರೆಗೆ; ಭಾರತದಲ್ಲಿ ನಡೆದ ಕಾಲ್ತುಳಿತ ದುರಂತಗಳಿವು

    ಆಸಾಮಿ ತಗಲಾಕ್ಕೊಂಡಿದ್ದು ಹೇಗೆ?
    ಆರೋಪಿ ಯೋಗಿ ವಿದ್ಯಾರ್ಥಿನಿಯರು ಸಂತ್ರಸ್ತ ವಿದ್ಯಾರ್ಥಿನಿಯರು ಓದುತ್ತಿದ್ದ ಪ್ರೌಢಶಾಲೆಯಲ್ಲೇ ಹಳೆಯ ವಿದ್ಯಾರ್ಥಿಯಾಗಿದ್ದ. ಶಾಲೆ ಸಮೀಪದಲ್ಲೇ ಸ್ವಂತ ತರಬೇತಿ ಕೇಂದ್ರ ನಡೆಸುತ್ತಿದ್ದ. ಕೆಲ ವಿದ್ಯಾರ್ಥಿನಿಯರಿಗೆ ಕ್ರೀಡೆ, ಚಿತ್ರಕಲೆಯಲ್ಲಿ ಆಸಕ್ತಿ, ಇದ್ದ ಕಾರಣ, ತರಬೇತಿಗೆ ಸೇರಿಕೊಂಡಿದ್ದರು. ತನ್ನ ಬಳಿ ಬರುವ ವಿದ್ಯಾರ್ಥಿನಿಯರಿಗೆ ಮೊದಲು ಅಣ್ಣನಂತೆ ನಾಟಕವಾಡಿ ನಂಬಿಸುತ್ತಿದ್ದ.

    ತರಬೇತಿ ಕೇಂದ್ರದ ಪಿಟಿ ರೂಮಿನಲ್ಲೇ ಇರುತ್ತಿದ್ದ ಈತ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ತನ್ನ ಮೊಬೈಲ್‌ನಿಂದ ಬೆತ್ತಲೆ, ಅರೆಬೆತ್ತಲೆ ಫೋಟೋಗಳನ್ನು ತೆಗೆದು, ಪೋಷಕರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದ. ತನ್ನೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ತರಬೇತಿ ನೀಡುವ ವೇಳೆ ಕೆಟ್ಟದ್ದಾಗಿ ವರ್ತಿಸುತ್ತಿದ್ದ. ಒಂದೊಮ್ಮೆ ಅದೇ ಗ್ರಾಮದ ವಿದ್ಯಾರ್ಥಿನಿಯೋರ್ವಳಿಗೆ ಐಸ್‌ಕ್ರೀಮ್‌ ಕೊಡಿಸಿ, ಪ್ರಜ್ಞೆ ತಪ್ಪಿಸುವಂತೆ ಮಾಡಿದ್ದ. ಬಳಿಕ ಆಕೆಯ ಬೆತ್ತಲೆ ಫೋಟೋ ಕ್ಲಿಕ್ಕಿಸಿ, ನೀನು ನನ್ನೊಂದಿಗೆ ಮಲಗದಿದ್ದರೆ, ನಿಮ್ಮ ಪೋಷಕರಿಗೆ ಫೋಟೋ ತೋರಿಸುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಸಂಬಂಧ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಕ್ಕೆ ವಿದ್ಯಾರ್ಥಿನಿಯರು ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಬಳಿಕ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿಗಳು ಪೊಲೀಸ್‌ ಠಾಣೆಗೆ ನೀಡಿದ ದೂರಿನ ಮೇಲೆ ಯೋಗಿ ಎಂಬಾತನನ್ನ ಬಂಧಿಸಿ, ಎಫ್‌ಐಆರ್‌ ದಾಖಲಾಗಿದೆ. ಪೋಕ್ಸೋ ಕೇಸ್‌ ಜೊತೆಗೆ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಸೆಕ್ಷನ್‌ 354 ಎ, 354 ಡಿ, 509 ಅಡಿಯಲ್ಲಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ -ಆಪರೇಷನ್ ಬಿಪಿಎಲ್ ಕಾರ್ಡ್‌ಗೆ ಪ್ಲಾನ್!

  • ನಟಿ ಆತ್ಮಹತ್ಯೆ: ‘ಪುಷ್ಪ’ ಸಿನಿಮಾದ ನಟನ ಬಂಧನ

    ನಟಿ ಆತ್ಮಹತ್ಯೆ: ‘ಪುಷ್ಪ’ ಸಿನಿಮಾದ ನಟನ ಬಂಧನ

    ಪುಷ್ಪ (Pushpa) ಸಿನಿಮಾದಲ್ಲಿ ನಾಯಕ ಪುಷ್ಪರಾಜನ ಸ್ನೇಹಿತನಾಗಿ ನಟಿಸಿದ್ದ ಜಗದೀಶ್ ಪ್ರತಾಪ್ ಭಂಡಾರಿಯನ್ನು (Jagadish) ಪೊಲೀಸರು ಬಂಧಿಸಿದ್ದಾರೆ. ನಟಿಯೊಬ್ಬರ ಆತ್ಮಹತ್ಯೆಯ (Suicide)  ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

    ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಜಗದೀಶ್, ಅವರೊಂದಿಗೆ ಸಲುಗೆಯಿಂದ ಇದ್ದರಂತೆ. ಇದೇ ಸಲುಗೆಯನ್ನು ಬಳಸಿಕೊಂಡು ಆಕೆಯ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ತನ್ನೊಂದಿಗೆ ಸಹಕರಿಸದೇ ಇದ್ದರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಸಿದ್ದಾರೆ.

     

    ಜಗದೀಶ್ ಬೆದರಿಕೆಗೆ ಮನನೊಂದು ನಟಿ (Actress) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜಗದೀಶ್ ಅವರನ್ನು ಬಂಧಿಸಿರುವ ಪೊಲೀಸರು, ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಜಗದೀಶ್ ಅರೆಸ್ಟ್ ಆಗುವಾಗ ಪುಷ್ಪ 2 ಸಿನಿಮಾದ ಚಿತ್ರೀಕರಣದಲ್ಲಿ ಇದ್ದರು ಎಂದು ತಿಳಿದು ಬಂದಿದೆ.

  • ಬ್ಲ್ಯಾಕ್ ಮೇಲ್ ಮಾಡಿದ ಯುವ ನಟಿಯ ಬಂಧನ

    ಬ್ಲ್ಯಾಕ್ ಮೇಲ್ ಮಾಡಿದ ಯುವ ನಟಿಯ ಬಂಧನ

    ಲ್ಲದ ಕಾರಣಗಳಿಂದಾಗಿ ಇತ್ತೀಚೆಗೆ ನಟಿಯರು ಸುದ್ದಿ ಆಗುತ್ತಿದ್ದಾರೆ. ಜೊತೆಗೆ ಜೈಲು ಸೇರುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಒರಿಯಾ ನಟಿ ಮೌಶುಮಿ ನಾಯಕ್ (Moushumi Naik). ಲೇಖಕಿಯೊಬ್ಬರಿಗೆ ಬ್ಲ್ಯಾಕ್ ಮೇಲ್ (Black mail) ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತಂದಿದ್ದನ್ನು ಸ್ವತಃ ನಟಿ ಒಪ್ಪಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

    ಒರಿಯಾ ಸಿನಿಮಾ ರಂಗದಲ್ಲಿ ಅತ್ಯಂತ ಜನಪ್ರಿಯ ನಟಿ ಮೌಶುಮಿ ನಾಯಕ್, ದುಡ್ಡಿನ ವಿಚಾರದಲ್ಲಿ ಲೇಖಕಿ ಬನಸ್ಮಿತಾ (Banasmita) ಅವರ ಮಾನಹಾನಿ ಮಾಡಿದ್ದರಂತೆ. ಜೊತೆಗೆ ಲೇಖಕಿ ಪತಿಯ ವಿರುದ್ಧ ಚಂದಕಾ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ಕೂಡ ನೀಡಿದ್ದರಂತೆ. ಆನಂತರ ಲೇಖಕಿ ಹಾಗೂ ನಟಿ ರಾಜಿ ಮಾಡಿಕೊಂಡಿದ್ದಾರೆ. ಇದಾದ ನಂತರವೂ ನಿರಂತರವಾಗಿ ನಟಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಲೇಖಕಿ ದೂರು ನೀಡಿದ್ದರು.

    ಲೇಖಕಿ ನೀಡಿದ ದೂರಿನ ಆಧಾರದಲ್ಲಿ ಭುವನೇಶ್ವರದ ಇನ್ಫೋಸಿಟಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಸೆಕ್ಸನ್ 385, 294, 506 ಹಾಗೂ 507ರ ಅಡಿಯಲ್ಲಿ ನಟಿಯ ಬಂಧಿಸಲಾಗಿದೆ ಎಂದು ಡಿಸಿಪಿ ಕಚೇರಿಯು ತಿಳಿಸಿದೆ.

  • ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ರು – ಕರಂದ್ಲಾಜೆ

    ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ರು – ಕರಂದ್ಲಾಜೆ

    – ಸಿಎಂ ಆಡಿಯೋ ಬಾಂಬ್ ಆಗೋದಕ್ಕೆ ಸಾಧ್ಯವಿಲ್ಲ
    – ಎಚ್‌ಡಿಕೆ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ

    ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಐದು ವರ್ಷ ಸಿಎಂ ಅಗಿದ್ದವರು. ಸಿದ್ದರಾಮಯ್ಯ ಒಬ್ಬ ಡರ್ಟಿ ಪಾಲಿಟಿಷಿಯನ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದಲ್ಲಿ ಸಿಎಂ ಆಡಿಯೋ ಲೀಕ್ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿಎಂ ಆಡಿಯೋ ಬಾಂಬ್ ಆಗೋದಕ್ಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ನವರು ಡರ್ಟಿ ಗೇಮ್ ಮಾಡುತ್ತಲೇ ಇದ್ದಾರೆ. ಅವರು ನಿರಂತರ ಬ್ಲ್ಯಾಕ್ ಮೇಲ್ ಮಾಡಿಕೊಂಡು ರಾಜಕಾರಣ ಮಾಡಿದವರು. ಜೆಡಿಎಸ್ ಬಿಟ್ಟ ನಂತರ ಕಾಂಗ್ರೆಸನ್ನು ಬ್ಲ್ಯಾಕ್ ಮೇಲ್ ಮಾಡುತ್ತಲೇ ಇದ್ದಾರೆ. ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಐದು ವರ್ಷ ಸಿಎಂ ಆಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿದ್ದಾರೆ. ಸಿದ್ದರಾಮಯ್ಯನಿಂದ ಯಾರೂ ಕಲಿಯುವ ಅಗತ್ಯವಿಲ್ಲ. ಸಿದ್ದರಾಮಯ್ಯನವರ ಪಾಠ ಕೆಟ್ಟ ಪಾಠ, ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ಆಗುತ್ತದೆ ಎಂದರು. ಇದೇ ವೇಳೆ ಕಾಂಗ್ರೆಸ್ ನಾಯಕ ವಿಜಯ ಶಂಕರ್ ಬಿಜೆಪಿಗೆ ಸೇರುವ ವಿಚಾರದ ಬಗ್ಗೆ ಮಾತನಾಡಿ, ವಿಜಯ ಶಂಕರ್ ಅವರು ಸಿದ್ದರಾಮಯ್ಯನವರ ಜನಾಂಗದಲ್ಲೇ ಸಜ್ಜನ ವ್ಯಕ್ತಿ. ಸಿದ್ದರಾಮಯ್ಯನವರ ಸ್ವಂತ ನೆಲದಲ್ಲಿ ಕಾಂಗ್ರೆಸ್ ಬಿಡುತ್ತಿದ್ದಾರೆ. ನಮಗೆ ಈ ವಿಚಾರ ಖುಷಿ ಮತ್ತು ಸಂತೋಷ ತಂದಿದೆ ಎಂದು ತಿಳಿಸಿದರು.

    ಅನರ್ಹರು ಬಿಜೆಪಿಗೆ ಬರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಅನರ್ಹ ಶಾಸಕರು ಅವರಿಗೆ ಬೇಕಾದ ಪಕ್ಷಕ್ಕೆ ಸೇರಬಹುದು. ಅನರ್ಹರು ಯಾವುದೇ ಬಂಧನದಲ್ಲಿ ಇಲ್ಲ. ಅವರು ಅವರ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಂಬರ್ ಗೇಮ್ ನಲ್ಲಿ ನಮ್ಮ ಸರ್ಕಾರ ರಚನೆಯಾಗಿದೆ. ಅನರ್ಹರ ಕಾರಣಕ್ಕಾಗಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಈ ಅಂಶವನ್ನು ಯಡಿಯೂರಪ್ಪ ಮಾತನಾಡಿದ್ದಾರೆ. ಇದರಲ್ಲಿ ತಪ್ಪು, ಅನ್ಯಾಯದ ಪ್ರಶ್ನೆ ಬರಲ್ಲ ಎಂದು ಬಿಎಸ್‌ವೈ ಆಡಿಯೋ ವಿಚಾರವನ್ನು ಸಮರ್ಥಿಸಿಕೊಂಡರು.

    17 ಜನ ಅನರ್ಹ ಶಾಸಕರು ಇಷ್ಟ ಪಡುವ ಪಕ್ಷದಿಂದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಅನರ್ಹರನ್ನು ಬಿಜೆಪಿಗೆ ಸೇರಿಸಲು ಪ್ರಯತ್ನಪಡುತ್ತಿದ್ದೇವೆ. ಅವರು ಖಂಡಿತಾ ಬಿಜೆಪಿಗೆ ಬರಬಹುದು, ಸ್ಪರ್ಧಿಸಬಹುದು ಎಂದು ಹೇಳಿದರು. ಇದೇ ವೇಳೆ ಮಾಜಿ ಸಿಎಂ ಹೆಚ್‌ಡಿಕೆ ಮತ್ತು ಮಾಜಿ ಪಿಎಂ ಹೆಚ್‌ಡಿಡಿ ವಿಚಾರದಲ್ಲಿ ಸಾಫ್ಟ್ ಆಗಿ ಮಾತನಾಡಿದ ಅವರು, ದೇವೇಗೌಡ ಮತ್ತು ಕುಮಾರಸ್ವಾಮಿ ಬಗ್ಗೆ ಏನೂ ಹೇಳಲ್ಲ. ಕಳೆದ ಒಂದು ವರ್ಷದ ಕಾಂಗ್ರೆಸ್ ಜೆಡಿಎಸ್‌ನ್ನು ಹೇಗೆ ನಡೆಸಿಕೊಂಡಿದ್ದಾರೆ ಗೊತ್ತಿದೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ. ಜೆಡಿಎಸ್ ಹಲವು ನಾಯಕರೇ ಇದನ್ನು ಹೇಳಿದ್ದಾರೆ. ಅವರಿಬ್ಬರ ಬಗ್ಗೆ ನಾನು ಮಾತನಾಡಲ್ಲ. ಚುನಾವಣೆ ಆದ ಮೇಲೆ ಕಮೆಂಟ್ ಮಾಡುತ್ತೇನೆ ಎಂದರು.

    ಇಡಿಯಿಂದ ಡಿಕೆಶಿ ಬಂಧನ ವಿಚಾರ, ಇಡಿ ಅಧಿಕಾರಿಗಳು ಸಾರ್ವಜನಿಕವಾಗಿ ಹೇಳಿಕೆ ಕೊಡಲ್ಲ. ಸ್ವಂತ ಲಾಭಕ್ಕಾಗಿ ಇಡಿಯನ್ನು ಬಳಸಬೇಡಿ. ಇಡಿಗೆ ಯಾವುದೇ ಬಾಸ್ ಇಲ್ಲ. ಇಡಿ ಸ್ವಯಂಸೇವಾ ಸಂಸ್ಥೆ ಮತ್ತು ಸಂವಿಧಾನ ಪ್ರಕಾರ ರಚಿತವಾದ ಸಂಸ್ಥೆ. ಆರು ತಿಂಗಳು, ಒಂದು ವರ್ಷ ಫಾಲೋ ಮಾಡಿ ಬಂಧಿಸಿರುತ್ತಾರೆ. ಇಡಿಗೆ ಯಾವ ಬಾಸಿನ ಅಗತ್ಯ ಇರೋದಿಲ್ಲ ಎಂದು ಡಿಕೆಶಿಗೆ ಟಾಂಗ್ ನೀಡಿದರು.

  • ‘ಬ್ಲ್ಯಾಕ್ ಮೇಲ್’ ಮಾಡ್ತಿದ್ದಾಳೆ ಅಂದ ಕಾಲತ್ತಿಲ್ ಲೇಡಿ ಸೂಪರ್ ಸ್ಟಾರ್..!

    ‘ಬ್ಲ್ಯಾಕ್ ಮೇಲ್’ ಮಾಡ್ತಿದ್ದಾಳೆ ಅಂದ ಕಾಲತ್ತಿಲ್ ಲೇಡಿ ಸೂಪರ್ ಸ್ಟಾರ್..!

    ಬೆಂಗಳೂರು: ಯಾಯಿರೇ..ಯಾಯಿರೇ ಅಂತಾ ತನ್ನ ಬಳ್ಳಿಯಂತ ಕಾಯವನ್ನು ಬಳುಕಿಸಿ ಕಣ್ಣು ಮಿಟುಕಿಸಿದ್ದ ರಂಗೀಲಾ ಹುಡುಗಿ ಎಲ್ಲಿ ಮರೆಯಾಗಿದ್ಲು? 90ರ ದಶಕದಲ್ಲಿ ಸಿನಿ ಜಗತ್ತನ್ನ ಅನಭಿಷಿಕ್ತ ರಾಣಿಯಂತೆ ಆಳಿದ್ದ ಅದೊಬ್ಬ ತಾರೆ ಎಲ್ಲಿದ್ದಾಳೆ ಅನ್ನೋ ಪ್ರಶ್ನೆ ಪದೇ ಪದೇ ಬರ್ತಾನೇ ಇತ್ತು. ಅಂದ ಹಾಗೆ, ಆಕೆ ಮತ್ಯಾರೂ ಅಲ್ಲ, ಮುಂಬೈ ಬೆಡಗಿ ಊರ್ಮಿಳಾ ಮಾತೋಂಡ್ಕರ್.

    2016ರಲ್ಲಿ ತನಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ರೂಪದರ್ಶಿ, ಉದ್ಯಮಿ ಮೊಹ್ಸಿನ್ ಅಖ್ತರ್ ನನ್ನ ಮದ್ವೆಯಾಗಿ ಸುದ್ದಿಯಾಗಿದ್ದ ಊರ್ಮಿಳಾ ಅನ್ನೋ ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಪತ್ತೇನೇ ಇರಲಿಲ್ಲ. ಆದ್ರೆ, ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಈಗ ಸಿಕ್ಕಿದೆ ಸೀರುಂಡೆ ಥರದ ಮ್ಯಾಟ್ರು.

    ರಾಮ್ ಗೋಪಾಲ್ ವರ್ಮಾರ ಗರಡಿಗೆ ಸಿಕ್ಕಿದ್ದ ಊರ್ಮಿಳಾ ಮಾತೋಂಡ್ಕರ್ ರಂಗೀಲಾ, ಜುದಾಯಿ, ಜಂಗಲ್, ಮಸ್ತ್, ಸತ್ಯದಂತಹಾ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಫ್ಯಾನ್ಸ್ ಗೆ ರಸದೌತಣ ಉಣಿಸಿದ್ಲು. ಬಟ್ಟಲು ಕಂಗಳ ಚೆಲುವೆಯ ಬೋಲ್ಡ್ ನೆಸ್ ಗೆ ಜನ ಕನಸಲ್ಲೂ ಕನವರಿಸೋ ಹಾಗಾಗಿತ್ತು. 90ರ ದಶಕದಲ್ಲಿ ಊರ್ಮಿಳಾ ತೆರೆ ಮೇಲೆ ಅಕ್ಷರಶಃ ಕಮಾಲ್ ಮಾಡಿಬಿಟ್ಟಿದ್ಲು. ರಾಮ್ ಗೋಪಾಲ್ ವರ್ಮಾ ಜೊತೆಗಿನ ಸಂಬಂಧದ ಜೊತೆಗೆ ಅನೇಕ ಸಹ ನಟರೊಂದಿಗಿನ ಲಿಂಕ್ ಅಪ್ ಕಥೆಗಳು ಬಹಳ ಕಲರ್ ಫುಲ್ಲಾಗಿ ಕೇಳಿ ಬಂದಿದ್ವು.

    2008ರಲ್ಲಿ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಊರ್ಮಿಳಾ ಆಮೇಲೆ ತೆರೆ ಮೇಲೆ ಬಂದಿದ್ದು 2014ರಲ್ಲಿ. ಆಗ ಮರಾಠಿ ಸಿನಿಮಾವೊಂದರಲ್ಲಿ ನಟಿಸಿದ್ದು ಬಿಟ್ರೆ ಅದಾದ್ ಮೇಲೆ ಊರ್ಮಿಳಾ ದುರ್ಬೀನು ಹಾಕಿ ಹುಡುಕಿದ್ರೂ ಕಾಣಿಸ್ತಾನೇ ಇರಲಿಲ್ಲ. ಆದ್ರೀಗ, ಸರಿ ಸುಮಾರು 10 ವರ್ಷಗಳ ನಂತ್ರ ಊರ್ಮಿಳಾ ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಬರ್ತಿದ್ದಾಳೆ. ಮೊದಲಿನಷ್ಟೇ ಬೋಲ್ಡ್ ಮತ್ತು ಬ್ಯೂಟಿಫುಲ್ಲಾಗಿ ಕಾಣಿಸ್ತಿರೋ ಊರ್ಮಿಳಾಳ ಲುಕ್ ಈಗ ರಿವೀಲ್ ಆಗಿದೆ.

    ಅಭಿನಯ್ ಡಿಯೋ ಆಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾದಲ್ಲಿ ಊರ್ಮಿಳಾ ಐಟಂ ಸಾಂಗ್ ಒಂದರಲ್ಲಿ ಧೂಳೆಬ್ಬಿಸಲಿದ್ದಾಳೆ. ನಟ ಇರ್ಫಾನ್ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಚಮ್ಮ ಚಮ್ಮ ಬೆಡಗಿ ಮೈ ಚಳಿ ಬಿಟ್ಟು ಮೈ ಕುಣಿಸಿದ್ದಾಳೆ. ಮೊಣಕಾಲಿಗೂ ಮುಟ್ಟದ ಡ್ರೆಸ್ ತೊಟ್ಟು, ನೀಳ ತೊಡೆಗಳನ್ನ ತೋರಿಸಿ ಚಮಕ್ ಕೊಡ್ತಿದ್ದ ಊರ್ಮಿಳಾ ಈ ಐಟಂ ಸಾಂಗಲ್ಲಿ ಸೀರೆ ಉಟ್ಟಿರೋದ್ರಿಂದ ಫ್ಯಾನ್ಸ್ ಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದೆಯಂತೆ.

    1998ರಲ್ಲಿ ರಿಲೀಸ್ ಆದ ಚೀನಾ ಗೇಟ್ ಸಿನಿಮಾದ ಚಮ್ಮಾ ಚಮ್ಮಾ, ಲಜ್ಜಾ ಸಿನಿಮಾದ ಆಯಿಯೇ..ಆಜಾಯಿಯೇಯಂತಹಾ ಐಟಂ ನಂಬರ್ ಗಳಲ್ಲಿ ಹುಚ್ಚೆಬ್ಬಿಸಿದ್ದ ಊರ್ಮಿಳಾಳ ಕಮ್ ಬ್ಯಾಕ್ ಹೇಗಿರುತ್ತೆ..? 44ರ ಹರೆಯದಲ್ಲೂ ಊರ್ಮಿಳಾ ತನ್ನ ದೇಹಸಿರಿಯನ್ನ ಯಾವ ರೀತಿ ಕಾಪಾಡಿಕೊಂಡಿದ್ದಾಳೆ..? ಈ ಬಿರು ಬೇಸಿಗೆಯಲ್ಲಿ ಬೊಗಸೆ ಕಣ್ಣಿನ ಊರ್ಮಿ ಪಡ್ಡೆಗಳೆದೆಯಲ್ಲಿ ಕಿಚ್ಚು ಹತ್ತಿಸೋದಕ್ಕೆ ಸಕ್ಸಸ್ ಆಗ್ತಾಳಾ..? ಗೊತ್ತಿಲ್ಲ. ಆದ್ರೆ, ಸಿನಿಮಾ ಬರೋ ಮೊದಲೇ ಊರ್ಮಿಳಾ ಡಾನ್ಸ್ ಸ್ಟೆಪ್ಸನ್ನ ನೋಡ್ತಾ ನೀವೂ ಕಣ್ ತಂಪು ಮಾಡ್ಕೊಳ್ಳಿ.

  • ಹನಿಟ್ರ್ಯಾಪ್ ಮಾಡಿ 4.85ಲಕ್ಷ ರೂ. ಪಡೆದಿದ್ದರೂ, ಮತ್ತೆ ಸಿಂಗಲ್ ಸೆಟ್ಲ್ ಮೆಂಟ್ ಗೆ ಮಹಿಳೆಯಿಂದ ಬ್ಲ್ಯಾಕ್ ಮೇಲ್!

    ಹನಿಟ್ರ್ಯಾಪ್ ಮಾಡಿ 4.85ಲಕ್ಷ ರೂ. ಪಡೆದಿದ್ದರೂ, ಮತ್ತೆ ಸಿಂಗಲ್ ಸೆಟ್ಲ್ ಮೆಂಟ್ ಗೆ ಮಹಿಳೆಯಿಂದ ಬ್ಲ್ಯಾಕ್ ಮೇಲ್!

    ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮೂಡಿಗೆರೆ ಮೂಲದ ಮಹಿಳೆಯಿಂದ ಚಿಕ್ಕಮಗಳೂರಿನ ಯುವಕನೊಬ್ಬ ಹನಿಟ್ರ್ಯಾಪ್‍ಗೆ ಒಳಗಾಗಿ 4.85 ಲಕ್ಷ ರೂ. ಸಾವಿರ ಕಳೆದುಕೊಂಡು ಆಕೆಯಿಂದ ಮತ್ತೆ ಬ್ಲ್ಯಾಕ್ ಮೇಲ್‍ಗೆ ಒಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ನಗರದ ಕಲ್ಯಾಣ ನಗರದ ನಿವಾಸಿ ಗೌರಿ ಶಂಕರ್ ಗೆಕಳೆದೊಂದು ವರ್ಷದ ಹಿಂದೆ ಫೇಸ್ ಬುಕ್‍ನಲ್ಲಿ ಮೈತ್ರಿಯ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ದೈಹಿಕ ಸಂಪರ್ಕ ಕೂಡ ನಡೆದಿತ್ತು.

    ಗೌರಿ ಶಂಕರ್ ನಿಂದ ಇದೂವರೆಗೆ ಸುಮಾರು 4 ಲಕ್ಷದ 85 ಸಾವಿರ ಹಣ ಪಡೆದಿರುವ ಮೈತ್ರಿ ಸಿಂಗಲ್ ಸೆಟ್ಲ್ ಮೆಂಟ್‍ಗಾಗಿ ಮತ್ತೆ ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಆಕೆಗೆ ಹಣ ಕೊಟ್ಟು ಸುಸ್ತಾಗಿರುವ ಗೌರಿಶಂಕರ್ ಮಾನಸಿಕ ನೆಮ್ಮದಿಗಾಗಿ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾರೆ.

    ಮೈತ್ರಿಯ ಮೇಲೆ ಇದೊಂದೆ ಕೇಸಲ್ಲ. ಬೆಂಗಳೂರಿನ ಪೀಣ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮೈತ್ರಿ ಪಕ್ಕದ ಮಳಿಗೆ ವೈದ್ಯ ಡಾ. ಬಿರಾದಾರ್ ಎಂಬುವರಿಗೂ ಇದೇ ರೀತಿ ಬ್ಲಾಕ್ ಮೇಲ್ ಮಾಡ್ತಿದ್ದಾಳೆ. ಅವರಿಂದಲೂ ಆಗಾಗ ಸುಮಾರು 9 ಲಕ್ಷ ಹಣ ಪಡೆದಿದ್ದಾಳೆ. ಕೊನೆಗೆ ಸಿಂಗಲ್ ಸೆಟ್ಲ್ ಮೆಂಟ್‍ಗೆ 15 ಲಕ್ಷ ಕೇಳಿದ್ದಾಳೆ. ಹೀಗೆ ಹಾವೇರಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರಿಗೆ ಇದೇ ರೀತಿ ಮೋಸ ಮಾಡಿರುವ ಎಲ್ಲಾ ದಾಖಲೆಗಳು ಗೌರಿಶಂಕರ್ ಬಳಿ ಇದೆ.

    ಈ ಪ್ರಕರಣ ಬೆಳಕಿಗೆ ಬಂದ ನಂತರ ಎಸ್ಟೇಟ್ ಮಾಲೀಕರು ಗೌರಿಶಂಕರ್ ಅವರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈಕೆಯ ಮೇಲೆ ಬೆಂಗಳೂರಿನ ಪೀಣ್ಯ ಠಾಣೆಯಲ್ಲಿ ಎರಡು ಪ್ರಕರಣ ಕೂಡ ದಾಖಲಾಗಿದೆ. ಮೈತ್ರಿ ಮೇಲೆ ಗಂಡನೇ ಒಂದು ದೂರು ದಾಖಲಿಸಿದ್ದಾರೆ. ಮಂಜುನಾಥ್ ಎಂಬುವರು ಹಣ ನೀಡದ ಕಾರಣ ಆತನ ಮೇಲೂ ರೇಪ್ ಕೇಸ್ ನೀಡಿದ್ದಾಳೆ ಎನ್ನಲಾಗಿದೆ.

    ಈಕೆಯಿಂದ ಸಂಸಾರ, ಉದ್ಯೋಗ ಮತ್ತು ಮಾನಸಿಕ ನೆಮ್ಮದಿ ಕಳೆದುಕೊಂಡಿರುವ ಗೌರಿಶಂಕರ್ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾನೆ.