Tag: ಬ್ಲ್ಯಾಕ್ ಇಡ್ಲಿ

  • ಐಸ್ ಕ್ಯಾಂಡಿ ಇಡ್ಲಿ ಆಯ್ತು ಈಗ ಬ್ಲ್ಯಾಕ್ ಇಡ್ಲಿ ಸರದಿ – ವೀಡಿಯೋ ವೈರಲ್

    ಐಸ್ ಕ್ಯಾಂಡಿ ಇಡ್ಲಿ ಆಯ್ತು ಈಗ ಬ್ಲ್ಯಾಕ್ ಇಡ್ಲಿ ಸರದಿ – ವೀಡಿಯೋ ವೈರಲ್

    ಮುಂಬೈ: ನಾಗ್ಪುರದ ರಸ್ತೆ ಬದಿಯ ಅಂಗಡಿಯಲ್ಲಿ ಬ್ಲ್ಯಾಕ್ ಇಡ್ಲಿ ಗ್ರಾಹಕರ ಗಮನ ಸೆಳೆಯುತ್ತಿದ್ದು, ಇದೀಗ ಬ್ಲ್ಯಾಕ್ ಇಡ್ಲಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಫುಡ್ ಪ್ರಿಯರನ್ನು ತಮ್ಮತ್ತ ಸೆಳೆಯಲು ಹೋಟೆಲ್‍ಗಳು ಹಲವಾರು ಐಡಿಯಾಗಳನ್ನು ಮಾಡುತ್ತಲೆ ಇರುತ್ತದೆ. ಇತ್ತೀಚೆಗಷ್ಟೇ ಐಸ್ ಕ್ಯಾಂಡಿ ಇಡ್ಲಿ, ಪಾವ್ ಇಡ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ಬ್ಲ್ಯಾಕ್ ಇಡ್ಲಿ ಸರದಿ. ಇದನ್ನೂ ಓದಿ:  ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    ಹೌದು, ಈ ವೀಡಿಯೋವನ್ನು ವಿವೇಕ್ ಮತ್ತು ಆಯೇಶಾ ಎಂಬವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಬೂದು-ಕಪ್ಪು ಬಣ್ಣದ ಇಡ್ಲಿ ಹಿಟ್ಟನ್ನು ಸವ್ಟ್ ನಿಂದ ಇಡ್ಲಿ ತಟ್ಟೆಗೆ ತುಂಬಿ ಬೇಯಿಸಿದರು. ನಂತರ ಬೇಯಿಸಿದ ಇಡ್ಲಿಯನ್ನು ತಟ್ಟೆಯೊಂದಕ್ಕೆ ಹಾಕಿ ಅದರ ಮೇಲೆ ತುಪ್ಪ ಹಾಗೂ ಮಿಲಗಾಯಿ ಪುಡಿಯನ್ನು ಉದುರಿಸಿ ನಂತರ ಅದಕ್ಕೆ ತೆಂಗಿನ ಕಾಯಿ ಚಟ್ನಿ ಹಾಕಿ ಬಡಿಸಿದ್ದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಐಸ್ ಕ್ಯಾಂಡಿ ಇಡ್ಲಿ ಬಳಿಕ ವೈರಲ್ ಆಗ್ತಿದೆ ಇಡ್ಲಿ ವಡಾಪಾವ್

    ನಾಗ್ಪುರದ ಬೀದಿಬದಿಯಲ್ಲಿರುವ ಆಲ್ ಅಬೌಟ್ ಇಡ್ಲಿ ಎಂಬ ಅಂಗಡಿಯಲ್ಲಿ ಈ ಬ್ಲ್ಯಾಕ್ ಇಡ್ಲಿ ದೊರೆಯುತ್ತದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳನ್ನು ಮಾಡಿದ್ದಾರೆ.