Tag: ಬ್ಲೈಂಡ್’

  • ಬ್ಲೈಂಡ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ : ಬೇಸರಿಸಿಕೊಂಡ ಸೋನಂ ಕಪೂರ್

    ಬ್ಲೈಂಡ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ : ಬೇಸರಿಸಿಕೊಂಡ ಸೋನಂ ಕಪೂರ್

    ಬಾಲಿವುಡ್ (Bollywood) ನಟಿ ಸೋನಂ ಕಪೂರ್ ತಮ್ಮ ಚಿತ್ರದ ನಿರ್ಮಾಪಕರ ಮೇಲೆ ಬೇಸರಿಸಿಕೊಂಡಿದ್ದಾರೆ. ತಾವು ಅತೀ ನಿರೀಕ್ಷೆ ಮಾಡುತ್ತಿದ್ದ ‘ಬ್ಲೈಂಡ್’ (Blind) ಸಿನಿಮಾವನ್ನು ನಿರ್ಮಾಪಕರು ಏಕಾಏಕಿ ಓಟಿಟಿಯಲ್ಲಿ (OTT)  ನೇರವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ಸಹಜವಾಗಿಯೇ ನಟಿಗೆ ಬೇಸರವಾಗಿದೆ. ಚಿತ್ರಮಂದಿರಗಳಲ್ಲಿ ನೋಡಬೇಕಾದ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಮದುವೆ ಮತ್ತು ಮಗುವಾದ ನಂತರ ಸೋನಂ ಕಪೂರ್ (Sonam Kapoor) ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಭರವಸೆ ಮೂಡಿಸಬಲ್ಲ ಚಿತ್ರಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ಚಿತ್ರಗಳು ಮೊದಲು ಥಿಯೇಟರ್ ನಲ್ಲಿ ಬರಲಿ, ಆನಂತರ ಓಟಿಟಿಯಲ್ಲಿ ಪ್ರಸಾರ ಕಾಣಲಿ ಎನ್ನುವುದು ಅವರ ಆಸೆ. ಆದರೆ, ಬ್ಲೈಂಡ್ ಸಿನಿಮಾದ ನಿರ್ಮಾಪಕರು ಆ ಆಸೆಗೆ ತಣ್ಣೀರು ಎರೆಚಿದ್ದಾರೆ ಎನ್ನುವುದು ಅವರ ನೋವು. ಇದನ್ನೂ ಓದಿ:Bigg Boss OTT 2: ದೊಡ್ಮನೆಯಿಂದ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಔಟ್

    ಮದುವೆ ಮತ್ತು ಮಗುವಾದ ನಂತರ ನಾಲ್ಕು ವರ್ಷಗಳಿಂದ ಸೋನಂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಾಲ್ಕು ವರ್ಷಗಳ ನಂತರ ಬರುತ್ತಿರುವ ಸಿನಿಮಾವಿದು. ದೊಡ್ಡ ಮಟ್ಟದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುತ್ತಾರೆ ಎಂದು ನಂಬಿಕೊಂಡಿದ್ದೆ. ಓಟಿಟಿಯಲ್ಲಿ ಬರುತ್ತಿರುವ ವಿಚಾರವನ್ನೂ ನಿರ್ಮಾಪಕರು ನನ್ನ ಬಳಿ ಹೇಳಲಿಲ್ಲ ಎಂದು ಸೋನಂ ಅವರ ಆಪ್ತರ ಬಳಿ ನೋವನ್ನು ಹಂಚಿಕೊಂಡಿದ್ದಾರೆ.

     

    ಹಾಗಂತ ಬ್ಲೈಂಡ್ ನೇರ ಸಿನಿಮಾ ಏನೂ ಅಲ್ಲ. 2011ರಲ್ಲಿ ಬಿಡುಗಡೆಯಾದ ಕೊರಿಯನ್ (Korean) ಭಾಷೆಯ ಬ್ಲೈಂಡ್ ಚಿತ್ರದ ರಿಮೇಕ್. ಹಾಗಾಗಿಯೇ ನಿರ್ಮಾಪಕರು ಇಂಥದ್ದೊಂದು ಆಲೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ನಡೆ ಸೋನಂಗೆ ಮತ್ತು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೆಗ್ನೆನ್ಸಿ ಸಮಯದಲ್ಲಿ ಶೂಟಿಂಗ್‌ಗೆ ಮರಳಿದ ಸೋನಮ್ ಕಪೂರ್

    ಪ್ರೆಗ್ನೆನ್ಸಿ ಸಮಯದಲ್ಲಿ ಶೂಟಿಂಗ್‌ಗೆ ಮರಳಿದ ಸೋನಮ್ ಕಪೂರ್

    ಬಾಲಿವುಡ್‌ನ ಹಾಟ್ ನಟಿ ಸೋನಮ್ ಕಪೂರ್ ಕೆಲ ದಿನಗಳ ಹಿಂದೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು. ಬಳಿಕ ಬೇಬಿಬಂಪ್ ಫೋಟೋಶೂಟ್ ಕೂಡ ಮಾಡಿಸಿದ್ದರು. ಈಗ ತುಂಬು ಗರ್ಭಿಣಿ ಸೋನಮ್ ಒಪ್ಪಿಕೊಂಡಿದ್ದ ಸಿನಿಮಾಗಳಿಗೆ ಹಾಜರ್ ಆಗಿದ್ದಾರೆ.

    ನಟಿ ಸೋನಮ್ ತಾಯತ್ತನದ ಖುಷಿಯನ್ನ ಅನುಭವಿಸುತ್ತಿದ್ದಾರೆ. ತುಂಬು ಗರ್ಭಿಣಿಯಾಗಿರುವ ಸೋನಮ್ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ನಟಿ ಸೋನಮ್ ಕಲರ್‌ಫುಲ್ ಬೇಬಿ ಬಂಪ್ ಫೋಟೋಶೂಟ್‌ನಿಂದ ಗಮನ ಸೆಳೆದಿದ್ರು. ಈಗ ವರ್ಕ್ ಕಮಿಟ್ಮೆಂಟ್ ಸೋನಮ್ ಈ ಹಿಂದೆಯೇ ಒಪ್ಪಿಕೊಂಡಿದ್ದ ಸಿನಿಮಾಗಳತ್ತ ಗಮನ ಕೊಡ್ತಿದ್ದಾರೆ.ಇದನ್ನೂ ಓದಿ: ಮನಸ್ಸಿಗೆ ಮುದನೀಡುವ ‘ಚೇಸ್’ ಗಾನಲಹರಿ ಹೊತ್ತ ಜುಕ್ ಬಾಕ್ಸ್ ರಿಲೀಸ್

    ನಟಿ ಸೋನಮ್ ತಾಯತ್ತನದ ಖುಷಿಯನ್ನ ಅನುಭವಿಸುತ್ತಿದ್ದಾರೆ. ತುಂಬು ಗರ್ಭಿಣಿಯಾಗಿರುವ ಸೋನಮ್ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ನಟಿ ಸೋನಮ್ ಕಲರ್‌ಫುಲ್ ಬೇಬಿ ಬಂಪ್ ಫೋಟೋಶೂಟ್‌ನಿಂದ ಗಮನ ಸೆಳೆದಿದ್ರು. ಈಗ ವರ್ಕ್ ಕಮಿಟ್ಮೆಂಟ್ ಸೋನಮ್ ಈ ಹಿಂದೆಯೇ ಒಪ್ಪಿಕೊಂಡಿದ್ದ ಸಿನಿಮಾಗಳತ್ತ ಗಮನ ಕೊಡ್ತಿದ್ದಾರೆ.

    ಶೋಮ್ ಮಕೀಜಾನ ನಿರ್ದೇಶನದ `ಬ್ಲೈಂಡ್’ ಚಿತ್ರದಲ್ಲಿ ಸೋನಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೊರಿಯನ್ ಆ್ಯಕ್ಷನ್ ಥ್ರಿಲರ್ ಕಥೆಯಾಗಿದೆ. ಕಾರು ಅಪಘಾತದಲ್ಲಿ ದೃಷ್ಟಿ ಕಳೆದುಕೊಳ್ಳುವ ಪವರ್‌ಫುಲ್ ಪಾತ್ರದಲ್ಲಿ ಸೋನಮ್ ಕಾಣಿಸಿಕೊಂಡಿದ್ದಾರೆ. ಪ್ರಗ್ನೆನ್ಸಿ ಸಮಯದಲ್ಲೂ ಸೋನಮ್ ವರ್ಕ್ ಡೆಡಿಕೇಷನ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.