Tag: ಬ್ಲೇಡ್

  • ಕುಡಿತ ಮತ್ತಿನಲ್ಲಿ ಬ್ಲೇಡ್‍ನಿಂದ ಕೈ ಕೊಯ್ದುಕೊಂಡು ಯುವಕ ಸಾವು

    ಕುಡಿತ ಮತ್ತಿನಲ್ಲಿ ಬ್ಲೇಡ್‍ನಿಂದ ಕೈ ಕೊಯ್ದುಕೊಂಡು ಯುವಕ ಸಾವು

    ಚಿಕ್ಕೋಡಿ (ಬೆಳಗಾವಿ): ಯುವಕನೊಬ್ಬ ಕುಡಿದ ಮತ್ತಿನಲ್ಲಿ ಬ್ಲೇಡ್‍ನಿಂದ ಕೈ ಕೊಯ್ದುಕೊಂಡ ಘಟನೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ಪರಶುರಾಮ ತೇಲಸಂಗ (32) ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ನಿವಾಸಿಯಾಗಿದ್ದ ಪರಶುರಾಮ ತೇಲಸಂಗ, ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಗ್ರಾಮದ ಲಕ್ಷ್ಮೀ ದೇವಸ್ಥಾನದ ಬಳಿ ಬ್ಲೇಡ್‍ನಿಂದ ಕೈ ಕೊಯ್ದುಕೊಂಡಿದ್ದ. ಇದನ್ನೂ ಓದಿ: ಅನಾರೋಗ್ಯದಿಂದ ಮೃತಪಟ್ಟರೂ ಬಾರದ ವಿದೇಶದಲ್ಲಿರೋ ಮಕ್ಕಳು – ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಪೊಲೀಸರು

    ಕೂಡಲೇ ಸ್ಥಳೀಯರು ಆತನನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ.

    ಈ ಘಟನೆ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವಕನ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆದ ವೈದ್ಯರು!

    ಯುವಕನ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆದ ವೈದ್ಯರು!

    ಜೈಪುರ: 26 ವರ್ಷದ ಯುವಕನೊಬ್ಬ ಬರೋಬ್ಬರಿ 56 ಬ್ಲೇಡ್‍ (blades) ಗಳನ್ನು ನುಂಗಿರುವ ಅಚ್ಚರಿ ಹಾಗೂ ಆಘಾತಕಾರಿ ಘಟನೆಯೊಂದು ರಾಜಸ್ಥಾನ (Rajasthan) ದಲ್ಲಿ ಬೆಳಕಿಗೆ ಬಂದಿದೆ.

    ಯುವಕನನ್ನು ಯಶಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ರಾಜಸ್ಥಾನದ ಸಂಚೋರ್ ಪಟ್ಟಣದ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ನಿರ್ವಹಿಸುತ್ತಿದ್ದ ಯಶಪಾಲ್ ಸಿಂಗ್, ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದನು. ಇತ್ತೀಚೆಗೆ ಯಶಪಾಲ್ ವಿಪರೀತವಾಗಿ ರಕ್ತವಾಂತಿ ಮಾಡುತ್ತಿದ್ದ ಪರಿಣಾಮ ಕೂಡಲೇ ಗೆಳೆಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆತನನ್ನು ವೈದ್ಯರು ಪರೀಕ್ಷೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಖಾಸಗಿ ಆಸ್ಪತ್ರೆಯ ವೈದ್ಯ ಡಾ.ನರಸಿ ರಾಮ್ ದೇವಸಿ ನಡೆಸಿದ ಸ್ಕ್ಯಾನಿಂಗ್ ರಿಪೋರ್ಟ್‍ನಲ್ಲಿ ಆತನ ಹೊಟ್ಟೆಯೊಳಗೆ ಲೋಹದ ಅಂಶ ಪತ್ತೆಯಾಗಿದೆ. ಸಮಸ್ಯೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು, ವೈದ್ಯರು ಸೋನೋಗ್ರಫಿ (Sonography) ಮತ್ತು ಎಂಡೋಸ್ಕೋಪಿ ಪರೀಕ್ಷೆ ನಡೆಸಿದ್ದಾರೆ. ವ್ಯಕ್ತಿಯ ಹೊಟ್ಟೆಯಲ್ಲಿ ಲೋಹದ ಬ್ಲೇಡ್‍ಗಳಿವೆ ಎಂದು ಪರೀಕ್ಷೆಗಳಲ್ಲಿ ಸ್ಪಷ್ಟವಾಗಿ ತಿಳಿದುಬಂದಿದೆ. ತಕ್ಷಣ ಆಪರೇಷನ್ ನಡೆಸಿ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಗರ್ಭದಲ್ಲಿರುವ ಮಗು ಹೃದಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ – ಏಮ್ಸ್ ವೈದ್ಯರ ಸಾಧನೆ

    ಈತ ಪೇಪರ್ ಕವರ್ ಗಳ ಸಮೇತ ಬ್ಲೇಡ್ ನುಂಗಿದ್ದು, ಪ್ರಾರಂಭದಲ್ಲಿ ಆತನಿಗೆ ಗೊತ್ತಾಗಲ್ಲಿಲ್ಲ. ಹೊಟ್ಟೆಯೊಳಗೆ ಪೇಪರ್ ಕರಗಿದಂತೆ, ಅದು ಹಾನಿಯನ್ನುಂಟುಮಾಡಲು ಪ್ರಾರಂಭಿಸಿದೆ. ನಂತರ ನೋವು, ವಾಂತಿ ಪ್ರಾರಂಭವಾಗಿದೆ. ಬ್ಲೇಡ್‍ಗಳನ್ನು ಇಬ್ಭಾಗ ಮಾಡಿ ತಿಂದಿದ್ದಾನೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.

  • ಕಾಂಗ್ರೆಸ್ ನಗರಸಭಾ ಸದಸ್ಯನ ಬರ್ತ್‌ಡೇಯಲ್ಲಿ ನಂಗನಾಚ್ – ಯುವಕನಿಗೆ ಚಾಕು ಇರಿತ

    ಕಾಂಗ್ರೆಸ್ ನಗರಸಭಾ ಸದಸ್ಯನ ಬರ್ತ್‌ಡೇಯಲ್ಲಿ ನಂಗನಾಚ್ – ಯುವಕನಿಗೆ ಚಾಕು ಇರಿತ

    ರಾಮನಗರ: ನಗರಸಭಾ ಕಾಂಗ್ರೆಸ್ (Congress) ಸದಸ್ಯರ ನಂಗನಾಚ್ ಕಾರ್ಯಕ್ರಮದ ವೇಳೆ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ರಾಮನಗರದಲ್ಲಿ  (Ramanagara) ತಡವಾಗಿ ಬೆಳಕಿಗೆ ಬಂದಿದೆ.

    ಪಟ್ಟಣದ ಯಾರಬ್ ನಗರದ ಕಲ್ಯಾಣ ಮಂಟಪದಲ್ಲಿ ನವೆಂಬರ್ 24ರ ರಾತ್ರಿ ಘಟನೆ ನಗರಸಭೆ ಕಾಂಗ್ರೆಸ್ ಸದಸ್ಯ ದೌಲತ್ ಷರೀಫ್ ಹುಟ್ಟುಹಬ್ಬದ ಅಂಗವಾಗಿ ನಂಗಾನಾಚ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಡ್ಯಾನ್ಸರ್‌ಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮೆಹಬೂಬ್ ನಗರದ ನಿವಾಸಿ ಮುಫಾ ಮೇಲೆ ಅದೇ ನಗರದ ನಿವಾಸಿ ರುಮಾನ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುತ್ತೆ.. ಧೈರ್ಯವಿದ್ರೆ ನಿಲ್ಲಿಸಿ – ದೀದಿಗೆ ಬಿಜೆಪಿ ಸವಾಲು

    ಗಾಯಾಳು ಮುಫಾಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ರುಮಾನ್‍ನ್ನು ರಾಮನಗರ ಟೌನ್ ಪೊಲೀಸರು ಬಂಧಿಸಿದ್ದಾರೆ. ನಗರಸಭೆ 19ನೇ ವಾರ್ಡ್ ಸದಸ್ಯ ದೌಲತ್ ಷರೀಫ್ ತಮ್ಮ ಬರ್ತ್‍ಡೇ ಆಚರಣೆಗೆ ಬೆಂಗಳೂರಿನಿಂದ ಡ್ಯಾನ್ಸರ್‌ಗಳನ್ನು ಕರೆಸಿ ಅವರು ಅರೆಬೆತ್ತಲೆಯಾಗಿ ಕುಣಿಯುವಾಗ ನೋಟುಗಳ ಸುರಿಮಳೆ ಗೈದು ಮೋಜುಮಸ್ತಿ ಮಾಡಿದ್ದು ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ಬ್ಲೇಡ್‍ನಿಂದ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು!

    ಬ್ಲೇಡ್‍ನಿಂದ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು!

    ದಾವಣಗೆರೆ: ಸಾವರ್ಕರ್ ಪೋಸ್ಟರ್ ಅನ್ನು ಕಿಡಿಗೇಡಿಗಳು ಬ್ಲೇಡ್‍ನಿಂದ ಹರಿದು ಹಾಕಿ ವಿಕೃತಿ ಮೆರೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಗರದಾದ್ಯಂತ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ ಸಾವರ್ಕರ್ ಹಾಗೂ ರೇಣುಕಾಚಾರ್ಯ ಫ್ಲೆಕ್ಸ್ ಗಳನ್ನು ಬೆಂಬಲಿಗರು ಹಾಕಿದ್ದರು. ಇದೀಗ ಈ ಫ್ಲೆಕ್ಸ್‌ ಗಳನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ.

    ಹೊನ್ನಾಳಿ ಪಟ್ಟಣ ಹಾಗೂ ಗೊಲ್ಲರಹಳ್ಳಿಯಿಂದ ಹೊನ್ನಾಳಿ ಮಾರ್ಗವಾಗಿ ಈ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಇದೀಗ ಈ ರೀತಿ ವಿಕೃತಿ ಮೆರೆದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ಹೊನ್ನಾಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ 91.50 ರೂ. ಇಳಿಕೆ

    Live Tv
    [brid partner=56869869 player=32851 video=960834 autoplay=true]

  • ‘ಪುಷ್ಪ’ ಮೂವೀ ಸ್ಟೈಲ್‍ನಲ್ಲಿ ಗಂಡನ ಕುತ್ತಿಗೆ ಕೊಯ್ದ ಪತ್ನಿ

    ‘ಪುಷ್ಪ’ ಮೂವೀ ಸ್ಟೈಲ್‍ನಲ್ಲಿ ಗಂಡನ ಕುತ್ತಿಗೆ ಕೊಯ್ದ ಪತ್ನಿ

    ತೆಲಂಗಾಣ: ‘ಪುಷ್ಪ’ ಸಿನಿಮಾದಲ್ಲಿ ಮಹಿಳೆ ತನ್ನ ಪತಿಯನ್ನು ಕುತ್ತಿಗೆ ಕೊಯ್ದಿರುವ ಪ್ರಸಂಗವಿತ್ತು. ಅದೇ ರೀತಿ ಇಲ್ಲೊಂದು ಮಹಿಳೆ ಪತಿಯ ಕುತ್ತಿಗೆಯನ್ನು ಬ್ಲೇಡ್‍ನಿಂದ ಕೊಯ್ದಿರುವ ಘಟನೆ ತೆಲಂಗಾಣದ ಹನಮಕೊಂಡ ಜಿಲ್ಲೆಯಲ್ಲಿ ನಡೆದಿದೆ.

    23 ವರ್ಷದ ಎಂ.ಅರ್ಚನಾ ಯಾವುದೇ ಕಾರಣವಿಲ್ಲದೆ ಬ್ಲೇಡ್‍ನಿಂದ ತನ್ನ ಪತಿಯ ಕತ್ತು ಸೀಳಿದ್ದಾಳೆ. ಕಲ್ಲು ಪುಡಿ ಮಾಡುವ ಘಟಕದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ರಾಜು(26) ಅವರನ್ನು ಅರ್ಚನಾ ವಿವಾಹವಾಗಿದ್ದರು. ಯಾವುದೇ ಕಾರಣವಿಲ್ಲದೇ ರಾಜು ರೂಮ್‍ನಲ್ಲಿ ಇರುವಾಗ ಬ್ಲೇಡ್‍ನಿಂದ ಕುತ್ತಿಗೆ ಕೊಯ್ದಿದ್ದಾಳೆ. ಆದರೆ ರಾಜುವಿಗೆ ಯಾವುದೇ ಪ್ರಾಣಪಾಯವಾಗಿಲ್ಲ. ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಮಾಡಿ ಮಹಿಳೆಯನ್ನು ಕೊಲೆಗೈದ ಪಾಪಿಗಳು 

    ನಡೆದಿದ್ದೇನು?
    ದಂಪತಿ ದಾಮೆರ ಮಂಡಲದ ಪಸರಗೊಂಡ ಗ್ರಾಮದಲ್ಲಿ ವಾಸವಿದ್ದರು. ರಾಜು ಕೆಲಸ ಮುಗಿಸಿಕೊಂಡು ಮನೆಗೆ ಬಂದು ರೂಮ್‍ನಲ್ಲಿ ಮಲಗಿಕೊಂಡಿದ್ದಾನೆ. ಈ ವೇಳೆ ಅರ್ಜನಾ ಬ್ಲೇಡ್‍ನಿಂದ ರಾಜು ಕುತ್ತಿಗೆ ಕೊಯ್ದಿದ್ದಾಳೆ. ರೂಮ್‍ನಿಂದ ಕಿರುಚಾಟ ಕೇಳಿಬಂದಿದ್ದು, ಕುಟುಂಬಸ್ಥರು ಮತ್ತು ಸ್ಥಳೀಯರು ಧಾವಿಸಿದ್ದಾರೆ. ಪರಿಣಾಮ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ರಾಜುನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ರಾಜು ಪ್ರಾಣಪಾಯದಿಂದ ಪರಾಗಿದ್ದು, ಕುತ್ತಿಗೆಗೆ ಆರು ಹೊಲಿಗೆ ಹಾಕಲಾಗಿದೆ.

    ತನಿಖೆಯಲ್ಲಿ ತಿಳಿದಿದ್ದೇನು?
    ಅರ್ಚನಾಳನ್ನು ಪೊಲೀಸರು ಗಂಟೆಗಟ್ಟಲೆ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆ, ನನ್ನ ಪತಿಯೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು ಅವನನ್ನು ಸಂಪೂರ್ಣವಾಗಿ ಒಪ್ಪಿಕೊಂಡೆ ಮದುವೆ ಮಾಡಿಕೊಂಡಿದ್ದೇನೆ. ಆದರೆ ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ತಿಳಿದಿಲ್ಲ ಎಂಬ ಹೇಳಿಕೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

    ಶ್ಯಾಂಪೇಟ್ ಸರ್ಕಲ್ ಪೊಲೀಸರಿಗೆ ಬಿ.ಶ್ರೀನಿವಾಸ್ ಅವರು ಮಹಿಳೆ ಹೇಳಿಕೆ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದು, ಅರ್ಚನಾಗೆ ರಾಜುವನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಅದಕ್ಕೆ ಆಕೆ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಶಂಕಿಸಿದ್ದಾರೆ.

    ಮದುವೆಯಾಗಿ 20 ದಿನದ ಬಳಿಕ ಅತ್ತೆ ಮನೆ ಸೇರಿದ್ಳು
    ಅರ್ಚನಾ ಮದುವೆಯಾದ 20 ದಿನಗಳ ನಂತರ ತನ್ನ ಅತ್ತೆಯ ಮನೆಗೆ ಬಂದಿದ್ದಳು. ಆರಂಭದಲ್ಲಿ ಅರ್ಚನಾಗೆ ರಾಜು ಇಷ್ಟವಿರಲಿಲ್ಲ, ಆದರೂ ಆಕೆ ರಾಜುನನ್ನು ಮದುವೆಯಾಗಿದ್ದಳು. ಆದರೆ ವಿಚಾರಣೆ ವೇಳೆ ಅರ್ಚನಾ ಮನಸೋಇಚ್ಛೆ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಈ ಸತ್ಯಾಸತ್ಯತೆ ತಿಳಿಯಲು ನಾವು ಎರಡೂ ಕುಟುಂಬಗಳ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    CRIME 2

    ಮಾನಸಿಕ ಅಸ್ವಸ್ಥನಂತೆ ನಟಿನೆ
    ರಾಜು ಅವರ ಸಹೋದರ ಎಂ.ಶ್ರೀಶೈಲಂ, ಅರ್ಚನಾ ಮಾನಸಿಕ ಅಸ್ವಸ್ಥ ವ್ಯಕ್ತಿಯಂತೆ ನಟಿಸುತ್ತ ಈ ಕೃತ್ಯ ಮಾಡಿದ್ದಾರೆ. ಆಕೆಗೆ ಮಾನಸಿಕವಾಗಿ ಯಾವುದೇ ತೊಂದರೆಯಿಲ್ಲ. ಕಳೆದ ಕೆಲವು ದಿನಗಳಿಂದ ಆಕೆ ನಮ್ಮೊಂದಿಗೆ ಚೆನ್ನಾಗಿಯೇ ಇದ್ದಳು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:  ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ 

    ವರದಕ್ಷಿಣೆ ಕಿರುಕುಳದ ಆರೋಪದ ಕುರಿತು ಅರ್ಚನಾ ಸಹೋದರ ಟಿ.ರಾಜು ಕುಮಾರ್ ಅವರನ್ನು ಪೊಲಿಸರು ಪ್ರಶ್ನಿಸಿದಾಗ, ಆ ರೀತಿಯ ಯಾವುದೇ ಸಮಸ್ಯೆ ಇರಲಿಲ್ಲ. ತನ್ನ ಗಂಡನ ಮೇಲೆ ಹಲ್ಲೆ ಮಾಡಲು ಕಾರಣವೇನು ಎಂಬುದರ ಬಗ್ಗೆ ಅವಳು ನಮಗೂ ಹೇಳುತ್ತಿಲ್ಲ. ಅವಳು ರಾಕುನನ್ನು ಮದುವೆಯಾಗಲು ಒಪ್ಪಿದ ಬಳಿಕವೇ ಮದುವೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

  • ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

    ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

    ಮುಂಬೈ: 24 ವರ್ಷದ ಯುವಕರೊಬ್ಬರು ತಾವೇ ನಿರ್ಮಿಸಿದ ಹೆಲಿಕಾಪ್ಟರ್ ಟ್ರಯಲ್ ರನ್ ನೋಡುವ ವೇಳೆ ಅದರ ಬ್ಲೇಡ್ ಗಂಟಲಿಗೆ ತಗುಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಮಹಾಗಾಂವ್ ತಾಲೂಕಿನ ಪುಲ್ಸವಾಂಗಿ ಗ್ರಾಮದ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ 8ನೇ ತರಗತಿಯಲ್ಲಿದ್ದಾಗಲೇ ಶಾಲೆ ತೊರೆದು ಮೆಕ್ಯಾನಿಕ್ ಆಗಿ ಸ್ಟಿಲ್ ಪೈಪ್‍ಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದರು. ಅವರೇ ಸಿಂಗಲ್ ಸೀಟ್ ಇರುವ ಹೆಲಿಕಾಪ್ಟರ್ ಮೂಲ ಮಾದರಿಯೊಂದನ್ನು ನಿರ್ಮಿಸಿದ್ದರು. ಆದರೆ ಹೆಲಿಕಾಪ್ಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪರೀಕ್ಷಿಸುತ್ತಿದ್ದ ವೇಳೆ ಬ್ಲೇಡ್ ತಗುಲಿ ಅವರ ಗಂಟಲು ಕಟ್ ಆಗಿದೆ. ಈ ಘಟನೆ ಆಗಸ್ಟ್ 10 ರಂದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ನಡೆದಿದ್ದು, ಗಾಯಗೊಂಡ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಇಸ್ಮಾಯಿಲ್ ಶೇಖ್ ಮೃತಪಟ್ಟಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ.

    ಈ ಕುರಿತಂತೆ ಪೊಲೀಸರು, ಮೃತ ವ್ಯಕ್ತಿ 2 ವರ್ಷಗಳ ಹಿಂದೆ ಈ ಹೆಲಿಕಾಪ್ಟರ್‌ನನ್ನು ನಿರ್ಮಿಸಿದ್ದರು. ಅಲ್ಲದೇ ಹೆಲಿಕಾಪ್ಟರ್ ಚಾಪರ್ ಸಿದ್ಧಪಡಿಸಲು ವೆಲ್ಡಿಂಗ್ ಸ್ಟೀಲ್ ಪೈಪ್ ಮತ್ತು ಮಾರುತಿ 800 ಎಂಜಿನ್ ಬಳಸಿದ್ದರು. ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಸಾರ್ವಜನಿಕವಾಗಿ ಹೆಲಿಕಾಪ್ಟರ್‍ನನ್ನು ಅನಾವರಣಗೊಳಿಸುವ ಯೋಜನೆ ಹೊಂದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

    ಈ ಬಗ್ಗೆ ಇಸ್ಮಾಯಿಲ್ ಅವರ ಸಹೋದರ ಮತ್ತು ಮೂವರು ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸದ್ಯ ಹೆಲಿಕಾಪ್ಟರ್‌ನನ್ನು ಪೊಲೀಸರು ವಶಪಡೆದುಕೊಂಡಿದ್ದಾರೆ. ಇದನ್ನೂ ಓದಿ:BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

  • ಕುಲ್ಫಿ ತಿನ್ನುವವರೇ ಎಚ್ಚರ ಎಚ್ಚರ – ಕುಲ್ಫಿಯಲ್ಲಿ ಇರುತ್ತೆ ಬ್ಲೇಡ್!

    ಕುಲ್ಫಿ ತಿನ್ನುವವರೇ ಎಚ್ಚರ ಎಚ್ಚರ – ಕುಲ್ಫಿಯಲ್ಲಿ ಇರುತ್ತೆ ಬ್ಲೇಡ್!

    – ಕೊಡಗಿನಲ್ಲಿ ಮಹಿಳೆಗೆ ಶಾಕ್

    ಮಡಿಕೇರಿ: ಬೇಸಿಗೆ ಶುರುವಾಯಿತು ಅಂದರೆ ಸಾಮಾನ್ಯವಾಗಿ ಮನೆಯವರು ಮಕ್ಕಳು ಸೇರಿದಂತೆ ಅನೇಕರು ಐಸ್ ಕ್ರೀಂ, ಐಸ್ ಕ್ಯಾಂಡಿ, ಕುಲ್ಫಿ ಮೊರೆ ಹೋಗುತ್ತಾರೆ. ಆದರೆ ಹೋಗುವ ಮೊದಲು ಈ ಸ್ಟೋರಿ ಓದಿ. ಯಾಕೆಂದರೆ ನೀವು ತಿನ್ನುವ ಕುಲ್ಫಿಯಲ್ಲಿ ಬ್ಲೇಡ್ ಇರುತ್ತೆ. ಇಂತದೊಂದು ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಮಡಿಕೇರಿ ತಾಲೂಕಿನ ಆವಂದೂರು ಗ್ರಾಮದಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿ ನೂರಾರು ಮಂದಿ ಜನ ಸೇರಿದ್ದರು. ವಾಹನವೊಂದರಲ್ಲಿ ಕುಲ್ಫಿ ಮಾರಾಟ ಮಾಡಲಾಗಿತ್ತು. ಅಲ್ಲಿ ಮಹಿಳೆಯೊಬ್ಬರು ತಮ್ಮ ಮಕ್ಕಳಿಗೂ ಸೇರಿದಂತೆ ಒಟ್ಟು ಮೂರು ಕುಲ್ಫಿ ಕೊಂಡುಕೊಂಡಿದ್ದಾರೆ. ಮನೆಗೆ ತೆರಳಿ ಎರಡು ಕುಲ್ಫಿಯನ್ನು ತಮ್ಮ ಮಕ್ಕಳಿಗೆ ನೀಡಿ ತಾವೂ ಕೂಡ ಒಂದು ಕುಲ್ಫಿಯನ್ನು ತಿನ್ನುತ್ತಿದ್ದರು.

    ಈ ವೇಳೆ ಅರ್ಧ ಕುಲ್ಫಿ ತಿನ್ನುತ್ತಿದ್ದಾಗ ಕುಲ್ಫಿಯಲ್ಲಿ ಪೂರ್ಣ ಬ್ಲೇಡ್ ಕಾಣಿಸಿಕೊಂಡಿತು. ಎಚ್ಚೆತ್ತುಕೊಂಡ ಮಹಿಳೆ ಕುಲ್ಫಿ ಬಿಸಾಡಿದ್ದಾರೆ. ಕೊಡಗಿನ ನಾಪೋಕ್ಲುವಿನ ಕುಲ್ಫಿ ತಯಾರಿಕಾ ಘಟಕವೊಂದು ಈ ಬ್ಲೇಡ್ ಹಾಕಲಾಗಿದ್ದ ಕುಲ್ಫಿ ತಯಾರಿಸಲಾಗಿದೆ ಎನ್ನಲಾಗಿದೆ.

    ಕುಲ್ಫಿ ತಯಾರಿಕಾ ಘಟಕದ ಸಿಬ್ಬಂದಿಯೊಬ್ಬ ನಿರ್ಲಕ್ಷ್ಯ ವಹಿಸಿ ಆತನ ಅಜಾಗರೂಕತೆಯಿಂದ ಕುಲ್ಫಿಯ ಕಡ್ಡಿಯ ಮಧ್ಯೆ ಬ್ಲೇಡ್ ಸಿಲುಕಿಕೊಂಡಿತ್ತು. ಎಚ್ಚರಿಕೆ ವಹಿಸಿದ ಹಿನ್ನೆಲೆಯಲ್ಲಿ ಬ್ಲೇಡ್ ಕುಲ್ಫಿಯ ಒಳಗೆ ಉಳಿದುಕೊಂಡಿತ್ತು. ಅದೃಷ್ಟವಶಾತ್ ಅದನ್ನು ತಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.

  • 200 ರೂ. ಕೊಡ್ಲಿಲ್ಲವೆಂದು ಬ್ಲೇಡ್‍ನಿಂದ ಕುತ್ತಿಗೆ ಕೊಯ್ಯಲು ಯತ್ನ!

    200 ರೂ. ಕೊಡ್ಲಿಲ್ಲವೆಂದು ಬ್ಲೇಡ್‍ನಿಂದ ಕುತ್ತಿಗೆ ಕೊಯ್ಯಲು ಯತ್ನ!

    ಬೆಳಗಾವಿ: 200ರೂ. ಕೊಡಲಿಲ್ಲ ಎಂಬ ಕಾರಣಕ್ಕೆ ಕುಡಿದ ನಶೆಯಲ್ಲಿ ಬ್ಲೇಡ್‍ನಿಂದ ಕುತ್ತಿಗೆ ಕೊಯ್ಯಲು ಯತ್ನಿಸಿದ ಘಟನೆ ಬೆಳಗಾವಿ ನಗರದ ಗ್ಯಾಂಗ್ ವಾಡಿಯಲ್ಲಿ ನಡೆದಿದೆ.

    ರವಿ ಬಂಡಿವಡ್ಡರ್ ಹಲ್ಲೆಗೊಳಗಾದ ವ್ಯಕ್ತಿ. ರವಿ ಸಂಬಂಧಿ ಹನುಮಂತ ಈ ಕೃತ್ಯ ಎಸಗಿದ್ದಾನೆ.

    200 ರೂಪಾಯಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹನುಮಂತ, ತನ್ನ ಸಂಬಂಧಿ ರವಿ ಕತ್ತನ್ನು ಬ್ಲೇಡ್ ನಿಂದ ಕೊಯ್ಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ರವಿಯನ್ನು ಬಚಾವ್ ಮಾಡಿದ್ದಾರೆ. ಬಳಿಕ ಅವರನ್ನು ನಗರದ ವಿಜಯ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

    ಆರೋಪಿ ಹನುಮಂತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದ ಅಮಲಿನಲ್ಲಿ ಬ್ಲೇಡ್‍ನಿಂದ ಮರ್ಮಾಂಗ ಕತ್ತರಿಸಿಕೊಂಡ

    ಕುಡಿದ ಅಮಲಿನಲ್ಲಿ ಬ್ಲೇಡ್‍ನಿಂದ ಮರ್ಮಾಂಗ ಕತ್ತರಿಸಿಕೊಂಡ

    ವಿಜಯಪುರ: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಬ್ಲೇಡ್ ನಿಂದ ಮರ್ಮಾಂಗ ಕತ್ತರಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ನಡೆದಿದೆ.

    ರಾಜಕುಮಾರ ಕುಂಬಾರ(40) ಕುಡಿದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ವ್ಯಕ್ತಿ. ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಾಜಕುಮಾರ ಈ ರೀತಿ ತಾನೇ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ರಾಜಕುಮಾರ ವಿಜಯಪುರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ರಾಜಕುಮಾರ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಬಸವನ ಬಾಗೇವಾಡಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸ ಬ್ಲೇಡ್ ಕೊಟ್ರೆ ಜಗಿದು ಚೂರು ಚೂರು ಮಡ್ತಾನೆ ಕೊಪ್ಪಳದ ವ್ಯಕ್ತಿ

    ಹೊಸ ಬ್ಲೇಡ್ ಕೊಟ್ರೆ ಜಗಿದು ಚೂರು ಚೂರು ಮಡ್ತಾನೆ ಕೊಪ್ಪಳದ ವ್ಯಕ್ತಿ

    ಕೊಪ್ಪಳ: ಜಿಲ್ಲೆಯಲ್ಲಿ ಬ್ಲೇಡ್ ತಿನ್ನುವ ವಿಚಿತ್ರ ಅಸಾಮಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ.

    ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ನಿವಾಸಿ ಶರಣಪ್ಪ ಬೋವಿ ಬ್ಲೇಡ್ ತಿನ್ನುವ ವಿಚಿತ್ರ ಅಸಾಮಿ. ಶರಣಪ್ಪ ಕಳೆದ ಮೂರು ವರ್ಷಗಳಿಂದ ಬ್ಲೇಡ್ ತಿನ್ನುವ ಹವ್ಯಾಸ ಬೆಳೆಸಿಕೊಂಡಿದ್ದಾನೆ. ಹೊಸದಾದ ಬ್ಲೇಡ್ ಬಾಯಿಂದ ಜಗಿದು ಚೂರು ಚೂರು ಮಾಡುತ್ತಿದ್ದಾನೆ.

    ಕಳೆದ ಮೂರು ವರ್ಷಗಳಿಂದಲೂ ಶರಣಪ್ಪ ಈ ರೀತಿ ಮಾಡುತ್ತಿದ್ದು, ಶರಣಪ್ಪನಿಗೆ ಯಾವುದೇ ತೊಂದರೆಯಾಗಿಲ್ಲವಂತೆ. ಗುಟ್ಕಾ ಜಗಿಯೋ ಹಾಗೆ ಶರಣಪ್ಪ ಬ್ಲೇಡ್ ಜಗಿಯುತ್ತಿದ್ದಾನೆ. ಇನ್ನು ಶರಣಪ್ಪನ ವಿಚಿತ್ರ ಹವ್ಯಾಸಕ್ಕೆ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಅಂಗವಿಕಲನಾದ ಶರಣಪ್ಪ ಕಿರಾಣಿ ಅಂಗಡಿಯಲ್ಲಿ ನಿಂತು ಬ್ಲೇಡ್ ಜಗಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಮ್ಮ ದೇಹದ ಯಾವದೇ ಭಾಗಕ್ಕೆ ತಾಗಿದರೂ ರಕ್ತ ಬರೋದು ಗ್ಯಾರಂಟಿ, ಆದ್ರೆ ಶರಣಪ್ಪ ಬಾಯಲ್ಲಿ ಅಗಿಯುತ್ತಿದ್ರೂ ಯಾವುದೇ ತೊಂದರೆ ಆಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv