Tag: ಬ್ಲೂ ವೇಲ್

  • ಬ್ಲೂ ವೇಲ್‌ ಚಾಲೆಂಜ್‌ಗೆ ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿ ಬಲಿ

    ಬ್ಲೂ ವೇಲ್‌ ಚಾಲೆಂಜ್‌ಗೆ ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿ ಬಲಿ

    ವಾಷಿಂಗ್ಟನ್: ಬ್ಲೂ ವೇಲ್‌ ಚಾಲೆಂಜ್‌ (Blue Whale) ಎಂಬ ಆನ್‌ಲೈನ್‌ ಆಟಕ್ಕೆ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಬಲಿಯಾಗಿದ್ದಾನೆ.

    ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಓದುತ್ತಿದ್ದ. ಮಾರ್ಚ್ 8 ರಂದು ಶವವಾಗಿ ಪತ್ತೆಯಾಗಿದ್ದಾನೆ. ಬ್ರಿಸ್ಟಲ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿಯ ವಕ್ತಾರ ಗ್ರೆಗ್ ಮಿಲಿಯೊಟ್, ಇದು ಆತ್ಮಹತ್ಯೆ ಎಂದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ

    ವಿದ್ಯಾರ್ಥಿ ಸಾವು ಕೊಲೆ ಎಂದು ವರದಿಯಾಗಿದೆ. ವರದಿಯಲ್ಲಿ ಆತ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಎಂದು ತಪ್ಪಾಗಿ ಗುರುತಿಸಲಾಗಿದೆ. ವಿದ್ಯಾರ್ಥಿ ದರೋಡೆ ಮಾಡಿದ್ದ ಎಂದು ಹೇಳಲಾಗುತ್ತಿದೆ. ಕಾಡಿನಲ್ಲಿ ಕಾರಿನಲ್ಲಿ ಆತನ ಶವ ಪತ್ತೆಯಾಗಿದೆ.

    ವಿದ್ಯಾರ್ಥಿ ಆನ್‌ಲೈನ್‌ ಆಟ ಬ್ಲೂವೇಲ್‌ಗೆ ದಾಸನಾಗಿದ್ದ ಎನ್ನಲಾಗಿದೆ. ಆಟದ ಭಾಗವಾಗಿ ವಿದ್ಯಾರ್ಥಿ 2 ನಿಮಿಷಗಳ ಕಾಲ ಉಸಿರನ್ನು ಬಿಗಿಹಿಡಿದುಕೊಂಡಿದ್ದ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಗೇಮ್‌ನ್ನು ನಿಷೇಧಿಸಲು ಭಾರತ ಸರ್ಕಾರ ಮುಂದಾಗಿತ್ತು. ಇದನ್ನೂ ಓದಿ: ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು – ಹಲವು ರಾಷ್ಟ್ರಗಳಿಂದ ಬೇಡಿಕೆ

    ಬ್ಲೂ ವೇಲ್ ಗೇಮ್ (ಆತ್ಮಹತ್ಯೆ ಆಟ) ಆತ್ಮಹತ್ಯೆಗೆ ಪ್ರಚೋದನೆಯಾಗಿದೆ ಎಂದು ಐಟಿ ಸಚಿವಾಲಯವು 2017 ರಲ್ಲಿ ನೀಡಿದ ಸಲಹೆಯಲ್ಲಿ ಹೇಳಿದೆ.

  • ಬ್ಲೂ ವೇಲ್‌ಗೆ ಭಾರತದಲ್ಲಿ ಮತ್ತೊಬ್ಬ ವ್ಯಕ್ತಿ ಬಲಿ

    ಬ್ಲೂ ವೇಲ್‌ಗೆ ಭಾರತದಲ್ಲಿ ಮತ್ತೊಬ್ಬ ವ್ಯಕ್ತಿ ಬಲಿ

    ಚೆನ್ನೈ: ತಮಿಳುನಾಡಿನ 22 ವರ್ಷದ ಇಂಜಿನಿಯರ್ ಬ್ಲೂ ವೇಲ್ ಗೇಮ್‍ನ ಪ್ರಭಾವಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

    ಶೇಷಾದ್ರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮಂಗಳವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಶೇಷಾದ್ರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಶೇಷಾದ್ರಿ ಪುದುಚೆರಿಯಲ್ಲಿರುವ ಮೆಟ್ಟುಕುಪ್ಪಂನ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ.

    ಆತನಲ್ಲಿ ಇದ್ದ ಪುಸ್ತಕ ಮತ್ತು ಗೇಮ್ ಆಡಿದ ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಕಳೆದ ವರ್ಷ ಬ್ಲೂ ವೇಲ್ ಆನ್‍ಲೈನ್ ಗೇಮ್ಸ್ ಭಾರತವನ್ನು ಪ್ರವೇಶಿಸಿದೆ. ಅನಾಮಧೇಯ ನಿಯಂತ್ರಣದಲ್ಲಿ ಈ ಆಟವಿದ್ದು, ಅವರು ಹೇಳಿದ್ದನ್ನು ಮಾಡವಂತೆ ಒತ್ತಡ ಹೇರಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಂಧಿನಗರಕ್ಕೂ ಕಾಲಿಟ್ಟ ಡೆಡ್ಲಿ ಗೇಮ್ ‘ಬ್ಲೂ ವೇಲ್ ಚಾಲೆಂಜ್’!

    ಗಾಂಧಿನಗರಕ್ಕೂ ಕಾಲಿಟ್ಟ ಡೆಡ್ಲಿ ಗೇಮ್ ‘ಬ್ಲೂ ವೇಲ್ ಚಾಲೆಂಜ್’!

    ಬೆಂಗಳೂರು: ಬ್ಲೂ ವೇಲ್ ಗೇಮ್ ಆಡಿ ವಿಶ್ವಾದ್ಯಂತ ಸಾಕಷ್ಟು ಯುವಜನತೆ ಆತ್ಮಹತ್ಯೆ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಗೇಮ್ ಈಗ ಗಾಂಧಿನಗರದಲ್ಲೂ ಕಾಲಿಟ್ಟಿದೆ. ಅರೆ ಕನ್ ಫ್ಯೂಸ್ ಆಗಬೇಡಿ. ಬ್ಲೂ ವೇಲ್ ಬಗ್ಗೆ ಕನ್ನಡದಲ್ಲಿ ಸಿನಿಮಾವನ್ನು ಮಾಡಲು ಚಿತ್ರತಂಡ ಮುಂದಾಗಿದೆ.

    ಹೌದು. ಈಗಿನ ತಂತ್ರಜ್ಞಾನದಿಂದ ತಯಾರಾದ ಈ ಡೆಡ್ಲಿ ಗೇಮ್ ಸಾಕಷ್ಟು ಯುವಕರ ಪ್ರಾಣವನ್ನು ಬಲಿ ಪಡೆದಿದೆ. ಭಾರತದಲ್ಲಿ ಕೂಡ ಹೆಚ್ಚು ಸುದ್ದಿ ಮಾಡಿದ ಬ್ಲೂ ವೇಲ್ ಗೇಮ್ ಬಗ್ಗೆ ಸಿನಿಮಾ ಮೂಡಿಬರಲಿದ್ದು, ಕೆಲವು ದಿನಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ.

    ಈ ಹಿಂದೆ ಬಿಡುಗಡೆಯಾದ ‘ಲೂಸ್ ಗಳು’ ಚಿತ್ರದ ನಿರ್ದೇಶಕ ಅರುಣ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ‘ಸ್ಟೋರಿ ಆಫ್ ಟಸ್ಕರ್’ ಎಂಬ ಕಿರುಚಿತ್ರದಲ್ಲಿ ನಾಯಕನಾಗಿ ನಟಿಸಿದ ರಾಜೇಶ್ ಗಣಪತಿ ಈ ಚಿತ್ರದಲ್ಲೂ ಕೂಡ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

    ಬ್ಲೂ ವೇಲ್ ಗೇಮ್ ನಿಂದ ಸಾಕಷ್ಟು ಯುವಜನತೆ ಪ್ರಾಣ ಕಳೆದುಕೊಂಡಿರೊದ್ರಿಂದ ಒಂದು ಒಳ್ಳೆಯ ಸಂದೇಶದೊಂದಿಗೆ ಈ ಚಿತ್ರವನ್ನು ತಯಾರಿಸಲು ಚಿತ್ರತಂಡ ಮುಂದಾಗಿದೆ. ಈ ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲು ಅರುಣ್ ನಿರ್ಧರಿಸಿದ್ದಾರೆ.

  • ಕರಾವಳಿಗೂ ಕಾಲಿಟ್ಟ ಬ್ಲೂವೇಲ್ – ತಿಮಿಂಗಿಲ ಆಕಾರದಲ್ಲಿ ಕೈ ಕುಯ್ದುಕೊಂಡ ವಿದ್ಯಾರ್ಥಿ

    ಕರಾವಳಿಗೂ ಕಾಲಿಟ್ಟ ಬ್ಲೂವೇಲ್ – ತಿಮಿಂಗಿಲ ಆಕಾರದಲ್ಲಿ ಕೈ ಕುಯ್ದುಕೊಂಡ ವಿದ್ಯಾರ್ಥಿ

    ಮಂಗಳೂರು: ಈಗಾಗಲೇ ಸಾಕಷ್ಟು ಮಕ್ಕಳು ಹಾಗೂ ಯುವಕ ಯುವತಿಯರನ್ನ ಬಲಿಪಡೆದಿರುವ ಸೂಸೈಡ್ ಗೇಮ್ ಬ್ಲೂವೇಲ್ ಇದೀಗ ಮಂಗಳೂರಿಗೂ ಕಾಲಿಟ್ಟಿದೆ. ಬ್ಲೂವೇಲ್ ಗೇಮ್ ಆಡಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಕೈ ಕೊಯ್ದುಕೊಂಡಿದ್ದಾನೆ.

    ಇದನ್ನೂ ಓದಿ: ಬ್ಲೂ ವೇಲ್‍ಗಾಗಿ ಭಾರತದಲ್ಲಿ ಮೊದಲ ಬಲಿ- ಬಾಲಕ ಪೋಸ್ಟ್ ಮಾಡಿದ ಕೊನೆಯ ಫೋಟೋ ಇದು

    ತಿಮಿಂಗಿಲ ಆಕಾರದಲ್ಲಿ ಕೈ ಕೊಯ್ದುಕೊಂಡಿದ್ದು, ಹೆತ್ತವರು ವಿಚಾರಿಸಿದಾಗ ಬ್ಲೂವೇಲ್ ಗೇಮ್ ಆಟವಾಡಿದ್ದನ್ನು ಬಾಯ್ಬಿಟ್ಟಿದ್ದಾನೆ. ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

    ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಶಾಲಾ ಬಾಲಕಿ ಕೈ ಕುಯ್ದುಕೊಂಡಿದ್ಲು. ಇದುವರೆಗೂ ದೇಶ, ವಿದೇಶಗಳಲ್ಲಿ ನೂರಾರು ಜನ ಬ್ಲೂವೆಲ್ ಗೇಮ್‍ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕೇಂದ್ರ ಸರ್ಕಾರ ಈಗಾಗಲೇ ಬ್ಲೂ ವೇಲ್ ಗೇಮ್‍ನ ಎಲ್ಲಾ ಲಿಂಕ್‍ಗಳನ್ನು ತೆಗೆದುಹಾಕಲು ಸೂಚಿಸಿದೆ.

    ಇದನ್ನೂ ಓದಿ:  ರಾಜ್ಯಕ್ಕೂ ಕಾಲಿಡ್ತು ಡೆಡ್ಲಿ ಬ್ಲೂವೇಲ್ ಗೇಮ್- ಗೇಮ್‍ಗಾಗಿ ಕೈ ಕುಯ್ದುಕೊಂಡ 11 ರ ಪೋರಿ

    https://www.youtube.com/watch?v=NatlGJr24Go