Tag: ಬ್ಲೂಟಿಕ್

  • ನಟಿ ಅನುಷ್ಕಾ ಶೆಟ್ಟಿಗೆ ನಿನ್ನೆ ಎಲೋನ್ ಮಸ್ಕ್ ಕೊಟ್ಟ ಗಿಫ್ಟ್ ಏನು?

    ನಟಿ ಅನುಷ್ಕಾ ಶೆಟ್ಟಿಗೆ ನಿನ್ನೆ ಎಲೋನ್ ಮಸ್ಕ್ ಕೊಟ್ಟ ಗಿಫ್ಟ್ ಏನು?

    ಕ್ಷಿಣದ ಖ್ಯಾತ ತಾರೆ, ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ (Anushka Shetty) ನಿಜವಾಗಲೂ ಅದೃಷ್ಟವಂತೆ. ಸಾಲು ಸಾಲು ಸಿನಿಮಾಗಳನ್ನೂ ಗೆದ್ದಿರುವ ಅವರು, ಇದೀಗ ಟ್ವಿಟರ್ (Twitter) ಸಂಸ್ಥೆಯ ಮಾಲೀಕನ ಮನಸೂ ಗೆದ್ದಿದ್ದಾರೆ. ಈ ಕಾರಣದಿಂದಾಗಿಯೇ ಟ್ವಿಟರ್ ಸಂಸ್ಥೆಯ ಮಾಲೀಕ ಎಲೋನ್ ಮಸ್ಕ್ (Elon Musk) ನಿಂದ ಅನುಷ್ಕಾ ಉಡುಗೊರೆ ಪಡೆದಿದ್ದಾರೆ.

    ಎಲೋನ್ ಮಸ್ಕ್ ಗೂ ಅನುಷ್ಕಾಗೆ ಹೇಗೆ ಪರಿಚಯ ಅಂತ ಕೇಳಿದರೆ, ಅದಕ್ಕೆ ಉತ್ತರವಿಲ್ಲ. ಬಹುಶಃ ಅನುಷ್ಕಾ ಯಾರು ಎನ್ನುವುದು ಎಲೋನ್ ಮಸ್ಕ್ ಗೂ ಗೊತ್ತಿರಲಿಕ್ಕಿಲ್ಲ. ಆದರೆ, ಎಲೋನ್ ತಗೆದುಕೊಂಡ ಒಂದು ನಿರ್ಧಾರ ಅನುಷ್ಕಾಗೆ ವರವಾಗಿದೆ. ಹಾಗಾಗಿ ಅದನ್ನು ಗಿಫ್ಟ್ ಎಂದೇ ಅಭಿಮಾನಿಗಳು ಭಾವಿಸಿದ್ದಾರೆ. ಇದನ್ನೂ ಓದಿ:ಪತಿ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಫೋಟೋಶೂಟ್

    ಹಣಕೊಟ್ಟು ಚಂದಾದಾರರಾದ ವ್ಯಕ್ತಿಗಳಿಗೆ ಮಾತ್ರ ಟ್ವಿಟರ್ ನಲ್ಲಿ ಬ್ಲೂಟಿಕ್ (BlueTick) ಸಿಗಲಿದೆ ಎಂದು ಮಸ್ಕ್ ಈ ಹಿಂದೆ ಪ್ರಕಟಿಸಿದ್ದರು. ಅದರಂತೆ ಹಣ ಪಾವತಿಸದ ಪ್ರತಿಯೊಬ್ಬರ ಖಾತೆಯಿಂದಲೂ ಬ್ಲೂಟಿಕ್ ಮಾಯವಾಗಿತ್ತು. ಇದನ್ನು ಕೆಲವರು ಸ್ವಾಗತಿಸಿದ್ದರೆ, ಹೆಚ್ಚಿನ ಸಂಖ್ಯೆಯ ಸಿಲೆಬ್ರಿಟಿಗಳು ತಟಸ್ಥರಾಗಿ ಉಳಿದಿದ್ದರು. ಬೆರಳೆಣಿಕೆಯ ಗಣ್ಯರಷ್ಟೇ ಹಣ ಪಾವತಿಸಿದ್ದರಿಂದ, ಟ್ವಿಟರ್ ಗೆ ಬೇರೆ ರೀತಿಯಲ್ಲಿ ಪರಿಣಾಮ ಬೀರಬಹುದು ಎಂದು ಎಲೋನ್ ಮತ್ತೊಂದು ಪ್ಲ್ಯಾನ್ ಮಾಡಿದ್ದರು. ಅದು ಅನುಷ್ಕಾಗೆ ವರವಾಗಿದೆ.

    ನಿನ್ನೆಯಷ್ಟೇ ಅನುಷ್ಕಾ ಶೆಟ್ಟಿಯ ಟ್ವಿಟರ್ ಖಾತೆ  ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದಿದೆ. ಈ ಖುಷಿಯನ್ನು ಅವರು ಹಂಚಿಕೊಂಡಿದ್ದರು. ಇದೇ ಸಮಯದಲ್ಲೇ ಎಲೋನ್ ಮಸ್ಕ್ ಹತ್ತು ಲಕ್ಷ ಹಿಂಬಾಲಕರನ್ನು ಹೊಂದಿದ ಟ್ವಿಟರ್ ಖಾತೆಗೆ ಉಚಿತವಾಗಿ ಬ್ಲೂಟಿಕ್ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಅನುಷ್ಕಾ ಉಚಿತವಾಗಿ ಬ್ಲೂಟಿಕ್ ಪಡೆದಿದ್ದಾರೆ.

  • ಎಲೋನ್ ಮಸ್ಕ್ ಬಗ್ಗೆ ಸಿಟ್ಟಾದ ಬಿಗ್ ಬಿ: ಹಣ ಕಳೆದುಕೊಂಡ ಬಗ್ಗೆ ಅಮಿತಾಭ್ ಕಿಡಿಕಿಡಿ

    ಎಲೋನ್ ಮಸ್ಕ್ ಬಗ್ಗೆ ಸಿಟ್ಟಾದ ಬಿಗ್ ಬಿ: ಹಣ ಕಳೆದುಕೊಂಡ ಬಗ್ಗೆ ಅಮಿತಾಭ್ ಕಿಡಿಕಿಡಿ

    ಚಂದಾದಾರರಿಗೆ ಮಾತ್ರ ಬ್ಲೂ ಟಿಕ್ (BlueTick)ಎಂದು ಹೇಳುವ ಮೂಲಕ ಟ್ವಿಟರ್ (Twitter) ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದರು ಮಾಲೀಕ ಎಲೋನ್ ಮಸ್ಕ್. ತಾವು ಹೇಳಿದಂತೆ ಉಚಿತವಾಗಿ ಬ್ಲೂಟಿಕ್ ಪಡೆದವರ ಖಾತೆಯಿಂದ ಅದನ್ನು ತೆಗೆದುಹಾಕಿದ್ದರು. ಈ ನಡೆಗೆ ಸಾಕಷ್ಟು ಸಿಲೆಬ್ರಿಟಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು. ಹಲವರಂತೂ ತಾವು ಹಣ ಪಡೆದು ಬ್ಲೂ ಟಿಕ್ ಪಡೆದುಕೊಳ್ಳುವುದಿಲ್ಲ ಎಂದು ನೇರವಾಗಿಯೇ ತಿಳಿಸಿದ್ದರು.

    ಆಕ್ರೋಶ ವ್ಯಕ್ತ ಪಡಿಸಿದವರ ಜೊತೆಗೆ ಕೆಲವರು ಹಣ ಪಾವತಿಸಿ ಬ್ಲೂಟಿಕ್ ಪಡೆದಿದ್ದರು. ಅದರಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಒಬ್ಬರು. ಟ್ವಿಟರ್ ಸಂಸ್ಥೆ ತಿಳಿಸಿದಂತೆ ತಿಂಗಳಿಗೆ 900 ರೂಪಾಯಿ ಪಾವತಿಸಿ ಅಮಿತಾಭ್ ಚಂದಾದಾರರಾಗಿದ್ದರು. ಹಣ ನೀಡಿದ್ದರಿಂದ ಅಮಿತಾಭ್ ಅವರ ಟ್ವಿಟರ್ ಖಾತೆಗೆ ಬ್ಲೂಟಿಕ್ ಸಿಕ್ಕಿತ್ತು. ಇದೀಗ ಎಲೋನ್ ಮಸ್ಕ್ (Elon Musk) ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರಕ್ಕೆ ಅಮಿತಾಭ್ ಸಿಟ್ಟಾಗಿದ್ದಾರೆ. ಇದನ್ನೂ ಓದಿ:ರಾಡ್ ನಿಂದ ಹೊಡೆದು ಪವನ್ ಕಲ್ಯಾಣ್ ಅಭಿಮಾನಿ ಕೊಂದ ಪ್ರಭಾಸ್ ಫ್ಯಾನ್

    ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎನ್ನುವ ಎಲೋನ್ ನಿರ್ಧಾರವನ್ನು ಸ್ವಾಗತಿಸದೇ ತಮಗೆ ಬ್ಲೂಟಿಕ್ ಬೇಡ ಎಂದು ಸಾಕಷ್ಟು ಸಿಲೆಬ್ರಿಟಿಗಳು ಸುಮ್ಮನಿದ್ದರು. ಬಹುತೇಕರು ಚಂದಾದಾರರಾಗದೇ ಹಾಗೆಯೇ ಉಳಿದುಕೊಂಡರು. ಇದು ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದರಿತ ಎಲೋನ್, ಒಂದು ಮಿಲಿಯನ್ ಹಿಂಬಾಲಕರಿರುವ ಟ್ವಿಟರ್ ಖಾತೆಗೆ ಉಚಿತವಾಗಿ ಬ್ಲೂಟಿಕ್ ನೀಡಿದ್ದಾರೆ. ಈ ನಡೆ ಅಮಿತಾಭ್ ಕೋಪಕ್ಕೆ ಕಾರಣವಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಅಮಿತಾಭ್. ಈಗಾಗಲೇ ನಾನು ಹಣ ಪಾವತಿಸಿ ಬ್ಲೂಟಿಕ್ ಪಡೆದಿದ್ದೇನೆ. ನೀವು ಮತ್ತೊಂದು ನಿರ್ಧಾರ ಪ್ರಕಟಿಸಿದ್ದೀರಿ. 48.4 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ನಾನು ನಿಮ್ಮಿಂದಾಗಿ ಹಣ ಕಳೆದುಕೊಳ್ಳಬೇಕಾಯಿತು. ಈಗ ಏನು ಮಾಡಲಿ? ಎಂದು ಎಲೋನ್ ಮಸ್ಕ್ ಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ಸಂಸ್ಥೆ ಏನು ಉತ್ತರ ಕೊಡುತ್ತದೆಯೋ ಕಾದು ನೋಡಬೇಕು.

  • ಟ್ವಿಟರ್ ಬ್ಲೂಟಿಕ್ ತೆಗೆದ ಬೆನ್ನಲ್ಲೇ ಎಲೋನ್ ಮಸ್ಕ್ ಗೆ ಮತ್ತೊಂದು ಬೇಡಿಕೆ ಇಟ್ಟ ಅಮಿತಾಭ್

    ಟ್ವಿಟರ್ ಬ್ಲೂಟಿಕ್ ತೆಗೆದ ಬೆನ್ನಲ್ಲೇ ಎಲೋನ್ ಮಸ್ಕ್ ಗೆ ಮತ್ತೊಂದು ಬೇಡಿಕೆ ಇಟ್ಟ ಅಮಿತಾಭ್

    ಟ್ವಿಟರ್ ಸಂಸ್ಥೆಯ ಮಾಲೀಕ ಎಲೋನ್ ಮಸ್ಕ್ (Elon Musk) ಬ್ಲೂಟಿಕ್ (BlueTick) ತೆಗೆದು ಹಾಕಿ ಸಾಕಷ್ಟು ಸೆಲೆಬ್ರಿಟಿಗಳಿಗೆ ಅಚ್ಚರಿ ಮೂಡಿಸಿದ್ದರು. ಸಬ್ ಸ್ಕ್ರೈಬ್ ಮಾಡಿಕೊಂಡವರಿಗೆ ಮಾತ್ರ ಬ್ಲೂ ಟಿಕ್ ನೀಡುವುದಾಗಿ ಈ ಹಿಂದೆಯೇ ಪ್ರಕಟಿಸಿದ್ದ ಎಲೋನ್ ಮಸ್ಕ್ ತಾವು ಕೊಟ್ಟ ಗಡುವು ಮುಗಿಯುತ್ತಿದ್ದಂತೆಯೇ ಏಕಾಏಕಿ ಬ್ಲೂ ಟಿಕ್ ತೆಗೆದು ಹಾಕಿದ್ದರು. ಇದರಿಂದಾಗಿ ಸಾಕಷ್ಟು ಜನರು ಗೊಂದಲವಾಗಿದ್ದರು.

    ಭಾರತೀಯ ಸಿನಿಮಾ ರಂಗ  ಅದೆಷ್ಟೋ ನಟ ನಟಿಯರಿಗೆ ಮತ್ತು ತಂತ್ರಜ್ಞರಿಗೆ ಹಾಗೂ ಕ್ರಿಕೆಟ್ ದಿಗ್ಗಜರಿಗೂ ಕೂಡ ಬ್ಲೂ ಟಿಕ್ ಯಾಕೆ ಹೋಯಿತು ಎನ್ನುವ ಕುರಿತು ಅರಿವಿರಲಿಲ್ಲ. ಹಾಗಾಗಿ ಬಹುತೇಕರು ಬ್ಲೂ ಟಿಕ್ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದ್ದರು. ಈಗಾಗಲೇ ಹಣ ಕೊಟ್ಟು ಖರೀದಿ ಮಾಡಿರುವವರನ್ನು ತೋರಿಸಿ, ನಮ್ಮದು ಯಾಕೆ ಇಲ್ಲ ಎಂದು ಕೇಳಿದ್ದರು. ಆಮೇಲೆ ಅವರಿಗೆ ಮನವರಿಕೆ ಆಗಿದೆ.

    ಬ್ಲೂಟಿಕ್ ತೆಗೆದು ಹಾಕಿದ ಬೆನ್ನಲ್ಲೆ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅದೇ ಟ್ವಿಟರ್ ಮೂಲಕ ಎಲೋನ್ ಮಸ್ಕ್ ಗೆ ಪ್ರಶ್ನೆಯೊಂದನ್ನು ಮಾಡಿದ್ದಾರೆ. ಅಲ್ಲದೇ ಬೇಡಿಕೆಯನ್ನೂ ಇಟ್ಟಿದ್ದಾರೆ. ಟ್ವಿಟರ್ ಖಾತೆಯಲ್ಲಿ ಎಡಿಟ್ ಮಾಡುವಂತಹ ಅವಕಾಶವಿಲ್ಲ. ಹಾಗಾಗಿ ಎಡಿಟ್ ಮಾಡುವಂತ ಅವಕಾಶವನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ. ಅದನ್ನು ನೇರವಾಗಿ ಮಸ್ಕ್ ಗೆ ಬರೆದು ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಬಹುತೇಕ ಟ್ವೀಟ್ ಅನ್ನು ಹಿಂದಿಯಲ್ಲಿ ಬರೆದಿರುವ ಅಮಿತಾಭ್, ಟ್ವಿಟರ್ ಮಾಲೀಕರಿಗೆ ಹಿಂದಿ ಅರ್ಥ ಮಾಡಿಸೋರು ಯಾರು ಎನ್ನುವ ಪ್ರಶ್ನೆಯನ್ನೂ ಅಭಿಮಾನಿಗಳು ಮಾಡಿದ್ದಾರೆ. ಹಿಂದಿಯಿಂದ ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳುವವರು ಯಾರು ಎನ್ನುವ ಪ್ರಶ್ನೆಯನ್ನೂ ಹಲವರು ಮಾಡಿದ್ದಾರೆ.