Tag: ಬ್ಲಾಸ್ಟ್

  • ಮೊಬೈಲ್ ಚಾರ್ಜ್ ಹಾಕಿದ್ದಾಗ ಶಾರ್ಟ್ ಸರ್ಕ್ಯೂಟ್ – ಮನೆಗೆ ಬಂತು ಅಗ್ನಿಶಾಮಕ ವಾಹನ

    ಮೊಬೈಲ್ ಚಾರ್ಜ್ ಹಾಕಿದ್ದಾಗ ಶಾರ್ಟ್ ಸರ್ಕ್ಯೂಟ್ – ಮನೆಗೆ ಬಂತು ಅಗ್ನಿಶಾಮಕ ವಾಹನ

    ಹಾವೇರಿ: ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಮನೆಯಲ್ಲಿದ್ದ ಟಿವಿ, ಬಟ್ಟೆ ಹಾಗೂ 25 ಸಾವಿರ ರೂ. ನಗದು ಹಣ ಸುಟ್ಟು ಕರಕಲಾದ ಘಟನೆ ಹಾವೇರಿ ನಗರದ ಸುಭಾಶ್ ವೃತ್ತದಲ್ಲಿ ಬಳಿ ನಡೆದಿದೆ.

    ನಗರದ ಪ್ರಕಾಶ್ ಹುಲಕೋಟಿ ಎಂಬುವರ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪ್ರಕಾಶ್ ಅವರ ಮಗಳು ಹಳೆಯ ನೋಕಿಯಾ ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೊಬೈಲ್ ನಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗಿದ್ಯಾ ಅಥವಾ ಚಾರ್ಜರ್ ಸಮಸ್ಯೆಯಿಂದ ಆಗಿದ್ಯಾ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

    ಈ ಹಿಂದೆ ಮೊಬೈಲ್ ಫೋನ್ ಸ್ಟೋಟ ಪ್ರಕರಣಗಳು ಬೆಳಕಿಗೆ ಬಂದಾಗ ಕಂಪೆನಿಗಳು, ಫೋನ್ ಸ್ಫೋಟಗಳ್ಳಲು ಮೊಬೈಲ್ ಕಾರಣವಲ್ಲ, ಕಳಪೆ ಗುಣಮಟ್ಟದ ಚಾರ್ಜರ್ ಬಳಸಿದ ಕಾರಣ ಸ್ಫೋಟಗೊಂಡಿದೆ ಎಂದು ಹೇಳಿಕೆ ನೀಡಿತ್ತು.

  • ಮಂಡ್ಯ: ಆನ್ ಆಗುತ್ತಿಲ್ಲವೆಂದು ಪರೀಕ್ಷಿಸುತ್ತಿದ್ದಾಗ ಮೊಬೈಲ್ ಬ್ಲಾಸ್ಟ್

    ಮಂಡ್ಯ: ಆನ್ ಆಗುತ್ತಿಲ್ಲವೆಂದು ಪರೀಕ್ಷಿಸುತ್ತಿದ್ದಾಗ ಮೊಬೈಲ್ ಬ್ಲಾಸ್ಟ್

    ಮಂಡ್ಯ: ಜಿಲ್ಲೆಯಲ್ಲಿ ಮತ್ತೊಂದು ಮೊಬೈಲ್ ಬ್ಲಾಸ್ಟ್ ಆಗಿದ್ದು, ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್‍ಗಳು ಎಷ್ಟು ಸೇಫ್ ಎಂಬ ಅನುಮಾನ ಮೂಡುವಂತೆ ಮಾಡಿದೆ

    ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಪ್ರದೀಪ್ ಎಂಬವರ ಅಂಗಡಿಯಲ್ಲಿ ಮೊಬೈಲ್ ಬ್ಲಾಸ್ಟ್ ಆಗಿದೆ. ಚೈನಾ ಮೂಲದ ಕಂಪನಿಗೆ ಸೇರಿದ ಮೊಬೈಲ್ ಆನ್ ಆಗುತ್ತಿಲ್ಲ ಎಂದು ಗ್ರಾಹಕರೊಬ್ಬರು ಪ್ರದೀಪ್ ಅವರ ಬಳಿಗೆ ರಿಪೇರಿಗೆ ತಂದಿದ್ದಾರೆ. ಈ ವೇಳೆ ಮೊಬೈಲ್ ಬ್ಲಾಸ್ಟ್ ಆಗಿದೆ. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಪ್ರದೀಪ್ ಮೊಬೈಲ್ ತೆಗೆದುಕೊಂಡು ರಿಪೇರಿ ಮಾಡಲೆಂದು ಪರೀಕ್ಷಿಸಲು ಆರಂಭಿಸಿದ್ದಾರೆ. ಈ ಸಂದರ್ಭ ಮೊಬೈಲ್‍ನಲ್ಲಿ ಹೊಗೆ ಕಾಣಿಸಿಕೊಂಡು ಬ್ಲಾಸ್ಟ್ ಆಗಿದೆ. ತಕ್ಷಣ ಪ್ರದೀಪ್ ಮೊಬೈಲ್ ದೂರ ಎಸೆದಿದ್ದಾರೆ.

    ಮೊಬೈಲ್‍ನಲ್ಲಿ ಬಂದ ಹೊಗೆ ಪ್ರದೀಪ್ ಅವರ ಅಂಗಡಿಯನ್ನು ಆವರಿಸಿ ಕ್ಷಣ ಕಾಲ ಭಯದ ವಾತಾವರಣ ನಿರ್ಮಿಸಿತ್ತು.

  • ಮೊಬೈಲ್ ಆನ್ ಮಾಡಿದಾಗ ಹೊಗೆ, ಕೆಳಕ್ಕೆ ಹಾಕ್ತಿದ್ದಂತೆ ರೆಡ್‍ಮೀ ನೋಟ್ 4 ಬ್ಲಾಸ್ಟ್

    ಮೊಬೈಲ್ ಆನ್ ಮಾಡಿದಾಗ ಹೊಗೆ, ಕೆಳಕ್ಕೆ ಹಾಕ್ತಿದ್ದಂತೆ ರೆಡ್‍ಮೀ ನೋಟ್ 4 ಬ್ಲಾಸ್ಟ್

    ಮಂಡ್ಯ: ತಾಂತ್ರಿಕ ದೋಷದಿಂದ ರೆಡ್ ಮೀ ನೋಟ್ 4 ಮೊಬೈಲ್ ಬ್ಲಾಸ್ಟ್ ಆಗಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ರೆಡ್ ಮೀ ನೋಟ್ 4 ಬ್ಲಾಸ್ಟ್ ಆಗಿರೋ ದೃಶ್ಯ ಮಂಡ್ಯದ ಮೊಬೈಲ್ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದ ಗ್ರಾಹಕರೊಬ್ಬರು ಮೊಬೈಲ್ ಆನ್ ಆಗುತ್ತಿಲ್ಲ ಎಂದು ಆರ್‍ಪಿ ರಸ್ತೆಯ ಮೊಬೈಲ್ ಅಂಗಡಿಗೆ ತಂದು ತೋರಿಸಿದ್ದಾರೆ.

    ಅಂಗಡಿಯವರು ಮೊಬೈಲ್ ಆನ್ ಮಾಡುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಅಂಗಡಿಯವರು ಮೊಬೈಲ್ ಕೆಳಕ್ಕೆ ಹಾಕುತ್ತಿದ್ದಂತೆ ಬ್ಲಾಸ್ಟ್ ಆಗಿದೆ. ಈ ಘಟನೆಯಿಂದ ಕೆಲ ಸಮಯ ಮೊಬೈಲ್ ಕೊಂಡುಕೊಂಡ ಗ್ರಾಹಕ ಮತ್ತು ಅಂಗಡಿಯವರು ಆತಂಕಗೊಂಡಿದ್ದರು.

    https://www.youtube.com/watch?v=3-2NT-spVdk

  • ಬೆಂಗಳೂರು ಶೋರೂಂನಲ್ಲಿ ಸಿಮ್ ಹಾಕ್ತಿದ್ದಾಗ ರೆಡ್‍ಮಿ ನೋಟ್ 4 ಮೊಬೈಲ್ ಸ್ಫೋಟ!- ವಿಡಿಯೋ ನೋಡಿ

    ಬೆಂಗಳೂರು ಶೋರೂಂನಲ್ಲಿ ಸಿಮ್ ಹಾಕ್ತಿದ್ದಾಗ ರೆಡ್‍ಮಿ ನೋಟ್ 4 ಮೊಬೈಲ್ ಸ್ಫೋಟ!- ವಿಡಿಯೋ ನೋಡಿ

    ಬೆಂಗಳೂರು: ರೆಡ್ ಮೀ ನೋಟ್ 4 ಫೋನ್ ಇದ್ದಕ್ಕಿದ್ದಂತೆಯೇ ಸ್ಫೋಟವಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಚೀನಾ ಮೂಲದ ಕ್ಸಿಯೋಮಿ ಕಂಪನಿಯ ರೆಡ್ ಮಿ ನೋಟ್ 4 ಮೊಬೈಲ್ ಫೋನನ್ನು ಅರ್ಜುನ್ ಎಂಬವರು ಮೊಬೈಲ್ ಶೋರೂಂದರಿಂದ ಖರೀದಿಸಿದ್ದಾರೆ.  ಬಳಿಕ ಸ್ಥಳೀಯ ಮೊಬೈಲ್ ಶಾಪ್ ಒಂದರಲ್ಲಿ ಸಿಮ್ ಹಾಕುತ್ತಿದ್ದ ವೇಳೆ ರೆಡ್‍ಮಿ ನೋಟ್ 4 ಇದ್ದಕ್ಕಿದ್ದಂತೆಯೇ ಬ್ಲಾಸ್ಟ್ ಆಗಿದೆ.

    ಘಟನೆಯಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಕೂಡಲೇ ಅವರು ಕಂಪೆನಿಗೆ ದೂರು ನೀಡಿದ್ದು, ಬಳಿಕ ಕಂಪನಿ ಫೋನ್ ರಿಪ್ಲೇಸ್‍ಮೆಂಟ್ ಮಾಡಿಕೊಟ್ಟಿದೆ. ಕ್ಸಿಯೋಮಿ ಹೊಸ ಮೊಬೈಲ್ ನೀಡಿದ್ದಕ್ಕೆ ಗ್ರಾಹಕ ಅರ್ಜುನ್ ಧನ್ಯವಾದ ಹೇಳಿದ್ದಾರೆ.

    ಸ್ಫೋಟ ಹೇಗಾಯ್ತು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕ್ಸಿಯೋಮಿ ತಿಳಿಸಿದೆ. ಜುಲೈ 17ಕ್ಕೆ ಈ ಘಟನೆ ನಡೆದಿದ್ದು, ಮೊಬೈಲ್ ಸ್ಫೋಟಗೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

     

  • ಟೇಬಲ್ ಮೇಲೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ಸ್ಮಾರ್ಟ್ ಫೋನ್!

    ಟೇಬಲ್ ಮೇಲೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ಸ್ಮಾರ್ಟ್ ಫೋನ್!

    ಯಾದಗಿರಿ: ಹೊಸದಾಗಿ ಖರೀದಿಸಿದ ಸ್ಮಾರ್ಟ್ ಫೋನೊಂದು ಗ್ರಾಹಕರ ಮನೆಯಲ್ಲಿ ಸ್ಫೋಟಗೊಂಡಿರುವ ಘಟನೆ ಯಾದಗಿರಿಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

    ಮಂಜುನಾಥ್ ಚಲುವಾದಿ ಎಂಬವರು ಒಂದು ತಿಂಗಳ ಹಿಂದೆ ಆನ್‍ಲೈನಲ್ಲಿ 10,500 ರೂ. ನೀಡಿ ಸ್ವೈಪ್ ಇಲೈಟ್ ಕಂಪೆನಿಯ ಫೋನನ್ನು ಖರೀದಿಸಿದ್ದರು.

    ಗುರುವಾರ ಮೊಬೈಲ್‍ನಲ್ಲಿ ಮಾತನಾಡಿ ಟೇಬಲ್ ಮೇಲಿಟ್ಟು ಕೆಲಸ ಮಾಡುವ ವೇಳೆ ಬೆಂಕಿ ಕಾಣಿಸಿಕೊಂಡು ಫೋನ್ ಸ್ಫೋಟಗೊಂಡಿದೆ. ಸ್ಫೋಟಗೊಂಡು ಬೆಂಕಿ ಬೆಂಕಿ ಕಂಡ ಕೂಡಲೇ ಮಂಜುನಾಥ್ ನಂದಿಸಲು ಮುಂದಾದಗ ಕೈಗೆ ಸ್ವಲ್ಪ ಗಾಯವಾಗಿದೆ. ಮೊಬೈಲ್ ಟೇಬಲ್ ಮೇಲಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.