Tag: ಬ್ಲಾಸ್ಟ್

  • ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ – ಮೃತ ಯೋಧನ ಪತ್ನಿಯ ಎರಡೂ ಕೈಗಳು ಕಟ್

    ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ – ಮೃತ ಯೋಧನ ಪತ್ನಿಯ ಎರಡೂ ಕೈಗಳು ಕಟ್

    ಬಾಗಲಕೋಟೆ: ಹೇರ್ ಡ್ರೈಯರ್ ಬ್ಲಾಸ್ಟ್ (Hair Dryer Blast) ಆಗಿ ಮೃತ ಯೋಧನ ಪತ್ನಿಯ ಎರಡು ಕೈಗಳು ತುಂಡಾಗಿರುವ ಘಟನೆ ಜಿಲ್ಲೆಯ ಇಳಕಲ್ (Ilkal) ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮಾಜಿ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ. 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು.ಇದನ್ನೂ ಓದಿ: ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    ಶಶಿಕಲಾ ಎಂಬುವರ ಹೆಸರು, ನಂಬರ್ ಹೊಂದಿದ್ದ ಪಾರ್ಸಲ್ ಕೊರಿಯರ್‌ಯೊಂದು ಬಂದಿತ್ತು. ಶಶಿಕಲಾ ಅವರು ಕೂಡ ಮೃತ ಯೋಧನ ಪತ್ನಿಯಾಗಿದ್ದರು. ಕೊರಿಯರ್‌ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಅವರು ಊರಲ್ಲಿ ಇರದ ಕಾರಣ ಬಸಮ್ಮನಿಗೆ ಕೊರಿಯರ್ ಅನ್ನು ಪಡೆದು ತೆಗೆದು ನೋಡಲು ತಿಳಿಸಿದ್ದರು. ತೆಗೆದು ನೋಡಿದಾಗ ಹೇರ್ ಡ್ರೈಯರ್ ಇತ್ತು. ಈ ವೇಳೆ ಪಕ್ಕದ ಮನೆಯವರು ಹೇರ್ ಡ್ರೈಯರ್ ಆನ್ ಮಾಡಲು ತಿಳಿಸಿದ್ದಾರೆ. ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಬ್ಲಾಸ್ಟ್ ಆಗಿ ಜೋರಾಗಿ ಸದ್ದಾಯಿತು.

    ಬ್ಲಾಸ್ಟ್ ಆದ ಹಿನ್ನೆಲೆ ಎರಡೂ ಕೈಗಳು ತುಂಡಾಗಿದ್ದು, ಬೆರಳುಗಳು ಛಿದ್ರ ಛಿದ್ರವಾಗಿ ತುಂಡಾಗಿದೆ. ಮನೆಯಲ್ಲಿ ರಕ್ತ ಚಿಮ್ಮಿದ್ದು, ಬಸಮ್ಮನನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಶಿಕಲಾ ಅವರನ್ನು ವಿಚಾರಿಸಿದಾಗ ನಾನು ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ. ಆದರೆ ನನ್ನ ಹೆಸರಲ್ಲಿ ಹೇರ್ ಡ್ರೈಯರ್ ಬಂದಿದೆ. ಆರ್ಡರ್ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಬಂತು ಎಂದು ಪೊಲೀಸರಿಂದ ತನಿಖೆ ನಡೆದಿದೆ. ಸದ್ಯ ಹೇರ್ ಡ್ರೈಯರ್ ವಿಶಾಖಪಟ್ಟಣದಲ್ಲಿ ಉತ್ಪಾದನೆಯಾಗಿದ್ದು, ಕೊರಿಯರ್ ಬಾಗಲಕೋಟೆಯಿಂದ ಬಂದಿದೆ ಎಂದು ತಿಳಿದು ಬಂದಿದೆ. ಸದ್ಯ ಇಳಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

  • ನಾಗ್ಪುರದ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಬ್ಲಾಸ್ಟ್ – ಐವರ ದುರ್ಮರಣ!

    ನಾಗ್ಪುರದ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಬ್ಲಾಸ್ಟ್ – ಐವರ ದುರ್ಮರಣ!

    – ಐದು ಮಂದಿ ಗಂಭೀರ

    ಮುಂಬೈ: ನಾಗ್ಪುರದ (Nagpur) ಧಮ್ನಾದಲ್ಲಿರುವ ಸ್ಫೋಟಕ ತಯಾರಿಕ ಕಾರ್ಖಾನೆಯಲ್ಲಿ (Explosives Manufacturing Unit) ಸ್ಫೋಟ ಸಂಭವಿಸಿದ ಪರಿಣಾಮ ಐವರು ಸಾವನ್ನಪ್ಪಿದ್ದು, ಐದು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

    ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 4 ಮಹಿಳೆಯರು ಸೇರಿದಂತೆ 5 ಮಂದಿ ಮೃತಪಟ್ಟಿದ್ದಾರೆ. ತನಿಖೆ ನಡೆಯುತ್ತಿದೆ. ನಮ್ಮ ತಂಡ, ಕ್ರೈಂ ಬ್ರಾಂಚ್ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ರವೀಂದರ್ ಸಿಂಘಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಗೆ ಶಾಮಿಯಾನ, ಮಾಧ್ಯಮ ನಿರ್ಬಂಧ ಖಂಡನೀಯ: ಮಾಜಿ ಶಾಸಕ ಪಿ.ರಾಜೀವ್

    ವರದಿಯ ಪ್ರಕಾರ, ನಗರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಹಿಂಗ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಧಮ್ನಾ ಗ್ರಾಮದ ಚಾಮುಂಡಿ ಎಕ್ಸ್ಪ್ಲೋಸಿವ್ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಕಾರ್ಮಿಕರು ಸ್ಫೋಟಕಗಳನ್ನು ಪ್ಯಾಕ್ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಕಾರ್ಮಿಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ – ಅಧಿಕಾರಿಗಳ ಜೊತೆ ಸಭೆ ನಡೆಸಿದ ಮೋದಿ

    ಸ್ಫೋಟದ ಬಳಿಕ ಘಟಕದ ವ್ಯವಸ್ಥಾಪಕ ಮತ್ತು ಮಾಲೀಕರು ತಲೆಮರೆಸಿಕೊಂಡಿದ್ದಾರೆ ಎಂದು ಎನ್‌ಸಿಪಿ ನಾಯಕ ಅನಿಲ್ ದೇಶಮುಖ್ ಹೇಳಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬಕ್ರೀದ್‌ ಹಬ್ಬಕ್ಕೆ ಗೋವುಗಳು ಕುರ್ಬಾನಿಯಾಗದಂತೆ ಕ್ರಮ ವಹಿಸಿ – ಬಜರಂಗದಳ ಆಗ್ರಹ

  • ಗ್ಯಾಸ್ ಸೋರಿಕೆಯಾಗಿ ಬ್ಲಾಸ್ಟ್ – ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು

    ಗ್ಯಾಸ್ ಸೋರಿಕೆಯಾಗಿ ಬ್ಲಾಸ್ಟ್ – ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು

    ದಾವಣಗೆರೆ: ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ (Gas Leak) ಬ್ಲಾಸ್ಟ್ (Blast) ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಗಾಯಗೊಂಡಿದ್ದ ಮಹಿಳೆ (Woman) ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

    ಸ್ಮಿತಾ (55) ಸಾವನ್ನಪ್ಪಿದ ಮಹಿಳೆ. ದಾವಣಗೆರೆ (Davanagere) ವಿನೋಬ ನಗರದ ಮಾಚಿದೇವ ಚೌಟ್ರಿ ಪಕ್ಕದಲ್ಲಿ ಘಟನೆ ನಡೆದಿತ್ತು. ಇದೇ ನವೆಂಬರ್ 23ರಂದು ಘಟನೆ ನಡೆದಿದ್ದು, ಅನಿಲ ಸೋರಿಕೆ ಹಿನ್ನೆಲೆ ಬ್ಲಾಸ್ಟ್ನಲ್ಲಿ ಸ್ಮಿತಾ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ಮಹಿಳೆಯನ್ನು ತಕ್ಷಣವೇ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ಮಿತಾ ಇಂದು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:‌ ಮಕ್ಕಳ ಮಾರಾಟ ಪ್ರಕರಣ; ಯಾರ್ಯಾರಿಗೆ ಯಾವ್ಯಾವ ಪಾತ್ರ? – ಇಲ್ಲಿದೆ ವಿವರ

    ಮೃತ ಸ್ಮಿತಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಂಡಿನೋವಿನ ಕಾರಣದಿಂದ ಸ್ಮಿತಾ ಸ್ಟ್ಯಾಂಡ್ ಸಹಾಯದಿಂದ ನಡೆಯುತ್ತಿದ್ದರು. ಬ್ಲಾಸ್ಟ್ ರಭಸಕ್ಕೆ ಮನೆಯ ಕಿಟಕಿ, ಬಾಗಿಲು ಛಿದ್ರಗೊಂಡಿದ್ದು, ಮನೆಯ ಗೋಡೆ ಬಿರುಕು ಬಿಟ್ಟಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಇದನ್ನೂ ಓದಿ: ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ: ಪೊಲೀಸ್ ಆಯುಕ್ತ

  • ಶೀಘ್ರವೇ ಮುಂಬೈ ಬ್ಲಾಸ್ಟ್ ಮಾಡ್ತೀನಿ – ಬೆದರಿಕೆ ಹಾಕಿದಾತ ಅರೆಸ್ಟ್

    ಶೀಘ್ರವೇ ಮುಂಬೈ ಬ್ಲಾಸ್ಟ್ ಮಾಡ್ತೀನಿ – ಬೆದರಿಕೆ ಹಾಕಿದಾತ ಅರೆಸ್ಟ್

    ಮುಂಬೈ: ಮಹಾರಾಷ್ಟ್ರದ (Maharashtra) ರಾಜಧಾನಿ ಮುಂಬೈನಲ್ಲಿ (Mumbai) ಮತ್ತೊಮ್ಮೆ ಭೀತಿ ಹುಟ್ಟಿಸುವಂತಹ ಬೆದರಿಕೆ (Threat) ಪೊಲೀಸರಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಶೀಘ್ರವೇ ಮುಂಬೈ ಅನ್ನು ಬ್ಲಾಸ್ಟ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಇಲ್ಲಿಯವರೆಗೆ ಪೊಲೀಸರಿಗೆ ಬೆದರಿಕೆ ಕರೆಗಳು ಫೋನ್ ಕರೆ ಇಲ್ಲವೇ ಇ-ಮೇಲ್‌ಗಳ ಮೂಲಕ ಬರುತ್ತಿದ್ದವು. ಇದೀಗ ಕಿಡಿಗೇಡಿಯೊಬ್ಬ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಪೊಲೀಸರ (Mumbai Police) ಟ್ವಿಟ್ಟರ್ ಖಾತೆಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಇದನ್ನೂ ಓದಿ: ರಾತ್ರೋರಾತ್ರಿ ಟ್ರಕ್‌ನಲ್ಲಿ ಪ್ರಯಾಣ – ಚಾಲಕನ ಸಮಸ್ಯೆ ಆಲಿಸಿದ ರಾಗಾ

    ಸಂದೇಶದಲ್ಲೇನಿದೆ?
    ನಾನು ಮುಂಬೈಯನ್ನು ಅತಿ ಶೀಘ್ರದಲ್ಲಿ ಸ್ಫೋಟಿಸಲಿದ್ದೇನೆ ಎಂದು ದುಷ್ಕರ್ಮಿ ಬರೆದಿದ್ದು, ಅದನ್ನು ಮುಂಬೈ ಪೊಲೀಸರ ಟ್ವಿಟ್ಟರ್ ಖಾತೆಗೆ ಕಳುಹಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪೊಲೀಸರು ಸಂದೇಶ ಸ್ವೀಕರಿದ ಬಳಿಕ ಅಲರ್ಟ್ ಆಗಿ ಸಂಬಂಧಪಟ್ಟ ವ್ಯಕ್ತಿಯ ಖಾತೆಯನ್ನು ಪರಿಶೀಲಿಸಿದ್ದಾರೆ. ಬಳಿಕ ಆರೋಪಿಯನ್ನು ಗುರುತಿಸಿ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಮರಗಳು ಉರುಳಿ ಬಿದ್ದಿದ್ದಕ್ಕೆ ಕಾರಣ ಸಿಕ್ತು

  • ವಿಮಾನ ನಿಲ್ದಾಣದಲ್ಲಿ ಬ್ಲಾಸ್ಟ್- ತಪ್ಪಾಗಿ ಅರ್ಥೈಸಿಕೊಂಡ ಇಂಡಿಗೋ ಸಿಬ್ಬಂದಿಯಿಂದ ಅಚಾತುರ್ಯ

    ವಿಮಾನ ನಿಲ್ದಾಣದಲ್ಲಿ ಬ್ಲಾಸ್ಟ್- ತಪ್ಪಾಗಿ ಅರ್ಥೈಸಿಕೊಂಡ ಇಂಡಿಗೋ ಸಿಬ್ಬಂದಿಯಿಂದ ಅಚಾತುರ್ಯ

    ಭೋಪಾಲ್: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿಯೊಬ್ಬರು ಇಂಗ್ಲಿಷ್ ಶಬ್ದವನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲಕಾಲ ಭಯದ ವಾತಾವರಣ ನಿರ್ಮಾಣವಾದ ಘಟನೆ ಭೋಪಾಲ್‌ನ ರಾಜಾ ಭೋಜ್‌ನಲ್ಲಿ ನಡೆದಿದೆ.

    ಮಹಿಳಾ ಸಿಬ್ಬಂದಿ ಬ್ಯಾಲಸ್ಟ್ (ನಿಲುಭಾರ, ವಾಹನ ಅಥವಾ ರಚನೆಗೆ ಸ್ಥಿರತೆ ಒದಗಿಸಲು ಬಳಸುವ ವಸ್ತು) ಎಂಬ ಪದವನ್ನು ಬ್ಲಾಸ್ಟ್ ಎಂದು ತಪ್ಪಾಗಿ ಕೇಳಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ(Airport) ಬೆದರಿಕೆ ಇದೆ ಎಂದು ಅಲ್ಲಿನ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ.

    ಟಿಕೆಟ್ ಕೌಂಟರ್‌ಗೆ ವಿಮಾನದ ಮೂಲಕ ಬ್ಯಾಲಸ್ಟ್‌ನ್ನು ತಲುಪಿಸುವ ಬಗ್ಗೆ ಕರೆ ಬಂದಿತ್ತು. ಈ ಬಗ್ಗೆ ಇಂಡಿಗೋ ಸಿಬ್ಬಂದಿಯು ಬ್ಯಾಲಸ್ಟ್‌ನ್ನು ಬ್ಲಾಸ್ಟ್ ಎಂದು ತಪ್ಪಾಗಿ ಅಥೈಸಿಕೊಂಡಿದ್ದಾರೆ. ಇದಾದ ಬಳಿಕ ಆ ಸಿಬ್ಬಂದಿ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಗೆ(ಬಿಎಟಿಸಿ) ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರೆಯನ್ನು ಪರಿಶೀಲಿಸಿದ ಬಿಎಟಿಸಿ ಬ್ಯಾಲೆಸ್ಟ್‌ನ್ನು ಬ್ಲಾಸ್ಟ್‌ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 7 ಮಂದಿ ಸಾವು

    ಈ ಬಗ್ಗೆ ವಿಮಾನ ನಿಲ್ದಾಣ ನಿರ್ದೇಶಕ ಅಮೃತ್ ಮಿಂಜ್ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಕೆಲಕಾಲ ತುರ್ತು ಪರಿಸ್ಥಿತಿ ಉಂಟಾಗಿತ್ತು. ಆದರೆ ಬ್ಯಾಲಸ್ಟ್ ಪದವನ್ನು ತಪ್ಪಾಗಿ ಅಥೈಸಿಕೊಂಡಿದ್ದರು. ಇದರಿಂದಾಗಿ ಈ ರೀತಿ ಅಚಾತುರ್ಯ ಉಂಟಾಗಿದೆ. ಈ ರೀತಿಯ ಅಚಾತುರ್ಯಕ್ಕೆ ಹಾಗೂ ಜನರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿದ್ದಕ್ಕೆ ಕ್ಷಮೆಯಾಚಿಸಿದರು. ಇದನ್ನೂ ಓದಿ: ದಿನೇಶ್ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆ – ಪ್ರಕರಣ ದಾಖಲು

    Live Tv
    [brid partner=56869869 player=32851 video=960834 autoplay=true]

  • ಅಮಿತ್ ಶಾ ಆಗಮನದ ವೇಳೆ ಕೇಬಲ್ ವಯರ್ ಸ್ಫೋಟ – ವರದಿ ಕೇಳಿದ ಗೃಹ ಸಚಿವಾಲಯ

    ಅಮಿತ್ ಶಾ ಆಗಮನದ ವೇಳೆ ಕೇಬಲ್ ವಯರ್ ಸ್ಫೋಟ – ವರದಿ ಕೇಳಿದ ಗೃಹ ಸಚಿವಾಲಯ

    ಬೆಂಗಳೂರು: ಅಮಿತ್ ಶಾ ಬೆಂಗಳೂರಿಗೆ ಬಂದ ದಿನ ಕೇಬಲ್ ವಯರ್ ಜಂಕ್ಷನ್ ಸ್ಫೋಟಗೊಂಡ ಬಗ್ಗೆ ಕಾರಣ ನೀಡಿ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಸರ್ಕಾರವನ್ನು ಕೇಳಿದೆ.

    ಕೇಂದ್ರ ಗೃಹ ಇಲಾಖೆ ವರದಿ ಕೇಳಿರುವ ಹಿನ್ನೆಲೆ ಪೊಲೀಸರು ಘಟನೆಯ ಮೂಲವನ್ನು ಬೆನ್ನು ಹತ್ತಿ, ಸುಟ್ಟ ಕೇಬಲ್ ವಯರ್‌ಗಳನ್ನು ಪ್ಯಾಕ್ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್)ಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ಅಷ್ಟೇ ಅಲ್ಲದೇ ವಸಂತನಗರದ ಕೇಬಲ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಉಸ್ತುವಾರಿಯ ಬಗ್ಗೆ ವರದಿ ನೀಡುವಂತೆ ಬೆಸ್ಕಾಂಗೆ ಪೊಲೀಸರು ಪತ್ರ ಬರೆದಿದ್ದಾರೆ. ಬೆಸ್ಕಾಂ ಹಾಗೂ ಎಫ್‍ಎಸ್‍ಎಲ್ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿದೆ. ಇದನ್ನೂ ಓದಿ: ಕುಂಭಾಭಿಷೇಕಕ್ಕೆ ಮಸೀದಿಯಿಂದ ಫ್ಲೆಕ್ಸ್- ಸಮಾನತೆ ಸಾರಿದ ಕಾಫಿನಾಡ ಮುಸ್ಲಿಮರು

    ಶುಕ್ರವಾರ ಏಪ್ರಿಲ್ 1ರ ಸಂಜೆ 4:30 ರ ಸುಮಾರಿಗೆ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದ ದಿನ ಕೇಬಲ್ ವಯರ್ ಜಂಕ್ಷನ್ ಬ್ಲಾಸ್ಟ್ ಆಗಿತ್ತು. ಈ ವೇಳೆ ಪೊಲೀಸರು ಕೇಬಲ್ ವಯರ್ ಜಂಕ್ಷನ್ ಬ್ಲಾಸ್ಟ್ ಆಗುತ್ತಿದ್ದಂತೆ ಅಮಿತ್ ಶಾ ಸಂಚರಿಸುವ ಮಾರ್ಗವನ್ನು ಬದಲಿಸಿದ್ದರು. ಅವರು ಸಹಕಾರ ಇಲಾಖೆಯ ಕಾರ್ಯಕ್ರಮಕ್ಕೆ ವಸಂತನಗರ ಮಾರ್ಗವಾಗಿ ಸಂಚರಿಸಬೇಕಿತ್ತು.

  • ಕಾರಿನ ಟೈರ್ ಬ್ಲಾಸ್ಟ್- ದಂಪತಿ ಸಾವು, 5 ವರ್ಷದ ಮಗು ಪಾರು

    ಕಾರಿನ ಟೈರ್ ಬ್ಲಾಸ್ಟ್- ದಂಪತಿ ಸಾವು, 5 ವರ್ಷದ ಮಗು ಪಾರು

    ತುಮಕೂರು: ಚಲಿಸುತಿದ್ದ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ದಂಪತಿ ಸಾವನಪ್ಪಿ, 5 ವರ್ಷದ ಮಗುವಿಗೆ ಗಾಯವಾಗಿರುವ ಘಟನೆ ನಡೆದಿದೆ.

    ಶಿರಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿ ಅವಘಡ ಸಂಭವಿಸಿದೆ. ಧಾರವಾಡ ಮೂಲದ ಶಿಲ್ಪಾ(32), ವಿನಯ್ ಸ್ವಾಮಿ (35) ಮೃತ ದಂಪತಿ. ಧಾರವಾಡದಿಂದ ಬೆಂಗಳೂರಿಗೆ ಹೋಗುವಾಗ ದಾರಿ ಮಧ್ಯೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!

    ಗಾಯಗೊಂಡ 5 ವರ್ಷದ ಮಗುವನ್ನು ಸ್ಥಳೀಯರು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟ – 6 ಮಂದಿಗೆ ಗಾಯ

    ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟ – 6 ಮಂದಿಗೆ ಗಾಯ

    ಬೆಂಗಳೂರು: ಇಲ್ಲಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ 06 ಮಂದಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೆಐಎಎಲ್ ನ ಎರಡನೇ ಟರ್ಮಿನಲ್ ಗಾಗಿ ರಸ್ತೆ ನಿರ್ಮಾಣ ಕಾರ್ಯ ಬಲು ಜೋರಾಗಿ ಸಾಗಿದ್ದು, ಈ ವೇಳೆ ಕಾರ್ಗೋ ಕಾಂಪ್ಲೆಕ್ಸ್ ಮುಂಭಾಗದ ರಸ್ತೆಯಲ್ಲಿ ನ ಅಂಡರ್ ಪಾಸ್ ಓಳಗೆ ರಸ್ತೆಗೆ ಕಪ್ಪು ಬಿಳಿ ಸೂಚಕ ಸಂಕೇತಗಳ ಪಟ್ಟಿಯನ್ನ ಬಳಿಯಕಾಗುತ್ತಿತ್ತು. ಇದಕ್ಕಾಗಿ ಕ್ಯಾಂಟರ್ ಒಂದರಲ್ಲಿ ಕಪ್ಪು ಬಳಿ ಬಣ್ಣವನ್ನ ಬಿಸಿ ಮಾಡುವ ಸಿಲಿಂಡರ್ ಇಟ್ಟಿದ್ದು ಆಕಸ್ಮಿಕವಾಗಿ ಸಿಲಿಂಡರ್ ಬ್ಲಾಸ್ಟ್ ಆಗಿದೆ.

    ರಭಸಕ್ಕೆ ಕ್ಯಾಂಟರ್ ಗೂ ಸಹ ಬೆಂಕಿ ತಗುಲಿದ್ದು ಘಟನೆಯಲ್ಲಿ 06 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅವಿನಾಶ್, ಸಿರಾಜ್, ಅಜಯ್, ನಾಗೇಶ್ ರಾವ್, ಪ್ರಶಾಂತ್, ಗೌತಮ್ ಗಾಯಗೊಂಡವರು. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರ ಎನ್ನಲಾಗುತ್ತಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

     

    ಈ ಸಂಬಂಧ ಕೇಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಾಮಾರಿದ್ರೆ KRS ಡ್ಯಾಂ ಒಡೆದು ಹೋಗುತ್ತೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆತಂಕ

    ಯಾಮಾರಿದ್ರೆ KRS ಡ್ಯಾಂ ಒಡೆದು ಹೋಗುತ್ತೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆತಂಕ

    ಮೈಸೂರು: ಶಿವಮೊಗ್ಗದಲ್ಲಿ ನಡೆದ ಗಣಿ ಸ್ಫೋಟದಂತೆ ಮಂಡ್ಯದ ಕೆ.ಆರ್.ಎಸ್ ಡ್ಯಾಂ ಬಳಿಯೂ ಸ್ಫೋಟ ನಡೆಯಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದ್ದಾರೆ.

    ಕೃಷ್ಣರಾಜ ಸಾಗರ ಅಣೆಕಟ್ಟು ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಡ್ಯಾಂ ನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿ ಇಲ್ಲವಾದರೆ ಕೆ ಆರ್ ಎಸ್‍ಗೆ ಅಪಾಯವಿದೆ. ಗಣಿಗಾರಿಕೆ ಮುಂದುವರಿದರೆ ಡ್ಯಾಂ ಒಡೆದು ಹೋಗುತ್ತದೆ. ಈ ಬಗ್ಗೆ ಸರ್ಕಾರದ ಅಂಗಸಂಸ್ಥೆ ವರದಿ ಕೊಟ್ಟಿದೆ. ರಾಜ್ಯ ನೈಸರ್ಗಿಕ ವಿಕೋಪ ತಡೆ ಸಂಸ್ಥೆ ವರದಿ ನೀಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

    ಅಕ್ರಮವಾಗಿ ನಡೆಯುವ ಗಣಿಗಾರಿಕೆ ಸಕ್ರಮ ಮಾಡಿಕೊಳ್ಳಿ ಎಂಬ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೂ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಯಡಿಯೂರಪ್ಪ ಅವರದ್ದು ನಾನ್‍ಸೆನ್ಸ್ ಹೇಳಿಕೆ. ಇದು ನಿಜಕ್ಕೂ ನಾಚಿಕೆಗೇಡಿನ ಹೇಳಿಕೆ. ಇದು ಮನೆಗಳ ಅಕ್ರಮ ಸಕ್ರಮ ಯೋಜನೆಯಲ್ಲ ಇದು ಗಣಿಗಾರಿಕೆ ಎಂದ ಅವರು, ಶಿವಮೊಗ್ಗದ ಸ್ಫೋಟಕ್ಕೆ ಸರ್ಕಾರವೇ ಹೊಣೆ ಎಂದು ಗಂಭೀರ ಆರೋಪ ಮಾಡಿದರು.

    ಅಕ್ರಮ ಗಣಿಗಾರಿಕೆಯಲ್ಲಿ ಸರ್ಕಾರ ಶಾಮೀಲಾಗಿದೆ. ಅಕ್ರಮ ಗಣಿಗಾರಿಕೆಯನ್ನು ಹೇಗೆ ಸಕ್ರಮ ಮಾಡಬಹುದು..? ಶಿವಮೊಗ್ಗದ ಗಣಿಗಾರಿಕೆಯಲ್ಲಿ ಬಿಜೆಪಿ ಪ್ರಮುಖರಿದ್ದಾರೆ. ಬಂಧಿಸಿರುವ ಆರೋಪಿಗಳಿಗೂ ಸಚಿವ ಈಶ್ವರಪ್ಪ ಮಗನಿಗೆ ಏನು ಸಂಬಂಧ ಇದೆ? ಅದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು. ಅಲ್ಲದೆ 1350 ಕೆಜಿ ಸ್ಪೋಟಕ ಶಿವಮೊಗ್ಗಕ್ಕೆ ಹೇಗೆ ಬಂತು ಎಂದು ಅವರು ಪ್ರಶ್ನಿಸಿದರು.

  • ರಿಪೇರಿ ವೇಳೆ ಬ್ಲಾಸ್ಟ್ – ಹೊತ್ತಿ ಉರಿದ ಮೊಬೈಲ್

    ರಿಪೇರಿ ವೇಳೆ ಬ್ಲಾಸ್ಟ್ – ಹೊತ್ತಿ ಉರಿದ ಮೊಬೈಲ್

    ಕೋಲಾರ: ರಿಪೇರಿ ಮಾಡುತ್ತಿದ್ದ ವೇಳೆ ಬ್ಲಾಸ್ಟ್ ಆಗಿ ಮೊಬೈಲ್ ಹೊತ್ತಿ ಉರಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿರುವ ಸಾಯಿರಾಂ ಎಂಟರ್ ಪ್ರೈಸಸ್‍ನಲ್ಲಿ ನಡೆದಿದೆ.

    ಅಂಗಡಿಯಲ್ಲಿ ಕೆಲಸ ಮಾಡುವ ಸುರೇಶ್ ಎಂಬುವರು ಇಂದು ಮುಂಜಾನೆ 10.30ರ ಸಮಯದಲ್ಲಿ ಚಾರ್ಜ್ ಹಾಕಿ ರಿಪೇರಿ ಮಾಡುತ್ತಿರುವ ವೇಳೆ ಈ ಘಟನೆ ನಡೆದಿದ್ದು, ಕ್ಷಿಯೊಮಿ ಕಂಪನಿಯ ಮೊಬೈಲ್ ಹೊತ್ತಿ ಉರಿಯುತ್ತಿರುವ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಮಡಿವಾಳ ಗ್ರಾಮದ ವರುಣ್ ಕುಮಾರ್ ಎಂಬುವವರಿಗೆ ಸೇರಿದ ಮೊಬೈಲ್ ಇದಾಗಿದ್ದು, ರಿಪೇರಿಗೆಂದು ನೀಡಿದ್ದರು. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.