Tag: ಬ್ಲಾಕ್ ಮಾಂಬಾ

  • ಬ್ರೇಕ್‍ಅಪ್ ನೋವಲ್ಲಿ ಡೆಡ್ಲಿ ಬ್ಲಾಕ್ ಮಾಂಬಾ ಹಾವಿನಿಂದ ಕಚ್ಚಿಸಿಕೊಂಡು ಸಾವಿನ ವಿಡಿಯೋ ಲೈವ್ ಮಾಡ್ದ

    ಬ್ರೇಕ್‍ಅಪ್ ನೋವಲ್ಲಿ ಡೆಡ್ಲಿ ಬ್ಲಾಕ್ ಮಾಂಬಾ ಹಾವಿನಿಂದ ಕಚ್ಚಿಸಿಕೊಂಡು ಸಾವಿನ ವಿಡಿಯೋ ಲೈವ್ ಮಾಡ್ದ

    31 ವರ್ಷದ ಉರಗ ತಜ್ಞನೊಬ್ಬ ತನ್ನ ಪತ್ನಿಯಿಂದ ದೂರವಾಗಿದ ನೋವಲ್ಲೇ ತಾನೇ ಸಾಕಿದ್ದ ಅತ್ಯಂತ ವಿಷಕಾರಿ ಬ್ಲಾಕ್ ಮಾಂಬಾ ಹಾವಿನಿಂದ ಕಚ್ಚಿಸಿಕೊಂಡಿದ್ದು, ಸಾವಿನ ವಿಡಿಯೋವನ್ನ ಲೈವ್ ಸ್ಟ್ರೀಮಿಂಗ್ ಮಾಡಿದ್ದಾನೆ.

    ಆಸ್ರ್ಲಾನ್ ವಾಲೀವ್ ತನ್ನ ಸಾವಿನ ವಿಡಿಯೋವನ್ನ ಲೈವ್ ಮಾಡುವ ವೇಳೆ ತನ್ನ ಮಾಜಿ ಪತ್ನಿಗೆ ಕರೆ ಮಾಡಿ ಎಂದು ನೋಡುಗರನ್ನ ಕೇಳಿಕೊಂಡಿದ್ದಾನೆ. ಹಾವಿನಿಂದ ಕಚ್ಚಿಸಿಕೊಂಡ ಪರಿಣಾಮ ಆತನ ಸ್ಥಿತಿ ಹದಗೆಡೋದು ವಿಡಿಯೋದಲ್ಲಿ ಸೆರೆಯಾಗಿದೆ. ಹಾವಿನ ವಿಷದಿಂದಾಗಿ ಆತನ ಉಸಿರಾಟ ಜೋರಾಗಿದೆ. ಕಣ್ಣುಗಳು ತಿರುಗಲು ಶುರುವಾಗಿದ್ದು, ಕೈ ಜಡಗಟ್ಟಿದೆ.

    ಆಸ್ರ್ಲಾನ್ ರಷ್ಯಾದ ವಿಡಿಯೋ ಬ್ಲಾಗರ್ ಆಗಿದ್ದು, ಮಾಜಿ ಝೂ ನೌಕರನಾಗಿದ್ದ. ಆಸ್ರ್ಲಾನ್ ಮತ್ತು ಆತನ ಪತ್ನಿ ಕಾಟ್ಯಾ ಯೂಟ್ಯೂಬ್ ಚಾನೆಲ್‍ವೊಂದನ್ನ ನಡೆಸುತ್ತಾ ಫೇಮಸ್ ಆಗಿದ್ರು. ಹಾವು ಮತ್ತು ಬೆಕ್ಕಿನ ಬಗ್ಗೆ ವಿಡಿಯೋಗಳನ್ನ ಅಪ್‍ಲೋಡ್ ಮಾಡ್ತಾ ಸಾವಿರಾರು ಫಾಲೋವರ್‍ಗಳನ್ನೂ ಹೊಂದಿದ್ರು.

    ಹಾವು ಕಚ್ಚುವ ನಿರ್ದಿಷ್ಟ ಸಮಯ ಹಾಗೂ ಸಾಯುವ ಸಮಯವನ್ನ ತೋರಿಸಲಾಗಿಲ್ಲ. ಆದ್ರೆ ಆತ ತನ್ನ ಕೈ ಮೇಲೆ ಹಾವು ಕಚ್ಚಿರೋ ಗಾಯವನ್ನ ತೋರಿಸಿದ್ದಾನೆ. ಕೊನೆಯಲ್ಲಿ ಆತ ಚೇರ್‍ನಿಂದ ಮೇಲೆದ್ದು ಹೋಗಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾನೆ.

    ಆಸ್ರ್ಲಾನ್ ತನ್ನ ಹೆಂಡತಿ ತನಗೆ ಮೋಸ ಮಾಡಿದ್ದಳೆಂದು ಆರೋಪ ಮಾಡಿದ್ದಾಗಿ ಆತನ ಸ್ನೇಹಿತರು ಹೇಳಿದ್ದಾರೆ. ಆದ್ರೆ ಆಸ್ರ್ಲಾನ್ ಆಕೆಗೆ ಥಳಿಸಿ ಜಗಳವಾಗಿತ್ತು ಎಂದು ವರದಿಯಾಗಿದೆ. ಕಳೆದ ವಾರ ಆಸ್ರ್ಲಾನ್ ಸಾರ್ವಜನಿಕವಾಗಿಯೇ ತನ್ನ ವರ್ತನೆ ಬಗ್ಗೆ ಕ್ಷಮೆ ಕೇಳಿದ್ದ. ಆದ್ರೆ ಆಕೆ ಆಗಲೇ ಡಿವೋರ್ಸ್ ಪಡೆದು ಹೊಸ ರಿಲೇಷನ್‍ಶಿಪ್‍ನಲ್ಲಿದ್ದಳು.

    ಆಸ್ರ್ಲಾನ್ ತನ್ನ ಸಾವಿನ ವಿಡಿಯೋ ಲೈವ್ ಮಾಡುತ್ತಾ ಮಾಜಿ ಪತ್ನಿ ಕಾಟ್ಯಾಗೆ ಕರೆ ಮಾಡಿ ಎಂದು ಆಕೆಯ ಫೋನ್ ನಂಬರ್ ಹೇಳಿದ್ದ. ಕೊನೆಗೆ ನೋಡುಗರಲ್ಲೊಬ್ಬರು ಆಂಬುಲೆನ್ಸ್‍ಗೆ ಕರೆ ಮಾಡಿದ್ದರು. ಆಂಬುಲೆನ್ಸ್ ಸ್ಥಳಕ್ಕೆ ಬಂದು ಆಸ್ರ್ಲಾನ್ ನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಚಿಕಿತ್ಸೆಯಿಂದ ಆತನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

    ಈವರೆಗೆ ಆಸ್ರ್ಲಾನ್ ಪತ್ನಿ ಈ ವಿಡಿಯೋ ಬಗ್ಗೆ ಸಾರ್ವಜನಿಕವಾಗಿ ಏನೂ ಮಾತನಾಡಿಲ್ಲ ಎಂದು ವರದಿಯಾಗಿದೆ.

    https://www.youtube.com/watch?v=viyAoQKRNlM

  • ಮನೆಯಲ್ಲಿ ಪ್ರತ್ಯಕ್ಷವಾದ ಜಗತ್ತಿನ ಅತ್ಯಂತ ವಿಷಕಾರಿ ಬ್ಲಾಕ್ ಮಾಂಬಾ ಹಾವನ್ನ ಹೇಗೆ ಹಿಡಿದರು ನೋಡಿ

    ಮನೆಯಲ್ಲಿ ಪ್ರತ್ಯಕ್ಷವಾದ ಜಗತ್ತಿನ ಅತ್ಯಂತ ವಿಷಕಾರಿ ಬ್ಲಾಕ್ ಮಾಂಬಾ ಹಾವನ್ನ ಹೇಗೆ ಹಿಡಿದರು ನೋಡಿ

    ಕೇಪ್‍ಟೌನ್: ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯೊಬ್ಬರ ಮನೆಯಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ಬ್ಲಾಕ್ ಮಾಂಬಾ ಕಾಣಿಸಿಕೊಂಡಿದ್ದು ಅದನ್ನ ಉರಗ ತಜ್ಞರೊಬ್ಬರು ರಕ್ಷಣೆ ಮಾಡಿದ್ದಾರೆ.

    ಕ್ವಾಝುಲು ನಾಟಲ್ ಆಂಫಿಬಿಯನ್ ಅಂಡ್ ರೆಪ್ಟೈಲ್ ಕನ್ಸರ್ವೇಷನ್‍ನ ಉರಗ ತಜ್ಞ ನಿಕ್ ಇವಾನ್ಸ್ ಈ ಹಾವನ್ನ ರಕ್ಷಣೆ ಮಾಡಿದ್ದಾರೆ. ಈ ಮನೆಯಲ್ಲಿ ಮೊಲ ಹಾಗೂ ಪಕ್ಷಿಗಳನ್ನ ಸಾಕಿದ್ದ ಕಾರಣ ಹಾವು ಮನೆಯೊಳಗೆ ಬಂದಿರಬಹುದು ಎಂದು ಹೇಳಲಾಗಿದೆ.

    ಮನೆಯ ಟಿವಿ ಸ್ಟ್ಯಾಂಡ್ ಕೆಳಗಿದ್ದ ಹಾವನ್ನ ಉದ್ದವಾದ ಕೋಲಿನಂತಹ ಸಾಧನದಿಂದ ಹಿಡಿದು ಹೊರಗೆ ಎಳೆಯಲು ಯತ್ನಿಸಿದ್ದಾರೆ. ಈ ವೇಳೆ ಹಾವು ಬುಸುಗುಟ್ಟಿದ್ದು, ಅದರ ಕಪ್ಪು ಬಣ್ಣದ ಬಾಯಿಯ ಒಳಭಾಗ ಎಂಥವರಿಗೂ ಭಯ ಹುಟ್ಟಿಸುತ್ತದೆ. ಇದರ ವಿಡಿಯೋವನ್ನ ನ್ಯಾಷನಲ್ ಜಿಯಾಗ್ರಫಿಕ್ ವಾಹಿನಿಯನವರು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದಾರೆ

    ಬಯಲಿನಲ್ಲಾದ್ರೆ ಅಥವಾ ಅವಕಾಶ ಸಿಕ್ಕರೆ ಮಾಂಬಾ ಹಾವುಗಳು ಯಾವಾಗ್ಲೂ ಕಾದಾಡೋ ಬದಲು ಆ ಸ್ಥಳದಿಂದ ಪರಾರಿಯಾಗುತ್ತವೆ ಅಂತ ಇವಾನ್ಸ್ ನ್ಯಾಷನಲ್ ಜಿಯಾಗ್ರಫಿಕ್‍ಗೆ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಅವು ಎದುರಾಳಿಯ ಕಡೆಗೆ ಬಾಯಿ ತೆರೆದು ದಿಟ್ಟಿಸಿ ನೋಡುತ್ತವೆ ಎಂದಿದ್ದಾರೆ.

    ಇವಾನ್ಸ್ ಈ ಅತ್ಯಂತ ವಿಷಕಾರಿ ಹಾವನ್ನು ಹಿಡಿಯಲು ಹೋದಾಗ ಅದು ಅಲ್ಲಿಂದ ನುಸುಳಿಕೊಂಡು ಹೋಗಲು ಯತ್ನಿಸಿದೆ. ಆದ್ರೆ ಇವಾನ್ಸ್ ಅದನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ ಬರಿಗೈಯ್ಯಲ್ಲೇ ಹಾವನ್ನ ಹಿಡಿದು ಕ್ಯಾಮೆರಾ ಕಡೆಗೆ ತೋರಿಸಿದ್ದಾರೆ.

    ಈ ಹಾವು ಸುಮಾರು 8 ಅಡಿಯಷ್ಟು ಉದ್ದವಿದ್ದು, ಇದಕ್ಕೆ ಮೈಕ್ರೋ ಚಿಪ್ ಹಾಕಿದ ನಂತರ ಕಾಡಿಗೆ ಬಿಡಲಾಗಿದೆ ಎಂದು ವರದಿಯಾಗಿದೆ.