Tag: ಬ್ಲಡ್ ಸ್ಯಾಂಪಲ್

  • ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ಬೆಂಗಳೂರು: ಇಲ್ಲಿನ ಸಿಂಗೇನ ಅಗ್ರಹಾರ ಬಳಿಯ ಜಿಆರ್ ಫಾರ್ಮ್‍ಹೌಸ್‍ನಲ್ಲಿ ನಡೀತಿದ್ದ ರೇವ್‍ಪಾರ್ಟಿ (Rave Party) ಇದೀಗ ತೆಲುಗು ನಟಿ ಹೇಮಾಗೆ ಸಂಕಷ್ಟ ತಂದೊಡ್ಡಿದೆ.

    ತೆಲುಗು ನಟಿ ಹೇಮಾ (Telugu Actress Hema) ಪಾರ್ಟಿಯಲ್ಲಿ ಇದ್ದದ್ದು ಈಗ ಜಗಜ್ಜಾಹೀರವಾಗಿದೆ. ಈ ಕುರಿತು ಖುದ್ದು ಪೊಲೀಸ್ ಆಯುಕ್ತ ದಯಾನಂದ್, ತೆಲುಗಿನ ಖ್ಯಾತ ನಟಿ ಪಾರ್ಟಿಯಲ್ಲಿ ಇದ್ದಿದ್ದನ್ನು ಬಹಿರಂಗಗೊಳಿಸಿದ್ದಾರೆ. ಇನ್ನೂ ಪಾರ್ಟಿಯಲ್ಲಿ ಇದ್ದರೂ ಕೂಡ, ನಾನು ಹೈದ್ರಾಬಾದ್‍ನಲ್ಲಿದ್ದೇನೆ ಅಂತ ನಾಟಕವಾಡಿದ್ದ ನಟಿ ಹೇಮಾಗೆ ಈಗ ಸಂಕಷ್ಟ ಎದುಗುವ ಸಾಧ್ಯತೆ ಇದೆ.

    ಸ್ಟೇಷನ್ ಬೇಲ್ ಮೇಲೆ ರಕ್ತದ ಮಾದತಿ ಕೊಟ್ಟು ಹೋಗಿರೋ ನಟಿಗೆ ಪೊಲೀಸರು ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದ್ದಾರೆ ಅನ್ನೋದು ಗೊತ್ತಾಗಿದೆ. ರೇವ್ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ ತೆಲುಗು ನಟಿ ಹೇಮಾಗೆ ಪೊಲೀಸರು ಬ್ಲಡ್ ಸ್ಯಾಂಪಲ್ ಪಡೆದು ಕಳಿಸಿದ್ದಾರೆ. ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಬಂದರೆ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ. ಡ್ರಗ್ಸ್ ಸೇವನೆ ಮಾಡಿರೋದು ಹೇರ್ ಪಾಲಿಕಲ್ ಟೆಸ್ಟ್ ನಲ್ಲಿ ಗೊತ್ತಾಗಾಲಿದೆ. ಹಾಗಾಗಿ ಪೊಲೀಸ್ ಹೇರ್ ಪಾಲಿಕ್ ಟೆಸ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿದ್ದು ನಿಜ: ಪೊಲೀಸ್ ಕಮಿಷನರ್ ಸ್ಪಷ್ಟನೆ

  • ಕೊರೊನಾ ಬ್ಲಡ್ ಸ್ಯಾಂಪಲ್ ಕಿತ್ತೊಯ್ದು ರಂಪಾಟ ಮಾಡಿದ ಕೋತಿ

    ಕೊರೊನಾ ಬ್ಲಡ್ ಸ್ಯಾಂಪಲ್ ಕಿತ್ತೊಯ್ದು ರಂಪಾಟ ಮಾಡಿದ ಕೋತಿ

    ಲಕ್ನೋ: ಕೊರೊನಾ ಶಂಕಿತನ ಬ್ಲಡ್ ಸ್ಯಾಂಪಲ್ ಕಿತ್ತುಕೊಂಡು ಹೋಗಿ ಕೋತಿಯೊಂದು ರಂಪಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಇಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಲ್ಯಾಬ್‍ನಲ್ಲಿ ಕೆಲಸ ಮಾಡುವ ನೌಕರ ಬ್ಲಡ್ ಸ್ಯಾಂಪಲ್ ಅನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಸ್ಪತ್ರೆ ಆವರಣದ ಮರದ ಮೇಲೆ ಇದ್ದ ಕೋತಿ ಬಂದು ಅದನ್ನು ಕಿತ್ತುಕೊಂಡು ಹೋಗಿ ರಂಪಾಟ ಮಾಡಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮೀರತ್‍ನ ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಎಸ್ ಕೆ ಗರ್ಗ್, ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ನಮ್ಮ ಲ್ಯಾಬ್ ಸಿಬ್ಬಂದಿಯನ್ನು ವಿಚಾರಣೆ ಮಾಡಿದ್ದೇವೆ. ಕೋತಿ ಕಿತ್ತುಕೊಂಡು ಹೋಗಿರುವ ಸ್ಯಾಂಪಲ್ ಕೊರೊನಾ ಸೋಂಕಿತ ಗಂಟಲು ದ್ರವದ ಮಾದರಿಯನ್ನಲ್ಲ. ಬದಲಿಗೆ ನಾವು ಸಾಂಪ್ರದಾಯಕವಾಗಿ ಮಾಡುವ ಕೊರೊನಾ ಟೆಸ್ಟ್ ನ ಬ್ಲಡ್ ಸ್ಯಾಂಪಲ್ ಎಂದು ಹೇಳಿದ್ದಾರೆ.

    ಕೊರೊನಾ ಸ್ಯಾಂಪಲ್‍ಗಳನ್ನು ಈ ರೀತಿಯಲ್ಲಿ ಕೈಯಲ್ಲಿ ಇಟ್ಟುಕೊಂಡು ಹೋಗುವುದಿಲ್ಲ. ಅವುಗಳನ್ನು ಒಂದು ಬಾಕ್ಸ್ ನಲ್ಲಿ ಇಟ್ಟು ಜೋಪಾನವಾಗಿ ರವಾನೆ ಮಾಡಲಾಗುತ್ತದೆ. ಕೋತಿ ಕಿತ್ತುಕೊಂಡು ಹೋಗಿರುವ ರಕ್ತದ ಮಾದರಿಯಲ್ಲಿ ಕೊರೊನಾ ಸೋಂಕು ಇರಲಿಲ್ಲ. ನಾವು ಚೆಕ್ ಮಾಡಿದ್ದೇವೆ. ಆದ್ದರಿಂದ ಯಾರೂ ಆತಂಕ ಪಡಬೇಕಿಲ್ಲ. ಜೊತೆಗೆ ನಾವು ಈ ಬಗ್ಗೆ ತನಿಖೆಗೆ ಅದೇಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಈ ಪ್ರಕರಣದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ ಲ್ಯಾಬ್ ನೌಕರನಿಗೆ ನೋಟಿಸ್ ನೀಡಲಾಗಿದ್ದು, ಆತನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಆತ ಕೋತಿ ಸ್ಯಾಂಪಲ್ ಕಿತ್ತುಕೊಂಡಾಗ ಅದನ್ನು ಬಂದು ಅಧಿಕಾರಿಗಳಿಗೆ ತಿಳಿಸುವ ಬದಲು ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡು ತಮಾಷೆ ನೋಡಿದ್ದಕ್ಕೆ ಆಸ್ಪತ್ರೆಯ ಆಡಳಿತ ಆತನ ಮೇಲೆ ಕ್ರಮ ಕೈಗೊಳ್ಳಲಿದೆ ಎಂದು ಗರ್ಗ್ ತಿಳಿಸಿದ್ದಾರೆ.

  • ಠಾಣೆಯಿಂದ ದುನಿಯಾ ವಿಜಿ ಶಿಫ್ಟ್ – ಬ್ಲಡ್ ಸ್ಯಾಂಪಲ್ ಪಡೆದ ಪೊಲೀಸ್ರು

    ಠಾಣೆಯಿಂದ ದುನಿಯಾ ವಿಜಿ ಶಿಫ್ಟ್ – ಬ್ಲಡ್ ಸ್ಯಾಂಪಲ್ ಪಡೆದ ಪೊಲೀಸ್ರು

    ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಜನ ಸೇರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ ಪೊಲೀಸ್ ಠಾಣೆಯಿಂದ ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ.

    ಪೊಲೀಸರು ಯಾರಿಗೂ ಕಾಣದಂತೆ ವಿಜಿಯನ್ನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಇತ್ತ ಹಲ್ಲೆಗೊಳಗಾದ ಮಾರುತಿಗೌಡ ವಿಕ್ರಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಪಾನಿಪುರಿ ಕಿಟ್ಟಿ ಸಂಗಡಿಗರು ವಿಕ್ರಮ ಆಸ್ಪತ್ರೆಯ ಬಳಿ ಸೇರಿದ್ದಾರೆ. ಇದರಿಂದ ಠಾಣೆಯೆದುರು ಮತ್ತೆ ಜನ ಸೇರುವ ಸಾಧ್ಯತೆ ಇದ್ದು, ಮುಂಜಾಗೃತಾ ಕ್ರಮವಾಗಿ ಪೊಲೀಸ್ ಠಾಣೆಯ ಹಿಂಬಾಗಿಲ ಮೂಲಕ ದುನಿಯಾ ವಿಜಯ್ ಅವರನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಇದನ್ನೂ ಓದಿ: ಜಂಗ್ಲಿ ಮೇಲಿದೆ ಸಾಲು ಸಾಲು ಪ್ರಕರಣಗಳು!

    ವಿಜಿ ಬ್ಲಡ್ ಸ್ಯಾಂಪಲ್:
    ದುನಿಯಾ ವಿಜಿ ಗಾಂಜಾ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಹೈಗ್ರೌಂಡ್ಸ್ ಪೊಲೀಸರು ಶಂಕಿಸಿದ್ದಾರೆ. ಆದ್ದರಿಂದ ಬ್ಲಡ್ ಸ್ಯಾಂಪಲ್ ತೆಗೆದುಕೊಂಡು ಎಫ್‍ಎಸ್‍ಎಲ್‍ಗೆ ಪೊಲೀಸರು ಕಳುಹಿಸಿದ್ದಾರೆ. ಒಂದು ವೇಳೆ ಗಾಂಜಾ ಇರುವುದು ಪತ್ತೆಯಾದರೆ ಎನ್‍ಡಿಪಿಎಸ್ ಆಕ್ಟ್ ನಲ್ಲಿ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

    ಹೈಗ್ರೌಂಡ್ಸ್ ಸ್ಟೇಷನ್ ನಿಂದ ಕರೆತಂದು ವೈಯಾಲಿಕಾವಲ್ ನಲ್ಲಿ ದುನಿಯಾ ವಿಜಯ್ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ನಂತರ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದುನಿಯಾ ವಿಜಯ್ ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗಲಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಜಡ್ಜ್ ಮುಂದೆ ದುನಿಯಾ ವಿಜಯ್ ಹಾಜರುಪಡಿಸಲಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಧೀಶರ ಮುಂದೆ ಮನವಿ ಮಾಡುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=9HevyLtzMc0