Tag: ಬ್ಲಡ್ ಕ್ಯಾನ್ಸರ್

  • ದಾವಣಗೆರೆ | ಬ್ಲಡ್‌ ಕ್ಯಾನ್ಸರ್‌ನೊಂದಿಗೆ ಹೋರಾಡಿ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಫಸ್ಟ್ ಬಂದ ವಿದ್ಯಾರ್ಥಿನಿ

    ದಾವಣಗೆರೆ | ಬ್ಲಡ್‌ ಕ್ಯಾನ್ಸರ್‌ನೊಂದಿಗೆ ಹೋರಾಡಿ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಫಸ್ಟ್ ಬಂದ ವಿದ್ಯಾರ್ಥಿನಿ

    ದಾವಣಗೆರೆ: ಬ್ಲಡ್‌ ಕ್ಯಾನ್ಸರ್‌ನಿಂದ ಬಳಲಿದ್ದ ನಗರದ (Davanagere) ನಿಟ್ಟುವಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಎಸ್ಎಸ್ಎಲ್‌ಸಿ (SSLC Result) ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು, ಇಡೀ ರಾಜ್ಯದ ಜನರ ಮನಸ್ಸನ್ನು ಗೆದ್ದಿದ್ದಾಳೆ.

    ವಿದ್ಯಾರ್ಥಿನಿ ಶಾಂತ ನಿಟ್ಟುವಳ್ಳಿಯ ನಿವಾಸಿಯಾಗಿದ್ದು, 9 ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಆಕೆಗೆ ಬ್ಲಡ್ ಕ್ಯಾನ್ಸರ್ ಇದೆ ಎನ್ನುವುದು ಗೊತ್ತಾಗಿತ್ತು. ತಂದೆ ಗಾರೆ ಕೆಲಸ ಮಾಡುತ್ತಿದ್ದರೆ, ತಾಯಿ ಕೂಲಿ‌ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ಮಗಳಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸಾರ್ವಜನಿಕರು ಹಾಗೂ ಶಿಕ್ಷಕರ ಸಹಕಾರದಿಂದ 13 ಲಕ್ಷ ರೂ. ಖರ್ಚು ಮಾಡಿ ಗುಣಮಖ ಮಾಡಿದ್ದರು. ಇದನ್ನೂ ಓದಿ: ಚೆನ್ನೈಗೆ ಬಂದು ಶ್ರೀಲಂಕಾಗೆ ಹೋದ್ರಾ ಪಹಲ್ಗಾಮ್ ಉಗ್ರರು? – ಶ್ರೀಲಂಕಾ ಏರ್‌ಪೋರ್ಟಲ್ಲಿ ತಪಾಸಣೆ

    ಆರೋಗ್ಯ ಸಮಸ್ಯೆ ಇದ್ದರೂ ಓದಿನ ಕಡೆಗೆ ಸಾಕಷ್ಟು ಗಮನಹರಿಸಿದ್ದ ವಿದ್ಯಾರ್ಥಿನಿ, ಓದಿನಲ್ಲಿ ಬಹಳ ಮುಂದಿದ್ದಳು. ಏನಾದರೂ ಗೊಂದಲ ಇದ್ದರೆ ಶಿಕ್ಷಕರಿಗೆ ಕರೆ ಮಾಡಿ ಪರಿಹರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಳು. ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತೆಗೆದುಕೊಳ್ಳಬೇಕು ಎಂಬ ಪಣ ತೊಟ್ಟಿದ್ದ ಶಾಂತ, ಆರೋಗ್ಯದ ಸಮಸ್ಯೆಯನ್ನು ಲೆಕ್ಕಿಸದೇ ಓದಿ 94% ಪಡೆದುಕೊಂಡಿದ್ದಾಳೆ.

    ಒಂದು ವರ್ಷ ಶಾಲೆಗೆ ಗೈರಾಗಿ ಕಾಯಿಲೆಯಿಂದ ಗುಣಮುಖಳಾಗಿ ಈ ಸಾಧನೆ ಮಾಡಿದ್ದು, ಗ್ರಾಮಸ್ಥರು ಹಾಗೂ ಜಿಲ್ಲೆಯ ಜನ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲ | ಆಟೋಗೆ KSRTC ಬಸ್ ಡಿಕ್ಕಿ – ಮೂವರು ಸಾವು

  • ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟರ್‌ಗೆ ಬಿಸಿಸಿಐನಿಂದ 1 ಕೋಟಿ ಆರ್ಥಿಕ ನೆರವು!

    ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟರ್‌ಗೆ ಬಿಸಿಸಿಐನಿಂದ 1 ಕೋಟಿ ಆರ್ಥಿಕ ನೆರವು!

    ಮುಂಬೈ: ರಕ್ತದ ಕ್ಯಾನ್ಸರ್‌ನಿಂದ (Blood Cancer) ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಮುಖ್ಯ ಕೋಚ್ ಅಂಶುಮಾನ್ ಗಾಯಕ್ವಾಡ್ (Anshuman Gaekwad) ಅವರ ಚಿಕಿತ್ಸೆಗಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ 1 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿದೆ.

    ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ್ವಾಡ್‌ ಅವರಿಗೆ ತಕ್ಷಣವೇ ನಿಧಿ ಬಿಡುಗಡೆ ಮಾಡುವಂತೆ ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ (Jay Shah) ತಿಳಿಸಿದ್ದರು. ಅಲ್ಲದೇ ಗಾಯಕ್ವಾಡ್‌ ಅವರ ಕುಟುಂಬದ ಪರಿಸ್ಥಿತಿ ಪರಿಶೀಲಿಸಿ ನೆರವು ನೀಡಲಾಗುತ್ತಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಬಿಸಿಸಿಐ ಗಾಯಕ್ವಾಡ್‌ ಕುಟುಂಬದೊಂದಿಗೆ ಇರಲಿದೆ. ಅವರ ತ್ವರಿತ ಚಿಕಿತ್ಸೆಗೆ ಅಗತ್ಯ ಸಹಾಯ ಮಾಡಲಿದೆ ಎಂದು ಸಹ ಹೇಳಿದ್ದರು. ಈ ಹಿನ್ನೆಲೆಯಲ್ಲಿ 1 ಕೋಟಿ ರೂ. ಆರ್ಥಿಕ ನೆರವು ನೀಡಲು ಘೋಷಿಸಿರುವುದಾಗಿ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಗಾಯಕ್ವಾಡ್ ಅವರು ಟೀಂ ಇಂಡಿಯಾದ ಮಾಜಿ ನಾಯಕ ಡಿ.ಕೆ ಗಾಯಕ್ವಾಡ್ ಅವರ ಪುತ್ರ. ಪ್ರಸ್ತುತ ಅವರು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 71 ವರ್ಷ ವಯಸ್ಸಿನ ಗಾಯಕ್ವಾಡ್ 1975 ಮತ್ತು 1987ರ ನಡುವೆ ಭಾರತ ಕ್ರಿಕೆಟ್‌ ತಂಡಕ್ಕಾಗಿ ಅಪಾರವಾಗಿ ಶ್ರಮಿಸಿದ್ದಾರೆ. 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದನ್ನೂ ಓದಿ: AR Wedding: ಕುಟುಂಬದ ಜೊತೆ ನಿಲ್ಲದೆ ಮಗಳೊಂದಿಗೆ ಪೋಸ್ ಕೊಟ್ಟ ಐಶ್ವರ್ಯಾ ರೈ

    ಕಪಿಲ್‌ ಭಾವುಕ:
    ಗಾಯಕ್ವಾಡ್‌ ಅವರ ಅನಾರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌, ಟೀಂ ಇಂಡಿಯಾದ ಮಾಜಿ ಆಟಗಾರ ಬಳಲುತ್ತಿರುವುದು ನೋಡಿ ನೋವಾಗಿದೆ. ಅವರೊಂದಿಗೆ ನಾನು ಕ್ರಿಕೆಟ್‌ ಆಡಿದ್ದೇನೆ. ಇಂತಹ ಸ್ಥಿತಿಯಲ್ಲಿ ಅವರನ್ನು ನೋಡಲು ಸಾಧ್ಯವಾಗುತ್ತಿಲ್ಲ. ಬಿಸಿಸಿಐ ಅವರಿಗೆ ಅಗತ್ಯ ನೆರವು ನೀಡಲಿದೆ ಎಂದು ಭಾವಿಸುತೇನೆ ಎಂದು ಭಾವುಕರಾಗಿದ್ದರು. ಈ ಬೆನ್ನಲ್ಲೇ ಬಿಸಿಸಿಐ ನೆರವು ಘೋಷಣೆ ಮಾಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ 

  • ಕಿರಣ್ ಖೇರ್​​ಗೆ ಬ್ಲಡ್ ಕ್ಯಾನ್ಸರ್ – ಪತಿ ಅನುಪಮ್ ಖೇರ್ ಭಾವನಾತ್ಮಕ ಸಂದೇಶ

    ಕಿರಣ್ ಖೇರ್​​ಗೆ ಬ್ಲಡ್ ಕ್ಯಾನ್ಸರ್ – ಪತಿ ಅನುಪಮ್ ಖೇರ್ ಭಾವನಾತ್ಮಕ ಸಂದೇಶ

    ಮುಂಬೈ: ಬಾಲಿವುಡ್ ಹಿರಿಯ ನಟಿ, ಬಿಜೆಪಿ ಸಂಸದೆ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪತ್ನಿ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿರುವ ಹಿರಿಯ ನಟ ಅನುಪಮ್ ಖೇರ್ ಭಾವನಾತ್ಮಕವಾಗಿ ಕೆಲ ಸಾಲುಗಳನ್ನ ಬರೆದುಕೊಂಡಿದ್ದಾರೆ.

    ಪತ್ನಿ ಆರೋಗ್ಯದ ಕುರಿತು ಕೆಲ ಸುದ್ದಿಗಳು ಹರಿದಾಡುತ್ತಿವೆ. ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ಪೋಸ್ಟ್ ಮಾಡುತ್ತಿದ್ದೇನೆ. ಪತ್ನಿ ಕಿರಣ್ ಖೇರ್, ಮಲ್ಟಿಪಲ್ ಮೈಲೋವನಿಂದ ಬಳಲುತ್ತಿದ್ದರು. ಇಂದು ಒಂದು ರೀತಿ ಬ್ಲಡ್ ಕ್ಯಾನ್ಸರ್. ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಿರಣ್ ತುಂಬಾ ಧೈರ್ಯಶಾಲಿ. ಹಾಗಾಗಿ ಈ ಎಲ್ಲ ಕಷ್ಟಗಳಿಂದ ಹೊರ ಬರುತ್ತಾರೆ.

    ಹಿರಿಯ ತಜ್ಞರು ಕಿರಣ್ ಅವರಿಗೆ ಚಿಕಿತ್ಸೆ ನೀಡುತ್ತಿರೋದು ಸಂತಸದ ವಿಚಾರ. ಕಿರಣ್ ಅವರಲ್ಲಿ ಹೋರಾಡುವ ಗುಣವಿದ್ದು, ಇದೆಲ್ಲವನ್ನ ಎದುರಿಸುವ ಸಾಮಾರ್ಥ್ಯ  ಅವರಲ್ಲಿದೆ. ಪ್ರೀತಿಯಿಂದ ಕಾಣುವ ಗುಣದಿಂದಲೇ ಕಿರಣ್ ಎಲ್ಲರಿಗೂ ಅಚ್ಚುಮೆಚ್ಚು. ನಿಮ್ಮ ಪ್ರೀತಿ, ಹಾರೈಕೆ ಮತ್ತು ಪ್ರಾರ್ಥನೆ ಅವರೊಂದಿಗರಿಲಿ ಎಂದು ಅನುಪಮ್ ಕೇರ್ ಮನವಿ ಮಾಡಿಕೊಂಡಿದ್ದಾರೆ.

    ವೈದ್ಯರ ಚಿಕಿತ್ಸೆಗೆ ಕಿರಣ್ ಸ್ಪಂದಿಸುತ್ತಿದ್ದು, ಶೀಘ್ರವೇ ಗುಣಮುಖರಾಗಲಿದ್ದಾರೆ. ಅಭಿಮಾನಿಗಳು, ಸಹೋದ್ಯೋಗಿಗಳು, ಆಪ್ತರ ಕಾಳಜಿಗೆ ಕಿರಣ್ ಅವರ ಪರವಾಗಿ ಅನುಪಮ್ ಖೇರ್ ಧನ್ಯವಾದ ಸಲ್ಲಿಸಿದ್ದಾರೆ.

  • 4 ದಿನದ ಮಗುವಿಗೆ ಬ್ಲಡ್ ಕ್ಯಾನ್ಸರ್ -ಶಿವಮೊಗ್ಗ ಟು ಮಣಿಪಾಲ್ ಝೀರೋ ಟ್ರಾಫಿಕ್‍

    4 ದಿನದ ಮಗುವಿಗೆ ಬ್ಲಡ್ ಕ್ಯಾನ್ಸರ್ -ಶಿವಮೊಗ್ಗ ಟು ಮಣಿಪಾಲ್ ಝೀರೋ ಟ್ರಾಫಿಕ್‍

    ಶಿವಮೊಗ್ಗ : ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಲ್ಕು ದಿನದ ಮಗುವನ್ನು ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ನಲ್ಲಿ ರವಾನೆ ಮಾಡಲಾಯಿತು.

    ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಿಂದ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಭದ್ರಾವತಿಯ ಅಶ್ವಥ್ ನಗರದ ದೇವೆಂದ್ರ ಮತ್ತು ಸುಪ್ರಿಯಾ ದಂಪತಿಗೆ ನಾಲ್ಕು ದಿನದ ಹಿಂದೆ ಹೆಣ್ಣು ಮಗು ಜನಿಸಿತ್ತು. ಜನಿಸಿದ ಸಮಯದಲ್ಲಿಯೇ ಹಸುಗೂಸು ತನ್ನೂಂದಿಗೆ ರಕ್ತದ ಕ್ಯಾನ್ಸರ್ ಹೂತ್ತು ತಂದಿದೆ. ಇದನ್ನು ಪತ್ತೆ ಹಚ್ಚಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಮಗುವನ್ನು ಶಿವಮೊಗ್ಗದಿಂದ ಮಣಿಪಾಲ್ ವರೆಗೂ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಮಾಡಿದ್ದರು. ಶಿವಮೊಗ್ಗದಿಂದ ಉಡುಪಿಯ ಗಡಿ ಭಾಗದ ತನಕ ಶಿವಮೊಗ್ಗ ಜಿಲ್ಲೆಯ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ನಂತರ ಉಡುಪಿ ಪೊಲೀಸರು ಝೀರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

  • ಗಣಿತ 100ಕ್ಕೆ 100, 5 ವಿಷಯದಲ್ಲಿ ಶೇ.93 ಅಂಕ – ಸಂಭ್ರಮಿಸಲು ಅವಳೇ ಇಲ್ಲ

    ಗಣಿತ 100ಕ್ಕೆ 100, 5 ವಿಷಯದಲ್ಲಿ ಶೇ.93 ಅಂಕ – ಸಂಭ್ರಮಿಸಲು ಅವಳೇ ಇಲ್ಲ

    ದಾವಣಗೆರೆ: ಆಕೆ ಪ್ರತಿಭಾವಂತ ವಿದ್ಯಾರ್ಥಿನಿ ಪಿಯುಸಿಯಲ್ಲಿ ಐದು ವಿಷಯಗಳಲ್ಲಿಯೇ ಶೇ.93 ರಷ್ಟು ಅಂಕ ಪಡೆದಿದ್ದಳು. ಆದರೆ ಈ ಫಲಿತಾಂಶವನ್ನು ನೋಡಿ ಸಂಭ್ರಮಿಸಲು ಆಕೆಯೇ ಇಲ್ಲವಾಗಿದ್ದಾಳೆ.

    ದಾವಣಗೆರೆಯ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿದ್ದ ಅನುಷಾ ಬಿ ಪ್ರತಿಭಾವಂತ ವಿದ್ಯಾರ್ಥಿನಿ. ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ ಈಕೆಗೆ ಜೀವನದಲ್ಲಿ ಏನಾದರೂ ಸಾಧಿಸುವ ಅದಮ್ಯ ಬಯಕೆಯಿತ್ತು. ಮಾರ್ಚ್‍ನಲ್ಲಿ ಪಿಯುಸಿಯ ಐದು ವಿಷಯಗಳಿಗೆ ಪರೀಕ್ಷೆ ಬರೆದಿದ್ದಳು. ಕೊರೊನಾ ಲಾಕ್‍ಡೌನ್‍ನಿಂದ ಇಂಗ್ಲಿಷ್ ಪರೀಕ್ಷೆ ಮುಂದೂಡಿದ್ದರಿಂದ ತನ್ನೂರು ಚನ್ನಗಿರಿಯ ತಾಳಿಕಟ್ಟೆಗೆ ತೆರಳಿದ್ದಳು.

    ಇಂಗ್ಲಿಷ್ ವಿಷಯದಲ್ಲೂ ಚೆನ್ನಾಗಿ ಅಂಕಗಳಿಸುವ ಗುರಿ ಹೊಂದಿದ್ದಳು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಈಕೆಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ಉಡುಪಿಯ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ ಬಳಿಕ ವಿದ್ಯಾರ್ಥಿನಿಗೆ ಬ್ಲಡ್ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.

    ಚಿಕಿತ್ಸೆಯ ನಡುವೆಯೂ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಕಾಲೇಜಿನ ಆಡಳಿತ ಮಂಡಳಿಯವರೂ ಸಾಕಷ್ಟು ಧೈರ್ಯ ತುಂಬಿದ್ದರು. ಪರೀಕ್ಷೆ ಬರೆಯುವ ಆಸೆ ಅವಳಲ್ಲಿತ್ತು. ನೀಟ್ ಪರೀಕ್ಷೆಗೂ ಸಿದ್ಧವಾಗುತ್ತಿದ್ದಳು. ಈ ನಡುವೆ ಇಂಗ್ಲಿಷ್ ಪರೀಕ್ಷೆ ಜೂನ್ 18ಕ್ಕೆ ನಿಗದಿಯಾಯಿತು. ಆದರೆ ಪರೀಕ್ಷೆಯ ಒಂದು ದಿನ ಬಾಕಿ ಇರುವಾಗ ಅನುಷಾ ಅಸುನೀಗಿದ್ದು, ಕುಟುಂಬ ವರ್ಗ ಮತ್ತು ಆಪ್ತ ವಲಯದವರ ದುಃಖ ಮಡುಗಟ್ಟಿತ್ತು.

    ಕಳೆದ ಬುಧವಾರ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಕನ್ನಡ 92, ಭೌತಶಾಸ್ತ್ರ 91, ರಸಾಯನಶಾಸ್ತ್ರ 89, ಗಣಿತ 100, ಜೀವಶಾಸ್ತ್ರ 95 ಅಂಕಗಳಿಸಿದ್ದಾಳೆ. ವೈದ್ಯಳಾಗುವ ಕನಸು ಕಾಣುತ್ತಿದ್ದ ಅನುಷಾಳ ಆಸೆ ಅರ್ಧದಲ್ಲೇ ಮುಗಿದು ಹೋಗಿದೆ. ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಸಂಭ್ರಮಿಸಲು ಅವಳೇ ಇಲ್ಲವಾಗಿದ್ದಾಳೆ.

  • ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 17ರ ಹುಡುಗಿ ಆದ್ಳು ಪೊಲೀಸ್ ಕಮೀಷನರ್

    ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 17ರ ಹುಡುಗಿ ಆದ್ಳು ಪೊಲೀಸ್ ಕಮೀಷನರ್

    ಹೈದರಾಬಾದ್: ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 17 ವರ್ಷದ ಹುಡುಗಿಗೆ ಒಂದು ದಿನದ ಪೊಲೀಸ್ ಆಯುಕ್ತೆ ಆಗಲು ಅವಕಾಶ ಕೊಟ್ಟು ತೆಲಂಗಾಣ ಪೊಲೀಸ್ ಇಲಾಖೆ ಆಕೆಯ ಆಸೆಯನ್ನು ಈಡೇರಿಸಿದೆ.

    ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಮ್ಯಾ(17) ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಳೆ. ಆಲ್ವಾಲ್ ನಿವಾಸಿ ಆಗಿರುವ ರಮ್ಯಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಆಕೆ ಪೊಲೀಸ್ ಅಧಿಕಾರಿಯಾಗಬೇಕು ಎಂದು ಆಸೆಯಿಟ್ಟುಕೊಂಡಿದ್ದಳು. ಹೀಗಾಗಿ ರಮ್ಯಾಳ ಕೊನೆಯ ಆಸೆ ಈಡೇರಿಸಲು ಮುಂದಾದ ತೆಲಂಗಾಣ ಪೊಲೀಸ್ ಇಲಾಖೆ ಆಕೆಗೆ ಒಂದು ದಿನ ಪೊಲೀಸ್ ಆಯುಕ್ತೆ ಆಗಲು ಅವಕಾಶ ಕೊಟ್ಟಿದೆ. ಈ ಹಿನ್ನೆಲೆ ಅಕ್ಟೋಬರ್ 29ರಂದು ರಮ್ಯಾ ಖಾಕಿ ತೊಟ್ಟು ತೆಲಂಗಾಣದ ರಚ್ಚಕೊಂಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ದಿನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ತನ್ನ ಬಯಕೆ ತೀರಿಸಿಕೊಂಡಿದ್ದಾಳೆ.

    ‘ಮೇಕ್ ಎ ವಿಷ್’ ಫೌಂಡೇಷನ್ ರಮ್ಯಾಳ ಆಸೆ ಬಗ್ಗೆ ರಚ್ಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಗ್ವತ್ ಐಪಿಎಸ್ ಅವರಿಗೆ ತಿಳಿಸಿತ್ತು. ಹಾಗೆಯೇ ರಮ್ಯಾಳಿಗೆ ಒಂದು ದಿನದ ಪೊಲೀಸ್ ಆಯುಕ್ತೆ ಆಗಲು ಅವಕಾಶ ಕಲ್ಪಿಸಿಕೊಟ್ಟು, ಕೊನೆ ದಿನಗಳನ್ನು ಎಣಿಸುತ್ತಿರುವ ಜೀವಕ್ಕೆ ಖುಷಿ ಕೊಡಲು ಸಹಾಯ ಮಾಡಿ ಎಂದು ಮನವಿ ಮಾಡಿತ್ತು.

    ಈ ಮನವಿಯನ್ನು ಒಪ್ಪಿದ ಪೊಲೀಸ್ ಇಲಾಖೆ ರಮ್ಯಾಗೆ ಪೊಲೀಸ್ ಆಯುಕ್ತೆ ಆಗಲು ಅವಕಾಶ ಕೊಟ್ಟಿದೆ. ಈ ಬಗ್ಗೆ ರಮ್ಯಾ ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತಿದೆ. ಪೊಲೀಸ್ ಅಧಿಕಾರಿಯಾಗಬೇಕು ಎಂದು ನನಗೆ ಆಸೆ ಇತ್ತು. ಮಹಿಳೆಯರಿಗೆ ಸುರಕ್ಷತೆ ಹಾಗೂ ರಚ್ಚಕೊಂಡ ಪ್ರದೇಶದಲ್ಲಿ ಕ್ರೈಂ ನಿಯಂತ್ರಣ ಮಾಡಿ, ಕಾನೂನು ಕಾಪಾಡಬೇಕು ಎಂದು ಬಯಕೆ ಇತ್ತು. ಈ ಆಸೆಯನ್ನು ಮೇಕ್ ಎ ವಿಷ್ ಫೌಂಡೇಷನ್ ಹಾಗೂ ಪೊಲೀಸ್ ಇಲಾಖೆ ಪೂರೈಸಿದೆ. ಎಲ್ಲರಿಗೂ ಅಭಿನಂದನೆಗಳು ಎಂದು ಸಂತೋಷವನ್ನು ಹಂಚಿಕೊಂಡಳು.

    ಕೇವಲ ರಮ್ಯಾಳ ಆಸೆಯನ್ನು ಪೂರೈಸುವುದು ಮಾತ್ರವಲ್ಲದೆ, ಪೊಲೀಸ್ ಆಯುಕ್ತ ಮಹೇಶ್ ಭಗ್ವತ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಸುದೀರ್ ಬಾಬು ಅವರು ಆಕೆಯ ಚಿಕಿತ್ಸೆಗೆ ಹಣ ಸಹಾಯ ಕೂಡ ಮಾಡಿದ್ದಾರೆ. ಹಾಗೆಯೇ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಮ್ಯಾ ಆದಷ್ಟು ಬೇಗ ಗುಣಮುಖಳಾಗಲಿ ಎಂದು ಹಾರೈಸಿದ್ದಾರೆ.

  • ಬ್ಲಡ್  ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಿಬಿಎಸ್‍ಇ ವಿದ್ಯಾರ್ಥಿ 96% ಅಂಕ ಪಡೆದ!

    ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಿಬಿಎಸ್‍ಇ ವಿದ್ಯಾರ್ಥಿ 96% ಅಂಕ ಪಡೆದ!

    ನವದೆಹಲಿ: ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ 16 ವರ್ಷದ ವಿದ್ಯಾರ್ಥಿಯೊಬ್ಬ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಯಲ್ಲಿ 96% ಫಲಿತಾಂಶ ಪಡೆದಿದ್ದು, ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

    ದೆಹಲಿಯ ಪ್ರಿಯೇಶ್ ತಾಯಲ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕ. 10ನೇ ತರಗತಿ ಪರೀಕ್ಷೆ ಸಮಯದಲ್ಲಿಯೇ ಅವನನ್ನು ಕೀಮೋಥೆರಪಿ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಯಿತು. ಅಲ್ಲಿನ ಹಾಸಿಗೆಯ ಮೇಲೆ ಮಲಗಿದ್ದ ಅವನು, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಚಿಕಿತ್ಸೆ (ಸಲೈನ್) ಪಡೆದುಕೊಂಡು ಓದಿದ್ದ.

    ಮಗನಿಗೆ ಬೋರ್ಡ್ ಪರೀಕ್ಷೆ ಕಾಲದಲ್ಲಿಯೇ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತು. ಇತರಿಂದ ಅವನ ಭವಿಷ್ಯಕ್ಕೆ ತೊಂದರೆ ಉಂಟಾಯಿತು ಎಂದು ನಾವು ಚಿಂತಿಸಬೇಕಾಯಿತು. ಆದರೆ, ಅವನು ಧೈರ್ಯ ಹಾಗೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. 2017 ಡಿಸೆಂಬರ್‍ನಲ್ಲಿ ಪೂರ್ವಭಾವಿ ಪರೀಕ್ಷೆಗಳು ಪ್ರಾರಂಭವಾಗಿದ್ದವು. ಆದರೆ ಆ ಸಮಯದಲ್ಲಿಯೇ ಪ್ರಿಯೇಶ್‍ಗೆ ಜ್ವರ ಮತ್ತು ನೀಲಿ ಮಚ್ಚೆಗಳು ಕಾಣಿಸಿಕೊಂಡವು. ಇದರಿಂದಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆ ಮಾಡಿಸಿದಾಗ ಅವನಿಗೆ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದು ಬಂತು ಎಂದು ಬಾಲಕನ ತಾಯಿ ಹೇಳಿದ್ದಾರೆ.

    ಲ್ಯುಕೇಮಿಯಾ ರೋಗಿಗಳಿಗೆ ಕನಿಷ್ಠ ಎರಡುವರೆ ವರ್ಷ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗಿಯು ಕಿಮೊಥೆರಪಿಗಾಗಿ ಆಸ್ಪತ್ರೆಗೆ ಬರಬೇಕು ಮತ್ತು ಮನೆಯಲ್ಲಿ ಔಷಧಿಗಳನ್ನು ತಗೆದುಕೊಳ್ಳಬೇಕು. ಈ ಚಿಕಿತ್ಸೆ ಕಠಿಣವಾಗಿದ್ದು, ರೋಗಿಯು ಕಾಲು ನೋವು, ನಿದ್ರೆಯ ಕೊರತೆಯಂತಹ ಭೌತಿಕ ಅಸ್ವಸ್ಥತೆಗಳನ್ನ ಎದುರಿಸಬೇಕಾಗುತ್ತದೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ. ಮಾನಸ್ ಕಾರ್ಲಾ ಹೇಳಿದ್ದಾರೆ.

    ನಾನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಲಾಜಿಯಲ್ಲಿ ಅಧ್ಯಯನ ಮಾಡಿ ಎಂಜಿನಿಯರ್ ಆಗಬೇಕು. ನಾನು ಕ್ಯಾನ್ಸರ್ ಮೆಟ್ಟಿನಿಲ್ಲುತ್ತೇನೆ ಮತ್ತು ನನ್ನ ಹೆಸರನ್ನು ದೇಶ ನೆನಪಿಡುವಂತಹ ಸಾಧನೆ ಮಾಡುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಉತ್ತಮ ಮಾನವನಾಗಿ ಬಾಳುತ್ತೇನೆ ಎಂದು ಪ್ರಿಯೇಶ್ ಹೇಳಿದ್ದಾನೆ.

    ಸಿಬಿಎಸ್‍ಇ 10ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿತ್ತು. ಒಟ್ಟು 86.70% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 88.67% ಬಾಲಕಿಯರು ಮತ್ತು 85.32% ಬಾಲಕರು ಉತ್ತೀರ್ಣರಾಗಿದ್ದಾರೆ. ಈ ವರ್ಷ 4,460 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 16,24,682 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.