Tag: ಬ್ರೋ ಗೌಡ

  • ಹೀರೋ ಆಗ್ತಿದ್ದಾರೆ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಬ್ರೋ ಗೌಡ- ಶಮಂತ್‌ಗೆ ಆನಂದ್ ರಾಜ್ ಆ್ಯಕ್ಷನ್ ಕಟ್

    ಹೀರೋ ಆಗ್ತಿದ್ದಾರೆ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಬ್ರೋ ಗೌಡ- ಶಮಂತ್‌ಗೆ ಆನಂದ್ ರಾಜ್ ಆ್ಯಕ್ಷನ್ ಕಟ್

    ರಾಘು, ಶೆಫ್ ಚಿದಂಬರದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಎಂ. ಆನಂದ್ ರಾಜ್ ಈಗ ಹೊಸ ಸಿನಿಮಾ ಕೈಗೆತ್ತಿಗೊಂಡಿದ್ದಾರೆ. ‘ಬಿಗ್ ಬಾಸ್ ಸೀಸನ್ 8’ರಲ್ಲಿ ಸ್ಪರ್ಧಿಸಿ ಜನಪ್ರಿಯತೆ ಪಡೆದಿರುವ, ಆ ಬಳಿಕ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್ ಮೂಲಕ ಕಿರುತೆರೆ ಮನೆ ಮಾತನಾಗಿರುವ ಬ್ರೋ ಗೌಡ ಶಮಂತ್ ಅವರನ್ನು ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಕೇಸ್: ಮೂವರು ಶಂಕಿತರು ವಶಕ್ಕೆ

    ‘ಲಕ್ಷ್ಮಿ ಬಾರಮ್ಮ’ ಧಾರವಾಹಿಯ ಬ್ರೋ ಗೌಡ ಶಮಂತ್ (Bro Gowda Shamanth) ನಾಯಕನಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಚಿತ್ರಕ್ಕೆ ಎಂ. ಆನಂದ್ ರಾಜ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದು ಕನ್ನಡದ ಮೊದಲ ಝಾಂಬಿ ಸಿನಿಮಾ. ಚಿತ್ರದಲ್ಲಿ ಹೈ-ಲೆವೆಲ್ ಆಕ್ಷನ್ ಸೀನ್‌ಗಳು ಇರುತ್ತವೆ. ಹಾಲಿವುಡ್‌ ಸಿನಿಮಾಗಳಲ್ಲಿ ಇರುವಂತಹ ಆ್ಯಕ್ಷನ್ ಅನ್ನು ಇಲ್ಲಿ ನೋಡಬಹುದು. ಹಾಗಾಗಿ, ಇದನ್ನು ವೈಲೆಂಟ್ ಆಕ್ಷನ್ ಡ್ರಾಮಾ ಅಂತ ಆನಂದ್ ಹೇಳಿದ್ದಾರೆ.

    ಬ್ರೋ ಮೀಡಿಯಾ ಮತ್ತು ಸನ್ ರೈಸ್ ಕ್ಯಾಮೆರಾಸ್ ಪ್ರೊಡಕ್ಷನ್ ನಡಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ಪ್ರೊಡಕ್ಷನ್ 1’ ಅಂತ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಕೊಡಗು ಸುತ್ತಮುತ್ತ, ಅದರಲ್ಲೂ ಮುಖ್ಯವಾಗಿ, ಕಾಡುಗಳಲ್ಲಿ ಹೆಚ್ಚು ಶೂಟಿಂಗ್ ಇರಲಿದೆ. ಚಿತ್ರಕ್ಕೆ ಉದಯ್ ಲೀಲಾ ಕ್ಯಾಮೆರಾ ಹಿಡಿಯುತ್ತಿದ್ದು, ವಿಜೇತ್ ಚಂದ್ರ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆಕ್ಷನ್ ಡ್ರಾಮಾ ಕಥೆಗೆ ಎಂ ಆನಂದ್ ರಾಜ್ ಹಾರರ್ ಟಚ್ ಕೊಟ್ಟಿದ್ದಾರೆ.

  • ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

    ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಇನ್ನೇನು 2 ವಾರ ಪೂರ್ಣಗೊಳ್ಳುತ್ತಿದೆ. ಈ ವಾರದ ಅತ್ಯುತ್ತಮ ಮತ್ತು ಕಳಪೆ ಪ್ರದರ್ಶನ ತೋರಿಸಿದ ಸ್ಪರ್ಧಿಗಳನ್ನು ಸ್ವತಃ ಮನೆಯ ಸದಸ್ಯರು ಆಯ್ಕೆ ಮಾಡಿದರು.

    ಬಿಗ್‍ಬಾಸ್, ಮನೆಯ ಸದಸ್ಯರ ಪೈಕಿ ಈ ವಾರ ಉತ್ತಮ ಪ್ರದರ್ಶನ ನೀಡಿದ ಒಬ್ಬ ಸದಸ್ಯನ ಹೆಸರನ್ನು ಮನೆಯ ಎಲ್ಲ ಸದಸ್ಯರು ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು ಹಾಗೂ ಮನೆಯವರ ತೀರ್ಮಾನವನ್ನು ಕ್ಯಾಪ್ಟನ್ ರಾಜೀವ್ ಸೂಕ್ತ ಕಾರಣಗಳೊಂದಿಗೆ ಬಿಗ್‍ಬಾಸ್‍ಗೆ ತಿಳಿಸಬೇಕು ಎಂದು ಸೂಚಿಸಿದರು.

    ಅದರಂತೆ ಮೊದಲನೆಯದಾಗಿ ಮಾತನಾಡಿದ ಗೀತಾ, ನಾನು ಲ್ಯಾಗ್ ಮಂಜುರವರ ಹೆಸರನ್ನು ಹೇಳಲು ಇಷ್ಟಪಡುತ್ತೇನೆ. ಎಂಟರ್‍ಟೈನ್‍ಮೆಂಟ್ ವಿಷಯಕ್ಕೆ ಬಂದರೆ ನಮ್ಮೆಲ್ಲರನ್ನು ಬಹಳ ನಗಿಸುತ್ತಾರೆ ಎಂದರು. ದಿವ್ಯಾ ಉರುಡುಗ ಮಂಜುರವರು ಕ್ಯಾಪ್ಟನ್ ಸ್ಥಾನವನ್ನು ಬಹಳ ಚೆನ್ನಾಗಿ ನಿಭಾಯಿಸಿದರು ಹಾಗಾಗಿ ನಾನು ಕೂಡ ಮಂಜುರವರ ಹೆಸರನ್ನು ಸೂಚಿಸುತ್ತೇನೆ ಎಂದರೆ, ವಿಶ್ವನಾಥ್ ಸಹ ಮಂಜು ಹೆಸರನ್ನು ಸೂಚಿಸುತ್ತಾರೆ. ಎಂಟರ್ಟೈನ್ಮೆಂಟ್ ಬಿಗ್‍ಬಾಸ್ ಮನೆಯಲ್ಲಿ ನಾವೆಲ್ಲ ಒಂದು ಕುಟುಂಬದವರ ರೀತಿಯಲ್ಲಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಮಂಜು ಎಂದು ಚಂದ್ರಕಲಾ ತಿಳಿಸುತ್ತಾರೆ. ಟಾಸ್ಕ್‍ನಲ್ಲಿಯೇ ಆಗಲಿ, ಕೆಲಸದಲ್ಲಿಯೇ ಆಗಲಿ ಒಂದು ಒಳ್ಳೆಯ ಸಪೋರ್ಟಿವ್ ರೋಲ್ ಮಂಜು ಎಂದು ಅರವಿಂದ್ ಕೂಡ ಮಂಜು ಹೆಸರನ್ನು ತೆಗೆದುಕೊಳ್ಳುತ್ತಾರೆ. ದಿವ್ಯಾ ಸುರೇಶ್ ಎಲ್ಲರೊಂದಿಗೆ ಮಾತನಾಡುವ ರೀತಿ, ಟಾಸ್ಕ್ ನನ್ನು ಹಾಗೂ ನಮ್ಮನ್ನೆಲ್ಲ ನಿಭಾಯಿಸುವ ರೀತಿ ಎಲ್ಲವೂ ಒಂದು ಮಟ್ಟಕ್ಕೆ ಮಂಜು ನಿಭಾಯಿಸುತ್ತಾರೆ ಹಾಗಾಗಿ ನಾನು ಕೂಡ ಮಂಜುರವರನ್ನು ಆಯ್ಕೆ ಮಾಡುತ್ತೇನೆ ಎಂದು ನುಡಿದರು.

    ಶುಭ ಪೂಂಜಾ, ಮಂಜು ಅರಂವಿಂದ್‍ರವರ ಹೆಸರನ್ನು ಆಯ್ಕೆ ಮಾಡಿದರೆ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ, ಶಂಕರ್, ಪ್ರಶಾಂತ್ ಸಂಬರಗಿ, ರಘು, ರಾಜೀವ್ ಹೆಸರನ್ನು ಸೂಚಿಸುತ್ತಾರೆ. ಜೊತೆಗೆ ಬ್ರೋ ಗೌಡ ಹಾಗೂ ನಿರ್ಮಲ ಪ್ರಶಾಂತ್ ಸಂಬರಗಿಯವರ ಹೆಸರನ್ನು ಸೂಚಿಸುತ್ತಾರೆ.

    ಒಟ್ಟಾರೆ ಮನೆಯ ಸದಸ್ಯರ ಅಭಿಪ್ರಾಯವನ್ನೆಲ್ಲಾ ಪರಿಶೀಲಿಸಿದ ರಾಜೀವ್ ನಾನು ಕ್ಯಾಪ್ಟನ್ ಆಗಿದ್ದೇನೆ. ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಹಾಗಾಗಿ ಮನೆಯನ್ನು ಇನ್ನಷ್ಟು ಖುಷಿಯಾಗಿಡುತ್ತಿರುವ ಮಂಜುರವರಿಗೆ ಈ ವಾರದ ಉತ್ತಮ ಆಟಗಾರರೆಂದು ಆಯ್ಕೆ ಮಾಡುತ್ತೇನೆ ಎಂದು ಹೇಳುತ್ತಾ ಶುಭಾಶಯ ತಿಳಿಸಿ ಮೆಡಲ್ ನೀಡಿದರು.

    ಬಳಿಕ ಮೆಡಲ್ ಸ್ವೀಕರಿಸಿದ ಮಂಜು ನನಗೆ ಬಹಳ ಸಂತಸವಾಗುತ್ತಿದೆ. ಇದು ನನ್ನ ಜೀವನದಲ್ಲಿ ಸಿಗುತ್ತಿರುವ ಮೊದಲ ಮೆಡಲ್. ಎಲ್ಲರಿಗೂ ಧನ್ಯವಾದ ಎಂದು ಹೇಳುತ್ತಾರೆ. ಈ ವೇಳೆ ಮನೆ ಮಧಿ ಜೋರಾಗಿ ಶಿಳ್ಳೆ ಮತ್ತು ಚಪ್ಪಾಳೆಯನ್ನು ಹೊಡೆಯುತ್ತಾರೆ ಎಂದು ಮಂಜುರವರ ಹೆಸರನ್ನು ಘೋಷಿಸುತ್ತಾರೆ.

    ಈ ವಾರ ಕಳಪೆ ಪ್ರದರ್ಶನ ತೋರಿದ ಬ್ರೋ ಗೌಡರನ್ನು ಬಿಗ್‍ಬಾಸ್ ಸೆರೆವಾಸ ಮಾಡಲು ಸೂಚಿಸಿದರು.

  • ಹುಡುಗಿಯನ್ನು ಪಟಾಯಿಸು ನೋಡೋಣ – ಬ್ರೋ ಗೌಡಗೆ ಶುಭಾ ಪೂಂಜಾ ಟಾಸ್ಕ್

    ಹುಡುಗಿಯನ್ನು ಪಟಾಯಿಸು ನೋಡೋಣ – ಬ್ರೋ ಗೌಡಗೆ ಶುಭಾ ಪೂಂಜಾ ಟಾಸ್ಕ್

    ದೊಡ್ಮನೆಗೆ ಎಂಟ್ರಿ ಕೊಟ್ಟ ಕೆಲವು ಬ್ಯಾಚುಲರ್ ಹುಡುಗರಲ್ಲಿ ಬ್ರೋಗೌಡ ಕೂಡ ಒಬ್ಬರು. ಮೊನ್ನೆ ಟಾಸ್ಕ್ ನಲ್ಲಿ ಕಿರುಚಾಡುತ್ತಾ, ಕಿತ್ತಾಡಿ, ಗುದ್ದಾಡಿಕೊಂಡಿದ್ದ ಬಿಗ್‍ಬಾಸ್ ಮಂದಿ ನಿನ್ನೆ ಹಾಸ್ಯದ ಹೊನಲಿನಲ್ಲಿ ತೇಲಿದ್ದಾರೆ.

    ಬಿಗ್‍ಬಾಸ್ ಮನೆಗೆ ಬಂದಾಗನಿಂದ ಮಗುವಿನಂತೆ ಎಲ್ಲರೊಂದಿಗೆ ಬೆರೆತು, ಸಿರಿಯಸ್ ಸಮಯದಲ್ಲಿ ಕೂಡ ಹಾಸ್ಯ ಚಟಾಕಿ ಹರಿಸುವ ನಟಿ ಶುಭಾ ಪೂಂಜಾ ನಿನ್ನೆ ಬ್ರೋ ಗೌಡರ ಕಾಲೆಳೆದಿದ್ದಾರೆ. ನಿನ್ನೆ ಮನೆ ಮಂದಿಯೆಲ್ಲಾ ಒಟ್ಟಾಗಿ ಲೀವಿಂಗ್ ಏರಿಯಾದಲ್ಲಿ ಟೈಪಾಸ್ ಮಾಡುತ್ತಿದ್ದ ವೇಳೆ ಮಂಜು ಸುಮ್ ಸುಮ್ ನೇ ನಗ್ತಾಳೆ ಎಂದು ದಿವ್ಯಾ ಸುರೇಶ್ ನೋಡುತ್ತಾ ಹಾಡು ಹೇಳಿದ್ದಾರೆ. ಇದಕ್ಕೆ ದಿವ್ಯಾ ಮುಖ ತಿರುಗಿಸಿಕೊಂಡು ಬೇರೆ ಕಡೆ ನೋಡುತ್ತಾರೆ. ಅದಕ್ಕೆ ಮಂಜು ನಾನು ಹೇಳಿದೆ ಅಲ್ಲವಾ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಅವಳ ಕೈನಲ್ಲಿ ಆಗುವುದಿಲ್ಲ ಎಂದು ಹೇಳುತ್ತಾರೆ.

    ರಾಜೀವ್, ಬ್ರೋ ಗೌಡ ಬರುವವರೆಗೂ ಹೀಗೆ ಹಾಡು ಹೇಳು ಎನ್ನುತ್ತಾರೆ. ಈ ವೇಳೆ ಶುಭಾ ಅವನು ಸುಮ್ನೆ ರೆಡಿಯಾಗಿ ಬೇರೆಯವರಿಗೆ ಹೇಳುವುದಾಯ್ತು. ಇಲ್ಲಿಯವರೆಗೂ ಒಂದು ಹುಡುಗಿಯನ್ನು ಪಟಾಯಿಸುವುದಕ್ಕೆ ಆಗಲಿಲ್ಲ. ಹೊರಗಡೆ ನೋಡಿದರೆ ನನಗೆ ಇಷ್ಟು ಜನ ಹುಡುಗಿಯರು ಬಿದ್ದಿದ್ದರು, ಅಷ್ಟು ಜನ ಹುಡುಗಿಯರು ಬಿದ್ದಿದ್ದಾರೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಾನೆ. ಹೊರಗಡೆ 22 ಜನ ಹುಡುಗಿಯರು ಬಿದ್ದಿರುವ ಅವನಿಗೆ ಬಿಗ್‍ಬಾಸ್ ಮನೆಯಲ್ಲಿ ಒಬ್ಬರನ್ನು ಕೂಡ ಬೀಳಿಸಲು ಆಗಲಿಲ್ಲ. ಮೊದಲನೇಯದಾಗಿ ಅವನಿಗೆ ಹುಡುಗಿಯರನ್ನು ಬೀಳಿಸುವ ನ್ಯಾಕ್ ಗೊತ್ತಿಲ್ಲ. ನೋಡಿದಾಗಲೆಲ್ಲ ಎಲ್ಲ ಹುಡುಗಿಯರಿಗೂ ಕೆಲಸ ಕೊಡುತ್ತಾನೆ. ಅವನಿಗ್ಯಾರು ಬೀಳುತ್ತಾರೆ? ಎಂದು ನಗೆ ವ್ಯಂಗ್ಯ ಮಾಡಿದರು. ಇದನ್ನು ಕೇಳಿ ಮನೆಯ ಸದಸ್ಯರೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

    ಈ ವೇಳೆ ಲ್ಯಾಂಗ್ ಮಂಜು ನಾನೇದರೂ ಕ್ಯಾಪ್ಟನ್ ಆದರೆ ನನ್ನ ಎರಡು ಕಣ್ಣುಗಳಿಗೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ರೊಚ್ಚಿಗೆದ್ದ ಶುಭಾ ಪೂಂಜಾ, ಮಗನೇ ಹಾಗಾದರೆ ನಮ್ಮ ಕೈನಲ್ಲಿ ಕೆಲಸ ಮಾಡಿಸ್ತಿಯಾ ಎಂದು ವಾಟರ್ ಬಾಟಲ್‍ನಿಂದ ಹೊಡೆಯುತ್ತಾರೆ.

    ಬಳಿಕ ಲ.. ಲವರ್ ಬಾಯ್ ಬಾ ಇಲ್ಲಿ ಎಂದು ಬ್ರೋಗೌಡರನ್ನು ಕರೆದ ಶುಭಾ, ನಿನಗೊಂದು ಟಾಸ್ಕ್ ಈ ವೀಕೆಂಡ್ ಒಳಗೆ ಒಬ್ಬರನ್ನಾದರೂ ನೀನು ಬೀಳಿಸಬೇಕು. ಕಮಾನ್ ಶಮಂತ್ ಎದ್ದು ತೊಡೆ ತಟ್ಟುತ್ತಾ ಸವಾಲೆಸೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಬ್ರೋ ಗೌಡ ವೇಟ್ ವೇಟ್. ನಾನು ಈಗಲೇ ಏನು ಹೇಳುವುದಿಲ್ಲ ಎನ್ನುತ್ತಾರೆ.

    ಇದಕ್ಕೆ ಶುಭಾ ನೀನು ಹೆಣ್ಣು ಮಕ್ಕಳನ್ನು ನೋಡಿದಾಗೆಲ್ಲಾ ಕಸ ಗುಡಿಸಿ, ಪಾತ್ರೆ ತೊಳೆಯಿರಿ, ಕ್ಲೀನ್ ಮಾಡಿ ಎಂದರೆ ನಿನಗೆ ಯಾರು ಬೀಳುವುದಿಲ್ಲ ಎಂದು ಹೇಳುವ ಮೂಲಕ ಬ್ರೋ ಗೌಡ ಕಾಲೆಳೆದಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಈಜು-ಮೋಜು ಮಸ್ತಿ!

    ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಈಜು-ಮೋಜು ಮಸ್ತಿ!

    ಬೆಂಗಳೂರು: ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಧನುಶ್ರೀ ಗೌಡ ಮನೆಯಿಂದ ಹೊರಗೆ ಹೋದ ಬಳಿಕ ಬಿಗ್‍ಬಾಸ್ ಸ್ಪರ್ಧಿಗಳ ಮೋಜು-ಮಸ್ತಿ ಹಾಗೆಯೇ ಮುಂದುವರೆದಿದೆ.

    ಸದ್ಯ ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ 9ನೇ ದಿನವಾಗಿದ್ದು, ಎಲಿಮಿನೆಷನ್‍ನಿಂದ ಟೆನ್ಷನ್‍ನಿಂದ ಬಿಡುಗಡೆಗೊಂಡಿದ್ದ ದೊಡ್ಮನೆ ಮಂದಿಗೆ ನಿನ್ನೆ ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು. ಅದುವೇ ಈಜು ಮೋಜು. ಇದರ ಅನುಸಾರ ಚಟುವಟಿಕೆ ಆರಂಭದಲ್ಲಿ ಒಂದು ಹಾಡು ಪ್ಲೇ ಆಗುತ್ತದೆ. ಆ ಹಾಡು ಮುಗಿದ ತಕ್ಷಣವೇ ಶಮಂತ್(ಬ್ರೋ ಗೌಡ) ಸ್ವಿಮ್ಮಿಂಗ್ ಪೂಲ್‍ಗೆ ಹಾರಬೇಕು. ಮತ್ತೊಮ್ಮೆ ಹಾಡು ಶುರುವಾದಾಗ ಪೂಲ್‍ಗೆ ಬೀಳಿಸಲು ಒಬ್ಬ ಸದಸ್ಯನನ್ನು ಹಿಡಿಯಬೇಕು ಹಾಗೂ ಹಾಡು ನಿಂತ ತಕ್ಷಣ ತನ್ನೊಡನೆ ಪೂಲ್‍ಗೆ ಬೀಳಿಸಬೇಕು. ಮುಂದಿನ ಹಾಡಿಗೆ ಇಬ್ಬರು ಸೇರಿ ಮೂರನೇ ಅವರನ್ನು ಬೀಳಿಸಬೇಕು. ಹೀಗೆ ಒಂದೊಂದು ಹಾಡು ಮುಗಿಯುತ್ತಿದ್ದಂತೆ, ಒಬ್ಬೊಬ್ಬ ಸದಸ್ಯರನ್ನು ಪೂಲ್‍ಗೆ ಬೀಳಿಸುತ್ತಾ ಸಾಗಬೇಕು ಎಂದು ಸೂಚಿಸಿದರು.

    ಅದರಂತೆ ಮೊದಲನೆಯದಾಗಿ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ನೆನೆಪಿರಲಿ ಸಿನಿಮಾದ ಕುರಕ್ಕು ಕಳ್ಳಿಕೆರೆ ಸಾಂಗ್ ಪ್ಲೇ ಆಗುತ್ತದೆ. ಆಗ ಬ್ರೋ ಗೌಡ ಸ್ವಿಮಿಂಗ್ ಪೂಲ್‍ಗೆ ಹಾರಿದರು. ಬಳಿಕ ಬ್ರೋ ಗೌಡ ಓಡುತ್ತಾ ಬಂದು ಲ್ಯಾಗ್ ಮಂಜುರನ್ನು ಔಟ್ ಮಾಡುತ್ತಾರೆ. ನಂತರ ಇಬ್ಬರು ಪೂಲ್‍ಗೆ ಹಾರಿ ವಾಪಸ್ಸ್ ಬಂದು ಲ್ಯಾಂಗ್ ಮಂಜು, ಯಶ್ ಅಭಿನಯದ ಅಣ್ತಮ್ಮ ಸಾಂಗ್ ಪ್ಲೇ ಮಾಡಿದಾಗ ಓಡಿ ಹೋಗಿ ದಿವ್ಯಾ ಸುರೇಶ್‍ರನ್ನು ಔಟ್ ಮಾಡುತ್ತಾರೆ. ಬಳಿಕ ದಿವ್ಯಾರನ್ನು ಎತ್ತಿಕೊಂಡು ಇಬ್ಬರು ಈಜು ಕೊಳಕ್ಕೆ ಹಾರುತ್ತಾರೆ.

    ನಂತರ ಔಟಾಗಿದ್ದ ರಾಜೀವ್ ಹಾಗೂ ಅರವಿಂದ್ ಕಿಚ್ಚ ಸುದೀಪ್ ಅಭಿನಯದ ರನ್ನ ಸಿನಿಮಾದ ಥಿತಲಿ ಥಿತಲಿ ಸಾಂಗ್ ಪ್ಲೇ ಆದಾಗ ದಿವ್ಯಾ ಉರುಡುಗರನ್ನು ಟಾರ್ಗೆಟ್ ಮಾಡಿ ಔಟ್ ಮಾಡಿ ಸ್ವಿಮ್ಮಿಂಗ್ ಪೂಲ್‍ಗೆ ಎಸೆಯುತ್ತಾರೆ.

    ಇದೇ ವೇಳೆ ಸ್ವಿಮಿಂಗ್ ಪೂಲ್‍ನಲ್ಲಿ ಲ್ಯಾಗ್ ಮಂಜು ದಿವ್ಯಾ ಉರುಡುಗಗೊಂದು ಸಿಕ್ರೇಟ್ ಹೇಳುತ್ತೇನೆ. ಅವರಿಗೆ ಧಮ್ ಇದ್ದರೆ ಎಲ್ಲರ ಮುಂದೆ ಹೇಳಲಿ ಎಂದು ಚಾಲೆಂಜ್ ಮಾಡುತ್ತಾರೆ ಬಳಿಕ ಮಂಜು ಹೇಳಿದ ಸಿಕ್ರೆಟ್ ಕೇಳಿ ದಿವ್ಯಾ ನಾಚುತ್ತಾ ನಸುನಗೆ ಬೀರುತ್ತಾರೆ. ನನ್ನ ಮೀಟರ್ ಬಗ್ಗೆ ಮಾತನಾಡಬೇಡಿ ಐ ಲವ್ ಯು ಎಂದು ಲ್ಯಾಗ್ ಮಂಜುಗೆ ಎಲ್ಲರ ಸಮ್ಮುಖದಲ್ಲಿ ದಿವ್ಯಾ ಉರುಡುಗ ಹೇಳುತ್ತಾರೆ. ಅದಕ್ಕೆ ಮಂಜು ಥ್ಯಾಂಕ್ಯು ಐ ಲವ್ ಯು ಟೂ ಎಂದು ಹಾಸ್ಯಮಯವಾಗಿ ಅಣುಗಿಸುತ್ತಾ ಮುಗುಳು ನಗೆ ಬೀರುತ್ತಾರೆ.

    ಒಟ್ಟಾರೆ ಟಾಸ್ಕ್ ಮೂಲಕ ಮನೆಮಂದಿಯೆಲ್ಲಾ ಒಬ್ಬೊಬ್ಬರಾಗಿ ಈಜು ಕೊಳಕ್ಕೆ ಹಾರುವ ಮೂಲಕ ಸಖತ್ ಎಂಜಾಯ್ ಮಾಡಿದರು.

  • ದಿವ್ಯ ಸುರೇಶ್ ಪ್ರೀತಿಸ್ತಿದ್ದ ಬ್ರೋ ಗೌಡ – ಬಂಡೆಯಾಗಿ ಎದುರು ಬಂದ ಲ್ಯಾಗ್ ಮಂಜು

    ದಿವ್ಯ ಸುರೇಶ್ ಪ್ರೀತಿಸ್ತಿದ್ದ ಬ್ರೋ ಗೌಡ – ಬಂಡೆಯಾಗಿ ಎದುರು ಬಂದ ಲ್ಯಾಗ್ ಮಂಜು

    ಬೆಂಗಳೂರು: ಎರಡನೇ ಬಾರಿ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಬ್ರೋ ಗೌಡ ಈ ಹಿಂದೆ ಸ್ಪರ್ಧಿಯೊಬ್ಬರನ್ನು ಲವ್ ಮಾಡುತ್ತಿರುವುದಾಗಿ ಕೆಲವು ಸದಸ್ಯರ ಮುಂದೆ ಹೇಳಿಕೊಂಡಿದ್ದರು. ಅಂತೆಯೇ ಆ ಬಳಿಕ ಶಮಂತ್ ಇಷ್ಟಪಟ್ಟ ಹುಡುಗಿ ಯಾರಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು. ಆದರೆ ಇದೀಗ ಬ್ರೋ ಗೌಡ ತಾನಿಷ್ಟಪಟ್ಟ ಹುಡುಗಿ ಯಾರೆಂಬುದನ್ನು ಬಹಿರಂಗಪಡಿಸಿದ್ದು, ನಿರಾಸೆಯನ್ನೂ ಕೂಡ ವ್ಯಕ್ತಪಡಿಸಿದ್ದಾರೆ.

    ಹೌದು. ಶಮಂತ್ ಅವರು ತಾನಿಷ್ಟಪಟ್ಟ ಹುಡುಗಿಯ ಹೆಸರನ್ನು ಬಹಿರಂಗಪಡಿಸಿದ್ದು, ಆಕೆಯನ್ನು ಪ್ರೀತಿಸುತ್ತಿದ್ದೆ. ಆದರೆ ಮಂಜು ಪಾವಗಡ ಬಂಡೆಯಾಗಿ ಅಡ್ಡಿಯಾದರು ಎನ್ನುವ ಮೂಲಕ ತಮಗಾದ ನಿರಾಸೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮೊದಲ ನೋಟದಲ್ಲೇ ಪ್ರೀತಿಯಾಗಿದ್ದು ಅಲ್ಲದೆ ಅದರಿಂದ ಆದ ನಿರಾಸೆಯನ್ನು ಕೂಡ ಇತರ ಸದಸ್ಯರೊಂದಿಗೆ ಹೇಳಿಕೊಂಡಿದ್ದಾರೆ.

    ಮಿಸ್ ಇಂಡಿಯಾ ಸೌತ್ ವಿಜೇತೆ ದಿವ್ಯ ಸುರೇಶ್ ಅವರನ್ನೇ ಬ್ರೋ ಗೌಡ ಇಷ್ಟಪಟ್ಟಿದ್ರಂತೆ. ಆದರೆ ಬ್ರೋ ಗೌಡ ಪಾಲಿಗೆ ಮಂಜು ಬಂಡೆಯಾಗಿ ಎದುರು ನಿಂತಿರುವುದಾಗಿ ಮನೆಯ ಇತರ ಸದಸ್ಯರ ಬಳಿ ಬ್ರೋ ಗೌಡ ತಮ್ಮ ನಿರಾಸೆಯನ್ನು ತೋರ್ಪಡಿಸಿದ್ದಾರೆ.

    ಗೀತಾ ಭಟ್, ಚಂದ್ರಕಲಾ ಮೋಹನ್, ಧನುಶ್ರೀ ಹಾಗೂ ಶಮಂತ್ ನಾಲ್ಕು ಜನ ಕಿಚನ್‍ನಲ್ಲಿರುವಾಗ ಶಮಂತ್ ಪ್ರೇಮ ವಿಚಾರ ಚರ್ಚೆಯಾಗಿದೆ. ಈ ಹಿಂದೆ ವಿಷಯ ನಿರ್ಮಲಾ ಮತ್ತು ಗೀತಾ ಭಟ್ ಇಬ್ಬರಿಗೆ ಮಾತ್ರ ತಿಳಿದಿತ್ತು. ಆದರೆ ಹುಡುಗಿ ಯಾರೆಂದು ಗೊತ್ತಾಗದೆ ಗೀತಾ ಅವರು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದರು. ಇದೀಗ ಕಿಚನ್ ನಲ್ಲಿ ನಡೆದ ಚರ್ಚೆಯಲ್ಲಿ ಶಮಂತ್ ತಾನು ಇಷ್ಟ ಪಡುತ್ತಿರುವ ಹುಡುಗಿ ದಿವ್ಯ ಸುರೇಶ್ ಎಂದು ಬಹಿರಂಗಪಡಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಇತ್ತ ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ಗೆಳೆತನ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಬರುತ್ತಿದೆ. ಮೊದ ಮೊದಲು ಮಂಜು ಅವರ ತಮಾಷೆಯ ಮಾತುಗಳಿಗೆ ಸಿಟ್ಟುಮಾಡಿಕೊಳ್ಳುತ್ತಿದ್ದ ದಿವ್ಯ ಇದೀಗ ತಾವು ಕೂಡ ಸಪೋರ್ಟ್ ಮಾಡುತ್ತಿದ್ದಾರೆ. ಅಲ್ಲದೆ ಮಂಜು ಮತ್ತು ದಿವ್ಯಗೆ ಮದುವೆ ಆಗಿದೆ. ಅವರಿಬ್ಬರು ಗಂಡ-ಹೆಂಡತಿ ಎಂದೆಲ್ಲ ಮನೆಯವರು ರೇಗಿಸಿದ್ದಾರೆ.

    ಒಟ್ಟಿನಲ್ಲಿ ಪ್ರತಿ ಬಿಗ್ ಬಾಸ್ ಶೋನಲ್ಲಿ ಒಂದೊಂದು ಪ್ರೇಮ ಕಥೆಗಳು ಹೊರಬರುತ್ತಿದ್ದಂತೆಯೇ ಈ ಬಾರಿಯೂ ಅಂಥದ್ದೇ ಕಥೆಯೊಂದು ಹೊರಬರುವ ಸಾಧ್ಯತೆಗಳಿವೆ. ಆದರೆ ತ್ರಿಕೋನ ಪ್ರೇಮ ಕಥೆ ಎಲ್ಲಿವರೆಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದುನೋಡಬೇಕಿದೆ.

  • ಬಿಗ್‍ಬಾಸ್ ಮನೆಯಲ್ಲಿ ನಡೆದೇ ಹೋಯ್ತು ಕಿರಿಕ್..!

    ಬಿಗ್‍ಬಾಸ್ ಮನೆಯಲ್ಲಿ ನಡೆದೇ ಹೋಯ್ತು ಕಿರಿಕ್..!

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 3ನೇ ದಿನ ಪ್ರಶಾಂತ್ ಸಂಬರಗಿ ಡ್ರಾಮಾ ಸೀನ್ ಗೆ ಬ್ರೋ ಗೌಡ ಕಾಮಿಡಿ ಮಾಡಿದ್ದಾರೆ ಎಂದು ಬ್ರೋ ಗೌಡ ಮೇಲೆ ಸಂಬರಗಿ ರೇಗಾಡಿದ್ದಾರೆ.

    ಪ್ರಶಾಂತ್ ಸಂಬರಗಿ ಡ್ರಾಮಾ ಮಾಡುತ್ತಿರುವಾಗಲೇ ಬ್ರೋ ಗೌಡ ತಮಾಷೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಸಂಬರಗಿ ಸ್ಟೇಜ್ ಮೇಲೆ ಬಂದು ಡ್ರಾಮಾ ಮಾಡುವಾಗ ಎಲ್ಲರೊಂದಿಗೂ ಈತರ ಸೀರಿಯಸ್ ನೇಸ್ ಬೇಕು ಈ ತರ ಶ್ರದ್ಧೆ ಬೇಕು, ಇದೇ ರೀತಿ ಸೈಲೆನ್ಸ್ ಬೇಕು, ಯಾರು ಯಾರಿಗೂ ತೊಂದರೆ ಕೊಡಬಾರದೆಂದು ಹೇಳಿದ್ದೆ ಎಂದರು.

    ಬ್ರೋ ಗೌಡ, ಸಂಬರಗಿಯೊಂದಿಗೆ ನನಗೆ ಮಾತ್ರ ಬಂದು ನನನ್ನು ಗುರಿಯಾಗಿಸಿ ಈ ರೀತಿ ಹೇಳಿದ್ದು ಯಾಕೆಂದು ಪ್ರಶ್ನಿಸಿದರು. ಸಂಬರಗಿ ನಾನು ಎಲ್ಲರೊಂದಿಗೂ ಹೇಳಿದ್ದೆನೆಂದು ಸಮಾಜಾಯಿಸಿ ಕೊಟ್ಟರು. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಗೀತಾ ಮತ್ತು ವಿಶ್ವನಾಥ್ ಬ್ರೋ ಗೌಡ ಅವರನ್ನು ಸಮಾಧಾನ ಪಡಿಸಿದರು.

    ಬ್ರೋ ಗೌಡ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಂತೆ, ಕಾಮಿಡಿ ಸ್ಟಾರ್ ಮಂಜು, ವೈಷ್ಣವಿ ಗೌಡ, ವಿಶ್ವನಾಥ್ ಬ್ರೋ ಗೌಡ ಬಳಿ ಬಂದು ಮಾತನಾಡುತ್ತಿದ್ದರು. ಈ ನಡುವೆ ಮತ್ತೆ ಬಂದ ಸಂಬರಗಿ ನೀನು ಚಿಕ್ಕವನು ನಿನಗೆ ಹೇಳುವ ಹಕ್ಕಿದೆ ಎಂದರು. ಬ್ರೋ ಗೌಡ ಚಿಕ್ಕವನು ದೊಡ್ಡವನು ಮ್ಯಾಟರ್ ಅಲ್ಲ ನನ್ನನ್ನು ಒಬ್ಬನನ್ನೆ ಪಾಯಿಂಟ್ ಔಟ್ ಮಾಡಿ ಹೇಳಬಾರದಿತ್ತು ಎಲ್ಲರಿಗೂ ಹೇಳಿ ಎಂದರು. ನಾನು ಸುಮ್ಮನೆ ಇದ್ದರೆ ಮತ್ತೆ ನನ್ನ ಮೇಲೆ ಅಪವಾದ ಹೊರಿಸುತ್ತಾರೆ ಅದು ನನಗೆ ಇಷ್ಟವಿಲ್ಲ ಎಂದು ಬ್ರೋ ಗೌಡ ಕೊನೆಗೆ ಕಿರಿಕ್ ಗೆ ಅಂತ್ಯವಾಡಿದರು.