Tag: ಬ್ರೈನ್ ಟ್ಯೂಮರ್

  • ದಕ್ಷಿಣ ಏಷ್ಯಾದ ಮೊದಲ ZAP-X ಯಂತ್ರ – ಬ್ರೈನ್ ಟ್ಯೂಮರ್ ವಿರುದ್ಧ ಇದು ಹೇಗೆ ಹೋರಾಡುತ್ತದೆ?

    ದಕ್ಷಿಣ ಏಷ್ಯಾದ ಮೊದಲ ZAP-X ಯಂತ್ರ – ಬ್ರೈನ್ ಟ್ಯೂಮರ್ ವಿರುದ್ಧ ಇದು ಹೇಗೆ ಹೋರಾಡುತ್ತದೆ?

    ಬ್ರೈನ್ ಟ್ಯೂಮರ್ ಮೆದುಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಯಾಗಿದ್ದು, ಇದನ್ನು ʼಮೆದುಳಿನ ಕ್ಯಾನ್ಸರ್’ ಎಂದು ಕರೆಯುತ್ತಾರೆ. ಮೆದುಳಿನ ಜೀವಕೋಶಗಳು ಕೆಲವೊಂದು ಕಾರಣಗಳಿಂದ ನಿಧಾನವಾಗಿ ಹಾನಿಯಾಗಿ ಗೆಡ್ಡೆಯಾಕಾರದಲ್ಲಿ ಬೆಳೆದು ಈ ಕಾಯಿಲೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಹತೋಟಿಯಲ್ಲಿಡಬಹುದು. ಇನ್ನೂ ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನ ಗುಣಮುಖರಾಗುತ್ತಾರೆ ಎಂಬ ಮಾತಿದೆ. ಇದೀಗ ಈ ಸಮಸ್ಯೆಗೆ ನೂತನ ಚಿಕಿತ್ಸೆಯಾದ ZAP-X ಭಾರತದಲ್ಲಿ ಲಭ್ಯವಿದ್ದು, ಇದು ದಕ್ಷಿಣ ಏಷ್ಯಾದಲ್ಲೇ ಮೊದಲಾಗಿದೆ.

    ಮಾರಣಾಂತಿಕ ಕಾಯಿಲೆಯಾದ ಬ್ರೈನ್ ಟ್ಯೂಮರ್ ವಿರುದ್ಧ ಇಡೀ ವೈದ್ಯಕೀಯ ಲೋಕವೇ ಹೋರಾಡುತ್ತಿದೆ. ಅದೇ ರೀತಿ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಈ ಆಸ್ಪತ್ರೆಯಲ್ಲಿ ZAP-X ಯಂತ್ರವನ್ನು ಅಳವಡಿಸಲಾಗಿದ್ದು, ಇದು ಮೆದುಳಿನ ಕ್ಯಾನ್ಸರ್‌ಗೆ ನೋವಿಲ್ಲದ ಚಿಕಿತ್ಸಾ ವಿಧಾನವಾಗಿದೆ. ಈ ವಿಧಾನದಲ್ಲಿ ಕ್ಯಾನ್ಸರ್‌ ಸೆಲ್‌ಗಳನ್ನು ಅಥವಾ ಗಡ್ಡೆಗಳನ್ನು ಕರಗಿಸಲು ನಿಖರವಾಗಿ ವಿಕಿರಣವನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಸೆಷನ್‌ನಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಇದನ್ನೂ ಓದಿ: ಸಿಎಎಗೆ ತಡೆ ಇಲ್ಲ: ಅರ್ಜಿಗಳಿಗೆ 3 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ 

    ಬ್ರೈನ್ ಟ್ಯೂಮರ್ ಸಮಸ್ಯೆ ಮೊದಲು ಮೆದುಳಿನಲ್ಲಿ ಪ್ರಾರಂಭವಾದರೆ ಅದನ್ನು ‘ ಪ್ರೈಮರಿ ಬ್ರೈನ್ ಟ್ಯೂಮರ್ ‘ ಎಂದು, ಮನುಷ್ಯನ ದೇಹದ ಇತರ ಭಾಗಗಳಲ್ಲಿ ಕ್ಯಾನ್ಸರ್ ಕಾಯಿಲೆ ಉಂಟಾಗಿ ನಂತರ ಅದು ಮೆದುಳಿಗೆ ಹಬ್ಬಿದರೆ ಅದನ್ನು ‘ ಸೆಕೆಂಡರಿ ಬ್ರೈನ್ ಟ್ಯೂಮರ್ ‘ ಅಥವಾ ‘ ಮೆಟಾಸ್ಟಾಟಿಕ್ ಬ್ರೈನ್ ಟ್ಯೂಮರ್ ‘ ಎಂದು ಗುರುತಿಸಲಾಗುತ್ತದೆ.

    ZAP-X ಹೇಗೆ ಕೆಲಸ ಮಾಡುತ್ತದೆ?

    ಯಂತ್ರವು ಹೆಚ್ಚಿನ ತೀವ್ರತೆಯ, ಕೇಂದ್ರೀಕೃತ ವಿಕಿರಣವನ್ನು ಕೇವಲ ಮೆದುಳಿನ ಗೆಡ್ಡೆಗೆ ಕಡಿಮೆ ಅಂತರದಲ್ಲಿ ತಲುಪಿಸುತ್ತದೆ. ಇದರಿಂದ ಸುತ್ತಮುತ್ತಲಿನ ಅಂಗಾಂಶಗಳಿಗೆ ಈ ಚಿಕಿತ್ಸೆಯಿಂದ ಹಾನಿ ಉಂಟಾಗದೆ, ಕೇವಲ ಗೆಡ್ಡೆಯನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡುತ್ತದೆ. ಇದರಿಂದಾಗಿ ಕ್ಯಾನ್ಸರ್ ಗಡ್ಡೆ ಕರಗುತ್ತದೆ.

    ಯಂತ್ರದ ಸೃಷ್ಟಿಕರ್ತ ಮತ್ತು Zap ಶಸ್ತ್ರಚಿಕಿತ್ಸಾ ಸಿಇಒ ಡಾ.ಜಾನ್ ಆಡ್ಲರ್ ಪ್ರಕಾರ, ರೇಡಿಯೊ ಸರ್ಜರಿಯು ಅಮೆರಿಕಾದಲ್ಲಿ ನರಶಸ್ತ್ರ ಚಿಕಿತ್ಸಕರು ಮಾಡುವ ಅತ್ಯಂತ ಸಾಮಾನ್ಯವಾದ ವಿಧಾನವಾಗಿದೆ. ಪ್ರಪಂಚದ ಎಲ್ಲಾ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಭಾರತದಲ್ಲಿ ಸುಮಾರು 10 ಲಕ್ಷ ಜನರು ಈ ಚಿಕಿತ್ಸೆಯಿಂದ ಪ್ರಯೋಜನ ಪಡೆಯಬಹುದು ಎಂಬುದು ಅವರ ಅಭಿಪ್ರಾಯ.

    ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ZAP-X ಹೇಗೆ ಭಿನ್ನ?

    ರೋಗಿಗಳು ಆಸ್ಪತ್ರೆಗೆ ದಾಖಲಾದ ಒಂದು ದಿನದಲ್ಲೇ ಡಿಸ್ಚಾರ್ಜ್‌ ಮಾಡಬಹುದು. ZAP-X ಚಿಕಿತ್ಸೆಗೆ ಅರಿವಳಿಕೆ ನೀಡುವ ಅಗತ್ಯ ಇರುವುದಿಲ್ಲ. ಚಿಕಿತ್ಸೆಯ ನಂತರ ವಿಶ್ರಾಂತಿಯ ಅಗತ್ಯವಿಲ್ಲದೆ ರೋಗಿಗಳು ಮನೆಗೆ ತೆರಳಬಹುದಾಗಿದೆ. ಚಿಕಿತ್ಸೆಯನ್ನು ಕೇವಲ 30 ನಿಮಿಷದಿಂದ ಗರಿಷ್ಠ 1 ಗಂಟೆ 30 ನಿಮಿಷಗಳವರೆಗೆ ಒಂದೇ ಅವಧಿಯಲ್ಲಿ ಮಾಡಲಾಗುತ್ತದೆ. ಗೆಡ್ಡೆ ತುಂಬಾ ದೊಡ್ಡದಾಗಿದ್ದರೆ ಅಥವಾ ಮೆದುಳಿನಲ್ಲಿನ ಪ್ರಮುಖ ರಚನೆಗಳಿಗೆ ಹತ್ತಿರದಲ್ಲಿದ್ದಾಗ ಮಾತ್ರ ಹೆಚ್ಚಿನ ಸಮಯ ಹಿಡಿಯುತ್ತದೆ ಎಂಬುದು ವೈದ್ಯರ ಅಭಿಪ್ರಾಯ. 

    ಮೆದುಳಿನ ಆಳವಾದ, ಬಹುಮುಖ್ಯ ರಚನೆಗಳಿಗೆ ಹತ್ತಿರವಿರುವ (ಇತರ ಸಮಸ್ಯೆಗಳಿಗೆ ಸ್ಕ್ಯಾನ್ ಮಾಡುವಾಗ ಪತ್ತೆಯಾದ ಸಣ್ಣ ಗೆಡ್ಡೆಗಳು) ರೋಗಿಗಳಿಗೆ ಇದು ಶಸ್ತ್ರಚಿಕಿತ್ಸೆಗಿಂತ ಉತ್ತಮವಾಗಿರುತ್ತದೆ. ಯಂತ್ರವು ಗೆಡ್ಡೆಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಇದು ಮೆದುಳಿನಲ್ಲಿನ ಆಳವಾದ ಗಾಯಗಳು ಅಥವಾ ಅಪಧಮನಿಯ ವಿರೂಪತೆಗೆ ಸಹ ಚಿಕಿತ್ಸೆ ನೀಡುತ್ತದೆ.

    ರೇಡಿಯೋ ಸರ್ಜರಿ ತಂತ್ರಗಳಲ್ಲಿ ಬಳಸುವ ರೇಡಿಯೋಥೆರಪಿಯಿಂದ Zap-X ಹೇಗೆ ಭಿನ್ನ?

    ರೇಡಿಯೋಥೆರಪಿಯು ಸೂರ್ಯನ ಬೆಳಕಿನಂತೆ ಚದರುತ್ತದೆ. ಅಲ್ಲದೇ ಇದರ ಪರಿಣಾಮವು ಕಡಿಮೆಯಾಗಿದೆ. ಚಿಕಿತ್ಸೆಗೆ ತಗಲುವ ಸಮಯವು ಹೆಚ್ಚು. ರೇಡಿಯೊಸರ್ಜರಿ – ಮತ್ತು Zap-X ತಂತ್ರಜ್ಞಾನ ವಿಕಿರಣವನ್ನು ನಿರ್ದಿಷ್ಟ ಬಿಂದುವಿಗೆ ಕೇಂದ್ರೀಕರಿಸಲು ಭೂತಗನ್ನಡಿಯನ್ನು ಬಳಸುವುದಕ್ಕೆ ಸಮಾನವಾಗಿದೆ ಎಂಬುದು ಡಾ.ಆಡ್ಲರ್ ಅಭಿಪ್ರಾಯವಾಗಿದೆ.

    ಚಿಕಿತ್ಸೆಯ ವೆಚ್ಚ ಎಷ್ಟು? 

    Zap-X ಚಿಕಿತ್ಸೆಯ ವೆಚ್ಚವು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಸಮನಾಗಿರುತ್ತದೆ. ಇದರ ವೆಚ್ಚ ಭಾರತದಲ್ಲಿ 1,90,000 ರೂ. ಆಗಲಿದ್ದು, ಭಾರತದ ಹೊರಗೆ, ಇದರ ಬೆಲೆ ಸುಮಾರು 3,30,000 ರೂ. ಆಗಲಿದೆ. 

    ಈ ಹೊಸ ಬೆಳವಣಿಗೆಯು ಭಾರತದ ವೈದ್ಯಕೀಯ ಪ್ರವಾಸೋದ್ಯಮದ ಭವಿಷ್ಯವನ್ನು ವೃದ್ಧಿಸುವ ಭರವಸೆ ಮೂಡಿಸಿದೆ. ಏಕೆಂದರೆ ಇದರಿಂದ ದಕ್ಷಿಣ ಏಷ್ಯಾ ಮತ್ತು ಹತ್ತಿರದ ಪ್ರದೇಶಗಳ ಜನರಿಗೆ ಮೆದುಳಿನ ಗೆಡ್ಡೆಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಇದನ್ನೂ ಓದಿ: JMM ತೊರೆದು ಬಿಜೆಪಿ ಸೇರಿದ ಹೇಮಂತ್ ಸೊರೇನ್‌ ಸೊಸೆ ಸೀತಾ ಸೊರೇನ್‌

  • ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಫಿನಾಡಿನ ಸಹನಾ ಮೊಸೆಸ್- ನಾಲ್ವರಿಗೆ ಪುನರ್ಜನ್ಮ

    ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಫಿನಾಡಿನ ಸಹನಾ ಮೊಸೆಸ್- ನಾಲ್ವರಿಗೆ ಪುನರ್ಜನ್ಮ

    ಚಿಕ್ಕಮಗಳೂರು: ಕಾಫಿನಾಡ ಜಿಲ್ಲಾಸ್ಪತ್ರೆ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಒಂಬತ್ತು ತಿಂಗಳ ಹಿಂದಷ್ಟೆ ಯುವತಿ ರಕ್ಷಿತಾಬಾಯಿಯ ಯಶಸ್ವಿ ಅಂಗಾಂಗ ರವಾನೆ ಮಾಡಿದ್ದ ಜಿಲ್ಲಾಸ್ಪತ್ರೆ ಇದೀಗ ಮತ್ತೊಂದು ಅಂತಹದ್ದೆ ಪ್ರಕರಣದಲ್ಲಿ ಅಂಗಾಂಗ ದಾನ ಮಾಡಿ ಸೈ ಎನ್ನಿಸಿಕೊಂಡಿದೆ.

    ಬ್ರೈನ್ ಟ್ಯೂಮರ್ (Brain Tumor) ಖಾಯಿಲೆಯಿಂದ ಮೆದುಳು ನಿಷ್ಕ್ರಿಯಗೊಂಡು ಕಳೆದ ಮೂರು ದಿನಗಳಿಂದ ಐಸಿಯುನಲ್ಲಿದ್ದ ಮಹಿಳೆಯೊಬ್ಬರ ಅಂಗಾಂಗಗಳ ದಾನಕ್ಕೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ. ನಗರದ ಸಮಾಜ ಸೇವಕ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೋಸೆಸ್ ಅವರ ಪತ್ನಿ ಸಹನಾ ರೂಬೆನ್ ಮೊಸೆಸ್ ಅವರು ಕಳೆದ ಶನಿವಾರ ತಮ್ಮ ಮನೆಯಲ್ಲಿದ್ದ ವೇಳೆ ದಿಢೀರ್ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನ ನಗರದ ಸ್ಪಂದನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

    ಸಹನಾ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ವೈದ್ಯರು ಬ್ರೈನ್ ಟ್ಯೂಮರ್ ಇರುವುದನ್ನು ಪತ್ತೆ ಮಾಡಿದ್ದರು. ಶಿವಮೊಗ್ಗದ (Shivamogga) ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದನ್ನ ದೃಢಪಡಿಸಿದ ಹಿನ್ನೆಲೆಯಲ್ಲಿ ಸಹನಾ ರೂಬೆನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಕಳೆದ 2 ದಿನಗಳಿಂದ ಐಸಿಯುನಲ್ಲಿ ದಾಖಲು ಮಾಡಲಾಗಿತ್ತು. ಸಹನಾ ಅವರ ಮೆದುಳು ಹೊರತುಪಡಿಸಿ ಉಳಿದೆಲ್ಲಾ ಅಂಗಾಂಗಗಳು ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆ ಸಹನಾ ಪತಿ ರೂಬೆನ್ ಅವರು ಪತ್ನಿಯ ಬಯಕೆಯಂತೆ ಬಹು ಅಂಗಾಂಗಳ ದಾನಕ್ಕೆ ನಿರ್ಧರಿಸಿದ್ದರು. ಇದನ್ನು ತಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿದ ಅವರು ಕುಟುಂಬಸ್ಥರ ಒಪ್ಪಿಗೆ ಬಳಿಕ ಬಹು ಅಂಗಾಂಗಗಳ ದಾನಕ್ಕೆ ಸಮ್ಮತಿ ನೀಡಿದ್ದರು.

    ಮೆದುಳು ನಿಷ್ಕ್ರಿಯಗೊಂಡಿದ್ದ ಸಹನಾ ಅವರ ಅಂಗಾಂಗ ದಾನಕ್ಕೆ ಕುಟುಂಬದ ಸದಸ್ಯರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮೋಹನ್ ಕುಮಾರ್ ಜೀವನ ಸಾರ್ಥಕತೆ ಸಂಸ್ಥೆಯೊಂದಿಗೆ ಚರ್ಚಿಸಿ ಶನಿವಾರ ಹಾಗೂ ಭಾನುವಾರ ಬಹು ಅಂಗಾಗಗಳನ್ನು ಬೇರ್ಪಡಿಸುವುದು ಹಾಗೂ ಅಂಗಾಂಗಗಳ ರವಾನೆಗೆ ಮರು ಜೋಡಣೆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಸಹನಾ ಅವರ ಹೃದಯದ ರಕ್ತದ ಮಾದರಿ ಹೊಂದಿಕೆಯಾಗದ ಕಾರಣಕ್ಕೆ ಹೃದಯ ಹೊರತು ಪಡಿಸಿ ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ಐದು ಅಂಗಾಂಗಳ ದಾನಕ್ಕೆ ವೈದ್ಯರು ಸಿದ್ಧತೆ ಕೈಗೊಂಡಿದ್ದರು.

    ಸೋಮವಾರ ಮಧ್ಯಾಹ್ನ ಜಿಲ್ಲಾ ಸರ್ಜನ್ ಡಾ.ಮೋಹನ್‍ಕುಮಾರ್ ನೇತೃತ್ವದಲ್ಲಿ 2 ತಜ್ಞ ವೈದ್ಯರ ತಂಡ ಸಹನಾ ರೂಬೆನ್ ಅವರ ಅಂಗಾಂಗ ದಾನದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ದೇಹದ 5 ಅಂಗಗಳನ್ನು ಬೇರ್ಪಡಿಸಿದ್ದು, ಮರು ಜೋಡಣೆಗಾಗಿ ಅಂಗಾಂಗಗಳನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಅಪೆÇಲೋ ಆಸ್ಪತ್ರೆ ಹಾಗೂ ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಲಾಯಿತು.

    ಈ ವೇಳೆ ಪತ್ನಿ ನೆನೆದು ರೂಬೆನ್ ಕಣ್ಣೀರಿಟ್ಟರು. ನನ್ನ ಮಡದಿಯ ಅಂಗಾಂಗದಿಂದ ನಾಲ್ಕು ಜನರ ಪ್ರಾಣ ಉಳಿಯಲಿ, ಸಂತೋಷದಿಂದ ಅಂಗಾಂಗ ದಾನ ಮಾಡಿದ್ದೇವೆ ಎಂದರು. ಸಹನಾ ಮೊಸೆಸ್ ಪತಿಯಂತೆ ತಾನೂ ಕೂಡ ಸಮಾಜಸೇವಕಿಯಾಗಿದ್ದರು. ಕೊರೋನಾ ಕಾಲದಲ್ಲಿ 70ಕ್ಕೂ ಹೆಚ್ಚು ನಿರ್ಗತಿಕರಿಗೆ ಅನ್ನ ಬೇಯಿಸಿದ್ದರು. ಭಿಕ್ಷುಕರನ್ನ ಆತ್ಮೀಯತೆಯಿಂದ ತಬ್ಬಿ ಸಂತೈಸಿದ್ದ ಸಹೃದಯಿ ಮಾತೃ ಹೃದಯ ಅವಳದ್ದಾಗಿತ್ತು. ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ರು, ಮದುವೆ ಮಾಡಿಸಿ ಬದುಕು ಕಟ್ಟಿಕೊಟ್ಟಿದ್ದರು. ಆಕೆ ಮಾಡಿದ ಸೇವೆಗಳಿಗೆ ನಾನಾ ಸಂಸ್ಥೆಗಳು ಸೇವರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದವು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ರೈನ್ ಟ್ಯೂಮರ್‌ನಿಂದ ಬಳಲಿದ್ದ ಡಾಕ್ಟರ್‌ಗೆ ಕೊರೊನಾ ಪಾಸಿಟಿವ್ – ಆಸ್ಪತ್ರೆಯಲ್ಲಿ ಸಾವು

    ಬ್ರೈನ್ ಟ್ಯೂಮರ್‌ನಿಂದ ಬಳಲಿದ್ದ ಡಾಕ್ಟರ್‌ಗೆ ಕೊರೊನಾ ಪಾಸಿಟಿವ್ – ಆಸ್ಪತ್ರೆಯಲ್ಲಿ ಸಾವು

    ಚಾಮರಾಜನಗರ: ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ವೈದ್ಯರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಪರಿಣಾಮ ಏಳು ದಿನದಲ್ಲೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

    ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಅಭಯ್ ಕುಮಾರ್ ಸಾವನ್ನಪ್ಪಿದ್ದಾರೆ. ಮೃತ ವೈದ್ಯರಿಗೆ 7 ದಿನದ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸ್ಫೋಟ – ಒಂದೇ ದಿನ 25 ಸಾವಿರ ಮಂದಿಗೆ ಸೋಂಕು

    ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ನಂತರ ಮತ್ತೆ ಆರೋಗ್ಯ ಹದಗೆಟ್ಟ ಹಿನ್ನೆಲೆ ಚಾಮರಾಜನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

    ಚಿಕಿತ್ಸೆ ಫಲಕಾರಿಯಾಗದೇ ಅಭಯ್ ಕುಮಾರ್ ಸಾವನ್ನಪ್ಪಿದ್ದು, ಮೆದುಳಿಗೆ ಸಂಬಂಧಿಸಿದ ಕಾಯಿಲೆ ಹೊಂದಿದ್ದರು ಎಂದು ತಿಳಿದು ಬಂದಿದೆ. ವೈದ್ಯರ ಸಾವಿಗೆ ಕುಟುಂಬಸ್ಥರು ಸೇರಿದಂತೆ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ‌. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮೋದಿಗೆ ವಿವರಿಸಿದ ಬೊಮ್ಮಾಯಿ

  • ಸಾಯುವ ಹಂತದಲ್ಲಿದ್ದೇನೆ ಎಂದು ತಿಳಿದು 30 ಸಾವಿರ ಸಸಿನೆಟ್ಟ ಯುವತಿ

    ಸಾಯುವ ಹಂತದಲ್ಲಿದ್ದೇನೆ ಎಂದು ತಿಳಿದು 30 ಸಾವಿರ ಸಸಿನೆಟ್ಟ ಯುವತಿ

    ಗಾಂಧಿನಗರ: ಕೊನೆಯ ಹಂತದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದೇನೆ ಎನ್ನುವುದನ್ನು ತಿಳಿದ ಯುವತಿ 30 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ.

    ಗುಜರಾತಿನ ಸೂರತ್ ನಿವಾಸಿಯಾಗಿರುವ ಶ್ರುಚಿ ವಡಲಿಯಾ ಅವರಿಗೆ ಕೆಲವು ತಿಂಗಳ ಹಿಂದೆ ತಾನು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವುದು ತಿಳಿಯಿತು. ಹಾಗಾಗಿ ಅವರು ಪರಿಸರವನ್ನು ಉಳಿಸುವ ಅಭಿಯಾನವನ್ನು ಶುರು ಮಾಡಿದ್ದರು.

    ವಾಯು ಮಾಲಿನ್ಯದಿಂದ ನನಗೆ ಈ ಕಾಯಿಲೆ ಬಂದಿರುವುದು ತಿಳಿಯಿತು. ಮರಗಳನ್ನು ನೆಟ್ಟರೆ ಅನೇಕರನ್ನು ಮಾರಕ ಕಾಯಿಲೆಗಳಿಂದ ರಕ್ಷಿಸಬಹುದು. ನಾನು ಶೀಘ್ರದಲ್ಲೇ ಸಾಯಬಹುದು. ಆದರೆ ಹೆಚ್ಚಿನ ಮರಗಳನ್ನು ನೆಡುವುದರ ಮೂಲಕ ಜನರ ಉಸಿರಾಟದಲ್ಲಿ ಬದುಕಲು ನಾನು ಬಯಸುತ್ತೇನೆ ಎಂದು ಶ್ರುಚಿ ತಿಳಿಸಿದ್ದಾರೆ.

    ನಾನು 30 ಸಾವಿರ ಗಿಡಗಳನ್ನು ನೆಟ್ಟಿದ್ದೇನೆ. ಅಲ್ಲದೆ ಅದೇ ರೀತಿ ಮಾಡಲು ಅನೇಕರನ್ನು ಪ್ರೇರೇಪಿಸಿದ್ದೇನೆ. ಬ್ರೈನ್ ಟ್ಯೂಮರ್ ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೂ ನಾನು ನನ್ನ ಉದ್ದೇಶದ ಅರ್ಥವನ್ನು ಕಳೆದುಕೊಳ್ಳಲಿಲ್ಲ ಎಂದರು.

    ನನ್ನ ಜೀವನವನ್ನು ನಡೆಸಲು ಹಾಗೂ ಕನಸುಗಳನ್ನು ಈಡೇರಿಸಲು ನನಗೆ ಹೆಚ್ಚು ಸಮಯವಿಲ್ಲ. ಆದರೆ ಬೇರೆಯವರು ನನ್ನ ಎದುರಿಸಿದ ಕಷ್ಟವನ್ನು ಬೇರೆಯವರು ಎದುರಿಸಬಾರದು. ಹಾಗಾಗಿ ಎಲ್ಲರು ಸಸಿಗಳನ್ನು ನೆಡಬೇಕು. ಅದು ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ಶ್ರುಚಿ ಹೇಳಿದ್ದಾರೆ.

    ನಾನು ಹಲವು ಹಳ್ಳಿಗಳಿಗೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಡುವಂತೆ ಮನವಿ ಮಾಡಿದ್ದೇನೆ. ನಮ್ಮೆಲ್ಲರ ಭವಿಷ್ಯವನ್ನು ಉಳಿಸಲು ಮಕ್ಕಳಿಗೆ ಈ ಬಗ್ಗೆ ಶಿಕ್ಷಣ ನೀಡುವುದು ಉತ್ತಮ ಕೆಲಸ ಎಂದು ಶ್ರುಚಿ ತಿಳಿಸಿದ್ದಾರೆ.

  • ಕ್ಯಾಂಡಿ ಕ್ರಶ್ ಆಡುತ್ತಲೇ ಬ್ರೈನ್ ಟ್ಯೂಮರ್ ಆಪರೇಷನ್ ಮಾಡಿಸಿಕೊಂಡ್ಳು 10ರ ಬಾಲಕಿ!

    ಕ್ಯಾಂಡಿ ಕ್ರಶ್ ಆಡುತ್ತಲೇ ಬ್ರೈನ್ ಟ್ಯೂಮರ್ ಆಪರೇಷನ್ ಮಾಡಿಸಿಕೊಂಡ್ಳು 10ರ ಬಾಲಕಿ!

    ಚೆನ್ನೈ: 10 ವರ್ಷದ ಬಾಲಕಿಯೊಬ್ಬಳು ಬ್ರೈನ್ ಟ್ಯೂಮರ್ ಆಪರೇಷನ್ ಗೆ ಒಳಗಾಗಿದ್ದು, ಈ ವೇಳೆ ಆಕೆ ಕ್ಯಾಂಡಿ ಕ್ರಶ್ ಗೇಮ್ಸ್ ಆಡಿದ್ದಾಳೆ.

    5ನೇ ತರಗತಿ ಓದುತ್ತಿದ್ದ ನಂದಿನಿ ಶಸ್ತ್ರಚಿಕಿತ್ಸಗೆ ಒಳಗಾದ ಬಾಲಕಿ. ಭರತನಾಟ್ಯ ಮಾಡುತ್ತಿದ್ದ ನಂದಿನಿ ಆರೋಗ್ಯ ಇದ್ದಕ್ಕಿದ್ದಂತೆ ಕೆಡುತಿತ್ತು. ಹೀಗಾಗಿ ಆಕೆಯನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಆಕೆಯ ಮೆದುಳನ್ನು ಸ್ಕ್ಯಾನ್ ಮಾಡಿದಾಗ ಬ್ರೈನ್ ಟ್ಯೂಮರ್ ಇದೆ ಎನ್ನುವುದು ತಿಳಿದು ಬಂದಿದೆ.

    ಆಪರೇಷನ್ ಈಗಲೇ ನಡೆಸದೇ ಇದ್ದರೆ ಮುಂದೆ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ತಿಳಿಸಿದಾಗ ನಂದಿನಿಯ ಪೋಷಕರು ಆರಂಭದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ಅನುಮತಿ ನೀಡಿರಲಿಲ್ಲ. ಆದರೆ ಪುದುಚೇರಿಯಲ್ಲಿರುವ ಬಾಲಕಿಯ ಸಂಬಂಧಿಯೊಬ್ಬರನ್ನು ವೈದ್ಯರು ಆಸ್ಪತ್ರೆಗೆ ಕರೆಸಿದ್ದರು. ಸಂಬಂಧಿ ವೈದ್ಯರಾಗಿದ್ದ ಕಾರಣ ಸಹಾಯವನ್ನು ಪಡೆದು ಪೋಷಕರ ಮನವೊಲಿಸಿದ ಚೆನ್ನೈ ವೈದ್ಯರು ಯಶಸ್ವಿಯಾಗಿ ಸರ್ಜರಿ ನಡೆಸಿದ್ದಾರೆ.

    ಗೆಡ್ಡೆಯನ್ನು ಹೊರ ತೆಗೆಯುವಾಗ ನಾನು ಅಲ್ಲಿಯೇ ಇದ್ದೆ. ನಂದಿನಿ ನನ್ನ ಮೊಬೈಲ್ ನಲ್ಲಿ ಕ್ಯಾಂಡಿ ಕ್ರಷ್ ಆಡುತ್ತಿದ್ದಳು. ನಂದಿನಿಗೆ ಸರ್ಜರಿ ಮಾಡುವಾಗ ಅದು ಅರಿವಾಗಬಾರದು ಎಂದು ವೈದ್ಯರು ನಿರ್ಧರಿಸಿದ್ದರು. ಆದರೆ ಬಾಲಕಿ ತುಂಬಾ ಧೈರ್ಯವಾಗಿದ್ದಳು ಎಂದು ಆಕೆಯ ಸಂಬಂಧಿ ತಿಳಿಸಿದ್ದಾರೆ.

    ಗೇಮ್ಸ್ ಆಡಿದ್ದು ಯಾಕೆ? ಈ ಆಪರೇಷನ್ ನಡೆಸುವಾಗ ಮೆದುಳು ಚಲನೆಯಲ್ಲಿರಬೇಕಾಗುತ್ತದೆ. ಹೀಗಾಗಿ ಮೆದುಳು ಚಲನೆಯಲ್ಲಿರಲು ಆಕೆಗೆ ಕ್ಯಾಂಡಿ ಕ್ರಾಶ್ ಗೇಮ್ಸ್ ಅಡಲು ವೈದ್ಯರು ಸೂಚಿಸಿದ್ದರು.