Tag: ಬ್ರೇಕಿಂಗ್ ನ್ಯೂಸ್

  • ಸಿಂಗಲ್ ಫಾರೆವರ್ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ರು ರಶ್ಮಿಕಾ

    ಸಿಂಗಲ್ ಫಾರೆವರ್ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ರು ರಶ್ಮಿಕಾ

    ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಶುಕ್ರವಾರ ತಮ್ಮ ಟ್ವಿಟ್ಟರಿನಲ್ಲಿ ಸಿಂಗಲ್ ಫಾರೆವರ್ ಎಂದು ಸುಳಿವು ನೀಡುವ ಮೂಲಕ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಹೇಳಿದ್ದರು. ಇದೀಗ ಅವರು ತಮ್ಮ ಬ್ರೇಕಿಂಗ್ ನ್ಯೂಸ್ ಏನೆಂಬುದನ್ನು ಬಯಲು ಮಾಡಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಸುಮಾರು 2.50ಕ್ಕೆ ರಶ್ಮಿಕಾ ತಮ್ಮ ಟ್ವಿಟ್ಟರಿನಲ್ಲಿ, “ಇಂದು ಸಂಜೆ 6 ಗಂಟೆಗೆ ಒಂದು ಘೋಷಣೆ ಮಾಡಲಿದ್ದೇನೆ. ಯಾವ ವಿಷಯ ಎಂದು ಕುತೂಹಲದಿಂದ ಕಾಯುತ್ತಿದ್ದೀರಾ? ನಾನು ನಿಮಗೆ ಸುಳಿವು ನೀಡುತ್ತೇನೆ. ‘ಸಿಂಗಲ್ ಫಾರೆವರ್’ ಅಷ್ಟೇ ನಾನು ಹೇಳುವುದು. ಗೆಸ್ ಮಾಡುತ್ತೀರಿ” ಎಂದು ಟ್ವೀಟ್ ಮಾಡಿದ್ದರು.

    ಸುಮಾರು 6 ಗಂಟೆಗೆ ರಶ್ಮಿಕಾ, ಮಹಿಳೆ ಮತ್ತು ಮಹನಿಯರೇ, ಬಾಲಕ ಹಾಗೂ ಬಾಲಕಿಯರೇ ಹಾಗೂ ಎಲ್ಲ ವಯಸ್ಸಿನ ಚಿಕ್ಕ ಮಕ್ಕಳೇ, ಸಿಂಗಲ್ ಫಾರೆವರ್ ಎಂದರೆ ‘ಭೀಷ್ಮ’ ಬಾಯ್ಸ್. ನಿತಿನ್ ಸರ್, ವೆಂಕಿ ಕುದುಮುಲಾ ಸರ್, ನಾಗ ವಂಶಿ ಸರ್, ಸಿತಾರಾ ಎಂಟರ್ ಟೈನ್‍ಮೆಂಟ್. ಚಿತ್ರದ ಶೂಟಿಂಗ್ ಶುರುವಾಗೋದಕ್ಕೆ ಕಾಯುತ್ತಿದ್ದೇನೆ. ಇದೇ ಬ್ರೇಕಿಂಗ್ ನ್ಯೂಸ್ ಎಂದು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

    ರಶ್ಮಿಕಾ ಮಾಡಿದ ಟ್ವೀಟ್‍ಗೆ ಹಾಗೂ ಅವರು ನೀಡಿದ ಸುಳಿವಿನ ಬಗ್ಗೆ ಅಭಿಮಾನಿಗಳು ಯೋಚಿಸುತ್ತಿದ್ದರು. ಅಲ್ಲದೆ ಅವರ ಟ್ವೀಟ್‍ಗಾಗಿ ಸಂಜೆ 6 ಗಂಟೆಗೆ ಕಾಯುತ್ತಿದ್ದರು. ಆದ್ರೆ ರಶ್ಮಿಕಾ ಸಂಜೆ 6 ಗಂಟೆಗೆ ತಮ್ಮ ಭೀಷ್ಮ ಸಿನಿಮಾದ ಬಗ್ಗೆ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.

  • ಶನಿ ಸೀರಿಯಲ್‍ನಿಂದ ಹೊರಬಂತು ಬಿಗ್ ಬ್ರೇಕಿಂಗ್ ನ್ಯೂಸ್- ಧಾರಾವಾಹಿಯಿಂದ ಸೂರ್ಯದೇವ ಔಟ್

    ಶನಿ ಸೀರಿಯಲ್‍ನಿಂದ ಹೊರಬಂತು ಬಿಗ್ ಬ್ರೇಕಿಂಗ್ ನ್ಯೂಸ್- ಧಾರಾವಾಹಿಯಿಂದ ಸೂರ್ಯದೇವ ಔಟ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶನಿ’ ಧಾರಾವಾಹಿ ಅಖಾಡದಿಂದ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಂದಿದ್ದು, ಧಾರಾವಾಹಿಯಿಂದ ಸೂರ್ಯದೇವನನ್ನು ಔಟ್ ಮಾಡಲಾಗಿದೆ.

    ರಂಜಿತ್ ಕುಮಾರ್ ಧಾರಾವಾಹಿಯಲ್ಲಿ ಸೂರ್ಯದೇವನ ಪಾತ್ರ ಮಾಡುತ್ತಿದ್ದರು. ರಂಜಿತ್ ಅವರ ಸೂರ್ಯನ ಪಾತ್ರ ಕಂಡು ಕರುನಾಡ ಜನತೆ ಅವರನ್ನು ಮೆಚ್ಚಿಕೊಂಡಿತ್ತು. ಆದರೆ ಈಗ ಏಕಾಏಕಿ ಶನಿ ಧಾರಾವಾಹಿಯಿಂದ ರಂಜಿತ್  ಹೊರಬಂದಿದ್ದಾರೆ.

    ಶನಿ ಧಾರವಾಹಿಯಿಂದ ರಂಜಿತ್ ಹೊರಬರಲು ಮೂಲ ಕಾರಣ ಸಂಭಾವನೆ ಎಂದು ಹೇಳಲಾಗಿದೆ. ಕಳೆದ ಮೂರು ತಿಂಗಳಿಂದ ಸೂರ್ಯ ದೇವನಿಗೆ ಸಂಭಾವನೆ ಕೊಟ್ಟಿಲ್ಲ. ಒಪ್ಪಂದದ ಪ್ರಕಾರ ರಂಜಿತ್‍ಗೆ ಬರೋಬ್ಬರಿ 3,60,000 ರೂ. ಸಂಭಾವನೆ ಬರಬೇಕಾಗಿದೆ.

    ರಂಜಿತ್ ಜುಲೈ 28ಕ್ಕೆ ಶೂಟಿಂಗ್ ಮುಗಿಸಿಕೊಟ್ಟು ರಜೆ ಇರುವ ಕಾರಣಕ್ಕೆ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸೂರ್ಯದೇವನ ಪಾತ್ರಕ್ಕೆ ಬೇರೊಬ್ಬರನ್ನು ತಂದು ಕೂರಿಸಿದ್ದಾರೆ. ಎರಡ್ಮೂರು ತಿಂಗಳು ಕಾಲ ಟೆಲಿಕಾಸ್ಟ್ ಆಗುವಷ್ಟು ಎಪಿಸೋಡ್ ಅನ್ನು ಜುಲೈನಲ್ಲೇ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ರಂಜಿತ್ ನಿರ್ವಹಿಸಿರುವ ಸೂರ್ಯದೇವನ ಪಾತ್ರವೇ ಧಾರಾವಾಹಿಯಲ್ಲಿ ಪ್ಲೇ ಆಗುತ್ತಿದೆ.

    ಈಗ ರಂಜಿತ್ ಅವರ ಪಾತ್ರಕ್ಕೆ ಮಧುಸಾಗರ್ ಎಂಟ್ರಿ ಕೊಟ್ಟಿದ್ದು, ಕೆಲ ದಿನಗಳಲ್ಲಿ ಇವರ ಪಾತ್ರ ಇರುವ ದೃಶ್ಯ ಪ್ರಸಾರವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಯ ಸಾವಿನ ಬ್ರೇಕಿಂಗ್ ನ್ಯೂಸ್ ಓದಿ ಕರ್ತವ್ಯ ಪ್ರಜ್ಞೆ ಮೆರೆದ ನಿರೂಪಕಿ!

    ಪತಿಯ ಸಾವಿನ ಬ್ರೇಕಿಂಗ್ ನ್ಯೂಸ್ ಓದಿ ಕರ್ತವ್ಯ ಪ್ರಜ್ಞೆ ಮೆರೆದ ನಿರೂಪಕಿ!

    ರಾಯ್‍ಪುರ: ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಗಂಡನ ಸುದ್ದಿಯನ್ನು ನಿರೂಪಕಿಯೊಬ್ಬರು ಓದಿರುವ ಮನಕಲಕುವ ಘಟನೆ ಛತ್ತೀಸ್‍ಘಡ್‍ನಲ್ಲಿ ನಡೆದಿದೆ.

    ಐಬಿಸಿ 24 ಹೆಸರಿನ ಚಾನೆಲ್‍ನ ಆಂಕರ್ ಸರ್‍ಪ್ರೀತ್ ಕೌರ್ ಬೆಳಗ್ಗೆ ನ್ಯೂಸ್ ಲೈವ್‍ನಲ್ಲಿರುವಾಗ ಮಹಸಮುಂದ್ ಜಿಲ್ಲೆಯ ಪಿತಾರಾ ಎಂಬಲ್ಲಿ ರೆನಾಲ್ಟೋ ಡಸ್ಟರ್ ಕಾರ್ ಅಪಘಾತವಾಗಿ ಕಾರ್‍ನಲ್ಲಿದ್ದ ಐವರ ಪೈಕಿ ಮೂವರು ಸಾವನ್ನಪ್ಪಿರೋ ಸುದ್ದಿ ಬಂದಿತ್ತು. ಕೌರ್ ಗಂಡ ಹರ್ಷಾದ್ ಕವಾಡೆ ಕೂಡ ಅಪಘಾತಕ್ಕೆ ಬಲಿಯಾಗಿದ್ರು. ಸ್ಥಳದಿಂದ ವರದಿಗಾರ ಫೋನ್ ಮೂಲಕ ಮಾಹಿತಿ ಕೊಟ್ಟಿದ್ದರು.

    ಕೌರ್ ಅವರಿಗೆ ಸುದ್ದಿಯನ್ನು ಓದುವಾಗ ಅಪಘಾತಕ್ಕೆ ಒಳಗಾದ ಕಾರು ತನ್ನ ಪತಿಯದ್ದೇ ಎಂದು ಗೊತ್ತಾಗಿತ್ತು. ಆದರೂ ಕೌರ್ ಅವರು ಸುದ್ದಿಯನ್ನು ಅರ್ಧಕ್ಕೆ ನಿಲ್ಲಿಸದೇ ಪೂರ್ಣವಾಗಿ ಓದಿ ತನ್ನ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಸ್ಟುಡಿಯೋ ದಿಂದ ಹೊರ ಬಂದು ಕೌರ್ ಭಾವುಕರಾಗಿ ಕಣ್ಣೀರು ಹಾಕಲು ಪ್ರಾರಂಭಿಸಿದರು ಎಂದು ಚಾನೆಲ್‍ನ ಮುಖ್ಯಸ್ಥರು ತಿಳಿಸಿದ್ದಾರೆ.

    ಐಬಿಸಿ ಚಾನೆಲ್ ಛತ್ತೀಸಘಡ್ ರಾಜ್ಯದ ಬಹು ವೀಕ್ಷಕರನ್ನು ಹೊಂದಿರುವ ಚಾನೆಲ್. ಕಳೆದ 9 ವರ್ಷಗಳಿಂದ ಐಬಿಸಿ 24 ಸುದ್ದಿ ವಾಹಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. 28 ವರ್ಷದ ಕೌರ್ ಒಂದು ವರ್ಷದ ಹಿಂದೆ ಹರ್ಷದ್ ಕಾವಡೆ ಎಂಬವರನ್ನು ವಿವಾಹವಾಗಿದ್ದರು. ಇಬ್ಬರು ರಾಯ್‍ಪುರ ನಗರದಲ್ಲಿ ವಾಸವಗಿದ್ದರು.

    ನಮಗೆ ಕೌರ್ ನ್ಯೂಸ್ ಓದುವಾಗ ಅವರ ಪತಿ ತೀರಿಕೊಂಡಿರೋ ಬಗ್ಗೆ ಗೊತ್ತಿತ್ತು. ಆದ್ರೆ ಹೇಳೋ ಧೈರ್ಯ ಬರಲಿಲ್ಲ. ಕೌರ್ ಧೈರ್ಯವಂತೆ. ನಮಗೆ ಆಕೆಯ ಬಗ್ಗೆ ಹೆಮ್ಮೆ ಇದೆ ಅಂತೆ ವಾಹಿನಿ ಸಂಪಾದಕರು ತಿಳಿಸಿದ್ದಾರೆ.