Tag: ಬ್ರೆಜಿಲ್

  • ಬ್ರೆಜಿಲ್‌ನಲ್ಲಿ ವೇದಘೋಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ

    ಬ್ರೆಜಿಲ್‌ನಲ್ಲಿ ವೇದಘೋಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ

    ಬ್ರೆಜಿಲಿಯಾ: ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬ್ರೆಜಿಲ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವೇದ ಘೋಷಗಳ ಜೊತೆಗೆ ಭಾರತೀಯ ಸಂಸ್ಕೃತಿಯಂತೆ ನೃತ್ಯದ ಮೂಲಕ ಭವ್ಯವಾದ ಸ್ವಾಗತ ನೀಡಲಾಯಿತು.

    ರಿಯೊ ಡಿ ಜನೈರೊದಲ್ಲಿ, ವೈದಿಕ ವಿದ್ವಾಂಸರ ಗುಂಪು, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಸಾಮರಸ್ಯದಿಂದ ಸಂಸ್ಕೃತ ಶ್ಲೋಕಗಳನ್ನು ಪಠಿಸಿದರು. ಮೋದಿಯವರ ಮೂರು ರಾಷ್ಟ್ರಗಳ ಭೇಟಿಯ ಎರಡನೇ ಹಂತ ಇದಾಗಿದ್ದು, ಈ ಸಂದರ್ಭದಲ್ಲಿ ಅವರು ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಆಪ್‌ಗೆ ರಾಜೀನಾಮೆ ನೀಡಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಗೆ ಸೇರ್ಪಡೆ

    ಈ ಬಗ್ಗೆ ಪ್ರಧಾನಿ ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ರಿಯೊ ಡಿ ಜನೈರೊಗೆ ಆಗಮಿಸಿದ ನಂತರ ಭಾರತೀಯ ಸಮುದಾಯದಿಂದ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತದಿಂದ ನನಗೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

    ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯ ಪ್ರಕಾರ, ಬ್ರೆಜಿಲ್‌ನಲ್ಲಿ ಭಾರತದ ಸಂಸ್ಕೃತಿ, ಧರ್ಮ, ಪ್ರದರ್ಶನ ಕಲೆಗಳು ಮತ್ತು ತತ್ವಶಾಸ್ತ್ರದಲ್ಲಿ ಗಮನಾರ್ಹ ಆಸಕ್ತಿ ಇದೆ. ರಾಮಕೃಷ್ಣ ಮಿಷನ್, ಇಸ್ಕಾನ್, ಸತ್ಯಸಾಯಿ ಬಾಬಾ ಚಳುವಳಿ, ಮಹರ್ಷಿ ಮಹೇಶ್ ಯೋಗಿ ಅವರ ಅನುಯಾಯಿಗಳು ಮತ್ತು ಭಕ್ತಿ ವೇದಾಂತ ಫೌಂಡೇಶನ್‌ನಂತಹ ಸಂಸ್ಥೆಗಳು ಬ್ರೆಜಿಲ್‌ನಾದ್ಯಂತ ಸಕ್ರಿಯ ಅಧ್ಯಾಯಗಳನ್ನು ಹೊಂದಿವೆ. ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯು ಬ್ರೆಜಿಲ್‌ನೊಂದಿಗೆ ಪ್ರತಿಧ್ವನಿಸಲು ಭಾರತೀಯ ಸಂಸ್ಕೃತಿಯ ಆರಂಭಿಕ ಅಂಶಗಳಲ್ಲಿ ಇದು ಒಂದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಚಿನ್ನ ಕಳ್ಳತನ ಮಾಡಿದ್ದಕ್ಕಾಗಿ ಮಹಿಳೆಗೆ 235 ವರ್ಷ ಜೈಲು ಶಿಕ್ಷೆ

    ನೈಜೀರಿಯಾ ಭೇಟಿಯೊಂದಿಗೆ ಆರಂಭವಾದ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದ ಭಾಗವಾಗಿ ಪ್ರಧಾನಿ ಮೋದಿ ಸೋಮವಾರ ಬ್ರೆಜಿಲ್‌ಗೆ ಆಗಮಿಸಿದರು. ರಿಯೊ ಡಿ ಜನೈರೊದಲ್ಲಿ ರಾಯಭಾರಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಭಾರತೀಯ ಪ್ರತಿನಿಧಿಗಳು ಅವರನ್ನು ಸ್ವಾಗತಿಸಿದರು. 19ನೇ ಜಿ20 ನಾಯಕರ ಶೃಂಗಸಭೆಯು ಬ್ರೆಜಿಲ್‌ನಲ್ಲಿ ನ.18 ರಿಂದ 19ರವರೆಗೆ ನಡೆಯಲಿದೆ. ಜಿ20 ಶೃಂಗಸಭೆಯಲ್ಲಿ ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ನ.18-19ರಂದು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡನ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದು ಕೊಲೆ – ಬಿರುಗಾಳಿ ಎಬ್ಬಿಸಿದ ಪತ್ರ

  • ಜಿ20 ಶೃಂಗಸಭೆಗೂ ಮುನ್ನ ಬ್ರೆಜಿಲ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – ಹೆಚ್ಚಿದ ಆತಂಕ

    ಜಿ20 ಶೃಂಗಸಭೆಗೂ ಮುನ್ನ ಬ್ರೆಜಿಲ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – ಹೆಚ್ಚಿದ ಆತಂಕ

    – ಸುಪ್ರೀಂ ಕೋರ್ಟ್‌ ಹೊರಗೆ ತನ್ನನ್ನು ತಾನು ಸ್ಫೋಟಿಸಿಕೊಂಡ ವ್ಯಕ್ತಿ

    ಬ್ರಿಜಿಲಿಯಾ: ಸುಪ್ರೀಂ ಕೋರ್ಟ್‌ನ ಹೊರಗೆ ವ್ಯಕ್ತಿಯೊಬ್ಬ ಆತ್ಮಹುತಿ ಬಾಂಬ್‌ ದಾಳಿ ನಡೆಸಿರುವ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.

    ಕೋರ್ಟ್‌ ಪ್ರವೇಶಿಸಲು ಪ್ರಯತ್ನಿಸುವಾಗ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಜಿ20 ಸಭೆಗೆ ಅಂತಿಮ ತಯಾರಿ ನಡೆಸುತ್ತಿರುವ ಹೊತ್ತಿನಲ್ಲೇ ಸ್ಫೋಟ ಸಂಭವಿಸಿರುವುದು ಭದ್ರತಾ ಆತಂಕವನ್ನು ಉಂಟು ಮಾಡಿದೆ.

    ನ್ಯಾಯಾಲಯದ ಕಟ್ಟಡದ ಸಮೀಪವಿರುವ ಪಾರ್ಕಿಂಗ್ ಸ್ಥಳದಲ್ಲಿ ಮೊದಲ ಸ್ಫೋಟ ಸಂಭವಿಸಿತು. ಬಳಿಕ ಕೋರ್ಟ್ ಮುಂಭಾಗದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ. ಸ್ಫೋಟದ ಪಳೆಯುಳಿಕೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

    ಕೋರ್ಟ್ ಕಟ್ಟಡಕ್ಕೆ ಹಾನಿ ಮಾಡಲು ಸ್ಫೋಟ ನಡೆಸಿದ ಶಂಕಿತರು ಪ್ರಯತ್ನಿಸಿದ್ದರು. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ.

    ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಸೇರಿ ಇಪ್ಪತ್ತು ದೇಶದ ನಾಯಕರು ಭಾಗಿಯಾಗಲಿದ್ದಾರೆ. ಅದಕ್ಕೂ ಮುನ್ನ ನಡೆದಿರುವ ಈ ಸ್ಫೋಟ ಆತಂಕವನ್ನು ಹೆಚ್ಚಿಸಿದೆ.

  • 19ನೇ ವಯಸ್ಸಿಗೆ ಬ್ರೆಜಿಲಿಯನ್ ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು

    19ನೇ ವಯಸ್ಸಿಗೆ ಬ್ರೆಜಿಲಿಯನ್ ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು

    ಬ್ರೆಸಿಲಿಯಾ: ಬ್ರೆಜಿಲ್ (Brazil) ಮೂಲದ 19 ವರ್ಷದ ಮ್ಯಾಥ್ಯೂಸ್ ಪಾವ್ಲಾಕ್ ಭಾನುವಾರ (ಸೆ.01)ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಮೂಲತಃ ದಕ್ಷಿಣ ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದವರಾದ ಮ್ಯಾಥ್ಯೂಸ್ ಪಾವ್ಲಾಕ್ (Matheus Pavlak) ದೇಹದಾರ್ಢ್ಯದಲ್ಲಿ (Bodybuilder) ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಇದನ್ನೂ ಓದಿ: ಸರ್ವಿಸ್ ರಸ್ತೆಯಲ್ಲಿ ಗುಂಡಿ ಗಂಡಾಂತರ: ಹೆದ್ದಾರಿಯಲ್ಲಿ ಕುಸಿದ ಬೃಹತ್ ಸ್ಲಾಬ್‌ಗಳು

    ತಮ್ಮ ಹುಟ್ಟೂರಲ್ಲಿ ನಡೆದ ಸ್ಪರ್ಧೆಗಳಲ್ಲಿ 4ನೇ ಮತ್ತು 6ನೇ ಸ್ಥಾನ ಪಡೆದುಕೊಂಡಿದ್ದ ಮ್ಯಾಥ್ಯೂಸ್, 2023ರಲ್ಲಿ 23 ವರ್ಷದೊಳಗಿನ ವಿಭಾಗದ ಸ್ಪರ್ಧೆಯಲ್ಲಿ “ಮಿ. ಬ್ಲೂಮೆನೌ” ಆಗಿದ್ದರು.

    ದೇಹದಾರ್ಢ್ಯದಲ್ಲಿ ತೊಡಗಲು ಕೇವಲ 5 ವರ್ಷಗಳಲ್ಲಿ ತಮ್ಮ ದೇಹವನ್ನು ಮಾರ್ಪಡಿಸಿಕೊಂಡಿದ್ದರು. ದೇಹವನ್ನು ಮಾರ್ಪಡಿಸಿಕೊಳ್ಳಲು ಔಷಧಿಗಳ ಬಳಕೆಯು ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಉಹಾಪೋಹಗಳು ವ್ಯಕ್ತವಾಗಿವೆ.

     

    View this post on Instagram

     

    A post shared by Lucas Chegatti (@chegatti_treinador)

    ಪಾವ್ಲಾಕ್‌ನ ಮಾಜಿ ತರಬೇತುದಾರ ಲ್ಯೂಕಾಸ್ ಚೆಗಟ್ಟಿ (Lucas Chegatti), ಸಾವಿನ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ನಾನು ಮ್ಯಾಥ್ಯೂಸ್‌ನ ಮೊದಲ ತರಬೇತುದಾರನಾಗಿದ್ದೆ. ಅತ್ಯಮೂಲ್ಯ ಗೆಳೆಯನನ್ನು ನಾನು ಇಂದು ಕಳೆದುಕೊಂಡಿದ್ದೇನೆ. ಹೃದಯದ ಭಾರವನ್ನು ಪದಗಳ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂದು ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಪಶ್ಚಿಮ ಬಂಗಾಳದ ʼಅಪರಾಜಿತ ಬಿಲ್‌ʼ ಪೋಕ್ಸೊಗಿಂತ ಭಿನ್ನ ಹೇಗೆ?

  • ಬ್ರೆಜಿಲ್‌ನಲ್ಲಿ ವಿಮಾನ ದುರಂತ – ಎಲ್ಲಾ 62 ಮಂದಿ ಸಾವು

    ಬ್ರೆಜಿಲ್‌ನಲ್ಲಿ ವಿಮಾನ ದುರಂತ – ಎಲ್ಲಾ 62 ಮಂದಿ ಸಾವು

    ಸಾವೊ ಪೌಲೋ: ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ (Brazil) ಸಾವೊ ಪಾಲೊ ಬಳಿ ಪತನಗೊಂಡಿದ್ದು (Plane Crash) ಅದರಲ್ಲಿದ್ದ ಸಿಬ್ಬಂದಿ ಪ್ರಯಾಣಿಕರು ಸೇರಿ ಎಲ್ಲಾ 62 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

    ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊ ಪೌಲೋ (Sao Paulo) ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್‌ಲೈನ್‌ Voepass ವಿಮಾನವು ಸಾವೊ ಪಾಲೊದಿಂದ ವಾಯುವ್ಯಕ್ಕೆ 80 ಕಿಮೀ (50 ಮೈಲುಗಳು) ದೂರದಲ್ಲಿರುವ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ.

    ವಿಮಾನ ವಸತಿ ಪ್ರದೇಶದಲ್ಲಿ ಬಿದ್ದರೂ ನಾಗರಿಕರ ಸಾವು ನೋವಾಗಿಲ್ಲ ಎಂದು ವರದಿಯಾಗಿದೆ. ಪೈಲಟ್‌ ವಿಮಾನ ಮನೆಗಳ ಮೇಲೆ ಬೀಳುವುದನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಮೇಲಿನಿಂದ ಗಿರಕಿ ಹೊಡೆಯುತ್ತಾ ಬೀಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 9ಕ್ಕೆ ಇಳಿಸಲು ಪ್ರಸ್ತಾಪ – ಇರಾಕ್‌ ಮಸೂದೆಗೆ ಆಕ್ರೋಶ

    ವಿಮಾನವು ಪತನ ಹೊಂದಲು ಕಾರಣವೇನು ಎಂಬುದರ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಹವಾಮಾನ ವೈಪರಿತ್ಯದಿಂದ ಪೈಲಟ್‌ ಎಂಜಿನ್ ಮೇಲೆ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. Voepass ಏರ್‌ಲೈನ್ಸ್‌ ಬ್ರೆಜಿಲ್‌ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.

    ಏರ್‌ಬಸ್ ಮತ್ತು ಇಟಾಲಿಯನ್ ಏರೋಸ್ಪೇಸ್ ಗ್ರೂಪ್ ಲಿಯೊನಾರ್ಡೊ ಜಂಟಿ ಒಡೆತನದದ ಎಟಿಆರ್‌ (ATR) ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

     

  • ಬ್ರೆಜಿಲ್‌ನ ಅಮೆಜಾನ್ ಪ್ರದೇಶದಲ್ಲಿ ವಿಮಾನ ಪತನ – ಮಗು ಸೇರಿ 12 ಮಂದಿ ಸಾವು

    ಬ್ರೆಜಿಲ್‌ನ ಅಮೆಜಾನ್ ಪ್ರದೇಶದಲ್ಲಿ ವಿಮಾನ ಪತನ – ಮಗು ಸೇರಿ 12 ಮಂದಿ ಸಾವು

    ಬ್ರೆಸಿಲಿಯಾ: ಬ್ರೆಜಿಲ್‌ನ (Brazil) ಅಮೆಜಾನ್ (Amazon) ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದ್ದು (Plane Crash), ಒಂದು ಮಗು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

    ವಾಯುವ್ಯ ರಾಜ್ಯವಾದ ಎಕರೆ (Acre) ಸರ್ಕಾರದ ಹೇಳಿಕೆಯ ಪ್ರಕಾರ, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಎಕರೆ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊದಲ್ಲಿನ (Rio Branco) ಮುಖ್ಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ 37 ಭಾರತೀಯ ಮೀನುಗಾರರ ಬಂಧನ – 5 ದೋಣಿಗಳು ವಶ

    ಘಟನೆಯಲ್ಲಿ ಒಂಬತ್ತು ವಯಸ್ಕರು ಮತ್ತು ಒಂದು ಮಗು ಸೇರಿದಂತೆ ಒಟ್ಟು ಹತ್ತು ಪ್ರಯಾಣಿಕರು ಮತ್ತು ಪೈಲಟ್ ಹಾಗೂ ಸಹ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಇದನ್ನೂ ಓದಿ: ಹಾಟ್‍ಟಬ್‍ನಲ್ಲಿ ನಟ ಶವವಾಗಿ ಪತ್ತೆ

    ಬ್ರೆಜಿಲ್‌ನ ಪೆರು ಮತ್ತು ಬೊಲಿವಿಯಾದ ಗಡಿಯ ಸಮೀಪವಿರುವ ದೂರದ ಪ್ರದೇಶದಲ್ಲಿ ವಿಮಾನ ಪತನವಾಗಿದ್ದು, ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಅನೇಕ ಪ್ರಯಾಣಿಕರು ವೈದ್ಯಕೀಯ ಆರೈಕೆಯ ನಂತರ ನೆರೆಯ ಅಮೆಜಾನಾಸ್ ರಾಜ್ಯಕ್ಕೆ ಮರಳುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ – 32 ಮಂದಿ ಸಜೀವ ದಹನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ISSF World Cup 2023: 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ಭಾರತದ ಇಳವೆನ್ನಿಲಾ ವಾಳರಿವನ್‌

    ISSF World Cup 2023: 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ಭಾರತದ ಇಳವೆನ್ನಿಲಾ ವಾಳರಿವನ್‌

    ರಿಯೊ ಡಿ ಜನೈರೊ: ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ 2023 (ISSF World Cup 2023) ರಲ್ಲಿ ಭಾರತದ ಶೂಟರ್ ಇಳವೆನ್ನಿಲಾ ವಾಳರಿವನ್, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

    ಒಲಿಂಪಿಯನ್ ಇಳವೆನ್ನಿಲಾ ವಾಳರಿವನ್ (Elavenil Valarivan) ಫೈನಲ್‌ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ 252.2 ಪಾಯಿಂಟ್ಸ್‌ಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಫ್ರಾನ್ಸ್‌ನ ಓಸಿಯಾನ್ ಮುಲ್ಲರ್, 251.9 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಿಯಾಲೆ ಜಾಂಗ್, 229.0 ಪಾಯಿಂಟ್ಸ್‌ನೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಇದನ್ನೂ ಓದಿ: Asia Cup 2023: ಫೈನಲ್‌ ಪಂದ್ಯಕ್ಕೂ ತಪ್ಪದ ಮಳೆ ಕಾಟ – ಪಂದ್ಯ ರದ್ದಾದ್ರೆ ಯಾರಾಗ್ತಾರೆ ವಿನ್ನರ್‌?

    ವಾಳರಿವನ್ ಅವರ ಎರಡನೇ ವೈಯಕ್ತಿಕ ISSF ವಿಶ್ವಕಪ್ ಪದಕ‌ ಇದಾಗಿದೆ. 24 ವರ್ಷದ ಶೂಟರ್ 2019 ರಲ್ಲಿ ರಿಯೋ ವಿಶ್ವಕಪ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನವನ್ನು ಗೆದ್ದಿದ್ದರು.

    ಇಳವೆನ್ನಿಲಾ 630.5 ಅಂಕಗಳೊಂದಿಗೆ 8ನೇಯವರಾಗಿ ಫೈನಲ್‌ ಸುತ್ತು ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ ಪ್ರತಿ ಸಲ 10.01 ಕ್ಕೂ ಹೆಚ್ಚು ಪಾಯಿಂಟ್ಸ್‌ ಗಿಟ್ಟಿಸುವ ಮೂಲಕ ಉತ್ತಮ ಸಾಧನೆ ಮಾಡಿದರು. ಇದನ್ನೂ ಓದಿ: ಬಾಂಗ್ಲಾದೇಶದ ವಿರುದ್ಧ ಭಾರತ ಸೋತಿದ್ದು ಪಾಕ್‌ ತಂಡಕ್ಕೆ, ನನಗೆ ಸಮಾಧಾನ: ಶೋಯೆಬ್‌ ಅಖ್ತರ್‌

    ಇತರ ಭಾರತೀಯ ಶೂಟರ್‌ಗಳ ಪೈಕಿ ನರ್ಮದಾ ನಿತಿನ್ ರಾಜು (628.6) 22ನೇ ಸ್ಥಾನ ಪಡೆದರೆ, ಆಯುಷಿ ಪೊಡ್ಡರ್ 626.9 ಅಂಕಗಳೊಂದಿಗೆ 32ನೇ ಸ್ಥಾನ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ರೆಜಿಲ್‍ನಲ್ಲಿ ವಿಮಾನ ಪತನ – 14 ಮಂದಿ ದುರ್ಮರಣ

    ಬ್ರೆಜಿಲ್‍ನಲ್ಲಿ ವಿಮಾನ ಪತನ – 14 ಮಂದಿ ದುರ್ಮರಣ

    ರಿಯೊ ಡಿ ಜನೈರೊ: ವಿಮಾನವೊಂದು ಪತನಗೊಂಡು (Plane Crash) 14 ಜನ ಮೃತಪಟ್ಟ ಘಟನೆ ಬ್ರೆಜಿಲ್‍ನ (Brazil) ಜನಪ್ರಿಯ ಪ್ರವಾಸಿ ತಾಣವಾದ ಬಾರ್ಸಿಲೋಸ್‍ನಲ್ಲಿ ನಡೆದಿದೆ. ಭಾರೀ ಮಳೆಯ (Rain) ಹಿನ್ನೆಲೆಯಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸಿದ ಕಾರಣ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೃತರಲ್ಲಿ 12 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಎಂದು ತಿಳಿದು ಬಂದಿದೆ. ಭಾರೀ ಮಳೆ ಹಾಗೂ ಬಿರುಗಾಳಿಯ ನಡುವೆ ಪೈಲೆಟ್ ವಿಮಾನವನ್ನು ಇಳಿಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಎದುರಿನ ರನ್ ವೇ ಪೈಲೆಟ್‍ಗೆ ಕಾಣಿಸದೆ ಮಧ್ಯದಲ್ಲಿ ವಿಮಾನ ಇಳಿದಿದೆ. ಈ ವೇಳೆ ವೇಗ ನಿಯಂತ್ರಣಕ್ಕೆ ಬರದೆ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಎಸಗಿ ಅಪ್ರಾಪ್ತೆಯನ್ನು 2 ತಿಂಗಳ ಗರ್ಭಿಣಿ ಮಾಡಿದ 73 ವರ್ಷದ ವೃದ್ಧ!

    ಅಪಘಾತದ ಬಳಿಕ ಮೃತಪಟ್ಟವರನ್ನು ಅಮೆರಿಕ ಮೂಲದವರು ಎನ್ನಲಾಗಿತ್ತು. ಪರಿಶೀಲನೆಯ ಬಳಿಕ ಅವರೆಲ್ಲರು ಬ್ರೆಜಿಲ್‍ನ ಪ್ರಜೆಗಳು ಎಂದು ತಿಳಿದು ಬಂದಿದೆ. ಅವಘಡದ ಬಗ್ಗೆ ಬ್ರೆಜಿಲ್ ವಾಯುಪಡೆ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದೇ ಸಮಯದಲ್ಲಿ ಬಾರ್ಸಿಲೋಸ್‍ಗೆ ಆಗಮಿಸುತ್ತಿದ್ದ ಎರಡು ವಿಮಾನಗಳನ್ನು ಹವಾಮಾನದ ಕಾರಣದಿಂದಾಗಿ ಮನೌಸ್‍ಗೆ ವಾಪಸ್ ಕಳುಹಿಸಲಾಗಿದೆ. ಅಲ್ಲದೇ ಅವಘಡದಲ್ಲಿ ಸಾವನ್ನಪ್ಪಿದವರ ಮೃತ ದೇಹಗಳನ್ನು ಅವರ ಕುಟುಂಬಸ್ಥರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಹೆಚ್ಚಿನ ಮಳೆಯ ಕಾರಣದಿಂದ ವಿಮಾನ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಅನುಮತಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಲ್ಲಿನ ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ಮೂರೇ ತಿಂಗಳಲ್ಲಿ ಬೆಲೆಬಾಳೋ ವಸ್ತು ಜೊತೆ ಪತ್ನಿ ಪರಾರಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2024ರ ಜಿ20 ಶೃಂಗಸಭೆ ಬ್ರೆಜಿಲ್‌ ದೇಶಕ್ಕೆ ಶಿಫ್ಟ್‌ – ಬ್ರೆಜಿಲ್‌ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ

    2024ರ ಜಿ20 ಶೃಂಗಸಭೆ ಬ್ರೆಜಿಲ್‌ ದೇಶಕ್ಕೆ ಶಿಫ್ಟ್‌ – ಬ್ರೆಜಿಲ್‌ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ

    ನವದೆಹಲಿ: 2024 ರ ಜಿ20 ಶೃಂಗಸಭೆಯ (G20 Summit) ಅಧ್ಯಕ್ಷತೆಯನ್ನು ಬ್ರೆಜಿಲ್‌ (Brazil) ದೇಶ ವಹಿಸಿಕೊಂಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಜಿ20 ಶೃಂಗಸಭೆಯ ಅಧ್ಯಕ್ಷತೆ ಜವಾಬ್ದಾರಿಯನ್ನು ಬ್ರೆಜಿಲ್‌ ದೇಶದ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ.

    ಜಿ20 ಶೃಂಗಸಭೆಯ ಭಾಗವಾಗಿ 2ನೇ ದಿನದಂದು (ಭಾನುವಾರ) ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ ವಿಶ್ವ ನಾಯಕರು ದೆಹಲಿಯಲ್ಲಿರುವ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ನಡೆದ ಅಧಿವೇಶನದಲ್ಲಿ ಪ್ರಧಾನಿ ಮೋದಿ (Narendra Modi) ಅವರು ಮುಂದಿನ ವರ್ಷದ ಜಿ20 ಅಧ್ಯಕ್ಷತೆ ಜವಾಬ್ದಾರಿ ಹೊರಲು ಬ್ಯಾಟನ್‌ ಅನ್ನು ಬ್ರೆಜಿಲ್‌ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (Luiz Inacio Lula da Silva) ಅವರಿಗೆ ನೀಡಿದ್ದಾರೆ. ಇದನ್ನೂ ಓದಿ: G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ

    ಸೆಪ್ಟೆಂಬರ್ 9 ರಂದು ನವದೆಹಲಿಯ ಭಾರತ್ ಮಂಟಪಂ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕನ್ವೆನ್ಷನ್ ಸೆಂಟರ್‌ನಲ್ಲಿ G20 ನಾಯಕರ ಶೃಂಗಸಭೆಗೆ ಚಾಲನೆ ನೀಡಲಾಗಿತ್ತು. ಜಿ20 ನಾಯಕರು ಆಫ್ರಿಕಾ ಒಕ್ಕೂಟವನ್ನು ಖಾಯಂ ಸದಸ್ಯರನ್ನಾಗಿ ತಮ್ಮ ಗುಂಪಿಗೆ ಸ್ವಾಗತಿಸಿದರು.

    G20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಧ್ಯೇಯವಾಕ್ಯ ಈ ವರ್ಷದ ಶೃಂಗಸಭೆಯ ವಿಷಯ ಎಂದು ಪ್ರತಿಪಾದಿಸಿದೆ. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರಿಸರ ನಿಯಮ ಉಲ್ಲಂಘಿಸಿದ್ದಕ್ಕೆ ಫುಟ್‌ಬಾಲ್‌ ತಾರೆ ನೇಮರ್‌ಗೆ 27 ಕೋಟಿ ರೂ. ದಂಡ

    ಪರಿಸರ ನಿಯಮ ಉಲ್ಲಂಘಿಸಿದ್ದಕ್ಕೆ ಫುಟ್‌ಬಾಲ್‌ ತಾರೆ ನೇಮರ್‌ಗೆ 27 ಕೋಟಿ ರೂ. ದಂಡ

    ಬ್ರಸಿಲ್ಲ: ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಫುಟ್‌ಬಾಲ್‌ ತಾರೆ (Brazilian football star) ನೇಮರ್‌ಗೆ (Neymar) ಬರೋಬ್ಬರಿ 27 ಕೋಟಿ ರೂ. (3.3 ಮಿಲಿಯನ್‌ ಅಮೆರಿಕನ್‌ ಡಾಲರ್)‌ ದಂಡ ವಿಧಿಸಲಾಗಿದೆ.

    ದಂಡ ವಿಧಿಸಿರುವ ಬಗ್ಗೆ ಮಾಹಿತಿ ನೀಡಿರುವ ಬ್ರೆಜಿಲ್‌ ಅಧಿಕಾರಿಗಳು, ನೇಮರ್‌ ಅವರು ದಕ್ಷಿಣ ಬ್ರೆಜಿಲ್‌ನ (Brazil) ಕರಾವಳಿ ಪ್ರದೇಶದ ರಿಯೊ ಡಿ ಜನೈರೊದ ಹೊರವಲಯದಲ್ಲಿ ಐಷರಾಮಿ ಮನೆ ನಿರ್ಮಿಸಿದ್ದಾರೆ. ಅದಕ್ಕಾಗಿ ಶುದ್ಧ ನೀರಿನ ಮೂಲಗಳ ಬಳಕೆ, ಬಂಡೆ ಮತ್ತು ಮರಳು ಬಳಕೆ ವೇಳೆ ಪರಿಸರ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: India Women’s Squad: ಭಾರತ Vs ಬಾಂಗ್ಲಾದೇಶ ಟಿ20, ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟ

    ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣದ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬ ಸಿಟಿ ಕೌನ್ಸಿಲ್‌ ದೂರಿನಲ್ಲಿ ತಿಳಿಸಿದೆ.

    ಅನುಮತಿಯಿಲ್ಲದೆ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿರುವುದು, ನದಿ ನೀರನ್ನು ಬಳಸಿರುವುದು, ಸಸ್ಯವರ್ಗದ ಬೆಳವಣಿಗೆಗೆ ಅಡ್ಡಿಪಡಿಸಿರುವುದು ಸೇರಿದಂತೆ ಹಲವು ಅಪರಾಧಗಳನ್ನು ನೇಮರ್‌ ಮೇಲೆ ಹೊರಿಸಲಾಗಿದೆ. ಇದನ್ನೂ ಓದಿ: ಸಚಿನ್ LBW ತೀರ್ಪು ನೆನಪಿಸಿಕೊಂಡ ಅಜ್ಮಲ್

    ಬ್ರೆಜಿಲ್ ಫುಟ್‌ಬಾಲ್‌ ತಾರೆ ತಮ್ಮ ಬಲ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಿಂದ ಅವರು ಫುಟ್ಬಾಲ್ ಪಂದ್ಯಗಳಲ್ಲಿ ಆಡಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ರೆಜಿಲ್‌ ಚುನಾವಣೆಯಲ್ಲಿ ಸೋಲು – ಅಧಿಕಾರಕ್ಕೆ ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ

    ಬ್ರೆಜಿಲ್‌ ಚುನಾವಣೆಯಲ್ಲಿ ಸೋಲು – ಅಧಿಕಾರಕ್ಕೆ ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ

    ಬ್ರೆಸಿಲಿಯಾ: ಬ್ರೆಜಿಲ್‍ನಲ್ಲಿ (Brazil) ಭಾರೀ ಹೈಡ್ರಾಮಾ ನಡೆದಿದ್ದು ಚುನಾವಣೆಯಲ್ಲಿ ಸೋತ ಮಾಜಿ ಅಧ್ಯಕ್ಷ ಜೈರ್ ಬೋಲ್ಸನೇರೋ (Bolsonaro) ಬೆಂಬಲಿಗರು ಅಧಿಕಾರಕ್ಕಾಗಿ ಆ ದೇಶದ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ (Election) ಅಧ್ಯಕ್ಷ ಬೋಲ್ಸನೇರೋ ಸೋಲನ್ನು ಅಂಗೀಕರಿಸಲು ನಿರಾಕರಿಸಿದ ಅವರ ಸಾವಿರಾರು ಬೆಂಬಲಿಗರು, ರಾಜಧಾನಿ ಬ್ರೆಸಿಲಿಯಾದ ಪ್ರಮುಖ ಭವನಗಳನ್ನು ಆಕ್ರಮಿಸಿದ್ದಾರೆ. ಭದ್ರತಾ ವಲಯವನ್ನು ಬೇಧಿಸಿ ಸುಪ್ರೀಂಕೋರ್ಟ್, ಸಂಸತ್ ಭವನವಾದ ನ್ಯಾಷನಲ್ ಕಾಂಗ್ರೆಸ್, ಅಧ್ಯಕ್ಷರ ಭವನಗಳಿಗೆ ನುಗ್ಗಿದ್ದಾರೆ.

    ಕೈಗೆ ಸಿಕ್ಕಿದ್ದನ್ನು ಧ್ವಂಸ ಮಾಡಿ, ದಾಂಧಲೆ ನಡೆಸಿದ್ದಾರೆ. ಭದ್ರತಾ ಪಡೆಗಳು, ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬೋಲ್ಸನೇರೋಗೆ ಮರಳಿ ಅಧಿಕಾರ ಕೊಡಬೇಕು. ಇಲ್ಲವಾದರೆ ಲೂಲಾ ಡಿಸಿಲ್ವಾರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಕ್ರೋಶಿತರರು ಬೇಡಿಕೆ ಇಟ್ಟಿದ್ದಾರೆ.

    ಬೋಲ್ಸನೇರೋ ಬೆಂಬಲಿಗರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಹೆಲಿಕಾಪ್ಟರ್ ಮೂಲಕ ಟಿಯರ್ ಗ್ಯಾಸ್ ಪ್ರಯೋಗಿಸಿವೆ. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಹರಸಾಹಸ ಮಾಡುತ್ತಿವೆ. ಈವರೆಗೂ 500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲೆ ಬಿಟ್ಟು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಮೆರಿಕದ ಜಡ್ಜ್

    ಘಟನೆಗೆ ಲೂಲಾ ಡಿಸಿಲ್ವಾ ಗರಂ ಆಗಿದ್ದು, ಅವರು ಮಾಡುತ್ತಿರುವ ಹಾನಿಯನ್ನು ಸಹಿಸಲು ಸಾಧ್ಯವಿಲ್ಲ. ನಿರ್ದಾಕ್ಷಿಣ್ಯವಾಗಿ ಅವರನ್ನು ಹತ್ತಿಕ್ಕಬೇಕು ಎಂದು ಆದೇಶಿಸಿದ್ದಾರೆ. ಅಲ್ಲಿನ ಒಂದೊಂದು ದೃಶ್ಯವೂ 2021ರ ಜನವರಿ 21ರಂದು ಅಮೆರಿಕದ ಸಂಸತ್ ಭವನದಲ್ಲಿ ನಡೆದ ಸಂಘರ್ಷವನ್ನು ನೆನಪಿಸುವಂತಿವೆ. ಆದರೆ ಬೋಲ್ಸನೇರೋ ಮಾತ್ರ ಇದಕ್ಕೂ ನನಗೂ ಸಂಬಂಧವೇ ಇಲ್ಲ ಅಂತಿದ್ದಾರೆ. ಪರಿಸ್ಥಿತಿ ಇನ್ನೂ ತಹಬದಿಗೆ ಬಂದಿಲ್ಲ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇದೆ.

    ನಾಯಕರ ಖಂಡನೆ:
    ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿ ವಿಶ್ವಸಮುದಾಯ ಈ ಘಟನೆಯನ್ನು ಖಂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k