Tag: ಬ್ರೆಂಟ್ ರೆನಾಡ್

  • ಯುದ್ಧಪೀಡಿತ ಉಕ್ರೇನ್‍ನಲ್ಲಿ ಪ್ರಾಣ ಬಿಟ್ಟ ಪತ್ರಕರ್ತ

    ಯುದ್ಧಪೀಡಿತ ಉಕ್ರೇನ್‍ನಲ್ಲಿ ಪ್ರಾಣ ಬಿಟ್ಟ ಪತ್ರಕರ್ತ

    ಕೀವ್: ರಷ್ಯಾ, ಉಕ್ರೇನ್‌ ಮೇಲೆ ತನ್ನ ಆಕ್ರಮಣವನ್ನು ಮಂದುವರಿಸಿದೆ. ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಾವು ನೋವುಗಳು ಹೆಚ್ಚಾಗುತ್ತಿವೆ. ಇದೀಗ ಒಬ್ಬ ಪತ್ರಕರ್ತರು ಗುಂಡಿಗೆ ಬಲಿಯಾಗಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

    ಬ್ರೆಂಟ್ ರೆನಾಡ್(51) ಮೃತರಾಗಿದ್ದಾರೆ. ಮತ್ತೊಬ್ಬರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ರೆನಾಡ್ ಖಾಸಗಿ ಮಾಧ್ಯಮದಲ್ಲಿ ಕರೆಸ್ಪಾಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಸಾಂಬಾರ್‌ಗೆ 100 ರೂ. ಯಾಕೆ?- ಗ್ರಾಹಕನನ್ನು ಕೋಣೆಯಲ್ಲಿ ಕೂಡಿಹಾಕಿದ ಹೋಟೆಲ್ ಮಾಲೀಕ

    ಉಕ್ರೇನ್‍ನಲ್ಲಿ ಅಮೆರಿಕದ ಪತ್ರಕರ್ತ ಬ್ರೆಂಟ್ ರೆನಾಡ್ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ. ವೈದ್ಯಕೀಯ, ಸಾಕ್ಷಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು

    ಪತ್ರಕರ್ತ ಬ್ರೆಂಟ್ ರೆನಾಡ್‍ನ ಸಾವಿನ ಬಗ್ಗೆ ತೀವ್ರವಾಗಿ ದುಃಖಿತವಾಗಿದೆ. ಬ್ರೆಂಟ್ ಪ್ರತಿಭಾವಂತ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದರು, ಆದರೆ ಅವರು ಉಕ್ರೇನ್‍ನಲ್ಲಿ ನಿಯೋಜನೆಯಲ್ಲಿರಲಿಲ್ಲ ಎಂದು ಖಾಸಗಿ ವಾಹಿನಿಯ ಉಪ ವ್ಯವಸ್ಥಾಪಕ ಸಂಪಾದಕ ಕ್ಲಿಫ್ ಲೆವಿ ದುರಂತ ಘಟನೆಯ ಕುರಿತು ಮಾಧ್ಯಮ ಸಂಸ್ಥೆಯಿಂದ ಹೇಳಿಕೆಯನ್ನು ನೀಡುವುದರ ಜೊತೆಗೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.