Tag: ಬ್ರಿಡ್ಜ್

  • 13 ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!

    13 ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!

    ಪಾಟ್ನಾ: ಬಿಹಾರದ (Bihar) ಬೇಗುಸರಾಯ್‍ನಲ್ಲಿ (Begusarai) ಗಂಡಕ್ ನದಿ (Gandak River) ದಾಟಲು 13 ಕೋಟಿ ರೂ. ಖರ್ಚು ಮಾಡಿ ಕಟ್ಟಲಾಗಿದ್ದ 206 ಮೀಟರ್ ಉದ್ದದ ಬ್ರಿಡ್ಜ್ (Bridge) ಉದ್ಘಾಟನೆಗೂ ಮುನ್ನ ಕುಸಿದು ಬಿದ್ದಿದೆ.

    ಭಾನುವಾರ ಬೆಳಗ್ಗೆ ಬಿಹಾರದ ಬೇಗುಸರಾಯ್‍ನಲ್ಲಿ ಗಂಡಕ್ ನದಿ ಬಳಿ ನಿರ್ಮಿಸಲಾಗಿದ್ದ ಬ್ರಿಡ್ಜ್‌ ಮುಂಭಾಗ ಕುಸಿದು ನದಿ ಪಾಲಾಗಿದೆ. 2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆ ಬಳಿಕ 2017ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆಗೊಂಡಿರಲಿಲ್ಲ (Inauguration). ಆ ಬಳಿಕ ಕೆಲದಿನಗಳ ಹಿಂದೆ ಸೇತುವೆಯ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇಂದು ಬೆಳಗ್ಗೆ ಕುಸಿದು ಬಿದ್ದಿದೆ. ಇದನ್ನೂ ಓದಿ: ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    ಸಾಹೇಬ್‍ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಹೋಕ್ ಗಂಡಕ್ ಘಾಟ್ ಕಡೆಯಿಂದ ಆಕೃತಿ ತೋಲಾ ಚೌಕಿ ಮತ್ತು ಬಿಶನ್‍ಪುರ ನಡುವೆ ಸಂಪರ್ಕ ಕಲ್ಪಿಸಲು 206 ಮೀಟರ್ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಇದೀಗ ಉದ್ಘಾಟನೆಗೂ ಮುನ್ನ ಕುಸಿದು ಬಿದ್ದ ಪರಿಣಾಮ ದುರಂತವೊಂದು ತಪ್ಪಿದೆ. ಕೆಲ ತಿಂಗಳ ಹಿಂದೆ ಗುಜರಾತ್‍ನ ಮೊರ್ಬಿಯಲ್ಲಿ ದುರಸ್ತಿಗೊಂಡಿದ್ದ ಕೇಬಲ್ ಸೇತುವೆ ಕುಸಿತಗೊಂಡು ಹಲವು ಸಾವು-ನೋವುಗಳು ಸಂಭವಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ

    Live Tv
    [brid partner=56869869 player=32851 video=960834 autoplay=true]

  • ಸುಮ್ಮನಹಳ್ಳಿ ಬ್ರಿಡ್ಜ್‌ ಮತ್ತೆ ಕುಸಿತದ ಭೀತಿ – ನೆಲ ಕಾಣುವ ಮಟ್ಟಕ್ಕೆ ಕಿತ್ತು ಹೋದ ಕಾಂಕ್ರಿಟ್ ಸ್ಲ್ಯಾಬ್

    ಸುಮ್ಮನಹಳ್ಳಿ ಬ್ರಿಡ್ಜ್‌ ಮತ್ತೆ ಕುಸಿತದ ಭೀತಿ – ನೆಲ ಕಾಣುವ ಮಟ್ಟಕ್ಕೆ ಕಿತ್ತು ಹೋದ ಕಾಂಕ್ರಿಟ್ ಸ್ಲ್ಯಾಬ್

    ಬೆಂಗಳೂರು: ನಾಗರಬಾವಿಯಿಂದ ರಾಜಕುಮಾರ್ ಸಮಾಧಿಗೆ ಸಂಪರ್ಕ ಕಲ್ಪಿಸುವ ಸುಮ್ಮನಹಳ್ಳಿ ಬ್ರಿಡ್ಜ್ (Sumanahalli Bridge) ಮತ್ತೊಮ್ಮೆ ಕುಸಿತಗೊಂಡಿದ್ದು, ವಾಹನ ಸವಾರರ ಆತಂಕ ಹೆಚ್ಚಾಗಿದೆ.

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ (Bengaluru) ಸುಮ್ಮನಹಳ್ಳಿ ಬ್ರಿಡ್ಜ್‌ನ ಸಿಮೆಂಟ್ ಸ್ಲ್ಯಾಬ್‍ಗಳು ಕಿತ್ತು ಬಂದಿದ್ದು, ಫ್ಲೈ ಓವರ್ ಗುಂಡಿಯಿಂದ ನೆಲ ಕಾಣಿಸುತ್ತಿದೆ. ಸದ್ಯಕ್ಕೆ ಪೊಲೀಸರು (Police) ಭದ್ರತೆಗೆ ಬಂದಿದ್ದಾರೆ. ಇನ್ನೂ ಘಟನೆ ಹಿನ್ನೆಲೆಯಲ್ಲಿ ಕಿ.ಮೀಗಟ್ಟಲೇ ಟ್ರಾಫಿಕ್ ಉಂಟಾಗುತ್ತಿದ್ದು, ಸರ್ಕಾರದ ವಿರುದ್ಧ ವಾಹನ ಸವಾರರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ-ಪಿಯು ಮಂಡಳಿ ವಿಲೀನಕ್ಕೆ ನಿರ್ಧಾರ – ಸಂಪುಟ ಸಭೆಯಲ್ಲಿ ಅನುಮೋದನೆ

    ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಲೇ ಅಧಿಕಾರಿಗಳು ಗುಂಡಿ ಬಿದ್ದ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ಫ್ಲೈ ಓವರ್‌ನ್ನು ಬಂದ್ ಮಾಡಿದ್ದು, ಬದಲಿ ಮಾರ್ಗದ ವ್ಯವಸ್ಥೆಯನ್ನು ಮಾಡಿದ್ದಾರೆ. ವಾಹನ ಸಂಚಾರಕ್ಕೆ ಬದಲಿ ಮಾರ್ಗವಾಗಿ ಬ್ರಿಡ್ಜ್ ಕೆಳ ಭಾಗದ ರಸ್ತೆಯಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಇಡಿ ವಿಚಾರಣೆ ಎದುರಿಸಿದ್ದ ಡಿ.ಕೆ ಶಿವಕುಮಾರ್‌ಗೆ ಅನಾರೋಗ್ಯ

    2019ರಲ್ಲಿಯೂ ಸ್ಲ್ಯಾಬ್ ಕುಸಿದಿತ್ತು. ಆ ಸಮಯದಲ್ಲಿ ಸುಮ್ಮನಹಳ್ಳಿ ಬ್ರಿಡ್ಜ್‌ನ್ನು 6 ತಿಂಗಳು ಬಂದ್ ಮಾಡಲಾಗಿತ್ತು. ಸ್ಲ್ಯಾಬ್ ಬಿದ್ದ ಪಕ್ಕದ ರಸ್ತೆಯಲ್ಲೇ ಪ್ರಧಾನಿ ಮೋದಿ ಭೇಟಿ ನೀಡಿದ್ದಾಗ ಗುಣಮಟ್ಟದ ಡಾಂಬರಿಕರಣ ಮಾಡಲಾಗಿತ್ತು. ಸ್ಲ್ಯಾಬ್ ಬಿದ್ದ ರಸ್ತೆಗೆ ಡಾಂಬರಿಕರಣ ಮಾಡದೇ ನಿರ್ಲಕ್ಷ್ಯ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ಪಲ್ಟಿಯಾದ ಬಸ್ – 2 ಸಾವು, 15 ಮಂದಿಗೆ ಗಾಯ

    ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ಪಲ್ಟಿಯಾದ ಬಸ್ – 2 ಸಾವು, 15 ಮಂದಿಗೆ ಗಾಯ

    ಹಾವೇರಿ: ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ವಿಆರ್‍ಎಲ್ ಬಸ್ ಪಲ್ಟಿಯಾಗಿ ಚಾಲಕ ಸೇರಿ ಇಬ್ಬರು ಸಾವನ್ನಪ್ಪಿ, ಹದಿನೈದು ಜನರು ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಬಳಿ ಇರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದೆ.

    ಬೆಂಗಳೂರಿನಿಂದ ಗೋಕಾಕ್‍ಗೆ ಸ್ಲೀಪರ್ ಬಸ್ ಹೊರಟಿತ್ತು. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಕ್ರೇನ್‍ನ ಸಹಾಯದಿಂದ ಬಸ್ ಅನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ನಾಗಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ

    ಘಟನೆ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಾಡಿ ಯುವಕನ ಹುಚ್ಚಾಟ

    ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಾಡಿ ಯುವಕನ ಹುಚ್ಚಾಟ

    ಹಾವೇರಿ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಕೂಡ ಕಾರವಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ವರದಾ ನದಿಯ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಈ ನಡುವೆ ಭರಪೂರ ತುಂಬಿ ಹರಿಯುತ್ತಿರುವ ವರದಾ ನದಿ ನೀರಿನಲ್ಲಿ ಯುವಕನೋರ್ವ ಈಜಾಡಿ ಹುಚ್ಚಾಟ ಪ್ರದರ್ಶಿಸಿದ್ದಾನೆ.

    ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿ ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಯುವಕನೋರ್ವ ಜಿಗಿದು ಭರಪೂರ ಹರಿಯೋ ನೀರಿನಲ್ಲಿ ಈಜಾಡಿ ಹುಚ್ಚಾಟ ಮೆರೆದಿದ್ದಾನೆ. ಸ್ಥಳೀಯರಿಗೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಕೂಡ ಯುವಕರ ಈ ವರ್ತನೆ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರದಾ ನದಿ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಟ

    ಯುವಕ ನದಿಯಲ್ಲಿ ಈಜಾಡುತ್ತಿರುವ ವೀಡಿಯೋ ಮಾಡಿರುವ ಸ್ಥಳೀಯರು ಸಾಮಾಜಿಕ ಜಾಲತಾನದಲ್ಲಿ ಹರಿಬಿಟ್ಟಿದ್ದಾರೆ. ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಿಕೊಂಡು ಬಂದ ಯುವಕ ಕೊನೆಯಲ್ಲಿ ಧೀರೇಂದ್ರ ಮಠದ ಹತ್ತಿರ ದಡ ಸೇರಿದ್ದಾನೆ. ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯ ಬಗ್ಗೆ ಜಿಲ್ಲಾಡಳಿತ ಸ್ಥಳೀಯ ಯುವಕರಲ್ಲಿ ಹಲವು ಬಾರಿ ಎಚ್ಚರಿಕೆ ನೀಡಿದೆ ಆದರು ಯುವಕರು ಮಾತ್ರ ತಮ್ಮ ಹುಚ್ಚಾಟ ಕೊನೆಗೊಳಿಸುತ್ತಿಲ್ಲ.

  • ನಿರಂತರ ಮಳೆಗೆ ವರದಾ ನದಿಯ ಬ್ಯಾರೇಜ್ ಬಂದ್

    ನಿರಂತರ ಮಳೆಗೆ ವರದಾ ನದಿಯ ಬ್ಯಾರೇಜ್ ಬಂದ್

    ಹಾವೇರಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮೋಡಕವಿದ ವಾತಾವರಣದೊಂದಿಗೆ ಮಳೆ ಬೀಳುತ್ತಿದೆ.

    ಹಾವೇರಿ ನಗರ ಸೇರಿದಂತೆ ಜಿಲ್ಲೆಯ 8 ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಆಗಾಗ ಬೀಳುತ್ತಿರೋ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಳಿ ಇರೋ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿನ ಸಂಪರ್ಕ ಕಡಿತಗೊಂಡಿದೆ.

    ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನೀರು ಹರಿತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಕಳಸೂರು ಗ್ರಾಮದಿಂದ ದೇವಗಿರಿ, ಗಣಜೂರು, ಹಾವೇರಿ ಮತ್ತು ಕೋಳೂರಿಗೆ ಗ್ರಾಮಕ್ಕೆ ಓಡಾಡುತ್ತಿದ್ದ ಜನರಿಗೆ ಸಂಪರ್ಕ ಕಡಿತಗೊಂಡಿದೆ.

    ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರೋ ಹಿನ್ನೆಲೆಯಲ್ಲಿ ಹಿರೇಕೆರೂರು ಪಟ್ಟಣದ ದುರ್ಗಾದೇವಿ ಕೆರೆಗೂ ಭರಪೂರ ನೀರು ಬಂದಿದೆ.

  • ಸುಮನಹಳ್ಳಿ ಫ್ಲೈಓವರ್ ಕುಸಿತದಿಂದ ಎಚ್ಚೆತ್ತುಕೊಂಡ ಬಿಬಿಎಂಪಿ

    ಸುಮನಹಳ್ಳಿ ಫ್ಲೈಓವರ್ ಕುಸಿತದಿಂದ ಎಚ್ಚೆತ್ತುಕೊಂಡ ಬಿಬಿಎಂಪಿ

    – ಫ್ಲೈಓವರ್, ಬ್ರಿಡ್ಜ್, ಅಂಡರ್‌ಪಾಸ್‌ಗಳ ತಪಾಸಣೆಗೆ ಪ್ಲಾನ್

    ಬೆಂಗಳೂರು: ಸುಮನಹಳ್ಳಿ ಫ್ಲೈಓವರ್ ಕುಸಿತದಿಂದಾಗಿ ಬಿಬಿಎಂಪಿ ಎಚ್ಚೆತುಕೊಂಡಿದ್ದು, ಬೆಂಗಳೂರಿನ ಫ್ಲೈಓವರ್, ಬ್ರಿಡ್ಜ್, ಅಂಡರ್‌ಪಾಸ್‌ಗಳ ತಪಾಸಣೆ ನಡೆಸಲು ಪಾಲಿಕೆ ಮುಂದಾಗಿದೆ.

    ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲು ಬಿಬಿಎಂಪಿ ಮುಂದಾಗಿದೆ. ನಗರದ ಪ್ರಮುಖ ಮೇಲ್ಸೇತುವೆಗಳ ಸೂಚನಾ ಫಲಕ, ಮಾರ್ಗಸೂಚಿ, ಡಾಂಬರೀಕರಣ, ಬುಷ್ ಹಾಗೂ ಕೊಂಡಿಗಳ ಗುಣಮಟ್ಟಗಳನ್ನು ಸರಿಪಡಿಸುವ ಕೆಲಸ ಮಾಡಲಿದೆ. ಇದರ ಜೊತೆಗೆ ಇವುಗಳಿಗೆ ಬಣ್ಣ ಬಳಿಯುವುದು, ಫ್ಲೈಓವರ್, ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಸೋರುತ್ತಿದ್ದರೆ ಅದನ್ನು ತಡೆಯುವುದಕ್ಕೂ ಬಿಬಿಎಂಪಿ ಯೋಜನೆ ರೂಪಿಸಿಕೊಂಡಿದೆ.

    ಮೊದಲ ಹಂತದಲ್ಲಿ ನಗರದ ಪ್ರಮುಖ 24 ಫ್ಲೈಓವರ್, ಅಂಡರ್ ಪಾಸ್ ಮತ್ತು ಬ್ರಿಡ್ಜ್‌ಗಳ ಲೋಪದೋಷಗಳನ್ನು ಸರಿಪಡಿಸಲು ಬಿಬಿಎಂಪಿ 40 ಕೋಟಿ ರೂಪಾಯಿ ಮೀಸಲಿರಿಸಿದ್ದು, ಸದ್ಯದಲ್ಲೆ ಟೆಂಡರ್ ಕರೆಯಲು ಸಿದ್ಧತೆ ನಡೆಸುತ್ತಿದೆ.

    ಸುಮನಹಳ್ಳಿ ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ನ.1ರಿಂದ ನ.18ವರೆಗೆ ಒಂದು ಬದಿಯ ಸಂಚಾರವನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಸೇತುವೆ ನಿರ್ಮಾಣಗೊಂಡಿದೆ ಎಂದು ಖಾಸಗಿ ಸಂಸ್ಥೆಯೊಂದು ವರದಿ ನೀಡಿತ್ತು.

    ಈ ವರದಿಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಲಘು ವಾಹನಗಳಿಗೆ ಮುಕ್ತವಾಗಿದ್ದ ಸುಮನಹಳ್ಳಿ ಮೇಲ್ಸೇತುವೆಯನ್ನು ಒಂದು ತಿಂಗಳು ಬಂದ್ ಮಾಡಲು ಬಿಬಿಎಂಪಿ ಮುಂದಾಗಿದೆ. ಇದೇ ತಿಂಗಳ 15 ರಿಂದ ಭಾರೀ ವಾಹನಗಳ ಸಂಚಾರಕ್ಕೆ ಮೇಲ್ಸುತುವೆ ಎರಡು ಕಡೆಯಿಂದಲೂ ಅವಕಾಶ ನೀಡಲಾಗುವುದಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

  • ಬ್ರಿಡ್ಜ್ ಗೆ ಬೈಕ್ ಡಿಕ್ಕಿಯಾಗಿ ಯುವಕರಿಬ್ಬರ ದಾರುಣ ಸಾವು

    ಬ್ರಿಡ್ಜ್ ಗೆ ಬೈಕ್ ಡಿಕ್ಕಿಯಾಗಿ ಯುವಕರಿಬ್ಬರ ದಾರುಣ ಸಾವು

    ಮಂಡ್ಯ: ಬ್ರಿಡ್ಜ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಲ್ಲೆಯ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಚಿಲ್ಲಾಪುರ ಗೇಟ್ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಹಲಗೂರಿನ ಪ್ರತಾಪ್(23) ಬಾಣಸಮುದ್ರದ ಶಶಿ(24) ಮೃತ ದುರ್ದೈವಿಗಳು. ಘಟನೆಯಿಂದ ಪ್ರತಾಪ್ ಸ್ಥಳದಲ್ಲಿಯೇ ಮೃತಪಟ್ಟರೆ, ಶಶಿ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

    ಅಜಾಗರೂಕತೆ ಹಾಗೂ ಅತಿವೇಗವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಂಬೈ ರೈಲ್ವೇ ಅವ್ಯವಸ್ಥೆ ಬಗ್ಗೆ ಮೊದ್ಲೇ ದೂರು ನೀಡಿದ್ದ ಜನ-ದುರಂತಕ್ಕೆ ಯಾರು ಹೊಣೆ?

    ಮುಂಬೈ ರೈಲ್ವೇ ಅವ್ಯವಸ್ಥೆ ಬಗ್ಗೆ ಮೊದ್ಲೇ ದೂರು ನೀಡಿದ್ದ ಜನ-ದುರಂತಕ್ಕೆ ಯಾರು ಹೊಣೆ?

    ಮುಂಬೈ: ಸೆಂಟ್ರಲ್ ಮುಂಬೈ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದ ದುರಂತವನ್ನು ತಪ್ಪಿಸಬಹುದಿತ್ತೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಇದಕ್ಕೆ ಕಾರಣ ಈ ದುರಂತದ ಮುನ್ಸೂಚನೆ ಯನ್ನು ಬಹಳ ಹಿಂದೆಯೇ ಹಲವು ಮಂದಿ ಟ್ವಿಟ್ಟರ್ ಮೂಲಕ ರೈಲ್ವೇ ಸಚಿವ ಸುರೇಶ್ ಪ್ರಭು ಹಾಗೂ ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದರು.

    ಆದರೂ ಪ್ರಧಾನಿಯಾಗಲಿ ರೈಲ್ವೇ ಸಚಿವರಾಗಲಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. 2016 ಜುಲೈ 28ರಂದು ಚಂದನ್ ಕೆಕೆ ಅನ್ನೊರು, ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣದ ಪಾದಚಾರಿ ಸಂಚಾರ ಸೇತುವೆಯಲ್ಲಿ ಜನ ಕಿಕ್ಕಿರಿದು ಸಂಚಾರ ಮಾಡುತ್ತಿರುವುದರಿಂದ ಇಲ್ಲಿ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇದೆ ಎಂದು ಹಲವರು ಟ್ವೀಟ್ ಮಾಡಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಟ್ವೀಟ್ ಮಾಡಿದ್ದ ರಶ್ಮಿ, ಪಾದಚಾರಿ ಸೇತುವೆಯಲ್ಲಿ ದುರಂತವೊಂದು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಎಚ್ಚರಿಸಿದ್ದರು.

    ಫೆಬ್ರವರಿ ಹಾಗೂ ಆಗಸ್ಟ್ ತಿಂಗಳಲ್ಲಿ ಸರಣಿ ಟ್ವೀಟ್ ಮೂಲಕ ಬಂದೀಶ್ ಸತ್ರಾ ಕೂಡ ಸರ್ಕಾರವನ್ನು ಎಚ್ಚರಿಸಿದ್ರು. ಜುಲೈನಲ್ಲಿ ಶುಭ ಶಂಕರ್ ಜಾಧವ್, ಹಾಗೂ ಸಂತೋಷ್ ಅನ್ನೋರು ಟ್ವಿಟ್ಟರ್‍ನಲಿ ಈ ಕುರಿತು ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರೆ ಮುಂಬೈನಲ್ಲಿ ಹೀಗೊಂದು ದುರಂತವನ್ನು ತಪ್ಪಿಸಬಹುದಿತ್ತು.

    ನಡೆದಿದ್ದೇನು?: ಶುಕ್ರವಾರ ಇಂದು ಬೆಳಗ್ಗೆ 9.30ರ ಸುಮಾರಿಗೆ ಎಲ್ಫಿನ್‍ಸ್ಟೋನ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಾಲ್ಕು ರೈಲುಗಳು ಒಂದೇ ವೇಳೆಗೆ ನಿಲ್ದಾಣಕ್ಕೆ ಬಂದಿದ್ದು, ಮಳೆ ಇದ್ದಿದ್ದರಿಂದ ಕೆಲವು ಮಹಿಳಾ ಪ್ರಯಾಣಿಕರು ಜಾರಿ ಬಿದ್ದಿದ್ದಾರೆ. ಎಲ್ಫಿನ್‍ಸ್ಟೋನ್ ಹಾಗೂ ಲೋವರ್ ಪ್ಯಾರೆಲ್ ನಿಲ್ದಾಣಗಳ ಮಧ್ಯೆ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಗಳಿದ್ದು, ಎರಡು ನಿಲ್ದಾಣಗಳನ್ನ ಮುಂಬೈ ರೈಲು ಪ್ರಯಾಣಿಕರು ಹೆಚ್ಚಾಗಿ ಬಳಸುತ್ತಾರೆ

  • ಭಾರೀ ಮಳೆ, ಮುಂಬೈನ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ- 15 ಜನರ ಸಾವು

    ಭಾರೀ ಮಳೆ, ಮುಂಬೈನ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ- 15 ಜನರ ಸಾವು

    ಮುಂಬೈ: ಇಂದು ಬೆಳಿಗ್ಗೆ ಭಾರೀ ಮಳೆಯಾದ ಬೆನ್ನಲ್ಲೇ ಫುಟ್ ಓವರ್ ಬ್ರಿಡ್ಜ್ ನಲ್ಲಿ ಕಾಲ್ತುಳಿತವಾಗಿ 15 ಜನ ಸಾವನ್ನಪ್ಪಿದ್ದು, 30 ಜನ ಗಂಭೀರವಾಗಿ ಗಾಯಗೊಂಡಿರೋ ಘಟನೆ ಮುಂಬೈನ ಸ್ಥಳೀಯ ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿದೆ.

    ಇಂದು ಬೆಳಗ್ಗೆ 9.30ರ ಸುಮಾರಿಗೆ ಎಲ್ಫಿನ್‍ಸ್ಟೋನ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಾಲ್ಕು ರೈಲುಗಳು ಒಂದೇ ವೇಳೆಗೆ ನಿಲ್ದಾಣಕ್ಕೆ ಬಂದಿದ್ದು, ಮಳೆ ಇದ್ದಿದ್ದರಿಂದ ಕೆಲವು ಮಹಿಳಾ ಪ್ರಯಾಣಿಕರು ಜಾರಿ ಬಿದ್ದರು. ಇದರಿಂದ ಜನಸಂದಣಿಯಲ್ಲಿ ಗೊಂದಲಕ್ಕೆ ಕಾರಣವಾಯ್ತು ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

    ಘಟನೆಗೆ ಸೂಕ್ತ ಕಾರಣದ ಬಗ್ಗೆ ನಾವಿನ್ನೂ ತನಿಖೆ ಮಡ್ತಿದ್ದೇವೆ. ಕಿರಿದಾಗಿದ್ದ ಮೆಟ್ಟಿಲಿನ ಮೇಲೆ ಈ ಘಟನೆ ನಡೆದಿದೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ನಿಕೇತ್ ಕೌಶಿಕ್ ಹೇಳಿದ್ದಾರೆ.

    ಜನರು ನೆಲದ ಮೇಲೆ ಬಿದ್ದಿರುವುದು, ಕೆಲವರು ಚಲಿಸದೇ ಸುಮ್ಮನಿರುವುದು ಹಾಗೂ ಕೆಲವರಿಗೆ ನೀರು ಕುಡಿಸಿ ಪ್ರಥಮ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳನ್ನ ಕಾಣಬಹುದಾಗಿದೆ. ಪ್ರಾಯಾಣಿಕರು ಹಾಗೂ ಸ್ಥಳೀಯರು ಗಾಯಾಳುಗಳನ್ನ ಬ್ರಿಡ್ಜ್‍ನಿಂದ ಕೆಳಗೆ ಕೊಂಡೊಯ್ಯುತ್ತಿರೋದನ್ನ ಕಾಣಬಹುದಾಗಿದೆ. ಅಲ್ಲದೆ ಬ್ರಿಡ್ಜ್ ಪಕ್ಕದಲ್ಲಿ ಚಪ್ಪಲಿಗಳ ರಾಶಿಯೇ ಬಿದ್ದಿದೆ. ಪ್ರಯಾಣಿಕರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

    ಎಲ್ಫಿನ್‍ಸ್ಟೋನ್ ಹಾಗೂ ಲೋವರ್ ಪ್ಯಾರೆಲ್ ನಿಲ್ದಾಣಗಳ ಮಧ್ಯೆ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಗಳಿದ್ದು, ಎರಡು ನಿಲ್ದಾಣಗಳನ್ನ ಮುಂಬೈ ರೈಲು ಪ್ರಯಾಣಿಕರು ಹೆಚ್ಚಾಗಿ ಬಳಸುತ್ತಾರೆ ಎಂದು ವರದಿಯಾಗಿದೆ.

    ಕಾಲ್ತುಳಿತಕ್ಕೆ ಕಾರಣವಾಗಿದ್ದು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಪಶ್ಚಿಮ ರೈಲ್ವೆ ಅಧಿಕಾರಿ, ಮಳೆಯೇ ಇದಕ್ಕೆ ಕಾರಣ. ಎರಡು ರೈಲುಗಳು ಇಲ್ಲಿ ಬಂದವು, ಇನ್ನೆರಡು ಸೆಂಟ್ರಲ್ ಲೈನ್‍ನಲ್ಲಿ ಬಂದವು. ನಾಲ್ಕೂ ರೈಲುಗಳು ಒಂದೇ ಸಮಯಕ್ಕೆ ಬಂದವು ಎಂದು ಹೇಳಿದ್ರು.

     

  • ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ನವದೆಹಲಿ: ಐಫೆಲ್ ಟವರ್‍ ಗಿಂತ ಎತ್ತರವಾದ ರೈಲ್ವೆ ಸೇತುವೆಯೊಂದು ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗ್ತಿದ್ದು, 2019ರೊಳಗೆ ಸೇತುವೆ ನಿರ್ಮಾಣ ಪೂರ್ಣವಾಗಲಿದೆ. ಈ ಸೇತುವೆ ಜಗತ್ತಿನ ಅತ್ಯಂತ ಎತ್ತರದ ಸೇತುವೆ ಆಗಲಿದೆ.

    ಈ 1.3 ಕಿ.ಮೀ ಉದ್ದದ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ ಸ್ಟೀಲ್‍ನಿಂದ ಈ ಸೇತುವೆ ನಿರ್ಮಾಣವಾಗ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 1,110 ಕೋಟಿ. ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗ್ತಿದೆ.

    ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನ ಮುರಿಯಲಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ 324 ಮೀ(1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದ್ರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ(1177.82 ಅಡಿ) ಎತ್ತರವಿರಲಿದೆ.

    ಬ್ರಿಡ್ಜ್ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್‍ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.