Tag: ಬ್ರಿಟನ್ ರಾಣಿ

  • 70 ವರ್ಷ ಒಂದೇ ಹೇರ್‌ಸ್ಟೈಲ್‌ ಮೆಂಟೇನ್‌ ಮಾಡಿದ್ದರು ಬ್ರಿಟನ್‌ ರಾಣಿ

    70 ವರ್ಷ ಒಂದೇ ಹೇರ್‌ಸ್ಟೈಲ್‌ ಮೆಂಟೇನ್‌ ಮಾಡಿದ್ದರು ಬ್ರಿಟನ್‌ ರಾಣಿ

    ಬ್ರಿಟನ್‌ (Britain) ಇತಿಹಾಸದಲ್ಲೇ ಸುದೀರ್ಘ ಕಾಲದವರೆಗೆ ರಾಣಿಯಾಗಿದ್ದ 2ನೇ ಎಲಿಜಬೆತ್‌ ಈಚೆಗೆ ನಿಧನರಾದರು. ರಾಣಿಯ ಗೌರವಾರ್ಥ ಬ್ರಿಟನ್‌ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಶೋಕಾಚರಣೆ ನಡೆಸಿದವು. ಇಡೀ ಜಗತ್ತು ರಾಣಿ ಎಲಿಜಬೆತ್‌ (Queen Elizabeth 2) ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ಸ್ಮರಿಸುತ್ತಿದೆ.

    ರಾಣಿ 2ನೇ ಎಲಿಜಬೆತ್‌ ಅವರು ರಾಜಮನೆತನದ ಕರ್ತವ್ಯಗಳಿಗೆ ಬದ್ಧರಾಗಿದ್ದವರು. ಅಷ್ಟೇ ಅಲ್ಲ ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ಜಗತ್ತಿನ ಗಮನ ಸೆಳೆದವರು. ಉಡುಗೆ, ಆಭರಣ ಮತ್ತು ಸೌಮ್ಯ ಸ್ವಭಾವದ ನಡವಳಿಕೆ ಮೂಲಕ ಜನತೆಗೆ ಮಾದರಿಯಾಗಿದ್ದವರು. ರಾಣಿಯ ವರ್ಚಸ್ಸಿನ ಜೊತೆಗೆ ತಮ್ಮ ಸೌಂದರ್ಯಕ್ಕೂ ಮಹತ್ವ ನೀಡುತ್ತಿದ್ದರು. ರಾಣಿಯ ಕೇಶವಿನ್ಯಾಸದ (ಹೇರ್‌ಸ್ಟೈಲ್‌) ಗುಟ್ಟು ನಿಜಕ್ಕೂ ಎಂತಹವರನ್ನೂ ಬೆರಗಾಗಿಸುವಂತಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    70 ವರ್ಷ ಒಂದೇ ಹೇರ್‌ಸ್ಟೈಲ್‌
    ರಾಣಿ 2ನೇ ಎಲಿಜಬೆತ್‌ ತಮ್ಮ ವ್ಯಕ್ತಿತ್ವ ಅಷ್ಟೇ ಅಲ್ಲ, ವಿಶೇಷ ಹೇರ್‌ಸ್ಟೈಲ್‌ ಮೂಲಕವೂ ಗಮನ ಸೆಳೆಯುತ್ತಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿ ಸತತ 70 ವರ್ಷಗಳ ಕಾಲ ಒಂದೇ ರೀತಿಯಲ್ಲಿ ಹೇರ್‌ಸ್ಟೈಲ್‌ ನಿರ್ವಹಿಸಿದ್ದರು ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅದು ಸತ್ಯ.

    ಹೇರ್‌ಸ್ಟೈಲ್‌ ಹಿಂದಿನ ಕಥೆಯೇನು?
    ರಾಣಿ ತನ್ನ ಕೇಶವಿನ್ಯಾಸಕ್ಕೆ ನಿಷ್ಠರಾಗಿದ್ದರು. ಅದರ ಹಿಂದಿನ ಕಥೆ ಕುತೂಹಲಭರಿತವಾಗಿದೆ. ಬ್ರಿಟಿಷ್‌ ಬ್ಯಾಂಕ್‌ ನೋಟುಗಳು, ಅಂಚೆ ಚೀಟಿಗಳಲ್ಲಿ ರಾಣಿ 2ನೇ ಎಲಿಜಬೆತ್‌ (Queen Elizabeth 2 Hairstyle) ಅವರ ಭಾವಚಿತ್ರ ಮುದ್ರಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ನೋಟು, ಅಂಚೆಚೀಟಿಗಳಲ್ಲಿರುವ ಚಿತ್ರ ನೋಡುತ್ತಿದ್ದ ಜನರಿಗೆ ರಾಣಿ ಎಂದೇ ಚಿರಪರಿಚಿತರಂತಿದ್ದರು. ತಾವು ಹೀಗೆಯೇ ಜನರಿಗೆ ಚಿರಪರಿಚಿತರಾಗಿಯೇ ಇರಬೇಕು ಎಂಬ ದೃಷ್ಟಿಯಿಂದ ಅವರು ಒಂದೇ ರೀತಿಯ ಹೇರ್‌ಸ್ಟೈಲ್‌ ಹೊಂದಲು ನಿರ್ಧರಿಸಿದರು. ಸತತ 70 ವರ್ಷ ಅವರು ಅದೇ ಹೇರ್‌ಸ್ಟೈಲ್‌ ಕಾಪಾಡಿಕೊಂಡು ಬಂದರು. ಇದನ್ನೂ ಓದಿ: ಜನರಿಗೆ ಸಿಕ್ರೇಟ್ ಲೆಟರ್- 2085 ರವರೆಗೂ ತೆರೆಯದಿರಲು ರಾಣಿ ಸೂಚನೆ

    ರಾಣಿ ಕೇಶವಿನ್ಯಾಸಕಿ ಯಾರು ಗೊತ್ತಾ?
    ರಾಣಿ 2ನೇ ಎಲಿಜಬೆತ್‌ ಅವರ ವಿಶಿಷ್ಟ ಹೇರ್‌ಸ್ಟೈಲ್‌ ಬಗ್ಗೆ ತಿಳಿದವರಿಗೆ, ಸಾಮಾನ್ಯವಾಗಿ ರಾಣಿಯವರ ಕೇಶವಿನ್ಯಾಸಕಿ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಲ್ಯಾನ್ ಕಾರ್ಮೈಕಲ್ ಎಂಬಾಕೆಯೇ ರಾಣಿ ಎಲಿಜಬೆತ್‌ ಅವರ ಕೇಶವಿನ್ಯಾಸಕಿ. ಈಕೆ ಲಂಡನ್‌ನ ಕೋವೆಂಟ್‌ ಗಾರ್ಡನ್‌ನಲ್ಲಿರುವ ಟ್ರೆವರ್ ಸೋರ್ಬಿ ಸಲೂನ್‌ನಲ್ಲಿ ಕೇಶವಿನ್ಯಾಸಕಿಯಾಗಿದ್ದಾರೆ.

    ಸಾಂಪ್ರದಾಯಿಕ ಶಾಂಪೂ ಹಾಕ್ತಿದ್ದ ರಾಣಿ
    ರಾಣಿ ಅವರು ತಮ್ಮ ತಲೆ ಕೂದಲಿಗೆ ಸಾಂಪ್ರದಾಯಿಕ ಶಾಂಪೂ ಬಳಸುತ್ತಿದ್ದರು ಎಂದು ಕೇಶವಿನ್ಯಾಸಕಿ ಬೆನ್ ಕುಕ್‌‌ ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ʼಇಟಾಲಿಯನ್‌ ಬಾಯ್‌ʼ ವಿನ್ಯಾಸ
    ತಲೆಗೂದಲು ವಾಶ್‌ ಮಾಡಿದ ನಂತರ, ಚಿಕ್ಕದಾಗಿ ರೋಲ್‌ನಂತೆ ಮಾಡಿ ವಿನ್ಯಾಸಗೊಳಿಸುವುದು. ಇದಕ್ಕೆ ʼಇಟಾಲಿಯನ್‌ ಬಾಯ್‌ʼ (Italian Boy Technique) ಮಾದರಿ ವಿನ್ಯಾಸ ಎನ್ನಲಾಗುತ್ತದೆ. ತಲೆಗೂದಲು ಒಣಗದಂತೆ ನೋಡಿಕೊಂಡು ಮತ್ತೆ ಮತ್ತೆ ಒಂದೇ ಮಾದರಿಯಲ್ಲಿ ರಚಿಸಬೇಕು.

    ಕೂದಲು ಬಣ್ಣದಲ್ಲಿ ಮಾತ್ರ ಬದಲಾವಣೆ
    ರಾಣಿ ಅವರ ತಲೆಗೂದಲಿನಲ್ಲಿ ಸ್ವಲ್ಪವೂ ಬದಲಾವಣೆ ಮಾಡಲಾಗುತ್ತಿರಲಿಲ್ಲ. ಅವರ ತಲೆಗೂದಲ ಬಣ್ಣದಲ್ಲಿ ಮಾತ್ರ ಬದಲಾವಣೆಯನ್ನು ಗುರುತಿಸಬಹುದು. ಆರಂಭದಲ್ಲಿ ಕಂದು ಬಣ್ಣ, ನಂತರ ಬೂದು ಬಣ್ಣ. ಕೊನೆಗೆ ಬಿಳಿ ಬಣ್ಣಕ್ಕೆ ಬದಲಾಯಿತು.

    Live Tv
    [brid partner=56869869 player=32851 video=960834 autoplay=true]

  • ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ದ್ರೌಪದಿ ಮುರ್ಮು

    ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ದ್ರೌಪದಿ ಮುರ್ಮು

    ನವದೆಹಲಿ: ಬ್ರಿಟನ್ ರಾಣಿ(Queen of Britain) 2ನೇ ಎಲಿಜಬೆತ್(Elizabeth II) ಅವರ ಅಂತ್ಯಕ್ರಿಯೆಯಲ್ಲಿ(Funeral) ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಭಾಗಿಯಾಗಲಿದ್ದಾರೆ ಹಾಗೂ ಭಾರತದ ಪರವಾಗಿ ಸಂತಾಪ ಸೂಚಿಸಲಿದ್ದಾರೆ.

    ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 17 ರಿಂದ 19 ರ ವರೆಗೆ ಲಂಡನ್‌ಗೆ(London) ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಕೊಡವರ ಶಸ್ತ್ರಾಸ್ತ್ರ ಹಕ್ಕು ಉಲ್ಲೇಖ, ವಿಶ್ವಾದ್ಯಂತ ಮಾನ್ಯತೆ ಇರೋ ಹಿಜಬ್‌ಗೆ ಕರ್ನಾಟಕದಲ್ಲಿ ಅನುಮತಿ ಯಾಕಿಲ್ಲ: ಸುಪ್ರೀಂನಲ್ಲಿ ವಕೀಲರ ಪ್ರಶ್ನೆ

    ಬ್ರಿಟನ್ ರಾಷ್ಟ್ರದ ಮಾಜಿ ಮುಖ್ಯಸ್ಥೆ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥೆ ರಾಣಿ 2ನೇ ಎಲಿಜಬೆತ್ ಅವರು ಸೆಪ್ಟೆಂಬರ್ 8 ರಂದು ನಿಧನರಾದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಖರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಟೇಕ್ ಆಫ್ ಆಗುವ ಮೊದಲೇ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ

    ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ರಾಣಿಯ ಅಗಲಿಕೆಗೆ ದೇಶದ ವತಿಯಿಂದ ಸಂತಾಪ ಸೂಚಿಸಲು ಸೆಪ್ಟೆಂಬರ್ 12 ರಂದು ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್‌ಗೆ ಭೇಟಿ ನೀಡಿದ್ದರು. ಸೆಪ್ಟೆಂಬರ್ 11ರಂದು ಭಾರತ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಿತು.

    Live Tv
    [brid partner=56869869 player=32851 video=960834 autoplay=true]

  • ಕೊಹಿನೂರ್‌ ವಜ್ರ ಜಗನ್ನಾಥ ದೇವರಿಗೆ ಸೇರಿದ್ದು; ಬ್ರಿಟನ್‌ನಿಂದ ವಾಪಸ್‌ ತರಿಸಿ – ರಾಷ್ಟ್ರಪತಿಗೆ ಮನವಿ

    ಭುವನೇಶ್ವರ: ಕೊಹಿನೂರ್‌ ವಜ್ರವು (Kohinoor Diamond) ಜಗನ್ನಾಥ ದೇವರಿಗೆ ಸೇರಿದ್ದು, ಬ್ರಿಟನ್‌ನಿಂದ ಅದನ್ನು ಐತಿಹಾಸಿಕ ಪುರಿ ಜಗನ್ನಾಥ ದೇವಾಲಯಕ್ಕೆ (Jagannath) ವಾಪಸ್‌ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಮಧ್ಯಸ್ಥಿಕೆಯಲ್ಲಿ ಕ್ರಮವಹಿಸಬೇಕು ಎಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಮನವಿ ಮಾಡಿದೆ.

    ರಾಣಿ ಎಲಿಜಬೆತ್-2 (Queen Elizabeth II) ನಿಧನ ನಂತರ, ಆಕೆಯ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ (Prince Charles) ಬ್ರಿಟನ್‌ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಿಯಮಗಳ ಪ್ರಕಾರ, 105 ಕ್ಯಾರೆಟ್ ವಜ್ರವಿರುವ ಕಿರೀಟವನ್ನು ಚಾರ್ಲ್ಸ್‌ ಪತ್ನಿ ಕಾರ್ನ್‌ವಾಲ್ ಕ್ಯಾಮಿಲ್ಲಾ ಅವರು ಧರಿಸಲಿದ್ದಾರೆ. ಇದನ್ನೂ ಓದಿ: ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

    12ನೇ ಶತಮಾನದ ದೇಗುಲಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಶ್ರೀ ಜಗನ್ನಾಥ ಸೇನೆಯು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿತು.

    ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ಭಾಗ್ಬನ್ ಅವರದ್ದು. ಅದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಅದನ್ನು ಜಗನ್ನಾಥ ದೇವರಿಗೆ ದಾನ ಮಾಡಿದಂತೆ, ಅದನ್ನು ಭಾರತಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿಯವರಲ್ಲೂ ವಿನಂತಿಸುತ್ತೇವೆ ಎಂದು ಕೋರಿದೆ. ಇದನ್ನೂ ಓದಿ: ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿದ ಕೇಜ್ರಿವಾಲ್ – ರಿಕ್ಷಾದಲ್ಲೇ ಪ್ರಯಾಣಿಸಿ ಸರಳತೆ ಮೆರೆದ್ರು

    ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಭಗವಂತನಿಗೆ ವಜ್ರವನ್ನು ದಾನ ಮಾಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

    ರಣಜಿತ್ ಸಿಂಗ್ 1839 ರಲ್ಲಿ ನಿಧನರಾದರು. 10 ವರ್ಷಗಳ ನಂತರ ಬ್ರಿಟಿಷರು ಕೊಹಿನೂರ್ ವಜ್ರವನ್ನು ರಣಜಿತ್‌ ಅವರ ಮಗ ದುಲೀಪ್ ಸಿಂಗ್‌ನಿಂದ ಕಿತ್ತುಕೊಂಡರು ಎಂದು ಇತಿಹಾಸಕಾರ ಮತ್ತು ಸಂಶೋಧಕ ಅನಿಲ್ ಧೀರ್ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ರಾಣಿ ನಿಧನ – ಸೆ.11ಕ್ಕೆ ಭಾರತದಾದ್ಯಂತ ಶೋಕಾಚರಣೆ

    ನವದೆಹಲಿ: ಬ್ರಿಟನ್ ರಾಣಿ(Queen of Britain) 2ನೇ ಎಲಿಜಬೆತ್(Elizabeth II) ಅವರ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿದಂದತೆ ಗಣ್ಯ ವ್ಯಕ್ತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನಕ್ಕೆ ಗೌರವಾರ್ಥವಾಗಿ ಸೆಪ್ಟೆಂಬರ್ 11ರಂದು(ಭಾನುವಾರ) ಭಾರತದಲ್ಲಿ 1 ದಿನದ ಶೋಕಾಚರಣೆ(Mourning) ನಡೆಸುವುದಾಗಿ ಗೃಹಸಚಿವಾಲಯ ತಿಳಿಸಿದೆ.

    ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನರಾದರು. ಅಗಲಿದ ಗಣ್ಯರಿಗೆ ಗೌರವಾರ್ಥವಾಗಿ ಭಾರತ ಸರ್ಕಾರ ಸೆಪ್ಟೆಂಬರ್ 11 ರಂದು 1 ದಿನದ ಶೋಕಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದ್ನನೂ ಓದಿ: ಮಹೀಂದ್ರಾ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಕಾರು ಅನಾವರಣ

    ಬ್ರಿಟಿಷ್ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ 2ನೇ ಎಲಿಜಬೆತ್ ಅವರಿಗಿದ್ದು, ನಿನ್ನೆ ರಾತ್ರಿ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದರು. ಇದ್ನನೂ ಓದಿ: ಗೋಧಿ ಬಳಿಕ ಇದೀಗ ನುಚ್ಚಕ್ಕಿ ರಫ್ತನ್ನು ನಿಷೇಧಿಸಿದ ಕೇಂದ್ರ

    ರಾಣಿಗೆ ಗೌರವಾರ್ಥವಾಗಿ ಬ್ರಿಟನ್‌ನಲ್ಲಿ 10 ದಿನಗಳ ರಾಷ್ಟ್ರೀಯ ಶೋಕವನ್ನು ಘೋಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    ಲಂಡನ್: ಬ್ರಿಟನ್ (Britain) ರಾಣಿ ಎಲಿಜಬೆತ್-2 (Queen Elizabeth)  ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

    96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂದು ರಾತ್ರಿ ಸ್ಕಾಟ್ಲೆಂಡ್ ಅರಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1923ರಿಂದ ಬ್ರಿಟನ್‍ನ ರಾಣಿಯಾಗಿದ್ದರು.

    ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ – ಟ್ರಂಪ್‌ ಬಣ್ಣನೆ

    ವೈದ್ಯರ ಸಲಹೆಯಂತೆ ರಾಣಿ ಎಲಿಜಬೆತ್ ಆರೋಗ್ಯದ ಬಗ್ಗೆ ನಿಗಾ ಇಡಲಾಗಿತ್ತು. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರನ್ನು ಉಳಿಯಲು ಶಿಫಾರಸು ಮಾಡಲಾಗಿತ್ತು. ಬಾಲ್ಮೋರಲ್ ಕ್ಯಾಸಲ್‍ನಲ್ಲಿ ಉಳಿದಿದ್ದ ರಾಣಿ ಎಲಿಜಬೆತ್‍ರನ್ನು ನೋಡಲು, ಆರೋಗ್ಯ ವಿಚಾರಿಸಲು ಇಂದು ಬೆಳಗ್ಗೆಯಿಂದಲೇ ಸಂಬಂಧಿಕರು ದೌಡಾಯಿಸುತ್ತಿದ್ದರು. ಇದೀಗ ನಿಧನ ಹೊಂದಿದ್ದಾರೆ. ಹಾಗಾಗಿ ಬ್ರಿಟನ್ ಸರ್ಕಾರ ಎಲ್ಲಾ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಣಿ ಎಲಿಜಬೆತ್-2 ಸಾವಿಗೆ ಕಂಬನಿ ಮಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ರಾಣಿ ಎಲಿಜಬೆತ್ ಆರೋಗ್ಯದಲ್ಲಿ ಏರುಪೇರು

    ಬ್ರಿಟನ್ ರಾಣಿ ಎಲಿಜಬೆತ್ ಆರೋಗ್ಯದಲ್ಲಿ ಏರುಪೇರು

    ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ (Queen Elizabeth) ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ.

    96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‍ನಿಂದ ಆರೋಗ್ಯ (Health) ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ನಡೆಯಲು ಮತ್ತು ನಿಲ್ಲಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಉಮೇಶ್ ಕತ್ತಿ ರಾಜಕೀಯ ಜೀವನ ಪುಸ್ತಕವಾಗಬೇಕು: ಅರುಣ್ ಸಿಂಗ್

    ಸದ್ಯ ರಾಣಿ ಆರೋಗ್ಯ ಸ್ಥಿರವಾಗಿದೆ, ಅವರು ಆರಾಮವಾಗಿದ್ದಾರೆ. ಹೀಗಾಗಿ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಸ್ಕಾಟ್ಲೆಂಡ್‍ನ ಬಾಲ್ಮೋರಲ್ ಕ್ಯಾಸಲ್‍ನಲ್ಲಿ ಉಳಿದಿದ್ದಾರೆ ಎಂದು ಅರಮನೆಯ ಮೂಲಗಳು ತಿಳಿಸಿದೆ. ಇತ್ತ ರಾಣಿ ಎಲಿಜಬೆತ್ ಆರೋಗ್ಯ ವಿಚಾರಿಸಲು ಸಂಬಂಧಿಕರು ದೌಡಾಯಿಸುತ್ತಿದ್ದಾರೆ.

    ವೈದ್ಯರ ಸಲಹೆಯಂತೆ ರಾಣಿ ಎಲಿಜಬೆತ್ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದೆ. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರನ್ನು ಉಳಿಯಲು ಶಿಫಾರಸು ಮಾಡಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ಗೆ ಕೊರೊನಾ ಸೋಂಕು – ಚೇತರಿಕೆಗೆ ಹಾರೈಸಿ ಪ್ರಧಾನಿ ಮೋದಿ ಟ್ವೀಟ್

    ಲಂಡನ್‌: ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ (95) ಅವರಿಗೆ ಕೋವಿಡ್-‌19 ದೃಢಪಟ್ಟಿದೆ. ಅವರಲ್ಲಿ ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ರಾಣಿಯ ಉತ್ತರಾಧಿಕಾರಿ ಪ್ರಿನ್ಸ್‌ ಚಾರ್ಲ್ಸ್‌ (73) ಅವರು ಫೆ.10 ರಂದು ಲಂಡನ್‌ನ ಪಶ್ಚಿಮದ ವಿಂಡ್ಸರ್‌ ಕ್ಯಾಸಲ್‌ನಲ್ಲಿ ತನ್ನ ತಾಯಿಯನ್ನು ಭೇಟಿಯಾದ ಎರಡು ದಿನಗಳ ನಂತರ ಎರಡನೇ ಬಾರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಇದನ್ನೂ ಓದಿ: ಮೆಟ್ರೋವನ್ನು ತಂದಿದ್ದು ಎಸ್‍ಪಿ ಸರ್ಕಾರ, ಉದ್ಘಾಟಿಸಿದ್ದು ಯೋಗಿ ಆದಿತ್ಯನಾಥ್: ಅಖಿಲೇಶ್ ಯಾದವ್

    ರಾಣಿ ಎರಡನೇ ಎಲಿಜಬೆತ್‌ ಅವರು ಕೋವಿಡ್‌ ಲಸಿಕೆಯ ಎರಡು ಡೋಸ್‌ ಹಾಗೂ ಬೂಸ್ಟರ್‌ ಡೋಸ್‌ ಕೂಡ ಪಡೆದುಕೊಂಡಿದ್ದಾರೆ. ರಾಣಿ ಅವರಿಗೆ ಸೌಮ್ಯವಾದ ಶೀತ ರೋಗಲಕ್ಷಣ ಕಂಡುಬಂದಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬಂಕಿಂಗ್‌ಹ್ಯಾಮ್‌ ಅರಮನೆಯು ತಿಳಿಸಿದೆ.

    ಅವರಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ. ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

    ರಾಣಿ ಎಲಿಜಬೆತ್‌ ಅವರು ಶೀಘ್ರವೇ ಗುಣಮುಖರಾಗಿ ಆರೋಗ್ಯವಾಗಿ ಮರಳಲಿ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಶೇರ್‌ ಮಾಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ರಾಣಿ ಎಲಿಜಬೆತ್‌ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

    ಇಂಗ್ಲೆಂಡ್‌ನಲ್ಲಿ ಉಳಿದಿರುವ ಕೋವಿಡ್‌ ನಿರ್ಬಂಧಗಳನ್ನು ರದ್ದುಗೊಳಿಸುವುದಾಗಿ ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲೇ ದೇಶದಲ್ಲಿ ಮತ್ತೆ ಕೋವಿಡ್‌ ಸೋಂಕು ಪ್ರಮಾಣ ನಿಧಾನಗತಿಯಲ್ಲಿ ಹೆಚ್ಚಳವಾಗುತ್ತಿದೆ.‌

  • ನಾನು ರಾಣಿಯ ಪುನರ್ಜನ್ಮವೆಂದ 4ರ ಪೋರ

    ನಾನು ರಾಣಿಯ ಪುನರ್ಜನ್ಮವೆಂದ 4ರ ಪೋರ

    ಲಂಡನ್: ಆಸ್ಟ್ರೇಲಿಯಾದ 4 ವರ್ಷದ ಪೋರನೊಬ್ಬ ತಾನು ಬ್ರಿಟನ್ ರಾಣಿ ಡಯಾನಾಳ ಪುನರ್ಜನ್ಮ ಎಂದು ಹೇಳಿಕೊಂಡಿದ್ದಾನೆ.

    ಹುಡುಗನ ತಂದೆ ಆಸ್ಟ್ರೇಲಿಯಾದ ಟಿವಿ ವಾಹಿನಿಯೊಂದರಲ್ಲಿ ನಿರೂಪಕರಾಗಿದ್ದು, ತನ್ನ ಮಗ ಹೇಳುವಂತೆ ಡಯಾನಾಳ ಪುನರ್ಜನ್ಮವೆಂದು ನಂಬಿದ್ದಾನೆ ಎಂದು ಯುಕೆ ಮಾಧ್ಯಮವೊಂದು ವರದಿ ಮಾಡಿದೆ.

    https://www.instagram.com/p/ByuhpsiAziw/?

    ಆಸ್ಟ್ರೇಲಿಯಾದ ಟಿವಿ ವಾಹಿನಿ ನಿರೂಪಕ ಡೇವಿಡ್ ಕ್ಯಾಂಪ್‍ಬೆಲ್ ಪುತ್ರ ಬಿಲ್ಲಿ ಕ್ಯಾಂಪ್‍ಬೆಲ್. ರಾಣಿ ಡಯಾನಾ 1997ರಲ್ಲಿ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ರಾಣಿಯ ಸಾವಿನ 18 ವರ್ಷಗಳ ನಂತರ ಈ ಪೋರ ಜನಿಸಿದ್ದು, ಇದೀಗ ರಾಣಿಯ ಪುನರ್ಜನ್ಮ ನಾನೇ ಎಂದು ಹೇಳುತ್ತಿದ್ದಾನೆ.

    https://www.instagram.com/p/BuP9FXxgoUO/?

    ಮಗನ ಮಾತು ಕೇಳಿ ದಿಗ್ಬ್ರಮೆಗೊಂಡ ಅವನ ತಂದೆ, ಬಿಲ್ಲಿ(ಈಗ ಎರಡು ವರ್ಷ) ರಾಣಿ ಡಯಾನಾ ಅವರ ಫೋಟೊ ತೋರಿಸಿ ನೋಡಿ ಇದು ನಾನು ರಾಣಿಯಾಗಿದ್ದಾಗಿನ ಫೋಟೊ ಎಂದು ಹೇಳುತ್ತಾರೆ. ಈ ವರೆಗೂ ಡಯಾನಾಳೊಂದಿಗಿನ ನನ್ನ ಮಗನ ಗೀಳು ಇನ್ನೂ ನಿಂತಿಲ್ಲ ಎಂದು ಡೆವಿಡ್ ವಿವರಿಸಿದ್ದಾರೆ.

    ವಿಚಿತ್ರವೆಂದರೆ, ಬಿಲ್ಲಿ ಎಂಬ ಬಾಲಕ ಡಯಾನಾಳ ಜೀವನದ ಯಾವುದೇ ಘಟನೆಯನ್ನು ವಿವರಿಸ ಬಲ್ಲನು. ಅಲ್ಲದೆ, ರಾಜಕುಮಾರಿ ಡಯಾನಳ ಮಕ್ಕಳಾದ ರಾಜಕುಮಾರ ವಿಲಿಯಂ ಮತ್ತು ಹ್ಯಾರಿ ನನ್ನ ಮಕ್ಕಳು ಎಂದು ಹೇಳುತ್ತಾನೆ. ಅಲ್ಲದೆ, ಬಾಲಕ ಪರಿಚಿತರಲ್ಲದ ಕುಡುಂಬ ಸದಸ್ಯರೊಂದಿಗೆ ಆತ್ಮೀರಂತೆ ಮಾತನಾಡುತ್ತಾನೆ. ಅದರಲ್ಲಿ ಕೆಲವು ಹುಡುಗರ ಹೆಸರನ್ನೂ ಹೇಳುತ್ತಾನೆ ಎಂದು ಹುಡುಗನ ತಂದೆ ವಿವರಿಸಿದ್ದಾರೆ.

    ಹುಟ್ಟಿ ಕೆಲವೇ ಗಂಟೆಗಳಲ್ಲಿ ಮರಣ ಹೊಂದಿದ ರಾಣಿ ಡಯಾನಾಳ ಸಹೋದರ ಜಾನ್ ಬಗ್ಗೆಯೂ ಸಹ ಬಿಲ್ಲಿ ಮಾತನಾಡುತ್ತಾನೆ ಎಂದು ಹುಡುಗನ ತಂದೆ ಡೆವಿಡ್ ತಿಳಿಸಿದ್ದಾರೆ.