Tag: ಬ್ರಿಗೇಡ್ ರೋಡ್

  • ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

    ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

    ಬೆಂಗಳೂರು: ಬ್ರಿಗೇಡ್ ರೋಡ್‍ನ (Brigade road) ಪಬ್ (Pub) ಒಂದರಲ್ಲಿ ಲೈಟ್ ನೈಟ್ ಪಾರ್ಟಿ (Light Night Party) ಮಾಡುತ್ತಿದ್ದವರ ಮೇಲೆ ಕರ್ನಾಟಕ ಕಾರ್ಮಿಕರ ಪರಿಷತ್ ಕಾರ್ಯಕರ್ತರು ತಡರಾತ್ರಿ ದಾಳಿ ಮಾಡಿದ ಘಟನೆ ನಡೆದಿದೆ.

    ನಗರದಲ್ಲಿ ಹೆಚ್ಚುತ್ತಿರುವ ಪಾಶ್ಚಿಮಾತ್ಯ ಸಂಸ್ಕøತಿ ವಿರೋಧಿಸಿ ಡೋಲು ಬಡಿದುಕೊಂಡು 15 ಜನರ ಗುಂಪು ಪಬ್ ಪ್ರವೇಶಿಸಲು ಮುಂದಾಗಿದೆ. ಸಂಘಟನೆಯ ಕಾರ್ಯಕರ್ತರನ್ನು ಪಬ್ ಬೌನ್ಸರ್‍ಗಳು ಬಾಗಿಲಿನಲ್ಲೇ ತಡೆದಿದ್ದಾರೆ. ಬೌನ್ಸರ್‍ಗಳು ಹಾಗೂ ಗುಂಪಿನ ನಡುವೆ ಮಾತಿನ ಚಕಮುಕಿ ನಡೆದಿದೆ. ನಂತರ ಪಬ್‍ನ ಎದುರು ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಇದನ್ನೂ ಓದಿ: ಮತ್ತೊಂದು ಕೇಸ್ – ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ

    ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕನಗರ (Ashoka Nagar) ಪೊಲೀಸರು (Police) ಭೇಟಿ ನೀಡಿ ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದವರನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಕಾಲುವೆ ಕಡೆ ಬಸ್ ಚಲಾಯಿಸಿದ ಚಾಲಕ – ಪ್ರಯಾಣಿರಿಂದ ಕ್ಲಾಸ್

  • ಗಾಂಜಾ ಮತ್ತಿನಲ್ಲಿ ಗಲಾಟೆ- ಕಿಡಿಗೇಡಿಗಳು ಪೊಲೀಸರ ವಶಕ್ಕೆ

    ಗಾಂಜಾ ಮತ್ತಿನಲ್ಲಿ ಗಲಾಟೆ- ಕಿಡಿಗೇಡಿಗಳು ಪೊಲೀಸರ ವಶಕ್ಕೆ

    ಬೆಂಗಳೂರು: ಗಾಂಜಾ ಸೇವಿಸಿ ಗಲಾಟೆ ಮಾಡುತ್ತಿದ್ದ ಕಿಡಿಗೇಡಿಗಳನ್ನು ಬೆಂಗಳೂರಿನ (Bengaluru) ಕಬ್ಬನ್ ಪಾರ್ಕ್ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.

    ಹೊಸ ವರ್ಷದ (New Year) ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ರಂಗು ರಂಗಾಗಿದೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್‍ಗಳಲ್ಲಿ ಕಿಕ್ಕಿರಿದು ಜನರು ಸೇರಿದ್ದು, 2023ರನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈ ವೇಳೆ ಬ್ರಿಗೇಡ್ ರೋಡ್ (Brigade Road) ಎಂಟ್ರಿಯಲ್ಲಿ ಕೆಲವರು ಗಾಂಜಾ ಸೇದುತ್ತಿದ್ದರು. ಅಷ್ಟೇ ಅಲ್ಲದೇ ಗಾಂಜಾ ಮತ್ತಿನಲ್ಲಿ ಗಲಾಟೆ ನಡೆಸಿದ್ದಾರೆ. ಇದನ್ನೂ ಓದಿ: ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ

    ಘಟನೆಗೆ ಸಂಬಂಧಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ (Police Station) ಪೊಲೀಸರು ಗಾಂಜಾ ಸೇವಿಸಿ ಗಲಾಟೆ ಮಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಂದ್ – ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ವಾಹನ ಸವಾರರು

    Live Tv
    [brid partner=56869869 player=32851 video=960834 autoplay=true]

  • ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

    ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

    ಬೆಂಗಳೂರು: ಸಿಲಿಕಾನ್ ಸಿಟಿಯಿಂದ ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅವಘಡವೊಂದು ನಡೆದಿದೆ.

    ಫುಡ್‍ಕೋರ್ಟ್‍ನಲ್ಲಿ ಊಟ ಮುಗಿಸಿ ಐದನೇ ಮಹಡಿಯಿಂದ ಮೆಟ್ಟಿಳಿಯುವಾಗ ಯುವತಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಕೆಯನ್ನು ರಕ್ಷಿಸುವ ಭರದಲ್ಲಿ ಗೆಳೆಯನೂ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಯುವತಿ ಲಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಪೀಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಫ್ರೆಂಡ್‌ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್‌ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು

    ಮೃತಪಟ್ಟ ಯುವತಿಯ ರಕ್ತದ ಮಾದರಿಯನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗಿದೆ. ಮಾಲ್‍ನಲ್ಲೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಯುವಕ ಯುವತಿ ಜೊತೆ ಬಂದಿದ್ದ ಸ್ನೇಹಿತರಿಂದಲೇ ಮಾಹಿತಿ ಕಲೆ ಹಾಕಿದ್ದಾರೆ. ಘಟನೆ ಸಂಬಂಧ ಮೃತ ಯುವತಿ ಲಿಯಾ ತಾಯಿ ಆಕಸ್ಮಿಕ ಸಾವು ಎಂದು ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇಂದು ಯುವತಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ.

  • ಕುಡಿದ ಮತ್ತಿನಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯ ಸುರೇಶ್ ರಂಪಾಟ

    ಕುಡಿದ ಮತ್ತಿನಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯ ಸುರೇಶ್ ರಂಪಾಟ

    ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯ ಸುರೇಶ್  ಬ್ರಿಗೇಡ್ ರೋಡ್‍ನಲ್ಲಿ ರಂಪಾಟ ಮಾಡಿದ ಘಟನೆ ಇಂದು ರಾತ್ರಿ ನಡೆದಿದೆ.

    ಬ್ರಿಗೇಡ್ ರೋಡ್‍ನಲ್ಲಿ ಸ್ನೇಹಿತರೊಂದಿಗಿದ್ದ ದಿವ್ಯ ಸುರೇಶ್ ಕುಡಿದ ಅಮಲಿನಲ್ಲಿ ಗಲಾಟೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಪೊಲೀಸರು ಮತ್ತು ಮಾಧ್ಯಮಗಳು ಬರುತ್ತಿದ್ದಂತೆ ಕ್ಯಾಮೆರಾ ಕಂಡು ದಿವ್ಯ ಸುರೇಶ್ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

    ಪೊಲೀಸರು ದಿವ್ಯ ಸುರೇಶ್ ಜೊತೆ ಮಾತನಾಡುತ್ತಿದ್ದಂತೆ ಮಾಧ್ಯಮಗಳು ಕೂಡ ಸ್ಥಳಕ್ಕೆ ದಾವಿಸಿವೆ. ಈ ವೇಳೆ ದಿವ್ಯ ಸುರೇಶ್ ಕ್ಯಾಮೆರಾ ಕಂಡು ಆಟೋ ಹತ್ತಿ ತೆರಳಿದಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೆಷನ್‍ಗೆ ಮಾಲ್ಡೀವ್ಸ್‌ಗೆ ಹಾರಿದ ಬಾಲಿವುಡ್ ಲವ್​ ಬರ್ಡ್ಸ್

    ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದ ದಿವ್ಯಾ ಸುರೇಶ್ ಅವರು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

     

  • ಹೊಸ ವರ್ಷ ಆಚರಣೆಗೆ ಸಜ್ಜಾಗಲ್ಲ ಬ್ರಿಗೇಡ್ ರಸ್ತೆ

    ಹೊಸ ವರ್ಷ ಆಚರಣೆಗೆ ಸಜ್ಜಾಗಲ್ಲ ಬ್ರಿಗೇಡ್ ರಸ್ತೆ

    ಬೆಂಗಳೂರು: ಹೊಸ ವರ್ಷ ಆಚರಣೆಗೆ ಬ್ರಿಗೇಡ್ ರಸ್ತೆ ಸಜ್ಜಾಗಲ್ಲ. ಯಾವುದೇ ಡೆಕೊರೇಷನ್ ಮತ್ತು ಲೈಟಿಂಗ್ಸ್ ಇರಲ್ಲ ಎಂದು ಬ್ರಿಗೇಡ್ಸ್ ಶಾಪ್ ಆ್ಯಂಡ್ ಎಸ್ಟಾಬ್ಲಿಷ್ಮೆಂಟ್ ಅಸೋಸಿಯೇಷನ್ ನಿರ್ಧಾರ ತೆಗೆದುಕೊಂಡಿದೆ ಎಂದು ಅಧ್ಯಕ್ಷ ಸುಹೇಲ್ ಹೇಳಿದ್ದಾರೆ.

    ಕೋವಿಡ್ ಹಿನ್ನೆಲೆಯಲ್ಲಿ ಹೊಸವರ್ಷದ ಆರಂಭಕ್ಕೆ ಈ ಹಿಂದೆ ಬ್ರಿಗೇಡ್ ರೋಡ್‍ನಲ್ಲಿ ಮಾಡುತ್ತಿರುವ ಡೆಕೊರೇಷನ್‍ಗೆ ಬ್ರೇಕ್ ಹಾಕಿದೆ. ಬ್ರಿಗೇಡ್ ರಸ್ತೆ ಹೊಸ ವರ್ಷಕ್ಕೆ ಸಜ್ಜಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಪ್ರತಿ ವರ್ಷ ಹೊಸ ವರ್ಷದ ಆರಂಭಕ್ಕೆ 7 ಲಕ್ಷ ವೆಚ್ಚ ಖರ್ಚು ಮಾಡಿ ಅಲಂಕಾರ ಲೈಟ್ ಹಾಗೂ ಭದ್ರತೆ ನೇಮಕ ಮಾಡಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇಂತಹ ಅಲಂಕಾರಿಕ ಲೈಟ್ ಅಥವಾ ಡೆಕೊರೇಷನ್ ಯಾವುದು ಇರುವುದಿಲ್ಲ ಎಂದು ಹೇಳಿದ್ದಾರೆ.

     

    ಡಿ. 15ಕ್ಕೆ ದೀಪಗಳು ಝಗಮಗಿಸುತ್ತಿದ್ದವು. ಇಯರ್ ಎಂಡ್ ಆಫರ್‍ಗಾಗಿ ಶಾಪಿಂಗ್ ಭರಾಟೆ ಕೂಡ ಜೋರಾಗಿರುತ್ತಿತ್ತು. ಆದರೆ ಈ ಬಾರಿ ಲೈಟಿಂಗ್ ಇರಲ್ಲ. ನಮಗೆ ನಷ್ಟ ಆಗಬಹುದು ಆದರೆ ಜೀವನವೇ ಮುಖ್ಯವಾಗಿದೆ. ಸೆಲ್ಫಿ, ಫೋಟೋಗಾಗಿಯೇ ಹೆಚ್ಚು ಜನರು ಬರುತ್ತಿದ್ದರು. ಅಲಂಕಾರವೇ ಇಲ್ಲ ಎಂದರೆ ಜನರು ಗುಂಪು ಸೇರುವುದಿಲ್ಲ. ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಸುಹೇಲ್ ಹೇಳಿದ್ದಾರೆ.

  • ದೇವಾಲಯಗಳು ಫುಲ್ -ಬ್ರಿಗೇಡ್ ರೋಡ್ ಖಾಲಿ ಖಾಲಿ

    ದೇವಾಲಯಗಳು ಫುಲ್ -ಬ್ರಿಗೇಡ್ ರೋಡ್ ಖಾಲಿ ಖಾಲಿ

    ಬೆಂಗಳೂರು: ಹೊಸ ವರ್ಷ ಇಂದು ಆರಂಭವಾಗಿದ್ದು, 2020ರ ಸ್ವಾಗತಕ್ಕೆ ನೂರಾರೂ ಸಂಖ್ಯೆಯಲ್ಲಿ ಸಾರ್ವಜನಿಕರು ಸಾಕ್ಷಿಯಾದರು. ನಗರದ ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು. ಇಂದು ಬೆಳ್ಳಂಬೆಳಗ್ಗೆ ಆಚರಣೆ ಮುಗಿದ ಬೆನ್ನಲ್ಲೇ ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ರಸ್ತೆಗಳು ಬಣಗುಡುತ್ತಿದ್ದವು.

    ಮೋಜು ಮಸ್ತಿ ಮಾಡಿ ರಸ್ತೆ ಅಂದ ಹಾಳು ಮಾಡಿದ್ದನ್ನ ಪೌರಕಾರ್ಮಿಕರು ಸ್ವಚ್ಛತೆಗೊಳಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನ ಮುಂಜಾನೆಯೇ ರಸ್ತೆ ಸ್ವಚ್ಛತೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಬಾರಿ ಹೊಸ ವರ್ಷಕ್ಕೆ ಹೊಸ ಟಾಸ್ಕ್ ತೆಗೆದುಕೊಂಡಿತ್ತು.

    ಅದೇನೆಂದರೆ ಎಂಜಿ ರೋಡ್, ಬ್ರಿಗೇಡ್ ರೋಡ್‍ನಲ್ಲಿ ಕಸ ಹುಡುಕಿದವರಿಗೆ ಬಹುಮಾನ ಎಂಬ ಸ್ಪರ್ಧೆ ಸಹ ಆಯೋಸಿತ್ತು. ಅಷ್ಟರ ಮಟ್ಟಿಗೆ ಬಿಬಿಎಂಪಿ ಪೌರಕಾರ್ಮಿಕರು ಸಂಪೂರ್ಣ ಕ್ಲೀನ್ ಮಾಡಿದ್ದಾರೆ ಎಂದು ಆತ್ಮವಿಶ್ವಾಸದಿಂದ ಸ್ಪರ್ಧೆ ಆಯೋಜಿಸಿದವರು ಹೇಳಿದ್ದಾರೆ.

    ಮತ್ತೊಂದೆಡೆ ನಗರದ ದೇವಾಲಯಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದರಿಂದ ದೇವರ ದರ್ಶನ ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

  • ಬ್ರಿಗೇಡ್ ರೋಡನ್ನು ಅಬ್ರಾಡ್ ಎಂದುಕೊಂಡಿದ್ದೆ: ಪ್ರಭಾಸ್

    ಬ್ರಿಗೇಡ್ ರೋಡನ್ನು ಅಬ್ರಾಡ್ ಎಂದುಕೊಂಡಿದ್ದೆ: ಪ್ರಭಾಸ್

    ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ತಮ್ಮ ಮುಂಬರುವ ‘ಸಾಹೋ’ ಚಿತ್ರಕ್ಕಾಗಿ ಬೆಂಗಳೂರಿಗೆ ಆಗಮಸಿದ್ದಾರೆ. ಈ ವೇಳೆ ಅವರು ಬ್ರಿಗೇಡ್ ರೋಡ್ ಅನ್ನು ಅಬ್ರಾಡ್ ಎಂದುಕೊಂಡಿದ್ದ ವಿಷಯವನ್ನು ರಿವೀಲ್ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪ್ರಭಾಸ್ ಅವರಿಗೆ ಬೆಂಗಳೂರಿನ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಅವರು, ನನಗೆ 16 ವರ್ಷ ಇದ್ದಾಗ ನನ್ನ ಸ್ನೇಹಿತರು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದರು. ನಾನು ಕೂಡ ಅವರ ಜೊತೆ ಬಂದಿದ್ದೆ. ಆದರೆ ನಾನು ಪರೀಕ್ಷೆ ಬರೆಯಲು ಬಂದಿರಲಿಲ್ಲ. ಎಂಜಾಯ್ ಮಾಡಲೆಂದು ಬಂದಿದ್ದೆ. ಆಗ ನಾನು ಬ್ರಿಗೇಡ್ ರೋಡಿಗೆ ಹೋಗಿದ್ದೆ. . ಆಗ ಇದು ಭಾರತ ಅಲ್ಲ ವಿದೇಶ ಎಂದು ಅನಿಸುತ್ತಿತ್ತು ಎಂದರು.

    ಬ್ರಿಗೇಡ್ ರೋಡಿನಲ್ಲಿ ಜನರು ಧರಿಸುವ ಉಡುಪು, ಬೈಕ್, ಕಾಫಿ ಶಾಪ್‍ಗಳು ಆ ವಾತಾವರಣ ಅಬ್ರಾಡ್ ರೀತಿ ಇತ್ತು. ಸಂಜೆ 6 ಗಂಟೆ ಆಗುತ್ತಿದ್ದಂತೆ ಮಳೆ ಹನಿ ಬೀಳುತ್ತಿತ್ತು. ಅದು ತುಂಬಾನೇ ಸುಂದರವಾಗಿತ್ತು. ಬೆಂಗಳೂರು ಯಾವಾಗಲೂ ಒಂದು ಸುಂದರ ನಗರವಾಗಿರುತ್ತದೆ. ನಾನು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದೇನೆ. ಅದು ಕೂಡ ಮಹಾನಗರ. ಆದರೆ ಬೆಂಗಳೂರು ಮಾತ್ರ ಸುಂದರವಾದ ನಗರ ಎಂದು ಹೇಳಿದರು.

    ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

  • ಈ ಬಾರಿಯ ಹೊಸ ವರ್ಷದಲ್ಲೂ ಕಾಮುಕರ ಕಾಟ- ಚರ್ಚ್‍ಸ್ಟ್ರೀಟ್‍ನಲ್ಲಿ ಯುವತಿಯರ ಅನುಚಿತ ವರ್ತನೆ

    ಈ ಬಾರಿಯ ಹೊಸ ವರ್ಷದಲ್ಲೂ ಕಾಮುಕರ ಕಾಟ- ಚರ್ಚ್‍ಸ್ಟ್ರೀಟ್‍ನಲ್ಲಿ ಯುವತಿಯರ ಅನುಚಿತ ವರ್ತನೆ

    ಬೆಂಗಳೂರು: ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕಾಮುಕನೊಬ್ಬ ವಿದೇಶಿ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿರೋ ಘಟನೆ ನಡೆದಿದೆ.

    ಮಹಿಳೆಯ ಹಿಂಭಾಗಕ್ಕೆ ಹೊಡೆದು ಓಡಿಹೋಗಲು ಯತ್ನಿಸಿದ್ದ ಯುವಕನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದ್ರು. ನಂತ್ರ ಪೊಲೀಸರು ಆ ಯುವಕನನ್ನು ಮಹಿಳೆ ಬಳಿ ಕರೆದುಕೊಂಡು ಹೋದ್ರು. ಅಲ್ಲದೆ ಮಹಿಳೆಯ ಕಾಲು ಹಿಡಿದು ಕ್ಷಮೆ ಕೇಳುವಂತೆ ಹೇಳಿದ್ರು. ಈ ವೇಳೆ ನಡುರಸ್ತೆಯಲ್ಲೆ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾನೆ. ಇದನ್ನೂ ಓದಿ: 2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!

    ಇನ್ನು ರಾತ್ರಿ ಹೊಸವರ್ಷಾಚರಣೆ ವೇಳೆ ಮಹಿಳೆಯೊಬ್ಬರಿಗೆ ಕಿಡಿಗೇಡಿಗಳು ಕಾಟ ಕೊಟ್ಟಿದ್ದಾರೆ. ತಿಪ್ಪಸಂದ್ರ ಮೂಲದ ಬೆನಕ ಎಂಬವರು ತಮ್ಮ ಕುಟುಂಬದೊಂದಿಗೆ ಹೊಸವರ್ಷಾಚರಣೆಗೆ ಎಂಜಿ ರೋಡ್‍ಗೆ ಬಂದಿದ್ರು. ಆದ್ರೆ ಈ ವೇಳೆ ಕಾಮುಕರ ಕಾಟದಿಂದ ವಾಪಸ್ ಹೊರಟ್ರು. ವಾಪಸ್ ಹೋಗುವಾಗಲೂ ಕಾಮುಕನೊಬ್ಬ ಯುವತಿಗೆ ಟಚ್ ಮಾಡಿ ಕಿರುಕುಳ ಕೊಟ್ಟಿದ್ದಾನೆ. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಬೆನಕ, ಪೊಲೀಸರು ಬೆಂಗಳೂರು ಸೇಫ್ ಅಂತಾರೆ ಆದ್ರೆ, ಎಲ್ಲಕ್ಕಿಂತ ಹೆಚ್ಚು ಡೇಂಜರ್ ಈ ಬೆಂಗಳೂರು ಅಂತಾ ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್

    ಹೊಸವರ್ಷದ ಸಂಭ್ರಮಾಚರಣೆ ವೇಳೆ ಕುಡಿದ ಮತ್ತಿನಲ್ಲಿ ಯುವತಿಯರು ಅನುಚಿತವಾಗಿ ವರ್ತಿಸಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿರೋ ಸೋಸಿಯಲ್ ಹೋಟೆಲ್ ಮುಂಭಾಗದಲ್ಲಿ ಯುವತಿಯರು ಅರೆಪ್ರಜ್ಞಾಸ್ಥೆಯಲ್ಲಿ ಕುಡಿದು ಹೆಚ್ಚಾಗಿ ವಾಂತಿ ಮಾಡುತ್ತಿದ್ದಿದ್ದು ಕಂಡು ಬಂತು. ಜೊತೆಗೆ ಸಂಭ್ರಮಾಚರಣೆ ವೇಳೆ ಪೊಲೀಸರ ಬ್ಯಾರಿಕೇಡ್ ಮುರಿತು ಸಾವಿರಾರು ಜನ ಬ್ರಿಗೇಡ್ ರೋಡ್ ಕಡೆಗೆ ನುಗ್ಗಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾಯ್ತು. ಇದನ್ನೂ ಓದಿ: ಉಡುಪಿಯಲ್ಲಿ ನ್ಯೂ ಇಯರ್ ಪಾರ್ಟಿ ಬಲು ಜೋರು

    ಯುವಕನೊಬ್ಬ ಪೊಲೀಸರ ಎದುರಲ್ಲೇ ಯುವತಿಯನ್ನು ಚುಡಾಯಿಸಿದ ಘಟನೆ ಬೆಂಗಳೂರಿನ ಗರುಡಾ ಮಾಲ್ ಬಳಿಯ ನೋ ಲಿಮಿಟ್ಸ್ ಕ್ಲಬ್ ಬಳಿ ನಡೆದಿದೆ. ಈ ವೇಳೆ ಯುವತಿಯನ್ನು ಚುಡಾಯಿಸಿದ ಯುವಕನಿಗೆ ಪಾನಮತ್ತ ಯುವಕನೊಬ್ಬ ಥಳಿಸಿದ್ದಾನೆ. ಎಲ್ಲವೂ ಪೊಲೀಸರ ಎದುರೇ ನಡೆದ್ರೂ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿಯ ಪ್ರಿಯಕರ ಬೆಂಗಳೂರು ಪೊಲೀಸರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.