ಬೆಂಗಳೂರು: 2025ರ ಹೊಸ ವರ್ಷ (New Year 2025) ಸ್ವಾಗತಕ್ಕೆ ಇಡೀ ಜಗತ್ತೇ ಸಜ್ಜಾಗಿದೆ. ಹೊಸ ಹುರುಪಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ರಾಜ್ಯ ರಾಜಧಾನಿಯೂ ಸಜ್ಜಾಗಿದೆ. 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಾಯ್ ಹೇಳಲು ಸಿಲಿಕಾನ್ ಸಿಟಿ ಮಂದಿ ಕಾತರರಾಗಿದ್ದಾರೆ.
ಈಗಾಗಲೇ ಬೆಂಗಳೂರು ಸಂಭ್ರಮಾಚರಣೆಯ ಮೂಡ್‌ನಲ್ಲಿದೆ.. ಹೊಸ ವರ್ಷದ ಹಾಟ್‌ಸ್ಪಾಟ್‌ಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರ ಕಲರ್‌ಫುಲ್ ಆಗಿವೆ.. ಝಗಮಗ ಎನ್ನುತ್ತಿವೆ.. ಸಹಸ್ರ ಸಹಸ್ರ ಮಂದಿ ಕುಣಿದು ಕುಪ್ಪಳಿಸಲು.. ಗೆಳೆಯ ಗೆಳೆತಿಯರ ಜೊತೆ ಸಂಭ್ರಮಿಸಲು ಸೆಲೆಬ್ರೆಷನ್ ಸ್ಟಾಟ್‌ಗಳಿಗೆ ಬರ್ತಿದ್ದಾರೆ.
ರಾತ್ರಿ 12 ಗಂಟೆ ಹೊತ್ತಿಗೆ ಎಂ.ಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿ 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಹಿಳೆಯರಿಗಾಗಿ 40 ಸೇಫ್ಟಿ ಐಲ್ಯಾಂಡ್, ವಾಚ್ ಟವರ್ ನಿರ್ಮಿಸಲಾಗಿದೆ. ಮಧ್ಯರಾತ್ರಿ 1 ಗಂಟೆ ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ.
ಮಹಿಳೆಯರ ಸುರಕ್ಷತೆಗಾಗಿ ಪ್ರತಿ ಮೆಟ್ರೋ ಕೋಚ್‌ನಲ್ಲೂ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಫ್ಲೈಓವರ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ.
ಬೆಂಗಳೂರು: ಬ್ರಿಗೇಡ್ ರಸ್ತೆಯಲ್ಲಿ (Brigade Road) ಹೊಸ ವರ್ಷ (New Year) ಸಂಭ್ರಮಾಚರಣೆಗೆ ಹೋಗುವ ಜೋಡಿಗಳಿಗೆ (Couple) ಬೆಂಗಳೂರು ಪೊಲೀಸರು (Benngaluru Police) ಸಿಹಿ ಸುದ್ದಿ ಕೊಡಲು ಪ್ಲಾನ್ ಮಾಡಿಕೊಂಡಿದ್ದಾರೆ.
ಹೊಸ ವರ್ಷಕ್ಕೆ ಬೆಂಗಳೂರಿನ (Bengaluru) ಬ್ರಿಗೇಡ್ ರೋಡ್‌ನಲ್ಲಿ ಜೋಡಿಗೆ ಈ ಬಾರಿ ಪ್ರತ್ಯೇಕವಾದ ಮಾರ್ಗ ಮಾಡಿಕೊಟ್ಟು ಸಂಭ್ರಮಾಚರಣೆಗೆ ಅನುವು ಮಾಡಿಕೊಡಲು ಬೆಂಗಳೂರು ಪೊಲೀಸರು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟೆಕ್ಕಿ ಮೇಲೆ ಗ್ಯಾಂಗ್ ರೇಪ್?
ಕಳೆದ ವರ್ಷ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೆಲ ಪುಂಡರು ಜನರ ಗುಂಪಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಆಗಮಿಸುವ ಜೋಡಿಗೆ ಎಂದೇ ಪ್ರತ್ಯೇಕ ಮಾರ್ಗ ಮಾಡಿ ಅಲ್ಲಿಯೇ ಹೊಸ ವರ್ಷ ಸಂಭ್ರಮಾಚರಣೆ ಮಾಡಿಕೊಳ್ಳಲು ವಿಶೇಷ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಪ್ರಕರಣ – ಮಾಸ್ಟರ್‌ಮೈಂಡ್ ಲಲಿತ್ ಬಂಧನ
ಈ ಮೂಲಕ ಸಂಭ್ರಮಾಚರಣೆ ಹೆಸರಲ್ಲಿ ನಡೆಸುವ ಪುಂಡರ ಪುಂಡಾಟಕ್ಕೆ ಬ್ರೇಕ್ ಹಾಕಬಹುದೆಂದು ಹೊಸ ಪ್ರಯೋಗಕ್ಕೆ ಇಲಾಖೆ ಮುಂದಾಗಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಬೆಂಗಳೂರು: ಹೆಣ್ಣೂರು ಕ್ರಾಸ್ (Hennuru Cross) ಬಳಿ ಮೆಟ್ರೋ ಪಿಲ್ಲರ್ ನಿರ್ಮಿಸಲು ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಉರುಳಿ ತಾಯಿ-ಮಗ ಬಲಿಯಾಗಿದ್ರು. ಈ ದುರಂತ ಮಾಸುವ ಮುನ್ನವೇ, ಗುರುವಾರ ಮೆಟ್ರೋ ಕಾಮಗಾರಿ ಎಫೆಕ್ಟ್ ನಿಂದ ಬ್ರಿಗೇಡ್ ರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿದ್ದು, ಇಬ್ಬರು ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
30 ಅಡಿ ಅಳಕ್ಕೆ ಗುಂಡಿ ಬಿದ್ದಿದ್ದು, ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವಿರುದ್ಧ ಜನಾಕ್ರೋಶ ವ್ಯಕ್ತವಾಗ್ತಿವೆ. ಗುಂಡಿ ಬಿದ್ದ ಜಾಗದ ಆಳದಲ್ಲಿ, ಕಳೆದ 5 ದಿನಗಳ ಹಿಂದೆ 35 ಫೀಟ್‍ನ ಅಂತರದಲ್ಲಿ ಗ್ರಾನೈಟ್ ರಾಕ್ ಮೂಲಕ ನಮ್ಮ ಮೆಟ್ರೋದ ಟನಲ್ ಹಾದು ಹೋಗಿತ್ತು. ಸದ್ಯ ಗುಂಡಿಗೆ ಫುಲ್ ಕಾಂಕ್ರೀಟ್ ತುಂಬಿದ್ದು, ರಾತ್ರಿವಿಡೀ ರಸ್ತೆ ಬಂದ್ ಮಾಡಿ, ಕ್ವಾಲಿಟಿ ಚೆಕ್ ಮಾಡಲಾಗ್ತಿದೆ. ಕೆಲಸ ನಡೆದ 10 ಗಂಟೆಯ ನಂತರ ಕ್ವಾಲಿಟಿ ಪರಿಶೀಲಿಸಿ ರಸ್ತೆ ಓಪನ್ ಮಾಡೋಕೆ ಬಿಎಂಆರ್ ಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕುಸಿತಗೊಂಡಿರೋ ರಸ್ತೆ ಕೆಳಭಾಗದಲ್ಲಿ ಎರಡು ಟನಲ್ ಮೆಷಿನ್ ಈಗಾಗಲೇ ಪಾಸ್ ಆಗಿದ್ದವು. ಈ ವೇಳೆ ಮಣ್ಣು ಸಡಿಲವಾಗಿರೋದು ಹಾಗೂ ನೀರು ಕಾಣಿಸಿಕೊಂಡಿಲ್ಲ. ಆದ್ರೇ ಇದು ಹೇಗೆ ಕುಸಿತ ಆಯ್ತು ಅನ್ನೋ ಮಾಹಿತಿ ಬಿಎಂಆರ್ ಸಿಎಲ್ ಅಧಿಕಾರಿಗಳಿಗೂ ಇಲ್ಲ. ಜಲಮಂಡಳಿಯ ಪೈಪ್‍ಲೈನ್ ಏನಾದ್ರೂ ಹೋಗಿದ್ಯಾ ಅಂತ ಜಲಮಂಡಳಿಯ ಜೊತೆ ಮಾತುಕತೆ ನಡೆಸಲು ಬಿಎಂಆರ್‍ಸಿಎಲ್ ಮುಂದಾಗಿದೆ. ಇದನ್ನೂ ಓದಿ: ಪತ್ನಿ, ಮಗನ ಸಾವಿಗೆ ಕಾರಣರಾದವ್ರ ವಿರುದ್ಧ ಕ್ರಮಕ್ಕೆ ಲೋಹಿತ್ ದೂರು- ಎಫ್‍ಐಆರ್
ಪಿಲ್ಲರ್ ದುರಂತ (Metro Pillar Tragedy) ಖಂಡಿಸಿ ಪ್ರತಿಭಟನೆ: ಪಿಲ್ಲರ್ ದುರಂತ ಖಂಡಿಸಿ ಬಿಎಂಆರ್‍ಸಿಎಲ್ ಮುಖ್ಯ ಕಛೇರಿಗೆ ನಮ್ಮ ಕರ್ನಾಟಕ ಸೇನೆ ದಿಢೀರ್ ನುಗ್ಗಿ ಪ್ರತಿಭಟನೆ ನಡೆಸ್ತು. ಪ್ರತಿಭಟನಾಕಾರರ ಮನವಿ ಸ್ವೀಕರಿಸದಿದ್ದಕ್ಕೆ ರೊಚ್ಚಿಗೆದ್ದು, ಕಛೇರಿಯಲ್ಲಿನ ಸೋಫಾ, ಚೇರ್‍ಗಳನ್ನು ಹೊರಗೆಳೆದು ಧ್ವಂಸಗೊಳಿಸಿದ್ರು. ಮೆಟ್ರೋ ಕಾಮಗಾರಿ ದುರಂತದಲ್ಲಿ ಮೃತರಾದ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯಿಸಿದ್ರು.
ಬಿಎಂಆರ್ ಸಿಎಲ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೆಜ್‍ಗೆ ಚೇಂಬರ್ ಹೊರ ಭಾಗದಲ್ಲೇ ಧಿಕ್ಕಾರ ಕೂಗಿದ್ರು. ಮನವಿ ಸ್ವೀಕರಿಸದಿದ್ದಕ್ಕೆ ಸಿಟ್ಟಿಗೆದ್ದ ಪ್ರತಿಭಟನಾಕಾರರು ಕಚೇರಿಗೆ ನುಗ್ಗಿ ಮನಬಂದಂತೆ ಸಿಕ್ಕ ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ರು. ಕೆಲಕಾಲ ಉದ್ವಿಗ್ನ ವಾತಾವರಣ ಇತ್ತು. ನಂತರ ಮನವಿ ಪತ್ರವನ್ನು ಸ್ವೀಕರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗ್ತೇವೆ. ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಮುಂಜಾಗ್ರತಾ ಕ್ರಮ ವಹಿಸ್ತೇವೆ ಎಂದು ಬಿಎಂಆರ್‍ಸಿಎಲ್ ಎಂಡಿ ಅಂಜುಂ ಫರ್ವೇಜ್ ತಿಳಿಸಿದ್ರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.
ವೀಕ್ ಎಂಡ್ ಬಂದರೆ ಸಾಕು ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಜ್ ಸ್ಟ್ರೀಟ್ ನಲ್ಲಿ ಪಾರ್ಕಿಂಗ್ ಸಮಸ್ಯೆ ಇರುತ್ತದೆ. ರಜೆ ದಿನಗಳಲ್ಲಿ ಮಹಿಳೆಯರು ಪತಿ ಮತ್ತು ಮಕ್ಕಳ ಜೊತೆ ಸುತ್ತಾಡಿಕೊಂಡು ಶಾಂಪಿಗ್ ಮಾಡಿ, ಊಟ ಮಾಡಿಕೊಂಡು ಬರೋಣ ಅಂದುಕೊಂಡಿರುತ್ತಾರೆ. ಆದ್ರೆ ಸಾಮಾನ್ಯವಾಗಿ ಎಲ್ಲಾ ಕಡೆ ಪಾರ್ಕಿಂಗ್ ಸಮಸ್ಯೆ ಇದ್ದಿದ್ದೇ. ಇದಕ್ಕೆಲ್ಲ ಪರಿಹಾರ ನೀಡಬೇಕೆಂದು ಬಿಬಿಎಂಪಿ, ಮಹಿಳೆಯರಿಗೆ ಪಾರ್ಕಿಂಗ್ ರಿಸರ್ವೇಷನ್ ವ್ಯವಸ್ಥೆಯನ್ನು ನೀಡಲು ಮುಂದಾಗಿದೆ.
ನಗರದಲ್ಲಿ ಮಹಿಳೆಯರಿಗೆ ವಾಹನ ನಿಲುಗಡೆಯಲ್ಲಿ ಮೀಸಲಾತಿ ನೀಡುವುದಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದ್ದು, ಮೊಟ್ಟ ಮೊದಲ ಬಾರಿಗೆ ಬ್ರಿಗೇಡ್ ರಸ್ತೆಯಲ್ಲಿ ಚಾಲನೆಗೆ ತರಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿ ಮಹಿಳೆಯರಿಗೆ ಶೇಕಾಡ. 20 ರಷ್ಟು ಪಾರ್ಕಿಂಗ್ ರಿಸರ್ವೆಷನ್ ನೀಡಲಾಗಿದೆ. ಇದರಿಂದ ತುಂಬಾ ಸಂತಸವಾಗಿದೆ ಎಂದು ವಾಹನ ಸವಾರರಾದ ವಿದ್ಯಾ ಹೇಳಿದ್ರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪಾರ್ಕಿಂಗ್ ನಲ್ಲಿ ರಿಸರ್ವೇಷನ್ ನೀಡುವ ಯೋಜನೆ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಈ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆನ್ನುವ ಆಶಾಯವಿದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ರು.