ವಾಷಿಂಗ್ಟನ್: 14 ದೇಶಗಳ ಜೊತೆ ತೆರಿಗೆ ಸಮರ (Tariff War) ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಸುಂಕ ವಿಧಿಸಿದ ಬೆನ್ನಲ್ಲೇ ತಾಮ್ರದ ಮೇಲೆ 50% ಸುಂಕ (Tariff on Copper) ಘೋಷಿಸಿದ್ದಾರೆ. ಜೊತೆಗೆ ಅಮೆರಿಕಕ್ಕೆ ಆಮದಾಗುವ ಫಾರ್ಮಾ ಔಷಧಗಳ ಮೇಲೆ 200% ಸುಂಕ (Tariff) ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಕ್ಯಾಬಿನೆಟ್ ಸಭೆಗೆ ಟ್ರಂಪ್ ಈ ವಿಷಯ ತಿಳಿಸಿದ್ದಾರೆ. ನಾವು ತಾಮ್ರದ ಮೇಲೆ 50% ಸುಂಕ ವಿಧಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಅಲ್ಲದೇ 1 ವರ್ಷದ ನಂತರ ಅಮೆರಿಕ ಆಮದು ಮಾಡಿಕೊಳ್ಳುವ ಔಷಧಗಳ ಮೇಲಿನ ಸುಂಕ 200% ರಷ್ಟು ಹೆಚ್ಚಾಗಬಹುದು. ಸೆಮಿಕಂಡಕ್ಟರ್ ಚಿಪ್‌ಗಳಂತಹ ನಿರ್ದಿಷ್ಟ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕ ಬರಬಹುದು ಎಂದು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ರಫೇಲ್ ಯುದ್ಧ ವಿಮಾನ ಕಳೆದುಕೊಂಡಿಲ್ಲ: ಡಸಾಲ್ಟ್ ಏವಿಯೇಷನ್ ಸ್ಪಷ್ಟನೆ
ಅಮೆರಿಕ ಶೀಘ್ರದಲ್ಲೇ ಫಾರ್ಮಾ ಔಷಧಿಗಳ (Pharma Medicines) ಮೇಲಿನ ಸುಂಕ ಘೋಷಣೆ ಮಾಡಲಿದೆ. ಆದ್ರೆ ತಯಾರಕ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನ ಸ್ಥಳಾಂತರಿಸಿಕೊಳ್ಳಲು ಸಮಯ ಕೇಳಿದ್ದಾರೆ. ಅದಕ್ಕಾಗಿ 1 ವರ್ಷ, ಹೆಚ್ಚೆಂದರೆ ಒಂದೂವರೆ ವರ್ಷ ಸಮಯಾವಕಾಶ ನೀಡಲಿದ್ದೇವೆ. ಅದರ ಬಳಿಕ ಅವರೂ ಸುಂಕಕ್ಕೆ ಒಳಗಾಗುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ಗೆ ಜು.16ಕ್ಕೆ ನೇಣು
ಹೊಸ ಸುಂಕ ನೀತಿಯು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಏಕೆಂದ್ರೆ ಅಮೆರಿಕವು ಭಾರತದ ಔಷಧಗಳಿಗೆ ಅತಿ ದೊಡ್ಡ ವಿದೇಶಿ ಮಾರುಕಟ್ಟೆಯಾಗಿದೆ. ಅಲ್ಲದೇ ತಾಮ್ರ ಮತ್ತು ತಾಮ್ರ ಉತ್ಪನ್ನಗಳ ಪ್ರಮುಖ ರಫ್ತು ಮಾಡುವ ರಾಷ್ಟ್ರವಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ
ಭಾರತದ ಮೇಲೆ ಏನು ಪರಿಣಾಮ?
2024-2025ರ ವರ್ಷದಲ್ಲಿ ಭಾರತವು ವಿಶ್ವದಾದ್ಯಂತ ಸುಮಾರು 2 ಶತಕೋಟಿ ಡಾಲರ್ ಮೌಲ್ಯದಷ್ಟು ತಾಮ್ರ ಮತ್ತು ತಾಮ್ರದ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಈ ಪೈಕಿ ಅಮೆರಿಕದ ಮಾರುಕಟ್ಟೆಗಳಿಗೆ 360 ದಶಲಕ್ಷ ಡಾಲರ್ ಮೌಲ್ಯದಷ್ಟು ಅಥವಾ ಶೇ.17ರಷ್ಷು ರಫ್ತು ಮಾಡಿತ್ತು. ಅದೇ ರೀತಿ ಸೌದಿ ಅರೇಬಿಯಾಗೆ ಶೇ.26, ಚೀನಾಗೆ ಶೇ.18ರಷ್ಟು ರಫ್ತು ಮಾಡಿತ್ತು. ಇದೀಗ ಅಮೆರಿಕ 50% ಸುಂಕ ನೀತಿಯು ಈ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಬ್ರಿಕ್ಸ್ (BRICS) ಒಕ್ಕೂಟಕ್ಕೆ ತೆರಿಗೆ ಸಮರದ ಬೆದರಿಕೆ ಹಾಕಿದ್ದಾರೆ. ಬ್ರಿಕ್ಸ್ ಜೊತೆ ಹೊಂದಾಣಿಕೆ ಮಾಡುವ ಯಾವುದೇ ದೇಶಕ್ಕೆ 10% ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ ಒಳಗೊಂಡಿರುವ ಬ್ರಿಕ್ಸ್ ಅನ್ನು ಅಮೆರಿಕ ವಿರೋಧಿ ಎಂದು ಟ್ರಪ್ ಪರಿಗಣಿಸಿದ್ದಾರೆ. ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಬ್ರಿಕ್ಸ್ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಗುಡುಗಿದ್ದಾರೆ. ಇದನ್ನೂಓದಿ: ಬ್ರಿಕ್ಸ್ಶೃಂಗಸಭೆಯಲ್ಲಿಪಾಕ್ ವಿರುದ್ಧಮೋದಿಕಟುವಾಗ್ದಾಳಿ–ಬುದ್ಧನಶಾಂತಿತತ್ವಪ್ರತಿಪಾದಿಸಿದಪ್ರಧಾನಿ
ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ (BRICS Summit) ಸಮಯದಲ್ಲೇ ಟ್ರಂಪ್ ಈ ನಿರ್ಧಾರ ಪ್ರಕಟಿಸಿರುವುದು ವಿಶೇಷ. ಇದರ ಜೊತೆ ಭಾರತ (India) ಮತ್ತು ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಕೆಲ ತಿಂಗಳಿನಿಂದ ಮಾತುಕತೆ ನಡೆಸುತ್ತಿರುವ ಸಮಯದಲ್ಲೇ ಟ್ರಂಪ್ ಅವರು ಎಚ್ಚರಿಕೆಯ ಪೋಸ್ಟ್ ಹಾಕಿದ್ದಾರೆ.
Donald J. Trump Truth Social 07.06.25 10:24 PM EST
Any Country aligning themselves with the Anti-American policies of BRICS, will be charged an ADDITIONAL 10% Tariff. There will be no exceptions to this policy. Thank you for your attention to this matter!
— Commentary Donald J. Trump Posts From Truth Social (@TrumpDailyPosts) July 7, 2025
ಏನಿದು ಬ್ರಿಕ್ಸ್?
ಬ್ರಿಕ್ಸ್’ (BRICS) ಎಂಬುದು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕವಾದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ನಡುವಿನ ಮೈತ್ರಿಕೂಟವನ್ನು ಇದು ಪ್ರತಿನಿಧಿಸುತ್ತದೆ. ಮೊದಲ ಶೃಂಗಸಭೆಯು 2009 ರಲ್ಲಿ ರಷ್ಯಾದ ಒಕ್ಕೂಟದಲ್ಲಿ ನಡೆದಿತ್ತು. ಆಗ ಜಗತ್ತಿನಾದ್ಯಂತ 20ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಕ್ಸ್‌ನ ಸದಸ್ಯತ್ವವನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರೆ, ಇತರ 15ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್‌ನ ಭಾಗವಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು. ಇದನ್ನೂಓದಿ: ಡಾಲರ್ಗೆಪೈಪೋಟಿನೀಡಲುಹೊಸಕರೆನ್ಸಿಆರಂಭಿಸುವನಿರ್ಧಾರಕೈಗೊಂಡಿಲ್ಲ: ಜೈಶಂಕರ್
ಏನಿದು ಬ್ರಿಕ್ಸ್ ಕರೆನ್ಸಿ?
ಬ್ರಿಕ್ಸ್ ಕರೆನ್ಸಿಯ ಪ್ರಸ್ತಾಪವನ್ನು 2022ರ ಶೃಂಗಸಭೆಯಲ್ಲಿ ರಷ್ಯಾ ಮೊದಲು ಪ್ರಸ್ತಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಾಲರ್ ಯಾಕೆ ವಿಶ್ವದ ಕರೆನ್ಸಿಯಾಗಬೇಕು ಎಂಬ ವಿಚಾರಗಳು ಚರ್ಚೆಗೆ ಬಂತು. ನಂತರ ಭಾರತ ರಷ್ಯಾ, ಚೀನಾ, ಬ್ರೆಜಿಲ್‌ಗಳು ರಷ್ಯಾದ ಜೊತೆ ಸ್ಥಳೀಯ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತಿದೆ. ರಷ್ಯಾದ ಕಾಜಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬ್ರಿಕ್ಸ್ ನೋಟ್ ಹಿಡಿದುಕೊಂಡಿದ್ದರು. ಈ ನೋಟು ದೊಡ್ಡ ಸುದ್ದಿಯಾಗುತ್ತಿದ್ದಂತೆ ಬ್ರಿಕ್ಸ್ ಕರೆನ್ಸಿಯ ಬಗ್ಗೆ ಚರ್ಚೆ ಹೆಚ್ಚಾಯಿತು. ಆ ಬಳಿಕ ಕಳವಳಗೊಂಡಿದ್ದ ಟ್ರಂಪ್ ಅಧಿಕಾರ ಸ್ವೀಕಾರಕ್ಕೂ ಮೊದಲೇ ಬ್ರಿಕ್ಸ್ ದೇಶಗಳಿಗೆ 100% ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿದ್ದರು.
ಸದ್ಯ ಒಂದೊಂದು ದೇಶಗಳಲ್ಲಿ ಒಂದೊಂದು ಕರೆನ್ಸಿ ಇದೆ. ಬ್ರೆಜಿಲ್‌ನಲ್ಲಿ ʻರಿಯಾಲ್ʼ, ರಷ್ಯಾದಲ್ಲಿ ʻರುಬೆಲ್ʼ, ಭಾರತದಲ್ಲಿ ʻರೂಪಾಯಿʼ, ಚೀನಾದಲ್ಲಿ ʻಯುವಾನ್ʼ, ದಕ್ಷಿಣ ಆಫ್ರಿಕಾದಲ್ಲಿ ʻರಾಂಡ್ʼ ಇದೆ. ಒಂದೊಂದು ದೇಶದಲ್ಲಿ ಒಂದೊಂದು ಕರೆನ್ಸಿ ಇರುವ ಕಾರಣ ಎಲ್ಲ ದೇಶಗಳಿಗೆ ಒಂದು ದೇಶದ ಕರೆನ್ಸಿಯನ್ನು ಅಪ್ಲೈ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಹೊಸ ಕರೆನ್ಸಿ ಬರಬೇಕು. ಇದಕ್ಕಾಗಿ ʻಬ್ರಿಕ್ಸ್ʼ ಮುಂದಾಗಿದೆ.
ಸದ್ಯ ಹೊಸ ಕರೆನ್ಸಿ ವಿಚಾರದಲ್ಲಿ ಈಗಾಗಲೇ ರಷ್ಯಾ, ಬ್ರೆಜಿಲ್, ದಕ್ಷಿಣಾ ಆಫ್ರಿಕಾದ ಒಪ್ಪಿಗೆ ಸೂಚಿಸಿದ್ದು, ಭಾರತದ ನಿಲುವಿಗಾಗಿ ಚೀನಾ ಕಾಯುತ್ತಿದೆ. ಒಟ್ಟಿನಲ್ಲಿ ಬ್ರಿಕ್ಸ್ ಒಕ್ಕೂಟ ಮತ್ತಷ್ಟು ಬಲಗೊಂಡರೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯಕ್ಕೆ ಪೆಟ್ಟು ಬೀಳುವುದು ನಿಶ್ಚಿತ.
ನವದೆಹಲಿ: ಭಾರತ, ಚೀನಾ, ಬ್ರೆಜಿಲ್, ರಷ್ಯಾ ಒಳಗೊಂಡಿರುವ ʻಬ್ರಿಕ್ಸ್ʼ (BRICS) ಒಕ್ಕೂಟದ 10 ರಾಷ್ಟ್ರಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು (Pahalgam Terror Attack) ಖಂಡಿಸಿವೆ. ಅಲ್ಲದೇ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿದ್ದು, ಭಾರತಕ್ಕೆ ಬೆಂಬಲ ಸೂಚಿಸಿವೆ. ಇದು ಭಾರತಕ್ಕೆ ಸಿಕ್ಕ ಮತ್ತೊಂದು ರಾಜತಾಂತ್ರಿಕ ಯಶಸ್ಸಾಗಿದೆ.
ಭಾರತ ಸೇರಿದಂತೆ 10 ʻಬ್ರಿಕ್ಸ್ʼ ಸದಸ್ಯ ರಾಷ್ಟ್ರಗಳ ಸಂಸತ್ ಪ್ರತಿನಿಧಿಗಳು (BRICS Parliamentary Forum) ಇದೇ ಜೂ.4-5ರಂದು ಬ್ರೆಲಿಯಾದಲ್ಲಿ ನಡೆದ 11ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದರು. ಬ್ರಿಕ್ಸ್ ಸಂಸದೀಯ ವೇದಿಕೆಯಲ್ಲಿ ಭಾರತ, ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಇಥಿಯೋಪಿಯಾ ಮತ್ತು ಇಂಡೋನೇಷ್ಯಾ ಸಂಸತ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇದೇ ಸಭೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನೇತೃತ್ವದ ಭಾರತೀಯ ಸಂಸದೀಯ ನಿಯೋಗವು ಬ್ರೆಸಿಲಿಯಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಭಾಗಿಯಾಗಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವನ್ನು ಪ್ರತಿಪಾದಿಸಿತು.
ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸಿನ ನೆರವನ್ನು ಕಡಿತಗೊಳಿಸುವುದು, ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವುದು, ಆಧುನಿಕ ತಂತ್ರಜ್ಞಾನಗಳ ದುರ್ಬಳಕೆ ನಿಯಂತ್ರಿಸುವುದು, ಕಾನೂನು ಪ್ರಕ್ರಿಯೆಗೆ ಸಹಕರಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಭಾರತದ ನಿಯೋಗವು ಬಲವಾಗಿ ಪ್ರತಿಪಾದಿಸಿತು. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಪಾಕಿಸ್ತಾನಕ್ಕೆ ಸದಾ ಕಾಡಲಿದೆ: ಮೋದಿ
ಹಲವು ಸುತ್ತಿನ ಮಾತುಕತೆ ಬಳಿಕ ಸದಸ್ಯ ರಾಷ್ಟ್ರಗಳು ಪಹಲ್ಲಾಮ್ ದಾಳಿಯನ್ನು ಖಂಡಿಸಿದವು ಮತ್ತು ಭಯೋತ್ಪಾದನೆ ನಿಗ್ರಹದ ಅಗತ್ಯತೆ ಬಗ್ಗೆ ಒತ್ತಿ ಹೇಳಿದವು. ಜೊತೆಗೆ ಕೃತಕ ಬುದ್ಧಿಮತ್ತೆ, ಜಾಗತಿಕ ವ್ಯಾಪಾರ ಮತ್ತು ಆರ್ಥಿಕತೆ, ಅಂತರ್ ಸಂಸದೀಯ ಸಹಕಾರ, ಜಾಗತಿಕ ಶಾಂತಿ ಮತ್ತು ಭದ್ರತೆಯಂತಹ ಪ್ರಮುಖ ವಿಷಯಗಳಿಗೆ ಒಮ್ಮತ ಸೂಚಿಸುವ ಬಗ್ಗೆಯೂ ಚರ್ಚಿಸಲಾಯಿತು. ಇದನ್ನೂ ಓದಿ: ಪರ ಪುರುಷನೊಂದಿಗೆ ಸರಸಕ್ಕೆ ಅಡ್ಡಿ – ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನೇ ಮುಗಿಸಲು ಯತ್ನಿಸಿದ್ದಾಕೆ ಅರೆಸ್ಟ್
ಇತ್ತೀಚೆಗೆ ವಿಶ್ವದ ದೊಡ್ಡಣ್ಣ ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ (Donald Trump) ತನ್ನ ದೇಶದ ಏಳಿಗೆಗಾಗಿ ವಿದೇಶಗಳಿಗೆ ತೆರಿಗೆ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಈ ಬೆನ್ನಲ್ಲೇ ಅಮೆರಿಕನ್ನು ಕುಗ್ಗಿಸಲು ಬ್ರಿಕ್ಸ್ ರಾಷ್ಟ್ರಗಳ ಒಕ್ಕೂಟ ಪ್ಲ್ಯಾನ್ ಮಾಡಿವೆ.
ಹೌದು. ಕಳೆದ ಅಕ್ಟೋಬರ್ 22 ರಿಂದ 24 ರವರೆಗೆ ರಷ್ಯಾದಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಹಲವು ದೇಶಗಳ ಮಧ್ಯೆ ಹಲವು ಒಪ್ಪಂದಗಳಿಗೆ ಮಾತುಕತೆ ನಡೆದಿತ್ತು. ಈ ಎಲ್ಲಾ ಒಪ್ಪಂದಗಳ ಮಧ್ಯೆ ಹೆಚ್ಚು ಗಮನ ಸೆಳೆದ ವಿಚಾರ ಯಾವುದು ಎಂದರೆ ʻಡಿ ಡಾಲರೈಸೇಶನ್ʼ. ಡಾಲರ್ ಅಂದರೆ ಅಮೆರಿಕದ ಕರೆನ್ಸಿ ಎಂದು ಎಲ್ಲರಿಗೂ ಗೊತ್ತಿದೆ, ಅದು ವಿಶ್ವದ ಕರೆನ್ಸಿಯೂ ಆಗಿದೆ. ವಿಶ್ವದ ಎಲ್ಲಾ ವ್ಯವಹಾರಗಳು ಡಾಲರ್‌ನಲ್ಲೇ ನಡೆಯುತ್ತಿದೆ. ಹಾಗಾಗಿ ಡಾಲರ್ ಮಾನ್ಯತೆ ತಗ್ಗಿಸುವ ಪ್ರಯತ್ನಕ್ಕೆ ಬಿಕ್ಸ್ ಒಕ್ಕೂಟ ಮುಂದಾಗಿವೆ. ಹಾಗಾಗಿ ಭಾರತ, ರಷ್ಯಾ ಮತ್ತಿತರ ಬ್ರಿಕ್ಸ್ ರಾಷ್ಟ್ರಗಳು ವ್ಯವಹಾರಗಳಲ್ಲಿ ಸ್ಥಳೀಯ ಕರೆನ್ಸಿಗಳನ್ನೇ ಬಳಸಲು ಈ ಶೃಂಗಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಷ್ಟೇ ಅಲ್ಲದೇ ಬ್ರಿಕ್ಸ್ ಕರೆನ್ಸಿಯೊಂದನ್ನು (BRICS currency) ತರಲು ಸಿದ್ಧತೆ ಕೂಡ ನಡೆದಿತ್ತು.
ಬ್ರಿಕ್ಸ್ ಒಕ್ಕೂಟ ಡಾಲರ್‌ಗೆ ಸೆಡ್ಡು ಹೊಡೆಯಲು ಯೋಜನೆ ರೂಪಿಸಿದ ಬೆನ್ನಲ್ಲೇ ಟ್ರಂಪ್ ವಿದೇಶಗಳಿಗೆ ಶೇ.100 ರಷ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಡಾಲರ್‌ಗೆ ಪ್ರತಿಯಾಗಿ ಯಾವುದೇ ಕರೆನ್ಸಿ ತರಲು ʻಬ್ರಿಕ್ಸ್ʼ ಸಿದ್ಧವಾಗಿಲ್ಲ ಎಂದು ಹೇಳಿದ್ದರು. ಟ್ರಂಪ್ ವಿದೇಶಗಳಿಗೆ ತೆರಿಗೆ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುತ್ತಿದ್ದಂತೆ ಮತ್ತೆ ʻಡಿ ಡಾಲರೈಸೇಷನ್ʼ ವಿಚಾರ ಮುನ್ನೆಲೆಗೆ ಬಂದಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ಅಮೆರಿಕವನ್ನು ಮಣಿಸಲು ಎದುರುನೋಡುತ್ತಿರುವ ಚೀನಾ ಈ ವಿಚಾರದಲ್ಲಿ ಹೆಚ್ಚು ಉತ್ಸುಕವಾಗಿದೆ. ಅದಕ್ಕಾಗಿ ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ರಷ್ಯಾ ಜೊತೆಗೂ ಮಾತುಕತೆ ನಡೆಸಿದೆ. ಭಿನ್ನಾಭಿಪ್ರಾಯಗಳನ್ನು ಸೌಹಾರ್ಧಯುತವಾಗಿ ಕೆಲಸ ಮಾಡಲು ಚೀನಾ ʻಬ್ರಿಕ್ಸ್ʼಗೆ ಕರೆ ನೀಡಿದೆ ಎಂಬುದಾಗಿ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಶನ್ಸ್ (FIEO) ನ ಮಹಾನಿರ್ದೇಶಕ ಮತ್ತು ಸಿಇಒ ಅಜಯ್ ಸಹಾಯ್ ಹೇಳಿದ್ದಾರೆ. ಅಷ್ಟಕ್ಕೂ ಇಲ್ಲಿ ಡಿ-ಡಾಲರೈಸೇಶನ್ ಬಂದಿದ್ದು ಯಾಕೆ? ಡಿ- ಡಾಲರೈಸೇಶನ್‌ನಿಂದ ಜಾಗತಿಕ ಆರ್ಥಿಕತೆಯಲ್ಲಾಗುವ ಬದಲಾವಣೆಯೇನು? ಭಾರತಕ್ಕೆ ಆಗುವ ಲಾಭ ಮತ್ತು ನಷ್ಟಗಳೇನು? ಎಂಬುದನ್ನು ತಿಳಿಯಲು ಮುಂದೆ ಓದಿ….
ಏನಿದು ಬ್ರಿಕ್ಸ್?
ಬ್ರಿಕ್ಸ್’ (BRICS) ಎಂಬುದು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕವಾದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ನಡುವಿನ ಮೈತ್ರಿಕೂಟವನ್ನು ಇದು ಪ್ರತಿನಿಧಿಸುತ್ತದೆ. ಮೊದಲ ಶೃಂಗಸಭೆಯು 2009 ರಲ್ಲಿ ರಷ್ಯಾದ ಒಕ್ಕೂಟದಲ್ಲಿ ನಡೆದಿತ್ತು. ಆಗ ಜಗತ್ತಿನಾದ್ಯಂತ 20ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಕ್ಸ್‌ನ ಸದಸ್ಯತ್ವವನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರೆ, ಇತರ 15ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್‌ನ ಭಾಗವಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು.
ಡಾಲರ್ ವಿಶ್ವದ ಕರೆನ್ಸಿಯಾಗಿದ್ದು ಹೇಗೆ?
ʻಡಿ-ಡಾಲರೈಸೇಶನ್ʼ ಬಗ್ಗೆ ತಿಳಿದುಕೊಳ್ಳುವ ಮೊದಲು ಡಾಲರ್ ವಿಶ್ವದ ಕರೆನ್ಸಿಯಾಗಿದ್ದು ಹೇಗೆ ಅಂತ ನೋಡೋಣ… ಡಾಲರ್ ವಿಶ್ವದ ಕರೆನ್ಸಿಯಾಗಿ ಹೊರ ಹೊಮ್ಮಿದ್ದು ಹೇಗೆ ಎನ್ನುವುದಕ್ಕೆ ಮೂರು ಪ್ರಮುಖ ಕಾರಣ ನೀಡಬಹುದು.
1. 2ನೇ ಮಹಾಯುದ್ಧದ ಸಮಯದಲ್ಲಿ ವಿಶ್ವದಲ್ಲೇ ಅಮೆರಿಕದಲ್ಲಿ ಚಿನ್ನ ಸಂಗ್ರಹ ಜಾಸ್ತಿ ಇತ್ತು. ಅಷ್ಟೇ ಅಲ್ಲದೇ ಆರ್ಥಿಕವಾಗಿಯೂ, ಮಿಲಿಟರಿ ಎಲ್ಲಾ ಕ್ಷೇತ್ರದಲ್ಲಿ ಅಮೆರಿಕ ಪವರ್‌ಫುಲ್ ದೇಶವಾಗಿ ಹೊರಹೊಮ್ಮಿತ್ತು. ಈ ಕಾರಣಕ್ಕೆ 1944 ರಲ್ಲಿ Bretton Woods ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ಡಾಲರ್‌ನಲ್ಲೇ ವ್ಯವಹಾರ ನಡೆಸಲು ಅಮೆರಿಕದ ಮಿತ್ರ ಪಡೆಗಳು ಒಪ್ಪಿಕೊಂಡಿದ್ದವು.
2. ಎರಡನೇ ಕಾರಣ ಕಚ್ಚಾ ತೈಲದ ಜೊತೆಗಿನ ಡಾಲರ್ ಒಪ್ಪಂದ. 2ನೇ ಮಹಾಯುದ್ಧದ ಬಳಿಕ ತನ್ನಲ್ಲಿರುವ ತೈಲ ಬಾವಿಗಳ ಮೇಲೆ ಬಾಂಬ್ ದಾಳಿಯಾಗಬಹುದು ಎಂಬ ಹೆದರಿಕೆ ಸೌದಿ ಅರೇಬಿಯಾಗಿ ಆಯ್ತು. ಈ ವೇಳೆ ಸೌದಿ ಸಹಾಯಕ್ಕೆ ಅಮೆರಿಕ ಬಂತು. ನಿಮ್ಮ ಎಲ್ಲಾ ಕಚ್ಚಾ ತೈಲ ಘಟಕಗಳಿಗೆ ನಾವು ರಕ್ಷಣೆ ನೀಡುತ್ತೇವೆ, ಆದರೆ ವ್ಯವಹಾರವನ್ನು ಡಾಲರ್‌ನಲ್ಲೇ ಮಾಡಬೇಕು ಎಂದು ಷರತ್ತು ವಿಧಿಸಿತು. ಈ ಷರತ್ತಿಗೆ ಸೌದಿ ಒಪ್ಪಿ 1974ರಲ್ಲಿ ಸಹಿ ಹಾಕಿತು. ಇದರ ಪರಿಣಾಮ ಈಗಲೂ ಕಚ್ಚಾ ತೈಲ ವ್ಯವಹಾರ ಡಾಲರ್‌ನಲ್ಲೇ ನಡೆಯುತ್ತಿದೆ.
3. ಮೂರನೇ ಕಾರಣ ಸ್ವಿಫ್ಟ್ ಬ್ಯಾಂಕ್ ನೆಟ್‌ವರ್ಕ್. Bretton Woods ಒಪ್ಪಂದವನ್ನು ಅಮೆರಿಕ ರದ್ದುಗೊಳಿಸಿದ ನಂತರ 1973ರಲ್ಲಿ ಬೆಲ್ಜಿಯಂನಲ್ಲಿ Society for Worldwide Interbank Financial Telecommunications ಅಥವಾ SWIFT ಜನ್ಮ ತಾಳಿತು. ಇದು ಅಂತಾರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‌ನಲ್ಲಿದೆ.
ಇಲ್ಲೂ ಡಾಲರನ್ನೇ ಯಾಕೆ ಪರಿಗಣಿಸಿಲಾಯಿತು ಎನ್ನುವುದಕ್ಕೂ ಕಾರಣವಿದೆ. ಈ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ಭವಿಷ್ಯದಲ್ಲಿ ಯುರೋಪ್ ದೇಶಗಳ ಮೇಲೆ ಯಾರೇ ಆಕ್ರಮಣ ಮಾಡಿದರೂ ನಾನು ರಕ್ಷಣೆ ನೀಡುತ್ತೇನೆ ಎಂದು ಅಮೆರಿಕ ಭರವಸೆ ನೀಡಿತ್ತು. ಈ ಕಾರಣಕ್ಕೆ ಯುರೋಪ್ ರಾಷ್ಟ್ರಗಳು ಸ್ವಿಫ್ಟ್ ನೀತಿಯನ್ನು ಒಪ್ಪಿಕೊಂಡವು. ಈ ಎಲ್ಲಾ ಕಾರಣದಿಂದ ಏನೂ ಮಾಡದೇ ರಾಜತಾಂತ್ರಿಕ ಪ್ರಭಾವ ಬಳಸಿ ಮೀಸಲು ನಿಧಿಯಿಂದಾಗಿ ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿತ್ತು.
ಡಿ-ಡಾಲರೈಸೇಶನ್ ಬಂದಿದ್ದು ಯಾಕೆ?
ಡಿ-ಡಾಲರೈಸೇಶನ್ ಬಂದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ʻರಷ್ಯಾ-ಉಕ್ರೇನ್ ಯುದ್ಧʼ. ಉಕ್ರೇನ್ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಮತ್ತು ಯುರೋಪ್ ರಷ್ಯಾವನ್ನು ಸ್ವಿಫ್ಟ್ ಬ್ಯಾಂಕ್ ನೆಟ್‌ವರ್ಕ್‌ನಿಂದ ಹೊರಗಿಟ್ಟಿತು. ಅಮೆರಿಕ ರಷ್ಯಾದ ಡಾಲರ್ ಖಾತೆಯನ್ನು ಫ್ರೀಜ್ ಮಾಡಿತು. ಪರಿಣಾಮ ರಷ್ಯಾಗೆ ಡಾಲರ್‌ನಲ್ಲಿ ಆಮದು ಮತ್ತು ರಫ್ತು ಮಾಡಲು ಸಾಧ್ಯವಾಗಲಿಲ್ಲ. ದಿಢೀರ್ ನೀಡಿದ ಶಾಕ್‌ನಿಂದ ರಷ್ಯಾಗೆ ಬಹಳ ಸಮಸ್ಯೆಯಾಯಿತು. ಯಾವಾಗ ರಷ್ಯಾವನ್ನು ಸ್ವಿಫ್ಟ್ ಬ್ಯಾಂಕ್‌ನಿಂದ ಹೊರಗಡೆ ಇಡಲಾಯಿತೋ ಆವಾಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮದೇ ಕರೆನ್ಸಿಯಲ್ಲಿ ವ್ಯವಹಾರ ನಡೆಸಲು ಆಸಕ್ತಿ ತೋರಿಸಿದವು. ಯಾಕೆಂದರೆ ಮುಂದೊಮ್ಮೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ವಿರೋಧ ಕಟ್ಟಿಕೊಂಡರೆ ನಮ್ಮ ರಾಷ್ಟ್ರವನ್ನು ಸ್ವಿಫ್ಟ್ ಬ್ಯಾಂಕ್ ನೆಟ್‌ವರ್ಕ್‌ನಿಂದ ಹೊರಗಡೆ ಇಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಈ ಕಾರಣಕ್ಕೆ ಈಗ ಬ್ರಿಕ್ಸ್ ಕರೆನ್ಸಿ ತರಲು ಮಾತುಕತೆ ನಡೆಸುತ್ತಿದೆ.
ಬ್ರಿಕ್ಸ್ ಕರೆನ್ಸಿ ಹೇಗಿರುತ್ತೆ?
ಬ್ರಿಕ್ಸ್ ಕರೆನ್ಸಿಯ ಪ್ರಸ್ತಾಪವನ್ನು 2022ರ ಶೃಂಗಸಭೆಯಲ್ಲಿ ರಷ್ಯಾ ಮೊದಲು ಪ್ರಸ್ತಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಾಲರ್ ಯಾಕೆ ವಿಶ್ವದ ಕರೆನ್ಸಿಯಾಗಬೇಕು ಎಂಬ ವಿಚಾರಗಳು ಚರ್ಚೆಗೆ ಬಂತು. ನಂತರ ಭಾರತ ರಷ್ಯಾ, ಚೀನಾ, ಬ್ರೆಜಿಲ್‌ಗಳು ರಷ್ಯಾದ ಜೊತೆ ಸ್ಥಳೀಯ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತಿದೆ. ಇತ್ತೀಚೆಗೆ ಕಾಜಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬ್ರಿಕ್ಸ್ ನೋಟ್ ಹಿಡಿದುಕೊಂಡಿದ್ದರು. ಈ ನೋಟು ದೊಡ್ಡ ಸುದ್ದಿಯಾಗುತ್ತಿದ್ದಂತೆ ಬ್ರಿಕ್ಸ್ ಕರೆನ್ಸಿಯ ಬಗ್ಗೆ ಚರ್ಚೆ ಹೆಚ್ಚಾಯಿತು. ಆ ಬಳಿಕ ಕಳವಳಗೊಂಡಿದ್ದ ಟ್ರಂಪ್ ಅಧಿಕಾರ ಸ್ವೀಕಾರಕ್ಕೂ ಮೊದಲೇ 100% ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿದ್ದರು.
ಈಗ ಚರ್ಚೆ ಆಗುತ್ತಿರುವ ಬ್ರಿಕ್ಸ್ ಕರೆನ್ಸಿ ಡಿಜಿಟಲ್ ಕರೆನ್ಸಿ ಆಗಿದ್ದು ಬ್ಲಾಕ್‌ಚೈನ್ ಆಧಾರಿತ ಪಾವತಿ ವ್ಯವಸ್ಥೆ ಇರಲಿದೆ ಎಂದು ವರದಿಯಾಗಿದೆ. ಸದ್ಯ ಈಗ ಇಂಟರ್‌ನ್ಯಾಷನ್ ಹಣಕಾಸಿನ ಗೇಟ್‌ವೇ ಯಾವುದು ಅಂದರೆ ಸಿಫ್ಟ್ ಬ್ಯಾಂಕಿಂಗ್ ನೆಟ್‌ವರ್ಕ್. ಇದೇ ರೀತಿಯ ನೆಟ್‌ವರ್ಕ್ ಒಂದನ್ನು ಸ್ಥಾಪಿಸಲು ಬ್ರಿಕ್ಸ್ ರಾಷ್ಟ್ರಗಳು ಮುಂದಾಗುತ್ತಿವೆ. ಸದ್ಯಕ್ಕೆ ಈ ಬ್ರಿಕ್ಸ್ ಕರೆನ್ಸಿ ಮಾತುಕತೆಯ ಹಂತದಲ್ಲಿದೆ ಅಷ್ಟೇ. ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ನಂತರ ಚೀನಾ ಈ ವಿಚಾರದಲ್ಲಿ ಹೆಚ್ಚು ಉತ್ಸುಕವಾಗಿದೆ.
ಸದ್ಯ ಒಂದೊಂದು ದೇಶಗಳಲ್ಲಿ ಒಂದೊಂದು ಕರೆನ್ಸಿ ಇದೆ. ಬ್ರೆಜಿಲ್‌ನಲ್ಲಿ ʻರಿಯಾಲ್ʼ, ರಷ್ಯಾದಲ್ಲಿ ʻರುಬೆಲ್ʼ, ಭಾರತದಲ್ಲಿ ʻರೂಪಾಯಿʼ, ಚೀನಾದಲ್ಲಿ ʻಯುವಾನ್ʼ, ದಕ್ಷಿಣ ಆಫ್ರಿಕಾದಲ್ಲಿ ʻರಾಂಡ್ʼ ಇದೆ. ಒಂದೊಂದು ದೇಶದಲ್ಲಿ ಒಂದೊಂದು ಕರೆನ್ಸಿ ಇರುವ ಕಾರಣ ಎಲ್ಲ ದೇಶಗಳಿಗೆ ಒಂದು ದೇಶದ ಕರೆನ್ಸಿಯನ್ನು ಅಪ್ಲೈ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಹೊಸ ಕರೆನ್ಸಿ ಬರಬೇಕು. ಇದಕ್ಕಾಗಿ ʻಬ್ರಿಕ್ಸ್ʼ ಮುಂದಾಗಿದೆ. ಆದ್ರೆ ಬ್ರಿಕ್ಸ್ ಕರೆನ್ಸಿ ಹೇಗಿರಲಿದೆ ಅನ್ನೋದು ಇಲ್ಲಿಯವರೆಗೆ ಅಧಿಕೃತವಾಗಿ ತಿಳಿದುಬಂದಿಲ್ಲ.
ಭಾರತಕ್ಕೆ ಏನು ಲಾಭ?
ಸದ್ಯ ಈಗ ವಿಶ್ವದಲ್ಲಿ ಎಲ್ಲಿಯಾದರೂ ಯುದ್ಧ, ಅಮೆರಿಕದ ಫೆಡರಲ್ ರಿಸರ್ವ್ ಕೈಗೊಳ್ಳುವ ನಿರ್ಧಾರದಿಂದ ಡಾಲರ್ ಮೌಲ್ಯ ಏರಿಳಿತವಾಗುತ್ತದೆ. ಡಾಲರ್ ಮೌಲ್ಯ ಏರಿಕೆಯಾದರೆ ಭಾರತ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ. ಇದರ ನೇರ ಪರಿಣಾಮ ಗ್ರಾಹಕರಿಗೆ ತಟ್ಟುತ್ತದೆ. ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಭಾರತ ಸದ್ಯ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಸ್ತು ಯಾವುದು ಎಂದರೆ ಕಚ್ಚಾ ತೈಲ. ಕಚ್ಚಾ ತೈಲವನ್ನು ಪೂರೈಸುವ 3 ದೊಡ್ಡ ರಾಷ್ಟ್ರಗಳಾದ ರಷ್ಯಾ, ಯುಎಇ, ಇರಾನ್ ಬ್ರಿಕ್ಸ್ ಸದಸ್ಯ ದೇಶಗಳಾಗಿವೆ. ಹೀಗಾಗಿ ಡಾಲರ್ ಬದಲು ಬ್ರಿಕ್ಸ್ ಕರೆನ್ಸಿಯಲ್ಲಿ ವ್ಯವಹಾರ ನಡೆಸಿದರೆ ಅಗ್ಗದಲ್ಲಿ ತೈಲ ಸಿಗಲಿದೆ.
ಅಮೆರಿಕ, ಪಾಶ್ಚಿಮಾತ್ಯ ದೇಶಗಳಿಗೆ ಬೀಳುತ್ತಾ ಗುದ್ದು?
2ನೇ ಮಹಾಯುದ್ಧದ ನಂತರ ಯುಎಸ್‌ಎಸ್‌ಆರ್ ಮತ್ತು ಯುಎಸ್‌ಎ ಮಧ್ಯೆ ಶೀತಲ ಸಮರ ಆರಂಭವಾಯಿತು. ಈ ನಡುವೆ ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿಯಾದವು. ಇದೆಲ್ಲದರ ಪರಿಣಾಮ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಏಷ್ಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಮೇಲೆ ತಮ್ಮ ಪ್ರಭಾವ ಬೀರಲು ಆರಂಭಿಸಿದವು. ಅವರಿಗೆ ಏನಾದರೂ ಸಮಸ್ಯೆಯಾದರೆ ಅದು ಜಾಗತಿಕ ಸಮಸ್ಯೆ ಆಗುತ್ತದೆ. ಅದೇ ಬೇರೆ ದೇಶಗಳಲ್ಲಿ ಯಾವುದಾದರೂ ಸಮಸ್ಯೆಯಾದರೆ ಅದು ಸಮಸ್ಯೆ ಅಲ್ಲ ಎಂದು ಭಾವಿಸುತ್ತದೆ. ಬಹುತೇಕ ಸಂದರ್ಭದಲ್ಲಿ ಅಮೆರಿಕದ ಹೇಳಿದ ಮಾತುಗಳೇ ಫೈನಲ್ ಆಗುತ್ತವೆ. ಬೇರೆ ದೇಶಗಳು ತಿರುಗಿ ಬಿದ್ದರೆ ಅವುಗಳ ಮೇಲೆ ನಿರ್ಬಂಧ ಹೇರುತ್ತವೆ. ಇಲ್ಲಿಯವರೆಗೆ ಈ ರೀತಿ ಮಾಡಿಯೇ ಬೆದರಿಸುತ್ತಿದ್ದವು. ಆದರೆ ಇನ್ನು ಮುಂದೆ ಈ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಬ್ರಿಕ್ಸ್ ದೇಶಗಳು ಸಂದೇಶ ಸಾರಿವೆ.
ಸದ್ಯ ಹೊಸ ಕರೆನ್ಸಿ ವಿಚಾರದಲ್ಲಿ ಈಗಾಗಲೇ ರಷ್ಯಾ, ಬ್ರೆಜಿಲ್, ದಕ್ಷಿಣಾ ಆಫ್ರಿಕಾದ ಒಪ್ಪಿಗೆ ಸೂಚಿಸಿದ್ದು, ಭಾರತದ ನಿಲುವಿಗಾಗಿ ಚೀನಾ ಕಾಯುತ್ತಿದೆ. ಒಟ್ಟಿನಲ್ಲಿ ಬ್ರಿಕ್ಸ್ ಒಕ್ಕೂಟ ಮತ್ತಷ್ಟು ಬಲಗೊಂಡರೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯಕ್ಕೆ ಪೆಟ್ಟು ಬೀಳುವುದು ನಿಶ್ಚಿತ.
ನವದೆಹಲಿ: ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಶಮನಗೊಳಿಸಲು ಭಾರತ – ಚೀನಾ (India – China) ಒಪ್ಪಂದಕ್ಕೆ ಬಂದ ಬೆನ್ನಲ್ಲೇ ಉಭಯ ದೇಶಗಳಿಂದ ಸೇನಾ ವಾಪಸಾತಿ ಪ್ರಕ್ರಿಯೆ ಶುರುವಾಗಿದೆ.
ಹೌದು. ಕಳೆದ 4 ವರ್ಷಗಳಿಂದ ಇದ್ದ ಗಡಿ ಉದ್ವಿಗ್ನತೆಗೆ ಕೊನೆ ಹಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಒಪ್ಪಂದದ ಭಾಗವಾಗಿ ಪೂರ್ವ ಲಡಾಖ್ ಪ್ರಾಂತ್ಯದ ಗಡಿಗಳಿಂದ ಭಾರತ, ಚೀನಾ ಪಡೆಗಳ ವಾಪಸಾತಿ ಪ್ರಕ್ರಿಯೆ ಶುರುವಾಗಿದೆ. ಪೂರ್ವ ಲಡಾಖ್‌ನ ಎರಡು ಪ್ರಮುಖ ಪ್ರದೇಶಗಳಾದ ಡೆಮ್‌ಚಾಕ್- ಡೆಪ್‌ಸಾಂಗ್‌ನಿಂದ ಎರಡೂ ದೇಶಗಳ ಸೈನಿಕರು ವಾಪಸ್ ಆಗ್ತಿದ್ದಾರೆ.
ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (LAC) ಪರಿಸ್ಥಿತಿಯು 2020ರ ಏಪ್ರಿಲ್‌ನಲ್ಲಿ ಇದ್ದ ಪೂರ್ವಸ್ಥಿತಿಗೆ ಮರಳಿದ ಬಳಿಕವಷ್ಟೇ ಅಲ್ಲಿಂದ ಭಾರತೀಯ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಕೆಲ ದಿನಗಳ ಹಿಂದಷ್ಟೇ ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದರು. ಶುಕ್ರವಾರ ಇದಕ್ಕೆ ಚಾಲನೆ ದೊರೆತಿದೆ. ಇದನ್ನೂ ಓದಿ: ಯುದ್ಧಕ್ಕೆ ನಮ್ಮ ಬೆಂಬಲ ಇಲ್ಲ: BRICS ಶೃಂಗಸಭೆಯಲ್ಲಿ ಮೋದಿ ಸ್ಪಷ್ಟನೆ
ಮ್ಚೊಕ್ ಪ್ರದೇಶದಲ್ಲಿ ಭಾರತ – ಚೀನಾ ಸೇನೆಯ ತಲಾ ಐದು ಟೆಂಟ್‌ಗಳನ್ನು ಹಾಗೂ ದೆಸ್ಪಾಂಗ್ ಪಾಯಿಂಟ್‌ನಲ್ಲಿ ನಿರ್ಮಿಸಲಾಗಿದ್ದ 10 – 12 ತಾತ್ಕಾಲಿಕ ಶಿಬಿರಗಳನ್ನು ಹಿಂಪಡೆಯಲಾಗುತ್ತಿದೆ. ಎರಡೂ ಕಡೆ ಪೂರ್ಣ ಪ್ರಮಾಣದಲ್ಲಿ ವಾಪಸಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆಯೇ ಎಂಬುದನ್ನು ಜಂಟಿ ವೈಮಾನಿಕ ಸಮೀಕ್ಷೆ ಮೂಲಕ ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಇದಾದ ಮುಂದಿನ 4-5 ದಿನಗಳಲ್ಲಿ ಗಸ್ತು ಶುರುವಾಗಲಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಸಂಘರ್ಷಗಳಿಗೆ ಶಾಂತಿಯುತ ಪರಿಹಾರಕ್ಕೆ ನಾವಿದ್ದೇವೆ: ಯುದ್ಧ ಕುರಿತು ಪುಟಿನ್ ಜೊತೆ ಮೋದಿ ಮಾತು
5 ವರ್ಷಗಳ ಬಳಿಕ ಮೋದಿ-ಜಿನ್‌ಪಿಂಗ್ ಮುಖಾಮುಖಿ:
2020ರಲ್ಲಿ ನಡೆದ ಗಲ್ವಾನ್ ಘರ್ಷಣೆಯ ಬಳಿಕ ಭಾರತ ಹಾಗೂ ಚೀನಾ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ 4 ವರ್ಷಗಳಿಂದ ಭಾರತ ಮತ್ತು ಚೀನಾ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ. ಶಾಂತಿ ನೆಲೆಸದಿದ್ದರೆ ಚೀನಾ ಜೊತೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು. ಅಕ್ಟೋಬರ್ 2019 ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಕ್ಷಿ ಜಿನ್‌ಪಿಂಗ್ ನಡುವೆ ಕೊನೆಯ ಬಾರಿ ಔಪಚಾರಿಕ ಸಭೆ ನಡೆದಿತ್ತು.
ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಜಿನ್‍ಪಿಂಗ್ ಅವರನ್ನು ತಮಿಳುನಾಡಿನ ಸರ್ಕಾರವು ಅದ್ಧೂರಿಯಾಗಿ ಸ್ವಾಗತಿಸಿತ್ತು. ತಮಿಳುನಾಡಿನ ಸಾಂಪ್ರದಾಯಿಕ ಧಿರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟಿದ್ದರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದ್ದರು.
ಮೋದಿ ಮತ್ತು ಜಿನ್‍ಪಿಂಗ್ ಸಮುದ್ರ ತೀರದಲ್ಲಿ ವಿಹರಿಸಿದ್ದರು. ಕೋವಲಂನ ಕೋವ್ ಹೋಟೆಲ್‍ನಲ್ಲಿ ಇರಿಸಲಾಗಿದ್ದ ಕಲಾಕೃತಿಗಳು ಮತ್ತು ಕೈಮಗ್ಗ ಪ್ರದರ್ಶನವನ್ನು ವೀಕ್ಷಿಸಿದ್ದರು. ಈ ವೇಳೆ ಕೈಯಿಂದ ನೇಯ್ದ ಕ್ಸಿ ಜಿಂಗ್‍ಪಿಂಗ್ ಭಾವಚಿತ್ರವನ್ನು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ನೀಡಿದ್ದರು.
ಮಾಸ್ಕೋ: ರಷ್ಯಾದ ಬ್ರಿಕ್ಸ್ ಶೃಂಗಸಭೆ ಇಡೀ ಜಗತ್ತಿನ ಗಮನ ಸೆಳೆದಿದೆ. 5 ವರ್ಷಗಳ ಬಳಿಕ ಭಾರತ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ನಡುವೆ ದ್ವಿಪಕ್ಷೀಯ ಮಾತುಕತೆ ನಡಿದಿದೆ.
ಪೂರ್ವ ಲಡಾಖ್‌ನ ಗಡಿ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಎರಡೂ ದೇಶಗಳ ಸೇನೆ ಗಸ್ತು ತಿರುಗುವ ಒಪ್ಪಂದವನ್ನು ಉಭಯ ನಾಯಕರು ಸ್ವಾಗತಿಸಿದ್ದಾರೆ. ಅಲ್ಲದೇ ದ್ವಿಪಕ್ಷೀಯ ಸಭೆಯಲ್ಲಿ, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಡಿ ಸಂಬಂಧಿತ ವಿಷಯಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತಹ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೇ ಇರುವ ಅಗತ್ಯವನ್ನು ಮೋದಿ ಒತ್ತಿ ಹೇಳಿದ್ದಾರೆ. ಭಾರತ-ಚೀನಾ ಗಡಿ (India-China Border) ಸಮಸ್ಯೆಗೆ ಸಂಬಂಧಿಸಿದಂತೆ ವಿಶೇಷ ಪ್ರತಿನಿಧಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬ ಅಂಶವನ್ನು ಉಭಯ ನಾಯಕರು ಪ್ರಸ್ತಾಪಿಸಿದ್ದಾರೆ.
ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ನಾವು 5 ವರ್ಷಗಳ ನಂತರ ಔಪಚಾರಿಕ ಸಭೆ ನಡೆಸುತ್ತಿದ್ದೇವೆ. ಭಾರತ-ಚೀನಾ ಬಾಂಧವ್ಯವು ನಮ್ಮ ಜನರಿಗೆ ಮಾತ್ರವಲ್ಲದೇ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ಬಹಳ ಮುಖ್ಯವಾಗಿದೆ ಎಂದು ನಂಬುತ್ತೇವೆ. ಅದೇ ರೀತಿ ಗಡಿಯಲ್ಲಿ ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಸಂವೇದನಾಶೀಲತೆ ನಮ್ಮ ಆದ್ಯತೆಯಾಗಿ ಉಳಿಯಬೇಕು ಎಂದು ಕರೆ ನೀಡಿದ್ದಾರೆ.
5 ವರ್ಷಗಳ ಬಳಿಕ ಮುಖಾಮುಖಿ:
2020ರಲ್ಲಿ ನಡೆದ ಗಲ್ವಾನ್ ಘರ್ಷಣೆಯ ಬಳಿಕ ಭಾರತ ಹಾಗೂ ಚೀನಾ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ 4 ವರ್ಷಗಳಿಂದ ಭಾರತ ಮತ್ತು ಚೀನಾ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ. ಶಾಂತಿ ನೆಲೆಸದಿದ್ದರೆ ಚೀನಾ ಜೊತೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.
ಅಕ್ಟೋಬರ್ 2019 ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಕ್ಷಿ ಜಿನ್‌ಪಿಂಗ್ ನಡುವೆ ಕೊನೆಯ ಬಾರಿ ಔಪಚಾರಿಕ ಸಭೆ ನಡೆದಿತ್ತು. ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಜಿನ್‍ಪಿಂಗ್ ಅವರನ್ನು ತಮಿಳುನಾಡಿನ ಸರ್ಕಾರವು ಅದ್ಧೂರಿಯಾಗಿ ಸ್ವಾಗತಿಸಿತ್ತು. ತಮಿಳುನಾಡಿನ ಸಾಂಪ್ರದಾಯಿಕ ಧಿರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟಿದ್ದರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದ್ದರು.
ಮೋದಿ ಮತ್ತು ಜಿನ್‍ಪಿಂಗ್ ಸಮುದ್ರ ತೀರದಲ್ಲಿ ವಿಹರಿಸಿದ್ದರು. ಕೋವಲಂನ ಕೋವ್ ಹೋಟೆಲ್‍ನಲ್ಲಿ ಇರಿಸಲಾಗಿದ್ದ ಕಲಾಕೃತಿಗಳು ಮತ್ತು ಕೈಮಗ್ಗ ಪ್ರದರ್ಶನವನ್ನು ವೀಕ್ಷಿಸಿದ್ದರು. ಈ ವೇಳೆ ಕೈಯಿಂದ ನೇಯ್ದ ಕ್ಸಿ ಜಿಂಗ್‍ಪಿಂಗ್ ಭಾವಚಿತ್ರವನ್ನು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ನೀಡಿದ್ದರು.
ಮಾಸ್ಕೋ: ಸುಮಾರು 5 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ (Xi Jinping) ಮಧ್ಯೆ ದ್ವಿಪಕ್ಷೀಯ ಸಭೆ ನಡೆಯಲಿದೆ.
ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯ ಭಾಗವಾಗಿ ಇಬ್ಬರು ನಾಯಕರ ಮಧ್ಯೆ ಮಹತ್ವದ ಮಾತುಕತೆ ನಡೆಯಲಿದೆ. ಐದು ವರ್ಷಗಳ ಬಳಿಕ ಉಭಯ ನಾಯಕರ ನಡುವಿನ ಮೊದಲ ಔಪಚಾರಿಕ ಭೇಟಿ ಇದಾಗಿದೆ.
ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಭಾರತ ಮತ್ತು ಚೀನಾ ಮಧ್ಯೆ ಸಭೆ ನಡೆಯಲಿದೆ ಎಂದು ತಿಳಿಸಿದರು.
#WATCH | Kazan, Russia: “I can confirm that there will be a bilateral meeting held between Prime Minister Modi and Chinese President Xi Jinping tomorrow on the sidelines of the BRICS Summit.” says Foreign Secretary Vikram Misri pic.twitter.com/588eOWgQJ4
2020 ರಲ್ಲಿ ನಡೆದ ಗಲ್ವಾನ್ ಘರ್ಷಣೆಯ ಬಳಿಕ ಭಾರತ ಹಾಗೂ ಚೀನಾ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ 4 ವರ್ಷಗಳಿಂದ ಭಾರತ ಮತ್ತು ಚೀನಾ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ. ಶಾಂತಿ ನೆಲೆಸದಿದ್ದರೆ ಚೀನಾ ಜೊತೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.
ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಗಸ್ತು ತಿರುಗುವ ಕುರಿತು ಭಾರತ ಮತ್ತು ಚೀನಾದ ಸಂಧಾನಕಾರರು ಒಪ್ಪಂದಕ್ಕೆ ಬಂದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸೋಮವಾರ ತಿಳಿಸಿದ್ದರು. ಇದನ್ನೂ ಓದಿ: THAAD ಎಂದರೇನು? ಇಸ್ರೇಲ್‌ಗೆ ಅಮೆರಿಕ ಇದನ್ನೂ ಏಕೆ ಕಳುಹಿಸಿದೆ?
ಅಕ್ಟೋಬರ್ 2019 ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಕ್ಷಿ ಜಿನ್‌ಪಿಂಗ್ ನಡುವೆ ಕೊನೆಯ ಬಾರಿ ಔಪಚಾರಿಕ ಸಭೆ ನಡೆದಿತ್ತು. ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಜಿನ್‍ಪಿಂಗ್ ಅವರನ್ನು ತಮಿಳುನಾಡಿನ ಸರ್ಕಾರವು ಅದ್ಧೂರಿಯಾಗಿ ಸ್ವಾಗತಿಸಿತ್ತು. ತಮಿಳುನಾಡಿನ ಸಾಂಪ್ರದಾಯಿಕ ಧಿರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟಿದ್ದರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದ್ದರು. ಇದನ್ನೂ ಓದಿ: ಸಂಘರ್ಷಗಳಿಗೆ ಶಾಂತಿಯುತ ಪರಿಹಾರಕ್ಕೆ ನಾವಿದ್ದೇವೆ: ಯುದ್ಧ ಕುರಿತು ಪುಟಿನ್ ಜೊತೆ ಮೋದಿ ಮಾತು
ಮೋದಿ ಮತ್ತು ಜಿನ್‍ಪಿಂಗ್ ಸಮುದ್ರ ತೀರದಲ್ಲಿ ವಿಹರಿಸಿದ್ದರು. ಕೋವಲಂನ ಕೋವ್ ಹೋಟೆಲ್‍ನಲ್ಲಿ ಇರಿಸಲಾಗಿದ್ದ ಕಲಾಕೃತಿಗಳು ಮತ್ತು ಕೈಮಗ್ಗ ಪ್ರದರ್ಶನವನ್ನು ವೀಕ್ಷಿಸಿದ್ದರು. ಈ ವೇಳೆ ಕೈಯಿಂದ ನೇಯ್ದ ಕ್ಸಿ ಜಿಂಗ್‍ಪಿಂಗ್ ಭಾವಚಿತ್ರವನ್ನು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ನೀಡಿದ್ದರು.
ಜೋಹಾನ್ಸ್ ಬರ್ಗ್: ಬ್ರಿಕ್ಸ್ (BRICS) ಸದಸ್ಯರ ವಿಸ್ತರಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ ಎಂದು ಪ್ರಧಾನಿ ನರೇಂದ್ರ (Narendra Modi) ಹೇಳಿದ್ದಾರೆ. ಜೋಹಾನ್ಸ್ ಬರ್ಗ್‍ನಲ್ಲಿ (Johannesburg) ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಆರು ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಯನ್ನು ಘೋಷಿಸಿದ ಬಳಿಕ ಮಾತನಾಡಿದ ಅವರು, ಬ್ರಿಕ್ಸ್ ನ ಸದಸ್ಯರ ವಿಸ್ತರಣೆಯನ್ನು ಬೆಂಬಲಿಸಿದರು.
ಕಳೆದ 3 ದಿನಗಳ ಕಾಲ ಬ್ರಿಕ್ಸ್ ಸಭೆಯಲ್ಲಿ ಬಹಳಷ್ಟು ಸಕಾರಾತ್ಮಕ ಫಲಿತಾಂಶಗಳು ಹೊರಬಂದಿದ್ದು, ಇದು ಖುಷಿಯ ಸಂಗತಿಯಾಗಿದೆ. ನಮ್ಮ ಮಾರ್ಗದರ್ಶಿ ಸೂತ್ರಗಳು, ಮಾನದಂಡಗಳು ಮತ್ತು ಕಾರ್ಯವಿಧಾನಗಳನ್ನು ಇತರೆ ಆರು ದೇಶಗಳು ಒಪ್ಪಿಕೊಂಡು ನಮ್ಮ ಭಾಗವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.
ಇನ್ನು ಶೃಂಗಸಭೆಯಲ್ಲಿ ಚಂದ್ರಯಾನ-3 ಯಶಸ್ಸಿನ ಬಗ್ಗೆ ಮಾತನಾಡಿ, ಭಾರತದ ಚಂದ್ರಯಾನ-3 (Chandrayaan-3) ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಇದು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ವೈಜ್ಞಾನಿಕ ಸಮುದಾಯಕ್ಕೂ ದೊಡ್ಡ ಸಾಧನೆಯಾಗಿದೆ. ಈ ಸಾಧನೆಯನ್ನು ಎಲ್ಲಾ ಮಾನವೀಯತೆಯ ಸಾಧನೆ ಎಂದು ಒಪ್ಪಿಕೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಭಾರತ ಮತ್ತು ಅದರ ಜನರು ಹಾಗೂ ನಮ್ಮ ವಿಜ್ಞಾನಿಗಳ ಪರವಾಗಿ ವಿಶ್ವದ ವೈಜ್ಞಾನಿಕ ಸಮುದಾಯಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಟೆಕ್ಕಿಗಳಿಗೆ ಮತ್ತೆ ನಿರಾಸೆ – ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸಂಚಾರ ವಿಳಂಬ
ಬ್ರಿಕ್ಸ್ ನ ಪೂರ್ಣ ಸದಸ್ಯರಾಗಲು ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಆಹ್ವಾನಿಸಲು ನಾವು ಒಪ್ಪಂದಕ್ಕೆ ಬಂದಿದ್ದೇವೆ. ಸದಸ್ಯತ್ವವು ಜನವರಿ 2024 ರಿಂದ ಜಾರಿಗೆ ಬರಲಿದೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಮೋದಿ ಭಾಷಣಕ್ಕೂ ಮುನ್ನ ಹೇಳಿದರು.
ಒಸಾಕಾ: ಭಯೋತ್ಪಾದನೆ ಮಾನವೀಯತೆಗೆ ಅತಿದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆ ಅಮಾಯಕರನ್ನು ಹತ್ಯೆ ಮಾಡುವುದಷ್ಟೇ ಅಲ್ಲದೇ ಸಾಮಾಜಿಕ ಸ್ಥಿರತೆ ಮತ್ತು ಆರ್ಥಿಕ ಅಭಿವೃದ್ಧಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜಪಾನ್‍ನ ಒಸಾಕಾದಲ್ಲಿ ನಡೆದ ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ಮೋದಿ, ಇಂದು ಬ್ರಿಕ್ಸ್ ದೇಶಗಳ ಮುಖಂಡರ ಜತೆ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಮತ್ತು ವರ್ಣಭೇದ ನೀತಿಗೆ ಬೆಂಬಲಿಸುವ ಎಲ್ಲ ಶಕ್ತಿಗಳನ್ನು ನಿಯಂತ್ರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಸಂಪನ್ಮೂಲಗಳ ಕೊರತೆಯಿದೆ ಮೂಲಭೂತ ಸೌಕರ್ಯಗಳಲ್ಲಿ ಹೂಡಿಕೆಗೆ ಬಹುತೇಕ 1.3 ಟ್ರಿಲಿಯನ್ ಡಾಲರ್‍ಗಳ (1,30,000 ಕೋಟಿ) ಕೊರತೆಯಾಗಿದೆ. ಅಭಿವೃದ್ಧಿಯನ್ನು ಸುಸ್ಥಿರಗೊಳಿಸಿ ಎಲ್ಲರನ್ನೂ ಒಳಗೊಳ್ಳಿಸುವುದು ಮತ್ತೊಂದು ಸವಾಲು. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳಾದ ಡಿಜಿಟಲೀಕರಣ ಮತ್ತು ಹವಾಮಾನ ಬದಲಾವಣೆಯಿಂದ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಇಂದು ಮಾರಕ ಎಂದು ಮೋದಿ ಹೇಳಿದರು.
ವಿಶ್ವ ವಾಣಿಜ್ಯ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ, ರಕ್ಷಣಾತ್ಮಕ ಧೋರಣೆ ವಿರುದ್ಧ ಹೋರಾಡುವ, ಇಂಧನ ಭದ್ರತೆ ಖಾತ್ರಿಪಡಿಸುವ ಮತ್ತು ಭಯೋತ್ಪಾದನೆ ವಿರುದ್ಧ ಒಗ್ಗೂಡಿ ಹೋರಾಡುವ ಅಗತ್ಯವಿದೆ. ಇಂದು ನಮ್ಮ ಮುಂದಿರುವ ಮೂರು ಪ್ರಮುಖ ಸವಾಲುಗಳ ಬಗ್ಗೆ ನಾನು ಗಮನಹರಿಸುತ್ತೇನೆ. ಮೊದಲನೆಯದಾಗಿ ಜಾಗತಿಕ ಆರ್ಥಿಕತೆಯ ಅಸ್ಥಿರತೆ ಮತ್ತು ಅವನತಿ. ನಿಯಮಗಳ ಆಧಾರಿತ ಬಹುಪಕ್ಷೀಯ ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ಏಕಪಕ್ಷೀಯವಾದ ಮತ್ತು ಸ್ಪರ್ಧಾತ್ಮಕತೆಗಳ ಪರಸ್ಪರ ವಿರೋಧಾಭಾಸ ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ಬ್ರೆಜಿಲ್ ಅಧ್ಯಕ್ಷರಾಗಿ ಚುನಾಯಿತರಾದ ಜೈರ್ ಬೊಲ್ಸೊನಾರೊ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಬ್ರಿಕ್ಸ್ ಕುಟುಂಬಕ್ಕೆ ಅವರನ್ನು ಸ್ವಾಗತಿಸಿದರು. ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮುಖಂಡರ ಸಭೆ ನಡೆಸಿ, ದಕ್ಷಿಣ ಆಫ್ರಿಕಾ ಅಧ್ಯಕ್ಷರಾಗಿ ಚುನಾಯಿತರಾದ ಸಿರಿಲ್ ರಮಫೋಸಾ ಅವರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.