Tag: ಬ್ರಾಹ್ಮಣ ಮಹಾಸಭಾ

  • ಜ.6 ರಂದು ಎಕೆಬಿಎಂಎಸ್ ಮಹಿಳಾ ಸಮಾವೇಶ: ನಿರ್ಮಲಾ ಸೀತಾರಾಮನ್ ಉದ್ಘಾಟನೆ

    ಜ.6 ರಂದು ಎಕೆಬಿಎಂಎಸ್ ಮಹಿಳಾ ಸಮಾವೇಶ: ನಿರ್ಮಲಾ ಸೀತಾರಾಮನ್ ಉದ್ಘಾಟನೆ

    ಬೆಂಗಳೂರು: ಶಂಕರಪುರದ ಶಂಕರಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (Akhila Karnataka Brahmin Mahasabha) ಜ 6 ಮತ್ತು 7 ರಂದು ಆಯೋಜಿಸಿರುವ ಅಭಿಜಾತೆ-2024-ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು (Women’s Conference) ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಉದ್ಘಾಟಿಸಲಿದ್ದಾರೆ.

    ಸಮಾವೇಶದಲ್ಲಿ ಹಲವು ಸಾಂಸ್ಕೃತಿಕ-ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದಮ್ಯಚೇತನ ಮುಖ್ಯಸ್ಥರಾದ ತೇಜಸ್ವಿನಿ ಅನಂತ್ ಕುಮಾರ್, ಎಕೆಬಿಎಂಎಸ್ ಕಾರ್ಯಾಧ್ಯಕ್ಷರಾದ ಮೇದಿನಿ ಉದಯ್ ಗರುಡಾಚಾರ್, ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಭೀಮೇಶ್ವರ್ ಜೋಷಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.  ಇದನ್ನೂ ಓದಿ: ಹರಿಪ್ರಸಾದ್‌ರನ್ನು ಕೂಡಲೇ ಬಂಧಿಸಬೇಕು: ಡಿವಿಎಸ್‌ ಆಗ್ರಹ

     

    ಧರ್ಮ- ಸಂಸ್ಕೃತಿ ಮಹಿಳೆ, ಮಾಧ್ಯಮದಲ್ಲಿ ಮಹಿಳೆಯರ ಪಾತ್ರ, ಮಹಿಳಾ ಸಬಲೀಕರಣ ಹಾಗೂ ಕೌಶಲ್ಯಾಭಿವೃದ್ಧಿ, ಕನ್ನಡ ಸಾಹಿತ್ಯ ಮತ್ತು ಮಹಿಳೆ ಸೇರಿದಂತೆ ಸಮಾವೇಶದಲ್ಲಿ ಹಲವು ವಿಚಾರ ಗೋಷ್ಠಿಗಳಿರಲಿವೆ. ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಗಣೇಶ್, ಅಲ್ಕಾ ಸುಧೀರ್ ಇನಾಮದಾರ ಧರ್ಮ- ಸಂಸ್ಕೃತಿ ಮಹಿಳೆ ವಿಷಯವಾಗಿ ವಿಚಾರ ಮಂಡನೆ ಮಾಡಲಿದ್ದಾರೆ.

    ಜ.06 ರಂದು ಶ್ರೀರಾಮದರ್ಶನ’ದೊಂದಿಗೆ ನೃತ್ಯರೂಪಕ-ಕಥಕ್, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ನಿರ್ದೇಶನದಲ್ಲಿ ಲಯ-ಲಾವಣ್ಯ-ತಾಳವಾದ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸಾಧಕ ಮಹಿಳೆಯರನ್ನು ಗಣ್ಯರ ಉಪಸ್ಥಿತಿಯಲ್ಲಿ ಪುರಸ್ಕರಿಸಲಾಗುತ್ತದೆ.

    ಎಕೆಬಿಎಂಎಸ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ (Ashok Haranahalli) ಹಾಗೂ ಮಹಾಸಭಾದ ರಾಜ್ಯ ಮಹಿಳಾ ವಿಭಾಗದ ಸಂಚಾಲಕಿ ಶುಭಮಂಗಳ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಅಭಿಜಾತೆ-2024ದಲ್ಲಿ ಮಹಿಳೆಯರು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆಗಳು ಆಕರ್ಷಣೆಯ ಕೇಂದ್ರಬಿಂದುವಾಗಿರಲಿದೆ.

    ಜ.06 ರಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆ ನಡೆಯಲಿದ್ದು, ಜ.07 ರಂದು ಬಸವನಗುಡಿಯ ದೊಡ್ಡಗಣಪತಿ ದೇವಾಲಯದಿಂದ ಸಮ್ಮೇಳನದ ಆವರಣದವರೆಗೆ ಜಾನಪದ ಕಲಾ ತಂಡಗಳ ಕಲಾಪ್ರದರ್ಶನದೊಂದಿಗೆ ನಡೆಯುವ ಶೋಭಾಯಾತ್ರೆಯನ್ನು, ಅದಮ್ಯಚೇತನ ಮುಖ್ಯಸ್ಥರಾದ ತೇಜಸ್ವಿನಿ ಅನಂತ್ ಕುಮಾರ್, ಎಕೆಬಿಎಂಎಸ್ ಕಾರ್ಯಾಧ್ಯಕ್ಷರಾದ ಮೇದಿನಿ ಉದಯ್ ಗರುಡಾಚಾರ್ ಉದ್ಘಾಟಿಸಲಿದ್ದಾರೆ. 16 ವರ್ಷಗಳ ನಂತರ ಸಮುದಾಯದ ಮಹಿಳಾ ವಿಭಾಗದ ಬೃಹತ್ ಸಮಾವೇಶ ಆಯೋಜನೆಗೊಂಡಿದೆ.

  • ನಮ್ಮ ಮೀಸಲಾತಿಗೆ ಕನ್ನ- ಸರ್ಕಾರದ ವಿರುದ್ಧ ಬ್ರಾಹ್ಮಣ ಮಹಾಸಭಾ ಕಿಡಿ

    ನಮ್ಮ ಮೀಸಲಾತಿಗೆ ಕನ್ನ- ಸರ್ಕಾರದ ವಿರುದ್ಧ ಬ್ರಾಹ್ಮಣ ಮಹಾಸಭಾ ಕಿಡಿ

    ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ವರ್ಗಗಳ(EWS) ಮೀಸಲಾತಿಗೆ ಕನ್ನ ಹಾಕಲು ಹೊರಟಿರುವ ಸರ್ಕಾರದ ಧೋರಣೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿದೆ

    ಸರ್ಕಾರ ಇನ್ನೂ ಇಡಬ್ಲ್ಯೂಎಸ್‌ ಮೀಸಲಾತಿಯನ್ನು ಜಾರಿಯೇ ಮಾಡಿಲ್ಲ. ನಮ್ಮ ಮೀಸಲಾತಿ ಕಡಿತ ಮಾಡಿ ಮೀಸಲಾತಿ ಇರುವ ಇನ್ನಿತರ ಸಮುದಾಯಗಳಿಗೆ ಹಂಚುವ ಹುನ್ನಾರ ಮಾಡುತ್ತಿದೆ ಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ(Ashok Haranahalli) ಕಿಡಿಕಾರಿದ್ದಾರೆ. ಇದನ್ನೂ ಓದಿ: ಟೋಕಿಯೋ ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ-ಲಕ್ಷ ಹಣ

    ಸರ್ಕಾರ ಈ ರೀತಿಯಾಗಿ ಮೀಸಲಾತಿಯನ್ನು ಜಾರಿ ಮಾಡಿದರೆ ವಿಪ್ರ ಸಮುದಾಯಕ್ಕೆ ಮಾರಕವಾಗಲಿದೆ. ಸಮುದಾಯ ಎಚ್ಚೆತ್ತು ಹೋರಾಟಕ್ಕೆ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರತಾಪ್ ಸಿಂಹಗೆ ಬೆಂಬಲ ನೀಡಲ್ಲ, ನಾವು ಮೈತ್ರಿ ಅಭ್ಯರ್ಥಿ ಪರ: ಮೈಸೂರು ಬ್ರಾಹ್ಮಣ ಮಹಾಸಭಾ

    ಪ್ರತಾಪ್ ಸಿಂಹಗೆ ಬೆಂಬಲ ನೀಡಲ್ಲ, ನಾವು ಮೈತ್ರಿ ಅಭ್ಯರ್ಥಿ ಪರ: ಮೈಸೂರು ಬ್ರಾಹ್ಮಣ ಮಹಾಸಭಾ

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಅವರನ್ನು ನಾವು ಬೆಂಬಲಿಸುತ್ತಿದ್ದೇವೆ. ನಮ್ಮ ಸಮುದಾಯದ ನಾಯಕರಿಗೆ ನಿಂದಿಸಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಬೆಂಬಲ ನೀಡಲ್ಲ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ಮುಖಂಡರು ಸ್ಪಷ್ಟಪಡಿಸಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಂ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಮಾಡಿದೆ. ಬೆಂಗಳೂರಿನಲ್ಲಿ ಬಹುಕೋಟಿ ಮೊತ್ತದ ವಿಸ್ತಾರವಾದ ನಿವೇಶನವನ್ನು ಬ್ರಾಹ್ಮಣ ಮಹಾಸಭಾಗೆ ನೀಡಿದೆ. ಆದರಿಂದ ಮೈತ್ರಿ ಅಭ್ಯರ್ಥಿಗೆ ಬ್ರಾಹ್ಮಣ ಸಮುದಾಯ ಮತ ಹಾಕಲಾಗುತ್ತದೆ ಎಂದು ತಿಳಿಸಿದರು.

    ಆರ್. ಗುಂಡೂರಾವ್ ಅವರು ನಮ್ಮೊಂದಿಗಿಲ್ಲ. ಅವರು ನಮ್ಮ ಸಮುದಾಯಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಇಂತಹ ಹಿರಿಯ ನಾಯಕರನ್ನು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುವುದು ಸರಿಯಲ್ಲ ಎಂದು ಇಲ್ಲಿ ಬಿಜೆಪಿ ಅಭ್ಯರ್ಥಿಯಾದವರಿಗೆ ನಾವು ಹೇಳಿದ್ದೇವೆ. ಅವರ ವಿರುದ್ಧ ಪ್ರತಿಭಟನೆಯನ್ನೂ ಕೂಡ ಮಾಡಿದ್ದೇವೆ. ಹೀಗಾಗಿ ಸಂಭಾವಿತ ಹಾಗೂ ಒಳ್ಳೆಯ ನಡತೆ ಹೊಂದಿರುವ ವಿಜಯ್ ಶಂಕರ್ ಅವರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.