Tag: ಬ್ರಾಂಡ್ ಅಂಬಾಸಿಡರ್

  • ದುಬೈನ ಕ್ರಿಕೆಟ್ ಅಕಾಡೆಮಿಗೆ ರೋಹಿತ್ ಬ್ರಾಂಡ್ ಅಂಬಾಸಿಡರ್

    ದುಬೈನ ಕ್ರಿಕೆಟ್ ಅಕಾಡೆಮಿಗೆ ರೋಹಿತ್ ಬ್ರಾಂಡ್ ಅಂಬಾಸಿಡರ್

    – ಆನ್‍ಲೈನ್‍ನಲ್ಲೇ ಕೋಚಿಂಗ್

    ನವದೆಹಲಿ: ಟೀಂ ಇಂಡಿಯಾ ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾ, ದುಬೈನ ಕ್ರಿಕ್ ಕಿಂಗ್‍ಡಂ ಕ್ರಿಕೆಟ್ ಅಕಾಡೆಮಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ವಿಶ್ವದ ಬಹುತೇಕ ಎಲ್ಲಾ ಕ್ರೀಡಾಕೂಟ, ಟೂರ್ನಿಗಳನ್ನು ಮುಂದೂಡಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕ್ ಕಿಂಗ್‍ಡಂ ಅಕಾಡೆಮಿಯು ಆನ್‍ಲೈನ್ ತರಬೇತಿಯನ್ನು ನೀಡಲು ಮುಂದಾಗಿದೆ. ಈ ವೇದಿಕೆಯಲ್ಲಿ ಅನೇಕ ವಿದ್ಯಾರ್ಥಿಗಳು, ತರಬೇತುದಾರರು, ಅಕಾಡೆಮಿಗಳು ಮತ್ತು ಸಂಸ್ಥೆಗಳು ಸೇರಬಹುದಾಗಿದೆ.

    ಕ್ರಿಕ್ ಕಿಂಗ್‍ಡಂ ಅಕಾಡೆಮಿಯಲ್ಲಿ ಮುಂಬೈನ ಮಧ್ಯಮ ವೇಗದ ಬೌಲರ್ ಧವಲ್ ಕುಲಕರ್ಣಿ ಮಾರ್ಗದರ್ಶಕರಾಗಿದ್ದಾರೆ. ರೋಹಿತ್ ಶರ್ಮಾ ಅವರು 32 ಟೆಸ್ಟ್ ಪಂದ್ಯಗಳಲ್ಲಿ 2,141 ರನ್, 224 ಏಕದಿನ ಪಂದ್ಯಗಳಲ್ಲಿ 9,115 ರನ್ ಮತ್ತು 108 ಟಿ20 ಪಂದ್ಯಗಳಲ್ಲಿ 2,773 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಎರಡು ಬಾರಿ ಡಬಲ್ ಸೆಂಚುರಿ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.

    ಅಕಾಡೆಮಿ ರೋಹಿತ್ ಅವರನ್ನು ಉಲ್ಲೇಖಿಸಿ, ”ಕ್ರಿಕ್ ಕಿಂಗ್‍ಡಂ ಆಧುನಿಕ, ವೈಜ್ಞಾನಿಕ ತರಬೇತಿ ವಿಧಾನಗಳೊಂದಿಗೆ ಉತ್ತಮ ಟೂರ್ನಿಯನ್ನು ನಡೆಸಲು ಸಾಂಪ್ರದಾಯಿಕ ವಿಧಾನಗಳನ್ನು ಸಂಯೋಜಿಸಲು ಬಯಸಿದೆ. ರೋಹಿತ್ ಅವರು ದೂರದೃಷ್ಟಿ ಹೊಂದಿದ್ದಾರೆ. ಅವರು ಪ್ರತಿಯೊಂದು ಅಂಶವನ್ನು ವೃತ್ತಿಪರ ಮತ್ತು ರಚನಾತ್ಮಕವಾಗಿರಲು ಬಯಸುತ್ತಾರೆ. ರೋಹಿತ್ ಅವರ ಹೆಸರನ್ನು ಅಕಾಡೆಮಿಯ ನಿರ್ದೇಶಕರಾಗಿಯೂ ಪ್ರಸ್ತಾಪಿಸಲಾಗಿದೆ” ಎಂದು ತಿಳಿಸಿದೆ.

    ಆನ್‍ಲೈನ್ ಕೋಚಿಂಗ್ ವೇದಿಕೆಯಲ್ಲಿ ಎಲ್ಲಾ ಅಕಾಡೆಮಿಗಳಿಗೆ ನಿರ್ವಹಣೆಯೊಂದಿಗೆ ತರಬೇತುದಾರರು, ಮೈದಾನಗಳು ಅಥವಾ ನೆಟ್‍ಗಳ ಬುಕಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಕಿರಿಯ ಮಟ್ಟದಲ್ಲಿ ಮತ್ತು ತಳಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಿದ ಕನಿಷ್ಠ 20 ಜನ ಕ್ರಿಕೆಟಿಗರು ಇದ್ದಾರೆ. ಅವರಲ್ಲಿ ಕೆಲವರು ಅನುಭವಿ ತರಬೇತುದಾರರಾದ ಪ್ರದೀಪ್ ಇಂಗಲೆ, ಪರಾಗ್ ಮಡ್ಕೈಕರ್, ಸುಭಾಷ್ ರಂಜನೆ ಮತ್ತು ಪ್ರಥಮೇಶ್ ಸಲುಂಖೆ ಆಗಿದ್ದಾರೆ. ಕ್ಲಬ್ ಮತ್ತು ಗಣ್ಯ ಮಟ್ಟದ ಕ್ರಿಕೆಟಿಗರಿಗೆ ಕೋಚಿಂಗ್ ಸೌಲಭ್ಯದ ಹೊರತಾಗಿ 5ರಿಂದ 8 ವರ್ಷ, 8ರಿಂದ 13 ವರ್ಷ, 13 ವರ್ಷಕ್ಕಿಂತ ಮೇಲ್ಪಟ್ಟವರನ್ನು ವಿಂಗಡಿಸಿ ನಾಲ್ಕು ತರಗತಿ ರಚಿಸಲಾಗಿದೆ.

  • ಹಳೆ ಮೈಸೂರು ಭಾಗದ ಬ್ರಾಂಡ್ ಅಂಬಾಸಿಡರ್ ಆದ್ರು ಯದುವೀರ್

    ಹಳೆ ಮೈಸೂರು ಭಾಗದ ಬ್ರಾಂಡ್ ಅಂಬಾಸಿಡರ್ ಆದ್ರು ಯದುವೀರ್

    ಮೈಸೂರು: ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈಗ ಹಳೆ ಮೈಸೂರು ಭಾಗದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

    ಯದುವೀರ್ ಅವರಿಗೆ ಪ್ರವಾಸೋದ್ಯಮ ಇಲಾಖೆ ಸರ್ಕಾರ ಬ್ರಾಂಡ್ ಅಂಬಾಸಿಡರ್ ಆಗುವಂತೆ ಮನವಿ ಮಾಡಿತ್ತು. ಈ ಕುರಿತು ಸ್ವತಃ ಸಚಿವ ಸಾ ರಾ ಮಹೇಶ್ ಅವರು ಪ್ರಸ್ತಾಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಮಾಡಿದ್ದ ಮನವಿಗೆ ಯದುವೀರ್ ಪ್ರತಿಕ್ರಿಯಿಸಿದ್ದಾರೆ.

    ಯದುವೀರ್ ಅವರು ದಕ್ಷಿಣ ಭಾರತದ ಮಾದರಿಯಲ್ಲಿ ಹಳೆ ಮೈಸೂರಿನ ಅಭಿವೃದ್ಧಿಗೆ ಚಿಂತನೆ ನಡೆಸಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಭಾಗದ ಪ್ರವಾಸೋದ್ಯಮ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಪತ್ರದ ಮೂಲಕ ಯದುವೀರ್ ಸಾ.ರಾ. ಮಹೇಶ್ ಅವರಿಗೆ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ತಾವು ಮೈಸೂರು ಅರಮನೆಗೆ ಭೇಟಿ ನೀಡಿ, ನಮ್ಮ ಅಭಿನಂದನೆಗಳು ತಿಳಿಸಿದ್ದಕ್ಕೆ ಅಭಿನಂದನೆಗಳು. ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ರಾಯಭಾರಿಯಾಗುವಂತೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನನ್ನ ಕೃತಜ್ಞತೆ. ನನ್ನ ನಗರಕ್ಕೆ ಸೇವೆ ಸಲ್ಲಿಸುವ ಹಾಗೂ ಮೈಸೂರು ನಗರವನ್ನು ದಕ್ಷಿಣ ಭಾರತದ ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ದೊರೆತಿರುವುದು ಸಂತೋಷದ ವಿಷಯ.

    ಈ ಕಾರ್ಯವನ್ನು ಸಾಧಿಸಲು ನನಗೆ ಸ್ಪಷ್ಟ ಉದ್ದೇಶಗಳನ್ನು ಹಾಗೂ ಖಚಿತವಾದ ಗುರಿಯನ್ನು ಹೊಂದಿರುವ ಅಗತ್ಯವಿದೆ. ನಾವು ಈ ನಿಟ್ಟಿನಲ್ಲಿ ರಚನಾತ್ಮಕವಾಗಿ ಹಾಗೂ ಪರಸ್ಪರ ಹಿತಾಸಕ್ತಿಗಳಿಗೆ ಅನುಗುಣವಾಗಿ ಮುಂದುವರಿಯುವ ಸಲುವಾಗಿ ತಾವು ತಮ್ಮ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿದರೆ ಉತ್ತಮ. ಈ ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಪ್ರವಾಸೋದ್ಯಮ ವಿಭಾಗದೊಂದಿಗೆ ಕಾರ್ಯೋನ್ಮುಖನಾಗುವ ದಿನವನ್ನು ಎದುರು ನೋಡುತ್ತಿದ್ದೇನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೂಮಾ ಜೊತೆ 100 ಕೋಟಿ ರೂ. ಡೀಲ್‍ಗೆ ಕೊಹ್ಲಿ ಸಹಿ

    ಪೂಮಾ ಜೊತೆ 100 ಕೋಟಿ ರೂ. ಡೀಲ್‍ಗೆ ಕೊಹ್ಲಿ ಸಹಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪೂಮಾದ ರಾಯಭಾರಿಯಾಗಿ ನೇಮಕವಾಗಿದ್ದು, ಬರೋಬ್ಬರಿ 110 ಕೋಟಿ ರೂಪಾಯಿಯ 8 ವರ್ಷಗಳ ಡೀಲ್‍ಗೆ ಸಹಿ ಹಾಕಿದ್ದಾರೆ.

    ಈ ಮೂಲಕ ಕೊಹ್ಲಿ 100 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಬ್ರ್ಯಾಂಡ್‍ವೊಂದರ ಜಾಹಿರಾತು ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

    ಪೂಮಾದಲ್ಲಿರುವ ಶ್ರೇಷ್ಠ ಅಥ್ಲೀಟ್‍ಗಳ ಪಟ್ಟಿಯ ಭಾಗವಾಗಿರುವುದು ನನ್ನ ಸೌಭಾಗ್ಯ. ಈಗಿನ ಉಸೇನ್ ಬೋಲ್ಟ್ ಮಾತ್ರವಲ್ಲದೆ ಪೀಲೆ, ಮರಡೋನಾ, ಥೈರಿ ಹೆನ್ರಿ ಮುಂತಾದವರೊಂದಿಗೆ ಈ ಬ್ರಾಂಡಿನ ಇತಿಹಾಸವಿದೆ. ನಾನು ಮತ್ತು ಪೂಮಾ ದೀರ್ಘಾವಧಿ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತೀಯ ಮಾರುಕಟ್ಟೆಯಲ್ಲಿ ಪೂಮಾ ಕಡಿಮೆ ಅವಧಿಯಲ್ಲಿ ಇಷ್ಟು ಜನಪ್ರಿಯತೆ ಗಳಿಸಿರೋದು ಮೆಚ್ಚುವಂತದ್ದು ಅಂತ ಕೊಹ್ಲಿ ಹೇಳಿದ್ದಾರೆ.

    ಕೊಹ್ಲಿ ಈ ಹಿಂದೆ ಪೂಮಾದ ಪ್ರತಿಸ್ಪರ್ಧಿ ಬ್ರಾಂಡ್ ಆದ ಅಡಿದಾಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಕಳೆದ ವರ್ಷ ಅಡಿದಾಸ್‍ನೊಂದಿಗಿನ ಒಪ್ಪಂದದ ಅವಧಿ ಮುಗಿದಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಕ್ರೀಡಾ ಬ್ರ್ಯಾಂಡ್‍ವೊಂದಕ್ಕೆ ಕೊಹ್ಲಿ ಜಾಹಿರಾತು ನೀಡುತ್ತಿದ್ದು, ಮುಂದಿನ 8 ವರ್ಷಗಳ ಕಾಲ ಪೂಮಾದ ಗ್ಲೋಬಲ್ ಬ್ರಾಂಡ್ ಅಂಬಾಸಿಡರ್ ಆಗಿg

    2016ರ ಸೆಲಬ್ರಿಟಿ ಬ್ರಾಂಡ್ ವರದಿಯ ಪ್ರಕಾರ ಕೊಹ್ಲಿ 9.2 ಕೋಟಿ ಬ್ರಾಂಡ್ ಮೌಲ್ಯ ಹೊಂದಿದ್ದು, ಮೊದಲ ಸ್ಥಾನದಲ್ಲಿರುವ ಶಾರುಖ್ 13ಕೋಟಿ ಬ್ರಾಂಡ್ ಮೌಲ್ಯ ಹೊಂದಿದ್ದಾರೆ.

    ಕೊಹ್ಲಿ ಬಳಿಯಿರುವ ಬ್ರಾಂಡ್‍ಗಳು: ಪೆಪ್ಸಿ, ಆಡಿ, ಹರ್ಬಲ್ ಲೈಫ್, ಕೋಲ್ಗೇಟ್, ವಿಕ್ಸ್, ಬೂಸ್ಟ್, ಟಿಸ್ಸೂಟ್,ಯುಎಸ್‍ಎಲ್, ಟಿವಿಎಸ್, ಸ್ಮಾಷ್, ನಿತೇಶ್ ಎಸ್ಟೇಟ್ಸ್.