Tag: ಬ್ರಹ್ಮಾಸ್ತ್ರ

  • ಬಾಯ್ಕಾಟ್ ಅಂದೋರಿಗೆ ನನ್ನ ನೋಡ್ಬೇಡಿ ಎಂದ ಬಾಲಿವುಡ್ ನಟಿ ಆಲಿಯಾ ಭಟ್

    ಬಾಯ್ಕಾಟ್ ಅಂದೋರಿಗೆ ನನ್ನ ನೋಡ್ಬೇಡಿ ಎಂದ ಬಾಲಿವುಡ್ ನಟಿ ಆಲಿಯಾ ಭಟ್

    ಣವೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಮುಂದಿನ ತಿಂಗಳು ಸೆ.9ಕ್ಕೆ ದೇಶದಾದ್ಯಂತ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಇಂತಹ ವೇಳೆಯಲ್ಲಿ ಆಲಿಯಾ ಭಟ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಾಯ್ಕಾಟ್ ಬಂಧನಕ್ಕೆ ಸಿಲುಕಿದ್ದಾರೆ.

    ಬಾಲಿವುಡ್ ಸಿನಿಮಾ ರಂಗದಲ್ಲಿ ಬಾಯ್ಕಾಟ್ ಚಳವಳಿ ಜೋರಾಗಿದೆ. ರಿಲೀಸ್ ಆಗುತ್ತಿರುವ ಒಂದೊಂದೆ ಸಿನಿಮಾಗಳು ಸೋಲುತ್ತಿದ್ದು, ಇದಕ್ಕೆ ಬಾಯ್ಕಾಟ್ ಕಾರಣ ಎಂದು ಬಿಂಬಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಬ್ರಹ್ಮಾಸ್ತ್ರ ಚಿತ್ರವು ಬಿಡುಗಡೆ ಆಗುತ್ತಿದ್ದು, ಈ ಸಮಯದಲ್ಲಿ ನಟಿ ಆಲಿಯಾ ಭಟ್ ನೀಡಿರುವ ಹೇಳಿಕೆ ಆ ಚಿತ್ರಕ್ಕೆ ಮುಳುವಾಗುತ್ತಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಬಾಯ್ಕಾಟ್ ಎಂದು ಹೇಳುವವರು ನನ್ನ ಸಿನಿಮಾಗಳನ್ನು ನೋಡುವ ಅಗತ್ಯವಿಲ್ಲ, ನೋಡಬೇಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ ಆಲಿಯಾ. ಈ ಮಾತೇ ಬಾಯ್ಕಾಟ್ ಮಾಡುವವರನ್ನು ರೊಚ್ಚಿಗೆಬ್ಬಿಸಿದೆ. ಆಲಿಯಾ ಅವರೇ ತಮ್ಮ ಸಿನಿಮಾವನ್ನು ನೋಡಬೇಡಿ ಎಂದು ಹೇಳಿದ್ದರಿಂದ, ಬ್ರಹ್ಮಾಸ್ತ್ರ ಸಿನಿಮಾವನ್ನು ನೋಡಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡು‍ತ್ತಿದ್ದಾರೆ. ಈ ಹಿಂದೆ ಕರೀನಾ ಕಪೂರ್ ಕೂಡ ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಚಾರದಲ್ಲಿ ಇಂಥದ್ದೇ ಮಾತುಗಳನ್ನು ಆಡಿದ್ದರು. ಕೊನೆಗೂ ಆ ಸಿನಿಮಾ ಬಾಯ್ಕಾಟ್ ಗೆ ಬೆಂಡಾಗಬೇಕಾಯಿತು.

    Live Tv
    [brid partner=56869869 player=32851 video=960834 autoplay=true]

  • ರಣಬೀರ್ ಕಪೂರ್ ಶೂ ಹಾಕಿಕೊಂಡು ಹೋಗಿದ್ದು ದೇವಸ್ಥಾನದೊಳಗೆ ಅಲ್ಲ, ದೇವಿ ಮಂಟಪದೊಳಗೆ : ನಿರ್ದೇಶಕ ಸ್ಪಷ್ಟನೆ

    ರಣಬೀರ್ ಕಪೂರ್ ಶೂ ಹಾಕಿಕೊಂಡು ಹೋಗಿದ್ದು ದೇವಸ್ಥಾನದೊಳಗೆ ಅಲ್ಲ, ದೇವಿ ಮಂಟಪದೊಳಗೆ : ನಿರ್ದೇಶಕ ಸ್ಪಷ್ಟನೆ

    ಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ಭಾರೀ ಸದ್ದು ಮಾಡಿದೆ. ಟ್ರೈಲರ್ ಗೆ ಅನ್ನು ಒಪ್ಪಿಕೊಂಡಂತೆಯೇ, ರಣಬೀರ್ ನಡೆಗೆ ವಿರೋಧವೂ ವ್ಯಕ್ತವಾಗಿದೆ. ಟ್ರೈಲರ್ ನಲ್ಲಿ ರಣಬೀರ್ ಕಪೂರ್, ಶೂ ಧರಿಸಿಕೊಂಡು ಗಂಟೆ ಬಾರಿಸಿದರು ಎನ್ನುವ ಕಾರಣಕ್ಕಾಗಿ ಹಿಂದೂಗಳು ಟ್ರೈಲರ್ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಈ ಕುರಿತು ನಿರ್ದೇಶಕ ಅಯಾನ್ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ತಪ್ಪು ಆಗಿಲ್ಲವೆಂದು ಹೇಳಿಕೆ ನೀಡಿದ್ದಾರೆ.

    ರಣಬೀರ್ ಓಡಿ ಬಂದು ಗಂಟೆ ಬಾರಿಸುವುದು ದೇವಸ್ಥಾನದ ಒಳಗೆ ಅಲ್ಲ, ಅದು ದುರ್ಗಾ ಮಾತೆಯ ಮಂದಿರ. ನನ್ನ ಕುಟುಂಬದ ಜೊತೆ ನಾನು ಬಾಲ್ಯದಿಂದಲೂ ದುರ್ಗಾ ಪೂಜೆಗೆ ಹೋಗುತ್ತಾನೆ. ದೇವಿ ಬಳಿ ಹೋಗುವಾಗ ನಾವು ಚಪ್ಪಲಿ ತೆಗೆದಿಡುತ್ತೇವೆ. ಮಂಟಪದೊಳಗಡೆ ಹೋಗುವಾಗ ಅಲ್ಲ. ಹಾಗಾಗಿ ಅದು ತಪ್ಪಾಗಿ ಕಾಣಿಸಿಕೊಂಡಿದೆ. ಯಾರಿಗೆಲ್ಲ ಬೇಸರವಾಗಿದೆಯೋ ಅವರಿಗೆ ಸತ್ಯ ತಿಳಿಸುವುದು ನನ್ನ ಜವಾಬ್ದಾರಿ ಆಗಿರುವುದರಿಂದ ಈ ಸ್ಪಷ್ಟನೆ ಕೊಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್, ಯಾವ ಭಾಷೆಯಲ್ಲಿ ಯಾರು ರಿಲೀಸ್?

    ಈ ಸಿನಿಮಾದಲ್ಲಿ ನಮ್ಮ ಸಂಸ್ಕೃತಿಯನ್ನು, ಕಲೆ, ಆಚರಣೆಯನ್ನು ಬಿಂಬಿಸುವಂತಹ ಪ್ರಯತ್ನ ಮಾಡಿದ್ದೇನೆ. ನಮಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರ ಬಗ್ಗೆ ತುಂಬಾ ಗೌರವವಿದೆ. ಹಾಗಾಗಿ ನಾವು ಯಾರಿಗೂ ನೋವನ್ನು ಮಾಡುವಂತಹ ದೃಶ್ಯಗಳನ್ನು ಈ ಸಿನಿಮಾದಲ್ಲಿ ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಿನಿಮಾ ನೋಡಿದ ಮೇಲೆ ನಿಮಗೆ ಆ ದೃಶ್ಯದ ಬಗ್ಗೆ ಮನವರಿಕೆ ಆಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

    Live Tv

  • ‘ಬ್ರಹ್ಮಾಸ್ತ್ರ’ ಟ್ರೈಲರ್ ನಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ: ರಣಬೀರ್ ಕಪೂರ್ ಮೇಲೆ ನೆಟ್ಟಿಗರ ಕೋಪ

    ‘ಬ್ರಹ್ಮಾಸ್ತ್ರ’ ಟ್ರೈಲರ್ ನಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ: ರಣಬೀರ್ ಕಪೂರ್ ಮೇಲೆ ನೆಟ್ಟಿಗರ ಕೋಪ

    ಣಬೀರ್ ಕಪೂರ್ ಮತ್ತು ಅಲಿಯಾ ಭಟ್  ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿರುವ ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ರಣಬೀರ್ ಮತ್ತು ಅಲಿಯಾ ಅಭಿಮಾನಿಗಳು ಇಬ್ಬರ ನಟನೆಗೆ ಜೈ ಹೋ ಅಂದಿದ್ದಾರೆ. ಆದರೆ, ಈ ಟ್ರೈಲರ್ ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಅನ್ನುವಂತಹ ದೃಶ್ಯವೊಂದು ಇದೆ ಎನ್ನುವ ಕಾರಣಕ್ಕಾಗಿ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ರಣಬೀರ್ ಕಪೂರ್ ಸ್ಪೀಡ್ ಆಗಿ ಬಂದು ದೇವಸ್ಥಾನದ ಒಳಗೆ ನುಗ್ಗುತ್ತಾರೆ. ಅಲ್ಲಿರುವ ಘಂಟೆ ಬಾರಿಸುತ್ತಾರೆ. ಜಿಗಿದು ಗಂಟೆ ಬಾರಿಸುವಾಗ, ಅವರು ಧರಿಸಿರುವ ಶೂ ಕಾಣುತ್ತದೆ. ಶೂ ಧರಿಸಿ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದಾರೆ. ಶೂ ಇರುವಂತಹ ಕಾಲ್ ಗಳು ಫೋಟೋವನ್ನೂ ವೈರಲ್ ಕೂಡ ಮಾಡಿದ್ದಾರೆ. ದೇವರಿಗೆ ಅಪಮಾನ ಮಾಡಿದ್ದಕ್ಕೆ ಸಿನಿಮಾ ಸೋಲಲಿ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ಇದೊಂದು ಭಾರತ ಪುರಾಣದ ಆಧಾರದಲ್ಲಿ ಮೂಡಿ ಬಂದಿರುವ ಸಿನಿಮಾವಾಗಿದ್ದರಿಂದ, ರಣಬೀರ್ ತುಂಬಾ ಮುತುವರ್ಜಿ ತಗೆದುಕೊಂಡು ನಟಿಸಬೇಕಿತ್ತು. ಈ ದೃಶ್ಯವನ್ನು ಅವರ ಅಭಿಮಾನಿಗಳು ಕೂಡ ಇಷ್ಟ ಪಡಲಾರರು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ರಣಬೀರ್ ಮತ್ತು ಅಲಿಯಾ ಭಟ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಶುರುವಾಗಿ ಐದಾರು ವರ್ಷಗಳೇ ಆಗಿದ್ದವು. ಇದೀಗ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ ಸಿನಿಮಾ. ಈ ಹೊತ್ತಿನಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

    Live Tv

  • ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ನಟನ ಪತ್ನಿಯಾಗಿ ನಟಿಸೋದು ಪಕ್ಕಾ

    ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ನಟನ ಪತ್ನಿಯಾಗಿ ನಟಿಸೋದು ಪಕ್ಕಾ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲ ಚಿನ್ನ. ಇವರು ನಟಿಸಿರೋ `ಮಿಷನ್ ಮಜ್ನು’, `ಗುಡ್ ಬೈ’ ರಿಲೀಸ್ ಗೂ ಮುಂಚೆನೇ ಕಿರಿಕ್ ಬೆಡಗಿ ರಶ್ಮಿಕಾ, ಬಿಟೌನ್ ಸ್ಟಾರ್ ರಣಬೀರ್ ಕಪೂರ್‌ಗೆ ನಾಯಕಿಯಾಗುವ ಅವಕಾಶವ ಗಿಟ್ಟಿಸಿಕೊಂಡಿದ್ದಾರೆ. `ಪುಷ್ಪ’ ಸಕ್ಸಸ್ ನಂತರ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ರಶ್ಮಿಕಾಗೆ ಬುಲಾವ್ ಬರುತ್ತಿದೆ. ರಣಬೀರ್ ಕಪೂರ್ ಜತೆ ನಟಿಸುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿ ಆಗುತ್ತಿತ್ತು. ಇದೀಗ ಸುದ್ದಿ ನಿಜವಾಗಿದೆ. ಇದನ್ನೂ ಓದಿ:  ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಸದ್ಯ `ಬ್ರಹ್ಮಾಸ್ತ್ರ’ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಿರೋ ರಣಬೀರ್ ಕಪೂರ್ ಈಗ `ಅನಿಮಲ್’ ಚಿತ್ರದಲ್ಲಿ ನಟಿಸಲಿದ್ದಾರೆ. ಯುಗಾದಿ ಹಬ್ಬದಂದು ರಣಬೀರ್‌ ಕಪೂರ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಅಧಿಕೃತವಾಗಿ ಟ್ವೀಟರ್‌ನಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅನೌನ್ಸ್ ಮಾಡಿದ್ದಾರೆ.

    ಫ್ರೆಶ್ ಲವ್ ಸ್ಟೋರಿ ಜೊತೆಗೆ ಫ್ರೆಶ್ ಜೋಡಿಯನ್ನು ತೋರಿಸಬೇಕು ಅಂತಾ ರಣಬೀರ್‌ಗೆ `ಪುಷ್ಪ’ ನಟಿ ರಶ್ಮಿಕಾ ಅವರನ್ನು ಫೈನಲ್ ಮಾಡಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ರಶ್ಮಿಕಾ ಅವರು, ರಣಬೀರ್‌ಗೆ ಪತ್ನಿಯಾಗಿ ನಟಿಸಲಿದ್ದಾರೆ. ಅದು ಗೀತಾಂಜಲಿ ಪಾತ್ರದಲ್ಲಿ ಎನ್ನುವುದು ವಿಶೇಷ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

     

  • ರಣಬೀರ್ ಮತ್ತು ಆಲಿಯಾ 5 ವರ್ಷದ ಕನಸು, ನನಸಾದ ಕ್ಷಣ

    ರಣಬೀರ್ ಮತ್ತು ಆಲಿಯಾ 5 ವರ್ಷದ ಕನಸು, ನನಸಾದ ಕ್ಷಣ

    ಸಿನಿಮಾಗಳು ಸಟ್ಟೆರುತ್ತವೆ ಆದರೆ ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ ಚಿತ್ರೀಕರಣ ಮುಗಿಸಿ ಬಿಡುಗಡೆಯಾಗುತ್ತವೆ. ಬಾಲಿವುಡ್ನಲ್ಲಿ ಸರಿ ಸುಮಾರು 5 ವರ್ಷಗಳ ಹಿಂದೆ ಚಿತ್ರೀಕರಣ ಪ್ರಾರಂಭಿಸಿದ್ದ ‘ಬ್ರಹ್ಮಾಸ್ತ್ರ’ ಚಿತ್ರತಂಡ ಇದೀಗ ಚಿತ್ರೀಕರಣವನ್ನು ಪೂರ್ಣ ಗೊಳಿಸಿದೆ.

    ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರೀಕರಣ ಮುಕ್ತಾಯವಾಗಿರುವ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

     

    View this post on Instagram

     

    A post shared by Ayan Mukerji (@ayan_mukerji)

    ಕೊನೆಗೂ ಚಿತ್ರೀಕರಣ ಮುಕ್ತಾಯವಾಗಿದೆ. ‘ಬ್ರಹ್ಮಾಸ್ತ್ರ’ ಚಿತ್ರೀಕರಣ ಪ್ರಾರಂಭ ಮಾಡಿ 5 ವರ್ಷಗಳು ಕಳೆದಿದೆ. ಕೊನೆಗೂ ನಮ್ಮ ಚಿತ್ರದ ಕೊನೆಯ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಇದು ನಂಬಲಾಗುತ್ತಿಲ್ಲ. ಸವಾಲಿನ ಲೈಫ್ ಟೈಮ್ ಪಯಣ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಫೋಟೋವನ್ನು ಶೇರ್ ಮಾಡಿದ್ದಾರೆ. ಆಲಿಯಾ ಮತ್ತು ರಣಬೀರ್ ಇಬ್ಬರೂ ಕತ್ತಿಗೆ ಹೂವಿನ ಹಾರ ಹಾಕಿ ದೇವಸ್ತಾನದಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

    ಹಿಂದಿ ಜೊತೆಗೆ ದಕ್ಷಿಣ ಭಾರತದ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟಂಬರ್ 9ರಂದು ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ, ಅಮಿತಾ ಬಚ್ಚನ್, ಮೌನಿ ರಾಯ್, ನಾಗಾರ್ಜುನ್ ಅಕ್ಕಿನೇನಿ ಸೇರಿದಂತೆ ಭಾರತೀಯ ಸಿನಿಮಾರಂಗದ ದೊಡ್ಡ ಕಲಾ ಬಳಗವಿದೆ.

  • ಬ್ರಹ್ಮಾಸ್ತ್ರದ ಬಗ್ಗೆ ಕನ್ನಡದಲ್ಲಿ ʻಡೈಲಾಗ್‌ʼ ಹೊಡೆದ ಆಲಿಯಾ ಭಟ್‌

    ಬ್ರಹ್ಮಾಸ್ತ್ರದ ಬಗ್ಗೆ ಕನ್ನಡದಲ್ಲಿ ʻಡೈಲಾಗ್‌ʼ ಹೊಡೆದ ಆಲಿಯಾ ಭಟ್‌

    ಬೆಂಗಳೂರು: ಬಾಲಿವುಡ್‌ ಜೋಡಿ ನಟ ರಣಬೀರ್‌ ಕಪೂರ್‌ ಮತ್ತು ನಟಿ ಆಲಿಯಾ ಭಟ್‌ ಅಭಿನಯದ ʻಬ್ರಹ್ಮಾಸ್ತ್ರ ಪಾರ್ಟ್‌ ಒನ್‌ʼ ಸಿನಿಮಾ 2022ರ ಸೆ.9 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಅಷ್ಟೇ ಅಲ್ಲ ದಕ್ಷಿಣ ಭಾರತದ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಟಿ ಆಲಿಯಾ ಭಟ್‌ ಸಿನಿಮಾ ಬಗ್ಗೆ ಕನ್ನಡದಲ್ಲಿ ಟ್ವೀಟ್‌ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

    09.09.2022 ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್‌ ಒನ್‌: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ! ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ ಮಹಾಯೋಧನೊಬ್ಬನ ಉದಯವಾಗಲಿದೆ. ಶಿವನನ್ನು ಪರಿಚಯಿಸುತ್ತಿದ್ದೇವೆ ಎಂದು ಆಲಿಯಾ ಭಟ್‌ ಕನ್ನಡದಲ್ಲಿ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ನಮ್ಮಿಬ್ಬರ ಮದುವೆ ಯಾವಾಗ – ಆಲಿಯಾಗೆ ರಣಬೀರ್‌ ಪ್ರಶ್ನೆ

    ಈ ಸಿನಿಮಾವನ್ನು ಅಯನ್‌ ಮುಖರ್ಜಿ ನಿರ್ದೇಶಿಸಿದ್ದಾರೆ. ಕರಣ್‌ ಜೋಹರ್‌ ನಿರ್ಮಾಣ ಮಾಡಿದ್ದಾರೆ. ಚಿತ್ರ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

    ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್‌ ಸೇರಿದಂತೆ ಹಲವರು ಖ್ಯಾತ ನಟರು ಅಭಿನಯಿಸಿದ್ದಾರೆ. ಬುಧವಾರ ಬ್ರಹ್ಮಾಸ್ತ್ರ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು.

  • ನಮ್ಮಿಬ್ಬರ ಮದುವೆ ಯಾವಾಗ – ಆಲಿಯಾಗೆ ರಣಬೀರ್‌ ಪ್ರಶ್ನೆ

    ನಮ್ಮಿಬ್ಬರ ಮದುವೆ ಯಾವಾಗ – ಆಲಿಯಾಗೆ ರಣಬೀರ್‌ ಪ್ರಶ್ನೆ

    ನವದೆಹಲಿ: ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳ ಸಾಲುಸಾಲು ಮದುವೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಅವರ ಮದುವೆ ವಿಚಾರವೂ ಕುತೂಹಲ ಮೂಡಿಸಿದೆ.

    ಬ್ರಹ್ಮಾಸ್ತ್ರ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಸಮಾರಂಭವನ್ನು ಬುಧವಾರ ಆಯೋಜಿಸಲಾಗಿತ್ತು. ಈ ವೇಳೆ ಕುತೂಹಲಕಾರಿ ಘಟನೆಯೊಂದು ನಡೆಯಿತು. ʼನಮ್ಮಿಬ್ಬರ ಮದುವೆ ಯಾವಾಗʼ ಎಂದು ಆಲಿಯಾ ಭಟ್‌ ಬಳಿ ರಣಬೀರ್‌ ಕಪೂರ್‌ ಕೇಳಿದ್ದಾರೆ. ʻನನ್ನನ್ನು ಯಾಕೆ ಹೀಗೆ ಕೇಳುತ್ತಿದ್ದೀರಾʼ ಎಂದು ಆಲಿಯಾ ಪ್ರತಿಯಾಗಿ ಕೇಳಿದ ಸುದ್ದಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪವರ್ ಸ್ಟಾರ್ ಹೆಸರಲ್ಲಿ ಮಿನಿ ಸ್ಮಾರಕ ನಿರ್ಮಿಸಿದ ಹೊಸೂರು ಗ್ರಾಮಸ್ಥರು

    ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್‌ ಹಾಗೂ ಆಲಿಯಾ ಒಟ್ಟಿಗೆ ನಟಿಸಿದ್ದಾರೆ. ಚಿತ್ರದ ಪೋಸ್ಟರ್‌ ಬಿಡುಗಡೆ ಸಮಾರಂಭದಲ್ಲಿ ಆಲಿಯಾ, ರಣಬೀರ್‌ ಮದುವೆ ವಿಚಾರ ಹೀಗೆ ಪ್ರಸ್ತಾಪವಾಯಿತು. ಬಹಳಷ್ಟು ಸೆಲೆಬ್ರಿಟಿಗಳು ಮದುವೆಯಾಗುತ್ತಿದ್ದಾರೆ. ಹೀಗಾಗಿ ನೀವೂ ಬೇಗನೆ ಮದುವೆಯಾಗಿ ಎಂಬ ಮಾತುಗಳು ಈ ವೇಳೆ ಕೇಳಿ ಬಂದವು.

    ಕಳೆದ ವರ್ಷವೇ ರಣಬೀರ್‌ ಮತ್ತು ಆಲಿಯಾ ವಿವಾಹವಾಗುವುದಕ್ಕೆ ನಿರ್ಧರಿಸಿದ್ದರು. ಆದರೆ ಕೋವಿಡ್‌ ಕಾರಣದಿಂದಾಗಿ ಮದುವೆಯನ್ನು ಮುಂದೂಡಿದರು. ಇದನ್ನೂ ಓದಿ: ಪತ್ನಿ ಜೊತೆಗೆ ರೋಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕಿದ ನಿಖಿಲ್

  • ಆಲಿಯಾ ಖುಷಿಗೆ ಕಾರಣ ಅಮಿತಾಭ್ ಬಚ್ಚನ್!

    ಆಲಿಯಾ ಖುಷಿಗೆ ಕಾರಣ ಅಮಿತಾಭ್ ಬಚ್ಚನ್!

    – ಬಿಗ್‍ಬಿ ಜೊತೆ ಬ್ರಹ್ಮಾಸ್ತ್ರ ಚಿತ್ರೀಕರಣ!

    ಮುಂಬೈ: ಇತ್ತೀಚೆಗೆ ತೆರೆ ಕಂಡಿದ್ದ ರಾಜಿ ಚಿತ್ರ ಬಾಕ್ಸಾಫೀಸ್‍ನಲ್ಲಿಯೂ ನಿರ್ಣಾಯಕ ದಾಖಲೆ ಮಾಡಿದೆ. ಅದೇ ರೀತಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಆಲಿಯಾ ಭಟ್ ನಟನೆಗೂ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆಗಳೂ ಹರಿದು ಬರುತ್ತಿವೆ. ಈ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿರುವ ಆಲಿಯಾ ಇದೀಗ ಮತ್ತಷ್ಟು ಸಂತಸಗೊಂಡಿದ್ದಾಳೆ. ಅದಕ್ಕೆ ಕಾರಣವಾಗಿರೋದು ಬಿಗ್‍ಬಿ ಅಮಿತಾಭ್ ಬಚ್ಚನ್ ಜೊತೆ ನಟಿಸಲು ಸಿಕ್ಕಿರುವ ಅವಕಾಶ.

    ಕರಣ್ ಜೋಹರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರೋ ಬ್ರಹ್ಮಾಸ್ತ್ರ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಆದರೆ ಈ ಚಿತ್ರದ ಚಿತ್ರೀಕರಣಕ್ಕೆ ಸದ್ದಿಲ್ಲದೆಯೇ ಚಾಲನೆ ಸಿಕ್ಕಿತ್ತು. ರಾಜಿ ಚಿತ್ರದ ಪ್ರಮೋಷನ್ ಕೆಲಸದ ಜೊತೆ ಜೊತೆಗೇ ಆಲಿಯಾ `ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದರು.

    ರಾಜಿ ಚಿತ್ರ ಮುಕ್ತಾಯದ ಹಂತ ತಲುಪೋ ಹೊತ್ತಿಗೆಲ್ಲಾ ಆಲಿಯಾ ಬ್ರಹ್ಮಸ್ತ್ರ ಚಿತ್ರ ತಂಡದ ಜೊತೆ ಸೇರಿಕೊಂಡಿದ್ದರು. ಈಗೊಂದು ವಾರದ ಹಿಂದೆಯೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ವಿದೇಶಗಳಲ್ಲಿ ನೆರವೇರಿದೆ. ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ಭಾರತದಲ್ಲಿಯೇ ಚಾಲನೆ ಸಿಕ್ಕಿ ಆಲಿಯಾ, ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅಮಿತಾಭ್ ಜೊತೆ ನಟಿಸೋ ಅವಕಾಶ ಸಿಕ್ಕಿದ್ದರ ಬಗ್ಗೆ ಆಲಿಯಾ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿದ್ದಾರೆ.

    ಸೆಟ್‍ನಲ್ಲಿ ಅಮಿತಾಭ್ ರನ್ನು ಆಲಿಯಾ ಪ್ರೀತಿಯಿಂದ ಎಬಿ ಅಂತಲೇ ಸಂಬೋಧಿಸುತ್ತಾರಂತೆ. ಆಲಿಯಾರ ನಟನೆ ನೋಡಿ ಅಮಿತಾಭ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರಂತೆ. ಆಲಿಯಾ ಈ ಹಿಂದೆಯೂ ಸಾಕಷ್ಟು ಸಲ ತಾನು ಅಮಿತಾಭ್ ಜೊತೆ ನಟಿಸ ಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಇದೀಗ ಬ್ರಹ್ಮಾಸ್ತ್ರ ಮೂಲಕ ಅದು ಸಾಕಾರಗೊಂಡ ಖುಷಿ ಆಲಿಯಾ ಅವರದ್ದಾಗಿದೆ.