Tag: ಬ್ರಹ್ಮಾಸ್ತ್ರ ಸಿನಿಮಾ

  • ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಆಲಿಯಾ- ರಣ್‌ಬೀರ್ ಜೋಡಿ

    ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಆಲಿಯಾ- ರಣ್‌ಬೀರ್ ಜೋಡಿ

    ಬಾಲಿವುಡ್ ರಾಧೆ ಆಲಿಯಾ ಭಟ್ – ರಣ್‌ಬೀರ್ ಕಪೂರ್ (Ranbir Kapoor) ದಾಂಪತ್ಯ ಜೀವನಕ್ಕೆ ಕಾಲಿಟ್ಟು ಏಪ್ರಿಲ್ 14ಕ್ಕೆ ಒಂದು ವರ್ಷವಾಗಿದೆ. ಒಂದು ವರ್ಷ ಪೂರೈಸಿದ ಖುಷಿಯಲ್ಲಿ ನಟಿ ಆಲಿಯಾ, ಪತಿ ರಣ್‌ಬೀರ್ ಜೊತೆಗಿನ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಆಲಿಯಾ- ರಣ್‌ಬೀರ್ ಪ್ರೀತಿಗೆ ಬ್ರಹ್ಮಾಸ್ತ್ರ (Bhrahmastra) ಸಿನಿಮಾ ಸೆಟ್ ಕಾರಣವಾಯಿತು. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಪ್ರೇಮಾಂಕುರವಾಯಿತು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು. ಏ.14ಕ್ಕೆ ಮದುವೆ (Wedding) ಎಂಬ ಮುದ್ರೆ ಒತ್ತುವ ಮೂಲಕ ಫ್ಯಾನ್ಸ್ ಗುಡ್ ನ್ಯೂಸ್ ನೀಡಿದ್ದರು.

    ನವೆಂಬರ್‌ನಲ್ಲಿ ಆಲಿಯಾ-ರಣ್‌ಬೀರ್ ಪುತ್ರಿ ಎಂಟ್ರಿಯಾಯಿತು. ರಾಹಾ ಎಂದು ಮಗುವಿಗೆ ಹೆಸರನ್ನೀಟ್ಟಿದ್ದಾರೆ. ಮಗಳ ಆರೈಕೆಯ ಜೊತೆ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಟ್ವೀಟ್ ಗೆ ‘ಥ್ಯಾಂಕ್ಯೂ ಮೈ ಹೀರೋ’ ಎಂದ ಸಮಂತಾ

     

    View this post on Instagram

     

    A post shared by Alia Bhatt ???? (@aliaabhatt)

    ಆಲಿಯಾ ಮದುವೆ ವಾರ್ಷಿಕೋತ್ಸವ ಸಂಭ್ರಮದ ಫೋಟೋ ಶೇರ್ ಮಾಡಿ, ಹ್ಯಾಪಿ ಡೇ ಎಂದು ಅಡಿಬರಹ ನೀಡಿದ್ದಾರೆ. 1ನೇ ಫೋಟೋ ಹಳದಿ ಶಾಸ್ತ್ರದಾಗಿದೆ. 2ನೇಯದ್ದು ರಣ್‌ಬೀರ್, ಆಲಿಯಾಗೆ ಪ್ರಪೋಸ್ ಮಾಡ್ತಿರುವ ಫೋಟೋ, 3ನೇ ಕುಟುಂಬದ ಫಂಕ್ಷನ್‌ವೊಂದರಲ್ಲಿ ತೆಗೆದ ಸುಂದರ ಫೋಟೋಗಳಾಗಿದೆ. ‘ಬ್ರಹ್ಮಾಸ್ತ್ರ’ ಜೋಡಿಯ ಮದುವೆ ಆ್ಯನಿವರ್ಸರಿಗೆ ಕುಟುಂಬದವರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ‘ಬ್ರಹ್ಮಾಸ್ತ್ರ’ ಸೀಕ್ವೆಲ್ ರಿಲೀಸ್ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ನಿರ್ದೇಶಕ ಅಯಾನ್ ಮುಖರ್ಜಿ

    ‘ಬ್ರಹ್ಮಾಸ್ತ್ರ’ ಸೀಕ್ವೆಲ್ ರಿಲೀಸ್ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ನಿರ್ದೇಶಕ ಅಯಾನ್ ಮುಖರ್ಜಿ

    ಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ನಟನೆಯ ‘ಬ್ರಹ್ಮಾಸ್ತ್ರʼ ಸಿನಿಮಾ 2022ರಲ್ಲಿ ಸಿನಿಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. Bramastra Film ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ನಿರ್ದೇಶಕ ಅಯಾನ್ ಮುಖರ್ಜಿ (Ayan Mukerji) ಗುಡ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ: Exclusive: ನೀಲಿ ಚಿತ್ರದಲ್ಲಿ ಆಕ್ಟ್‌ ಮಾಡ್ತೀಯಾ ಎಂದು ಕೇಳಿದ್ರಾ ಹರ್ಷ? ಸ್ಪಷ್ಟನೆ ನೀಡಿದ ನಟ

    ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರʼ ಸಿನಿಮಾದಲ್ಲಿ ಆಲಿಯಾ- ರಣ್‌ಬೀರ್ ಲವ್ ಕೆಮಿಸ್ಟ್ರಿ ತೆರೆಯ ಮೇಲೆ ಕಮಾಲ್ ಮಾಡಿತ್ತು. ನಿಜ ಜೀವನದ ಅವರ ಲವ್ ಸ್ಟೋರಿಗೂ ‘ಬ್ರಹ್ಮಾಸ್ತ್ರʼ ಚಿತ್ರ ಕಾರಣವಾಗಿತ್ತು. ರಣ್‌ಬೀರ್ ಈ ಚಿತ್ರ, ಭಾರತದ ಮಾರುಕಟ್ಟೆಯಲ್ಲಿ 257 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಸೀಕ್ವೆಲ್ ಯಾವಾಗ ಬರುತ್ತೆ ಎಂದು ಎದುರು ನೋಡ್ತಿದ್ದ ಫ್ಯಾನ್ಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಅಯಾನ್ ಅಪ್‌ಡೇಟ್ ನೀಡಿದ್ದಾರೆ.

     

    View this post on Instagram

     

    A post shared by Ayan Mukerji (@ayan_mukerji)

    ಡೈರೆಕ್ಟರ್ ಅಯಾನ್ ಮುಖರ್ಜಿ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ‘ಬ್ರಹ್ಮಾಸ್ತ್ರ: ಪಾರ್ಟ್ 2’ ಸಿನಿಮಾ 2026ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಬ್ರಹ್ಮಾಸ್ತ್ರ: ಪಾರ್ಟ್ 3’ ಚಿತ್ರ 2027ರ ಡಿಸೆಂಬರ್‌ಗೆ ತೆರೆಕಾಣಲಿದೆ. ಅಂದರೆ ಪ್ರೇಕ್ಷಕರು ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಲು 3-4 ವರ್ಷ ಕಾಯಲೇಬೇಕಾಗಿದೆ.

    ರಶ್ಮಿಕಾ ಮಂದಣ್ಣ (Rashmika Mandanna) ಜೊತೆಗಿನ ‘ಅನಿಮಲ್’ (Animal) ಸಿನಿಮಾ ಆಗಸ್ಟ್ 11ಕ್ಕೆ ತೆರೆಗೆ ಬರಲಿದೆ. ಇನ್ನೂ ಮಗಳ ಜೊತೆ ಸಮಯ ಕಳೆಯುವ ದೃಷ್ಟಿಯಿಂದ ರಣ್‌ಬೀರ್ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಇದಾದ ಬಳಿಕ ‘ಬ್ರಹ್ಮಾಸ್ತ್ರʼ ಸೀಕ್ವೆಲ್ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಾರೆ.

  • ಪಿಂಕ್ ಕಲರ್ ಡ್ರೆಸ್‌ನಲ್ಲಿ ಗುಲಾಬಿಯಂತೆ ಮಿಂಚಿದ ಆಲಿಯಾ ಭಟ್

    ಪಿಂಕ್ ಕಲರ್ ಡ್ರೆಸ್‌ನಲ್ಲಿ ಗುಲಾಬಿಯಂತೆ ಮಿಂಚಿದ ಆಲಿಯಾ ಭಟ್

    ಬಾಲಿವುಡ್ ಬ್ಯೂಟಿ ಆಲಿಯಾ ಭಟ್, ಸಿನಿಮಾ ಮತ್ತು ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ `ಬ್ರಹ್ಮಾಸ್ತ್ರʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರುವ ಆಲಿಯಾ ಭಟ್ ಇದೀಗ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ತನ್ನ ಬೇಬಿ ಬಂಪ್ ತೋರಿಸಿದ್ದಾರೆ.

    ಬಿಟೌನ್ ರಾಧೆ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ನಟನೆಯ `ಬ್ರಹ್ಮಾಸ್ತ್ರʼ ಚಿತ್ರ ರಿಲೀಸ್‌ಗೆ ರೆಡಿಯಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ದಂಪತಿಗಳಿಬ್ಬರು ಬ್ಯುಸಿಯಾಗಿದ್ದಾರೆ. ಸದ್ಯ ಮುಂಬೈನಲ್ಲಿ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ ಪ್ರಚಾರದಲ್ಲಿ ಆಲಿಯಾ ಭಟ್ ಪಿಂಕ್ ಕಲರ್ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತಿ ರಣ್‌ಬೀರ್ ಜತೆ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ.

    ಬೇಬಿ ಬಂಪ್ ಲುಕ್‌ನಲ್ಲಿ ಆಲಿಯಾ ಪ್ರೆಗ್ನೆನ್ಸಿ ಗ್ಲೋ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಪಿಂಕ್ ಕಲರ್ ಟಾಪ್‌ಗೆ ಬ್ಲ್ಯಾಕ್ ಕೋಟ್ ಜತೆಗೆ ಲೆಗ್ಗಿಂಗ್ಸ್ ಹಾಕಿದ್ದಾರೆ. ಇನ್ನು ಚಿತ್ರದ ಟ್ರೈಲರ್, ಪೋಸ್ಟರ್ ಮೂಲಕ ಹವಾ ಎಬ್ಬಿಸಿರುವ `ಬ್ರಹ್ಮಾಸ್ತ್ರʼ ಇದೇ ಸೆಪ್ಟೆಂಬರ್ 9ಕ್ಕೆ ತೆರೆಗೆ ಬರಲಿದೆ.‌ ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

     

     

    View this post on Instagram

     

    A post shared by Viral Bhayani (@viralbhayani)

    ಇನ್ನು ರಣ್‌ಬೀರ್ ಕಪೂರ್ ಮತ್ತು ಆಲಿಯಾ ಪಾಲಿಗೆ ಈ ಚಿತ್ರ ಬಹಳ ವಿಶೇಷವಾಗಿದೆ. ರಣ್‌ಬೀರ್ ಕಪೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ಆಲಿಯಾ ಇಶಾ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದಲ್ಲಿ ಟ್ವೀಟ್ ಮಾಡಿ `ಬ್ರಹ್ಮಾಸ್ತ್ರ’ ಟ್ರೈಲರ್ ಹಂಚಿಕೊಂಡ ಆಲಿಯಾ ಭಟ್

    ಕನ್ನಡದಲ್ಲಿ ಟ್ವೀಟ್ ಮಾಡಿ `ಬ್ರಹ್ಮಾಸ್ತ್ರ’ ಟ್ರೈಲರ್ ಹಂಚಿಕೊಂಡ ಆಲಿಯಾ ಭಟ್

    ಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್‌ ಇದೀಗ ರಿಲೀಸ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಟ್ರೇಂಡಿಂಗ್‌ನಲ್ಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವ `ಬ್ರಹ್ಮಾಸ್ತ್ರ’ ಕನ್ನಡದಲ್ಲೂ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇನ್ನು ಕನ್ನಡದಲ್ಲಿ ಟ್ವೀಟ್ ಮಾಡಿ `ಬ್ರಹ್ಮಾಸ್ತ್ರ’ ಟ್ರೈಲರ್ ಅನ್ನು ಆಲಿಯಾ ಭಟ್ ಹಂಚಿಕೊಂಡಿದ್ದಾರೆ.

    ಆಯಾನ್ ಮುಖರ್ಜಿ ನಿರ್ದೇಶನದ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್‌ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಭಿನ್ನ ಶೈಲಿಯಲ್ಲಿ ಮೂಡಿಬಂದಿರುವ `ಬ್ರಹ್ಮಾಸ್ತ್ರ’ ಪ್ರೀತಿ, ಬೆಳಕು, ಬೆಂಕಿಯ ರೂಪಗಳೇ `ಬ್ರಹ್ಮಾಸ್ತ್ರ’ ರೂಪದಲ್ಲಿ ಈ ಟ್ರೈಲರ್ ಮೂಡಿ ಬಂದಿದೆ. ಎಲ್ಲಾ ಅಸ್ತ್ರಗಳ ದೇವರು `ಬ್ರಹ್ಮಾಸ್ತ್ರ’ ಎಂಬ ಅರ್ಥದಲ್ಲಿ ಭಿನ್ನವಾಗಿ ಟ್ರೈಲರ್‌ ತೋರಿಸಲಾಗಿದೆ. `ಬ್ರಹ್ಮಾಸ್ತ್ರ’ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದೆ. ಇದೀಗ ಕನ್ನಡದಲ್ಲೂ `ಬ್ರಹ್ಮಾಸ್ತ್ರ’ ಟ್ರೈಲರ್ ಟ್ರೇಡಿಂಗ್‌ನಲ್ಲಿದೆ. ನಟಿ ಆಲಿಯಾ, ನಮ್ಮೆಲ್ಲರ ಹೃದಯದ ಭಾಗವೇ ಬ್ರಹ್ಮಾಸ್ತ್ರ ಎಂದು ಟ್ವೀಟ್ ಮಾಡಿ, ಟ್ರೈಲರ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್

    `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬ್ರಹ್ಮಾಸ್ತ್ರ ಚಿತ್ರಕ್ಕೆ ಕನ್ನಡ ಡೈಲಾಗ್‌ಗಳನ್ನು ಕನ್ನಡದ ನಟ ಮಾಸ್ತಿ ಮಂಜು ಬರೆದಿದ್ದಾರೆ. ಇನ್ನು `ಬ್ರಹ್ಮಾಸ್ತ್ರ’ ಕನ್ನಡದಲ್ಲೂ ತೆರೆ ಕಾಣ್ತಿದ್ದು, ಟ್ರೈಲರ್ ಅನ್ನು ಕನ್ನಡದಲ್ಲಿ ಬರೆದು ಶೇರ್ ಮಾಡಿರೋದಕ್ಕೆ ಅಭಿಮಾನಿಗಳಿಂದ ಆಲಿಯಾ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಕೂಡ ಕನ್ನಡದಲ್ಲಿ `ಬ್ರಹ್ಮಾಸ್ತ್ರ’ ಚಿತ್ರ ಬರಲಿದೆ ಅಂತಾ ಕನ್ನಡದಲ್ಲಿ ಟ್ವೀಟ್ ಮಾಡಿದ್ದರು. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ್, ಮೌನಿ ರಾಯ್ ನಟಿಸಿದ್ದಾರೆ. 300 ಕೋಟಿ ವೆಚ್ಚದ ಈ ಸಿನಿಮಾ ಸೆಪ್ಟೆಂಬರ್ 9ಕ್ಕೆ ತೆರೆಗೆ ಅಪ್ಪಳಿಸಲಿದೆ.

  • ರಣ್‌ಬೀರ್‌ ನಟನೆಯ `ಬ್ರಹ್ಮಾಸ್ತ್ರ’ ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ ಸಾಥ್

    ರಣ್‌ಬೀರ್‌ ನಟನೆಯ `ಬ್ರಹ್ಮಾಸ್ತ್ರ’ ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ ಸಾಥ್

    ಬಾಲಿವುಡ್‌ನ ನಿರೀಕ್ಷಿತ ಸಿನಿಮಾ `ಬ್ರಹ್ಮಾಸ್ತ್ರ’ ಸಾಕಷ್ಟು ವಿಚಾರಗಳಿಂದ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಇದೀಗ ಚಿತ್ರದ ಕುರಿತು ಹೊಸ ಅಪ್‌ಡೇಟ್‌ವೊಂದು ಹೊರ ಬಿದ್ದಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಬ್ರಹ್ಮಾಸ್ತ್ರ ಚಿತ್ರದ ಕುರಿತು ಬಿಗ್ ನ್ಯೂಸ್‌ವೊಂದನ್ನು ರಿವೀಲ್ ಮಾಡಿದ್ದಾರೆ. ಟಾಲಿವುಡ್‌ನ ಮೆಗಾಸ್ಟಾರ್ `ಬ್ರಹ್ಮಾಸ್ತ್ರ’ ಚಿತ್ರದ ಭಾಗಿವಾಗಿದ್ದು, ಇದೀಗ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

    ಆಯಾನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಅನ್ನು ಜೂನ್ 15ಕ್ಕೆ ಚಿತ್ರತಂಡ ರಿಲೀಸ್ ಮಾಡಲಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರಕ್ಕೆ ಸಾಥ್ ನೀಡಿರುವ ವಿಚಾರವನ್ನ ಟ್ವೀಟ್ ಮೂಲಕ ರಾಜಮೌಳಿ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಸೋನಮ್ ಕಪೂರ್ ಬೇಬಿ ಬಂಪ್

    ಸೌತ್ ಸೂಪರ್ ಸ್ಟಾರ್ ಚಿರಂಜೀವಿ `ಬ್ರಹ್ಮಾಸ್ತ್ರ’ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಚಿತ್ರದ ಟ್ರೇಲರ್‌ಗಾಗಿ ತೆಲುಗಿನಲ್ಲಿ ತಮ್ಮ ವಾಯ್ಸ್ ನೀಡಿದ್ದಾರೆ. `ಬ್ರಹ್ಮಾಸ್ತ್ರ’ಕ್ಕೆ ತಮ್ಮ ಖಡಕ್ ವಾಯ್ಸ್ ಮೂಲಕ ಮೋಡಿ ಮಾಡಿದ್ದಾರೆ. ಜೂನ್ 15ಕ್ಕೆ ರಿಲೀಸ್ ಆಗಲಿರುವ ಟ್ರೇಲರ್‌ನಲ್ಲಿ ನೋಡಬಹುದಾಗಿದೆ. ಚಿತ್ರತಂಡವನ್ನ ಭೇಟಿಯಾಗಿ, ಟ್ರೇಲರ್‌ಗೆ ವಾಯ್ಸ್ ನೀಡಿರುವುದಲ್ಲದೇ ಸೂಪರ್ ಸ್ಟಾರ್ಸ್‌ ನಟಿಸಿರುವ ಈ ಚಿತ್ರಕ್ಕೆ ಚಿರಂಜೀವಿ ಶುಭ ಹಾರೈಸಿ ಬಂದಿದ್ದಾರೆ. ಒಟ್ನಲ್ಲಿ ಸೂಪರ್ ಗುಡ್ ನ್ಯೂಸ್ ಕೇಳಿರುವ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.