ದಕ್ಷಿಣದ ಬಹುತೇಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ, ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ (Brahmanandam) ಅವರ ಜೀವನ ಕುರಿತಾದ ಪುಸ್ತಕ ಬಿಡುಗಡೆಯಾಗಿದೆ. ಈ ಪುಸ್ತಕಕ್ಕೆ ‘ನೇನು’ (Nenu) ಎಂದು ಹೆಸರಿಡಲಾಗಿದ್ದು, ಈ ಪುಸ್ತಕಗಳನ್ನು ಖ್ಯಾತನಟ ಚಿರಂಜೀವಿ ಸೇರಿದಂತೆ ಹಲವರಿಗೆ ಸ್ವತಃ ಬ್ರಹ್ಮಾನಂದಂ ಅವರೇ ನೀಡಿದ್ದಾರೆ.
ಸಾವಿರಾರು ಚಿತ್ರಗಳಲ್ಲಿ ನಟಿಸಿದ ಬ್ರಹ್ಮಾನಂದಂ ಅವರ ಜೀವನ ಬಲು ರೋಚಕವಾದದ್ದು. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಹಾಸ್ಯ ಕಲಾವಿದರಲ್ಲಿ ಮೇರುನಟರಾಗಿ ಗುರುತಿಸಿಕೊಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಏರಿಳಿತವನ್ನೂ ಕಂಡವರು. ಹಾಗಾಗಿ ಸಹಜವಾಗಿ ಪುಸ್ತಕದ ಬಗ್ಗೆ ಕುತೂಹಲ ಮೂಡಿದೆ.
ಮೊನ್ನೆಯಷ್ಟೇ ಮೆಗಾಸ್ಟಾರ್ ಚಿರಂಜೀವಿ (Chiranjeevi) ಮತ್ತು ಅವರ ಪುತ್ರ ರಾಮ್ ಚರಣ್ ಭೇಟಿ ಮಾಡಿರುವ ಬ್ರಹ್ಮಾನಂದ ತಮ್ಮ ಬಯೋಗ್ರಫಿ ಪುಸ್ತಕವನ್ನು (book) ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಕನ್ನಡದ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ರಾಜ್ (Prashanth Raj) ಅವರ ‘ಕಿಕ್’ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಪೋಸ್ಟರ್ ವೊಂದನ್ನು ರಿಲೀಸ್ (Release) ಮಾಡಿರುವ ಪ್ರಶಾಂತ್ ರಾಜ್, ಸೆಪ್ಟಂಬರ್ 1 ರಂದು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಸಿನಿಮಾ ನಿರೀಕ್ಷೆ ಕೂಡ ಮೂಡಿಸಿದೆ.
ತಮ್ಮ ಚೊಚ್ಚಲು ತಮಿಳು ಚಿತ್ರಕ್ಕೆ ಕಿಕ್ (Kick) ಎಂದು ಹೆಸರಿಟ್ಟು ಕುತೂಹಲ ಮೂಡಿಸಿದ್ದರು ಪ್ರಶಾಂತ್ ರಾಜ್. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಕನ್ನಡದ ಹಲವು ಪ್ರತಿಭೆಗಳನ್ನು ತಮ್ಮೊಂದಿಗೆ ತಮಿಳಿಗೂ ಕರೆದುಕೊಂಡು ಹೋಗಿದ್ದಾರೆ ನಿರ್ದೇಶಕರು. ಕಾಮಿಡಿ ಸಿನಿಮಾಗಳ ಮೂಲಕ ತಮಿಳಿನ ಪ್ರೇಕ್ಷಕರ ಮನ ಗೆದ್ದಿರುವ ಸಂತಾನಂ (Santhanam) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇದನ್ನೂ ಓದಿ:ಮಾಲಾಶ್ರೀ ಕೋರಿಕೆಯನ್ನ ಈಡೇರಿಸಿದ ದೈವ- ಕೊರಗಜ್ಜನ ಆದಿಸ್ಥಳಕ್ಕೆ ನಟಿ ಭೇಟಿ
ಬಸಣ್ಣಿ ಬಾ ಹಾಡಿನ ಖ್ಯಾತಿಯ ತಾನ್ಯ ಹೋಪ್ (Tanya Hope) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಪ್ಪದ ಬೆಡಗಿ ರಾಗಿಣಿ (Ragini) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಹೆಸರಾಂತ ತಾರಾ ಬಳಗವೇ ಸಿನಿಮಾದಲ್ಲಿದೆ. ಸಿನಿಮಾದ ಮತ್ತೊಂದು ವಿಶೇಷ ಎಂದರೆ, ಕಾಮಿಡಿಗೆ ಒತ್ತು ನೀಡಲಾಗಿದೆ. ಹೆಸರಾಂತ ಕಾಮಿಡಿ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಈ ಕುರಿತು ಮಾತನಾಡಿದ ಪ್ರಶಾಂತ್ ರಾಜ್, ‘ಬ್ರಹ್ಮಾನಂದಂ ನನ್ನಿಷ್ಟದ ನಟ. ಈ ಸಿನಿಮಾದಲ್ಲಿ ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಸಾಧು ಕೋಕಿಲಾ (Sadhu Kokila) ಕೂಡ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದ ಮೂಲಕ ಫ್ರೆಶ್ ಆಗಿರುವ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ’ ಅಂತಾರೆ.
ಕನ್ನಡದ ಖ್ಯಾತ ಯುವ ನಿರ್ದೇಶಕ ಪ್ರಶಾಂತ್ ರಾಜ್ (Prashanth Raj) ಸದ್ದಿಲ್ಲದೇ ತಮಿಳು ಸಿನಿಮಾ ರಂಗಕ್ಕೆ ಹಾರಿ, ಚಿತ್ರದ ಟೈಟಲ್ ಅನ್ನು ಅನಾವರಣಗೊಳಿಸುವ ಮೂಲಕ ಸಖತ್ ಸದ್ದು ಮಾಡಿದ್ದಾರೆ. ಇದೀಗ ಮತ್ತೊಂದು ಕಾರಣಕ್ಕಾಗಿ ಈ ಸಿನಿಮಾ ಸುದ್ದಿಗೆ ಬಂದಿದೆ. ಈ ಚಿತ್ರದಲ್ಲಿ ತೆಲುಗಿನ ಖ್ಯಾತ ಕಾಮೆಡಿಯನ್ ಬ್ರಹ್ಮಾನಂದಂ (Brahmanandam) ಅವರು ನಟಿಸುತ್ತಿದ್ದು, ವಾಲಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದೊಂದು ವಿಜ್ಞಾನಿಯ ಪಾತ್ರವಾಗಿದೆಯಂತೆ.
ತಮ್ಮ ಚೊಚ್ಚಲು ತಮಿಳು ಚಿತ್ರಕ್ಕೆ ಕಿಕ್ (Kick) ಎಂದು ಹೆಸರಿಟ್ಟಿರುವ ಪ್ರಶಾಂತ್ ರಾಜ್, ಕನ್ನಡದ ಹಲವು ಪ್ರತಿಭೆಗಳನ್ನು ತಮ್ಮೊಂದಿಗೆ ತಮಿಳಿಗೂ ಕರೆದುಕೊಂಡು ಹೋಗಿದ್ದಾರೆ. ಕಾಮಿಡಿ ಸಿನಿಮಾಗಳ ಮೂಲಕ ತಮಿಳಿನ ಪ್ರೇಕ್ಷಕರ ಮನ ಗೆದ್ದಿರುವ ಸಂತಾನಂ (Santhanam) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಬಸಣ್ಣಿ ಬಾ ಹಾಡಿನ ಖ್ಯಾತಿಯ ತಾನ್ಯ ಹೋಪ್ (Tanya Hope) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಪ್ಪದ ಬೆಡಗಿ ರಾಗಿಣಿ (Ragini) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್
ಈ ಕುರಿತು ಮಾತನಾಡಿದ ಪ್ರಶಾಂತ್ ರಾಜ್, ‘ಬ್ರಹ್ಮಾನಂದಂ ನನ್ನಿಷ್ಟದ ನಟ. ಈ ಸಿನಿಮಾದಲ್ಲಿ ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಸಾಧು ಕೋಕಿಲಾ (Sadhu Kokila) ಕೂಡ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದ ಮೂಲಕ ಫ್ರೆಶ್ ಆಗಿರುವ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ’ ಅಂತಾರೆ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
Live Tv
[brid partner=56869869 player=32851 video=960834 autoplay=true]
ಡಾ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 6 ತಿಂಗಳಾದರೂ ಅವರು ಎಲ್ಲರ ಮನದಲ್ಲಿ ಅಜರಾಮರರಾಗಿದ್ದಾರೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳು ಅವರಿಗೋಸ್ಕರ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತ ಇರುತ್ತಾರೆ. ಇವರಿಗೆ ಸಿನಿ ಕ್ಷೇತ್ರದ ಎಲ್ಲ ಭಾಷೆಯಲ್ಲಿಯೂ ಸ್ನೇಹಿತ ಬಂಧುಗಳು ಹೆಚ್ಚು ಇದ್ದಾರೆ. ಈ ಹಿನ್ನೆಲೆ ಅವರ ಸಮಾಧಿ ಮತ್ತು ಮನೆಗೆ ಹಲವು ಗಣ್ಯರು ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವದ ಮಾತುಗಳನ್ನು ಹೇಳುತ್ತಾರೆ.
ಟಾಲಿವುಡ್ ಸೂಪರ್ ಸ್ಟಾರ್, ಕಾಮಿಡಿ ಕಿಂಗ್ ಬ್ರಹ್ಮಾನಂದಂ ಹಾಗೂ ಅಲಿ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಅಪ್ಪು ಜೊತೆಗೆ ಕಳೆದ ದಿನಗಳನ್ನು ಬ್ರಹ್ಮಾನಂದಂ ಅಪ್ಪು ಕುಟುಂಬದೊಂದಿಗೆ ಸ್ಮರಿಸಿಕೊಂಡಿದ್ದಾರೆ. ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಬ್ರಹ್ಮಾನಂದಂ ಹಾಗೂ ಅಲಿ ಸಾಂತ್ವಾನದ ಮಾತುಗಳನ್ನ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ
ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‍ಕುಮಾರ್, ರಾಮ್ ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್, ಯುವ ರಾಜ್‍ಕುಮಾರ್ ಸಹ ಇದ್ದರು. ಅವರೊಂದಿಗೂ ಹಲವು ಹೊತ್ತು ಮಾತುಕತೆ ನಡೆಸಿದ್ದಾರೆ.
ಟಾಲಿವುಡ್ ಹಾಸ್ಯನಟರಾದ ಅಲಿ ಹಾಗೂ ಬ್ರಹ್ಮಾನಂದಂ ಇಬ್ಬರೂ ಪವರ್ ಜೊತೆ ಒಳ್ಳೆಯ ಸಂಬಂಧವೊಂದಿದ್ದರು. ಅಲ್ಲದೇ ಬ್ರಹ್ಮಾನಂದಂ ಅವರು ಅಪ್ಪು ಜೊತೆ ‘ನಿನ್ನಿಂದಲೇ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಇವರ ಪಾತ್ರ ಚಿಕ್ಕದಿದ್ದರೂ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ಸನ್ನು ಕಂಡಿದ್ದರು.
ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಇಂದು ಸಹ ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಬ್ರಹ್ಮಾನಂದಂ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೊನ್ನಪ್ಪನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬ್ರಹ್ಮಾನಂದಂ ಕಾರನ್ನು ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಹೋಬಳಿಯ ಹಳೇಹಳ್ಳಿ, ಪುರ, ಜರಬಂಡಹಳ್ಳಿ ಸೇರಿದಂತೆ ಮಂಚೇನಹಳ್ಳಿ ಪಟ್ಟಣದಲ್ಲಿ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಬ್ರಹ್ಮಾನಂದಂ, ಎಲ್ಲರಿಗೂ ನಮಸ್ಕಾರ, ಇಂದು ನಾನು ಹೈದರಾಬಾದಿನಿಂದ ಇಲ್ಲಿವರೆಗೂ ಬಂದಿದ್ದೇನೆ ಎಂದರೆ ಅದಕ್ಕೆ ಸುಧಾಕರ್ ಅವರೇ ಕಾರಣ. ಬಿಜೆಪಿ ಅಭ್ಯರ್ಥಿ ಸುಧಾಕರ್ ಬುದ್ಧಿವಂತರು ಮತ್ತು ವಿದ್ಯಾವಂತರು. ಹೀಗಾಗಿ ಜನರಿಗಾಗಿ ಯಾವ ಯಾವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿದಿರುತ್ತದೆ. ಸುಧಾಕರ್ ಅವರು ನನ್ನ ಒಳ್ಳೆಯ ಸ್ನೇಹಿತ. ಅವರು ತುಂಬಾ ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಹೀಗಾಗಿ ಅವರಿಗೆ ನಿಮ್ಮ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ತಮ್ಮ ಸಿನಿಮಾ ಸ್ಟೈಲಿನಲ್ಲಿ ಅಭಿಮಾನಿಗಳಿಗಾಗಿ ಡೈಲಾಗ್ ಹೇಳಿದ್ದಾರೆ. ಈ ವೇಳೆ ಹಾಸ್ಯ ನಟ ಬ್ರಹ್ಮಾನಂದಂ ನೋಡಲು ಜನರು ಮುಗಿಬಿದ್ದಿದ್ದರು. ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು.
ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಪ್ರಚಾರಕ್ಕಾಗಿ ಚಂದನವನದ ನಟ ನಟಿಯರು ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಸ್ಯಾಂಡಲ್‍ವುಡ್ ನಟ ನಟಿಯರ ಜೊತೆಗೆ ಟಾಲಿವುಡ್‍ನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಸಹ ಸಾಥ್ ನೀಡಲಿದ್ದು, ಕ್ಷೇತ್ರದಲ್ಲಿ ಸುಧಾಕರ್ ಪರ ಶನಿವಾರ ಮತಯಾಚನೆ ಮಾಡಲಿದ್ದಾರೆ.
ಟಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರ ನಟನೆಗೆ ಅಭಿಮಾನಿಗಳು ನಕ್ಕು ನಕ್ಕು ಸುಸ್ತಾಗುತ್ತಾರೆ. ಬ್ರಹ್ಮಾನಂದಂ ಅವರ ಹಾಸ್ಯ ನಟನೆಗೆ ಮನಸೋಲದವರೇ ಇಲ್ಲ. ಇಂತಹ ಖ್ಯಾತ ನಟ ಹಾಸ್ಯ ಕಲಾವಿದ ಬ್ರಹ್ಮಾನಂದಂ ನಾಳೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಬ್ರಹ್ಮಾನಂದಂ ಅವರು ಶನಿವಾರ ಬೆಳಗ್ಗೆ 9 ಗಂಟೆಗೆ ಸುಧಾಕರ್ ಸ್ವಗ್ರಾಮ ಪೇರೇಸಂದ್ರ ಕ್ರಾಸ್‍ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಳಿಕ 9 ಗಂಟೆ 45 ನಿಮಿಷಕ್ಕೆ ಕಮ್ಮಗುಟ್ಟಹಳ್ಳಿ ಕ್ರಾಸ್, 10 ಗಂಟೆ 30 ನಿಮಿಷಕ್ಕೆ ಮಂಡಿಕಲ್ ಗ್ರಾಮ ಸೇರಿದಂತೆ 11 ಗಂಟೆಗೆ ಚಿಕ್ಕಪೈಲಗುರ್ಕಿಯ ಸುಧಾಕರ್ ಅವರ ಮನೆ ದೇವರು ಚನ್ನಕೇಶವಸ್ವಾಮಿ ದೇವಾಲಯದ ಬಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಸ್ಯಾಂಡಲ್‍ವುಡ್ ನಟಿ-ನಟಿಯರಾದ ಹರಿಪ್ರಿಯಾ, ಹರ್ಷಿಕಾ ಪೂಣಚ್ಚ, ನಟರಾದ ದಿಗಂತ್ ಹಾಗೂ ಭುವನ್ ಅವರು ಕಳೆದ ಒಂದು ವಾರದಿಂದ ಸುಧಾಕರ್ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಮನೆ ಮೆನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈಗ ಸ್ಯಾಂಡಲ್‍ವುಡ್ ನಟ-ನಟಿಯರಿಗೆ ಬ್ರಹ್ಮಾನಂದಂ ಸಹ ಸಾಥ್ ನೀಡುತ್ತಿದ್ದಾರೆ.
ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು. ಹೀಗಾಗಿ ಈ ಬಾರಿಯೂ ತೆಲುಗು ಭಾಷಿಕ ಮತದಾರರ ಮನಸೆಳೆಯುವುದಕ್ಕೆ ಸುಧಾಕರ್ ಅವರು ಮುಂದಾಗಿದ್ದಾರೆ.
ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.