Tag: ಬ್ರಹ್ಮಾಂಡ ಗುರೂಜಿ

  • ಕಾಂಗ್ರೆಸ್‌ ಅವಧಿ ಇದೇ ಕೊನೆ, ಆಮೇಲೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ: ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ

    ಕಾಂಗ್ರೆಸ್‌ ಅವಧಿ ಇದೇ ಕೊನೆ, ಆಮೇಲೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ: ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ

    – ಕರ್ನಾಟಕ ಮೂರು ಭಾಗ, ಭಾರತ ಎರಡು ಭಾಗ ಆಗುತ್ತೆ
    – ಮುಂದೆ ಬ್ರಹ್ಮಚಾರಿ ಪ್ರಧಾನಿ ಆಗದಿದ್ರೆ ಜಗತ್ತಿಗೆ ಶನಿ ಪ್ರವೇಶ ಆಗುತ್ತೆ
    – ಹಾಸನಾಂಬ ದೇವಿ ದರ್ಶನ ಪಡೆದು ಬ್ರಹ್ಮಾಂಡ ಗುರೂಜಿ ಭವಿಷ್ಯ

    ಹಾಸನ: ಕಾಂಗ್ರೆಸ್‌ (Congress) ಅವಧಿ ಇದೇ ಕೊನೆ, ಇದಾದ್ಮೇಲೆ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ ಅಂತ ಬ್ರಹ್ಮಾಂಡ ಗುರೂಜಿ (Brahmanda Guruji) ನರೇಂದ್ರ ಬಾಬು ಶರ್ಮ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

    ಹಾಸನಾಂಬ (Hasanamba) ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ

    ಇದು ಕೊನೆಯ ಹಂತ, ಮುಂದಿನ ದಿನಗಳಲ್ಲಿ ಪ್ರಳಯದ ಆಗುತ್ತೆ. ಉತ್ತರ ಭಾರತ, ಉತ್ತರ ಕರ್ನಾಟಕ ಭಾಗ ಮುಳುಗಡೆ ಆಗಲಿವೆ. ಕರ್ನಾಟಕ ಮೂರು ಭಾಗ, ಭಾರತ ದೇಶ ಎರಡು ಭಾಗ ಆಗುತ್ತದೆ. ಇದಕ್ಕೆಲ್ಲ ಮುನ್ಸೂಚನೆಯಾಗಿದೆ ಇದೇ ಕೊನೆಯ ವಿಶೇಷವಾದ ಸಂದರ್ಭವಾಗಿದ್ದು ಮುಂದೆ ಆಗುವ ಉಗ್ರಸ್ವರೂಪದ ಬಗ್ಗೆ ತಾಯಿ ಸೂಚನೆ ಕೊಟ್ಟಿದ್ದಾಳೆ ಎಂದಿದ್ದಾರೆ. ಇದನ್ನೂ ಓದಿ: ಮೈಸೂರಿನ ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರನ ಕಾಟ ಹೆಚ್ಚಾಗಿದೆ: ಪ್ರತಾಪ್ ಸಿಂಹ ಆರೋಪ

    ಕರ್ನಾಟಕ ಇದಕ್ಕೆ ಹೆಸರುವಾಸಿಯಾಗುತ್ತೆ
    ಎಲ್ಲಾ ರಾಜಕೀಯದವರು ಗೊಂದಲದಲ್ಲಿ ಸಿಲುಕಲಿದ್ದು ಬಹಳಷ್ಟು ಜನ ಕಿತ್ತಾಡುತ್ತಾರೆ. ಸ್ಥಾನ ಪಲ್ಲಟ ಮಾಡಿಕೊಳ್ಳಲಿದ್ದಾರೆ. ಇಡೀ ಜಗತ್ತಿನ ಇತಿಹಾಸ ಪುಟದಲ್ಲಿ ಕರ್ನಾಟಕ ರಾಜ್ಯ (Karnataka state) ಕುರ್ಚಿಗಾಗಿ ಒಡೆದಾಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗುತ್ತೆ. ಸಂಕ್ರಾಂತಿ ಒಳಗಡೆ ಕೇತು ಮತ್ತು ಸೂರ್ಯ ರಾಹು ಜೊತೆಗೆ ಜರುಗಲಿದ್ದು ಬಹಳ ದೊಡ್ಡ ಗಲಾಟೆಗಳು ನಡೆಯುತ್ತವೆ. ಇದರ ಜೊತೆಗೆ ಸ್ಥಾನ ಪಲ್ಲಟ, ಪಕ್ಷಪಾತ, ಭೇದ ಭಾವ ಆಗಲಿದೆ ಎಂದರು. ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ಗೆದ್ರೆ ಪ್ರತಿ ಮನೆಗೆ ಉದ್ಯೋಗ ಗ್ಯಾರಂಟಿ: ಸಮರ್ಥಿಸಿದ ಪರಮೇಶ್ವರ್

    75 ವರ್ಷ ತುಂಬಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೇವರು ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ. ಮೋದಿ ಅವರು ದೇಶದ ರಕ್ಷಾ ಕವಚವಾ ಆಗಿದ್ದಾರೆ. ಮುಂದೆ ಒಬ್ಬ ಸನ್ಯಾಸಿ ದೇಶದ ಪ್ರಧಾನಿ ಆಗಲಿದ್ದು, ದೇಶದ ಚುಕ್ಕಾಣಿ ಹಿಡಿಯುತ್ತಾರೆ. ಬ್ರಹ್ಮಚಾರಿ ಪ್ರಧಾನಿ ಆಗದಿದ್ದರೆ ಇಡೀ ಜಗತ್ತಿಗೆ ಶನಿ ಪ್ರವೇಶ ಆಗುತ್ತೆ ಎಂದು ಆತಂಕಕಾರಿ ಭವಿಷ್ಯ ನುಡಿದರು.

    ರಾಜಕೀಯದವರು ಇನ್ಮೇಲೆ ಹಿಟ್ಲರ್ ರೂಲ್ ತರಲಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರು ಆರೋಗ್ಯ ಕ್ಷೀಣಿಸದಂತೆ ನೋಡಿಕೊಳ್ಳಬೇಕು. ಅಲ್ಲದೇ ಕಾಂಗ್ರೆಸ್‌ ಅಧಿಕಾರ ಅವಧಿ ಇದೇ ಕೊನೆ, ಮುಂದೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ. ಜನರು ಆರೋಗ್ಯ ನೋಡಿಕೊಳ್ಳಬೇಕು. ಜಲಗಂಡಾಂತರ ಸಂಭವಿಸಲಿದ್ದು, ಘಟಪ್ರಭ, ಮಲಪ್ರಭಾ, ಗೋದಾವರಿ ನದಿಗಳು ದೇಶ ಎರಡು ಭಾಗ ಮಾಡುವಷ್ಟು ತುಂಬುತ್ತೆ ಎಂದು ಹೇಳಿದರು. ಇದನ್ನೂ ಓದಿ: ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

    ಇನ್ನೂ ಹಾಸನಾಂಬ ಕುರಿತು ಮಾತನಾಡಿ, ಅಮ್ಮನವರು ಇಲ್ಲಿ ಇರೋದು ಇದೇ ಕೊನೆ ವರ್ಷ. ಮುಂದಿನ ವರ್ಷದಿಂದ ಇಲ್ಲಿ ಇರಲ್ಲ. ಶಿವನ ಶಕ್ತಿ ಒಂದು ಕಡೆ ಸೇರುತ್ತೆ. ಕೊನೆಯ ಅವಧಿಯಲ್ಲಿ ದರ್ಶನ ಮಾಡಿದ್ದೇವೆ ಎಂದು ತಿಳಿಸಿದರು.

  • ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಲೀಲಾವತಿ: ಬ್ರಹ್ಮಾಂಡ ಗುರೂಜಿ

    ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಲೀಲಾವತಿ: ಬ್ರಹ್ಮಾಂಡ ಗುರೂಜಿ

    ಬೆಂಗಳೂರು: ಆ ಕಾಲದಲ್ಲಿ ಲೀಲಾವತಿ (Leelavathi) ಅವರು ನಟ ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಹೇಳಿದರು.

    ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಡಾ.ರಾಜ್‌ಕುಮಾರ್‌, ಉದಯಕುಮಾರ್‌ ಅವರಿಂದ ಹಿಡಿದು ಅನೇಕರಿಗೆ ಮದ್ರಾಸ್‌ ಮೂಲಕೇಂದ್ರವಾಗಿತ್ತು. ಮಹಾಬಲಿಪುರದಲ್ಲಿ 10 ಎಕರೆ ಜಾಗ ತೆಗೆದುಕೊ ಅಂತಾ ಆಗ ರಜನಿಕಾಂತ್‌ (Rajinikanth) ಅವರಿಗೆ ಲೀಲಾವತಿ ಅಮ್ಮನವರು ಹೇಳಿದ್ದರು. ಆಗ ನಾವು ಅಲ್ಲೇ ಇದ್ದೆವು. ದ್ವಾರಕೀಶ್‌ ಚಿತ್ರ ಶೂಟಿಂಗ್‌ ನಡೆಯುತ್ತಿತ್ತು. ಆಗ ರಜನಿಕಾಂತ್‌ ನನ್ನ ಹತ್ತಿರ ದುಡ್ಡಿಲ್ಲ ಎಂದಾಗ, ಸ್ವತಃ ತಾವೇ ದುಡ್ಡುಕೊಟ್ಟು ರಜನಿಕಾಂತ್‌ಗೆ ಜಮೀನು ಖರೀದಿಸಿಕೊಟ್ಟಿದ್ದರು. ನಂತರ ಲೀಲಾವತಿ ಅವರಿಗೆ ರಜನಿಕಾಂತ್‌ ಹಣ ವಾಪಸ್‌ ಮಾಡಿದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಮೂರು ದಿನಗಳ ಹಿಂದಷ್ಟೇ ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್ ಪಡೆದಿದ್ದರು ಲೀಲಾವತಿ

    ಆ ಕಾಲದಲ್ಲಿ ಒಬ್ಬ ಮನುಷ್ಯ ನಮ್ಮವನು ಬೆಳೆಯುತ್ತಿದ್ದಾನೆ ಎಂದಾಗ ಸ್ಫೂರ್ತಿ ತುಂಬುವ ಕೆಲವನ್ನು ಒಬ್ಬ ಹೆಂಗಸಾಗಿ (ಲೀಲಾವತಿ) ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಕೋಟ್ಯಂತರ ಹಣ ಗಳಿಸುವ ಪುರುಷ ಕಲಾವಿದರು, ಪೋಷಕ ಕಲಾವಿದರಿಗೆ ಸಹಾಯ ಮಾಡಬಹುದು. ಇವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದರೆ ಬಹಳ ಕಷ್ಟ ಎಂದರು.

    ಲೀಲಾವತಿ ಅವರು ಹಳೇ ಪೋಷಕ ನಟರು, ಸಹಕಲಾವಿದರು, ಹಾಸ್ಯ ನಟರಿಗೆ ಸಹಾಯ ಆಗಲಿ ಅಂತ ಪಿಂಚಣಿ ರೂಪದಲ್ಲಿ ಹಣ ಕೊಡುತ್ತಿದ್ದರು. ತಮಿಳುನಾಡಿನಲ್ಲಿ 30 ಮಂದಿ ಹಳೆ ಕಲಾವಿದರಿಗೆ ಊಟಕ್ಕೂ ಗತಿ ಇರಲಿಲ್ಲ. ಅವರಿಗೆ ಆಶ್ರಯವಾಗಿದ್ದವರು ಲೀಲಾವತಿ ಅವರು. ಆ ಮಹಿಳೆ ತನಗೆ ಇಲ್ಲದಿದ್ದರೂ ಪರವಾಗಿಲ್ಲ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು. ಇದನ್ನೂ ಓದಿ: ಲೀಲಾವತಿ ಮಗನಾಗಿ ನಟಿಸಿದ್ದೇ ನನ್ನ ಭಾಗ್ಯ: ದ್ವಾರಕೀಶ್

    ಕಲಾವಿದರ ಸಂಘದಲ್ಲಿ ಎಷ್ಟೋ ಜನಕ್ಕೆ ದಾರಿದೀಪ, ಸ್ಪೂರ್ತಿಯಾಗಿ ಹಣ ಕೊಟ್ಟಿರುವವರು ಲೀಲಾವತಿ ಅಮ್ಮ. ಲೀಲಾವತಿ ಅವರ ಹೆಸರಿನಲ್ಲಿ ಒಂದು ಸ್ಮಾರಕ ಕಟ್ಟಬೇಕು ಎಂದು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ಸ್ಮಾರಕ ಕಟ್ಟಿದರೆ ಸರ್ಕಾರದ ಗಂಟೇನು ಹೋಗುವುದಿಲ್ಲ ಎಂದು ಒತ್ತಾಯಿಸಿದರು.

  • ‘ಬಿಗ್ ಬಾಸ್’ ಮನೆಯಲ್ಲಿ ಬ್ರಹ್ಮಾಂಡ ಗುರೂಜಿ:  ಸ್ಪರ್ಧಿನಾ, ಅತಿಥಿಯಾ?

    ‘ಬಿಗ್ ಬಾಸ್’ ಮನೆಯಲ್ಲಿ ಬ್ರಹ್ಮಾಂಡ ಗುರೂಜಿ: ಸ್ಪರ್ಧಿನಾ, ಅತಿಥಿಯಾ?

    ಳೆದ ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚನ ಜೊತೆಗೆ ಫ್ರೆಂಡ್‌ಷಿಪ್ ಪಂಚಾಯ್ತಿ, ಫೇಕ್‌, ಜೆನ್ಯೂನ್‌ ಗಳ ಚರ್ಚೆ ಅವೆಲ್ಲಕ್ಕಿಂತ ಮುಖ್ಯವಾಗಿ ಡಬಲ್‌ ಎಲಿಮಿನೇಷನ್‌ಗಳಿಂದ ವಿಷಾದದ ಮೂಡ್‌ನಲ್ಲಿದ್ದ ಬಿಗ್‌ಬಾಸ್ (Bigg Boss Kannada) ಮನೆಯ ಸ್ಪರ್ಧಿಗಳಿಗೆ ಮಂಡೇ ಮಾರ್ನಿನ್‌ ಮಜವಾದ ಸರ್ಪೈಸ್ ಸಿಕ್ಕಿದೆ. ಅದು ಒಬ್ಬರ ಸ್ಪೆಷಲ್ ಎಂಟ್ರಿಯಿಂದ. ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಈ ಸ್ಪೆಷಲ್‌ ಎಂಟ್ರಿಯ ಗ್ಲಿಂಪಸ್‌ ಇದೆ.

    ‘ಮುಂಡಾ ಮೋಚ್ತು’ ಎಂಬ ಶಬ್ದ ಬಿಗ್‌ಬಾಸ್‌ ಮನೆಯಲ್ಲಿ ಮೊಳಗಿದೆ. ಅಂದ್ರೆ ಬಿಗ್‌ಬಾಸ್ ಮನೆಗೆ ಸ್ಪೆಷಲ್ ಎಂಟ್ರಿ ಕೊಟ್ಟೋರು ಯಾರು ಅಂತ ಗೊತ್ತಾಗಿರ್ಬೇಕಲ್ವಾ. ನಿಮ್ ಗೆಸ್ ಸರಿಯಾಗೇ ಇದೆ. ಅದು ಒನ್ ಆಂಡ್ ಓನ್ಲಿ (Brahmanda Guruji) ಬ್ರಹ್ಮಾಂಡ ಗುರೂಜಿ.

    ಬೆಳಬೆಳಿಗ್ಗೆಯೇ ಬಿಗ್‌ಬಾಸ್ ಮನೆಯ ಓಪನ್ ಆದಾಗ ಎಲ್ಲ ಸ್ಫರ್ಧಿಗಳೂ ಅಚ್ಚರಿಯಿಂದ ಅತ್ತ ನೋಡಿದರು. ತೆರೆದ ಬಾಗಿಲಿಂದ ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಮನೆಯಿಡೀ ಓಡಾಡುತ್ತ, ಕ್ಯಾಮೆರಾಗಳಿಗೆ ಆರ್ಡರ್ ಮಾಡುತ್ತ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ ಸ್ಪೆಷಲ್‌ ವೈಬ್ ಕ್ರಿಯೇಟ್ ಮಾಡಿದ್ದಾರೆ.

     

    ಈ ಸ್ಪೆಷಲ್ ಎಂಟ್ರಿಯಿಂದ ಸದ್ಯಕ್ಕಂತೂ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಆದರೆ ಆ ನಗು ಎಷ್ಟು ಕಾಲ ಇರುತ್ತದೆ? ಬಿಗ್‌ಬಾಸ್ ಮನೆಯಲ್ಲಿ ಗುರೂಜಿ ಎಷ್ಟು ಸಮಯ ಇರುತ್ತಾರೆ? ಯಾರು ಯಾರಿಗೆ ಏನು ಹೇಳುತ್ತಾರೆ? ಕಾದು ನೋಡಬೇಕು.

  • ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸರ್ಕಾರ ನಡೆಸುತ್ತೆ; ಬ್ರಹ್ಮಾಂಡ ಗುರೂಜಿ

    ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸರ್ಕಾರ ನಡೆಸುತ್ತೆ; ಬ್ರಹ್ಮಾಂಡ ಗುರೂಜಿ

    ಹಾಸನ: ಮುಂದಿನ ಚುನಾವಣೆ (Election) ಯಲ್ಲಿ ಜೆಡಿಎಸ್ (JDS) ಪಕ್ಷ ಬಹಳ ಮುಖ್ಯವಾದ ಪಾತ್ರ ವಹಿಸುತ್ತೆ, ಸರ್ಕಾರ ನಡೆಸುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಭವಿಷ್ಯ ನುಡಿದಿದ್ದಾರೆ.

    ಎರಡನೇ ಬಾರಿ ಹಾಸನಾಂಬೆ ದೇವಿ (Hasanamba Devi) ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವೇಗೌಡರಿಗೆ ಪರಿಪೂರ್ಣವಾದಂತಹ ಆರೋಗ್ಯ ಸಿಗಲು ಸಲಹೆ ಕೇಳಿದ್ರು. ದೇವೇಗೌಡರ ಆರೋಗ್ಯಕ್ಕೆ ದೇವಿಯಲ್ಲಿ ಪ್ರಾರ್ಥನೆ ಮಾಡಿ ಅಂತ ಕೇಳಿದ್ರು. ನಾನು ಎರಡು ಮೂರು ಸಲಹೆ ಕೊಟ್ಟಿದ್ದೇನೆ ಎಂದರು.

    ರೇವಣ್ಣ (H.D Revanna) ಅವರು ಮೊದಲಿನಿಂದಲೂ ಬಹಳ ಆಸ್ತಿಕರು. ಅವರ ತಂದೆಯವರ ಆರೋಗ್ಯ ಸುಧಾರಿಸುವುದಕ್ಕೋಸ್ಕರ ಏನು ಮಾಡಬಹುದು ಎಂದು ಪರಿಹಾರ ಹೇಳಿ ಎಂದರು. ಅವರ ಆರೋಗ್ಯ ಬಹಳ ಚೆನ್ನಾಗಿರಲಿ. ಯಡಿಯೂರಪ್ಪ (B S Yediyurappa), ಸಿದ್ದರಾಮಯ್ಯ (Siddaramaiah) ಬಂದರು ಆರೋಗ್ಯ ನೋಡಿಕೊಳ್ಳಿ ಅಂತ ಹೇಳ್ತಾರೆ ಎಂದು ಹೇಳಿದರು. ಇದನ್ನೂ ಓದಿ: ದೇವ್ರಾಣೆ ಹೇಳ್ತೀನಿ, 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತೆ : ಬ್ರಹ್ಮಾಂಡ ಗುರೂಜಿ ಭವಿಷ್ಯ

    ಕರ್ನಾಟಕದಿಂದ ಒಬ್ಬ ರೈತರ ಮತ್ತು ಪ್ರಧಾನಮಂತ್ರಿ ಆಗಿದ್ದಾರೆ. ಲೋಕೋಪಯೋಗಿ ಸಚಿವರಾಗಿ, ಪ್ರಧಾನಮಂತ್ರಿಯಾಗಿ ಎಲ್ಲಾ ಪ್ರಾಜೆಕ್ಟ್ ಗಳಿಗೆ ಅನುಮತಿ ನೀಡಿರುವವರು ದೇವೇಗೌಡರು ಒಬ್ಬರೇ ಎಂದರು. ಇದನ್ನೂ ಓದಿ: ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್

    Live Tv
    [brid partner=56869869 player=32851 video=960834 autoplay=true]

  • ದೇವ್ರಾಣೆ ಹೇಳ್ತೀನಿ, 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತೆ : ಬ್ರಹ್ಮಾಂಡ ಗುರೂಜಿ ಭವಿಷ್ಯ

    ದೇವ್ರಾಣೆ ಹೇಳ್ತೀನಿ, 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತೆ : ಬ್ರಹ್ಮಾಂಡ ಗುರೂಜಿ ಭವಿಷ್ಯ

    ಹಾಸನ: ದೇವರ ಸತ್ಯವಾಗಿ ಹೇಳುತ್ತೇನೆ. 31 ವರ್ಷದೊಳಗೆ ಕರ್ನಾಟಕ (Karnataka) ಮೂರು ಭಾಗ ಆಗಿ, ಮೂರು ಮುಖ್ಯಮಂತ್ರಿ, ಮೂವರು ರಾಜ್ಯಪಾಲರಾಗುತ್ತಾರೆ. ಇದು ಶಿವನ ಆಣೆಗೂ ಸತ್ಯ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ (Narendra Babu Sharma) ಭವಿಷ್ಯ ನುಡಿದಿದ್ದಾರೆ.

    ಹಾಸನಾಂಬೆ (Hasanamba Temple) ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ (Brahmanda Guruji), ದೇಶದ ಬಗ್ಗೆ ಮಾತನಾಡಿದಾಗ ಟ್ರೋಲ್ ಮಾಡುತ್ತಾರೆ. ಪಾರ್ಲಿಮೆಂಟ್ ಏನು ಕಟ್ಟಿದ್ದಾರೆ ಅದು ಭಾರೀ ಘೋರವಾಗಿರುತ್ತದೆ ಎನ್ನುವುದನ್ನು ವೀರ ಬ್ರಹ್ಮಸ್ವಾಮಿ ಚರಿತ್ರೆಯಲ್ಲಿ ಬರೆದಿದ್ದಾರೆ. ತ್ರಿಕೋನಾತ್ಮಿಕ ದೀಪಿಕ, ಯಾವುದೇ ಪಾರ್ಲಿಮೆಂಟ್ ಗುಂಡಾಗಿರಬೇಕು, ಇಲ್ಲ ಚೌಕವಾಗಿರಬೇಕು, ಇಲ್ಲ ಚಂದ್ರ ಪೂರ್ತಿಯಾಗಿ ಕುಜನಾಂಶವಾಗಿರಬೇಕು. ತ್ರಿಕೋನ ಮಾಡಿದಾಗ ಉಗ್ರವಾಗಿರುತ್ತದೆ. ಇನ್ಮೇಲೆ ದೇಶದ ಮೇಲೆ, ಜನರ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತದೆ. ಮೊದಲು ಕದ್ದುಮುಚ್ಚಿ ಲಂಚ ತೆಗೆದುಕೊಳ್ಳುತ್ತಿದ್ದರು. ಈಗ ಎಲ್ಲಾ ಓಪನ್. ದಡಂದಶಗುಣಂ ಭಗವಂತ ಆ ಸಮಯಕ್ಕೆ ಬಂದೇ ಬರುತ್ತಾನೆ ಎಂದಿದ್ದಾರೆ.

    ಕಲಿಯುಗ ಅಂತ್ಯ ಕಾಲಕ್ಕೆ ರೋಗ ರುಜಿನೆಗಳು ಜಾಸ್ತಿ ಆಗುತ್ತದೆ. ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತದೆ, ಒಂಭತ್ತು ತಿಂಗಳು ಕೂರುತ್ತದೆ. ಎರಡು ಗ್ರಹಣಗಳು ಹತ್ತಿರ ಬರಬಾರದು. ಜನರಿಗೆ ನೀರಿನ ಅಭಾವ, ಬೆಂಕಿ, ಗಲಾಟೆ, ಘರ್ಷಣೆ, ಸ್ವಂತದವರ ಹತ್ತಿರ ಘರ್ಷಣೆಗಳಾಗುತ್ತವೆ. ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ದೇವರ ಸತ್ಯವಾಗಿ ಹೇಳುತ್ತೇನೆ, 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತದೆ. ಮೂರು ಮುಖ್ಯಮಂತ್ರಿ, ಮೂವರು ವಿಶೇಷವಾಗಿ ರಾಜ್ಯಪಾಲರಾಗುತ್ತಾರೆ. ಶಿವನ ಮೇಲೆ ಆಣೆ ಮಾಡುತ್ತೇನೆ ಇದು ಸತ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿ ನೋಟಿಪಿಕೇಷನ್ ಪ್ರಕರಣ – ದೀಪಾವಳಿ ಬಳಿಕ ಬಿಎಸ್‍ವೈಗೆ ಸಂಕಷ್ಟ?

    ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ, ಭಾರತ ಎರಡು ದೇಶವಾಗುತ್ತದೆ. ಎರಡು ರಾಷ್ಟ್ರಪತಿ ಆಗುವುದು ಕೂಡ ಸತ್ಯ. 31 ವರ್ಷದಲ್ಲಿ ಹೀಗೆ ಆಗಬೇಕು ಅಂತ ನಾನು ಹೇಳಿದ್ದಲ್ಲ. ವೀರ ಬ್ರಮ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ದಾರೆ, ಇದು ನಡೆಯುವುದು ನಿಜ, ಸತ್ಯ. ಈ ಭಾರಿ ಬರುವುದು ಬೆರಕೆ ಸಂಸಾರ ಗ್ಯಾರಂಟಿ. ಯಾರು ಮುಖ್ಯಮಂತ್ರಿ ಆಗುತ್ತಾರೆ ಅಂತ ಬಹಳಷ್ಟು ಗೊಂದಲ ನಡೆಯುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಓಲಾ, ಊಬರ್‌ಗೆ ಬಿಗ್‌ ರಿಲೀಫ್‌ – ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್‌ ಮಧ್ಯಂತರ ತಡೆ

    ಪೊರಕೆಯಿಂದ ದೆಹಲಿಯನ್ನು ಗುಡಿಸಿರುವ ಪಕ್ಷ ಏನಿದೆ, ಪಂಜಾಬ್, ಗುಜರಾತ್ ಒಂದಿಷ್ಟು ಗುಡಿಸ್ತು. ಚಪ್ಪಲಿ, ಪೊರಕೆಯನ್ನು ಲಕ್ಷ್ಮಿ ಅಂತ ಹೋಲಿಸುತ್ತೇವೆ. ಭಿಕ್ಷೆ ಬೇಡಿ ಒಂದು ಸರ್ಕಾರ ನಡೆಸುವ ಅವಕಾಶಗಳು ಈ ಭಾರೀ ಬರುತ್ತದೆ. ಸುಮಾರು ಏಳು ಪಕ್ಷಗಳು ಸೇರಿಕೊಂಡು ಸರ್ಕಾರ ಮಾಡಬೇಕಾಗುತ್ತದೆ. ಮಾಂಸದ ಊಟ ಹಾಕಿದ, ತೀರ್ಥ ಕೊಟ್ಟರು ಅಂತ ಓಟು ಹಾಕಬೇಡಿ. ಯಾವ ಮನುಷ್ಯ ಕರೆಕ್ಟಾಗಿ ಕೆಲಸ ಮಾಡುತ್ತಾನೋ, ಅಂತಹವನನ್ನು ಶಾಸಕನಾಗಿ ಆಯ್ಕೆ ಮಾಡಿ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಬಿಗ್ ಬಾಸ್ ಓಟಿಟಿ ಮುಗಿದ ಒಂದು ವಾರದ ಗ್ಯಾಪ್ ನಂತರ ಬಿಗ್ ಬಾಸ್ ಸೀಸನ್ 9 ಶುರುವಾಗುತ್ತಿದೆ. ಸೆ.24 ಕ್ಕೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಕಾಲಿಡಲಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಆಯ್ಕೆಯಾದವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಹಳೆ ಮತ್ತು ಹೊಸ ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತದೆ. ಹಾಗೊಂದು ವೇಳೆ ಏನಾದರೂ ಮಾಜಿಗಳಿಗೂ ಅವಕಾಶ ಸಿಕ್ಕರೆ ಬ್ರಹ್ಮಾಂಡ ಗುರೂಜಿಯನ್ನು ಒಳಗೆ ಕಳುಹಿಸಿ ಎಂದು ಹೇಳುತ್ತಿದ್ದಾರೆ ನೋಡುಗರು.

    ಈಗಾಗಲೇ ಜಿಂಗಲಕಾ ಲಕಾ ಲಕಾ ಅನ್ನುತ್ತಾ ಬಿಗ್ ಬಾಸ್ ಓಟಿಟಿಗೆ ಕಾಲಿಟ್ಟಿದ್ದ ಆರ್ಯವರ್ಧನ್ ಗುರೂಜಿ ಕೂಡ ಬಿಗ್ ಬಾಸ್ 9 ನಲ್ಲಿ ಭಾಗಿ ಆಗುತ್ತಿರುವುದರಿಂದ ಗುರೂಜಿಗಳ ಕಾಂಬಿನೇಷನ್ ಸಖತ್ತಾಗಿ ಇರಲಿದೆ ಎನ್ನುವುದು ಪ್ರೇಕ್ಷಕರು ಊಹೆ. ಅಲ್ಲದೇ, ಇಬ್ಬರೂ ಉತ್ತರ ದಕ್ಷಿಣ ಧೃವಗಳು ಆಗಿರುವುದರಿಂದ ಒಳ್ಳೆಯ ಮನರಂಜನೆಯೇ ಪ್ರೇಕ್ಷಕರಿಗೆ ಸಿಗಲಿದೆ ಎನ್ನುವ ಅಂದಾಜು ನೋಡುಗರದ್ದು. ಹಾಗಾಗಿ ಮತ್ತೆ ಬ್ರಹ್ಮಾಂಡ ಗುರೂಜಿಯನ್ನು ಮನೆ ಒಳಗೆ ಕಳುಹಿಸಿ ಎಂದು ನೆಟ್ಟಿಗರು ವಾಹಿನಿಯನ್ನು ಕೇಳುತ್ತಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?

    ಈ ನಡುವೆ ಸೀಸನ್ 9ಗೆ ಯಾರೆಲ್ಲ ದೊಡ್ಮನೆ ಪ್ರವೇಶ ಮಾಡಲಿದ್ದಾರೆ ಎನ್ನುವ ಪಟ್ಟಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಯಾರು ಹೋಗುತ್ತಾರೋ, ಯಾರು ಗಾಸಿಪ್ ಕಾಲಂನಲ್ಲೇ ಉಳಿಯುತ್ತಾರೋ ಕಾದು ನೋಡಬೇಕು. ಆದರೆ, ಈ ಬಾರಿ ಹೊಸ ಬಗೆಯ ಸ್ಪರ್ಧಿಗಳನ್ನೇ ಆಯ್ಕೆ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಜೊತೆಗೆ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯರ್ ಆಯ್ಕೆ ಆಗಿರುವುದರಿಂದ ಅವರು ಹೇಗೆ ಪೈಪೋಟಿ ನೀಡಲಿದ್ದಾರೆ ಎನ್ನುವ ಕುತೂಹಲವೂ ಇದೆ.

    ಈಗಾಗಲೇ ದೊಡ್ಮನೆ ಒಳಗೆ ಹೋಗುವವರು ಅಂತಿಮ ಪಟ್ಟಿ ಸಿದ್ಧವಾಗಿದೆ. ನಾಳೆಯಿಂದಲೇ ಅಥವಾ ಶನಿವಾರ ಬೆಳಗ್ಗೆಯಿಂದ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಗಳು ಚಿತ್ರೀಕರಣವಾಗಲಿವೆ. ಶನಿವಾರ ಸಂಜೆ ಹೊತ್ತಿಗೆ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಹೋಗಬಹುದು ಎನ್ನುವ ಅರ್ಧ ಮಾಹಿತಿ, ರಾತ್ರಿ ಒಳಗೆ ಪೂರ್ಣ ಮಾಹಿತಿ ಹೊರ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರಹ್ಮಾಂಡ ಗುರೂಜಿ ಭವಿಷ್ಯಕ್ಕೆ ದೇವೇಗೌಡ್ರು ಪ್ರತಿಕ್ರಿಯಿಸಿದ್ದು ಹೀಗೆ

    ಬ್ರಹ್ಮಾಂಡ ಗುರೂಜಿ ಭವಿಷ್ಯಕ್ಕೆ ದೇವೇಗೌಡ್ರು ಪ್ರತಿಕ್ರಿಯಿಸಿದ್ದು ಹೀಗೆ

    ಹಾಸನ: ಹೆಚ್‍ಡಿ ಕುಮಾರಸ್ವಾಮಿ ಕಿಂಗ್ ಮೇಕರ್ ಆಗ್ತಾರೆ ಎಂಬ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಅವರ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.

    ದೇವರು, ಜನರ ಅನುಗ್ರಹ ಇದ್ದರೆ ಕುಮಾರಸ್ವಾಮಿ ಅಧಿಕಾರ ಹಿಡಿಯಬಹುದು ಎಂದು ದೇವೇಗೌಡರು ಹೇಳಿದ್ದಾರೆ. ಹಾಸನಾಂಬೆ ದರ್ಶನದ ನಂತರ ಪ್ರತಿಕ್ರಿಯೆ ನೀಡಿದ ಅವರು, ಒಬ್ಬೊಬ್ಬರ ಭಾವನೆ, ನಂಬಿಕೆ ಒಂದೊಂದು ರೀತಿ ಇರುತ್ತದೆ. ನಾನು ದೇವರು ಮತ್ತು ಜ್ಯೋತಿಷ್ಯವನ್ನು ನಂಬುತ್ತೇನೆ. ಆದ್ರೆ ನಾನೊಬ್ಬ ತಂದೆಯಾಗಿ ಮಗನ ಆರೋಗ್ಯ ಕಾಪಾಡಮ್ಮ ಎಂದು ಹಾಸಬಾಂಬೆಯಲ್ಲಿ ಬೇಡಿಕೊಂಡಿದ್ದೇನೆ ಅಂದ್ರು.

    ಸಿಎಂ ಸಿದ್ದರಾಮಯ್ಯ ಮರಳಿ ಜೆಡಿಎಸ್‍ಗೆ ಬರೋ ವದಂತಿ ಕುರಿತು ಪ್ರತಿಕ್ರಿಯಿಸಿದ ಹೆಚ್‍ಡಿಡಿ, ಸಿದ್ದರಾಮಯ್ಯು ಜವಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹಾಗೆಲ್ಲಾ ಲಘುವಾಗಿ ಮಾತನಾಡಬೇಡಿ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಬಹುದು ಅಂತ ಹೇಳಿದ್ರು.

    ಗುರುವಾರದಂದು ಹಾಸನಾಂಬೆ ದೇವಾಲಯದಲ್ಲಿ ಮಾತನಾಡಿದ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ, ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ. ದೇವರ ಮೊರೆಯಿಂದ ಪರಿಹಾರ ಕಂಡುಕೊಳ್ಳದೇ ಹೋದ್ರೆ ಮೃತ್ಯು ಕೂಡ ಎದುರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಮೋದಿ ಅವರದ್ದು ವೃಶ್ಚಿಕ ರಾಶಿ. ಅದರಲ್ಲಿನ ದೋಷ ಇದಕ್ಕೆ ಕಾರಣ ಎಂದಿದ್ದಾರೆ.

    ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್‍ಡಿಕೆ ಕಿಂಗ್ ಮೇಕರ್ ಆಗಲಿದ್ದಾರೆ. ಅವರ ಮೇಲೆ ಉತ್ತರ ಕರ್ನಾಟಕ ಜನ ನಂಬಿಕೆ ಇಟ್ಟಿದ್ದಾರೆ. ಆದರೆ ಅವರು ತಂದೆ ಮಾತು ಕೇಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಮತ್ತೊಮ್ಮೆ ಸಿಎಂ ಆಗೋ ಯೋಗ ಅವರಿಗಿದೆ. ಸಿಎಂ ಸಿದ್ದರಾಮಯ್ಯ ಈವರೆಗೆ ಮಾಡಿರುವ ತಪ್ಪು ಸರಿಪಡಿಸಿಕೊಳ್ಳಬೇಕು. ಅವರ ಸುತ್ತಮುತ್ತ ಕೆಲವು ಕಚಡಾ ಮಂತ್ರಿಗಳಿದ್ದಾರೆ ಅಂತ ಹೇಳಿದ್ದಾರೆ.

  • ಮೋದಿಗೆ ಗಂಡಾಂತರ ಕಾದಿದೆಯಂತೆ, ಎಚ್.ಡಿ.ಕೆ ಕಿಂಗ್ ಮೇಕರ್ ಆಗ್ತಾರಂತೆ: ಬ್ರಹ್ಮಾಂಡ ಗುರೂಜಿ ಭವಿಷ್ಯ

    ಮೋದಿಗೆ ಗಂಡಾಂತರ ಕಾದಿದೆಯಂತೆ, ಎಚ್.ಡಿ.ಕೆ ಕಿಂಗ್ ಮೇಕರ್ ಆಗ್ತಾರಂತೆ: ಬ್ರಹ್ಮಾಂಡ ಗುರೂಜಿ ಭವಿಷ್ಯ

    ಹಾಸನ: ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ. ದೇವರ ಮೊರೆಯಿಂದ ಪರಿಹಾರ ಕಂಡುಕೊಳ್ಳದೇ ಹೋದ್ರೆ ಮೃತ್ಯು ಕೂಡ ಎದುರಾಗಬಹುದು ಎಂದು ಹಾಸನದಲ್ಲಿ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.

    ಹಾಸನಾಂಬೆ ದೇವಾಲಯದಲ್ಲಿ ಇಂದು ಮಾತನಾಡಿದ ಬ್ರಹ್ಮಾಂಡ ಗುರೂಜಿ, ಮೋದಿ ಅವರದ್ದು ವೃಶ್ಚಿಕ ರಾಶಿ. ಅದರಲ್ಲಿನ ದೋಷ ಇದಕ್ಕೆ ಕಾರಣ ಎಂದಿದ್ದಾರೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್‍ಡಿಕೆ ಕಿಂಗ್ ಮೇಕರ್ ಆಗಲಿದ್ದಾರೆ. ಅವರ ಮೇಲೆ ಉತ್ತರ ಕರ್ನಾಟಕ ಜನ ನಂಬಿಕೆ ಇಟ್ಟಿದ್ದಾರೆ. ಆದರೆ ಅವರು ತಂದೆ ಮಾತು ಕೇಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಮತ್ತೊಮ್ಮೆ ಸಿಎಂ ಆಗೋ ಯೋಗ ಅವರಿಗಿದೆ. ಸಿಎಂ ಸಿದ್ದರಾಮಯ್ಯ ಈವರೆಗೆ ಮಾಡಿರುವ ತಪ್ಪು ಸರಿಪಡಿಸಿಕೊಳ್ಳಬೇಕು. ಅವರ ಸುತ್ತಮುತ್ತ ಕೆಲವು ಕಚಡಾ ಮಂತ್ರಿಗಳಿದ್ದಾರೆ ಅಂದ್ರು.

    ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಇಂದು ತೆರೆಯಲಾಗುತ್ತದೆ. ಆಧಿದೇವತೆ ಹಾಸನಾಂಬೆ ದರ್ಶನಾರಂಭಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಿಂದೂ ಪಂಚಾಂಗದ ಆಶ್ವೀಜ ಮಾಸದ ಹುಣ್ಣಿಮೆ ನಂತರದ ಮೊದಲ ಗುರುವಾರ ಬಾಗಿಲು ತೆಗೆಯುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಅದೇ ರೀತಿ ಮೈಸೂರು ತಳವಾರ ವಂಶಸ್ತ ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆಗೆಯಲಾಗುವುದು.

    ಇಂದು ಮಧ್ಯಾಹ್ನ 12:30ಕ್ಕೆ ಅರ್ಧ ನಕ್ಷತ್ರ ಸಮಯದಲ್ಲಿ ಗರ್ಭ ಗುಡಿ ಬಾಗಿಲು ತೆಗೆಯಲು ಸಕಲ ಸಿದ್ಧತೆ ಮಾಡಲಾಗಿದೆ. ಕನಿಷ್ಟ 9 ದಿನ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಪಂಚಾಗದ ಪ್ರಕಾರ ಇಂದಿನಿಂದ ಬಲಿ ಪಾಡ್ಯಮಿಯ ಮಾರನೇ ದಿನದವರೆಗೆ ದರ್ಶನ ಭಾಗ್ಯ ಲಭಿಸಲಿದ್ದು, ಲಕ್ಷಾಂತರ ಮಂದಿ ದರ್ಶನ ಪಡೆಯುವ ನಿರೀಕ್ಷೆ ಇದೆ. ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಇರುವುದಿಲ್ಲ. ಈ ಬಾರಿ ಕೇವಲ 8 ದಿನವಷ್ಟೇ ದರ್ಶನಕ್ಕೆ ಅವಕಾಶವಿದ್ದು, 24 ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಇಂದು ಬಾಗಿಲು ತೆಗೆದ ನಂತರ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ಕಾರ್ಯಗಳು ನೆರವೇರಲಿದ್ದು, ನಾಳೆ ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬೆಯ ಸಾರ್ವಜನಿಕ ದರ್ಶನ ಲಭ್ಯವಾಗಲಿದೆ.