Tag: ಬ್ರಹ್ಮಗಿರಿ

  • ನಾಸಿಕ್‌ನ ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಪ್ರಕ್ರಿಯೆ ಆರಂಭ

    ನಾಸಿಕ್‌ನ ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಪ್ರಕ್ರಿಯೆ ಆರಂಭ

    ನವದೆಹಲಿ: ಆಂಜನೇಯನ ಜನ್ಮಸ್ಥಳ ಎಂದು ಪರಿಗಣಿಸಲಾಗುವ ನಾಸಿಕ್‌ನ (Nashik) ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನಾ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. 377 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಗಿರಿ (Brahmagiri) ಟ್ರೆಕ್ಕಿಂಗ್ ಪಾಯಿಂಟ್‌ನಿಂದ ಅಂಜನೇರಿ ಬೆಟ್ಟಗಳಿಗೆ (Anjaneri Hills) ಮುಂದಿನ ಎರಡು ವರ್ಷದ ಅವಧಿಯಲ್ಲಿ ರೋಪ್‌ವೇ (Ropeway) ನಿರ್ಮಿಸಲು ತಿರ್ಮಾನಿಸಿದೆ.

    ಕೇಂದ್ರ ಸರ್ಕಾರದ ಪ್ರಮುಖ ‘ಪರ್ವತ್ಮಾಲಾ’ (Parvatmala) ಯೋಜನೆಯಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶುಕ್ರವಾರ ಯೋಜನೆಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ. ಅಂಜನೇರಿ ಬೆಟ್ಟಗಳು ಹನುಮಂತನ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ಇದು ಯಾತ್ರಿಕರು ಮತ್ತು ಚಾರಣಿಗರು ಭೇಟಿ ನೀಡುವ ಗುಹೆ ಮತ್ತು ಅಂಜನಿ ಮಾತಾ ದೇವಾಲಯವನ್ನು ಹೊಂದಿದೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್

    ಸುಮಾರು 4,200 ಅಡಿ ಎತ್ತರದಲ್ಲಿರುವ ದೇವಾಲಯವನ್ನು ತಲುಪಲು ಓರ್ವ ವ್ಯಕ್ತಿ ಮೂರು ಪರ್ವತಗಳನ್ನು ಏರಬೇಕಾಗಿದೆ. ಈ ಹಿನ್ನೆಲೆ ರೋಪ್‌ವೇ ನಿರ್ಮಾಣವಾದರೆ 5.7 ಕಿ.ಮೀ ಉದ್ದದ ರೋಪ್‌ವೇ ಮೂರು ಪರ್ವತಗಳನ್ನು ದಾಟಿ ಕೆಲವೇ ನಿಮಿಷಗಳಲ್ಲಿ ಬೆಟ್ಟದ ತುದಿಗೆ ಕರೆದೊಯ್ಯಲಿದೆ. ಇದನ್ನೂ ಓದಿ: ವೀಲ್‌ಚೇರ್ ಕೊರತೆ – ಸ್ಕೂಟಿಯಲ್ಲೇ ಆಸ್ಪತ್ರೆಯೊಳಗೆ ರೋಗಿಯನ್ನು ಕರೆದೊಯ್ದ ವ್ಯಕ್ತಿ

    ಕೇಂದ್ರವು 2024ರ ವೇಳೆಗೆ ಒಟ್ಟು 90 ಕಿ.ಮೀನ 18 ರೋಪ್‌ವೇ ಯೋಜನೆಗಳನ್ನು ಯೋಜಿಸುತ್ತಿದೆ. ಶ್ರೀನಗರದ ಶಂಕರಾಚಾರ್ಯ ದೇವಸ್ಥಾನಕ್ಕೆ 1 ಕಿ.ಮೀ ರೋಪ್‌ವೇ, ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನೂಲ್‌ನ ಶ್ರೀಶೈಲಂ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ, ಲೇಹ್ ಅರಮನೆ, ಗ್ವಾಲಿಯರ್ ಕೋಟೆ, ಕೇದಾರನಾಥ ದೇವಾಲಯ, ಉತ್ತರಾಖಂಡದ ಹೇಮಕುಂಡ್ ಸಾಹಿಬ್‌ಗೆ ಮತ್ತು ತಮಿಳುನಾಡಿನಲ್ಲಿರುವ ಜನಪ್ರಿಯ ಗಿರಿಧಾಮ ಕೊಡೈಕೆನಾಲ್‌ಗೆ 12 ಕಿ.ಮೀ ರೋಪ್‌ವೇ ಯೋಜನೆಯನ್ನು ಯೋಜಿಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ: ತೆಲಂಗಾಣ ಗೃಹ ಸಚಿವ

    ಕರ್ನಾಟಕದ (Karnataka) ಉಡುಪಿ (Udupi) ಜಿಲ್ಲೆಯ ಕೊಡಚಾದ್ರಿ ಬೆಟ್ಟಗಳಿಗೆ 7 ಕಿ.ಮೀ ರೋಪ್‌ವೇ ಮತ್ತು ಹಿಮಾಚಲ ಪ್ರದೇಶದ ಕುಲುವಿನಲ್ಲಿರುವ ಬಿಜ್ಲಿ ಮಹಾದೇವ ದೇವಸ್ಥಾನಕ್ಕೆ 3 ಕಿ.ಮೀ, ತೆಲಂಗಾಣದ ಈಗಳಪೆಂಟಾದಿಂದ ಕೃಷ್ಣಾ ನದಿಗೆ ಅಡ್ಡಲಾಗಿ ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನಕ್ಕೆ ಮತ್ತೊಂದು ರೋಪ್‌ವೇ ನಿರ್ಮಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇದನ್ನೂ ಓದಿ: ರಾಜ್ಯದ ಪರ ಧ್ವನಿ ಎತ್ತದೇ ಸುಮ್ಮನಿರುವ ಬಿಜೆಪಿ ಸಂಸದರು ದಂಡಪಿಂಡಗಳು: ಬಿ.ವಿ ಶ್ರೀನಿವಾಸ್

  • ಕೊಡಗಿನಲ್ಲಿ ತಗ್ಗಿದ ಮಳೆಯ ಆರ್ಭಟ

    ಕೊಡಗಿನಲ್ಲಿ ತಗ್ಗಿದ ಮಳೆಯ ಆರ್ಭಟ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಸ್ವಲ್ಪ ಕಡಿಮೆಯಾಗಿದೆ.

    ಬ್ರಹ್ಮಗಿರಿ ತಪ್ಪಲಲ್ಲಿ ಮಳೆ ಕಡಿಮೆಯಾದರಿಂದ ನೀರಿನ ಮಟ್ಟ ಇಳಿಕೆಯಾಗಿದ್ದು, ತ್ರಿವೇಣಿ ಸಂಗಮದಲ್ಲೂ ಗಣನೀಯವಾಗಿ ನೀರು ತಗ್ಗಿದೆ.

     

    ಭಾಗಮಂಡಲ ನಾಪೋಕ್ಲು ರಸ್ತೆ ಮೇಲೆ ಅರ್ಧ ಅಡಿ ನೀರು ನಿಂತಿದ್ದು ಮಡಿಕೇರಿ ಭಾಗಮಂಡಲ ರಸ್ತೆಯಲ್ಲಿ ಸಂಚಾರ ಆರಂಭವಾಗಿದೆ.  ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ – ಶಾಸಕ ಜಮೀರ್‌ ಮನೆ ಮೇಲೆ ಎಸಿಬಿ ದಾಳಿ

    ಕಳೆದ ವಾರ ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗಿದ್ದರಿಂದ ಭಾಗಮಂಡಲದಲ್ಲಿರುವ ತ್ರಿವೇಣಿ ಸಂಗಮ ಮುಳುಗಡೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

    ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

    ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಬಂದು ಪಕ್ಕದ ಬ್ರಹ್ಮಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿ ಅಪಾಯ ತಂದುಕೊಂಡಿದ್ದ ಪ್ರವಾಸಿಗ ನಿಶಾಂಶ್ ಗುಲ್ ವಿರುದ್ಧ ಕರ್ನಾಟಕ ಅರಣ್ಯ ಇಲಾಖೆ ಕಾಯ್ದೆಯಡಿ ಅತಿಕ್ರಮ ಪ್ರವೇಶದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯಾಧಿಕಾರಿ(ಡಿಎಫ್‍ಒ) ಅರಸಲನ್ ತಿಳಿಸಿದ್ದಾರೆ.

    ಕರ್ನಾಟಕ ಅರಣ್ಯ ಕಾಯ್ದೆ ವಿಧಿ 24ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ನಿಶಾಂತ್ ಆಸ್ಪತ್ರೆಯಿಂದ ಬಿಡುಗಡೆ ಆದ ಮೇಲೆ ವಿಚಾರಣೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ನಂದಿಬೆಟ್ಟದ ಬಹುತೇಕ ಕಡೆ ಟ್ರೆಕ್ಕಿಂಗ್ ಗೆ ಅನುಮತಿ ಇಲ್ಲ. ನಂದಿಬೆಟ್ಟದ ಹಲವು ಕಡೆ ಮೊಬೈಲ್ ಸಿಗ್ನಲ್ ಸಹ ದೊರೆಯುವುದಿಲ್ಲ. ಇದ್ರಿಂದ ಅಪಾಯಕ್ಕೆ ಸಿಕ್ಕಿಕೊಂಡರೆ ಸಹಾಯಕ್ಕೆ ಬರಲು ಸಹ ಆಗುವುದಿಲ್ಲ. ಈತ ಅದೃಷ್ಟ ಎಂಬಂತೆ ಉಳಿದಿದ್ದಾನೆ. ಇಲ್ಲಿ ಕಾಡುಪ್ರಾಣಿಗಳು ಕೂಡ ಸಂಚರಿಸುತ್ತಿವೆ. ಮೇಲಾಗಿ ಕಡಿದಾದ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡು ಜೀವಂತ ನಿಶಾಂತ್ ಬಂದಿರುವುದೇ ಪವಾಡ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!

    ಟ್ರೆಕ್ಕಿಂಗ್‍ಗೆ ಅನುಮತಿ ಕಡ್ಡಾಯ!
    ಟ್ರೆಕ್ಕಿಂಗ್ ಗೆ ಜಿಲ್ಲಾಡಳಿತ ಗುರುತಿಸಿರುವ ಕೆಲವು ಆಯ್ದೆ ಚಾರಣದ ಸ್ಥಳಗಳಿಗೆ ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆಯಬೇಕು. ಅಲ್ಲದೆ ಸೂಕ್ತ ಮಾರ್ಗದರ್ಶಕರ ನೆರವಿನಿಂದ ಹೋಗಿಬರುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಅದನ್ನು ಬಿಟ್ಟು ಅನುಮತಿ ಪಡೆಯದೆ ಅತಿಕ್ರಮವಾಗಿ ಪ್ರವೇಶಿಸಿದರೆ ಕರ್ನಾಟಕ ಅರಣ್ಯ ಇಲಾಖೆ ಕಾಯ್ದೆ 24ರ ಅಡಿ ಪ್ರಕರಣ ದಾಖಲಿಸಲಾಗುವುದು.

    ಅನಂತರ ನಡೆಯುವ ಕಾನೂನು ಹೋರಾಟಕ್ಕೆ ಸಿಕ್ಕಿ ಒದ್ದಾಡುವ ಅಪಾಯವಿರುತ್ತದೆ ಎಂಬುದನ್ನು ಚಾರಣಿಗರು ಅರಿಯುವುದು ಸೂಕ್ತ ಎಂಬುದನ್ನು ಡಿಎಫ್‍ಒ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಚಾರಣಕ್ಕೆ ಅರಣ್ಯ ಇಲಾಖೆ ಅನುಮತಿಸುವ ಸ್ಥಳಗಳಾದ ನಂದಿಬೆಟ್ಟವನ್ನು ಕಾಲುದಾರಿಯ ಮೂಲಕ ಪ್ರವೇಶಿಸಬಹುದು. ಸ್ಕಂದಗಿರಿ, ಕೈವಾರಬೆಟ್ಟ, ಬೆಂಗಳೂರು ಗ್ರಾಮಾಂತರದ ಮಾಕಳಿ ಬೆಟ್ಟ, ಸಾವನದುರ್ಗ ಇಂತಹ ಕಡೆ ಮಾತ್ರ ಟ್ರೆಕ್ಕಿಂಗ್ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ

  • ನಂದಿಬೆಟ್ಟದ ಬಳಿ ಭೂಕುಸಿತ ಪ್ರಕರಣ – ರಸ್ತೆ ಮರು ನಿರ್ಮಾಣಕ್ಕೆ 80 ಲಕ್ಷ ಮಂಜೂರು

    ನಂದಿಬೆಟ್ಟದ ಬಳಿ ಭೂಕುಸಿತ ಪ್ರಕರಣ – ರಸ್ತೆ ಮರು ನಿರ್ಮಾಣಕ್ಕೆ 80 ಲಕ್ಷ ಮಂಜೂರು

    ಚಿಕ್ಕಬಳ್ಳಾಪುರ: ಭಾರೀ ಮಳೆಗೆ ನಂದಿಬೆಟ್ಟದ ಬಳಿಯ ಬ್ರಹ್ಮಗಿರಿ ಬೆಟ್ಟದಿಂದ ಭೂಕುಸಿತ ಉಂಟಾಗಿ ರಸ್ತೆ ಕೊಚ್ಚಿ ಹೋಗಿತ್ತು. ರಸ್ತೆ ಮರುನಿರ್ಮಾಣ ಕಾಮಗಾರಿಗೆ ಸರ್ಕಾರ ಇದೀಗ 80 ಲಕ್ಷ ಹಣ ಮಂಜೂರು ಮಾಡಿದೆ.

    ಆಗಸ್ಟ್ 24ರಂದು ಭಾರೀ ಮಳೆಯಾಗಿ ಬ್ರಹ್ಮಗಿರಿ ಬೆಟ್ಟದ ಮೇಲಿಂದ ಬೃಹತ್ ಗಾತ್ರದ ಬಂಡೆಗಳು ಉರುಳಿಬಂದು ರಸ್ತೆ ಸಂಪೂರ್ಣ ಹಾಳಾಗಿತ್ತು. ಅಲ್ಲದೆ ರಸ್ತೆಗಳು ಭೂಕುಸಿತದಿಂದಾಗಿ ಸಂಪೂರ್ಣ ಕೊಚ್ಚಿ ಹೋಗಿ ಈ ಮಾರ್ಗವಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಈಗಲೂ ಸಹ ನಂದಿಗಿರಿಧಾಮಕ್ಕೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಪ್ರವಾಸಿ ವಾಹನ ಪಲ್ಟಿ – ಪ್ರವಾಸಿಗರು ಪ್ರಾಣಾಪಾಯದಿಂದ ಪಾರು

    ಸೋಮವಾರದಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಗತಿ ಕಾಮಗಾರಿ ಆರಂಭವಾಗಲಿದೆ. ಸರಿ ಸುಮಾರು 45 ದಿನಗಳ ಒಳಗಾಗಿ ಕಾಮಗಾರಿ ಮುಗಿಯುವ ವಿಶ್ವಾಸವನ್ನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ನಂದಿಬೆಟ್ಟದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಹ ತುದಿಗಾಲಲ್ಲಿ ನಿಂತಿದ್ದು, ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಯಲಿ ಎಂದು ಕಾಯುತ್ತಿದ್ದಾರೆ. ಇದನ್ನೂ ಓದಿ: ರೋಡ್ ರೋಮಿಯೋಗೆ ಕರಾಟೆ ಪಂಚ್ ಕೊಟ್ಟ ಮಹಿಳಾ ಪತ್ರಕರ್ತೆ

     

  • ನಂದಿಬೆಟ್ಟದ ಬಳಿ ಭೂಕುಸಿತ – ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್‍ಗೆ ಬೆದರಿದ್ವಾ ಪಂಚಗಿರಿಗಳು?

    ನಂದಿಬೆಟ್ಟದ ಬಳಿ ಭೂಕುಸಿತ – ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್‍ಗೆ ಬೆದರಿದ್ವಾ ಪಂಚಗಿರಿಗಳು?

    – ಭೂಕುಸಿತ.. ಇದು ಎಚ್ಚರಿಕೆ ಗಂಟೆ?
    – ಬೆಟ್ಟದ ತಪ್ಪಲಲ್ಲಿ ಭೂದಾಹವೇ ಕುಸಿತಕ್ಕೆ ಕಾರಣನಾ?

    ಚಿಕ್ಕಬಳ್ಳಾಪುರ: ಬುಧವಾರ ನಂದಿಬೆಟ್ಟದ ಬಳಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಭೂಕುಸಿತ ಆಗಿತ್ತು. ಆದ್ರೆ ಭೂಕುಸಿತ ಆಗೋಕೆ ಭಾರೀ ಪ್ರಮಾಣದ ಮಳೆ ಅನ್ನೋದು ಬಹುತೇಕರ ಅಭಿಪ್ರಾಯವಾದ್ರೂ ಕೆಲವರ ವಾದವೇ ಬೇರೆ ಇದೆ. ಭಾರೀ ಪ್ರಮಾಣದ ಭೂಕುಸಿತಕ್ಕೆ ಕಲ್ಲು ಗಣಿಗಾರಿಕೆ-ಬೆಟ್ಟದ ತಪ್ಪಲಲ್ಲಿ ಭೂಮಿ ಮಾಡೋಕೆ ಭೂಗಳ್ಳರ ಮಾಡ್ತಿರೋ ಕೃತ್ಯಗಳೇ ಕಾರಣ ಅನ್ನೋ ಅನುಮಾನಗಳು ವ್ಯಕ್ತವಾಗಿವೆ.

    ವಿಶ್ವವಿಖ್ಯಾತ ನಂದಿಬೆಟ್ಟದ ಬಳಿ ಭೂಕುಸಿತ ಉಂಟಾಗಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಪರಿಣಾಮ ನಂದಿಗಿರಿಧಾಮಕ್ಕೆ ಶಾಶ್ವತವಾಗಿ ರಸ್ತೆ ನಿರ್ಮಾಣ ಮಾಡೋವರೆಗೂ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಮಧ್ಯೆ ಹಿಂದೆಂದೂ ಆಗದ ಅಷ್ಟೊಂದು ದೊಡ್ಡ ಮಟ್ಟದ ಭೂ ಕುಸಿತ ಆಗಿದ್ದಾದ್ರೂ ಹೇಗೆ ಅನ್ನೋ ಅನುಮಾನ ಹಲವರದ್ದಾಗಿದೆ. ಬಹುತೇಕರು ಭಾರೀ ಮಳೆಯ ಪರಿಣಾಮ ಗುಡ್ಡ ಕುಸಿತ ಆದ್ರೂ, ಕಾರಣ ಬೇರೆಯೇ ಇದೆ ಅಂತಾರೆ.

    ನಂದಿಗಿರಿ, ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ಚನ್ನಗಿರಿಗಳು ಒಂದಕ್ಕೊಂದು ಆಂಟಿಕೊಂಟಿವೆ. ಒಂದೆಡೆ ಚಿಕ್ಕಬಳ್ಳಾಪುರದ ಕಣಿವೆನಾರಾಯಣಪುರದ ಬಳಿ, ಮತ್ತೊಂದೆಡೆ ದೇವನಹಳ್ಳಿಯ ತೈಲಗೆರೆ ಬಳಿ ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆಸಲಾಗ್ತಿದೆ. ಇದುವೇ ಭೂಕುಸಿತಕ್ಕೆ ಕಾರಣ ಆಗಿರಬಹುದು ಅಂತಾ ಪರಿಸರವಾದಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ದೋಸೆ ಮಾಡುವಾತ ಲಕ್ಷಾಂತರ ರೂಪಾಯಿ ವಂಚನೆ-ಕಡಬದಿಂದ ಮೈಸೂರಿಗೆ ಪರಾರಿ

    ನಂದಿಗಿರಿಧಾಮದ ತಪ್ಪಲಿನ ಭೂಮಿಗೆ ಬಂಗಾರದ ಬೆಲೆಯಿದೆ. ಹೀಗಾಗಿ ನಂದಿಬೆಟ್ಟದ ಸುತ್ತಲೂ ಬೆಟ್ಟದ ಬುಡಕ್ಕೆ ಕನ್ನ ಹಾಕ್ತಿರೋ ಭೂಗಳ್ಳರು, ರಾಜಾರೋಷವಾಗಿ ಕಲ್ಲು ಬಂಡೆ ಕರಗಿಸಿ, ಬೆಟ್ಟದ ಬುಡವನ್ನ ಅಗೆದು ಬಗೆದು ಸಮತಟ್ಟು ಮಾಡಿ ಜಮೀನು ಮಾಡಿಕೊಳ್ಳುತ್ತಿದ್ದಾರೆ. ಇದು ಸಹ ಬೆಟ್ಟದ ಹಿಡಿತವನ್ನ ಕಡಿಮೆ ಮಾಡಿ ಭೂಕುಸಿತ ಆಗೋಕೆ ಕಾರಣ ಆಗುತ್ತಿದೆ ಎಂದು ಸ್ಥಳೀಯರಾದ ಚಿಕ್ಕೇಗೌಡ ಹೇಳುತ್ತಾರೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧ

    ಒಟ್ಟಿನಲ್ಲಿ ನಂದಿಬೆಟ್ಟದ ತಪ್ಪಲಲ್ಲಿ ಮೇಲ್ನೋಟಕ್ಕೆ ಭಾರೀ ಪ್ರಮಾಣದ ಮಳೆ ಬಂದು ಭೂ ಕುಸಿತ ಆಗಿದೆ ಅನ್ನೋದು ಅಧಿಕಾರಿಗಳ ಪ್ರಾಥಮಿಕ ಮಾಹಿತಿ. ಪರಿಸರವಾದಿಗಳು, ಪ್ರಜ್ಞಾವಂತರ ಅನುಮಾನಗಳನ್ನ ಸುಖಾಸುಮ್ಮನೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆದು ಆಸಲಿ ಸತ್ಯ ಹೊರಬರಬೇಕಿದೆ.

  • ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ

    ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ

    – ರಸ್ತೆಗೆ ಅಡ್ಡಲಾಗಿ ಉರುಳಿದ ಕಲ್ಲು, ಮಣ್ಣು, ವಿದ್ಯುತ್ ಕಂಬ
    – ಬಯಲು ಸೀಮೆಯಲ್ಲಿ ಮಲೆನಾಡು ದೃಶ್ಯ
    – ತಡರಾತ್ರಿ ಮಳೆಗೆ ಅಲ್ಲೋಲ, ಕಲ್ಲೋಲ

    ಚಿಕ್ಕಬಳ್ಳಾಪುರ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತವಾಗಿದ್ದು, 10 ಅಡಿ ಆಳಕ್ಕೆ ಮುಖ್ಯ ರಸ್ತೆ ಕುಸಿದಿದೆ. ನಂದಿಬೆಟ್ಟದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ರಸ್ತೆಗೆ ಅಡ್ಡಲಾಗಿ ಬಂಡೆಗಳು ಉರುಳಿ ನಿಂತಿವೆ. ರಸ್ತೆ ಬಂದ್ ಆಗಿದ್ದರಿಂದ ನಂದಿಬೆಟ್ಟಕ್ಕೆ ಬಂದಿರುವ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ.

    ಮಂಗಳವಾರ ರಾತ್ರಿ ನಂದಿಬೆಟ್ಟದ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಮೇಲ್ಭಾಗದಿಂದ ಮಣ್ಣು ಕೊಚ್ಚಿಕೊಂಡು ಬಂದಿದೆ. ಮಳೆಯ ನೀರಿನ ಜೊತೆ ಮಣ್ಣು, ಬೃಹತ್ ಬಂಡೆ, ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇನ್ನೂ ವಿದ್ಯುತ್ ಕಂಬಗಳು ಧರೆಗೆ ಉಳಿದಿರುವ ಕಾರಣ ನಂದಿಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದನ್ನೂ ಓದಿ: ನಂದಿಬೆಟ್ಟದಲ್ಲಿ ರೋಪ್ ವೇ – ವಾಹನ ನಿಲುಗಡೆಗೆ ಕೃಷಿ ಜಮೀನು ಸ್ವಾಧೀನಕ್ಕೆ ರೈತರ ವಿರೋಧ

    ನಂದಿಬೆಟ್ಟದ ಚೆಕ್ ಪೋಸ್ಟ್ ನ ಸ್ವಲ್ಪ ದೂರದಲ್ಲೇ ರಸ್ತೆಗೆ ಅಡ್ಡಲಾಗಿ ಮಣ್ಣು ಶೇಖರಣೆಯಾಗಿದ್ದರಿಂದ, ಮೊದಲೇ ರೆಸಾರ್ಟ್ ಬುಕ್ ಮಾಡಿಕೊಂಡು ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮೇಲ್ಭಾಗದಲ್ಲಿಯೇ ಸಿಲುಕಿಕೊಂಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕೆಲಸದಲ್ಲಿ ನಿರತರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಭೂ ಕುಸಿತವಾಗಿರೋದು. ಮಲೆನಾಡು ಭಾಗದಲ್ಲಿ ಕಾಣಿಸುತ್ತಿದ್ದ ದೃಶ್ಯಗಳನ್ನ ತಮ್ಮಲ್ಲಿ ಆಗಿರೋದನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್ ಅರ್ಜಿ ಸಲ್ಲಿಕೆ – ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ ರಚಿತಾ ರಾಮ್

  • ಗಮನಿಸಿ, ಪುಷ್ಪಗಿರಿ, ಬ್ರಹ್ಮಗಿರಿಯಲ್ಲಿ ಚಾರಣಕ್ಕೆ ಬ್ರೇಕ್!

    ಗಮನಿಸಿ, ಪುಷ್ಪಗಿರಿ, ಬ್ರಹ್ಮಗಿರಿಯಲ್ಲಿ ಚಾರಣಕ್ಕೆ ಬ್ರೇಕ್!

    ಮಡಿಕೇರಿ: ದೂರದ ಊರಿನಿಂದ ಕೊಡಗಿಗೆ ಆಗಮಿಸುತ್ತಿದ್ದ ಟ್ರೆಕ್ಕಿಂಗ್ ಪ್ರಿಯರಿಗೆ ಚಾರಣವನ್ನು ನಿಷೇಧ ಮಾಡುವ ಮೂಲಕ ಅರಣ್ಯ ಇಲಾಖೆ ಶಾಕ್ ನೀಡಿದೆ.

    ಪ್ರತಿ ವರ್ಷ ಇಲ್ಲಿನ ಬ್ರಹ್ಮಗಿರಿ ಹಾಗೂ ಪುಷ್ಪಗಿರಿ ಬೆಟ್ಟಗಳನ್ನು ಏರುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ರಾಜ್ಯ, ಹೊರ ರಾಜ್ಯ, ವಿದೇಶದಿಂದಲೂ ಚಾರಣ ಪ್ರಿಯರು ಆಗಮಿಸುತ್ತಾರೆ. ಆದರೆ ಸದ್ಯಕ್ಕೆ ಪುಷ್ಪಗಿರಿ, ಬ್ರಹ್ಮಗಿರಿ ಬೆಟ್ಟಗಳಲ್ಲಿ ಚಾರಣಕ್ಕೆ ಬ್ರೇಕ್ ಹಾಕಿ, ಯಾರು ಅರಣ್ಯ ಪ್ರವೇಶ ಮಾಡಬಾರದು ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

    ಟ್ರೆಕ್ಕಿಂಗ್ ಬ್ಯಾನ್ ಮಾಡುವುದಕ್ಕೆ ಮುಖ್ಯವಾದ ಕಾರಣ ಕಾಡ್ಗಿಚ್ಚು. ಬೇಸಿಗೆ ಸಮಯದಲ್ಲಿ ಅಮೂಲ್ಯವಾದ ಸಸ್ಯ ಸಂಪತ್ತು ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ. ಅಲ್ಲದೇ ಕಾಡು ಪ್ರಾಣಿಗಳು ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದ ಅದೆಷ್ಟೋ ಉದಾಹರಣೆಗಳು ಕಣ್ಣ ಮುಂದಿದೆ. ಈ ಕಾಡ್ಗಿಚ್ಚು ಅರಣ್ಯಕ್ಕೆ ಮಾನವನ ಪ್ರವೇಶದಿಂದಲೇ ಆಗುತ್ತಿರುವುದರಿಂದ ಚಾರಣಿಗರನ್ನೇ ಅರಣ್ಯ ಪ್ರವೇಶದಂತೆ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಚಾರಣದಲ್ಲೇ ಲವ್ವಾಗಿ ಮದ್ವೆಯಾದ್ರು- ಅರಣ್ಯಪ್ರದೇಶದ ಅಗ್ನಿ ಅವಘಡಕ್ಕೆ ಪತಿ ಬಲಿ

    ಇಲಾಖೆಯ ಈ ನಿರ್ಧಾರಕ್ಕೆ ಚಾರಣಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಕೂಡ ಪ್ರಕೃತಿಯ ಮೇಲೆ ಪ್ರೀತಿ ಇರುವುದರಿಂದ ಟ್ರೆಕ್ಕಿಂಗ್ ಮಾಡ್ತೀವಿ, ನಮಗೂ ಕಾಡ್ಗಿಚ್ಚಿನ ಬಗ್ಗೆ ಅರಿವಿದೆ. ನಿಷೇಧ ಹೇರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

    ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡುವುದ್ದಕ್ಕೆ ಆಗಲ್ಲ, ಬೇಸಿಗೆಯಲ್ಲಾದರೂ ಕಾಡಿನೊಳಗೆ ಪಯಣಿಸಿ ಪ್ರಕೃತಿಯ ಸೌಂದರ್ಯ ಸವಿಯೋಣ ಎಂದುಕೊಂಡರೆ ಅದಕ್ಕೂ ಬ್ರೇಕಾ ಎಂದು ಚಾರಣಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಇದ್ಯಾವುದಕ್ಕೆ ತಲೆಕೆಡಿಸಿಕೊಳ್ಳದೇ ಬ್ರಹ್ಮಗಿರಿ ಹಾಗೂ ಪುಷ್ಟಗಿರಿ ಬೆಟ್ಟವನ್ನು ಏರದಂತೆ ಬ್ರೇಕ್ ಹಾಕಿದ್ದಾರೆ.

    ಅತಿಕ್ರಮಣ ಪ್ರವೇಶ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಖಡಕ್ ವಾರ್ನಿಂಗ್ ಕೂಡ ನೀಡಿದೆ. ಶೀತ ಆಗುತ್ತೆ ಅಂತಾ ಮೂಗನ್ನ ಕಟ್ ಮಾಡೋಕೆ ಆಗುತ್ತಾ? ಹಾಗೆಯೇ ಕಾಡ್ಗಿಚ್ಚು ಯಾರೋ ಕಿಡಿಗೇಡಿಗಳು ಹಬ್ಬಿಸ್ತಾರೆ ಎಂದು ನಮ್ಮನ್ನು ಅರಣ್ಯ ಪ್ರವೇಶ ಮಾಡದಂತೆ ತಡೆಯೋದು ಎಷ್ಟು ಸರಿ ಅನ್ನೋದು ಚಾರಣಿಗರ ವಾದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv