Tag: ಬ್ರಹ್ಮಗಂಟು

  • ಶೋಭಿತಾ ಸೂಸೈಡ್ ವಿಚಾರ ಕೇಳಿ ಶಾಕ್ ಆಯ್ತು: ನಟ ಹರ್ಷ ಗೌಡ ರಿಯಾಕ್ಷನ್

    ಶೋಭಿತಾ ಸೂಸೈಡ್ ವಿಚಾರ ಕೇಳಿ ಶಾಕ್ ಆಯ್ತು: ನಟ ಹರ್ಷ ಗೌಡ ರಿಯಾಕ್ಷನ್

    ‘ಬ್ರಹ್ಮಗಂಟು’ ಸೀರಿಯಲ್ ನಟಿ ಶೋಭಿತಾ ಶಿವಣ್ಣ (Shobhitha Shivanna) ಆತ್ಮಹತ್ಮೆಗೆ ಸಹನಟ ಹರ್ಷ ಗೌಡ (Harsha Gowda) ಪ್ರತಿಕ್ರಿಯೆ ನೀಡಿದ್ದಾರೆ. ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ಹೀಗ್ಯಾಕೆ ಮಾಡಿಕೊಂಡರು ಗೊತ್ತಾಗುತ್ತಿಲ್ಲ ಎಂದು ಹರ್ಷ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ್ದಾರೆ.

    ಬ್ರಹ್ಮಗಂಟು ಸೀರಿಯಲ್‌ನಲ್ಲಿ ಶೋಭಿತಾ ಪತಿಯ ಪಾತ್ರದಲ್ಲಿ ನಟಿಸಿದ್ದ ಹರ್ಷ ಗೌಡ ಮಾತನಾಡಿ, ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ನಿನ್ನೆ (ಡಿ.1) ಮಧ್ಯಾಹ್ನ ನನಗೆ ಸ್ನೇಹಿತನಿಂದ ಶೋಭಿತಾ ಸೂಸೈಡ್ ವಿಚಾರ ಗೊತ್ತಾಯ್ತು. ಅವರು ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ.

    ನಾಲ್ಕೈದು ವರ್ಷ ನಾವು ಎರಡು ಸೀರಿಯಲ್‌ನಲ್ಲಿ ಒಟ್ಟಾಗಿ ನಟಿಸಿದ್ದೇವೆ. ಈ ಜರ್ನಿಯಲ್ಲಿ ಅವರು ಬಹಳ ಕಷ್ಟಪಟ್ಟು ಬಂದಿದ್ದರು. ಕೆಲವೊಮ್ಮೆ ಸಾಕಾಗಿದೆ, ಕೆಲಸ ಬಿಟ್ಟು ಬಿಡ್ತೀನಿ ಅಂತಾನೂ ಹೇಳುತ್ತಿದ್ದರು. ಮದುವೆಯ ಬಳಿಕ ನಟನೆ ಬಿಟ್ಟರು. ಆಗ ಕರೆ ಮಾಡಿ ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದರು. ನಂತರ ಯಾವಾಗಲಾದರೂ ಅಪರೂಪಕ್ಕೆ ವಿಶೇಷ ದಿನಕ್ಕೆ ಮೆಸೇಜ್ ಮಾಡಿ ಶುಭ ಕೋರುತ್ತಿದ್ದರು ಎಂದರು. ನಿನ್ನೆ ಈ ವಿಚಾರ ಕೇಳಿ ಶಾಕ್ ಆಯ್ತು. ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗಬೇಕಿದೆ. ಈ ರೀತಿ ನಿರ್ಧಾರ ಯಾರು ಮಾಡಬಾರದು. ಏನೇ ಇದ್ದರು ಎದುರಿಸಬಹುದಾಗಿತ್ತು ಎಂದು ಶೋಭಿತಾ ಸೂಸೈಡ್ ಬಗ್ಗೆ ಹರ್ಷ ಮಾತನಾಡಿದ್ದಾರೆ. ಸಹನಟಿಯ ಆತ್ಮಹತ್ಯೆಗೆ ನಟ ಭಾವುಕರಾಗಿದ್ದಾರೆ.

    ಅಂದಹಾಗೆ, ಶೋಭಿತಾ 2 ವರ್ಷಗಳ ಹಿಂದೆ ಸುಧೀರ್‌ ರೆಡ್ಡಿ ಜೊತೆ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್‌ ಆಗಿದ್ದರು. ನಿನ್ನೆ( ಡಿ.1) ನಟಿ ಆತ್ಮಹತ್ಮೆಗೆ ಶರಣಾಗಿದ್ದಾರೆ.

  • ಶೋಭಿತಾ ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ: ಗೀತಾ ಭಾರತಿ ಭಟ್ ಭಾವುಕ

    ಶೋಭಿತಾ ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ: ಗೀತಾ ಭಾರತಿ ಭಟ್ ಭಾವುಕ

    ಕಿರುತೆರೆ ನಟಿ ಶೋಭಿತಾ (35) ಹೈದರಾಬಾದ್‌ನಲ್ಲಿ ಇಂದು (ಡಿ.1) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರಲ್ಲ ಎಂದು ‘ಬ್ರಹ್ಮಗಂಟು’ ಸಹನಟಿ ಗೀತಾ (Geetha Bharathi Bhat) ಪ್ರತಿಕ್ರಿಯಿಸಿದ್ದಾರೆ. ‘ಬ್ರಹ್ಮಗಂಟು’ (Brahmagantu) ಸೀರಿಯಲ್‌ನಲ್ಲಿ ಶೋಭಿತಾ ಜೊತೆ ನಟಿಸಿದ ದಿನಗಳನ್ನು ಗೀತಾ ಸ್ಮರಿಸಿದ್ದಾರೆ.

    ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರು ಅಲ್ಲ. ನಾವಿಬ್ಬರೂ ‘ಬ್ರಹ್ಮಗಂಟು’ ಸೀರಿಯಲ್ ಮಾಡಬೇಕಾದರೆ, ಬೇರೆ ಯಾರೋ ಸೀರಿಯಲ್ ಆರ್ಟಿಸ್ಟ್ ಸೂಸೈಡ್ ಸುದ್ದಿ ಕೇಳಿ ಈ ರೀತಿ ಮಾಡಿಕೊಳ್ಳುವುದು ತಪ್ಪು ಎಂದು ಶೋಭಿತಾ ಚರ್ಚಿಸಿದರು. ಆದರೆ ಇವರ ಸುದ್ದಿ ಈ ತರಹ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಈಗಲೂ ಅವರ ಆತ್ಮಹತ್ಯೆಯ ಸುದ್ದಿ ನಂಬೋಕೆ ತುಂಬಾ ಕಷ್ಟ ಆಗುತ್ತಿದೆ ಎಂದು ನಟಿ ಗೀತಾ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಮಾಡದಿರಲು ಕಾರಣ ಬಿಚ್ಚಿಟ್ಟ ಐಕಾನ್ ಸ್ಟಾರ್

    ಶೋಭಿತಾ ಮದುವೆಯಾದ್ಮೇಲೆ ನನ್ನ ಜೊತೆ ಸಂಪರ್ಕ ಇರಲಿಲ್ಲ. ನಾನು ಅವರನ್ನು ಕಡೆಯದಾಗಿ ಭೇಟಿ ಆಗಿದ್ದು, ಅವರ ಮದುವೆಗೂ ಮುಂಚೆ, ಆ ನಂತರ ಅವರು ಸಿಗಲಿಲ್ಲ. ಅವರಿಗೆ ಅದೇನು ಕಷ್ಟು ಇತ್ತು ಎಂಬುದು ಗೊತ್ತಿಲ್ಲ. ಅವರ ಕಷ್ಟ ಏನಿತ್ತು ಅವರು ಯಾರ ಹತ್ತಿರ ಆದ್ರೂ ಹೇಳಿಕೊಳ್ಳಬೇಕಿತ್ತು. ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ.

    ಅವರ ಕುಟುಂಬವನ್ನು ಶೋಭಿತಾ ನೋಡಿಕೊಳ್ಳುತ್ತಿದ್ದರು. ಅವರು ತುಂಬಾ ಸ್ವಾಭಿಮಾನಿಯಾಗಿದ್ದರು. ಅವರು ತುಂಬಾ ಸ್ಟ್ರಾಂಗ್ ವ್ಯಕ್ತಿ ಆಗಿದ್ದರು. ಅವರು ಈ ಮಟ್ಟಕ್ಕೆ ಕುಗ್ಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದರೆ ನಂಬೋಕೆ ಆಗುತ್ತಿಲ್ಲ ಎಂದು ನಟಿ ಭಾವುಕರಾಗಿದ್ದಾರೆ.

    ಅಂದಹಾಗೆ, ‘ಬ್ರಹ್ಮಗಂಟು’ ಸೀರಿಯಲ್ ಸೇರಿದಂತೆ 12 ಸೀರಿಯಲ್‌ಗಳಲ್ಲಿ ಶೋಭಿತಾ ನಟಿಸಿದರು. ಜಾಕ್‌ಪಾಟ್, ವಂದನಾ, ಅಟೆಂಪ್ಟ್ ಟು ಮರ್ಡರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ನಿನ್ನ ಯಾರು ಮದುವೆ ಆಗ್ತಾರೆ ಎಂದು ಗೇಲಿ ಮಾಡಿದವರಿಗೆ ಗೀತಾ ಭಟ್ ಖಡಕ್ ಉತ್ತರ

    ನಿನ್ನ ಯಾರು ಮದುವೆ ಆಗ್ತಾರೆ ಎಂದು ಗೇಲಿ ಮಾಡಿದವರಿಗೆ ಗೀತಾ ಭಟ್ ಖಡಕ್ ಉತ್ತರ

    ಕಿರುತೆರೆಯ `ಬ್ರಹ್ಮಗಂಟು'(Bhramagantu) ಸೀರಿಯಲ್‌ನ ಗುಂಡಮ್ಮ ಆಗಿ ಮನಗೆದ್ದ ನಟಿ ಗೀತಾ ಭಾರತಿ ಭಟ್(Geetha Bharathi Bhat) ಬಳಿಕ ಬಿಗ್ ಬಾಸ್‌ನಲ್ಲಿ ಮಿಂಚಿದ್ದರು. ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ತಮ್ಮ ಜೀವನ ಕಥೆ ಹೇಳಿ ವೇದಿಕೆಯ ಮೇಲೆ ನಟಿ ಭಾವುಕರಾಗಿದ್ದಾರೆ.

    ಗೀತಾ(Geetha Bhat) ಕಿರುತೆರೆ ಲಗ್ಗೆ ಇಟ್ಟಿದ್ದೇ ಅನಿರೀಕ್ಷಿತವಾಗಿ ಆದರೆ ಇವರು ಎದುರಿಸಿದ ಕಷ್ಟಗಳು ಅದೆಷ್ಟೋ ಜನರಿಗೆ ಸ್ಪೂರ್ತಿ ಎಂದೇ ಹೇಳಬಹುದು. ಅಂದು ದಪ್ಪಗಿದ್ದ ಗುಂಡಮ್ಮ ಇಂದು ಸಣ್ಣಮ್ಮ ಆಗಿದ್ದಾರೆ. ದಪ್ಪಗಿದ್ದ ಸಮಯದಲ್ಲಿ ನಿನ್ನ ಯಾರು ಮದುವೆಯಾಗುತ್ತಾರೆ ಎಂದು ಹೀಯಾಳಿಸಿದ ಅದೆಷ್ಟೋ ಜನರಿಗೆ ಖಾಸಗಿ ವಾಹಿನಿಯ `ಸೂಪರ್ ಕ್ವೀನ್'(Super Queens) ವೇದಿಕೆಯ ಮೂಲಕ ನಟಿ ಉತ್ತರ ಕೊಟ್ಟಿದ್ದಾರೆ.

    ಕಾಲೇಜಿನಲ್ಲಿ ಇದ್ದಾಗ, ಸ್ಕೂಲ್‌ನಲ್ಲಿ ಇದ್ದಾಗ ನಾನು ಈ ರೀತಿ ದಪ್ಪ ಇರುವುದರಿಂದ ತುಂಬಾ ಜನ ಗೇಲಿ ಮಾಡ್ತಾ ಇದ್ರು. ತುಂಬಾ ಜನ ತಮಾಷೆ ಮಾಡ್ತಾ ಇದ್ರು. ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಿದ್ರು. ಡುಮ್ಮಿ, ಆಲದ ಮರ, ಪೂರಿ ಮೂಟೆ ಏನೇನೋ ಹೇಳ್ತಾ ಇದ್ರು. ಯಾವ ರೇಷನ್ ಅಕ್ಕಿ ತಿನ್ನಿಸುತ್ತೀರಾ, ನಿಮ್ಮ ಮಗಳಿಗೆ ಎಂದು ನಮ್ಮ ಅಪ್ಪ ಅಮ್ಮನ ಬಳಿ ಕೇಳ್ತಾ ಇದ್ರು. ನಿನ್ನ ಯಾರು ಮದುವೆ ಆಗ್ತಾರೆ ಎಂದು ಕೇಳ್ತಾ ಇದ್ರು. ಇದನ್ನೂ ಓದಿ:ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ

    ಆಗ ನನಗೆ ಮನಸ್ಸಿಗೆ ಒಂದು ರೀತಿ ಹಿಂಸೆ ಆಗ್ತಾ ಇತ್ತು. ಆದ್ರೆ ಈ ತರದ್ದು ಒಂದು ಅವಕಾಶ ಬರುತ್ತೆ. ನನಗೆ ಇರೋ ಒಂದು ಮೈನಸ್ ಪ್ಲಸ್ ಆಗಿ ಬದಲಾಗುತ್ತೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅಲ್ಲಿಂದ ಇಲ್ಲಿಗೆ ಬರೋಕೆ ಒಂದು ಜರ್ನಿ ಇತ್ತಲ್ಲ, ಆ ಜರ್ನಿಯಲ್ಲಿ ತುಂಬಾ ಕಲಿತಿದ್ದೇನೆ. ತುಂಬಾ ವಿಷಯಗಳನ್ನು ಕಳ್ಕೊಂಡಿದೀನಿ, ಪಡೆದುಕೊಂಡಿದ್ದೇನೆ. ನಾನು 30 ಕೆ.ಜಿ ತೂಕ ಕಳೆದುಕೊಂಡಿದ್ದೇನೆ. ಇನ್ನೂ 30 ಕೆಜಿ ತೂಕ ಕಳೆದುಕೊಳ್ಳುವ ಗೋಲ್ ಇದೆ ಎಂದು ಗೀತಾ ಭಟ್ ಹೇಳಿದ್ದಾರೆ. ಚಿಕ್ಕ ವಯಸ್ಸಿನಿಂದ ನನಗೆ ಇರೋ ವಿಶ್ ಅಂದ್ರೆ ಅಪ್ಪನನ್ನು ಹಗ್ ಮಾಡಬೇಕು ಎನ್ನುವುದಂತೆ. ನಾನು ಇಲ್ಲಿಯವರೆಗೂ ಅಪ್ಪನನ್ನು ಒಂದು ಸಲವೂ ಹಗ್ ಮಾಡಿಲ್ಲ. ಅಪ್ಪನನ್ನು ಹಗ್ ಮಾಡಿ ಭಾವುಕರಾಗಿದ್ದಾರೆ.

    ರೂಪೇಶ್ ಶೆಟ್ಟಿ ಜೊತೆ `ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದಲ್ಲಿ ನಾಯಕಿಯಾಗಿ ಗೀತಾ ನಟಿಸಿದ್ದಾರೆ. ಸಂತೋಷ್ ಕೊಡಂಕೇರಿ ನಿರ್ದೇಶನದ ಚಿತ್ರದಲ್ಲೂ ಗೀತಾ ಫೀಮೇಲ್ ಲೀಡ್ ಆಗಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಲಿವುಡ್‌ನತ್ತ ಕನ್ನಡದ ನಟ ಭರತ್ ಭೋಪಣ್ಣ

    ಕಾಲಿವುಡ್‌ನತ್ತ ಕನ್ನಡದ ನಟ ಭರತ್ ಭೋಪಣ್ಣ

    ಕಿರುತೆರೆಯ `ಬ್ರಹ್ಮಗಂಟು'(Bramhagantu Serial) ಸೀರಿಯಲ್ ಮೂಲಕ ಮನೆಮಾತಾದ ನಟ ಭರತ್ ಭೋಪಣ್ಣ(Bharath Bopanna) ಕನ್ನಡದ `ಡೆಮೋಪೀಸ್’ ಚಿತ್ರದಲ್ಲಿ ಹೀರೋ ಆಗಿ ಮಿಂಚಿದ್ದರು. ಇದೀಗ ಕೊಡಗಿನ ಕುವರ ಭರತ್ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ.

     

    View this post on Instagram

     

    A post shared by Bharat Bopana (@iambharathbopanna7)

    ಟಿವಿ ಲೋಕದಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಛಾಪೂ ಮೂಡಿಸಿದ್ದ ಭರತ್ ಭೋಪಣ್ಣ ಡೆಮೋ ಪೀಸ್(Demo Piece) ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಇನ್ನೂ `ವಿಜಯಾನಂದ’ (Demopiece) ಚಿತ್ರದಲ್ಲೂ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿರುವ ಭರತ್ ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ಆಲಿಯಾ ರಣಬೀರ್ ಮಗು ನೋಡೋಕೆ ಕೋವಿಡ್ ಟೆಸ್ಟ್ ಕಡ್ಡಾಯ

     

    View this post on Instagram

     

    A post shared by Bharat Bopana (@iambharathbopanna7)


    ಕಂಗನಾ ನಟನೆಯ `ತಲೈವಿ’ ಚಿತ್ರದ ಡೈರೆಕ್ಟರ್ ವಿಜಯ್ ನಿರ್ದೇಶನದ `ಅಚ್ಚಚ್ಚಮ್ ಎಂಬತ್ತು ಇಳಯೇ’ ಚಿತ್ರದಲ್ಲಿ ಅರುಣ್ ವಿಜಯ್ ನಾಯಕನಾಗಿದ್ದು, ಈ ಚಿತ್ರದಲ್ಲಿ ಭರತ್ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನ ಲಂಡನ್‌ನಲ್ಲಿ ಮುಗಿಸಿ ಬಂದಿದ್ದಾರೆ.

     

    View this post on Instagram

     

    A post shared by Bharat Bopana (@iambharathbopanna7)

    ಕನ್ನಡ ಕಿರುತೆರೆ, ಸ್ಯಾಂಡಲ್‌ವುಡ್ ನಂತರ ಇದೀಗ ತಮಿಳು ಚಿತ್ರರಂಗದಲ್ಲಿ ಕನ್ನಡದ ಪ್ರತಿಭೆ ಮಿಂಚಲು ಸಿದ್ಧವಾಗಿದೆ. ಪ್ರತಿಭೆ ಮತ್ತು ಅದೃಷ್ಟದ ಮೂಲಕ ಭರತ್‌ ಸೌತ್‌ ಸಿನಿರಂಗದಲ್ಲೂ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]