Tag: ಬ್ಯೂಟಿ ಪಾರ್ಲರ್

  • ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    – ಪತಿಯೇ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿರುವ ಆರೋಪ

    ಆನೇಕಲ್: 12 ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಆ ಜೋಡಿ ಮದ್ವೆಯಾಗಿತ್ತು (Marriage). ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರ ಸುಃಖವಾಗಿತ್ತು ಅನ್ನುವಾಗಲೇ ದುರಂತ ನಡೆದುಬಿಟ್ಟಿದೆ. ಅದೊಂದು ವಿಚಾರ ಆ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿ, ಒಬ್ಬರ ಸಾವಿಗೂ ಕಾರಣವಾಗಿದೆ.

    ದುರಂತದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ ದೀಪು, ಹಲ್ಲೆ ಮಾಡಿದ ಪತಿ ಉದಯ್‌. ಮೂಲತಃ ಪಿರಿಯಾಪಟ್ಟಣದ (Piriyapatna) ನಿವಾಸಿಯಾದ ದೀಪು 12 ವರ್ಷಗಳ ಹಿಂದೆ ಗುರು ಹಿರಿಯರ ಸಮ್ಮುಖದಲ್ಲಿ ಉದಯ್‌ ಎಂಬಾತನನ್ನ ವಿವಾಹವಾಗಿದ್ದಳು. ದಂಪತಿಗೆ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ ಇತ್ತೀಚೆಗೆ ಉದಯ್-ದೀಪಾ ದಂಪತಿ ನಡುವೆ ಬ್ಯೂಟಿ ಪಾರ್ಲರ್ ಆಂಟಿ ಎಂಟ್ರಿ ಕೊಟ್ಟಿದ್ದು, ಸಂಸಾರಕ್ಕೆ ಹುಳಿ ಹಿಂಡಿತ್ತು. ಇದನ್ನೂ ಓದಿ: Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

    ಚಾಮುಂಡಿಬೆಟ್ಟದಲ್ಲಿ ಮಾತುಕತೆ ನಡೆದು ಗಂಡ ಉದಯ್ ಬ್ಯೂಟಿ ಪಾರ್ಲರ್ ಆಂಟಿಗೆ (Beauty Parlour Aunty) ಕಟ್ಟಿದ ತಾಳಿ ತೆಗೆಸಿದ್ರು. ಆದರೂ ಸಂಸಾರದ ತಾಳ ಮೇಳ ಸರಿಯಾಗಲಿಲ್ಲ. ನಿತ್ಯ ಮನೆಯಲ್ಲಿ ಆಂಟಿ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ಹೊಡೆದಾಟ ಕಾಮನ್ ಆಗಿತ್ತು. ಇದೇ ತಿಂಗಳು 6ನೇ ತಾರೀಖು ಆಂಟಿ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಗಂಡ ಉದಯ್ ಹಲ್ಲೆ ನಡೆಸಿ ನೀನು ಎಲ್ಲಾದರೂ ಹೋಗಿ ಸಾಯಿ ಎಂದು ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಪತ್ನಿ ದೀಪಾ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಚಿಕಿತ್ಸೆ ಫಲಕಾರಿಯಾಗದೇ 9ನೇ ತಾರೀಖು ನಗರದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಗಂಡು ಹುಟ್ಟಲಿಲ್ಲ ಅಂತ ಬೇಸರಗೊಂಡು ಹೆಣ್ಣುಮಗಳಿಗೆ ವಿಷವಿಕ್ಕಿ ಕೊಂದ ಸೇನಾ ಸಿಬ್ಬಂದಿ

    ಇತ್ತ ದೀಪಾಳ ಪೋಷಕರು ಕ್ರಿಮಿ ನಾಶಕ ಕುಡಿಸಿ ಮಗಳನ್ನ ಉದಯ್ ಕೊಂದಿರುವುದಾಗಿ ಆರೋಪಿಸಿದ್ದಾತೆ. ಮಹಿಳೆಯೊಬ್ಬಳ ಅಕ್ರಮ ಸಂಬಂಧ ವಿಚಾರಕ್ಕೆ ಪದೇ ಪದೇ ಹಲ್ಲೆ ನಡೆಸುತ್ತಿದ್ದ ಉದಯ್‌. ಕಿವಿ ಓಲೆ ಕೂಡ ಹಲ್ಲೆ ವೇಳೆ ಮುರಿದು ಹೋಗಿತ್ತು. ಬದುಕಲು ಸಾಧ್ಯವಿಲ್ಲ ಎಂದಾಗ ಬುದ್ಧಿ ಮಾತು ಹೇಳಿದ್ದೆವು. ಆದರೂ ಮನೆಯ ವಿಚಾರ ನಿಮ್ಮ ಕುಟುಂಬದವರಿಗೆ ತಿಳಿಸುತ್ತಿಯಾ ಎಂದು ಹಲ್ಲೆ ನಡೆಸಿದ್ದಾನೆ. ಹಣಕ್ಕಾಗಿಯು ಸಾಕಷ್ಟು ಪೀಡಿಸಿದ್ದಾನೆ. ಕೊನೆಗೆ ಕ್ರಿಮಿನಾಶಕ ಕುಡಿದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಕೊನೆ ಕ್ಷಣದಲ್ಲಿ ನಮಗೆ ತಿಳಿಸಿದ್ರು ಮಗಳ ಗಂಡ ಉದಯ್ ವಿಶ ಕುಡಿಸಿ ಕೊಂದಿರುವ ಸಾಧ್ಯತೆ ಇದೆ. ಪೊಲೀಸರು ನ್ಯಾಯ ಕೊಡಿಸಬೇಕು ಎಂದು ಮೃತ ದೀಪಾ ಕುಟುಂಬದವರು ಆಗ್ರಹಿಸಿದ್ದಾರೆ.

    ಸದ್ಯ ಮೃತ ದೀಪಾ ತಾಯಿ ಸುಗುಣಮ್ಮ ದೂರು ಆಧರಿಸಿ ಆತ್ಮಹತ್ಯೆ ಪ್ರಚೋದನೆ ಸೇರಿದಂತೆ ಜಾಮೀಜು ರಹಿತ ಸೆಕ್ಷನ್ ಅಡಿಯಲ್ಲಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರು. ಆರೋಪಿ ಉದಯ್‌ನನ್ನ ವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ನಾಗ್ಪುರ | ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನ ಬೈಕ್‌ನಲ್ಲೇ ಸಾಗಿಸಿದ ಪತಿ

  • ಪುರುಷರು ಕೆಲಸ ಮಾಡೋ ಬ್ಯೂಟಿ ಪಾರ್ಲರ್‌ಗಳಿಗೆ ಮುಸ್ಲಿಂ ಮಹಿಳೆಯರು ಹೋಗ್ಬಾರ್ದು: ಮುಫ್ತಿ ಅಸದ್ ಕಾಸ್ಮಿ

    ಪುರುಷರು ಕೆಲಸ ಮಾಡೋ ಬ್ಯೂಟಿ ಪಾರ್ಲರ್‌ಗಳಿಗೆ ಮುಸ್ಲಿಂ ಮಹಿಳೆಯರು ಹೋಗ್ಬಾರ್ದು: ಮುಫ್ತಿ ಅಸದ್ ಕಾಸ್ಮಿ

    ಲಕ್ನೋ: ಶುಕ್ರವಾರ ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರ (Saharanpur) ಜಿಲ್ಲೆಯ ಧರ್ಮಗುರುವೊಬ್ಬರು, ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್‌ಗಳಿಗೆ (Beauty Parlour) ಮುಸ್ಲಿಂ ಮಹಿಳೆಯರು (Muslim Women) ಹೋಗುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ಅಂತಹ ಪಾರ್ಲರ್‌ಗಳಲ್ಲಿ ಮಹಿಳೆಯರು ತಮ್ಮ ಮೇಕಪ್ ಮಾಡಿಕೊಳ್ಳುವುದು ‘ನಿಷಿದ್ಧ’ ಮತ್ತು ‘ಕಾನೂನುಬಾಹಿರ’ ಎಂದು ಕರೆದಿದ್ದಾರೆ.

    ಮುಫ್ತಿ ಅಸದ್ ಕಾಸ್ಮಿ (Mufti Asad Kasmi) ಅವರು ಈ ಹೇಳಿಕೆಗಳನ್ನು ನೀಡಿದ್ದು, ಮುಸ್ಲಿಂ ಮಹಿಳೆಯರು ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡುವುದನ್ನು ತಡೆಯಬೇಕು. ಬದಲಿಗೆ ಮಹಿಳೆಯರು ಮಾತ್ರ ಕೆಲಸ ಮಾಡುವ ಸಲೂನ್‌ಗಳನ್ನು ಆರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಐವರು ಲಷ್ಕರ್ ಭಯೋತ್ಪಾದಕರ ಹತ್ಯೆ

    ಕಳೆದ ತಿಂಗಳು, ಕಾನ್ಪುರದ ಮಹಿಳೆಯೊಬ್ಬರು ಐಬ್ರೋಸ್ ಮಾಡಿಸಿದ್ದಕ್ಕಾಗಿ ಆಕೆಯ ಪತಿ ಸೌದಿ ಅರೇಬಿಯಾದಿಂದ ಫೋನ್ ಮಾಡಿ ತ್ರಿವಳಿ ತಲಾಖ್ ನೀಡಿದ್ದಾರೆ. ಆಕೆಯ ಪತಿ ಸೌದಿಯಿಂದ ವೀಡಿಯೊ ಕಾಲ್ ಮಾಡಿ ಮಾತನಾಡುವ ಸಂದರ್ಭ ಪತ್ನಿ ಐಬ್ರೋಸ್ ಮಾಡಿಸಿರುವುದನ್ನು ಗಮನಿಸಿದ್ದಾರೆ. ಈ ಕುರಿತು ಆಕೆಯನ್ನು ಪತಿ ಪ್ರಶ್ನಿಸಿದ್ದು, ಆಕೆಯ ವಿವರಣೆಯಿಂದ ಅಸಮಾಧಾನಗೊಂಡು ವೀಡಿಯೋ ಕಾಲ್‌ನಲ್ಲಿಯೇ ತ್ರಿವಳಿ ತಲಾಖ್ ನೀಡಿದ್ದಾರೆ. ಇದನ್ನೂ ಓದಿ:  ಮಹಿಳೆಯಿಂದ ಬ್ಲ್ಯಾಕ್‌ಮೇಲ್ – ಎಂಪಿ ದೇವೇಂದ್ರಪ್ಪ ಪುತ್ರನಿಂದ ದೂರು, ಎಫ್‌ಐಆರ್ ದಾಖಲು

  • ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ – ತಾಲಿಬಾನ್‌ ಸರ್ಕಾರ

    ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ – ತಾಲಿಬಾನ್‌ ಸರ್ಕಾರ

    ಕಾಬೂಲ್‌: ಈ ಹಿಂದೆ ಮಹಿಳೆಯರು (Womens) ಮನರಂಜನಾ ಸ್ಥಳಗಳಿಗೆ ಹೋಗುವುದನ್ನ ನಿಷೇಧಿಸಿದ್ದ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಸರ್ಕಾರ ಇದೀಗ ಕಾಬೂಲ್‌ ಸೇರಿದಂತೆ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ (Women Beauty Salons) ನಿಷೇಧಿಸುವಂತೆ ಆದೇಶಿಸಿದೆ.

    ತಾಲಿಬಾನ್(Taliban) ಸಚಿವಾಲಯದ ವಕ್ತಾರ ಮೊಹಮ್ಮದ್ ಅಕಿಫ್ ಮಹಜರ್ ಕೂಡಲೇ ಮಹಿಳೆಯರ ಬ್ಯೂಟಿ ಸಲೊನ್‌ಗಳನ್ನ ನಿಷೇಧಿಸಲು ಆದೇಶ ಹೊರಡಿಸುವಂತೆ ಕಾಬೂಲಿನ ಮುನ್ಸಿಪಾಲಿಟಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ

    ಈ ನಡುವೆ ಪುರುಷರು ನಿರುದ್ಯೋಗಿಗಳಾಗಿದ್ದಾರೆ, ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಹಿಳೆಯರು ಒಂದೊತ್ತಿನ ಊಟಕ್ಕಾಗಿ ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಮಾಡಲು ಹೋಗ್ತಿದ್ದಾರೆ. ಅದನ್ನೂ ನಿಷೇಧಿಸಿದ್ರೆ ನಾವೇನು ಮಾಡಬೇಕು? ಎಂದು ಮೇಕಪ್‌ ಕಲಾವಿಧ ರೈಹಾನ್ ಮುಬಾರಿಜ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್‌ ಸೂಚನೆ

    ಪುರುಷರಿಗೆ ಉದ್ಯೋಗವಿದ್ದರೆ ನಾವು ಮನೆಯಿಂದ ಹೊರಬರುವುದಿಲ್ಲ. ಆದ್ರೆ ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡೋದು? ನಾವು ಹಸಿವಿನಿಂದ ಸಾಯುವಂತ ಪರಿಸ್ಥಿತಿ ಬಂದಿದೆ. ಅದನ್ನೇ ನೀವು ಬಯಸುತ್ತಿದ್ದೀರಿ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

    ಈ ಹಿಂದೆ ಮುಸ್ಲಿಂ ಹುಡುಗಿಯರು ಹಾಗೂ ಯುವತಿಯರು ಶಾಲೆ-ಕಾಲೇಜುಗಳಿಗೆ ಹೋಗುವುದು, ಎನ್‌ಜಿಒಗಳಲ್ಲಿ ಕೆಲಸ ಮಾಡುವುದನ್ನ ತಾಲಿಬಾನ್‌ ಸರ್ಕಾರ ನಿಷೇಧಿಸಿತ್ತು. ಆ ನಂತರ ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದು, ಪಾರ್ಕ್‌ಗೆ ಹೋಗುವುದು, ಚಿತ್ರಮಂದಿರ ಮತ್ತು ಇತರ ಮನರಂಜನಾ ಪ್ರದೇಶಗಳಿಗೆ ಹೋಗುವುದಕ್ಕೂ ಬ್ರೇಕ್‌ ಹಾಕಿದೆ. ಇದೀಗ ಮಹಿಳೆಯರ ಬ್ಯೂಟಿ  ಸಲೂನ್‌ಗಳನ್ನ ನಿಷೇಧಿಸಿ ಆದೇಶ ಹೊರಡಿಸಿದೆ.

    ಕಾಬೂಲಿನ ನಿವಾಸಿಗಳು, ಸರ್ಕಾರವು ತನ್ನ ಕ್ರಮಗಳಿಗೆ ಒಂದು ಚೌಕಟ್ಟನ್ನು ರೂಪಿಸಬೇಕು. ಆ ಚೌಕಟ್ಟು ಇಸ್ಲಾಂಗೆ ಅಥವಾ ದೇಶಕ್ಕೆ ಹಾನಿಯಾಗದ ರೀತಿಯಲ್ಲಿ ಇರಬೇಕು ಎಂದು ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಬೆಂಗಳೂರು: ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದೂ ಪ್ರೀತಿಯಲ್ಲ. ಕಾಲ್ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ, ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತಾ ಅರ್ಥವಲ್ಲ. ನೀನು ಚಂದವಳ್ಳಿಯ ತೋಟದಲ್ಲಿ ಅರಳಿರುವ ಹೂವು ಅಂತಾ ಬಣ್ಣದ ಮಾತುಗಳನ್ನಾಡಿದರೆ ಅದು ಎದ್ವಾತದ್ವಾ ಪ್ರೀತಿ ಇದೆ ಅಂತಲ್ಲ. ಈ ಡೈಲಾಗ್‌ಗಳನ್ನ ನಿತ್ಯ ಪ್ರೇಮಿಗಳಿಂದ ಕೇಳುತ್ತಲೇ ಇರುತ್ತೇವೆ.

    ಬೆಂಗಳೂರಿನ ಮಹಿಳೆಯೊಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ಪತಿಯ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಈ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, `ಮುಂದಿನ ರೀಲ್‌ನಲ್ಲಿ ಅಂತಿಮ ಪ್ರೀತಿ’ ಎಂದೂ ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮಹಿಳೆಯ ಫೋಟೋ ಹಂಚಿಕೊಳ್ಳಲಾಗಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫೋಟೋದಲ್ಲಿನ ಮಹಿಳೆ ತನ್ನ ಪತಿ ಸತೀಶ್ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾಳೆ. 2.68 ಲಕ್ಷಕ್ಕೂ ಅಧಿಕ ಮಂದಿ ಫೋಟೋವನ್ನ ಲೈಕ್ ಮಾಡಿದ್ದಾರೆ.

    ಮಹಿಳೆಯ ಫೋಟೋವನ್ನು ನೋಡಿ ಕೆಲವರು ಇದು ಪಕ್ಕಾ ಟ್ರೂ ಲವ್ ಅಂತಾ ಹೊಗಳಿದರೆ, ಇನ್ನೂ ಕೆಲವರು ಇದು ಓವರ್ ಆಕ್ಷನ್, ನಾನು ನನ್ನ ಲೈಕ್ ಅನ್ನು ಕ್ಯಾನ್ಸಲ್ ಮಾಡ್ತೀನಿ. ಇದು ಮೂರ್ಖತನ, ನಿಜವಾದ ಪ್ರೀತಿಯನ್ನ ಈ ರೀತಿ ಸಾಬೀತು ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

  • ಬ್ಯೂಟಿ ಪಾರ್ಲರ್‌ಗೆ ಹೋಗೋದನ್ನ ತಡೆದ ಪತಿ – ಪತ್ನಿ ಆತ್ಮಹತ್ಯೆ

    ಬ್ಯೂಟಿ ಪಾರ್ಲರ್‌ಗೆ ಹೋಗೋದನ್ನ ತಡೆದ ಪತಿ – ಪತ್ನಿ ಆತ್ಮಹತ್ಯೆ

    ಭೋಪಾಲ್: ಬ್ಯೂಟಿ ಪಾರ್ಲರ್‌ಗೆ (Beauty Parlour) ಹೋಗುವುದನ್ನು ಪತಿ (Husband) ತಡೆದಿದ್ದಕ್ಕೆ ಮಹಿಳೆಯೊಬ್ಬಳು (Woman) ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

    ರೀನಾ ಯಾದವ್ (34) ಮೃತ ಮಹಿಳೆ. ರೀನಾ ಬ್ಯೂಟಿ ಪಾರ್ಲರ್‌ಗೆ ಹೋಗಲು ಸಿದ್ಧಳಾಗುತ್ತಿದ್ದಳು. ಈ ವೇಳೆ ಆಕೆಯ ಪತಿ ಬಲರಾಮ್ ಪಾರ್ಲರ್‌ಗೆ ಹೋಗುವುದು ಬೇಡ ಎಂದು ತಡೆದಿದ್ದಾನೆ. ಇದರಿಂದ ಕೋಪಗೊಂಡ ರೀನಾ ತನ್ನ ರೂಮ್‍ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಘಟನೆ ಬಳಿಕ ಆಕೆಯ ಪತಿ ಬಲರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಮದುವೆಯಾಗಿ 15 ವರ್ಷಗಳಾಗಿದ್ದು, ಬಲರಾಮ್ ಹಾಗೂ ರೀನಾ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾರಿನಿಂದ ಕುಸಿದಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ – ಬಿಎಸ್‍ವೈ

  • ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

    ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

    ಕೋಲಾರ: ತಾಲ್ಲೂಕಿನ ಮುದುವಾಡಿ ಬಳಿಯ ತೊಂಡಾಲ ಗ್ರಾಮದ ಕೆರೆಯಲ್ಲಿ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ (Women) ಶವ ಪತ್ತೆಯಾಗಿದೆ.

    ಸುಟ್ಟುಹೋದ ಸ್ಥಿತಿಯಲ್ಲಿದ್ದ ದೇಹದಲ್ಲಿ ಮಾಂಗಲ್ಯ ಸರ ಪತ್ತೆಯಾಗಿದ್ದು, ಮೃತದೇಹ ಮಹಿಳೆಯದ್ದೇ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಧನ್ಯಾ ರಾಮ್ ಕುಮಾರ್ ನಟನೆ ‘ಹೈಡ್ ಅಂಡ್ ಸೀಕ್’ ಚಿತ್ರದ ಫಸ್ಟ್ ಲುಕ್ ರಿಲೀಸ್

    ಮೃತದೇಹ ಶ್ರೀನಿವಾಸಪುರದ ಮಹಿಳೆ ಶೋಭಾ (37) ಅವರದ್ದು, ಎಂದು ಗುರುತಿಸಲಾಗಿದೆ. ಕಿಡಿಗೇಡಿಗಳು ಮಹಿಳೆಯನ್ನ ಕೊಲೆ ಮಾಡಿ, ಸುಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸೀರೆಯೇ ಚಂದ ಎಂದಿದ್ದ ವಿದ್ಯಾ ಬಾಲನ್ ಕೈಯಲ್ಲಿ ನ್ಯೂಸ್ ಪೇಪರ್

    ಕೋಲಾರ ಗ್ರಾಮಾಂತರ ಪೊಲೀಸರು (Kolar Rural Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಹಿಳೆಯ ಗುರುತು ಪತ್ತೆಯಾಗಿದೆ. ಇಲ್ಲಿನ ನಿವಾಸಿ ವೆಂಕಟರಮಣ ಈಕೆಯನ್ನ 2ನೇ ಮದುವೆಯಾಗಿದ್ದ. ಮಹಿಳೆ ಶೋಭಾ ಶ್ರೀನಿವಾಸಪುರದಲ್ಲೇ ಬ್ಯೂಟಿಪಾರ್ಲರ್ (Beauty Parlour) ನಡೆಸುತ್ತಿದ್ದರು ಎಂದು ಹೇಳಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

  • ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಮಂಡ್ಯ: ಸದಾ ಸುದ್ದಿಯಲ್ಲೇ ಇರುವ ಕಾಂಗ್ರೆಸ್‍ನ (Congress) ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‍ನ ಸಹೋದರ ಕೆ.ಬಿ.ರವಿಕುಮಾರ್ ಇದೀಗ ಮಹಿಳೆಯ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕೆಆರ್ ಪೇಟೆಯ (K.R.Pete) ಮಹಿಳೆಯೊಂದಿಗೆ ಕೆ.ಬಿ.ರವಿ ಟವಲ್ ಹಾಗೂ ಬನಿಯನ್‍ನಲ್ಲಿ ಸಿಕ್ಕಿಬಿದ್ದು ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    ನಗರದಲ್ಲಿರುವ ರವಿಯವರ ವಾಣಿಜ್ಯ ಕಟ್ಟಡದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದಳು. ಶುಕ್ರವಾರ ಮಹಿಳೆ ಮನೆಗೆ ಬಾರದ ಹಿನ್ನೆಲೆ ಗಂಡ ಹಾಗೂ ಆತನ ಮನೆಯವರು ರವಿಯವರ ಮನೆಯ ಬಳಿ ಬಂದು ನೋಡಿದಾಗ ಆಕೆಯ ಸ್ಕೂಟರ್ (Scooter) ಇರುವುದು ಪತ್ತೆಯಾಗಿದೆ. ಕುಟುಂಬ ಆಕೆಯನ್ನು ಕರೆದು ಕೇಳಿದಾಗ ನನಗೆ ನೀನು ಬೇಡ, ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಎಂದು ಗಂಡನಿಗೆ ಗದರಿಸಿದ್ದಾಳೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

    ಮಹಿಳೆಯ ಕುಟುಂಬದಲ್ಲಿ ಅಕ್ರಮ ಸಂಬಂಧ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಗಂಡ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ (Dowry) ಕಿರುಕುಳದ ದೂರನ್ನು ಸಹ ನೀಡಿದ್ದಳು. ಅಲ್ಲದೇ ನನಗೆ ವಿಚ್ಛೇದನ (Divorce) ಬೇಕು ಎಂದು ಕಳೆದ ತಿಂಗಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದಳು.

    ಒಂದು ಕಡೆ ಕೆ.ಬಿ.ಚಂದ್ರಶೇಖರ್ ರಾಜಕೀಯದಲ್ಲಿ ಬೆಳವಣಿಗೆ ಪಡೆಯಬೇಕೆಂದು ಸರ್ಕಸ್ ಮಾಡ್ತಾ ಇದ್ದಾರೆ. ಇತ್ತ ಸಹೋದರ ಮಹಿಳೆಯ ಜೊತೆ ಸಿಕ್ಕಿ ಬಿದ್ದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ಈ ಪ್ರಕರಣ ಯಾವ ಆಯಾಮ ಪಡೆದುಕೊಳ್ಳುತ್ತದೆ ಎಂದು ಜನ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ

  • ವಿವಾಹಿತ ಮಹಿಳೆಯ ಖಾಸಗಿ ವೀಡಿಯೋ ಇಟ್ಕೊಂಡು ದೈಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ ಕಾಮುಕ ಅರೆಸ್ಟ್

    ವಿವಾಹಿತ ಮಹಿಳೆಯ ಖಾಸಗಿ ವೀಡಿಯೋ ಇಟ್ಕೊಂಡು ದೈಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ ಕಾಮುಕ ಅರೆಸ್ಟ್

    ಬೆಂಗಳೂರು: ವಿವಾಹಿತ ಮಹಿಳೆಯ (Women) ಖಾಸಗಿ ವೀಡಿಯೋ (Private Video) ವೈರಲ್ ಮಾಡಿದ್ದ ಆರೋಪಿಯನ್ನು ಬೆಂಗಳೂರು (Bengaluru) ಈಶಾನ್ಯ ವಿಭಾಗದ CEN ಪೊಲೀಸರು ಬಂಧಿಸಿದ್ದಾರೆ.

    ಬಂಗಾಳ ಮೂಲದ ಸಮರ್ ಪರಿಮಣಿಕಂಠ ಬಂಧಿತ ಕಾಮುಕ. ಕೊಡಿಗೇಹಳ್ಳಿಯ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಕೋರ್ಸ್ ಕಲಿಯಲು ಬಂದಿದ್ದ 22 ವರ್ಷದ ಮಹಿಳೆ ಜೊತೆ ಆರೋಪಿ ಸಮರ್ ಪರಿಮಣಿಕಂಠ ಪರಿಚಯ ಬೆಳೆಸಿಕೊಂಡು ಬಳಿಕ ಸ್ನೇಹ ಬೆಳೆಸಿ ಮಹಿಳೆಯ ಖಾಸಗಿ ಫೋಟೋ, ವೀಡಿಯೋ ಸಂಗ್ರಹ ಮಾಡಿದ್ದ. ಇದಾದ ಬಳಿಕ ದೈಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ ಆರೋಪಿಯ ಕಿರುಕುಳ ತಾಳಲಾರದೆ ಸಂತ್ರಸ್ಥೆ ಈಶಾನ್ಯ CEN ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದನ್ನೂ ಓದಿ: ತನ್ನ ಮೇಲೆ ಅತ್ಯಾಚಾರಗೈದ ಆರೋಪಿಯ ತಾಯಿಯ ಮೇಲೆ ಶೂಟೌಟ್, ಅಪ್ರಾಪ್ತೆ ಅರೆಸ್ಟ್

    ಜನವರಿ 6 ರಂದು ಬೆಂಗಳೂರು ಈಶಾನ್ಯ CEN ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೇಸ್ ದಾಖಲಾಗಿತ್ತು. ಬ್ಯೂಟಿ ಪಾರ್ಲರ್‌ಗೆ ಕಸ್ಟಮರ್ ಆಗಿ ಬಂದು ಪರಿಚಿತನಾಗಿದ್ದ ಆರೋಪಿ ಸಮರ್ ಪರಿಮಣಿಕಂಠ ಜೊತೆ ಸಂತ್ರಸ್ಥೆ ಕೂಡ ಬಂಗಾಳ ಮೂಲದವಳಾಗಿದ್ದ ಹಿನ್ನೆಲೆ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಆ ಬಳಿಕ ಹೆಚ್ಚಿನ ಹಣ ಸಂಪಾದನೆ ಮಾಡಲು ಸಂತ್ರಸ್ಥೆಯನ್ನು ಡ್ಯಾನ್ಸ್ ಬಾರ್‌ಗೆ ದೂಡಿದ್ದ. ಜ್ಯುವೆಲ್ಲರಿ ಶಾಪ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಸಮರ್ ಪರಿಮಣಿಕಂಠನ ಟಾರ್ಚರ್ ತಾಳಲಾರದೆ ಸಂತ್ರಸ್ಥೆ ವಾಪಾಸ್ ಬಂಗಾಳಕ್ಕೆ ತೆರಳಿ ಬೇರೆ ಯುವಕನೊಂದಿಗೆ ವಿವಾಹವಾಗಿದ್ದಳು. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

    ಆ ಬಳಿಕ ಕಳೆದ ಆರು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸ್ ಬಂದು ಪತಿಯೊಂದಿಗೆ ವಾಸವಾಗಿದ್ದಳು. ಈ ವಿಚಾರ ತಿಳಿದು ಸಮರ್ ಮಣಿಕಂಠನ್, ಸಂತ್ರಸ್ಥೆಯ ಖಾಸಗಿ ಫೋಟೋ, ವೀಡಿಯೋ ತೋರಿಸಿ ಬ್ಲಾಕ್‍ಮೇಲ್ ಮುಂದುವರಿಸಿದ್ದ. ಸಂತ್ರಸ್ಥೆ ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಸಂಬಂಧಿಕರಿಗೆ ಫೋಟೋ, ವೀಡಿಯೋ ಕಳುಹಿಸಿ ವಿಕೃತಿ ಮೆರೆದಿದ್ದ. ಈ ಬಗ್ಗೆ ಸಂತ್ರಸ್ಥೆಯ ದೂರಿನ ಹಿನ್ನೆಲೆ ಪೊಲೀಸರು ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರಿಯಾಗಿ ಮೇಕಪ್ ಮಾಡ್ಲಿಲ್ಲ ಅಂತ ಬ್ಯೂಟಿ ಪಾರ್ಲರ್ ವಿರುದ್ಧ ವಧು ಕೇಸ್

    ಸರಿಯಾಗಿ ಮೇಕಪ್ ಮಾಡ್ಲಿಲ್ಲ ಅಂತ ಬ್ಯೂಟಿ ಪಾರ್ಲರ್ ವಿರುದ್ಧ ವಧು ಕೇಸ್

    ಭೋಪಾಲ್: ವಧುವಿನ (Bride) ಮೇಕಪ್ (Makeup) ಸರಿಯಾಗಿ ಮಾಡದ್ದಕ್ಕೆ ಬ್ಯೂಟಿ ಪಾರ್ಲರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ ವಿಚಿತ್ರ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್ಪುರದಲ್ಲಿ ಬೆಳಕಿಗೆ ಬಂದಿದೆ.

    ಡಿ.3 ರಂದು ವಧುವಿನ ಮದುವೆಯಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಮೋನಿಕಾ ಮೇಕಪ್ ಸ್ಟುಡಿಯೋಕ್ಕೆ ಕರೆದೊಯ್ದಿದ್ದಾರೆ. ಪಾರ್ಲರ್‌ನಲ್ಲಿದ್ದ ಸಿಬ್ಬಂದಿ ವಧುವಿಗೆ ಕೆಟ್ಟದಾಗಿ ಮೇಕಪ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಧು ಬ್ಯೂಟಿ ಪಾರ್ಲರ್‌ನ ಮಾಲೀಕೆ ಮೋನಿಕಾ ಪಾಠಕ್ ಅವರಿಗೆ ಕರೆ ಮಾಡಿ ಮುಖದ ಅಂದ ಕೆಡಿಸಿದ್ದಕ್ಕೆ ಅಕ್ಷೇಪಿಸಿದ್ದಾಳೆ. ಆದರೆ ಮೋನಿಕಾ ಅವಳಿಗೆ ಕ್ಷಮೆಯಾಚಿಸುವ ಬದಲು ವಧುವನ್ನು ನಿಂದಿಸಿದ್ದಾಳೆ. ಅಷ್ಟೇ ಅಲ್ಲದೇ ಜಾತಿ ನಿಂದನೆಯನ್ನು ಮಾಡಿದ್ದಾಳೆ. ಜೊತೆಗೆ ಮೇಕಪ್‍ನ ಹಣವನ್ನು ಮೊದಲೇ ಪಡೆದಿದ್ದಳು.

    ಈ ಹಿನ್ನೆಲೆಯಲ್ಲಿ ಕೋಪಗೊಂಡ ವಧು ಹಾಗೂ ವಧುವಿನ ಕುಟುಂಬಸ್ಥರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬ್ಯೂಟಿ ಪಾರ್ಲರ್‌ನ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೋನಿಕಾಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಕಬ್ಬಿನ ಉಪ ಉತ್ಪನ್ನ ಲಾಭಾಂಶ ರೈತರಿಗೆ; ಪ್ರತಿ ಮೆಟ್ರಿಕ್ ಟನ್‌ಗೆ 50 ರೂ. ಹೆಚ್ಚುವರಿ ಪಾವತಿ – ಸರ್ಕಾರ ಆದೇಶ

    ಈ ಬಗ್ಗೆ ಠಾಣಾಧಿಕಾರಿ ಅನಿಲ್ ಗುಪ್ತಾ ಮಾತನಾಡಿ, ವಧು ಹಾಗೂ ಆಕೆಯ ಕುಟುಂಬಸ್ಥರ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ವಿಚಾರದಲ್ಲಿ ಮೋನಿಕಾ ಪಾಠಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಮನಸ್ಥಿತಿ ಗೊತ್ತಿಲ್ಲ, ನಾನು ಬಿಜೆಪಿ ಬಿಟ್ಟು ಹೋಗಲ್ಲ: ಎಂಟಿಬಿ

    Live Tv
    [brid partner=56869869 player=32851 video=960834 autoplay=true]

  • ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

    ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

    ಬೆಂಗಳೂರು: ಬ್ಯೂಟಿ ಪಾರ್ಲರ್‌ಗೆ ಹೆಣ್ಣುಮಕ್ಕಳು ಹೋಗೋದು ಕಾಮನ್. ಕೆಲವರಂತೂ ತಿಂಗಳಿಗೆ ಒಂದು ಬಾರಿಯಾದ್ರೂ ಹೋಗೇ ಹೋಗ್ತಾರೆ. ಆದರೆ ಈಗ ಶಾಕಿಂಗ್ ವಿಷಯ ಬಯಲಾಗಿದೆ.

    ಬ್ಯೂಟಿಷಿಯನ್ಸ್ ಗಳು ನೋಂದಾಯಿತ ಬ್ಯೂಟಿಪಾರ್ಲರ್ ನಲ್ಲಿ ವರ್ಷಗಟ್ಟಲೇ ಟ್ರೈನಿಂಗ್‌ ಮಾಡಿ ಪ್ರಾಕ್ಟಿಕಲ್ ತರಬೇತಿಯನ್ನೂ ಪಡೆದುಕೊಂಡು ಅದಾದ ಬಳಿಕ ಅವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಆದರೀಗ ನೋಂದಾಯಿತ ಪಾರ್ಲರ್ ಅಸೋಸಿಯೇಷನ್ ಹೆಸರಿನಲ್ಲಿಯೇ 10 ಸಾವಿರ ದುಡ್ಡು ಕೊಟ್ರೇ ಯಾರಿಗೆ ಬೇಕಾದ್ರೂ, ಎಷ್ಟು ಬೇಕಾದ್ರೂ ಪಟಾಫಟ್ ಅಂತಾ ಟ್ರೈನಿಂಗ್‌ ಕೇಳದೇ ಸರ್ಟಿಫಿಕೇಟ್ ಕೊಡುವ ಏಜೆಂಟರು ಹುಟ್ಟುಕೊಂಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

    ಸ್ವತಃ ಈ ಆರೋಪ ಮಾಡ್ತಾ ಇರೋದು ಕರ್ನಾಟಕ ಬ್ಯೂಟಿ ಪಾರ್ಲರ್ ಅಸೋಸಿಯೇಷನ್. ಇವರದ್ದೇ ಸಂಸ್ಥೆಯ ಹೆಸರು ಬಳಸಿಕೊಂಡು ಸರ್ಟಿಫಿಕೇಟ್ ಮಾಡಿ ಕೆಲ ಏಜೆಂಟ್‌ರು ಮಾರಾಟ ಮಾಡುತ್ತಾ ಇದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಈ ಸಂಬಂಧ ಮಾತನಾಡಿರುವ ಆಡಿಯೋ ಸಹ ಲೀಕ್ ಆಗಿದೆ. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    ಈ ರೀತಿ ಬೇಕಾಬಿಟ್ಟಿ ದುಡ್ಡಿಗೆ ಸರ್ಟಿಫಿಕೇಟ್ ಮಾರಾಟ ಮಾಡೋದ್ರಿಂದ ಸೈಡ್‌ಎಫೆಕ್ಟ್ ಉಂಟಾಗುತ್ತದೆ. ಸಾಮಾನ್ಯವಾಗಿ ಆಯಾಯ ಚರ್ಮಕ್ಕೆ ಹೊಂದುವ ಪ್ರಾಡೆಕ್ಟ್ ಬಳಕೆ ಮಾಡಬೇಕು. ಕೆಲವು ಬಿಪಿ ಶುಗರ್ ಸಮಸ್ಯೆ ಇರೋರಿಗೆ ಕೆಲ ಪ್ರಾಡೆಕ್ಟ್ ಅಲರ್ಜಿ ಇರುತ್ತೆ. ಇದೆಲ್ಲವನ್ನು ತರಬೇತಿ ಪಡೆದುಕೊಂಡವರಿಗೆ ಅಷ್ಟೇ ಅರ್ಥವಾಗುತ್ತದೆ. ಆದರೆ ಹೀಗೆ ಟ್ರೈನಿಂಗ್‌ ಇಲ್ಲದೇ ಸರ್ಟಿಫಿಕೇಟ್ ಕೊಡುವ ದಂಧೆಯಿಂದ ನಿಜವಾಗಿಯೂ ತರಬೇತಿ ಪಡೆದವರಿಗೆ ಸಮಸ್ಯೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

    ಆಡಿಯೋ ನಲ್ಲಿ ಏನಿದೆ?

    • ಏಜೆಂಟ್ – ಅದು ಮಾಡಿಸಿರೋದು ಏಜೆಂಟ್
      ಅನಿತಾ – ಯಾರು?
    • ಏಜೆಂಟ್ – ಅದಕ್ಕೆ ಒಬ್ರು ಏಜೆಂಟ್ ರ‍್ತಾರೆ ಅವ್ರು ಮಾಡಿಸೋದು
      ಅನಿತಾ – ಹೋ ಅದಕ್ಕೆ ಏಜೆಂಟ್ ಬೇರೆ ರ‍್ತಾರಾ?
    • ಅನಿತಾ – ನಮ್ಗೆ ಬೇಕು ಅಂದ್ರೆ?
      ಏಜೆಂಟ್ – ಅದನ್ನು ಹತ್ತುಸಾವಿರ ಕೊಟ್ಟುಮಾಡಿಸಿರೋದು
    • ಏಜೆಂಟ್ – ನಿಮ್ಗೆ ಬೇಕಾದ್ರೇ ಹೇಳಿ ಮಾಡಿಸಿಕೊಡ್ತೀನಿ ನಾನು
      ಅನಿತಾ – ಹಂಗಾದ್ರೇ ಬೇಕು 2 ಸರ್ಟಿಫಿಕೇಟ್
    • ಏಜೆಂಟ್ – 2 ಯಾಕೆ 10 ಕೊಡ್ತೀನಿ ಬೇಕಾದ್ರೇ