Tag: ಬ್ಯುಸಿನೆಸ್ ಮೆನ್

  • ಬೆತ್ತಲೆ ವಿಡಿಯೋ ತೋರಿಸಿ ಕಾಸು ಪೀಕೋದೇ ಈಕೆಯ ಕಾಯಕ!

    ಬೆತ್ತಲೆ ವಿಡಿಯೋ ತೋರಿಸಿ ಕಾಸು ಪೀಕೋದೇ ಈಕೆಯ ಕಾಯಕ!

    -ಬ್ಯುಸಿನೆಸ್‍ ಮೆನ್‍ಗಳೇ ಟಾರ್ಗೆಟ್

    ಬೆಂಗಳೂರು: ಮಾನವ ಕುಲಕೋಟಿ ಉದ್ಧಾರಕ್ಕೆಂದೇ ಅವತಾರವೆತ್ತಿರುವ ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷೆ ಬ್ಯುಸಿನೆಸ್‍ ಮೆನ್‍ಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಳು. ಬಳಿಕ ಅವರನ್ನು ಹನಿಟ್ರ್ಯಾಪ್ ಮಾಡಿ ಹಣ ಪೀಕುತ್ತಿದ್ದಳು.

    ಹೌದು.. ಅಧ್ಯಕ್ಷೆ ಭಾರತಿ ನಾಯಕ್ ಮಾನವ ಹಕ್ಕುಗಳ ರಕ್ಷಕಿ ಅಂತ ಪೋಸೋ ಕೊಡುತ್ತಾ ಬೆತ್ತಲೆ ವೀಡಿಯೋ ತೋರಿಸಿ ಕಾಸು ಪೀಕೋದನ್ನೇ ಕಾಯಕವಾಗಿಸಿಕೊಂಡಿದ್ದಾಳೆ. ಈಕೆ ದೊಡ್ಡ ದೊಡ್ಡ ಕುಳ ಮತ್ತು ಬ್ಯುಸಿನೆಸ್‍ ಮೆನ್ ಗಳನ್ನು ಟಾರ್ಗೆಟ್ ಮಾಡುತ್ತಿದ್ದಳು.

    ಹನಿಟ್ರ್ಯಾಪ್ ಹೇಗೆ?
    ಭಾರತಿ ಯಾರನ್ನ ಟಾರ್ಗೆಟ್ ಮಾಡುತ್ತಾಳೆ ಅವರ ಮೇಲೆ ಯುವತಿಯರನ್ನ ಛೂ ಬಿಡುತ್ತಾಳೆ. ಯಾವಾಗ ಯುವತಿಯರ ಬಲೆಗೆ ಅವರು ಬಿದ್ದಿದ್ದಾರೆ ಎಂದು ಕನ್ಫರ್ಮ್ ಆಗುತ್ತೋ ಕೂಡಲೇ ಯುವತಿ ಜೊತೆಗೆ ಆ ವ್ಯಕ್ತಿ ಇರುವ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ನಂತರ ಆ ವಿಡಿಯೋನ ತೋರಿಸಿ ನಂಗೆ ಪೊಲೀಸರು ಗೊತ್ತು, ಮೀಡಿಯೋ ಗೊತ್ತು ಅಂತೆಲ್ಲ ಧಮ್ಕಿ ಹಾಕಿ ಹೆದರಿಸಿ, ಬೆದರಿಸಿ ಹಣ ಪೀಕುತ್ತಿದ್ದಳು.

    ಇದೇ ರೀತಿ ಈಗ ಭಾರತಿ ನಾಯಕ್ ಆಂಡ್ ಗ್ಯಾಂಗ್ ಉದ್ಯಮಿಯೊಬ್ಬರ ಬೆತ್ತಲೆ ವಿಡಿಯೋ ಇಟ್ಟುಕೊಂಡು 4 ಲಕ್ಷ ರೂ. ಹಣವನ್ನು ಪೀಕಿದ್ದರು. ಆದರೆ ಮತ್ತೆ ಐದು ಲಕ್ಷ ರೂಪಾಯಿ ತಗೊಂಡು ಬಾ. ಇಲ್ಲಾಂದ್ರೆ ಮೀಡಿಯಾದಲ್ಲಿ ನಿನ್ನ ಮಾನ ಹರಾಜು ಹಾಕುತ್ತೀನಿ ಅಂತ ಧಮ್ಕಿ ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದರು.

    ಬಳಿಕ ಉದ್ಯಮಿಯನ್ನು ಮಾಲ್‍ಗೆ ಕರೆಸಿ ಮಾತನಾಡುತ್ತಿದ್ದಳು. ಪೊಲೀಸರು ಬಂದಿದ್ದು, ಅವರನ್ನು ನೋಡಿದ ತಕ್ಷಣ ಮಾಲ್ ನಿಂದ ಓಡಿಹೋಗಿದ್ದಾಳೆ. ಅಂದಹಾಗೆ ಈ ಭಾರತಿ ನಾಯಕ್ ಲಿಂಕ್ ಕಮ್ಮಿಯೇನಿಲ್ಲ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಹೀಗೆ ದೊಡ್ಡ ದೊಡ್ಡ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾಳೆ. ಈಕೆಗೆ ಸಂಘ ಸಂಸ್ಥೆಗಳು ಸನ್ಮಾನ ಕೂಡಾ ಮಾಡಿವೆ. ನಾನೇನು ತಪ್ಪು ಮಾಡಿಲ್ಲ, ಹುಡುಗೀರ ರಕ್ಷಣೆ ಮಾಡಿದ್ದೇನೆ ಅಂತ ಹೇಳುತ್ತಿದ್ದ ಈಕೆ ಪೊಲೀಸರು ಬರುತ್ತಿದ್ದಂತೆ ಮಾಲ್‍ನಿಂದ ಪರಾರಿಯಾಗಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv