Tag: ಬ್ಯಾರಿಕೇಡ್

  • ನಿಷೇಧವಿದ್ದರೂ ಚಾಲಕರ ದರ್ಪ- ಭದ್ರತಾ ಸಿಬ್ಬಂದಿಗೆ ಆಟೋ ಡಿಕ್ಕಿ

    ನಿಷೇಧವಿದ್ದರೂ ಚಾಲಕರ ದರ್ಪ- ಭದ್ರತಾ ಸಿಬ್ಬಂದಿಗೆ ಆಟೋ ಡಿಕ್ಕಿ

    ಹುಬ್ಬಳ್ಳಿ: ಖಾಸಗಿ ವಾಹನಗಳ ನಿಷೇಧ ಇರುವ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದಕ್ಕೆ ಭದ್ರತಾ ಸಿಬ್ಬಂದಿ ಮೇಲೆ ಆಟೋ ಹರಿಸಿದ ಘಟನೆ ಹುಬ್ಬಳ್ಳಿಯ ಬಿಆರ್‍ಟಿಎಸ್ ರಸ್ತೆಯಲ್ಲಿ ನಡೆದಿದೆ.

    ರಾಯಾಪೂರದ ಸಂಜೀವಿನಿ ಪಾರ್ಕ್ ಬಳಿ ಈ ಘಟನೆ ನಡೆದಿದೆ. ಬಿಆರ್ ಟಿಎಸ್ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ನಿಷೇಧ ಇದ್ದರೂ ಆಟೋ ಚಾಲಕರು ದರ್ಪ ತೋರಿದ್ದಾರೆ. ನಿಷೇಧದ ನಡುವೆಯೂ ಎರಡು ಆಟೋಗಳು ಬಂದಿದೆ. ಆಟೋಗಳು ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಬ್ಯಾರಿಕೇಡ್ ಎಳೆದಿದ್ದಾರೆ.

    ಬ್ಯಾರಿಕೇಡ್ ಎಳೆದ ನಂತರ ಸಿಬ್ಬಂದಿ ಬೇರೆ ಮಾರ್ಗದಲ್ಲಿ ಹೋಗುವಂತೆ ಸೂಚನೆ ನೀಡಿದ್ದಾರೆ. ಸೂಚನೆ ನೀಡಿದ್ದರೂ ಆಟೋ ಚಾಲಕರು ಏಕಾಏಕಿ ನುಗ್ಗಿ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ನಂತರ ಭದ್ರತಾ ಸಿಬ್ಬಂದಿ ಗೆ ಡಿಕ್ಕಿ ಹೊಡೆಸಿದ್ದಾರೆ.

    ಆಟೋ ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯಲ್ಲಿ ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಭಾರೀ ಮಳೆ: ಮತ್ತೇ ಆಗುಂಬೆ ಘಾಟ್‍ನಲ್ಲಿ ರಸ್ತೆ ಕುಸಿತ

    ಭಾರೀ ಮಳೆ: ಮತ್ತೇ ಆಗುಂಬೆ ಘಾಟ್‍ನಲ್ಲಿ ರಸ್ತೆ ಕುಸಿತ

    ಶಿವಮೊಗ್ಗ: ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಆಗುಂಬೆ ಘಾಟ್ ರಸ್ತೆಯಲ್ಲಿ ಮತ್ತೊಂದು ಕಡೆ ಕುಸಿದಿದೆ. ಸೂರ್ಯಾಸ್ತ ವೀಕ್ಷಣಾ ಅಟ್ಟಣಿಗೆಯ ಸಮೀಪವೇ ಧರೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

    ಜೂನ್ 27ರಂದು ರಾತ್ರಿ 7ನೇ ತಿರುವಿನಲ್ಲಿ ರಸ್ತೆ ಕುಸಿದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಸದ್ಯ ಬೇರೊಂದು ಕಡೆಯ ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ಕಟ್ಟೆಯು 15 ಅಡಿ ಉದ್ದ, ಸುಮಾರು 25 ಅಡಿ ಆಳಕ್ಕೆ ಕುಸಿತವಾಗಿದೆ.

    ರಸ್ತೆ ಕುಸಿದ ಮಾಹಿತಿ ಪಡೆದ ತಕ್ಷಣ ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಬ್ಯಾರಿಕೇಡ್‍ಗಳನ್ನು ಹಾಕಿ, ಸೂಕ್ತ ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ. ಈ ಮಾರ್ಗದಲ್ಲಿ ಸರಕು ಲಾರಿಗಳು ಇನ್ನಿತರ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಘಾಟ್‍ನಲ್ಲಿ ತಕ್ಷಣ ದುರಸ್ತಿ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸಂಚಾರಕ್ಕೆ ಅಡೆತಡೆ ಆಗದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಟೋಲ್ ತಪ್ಪಿಸೋಕೆ ಕಾರಲ್ಲಿ ಬ್ಯಾರಿಕೇಡ್ ತಳ್ಳಿಕೊಂಡೇ ಡ್ರೈವ್ ಮಾಡ್ದ! – ವಿಡಿಯೋ ವೈರಲ್

    ಟೋಲ್ ತಪ್ಪಿಸೋಕೆ ಕಾರಲ್ಲಿ ಬ್ಯಾರಿಕೇಡ್ ತಳ್ಳಿಕೊಂಡೇ ಡ್ರೈವ್ ಮಾಡ್ದ! – ವಿಡಿಯೋ ವೈರಲ್

    ಮುಂಬೈ: ಟೋಲ್ ತಪ್ಪಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಗಾಗಿ ಅಳವಡಿಸಿದ್ದ ಬ್ಯಾರಿಕೇಡ್ ತಳ್ಳಿಕೊಂಡೆ ಹೋಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

    ಈ ಘಟನೆ ವಾಷಿ ಟೋಲ್ ನಾಕಾದಲ್ಲಿ ಕಳೆದ ತಿಂಗಳು ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ವಿಚಾರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದರು.

    ಏಪ್ರಿಲ್ 28 ರಂದು ಈ ವಿಡಿಯೋ ಮುಂಬೈ ಪೊಲೀಸರ ಗಮನಕ್ಕೆ ಬಂದಿದೆ. ಆಗ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಲು ಆರಂಭಿಸಿದ್ದಾರೆ. ಆಗ ಏಪ್ರಿಲ್ 21 ರಂದು ಈ ಘಟನೆ ನಡೆದಿರುವುದು ತಿಳಿದು ಬಂದಿದೆ. ಈ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ.

    ವ್ಯಕ್ತಿಯೊಬ್ಬ ಟೋಲ್ ನಲ್ಲಿ ಹಣ ಪಾವತಿಸಬೇಕಾಗುತ್ತದೆ ಎಂದು ಹೆದ್ದಾರಿಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ನ ತನ್ನ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ತಳ್ಳಿಕೊಂಡೆ ಹೋಗಿದ್ದಾನೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ಪೊಲೀಸರು ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಸಂಚಾರದ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮವಾಗಿ ಮುಂಬೈ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಈ ಬಗ್ಗೆ ಸಂಪೂರ್ಣ ತನಿಖೆಯನ್ನು ಆರಂಭಿಸಿದ್ದಾರೆ. ಕೊನೆಗೂ ಆ ಕಾರಿನ ನಂಬರ್ ಮೂಲಕ ಆರೋಪಿಯನ್ನು ಪತ್ತೆ ಮಾಡಲಾಗಿದ್ದು, ಆತನನ್ನು ಬಂಧಿಸಿದ್ದಾರೆ. ತನಿಖೆ ನಡೆದ ನಂತರ ಆರೋಪಿ ಅಬಿದ್ ಅಲಿ ಸಯ್ಯಾದ್ ಎಂದು ತಿಳಿದು ಬಂದಿದೆ.

    ಈ ಬಗ್ಗೆ ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದು, “ಈ ಘಟನೆ ಏಪ್ರಿಲ್ 21 ರಂದು ನಡೆದಿದ್ದು, ಟೋಲ್ ತಪ್ಪಿಸಿಕೊಳ್ಳುವಾಗ ಈ ರೀತಿ ಮಾಡಿದ್ದಾನೆ. ನಾವು ಏಪ್ರಿಲ್ 28 ದಿನ ಗಮನಿಸಿದೆವು. ಬಳಿಕ ಸಂಪೂರ್ಣ ತನಿಖೆಯ ನಂತರ ಆರೋಪಿಯನ್ನು ಟ್ರೇಸ್ ಮಾಡಿ ಬಂಧಿಸಿದ್ದು, ಆತನನ್ನು ನವಿ ಮುಂಬೈ ಪೊಲೀಸರಿಗೆ ಗುರುವಾರ ಒಪ್ಪಿಸಲಾಗಿದೆ. ನೀವು ಓಡಬಹುದು, ನೀವು ಅಡಗಿಕೊಳ್ಳಬಹುದು ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!” ಎಂದು ಬರೆದಿದ್ದಾರೆ.

    ಆರೋಪಿ ಸಯ್ಯಾದ ಮುಂಬ್ರಾದಲ್ಲಿ ಟೈಲರಿಂಗ್ ಶಾಪ್ ನಡೆಸುತ್ತಿದ್ದನು. ವಶಿ ಟೋಲ್ ಪ್ಲಾಜಾ ಸಿಬ್ಬಂದಿ, ಅರ್ಜುನ್ ಪರಾಬ್ ಅವರ ಹೇಳಿಕೆ ಕೂಡ ಈ ಪ್ರಕರಣದಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ವಿರುದ್ಧ ನಿರ್ಲಕ್ಷ್ಯದ ಚಾಲನೆ ಅಡಿ ಅಂದರೆ ಐಪಿಸಿ ಸೆಕ್ಷನ್ 279 ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆರೋಪಿ ಸಯ್ಯಾದ್ ಜಾಮೀನಿನ ಮೇರೆಗೆ ಹೊರ ಬಂದಿದ್ದಾನೆ ಎಂದು ವರದಿಯಾಗಿದೆ.

  • ಚೆಕ್ ಪೋಸ್ಟ್ ನಲ್ಲಿ 3 ಬ್ಯಾರಿಕೇಡ್ ಗಳನ್ನು ಹೊಡೆದುರುಳಿಸಿದ ಟೆಂಪೋ ಟ್ರಾವೆಲರ್- ತಪ್ಪಿದ ಭಾರೀ ಅನಾಹುತ!

    ಚೆಕ್ ಪೋಸ್ಟ್ ನಲ್ಲಿ 3 ಬ್ಯಾರಿಕೇಡ್ ಗಳನ್ನು ಹೊಡೆದುರುಳಿಸಿದ ಟೆಂಪೋ ಟ್ರಾವೆಲರ್- ತಪ್ಪಿದ ಭಾರೀ ಅನಾಹುತ!

    ಉಡುಪಿ: ಜಿಲ್ಲೆ ಹೆಬ್ರಿ ತಾಲೂಕಿನ ಸೋಮೇಶ್ವರದ ಚೆಕ್ ಪೋಸ್ಟ್ ನಲ್ಲಿ ಬ್ರೇಕ್ ಫೇಲ್ ಆದ ಟೆಂಪೋ ಟ್ರಾವೆಲರ್ ಬ್ಯಾರಿಕೇಡ್‍ಗಳನ್ನು ಹೊಡೆದುರುಳಿಸಿದ್ದರಿಂದ ಕೂದಲೆಳೆ ಅಂತರದಲ್ಲಿ ಭಾರೀ ಅವಘಡವೊಂದು ತಪ್ಪಿದೆ.

    ಚುನಾವಣೆಯ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಹಾಕಲಾಗಿತ್ತು. ಪೊಲೀಸರು ಮತ್ತು ಬಿಎಸ್‍ಎಫ್, ಸಿಆರ್ ಪಿಎಫ್ ಯೋಧರ ತಂಡ ಚೆಕ್‍ಪೋಸ್ಟ್ ನಲ್ಲಿ ಕಾವಲು ಕಾಯುತ್ತಿತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ನುಗ್ಗಿದ ಟಿಟಿ ಎದುರಿಗಿದ್ದ ಮೂರು ಬ್ಯಾರಿಕೇಡ್ ಗಳಿಗೆ ಡಿಕ್ಕಿ ಹೊಡೆದಿದೆ.

    ತಪಾಸಣೆ ನಡೆಸುತ್ತಿದ್ದ ಪೊಲೀಸರು ಮತ್ತು ಯೋಧರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಸಾಲಾಗಿ ನಿಂತಿದ್ದ ಕಾರುಗಳು ಎಡಬಲಕ್ಕೆ ಹೋಗಿದೆ. ಎಲ್ಲವೂ ನಾಲ್ಕೈದು ಸೆಕೆಂಡುಗಳಲ್ಲಿ ಮುಗಿದು ಹೋಗಿದೆ. ಅಲ್ಲಿದ್ದ ಜನ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಅರೆಕ್ಷಣ ಏನಾಗಿದೆ ಎನ್ನುವುದು ತಿಳಿಯಲಿಲ್ಲ.

    ಹಾಸನ ಕಡೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ವಾಹನಕ್ಕೆ ಇಳಿಜಾರಿನಲ್ಲಿ ಬ್ರೇಕ್ ಬೀಳಲಿಲ್ಲ. ಎಷ್ಟೇ ಪ್ರಯತ್ನ ಪಟ್ಡರೂ ವಾಹನ ಹತೋಟಿಗೆ ತರಲು ಚಾಲಕ ಪ್ರಯತ್ನಿಸಿದ್ದಾನೆ. ಸುಮಾರು ನೂರು ಮೀಟರ್ ದೂರ ಹೋಗಿ ವಾಹನ ಹತೋಟಿಗೆ ಬಂದಿದೆ. ಚಾಲಕ ತನ್ನ ಚಾಕಚಕ್ಯತೆಯಿಂದ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ. ಅದೃಷ್ಟವಷಾತ್ ವಾಹನದಲ್ಲಿ ಇದ್ದವರಿಗೆ, ಭದ್ರತಾ ಸಿಬ್ಬಂದಿಗೆ ಸಮಸ್ಯೆಯಾಗಿಲ್ಲ. ಕಾರ್ ಸೇಫ್ ಆಗಿದೆ.

  • ವಿಡಿಯೋ: ಬ್ಯಾರಿಕೇಡ್ ಅಡ್ಡವಿರಿಸಿದ್ರೂ ನಾಲ್ವರು ಪೊಲೀಸರ ಮೇಲೆ ಕಾರು ಚಲಾಯಿಸಿಯೇ ಬಿಟ್ಟ!

    ವಿಡಿಯೋ: ಬ್ಯಾರಿಕೇಡ್ ಅಡ್ಡವಿರಿಸಿದ್ರೂ ನಾಲ್ವರು ಪೊಲೀಸರ ಮೇಲೆ ಕಾರು ಚಲಾಯಿಸಿಯೇ ಬಿಟ್ಟ!

    ಹೈದರಾಬಾದ್: ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಚಾಲಕನೊಬ್ಬ ಅವರ ಮೇಲೆಯೇ ಕಾರು ಹರಿಸಿದ ಆಘಾತಕಾರಿ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಆಂದ್ರಪ್ರದೇಶ ರಾಜ್ಯದ ಕಾಕಿನಾಡ ಎಂಬಲ್ಲಿ ನಡೆದಿದ್ದು, ಈ ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಘಟನೆ ವಿವರ: ಭಾನುವಾರ ಬೆಳಗ್ಗೆ ರಸ್ತೆಗೆ ಬ್ಯಾರಿಕೇಡ್ ಇಟ್ಟು ಟ್ರಾಫಿಕ್ ಪೊಲೀಸರು ನಗರದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಮಾರುತಿ ಸೆಲೆರಿಯೋ ಕಾರೊಂದು ಬಂದಿದೆ. ಕುಡಿದ ಮತ್ತಿನಲ್ಲಿದ್ದ ಚಾಲಕನಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳಿರಲಿಲ್ಲ. ಹೀಗಾಗಿ ಕಾರ್ ನಿಲ್ಲಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ನಾಲ್ವರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರಿನ ಮುಂದೆ ನಿಂತರು, ಅವರಲ್ಲೊಬ್ಬರು ಕೂಡಲೇ ಬ್ಯಾರಿಕೇಡನ್ನು ಕಾರಿಗೆ ಅಡ್ಡಲಾಗಿರಿಸಿದ್ರು. ಆದ್ರೆ ಚಾಲಕ ಮಾತ್ರ ಅದ್ಯಾವುದನ್ನೂ ಕ್ಯಾರೇ ಎನ್ನದೇ ಏಕಾಏಕಿ ಅಮಾನವೀಯವಾಗಿ ಕಾರು ಚಲಾಯಿಸಿಯೇ ಬಿಟ್ಟಿದ್ದಾನೆ. ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಘಟನೆಯಿಂದಾಗಿ ಓರ್ವ ಪೊಲೀಸ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.