Tag: ಬ್ಯಾರಿಕೇಡ್

  • ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

    ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

    ಹೈದರಾಬಾದ್: ತೆಲಂಗಾಣದ (Telangana) ನೂತನ ಮುಖ್ಯಮಂತ್ರಿಯಾಗಿ (CM) ಅಧಿಕಾರ ವಹಿಸಿಕೊಂಡಿರುವ ರೇವಂತ್ ರೆಡ್ಡಿ (Revanth Reddy), ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಚಾರದ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಈಡೇರಿಸಿದ್ದಾರೆ.

    ಹೌದು, ರೇವಂತ್ ರೆಡ್ಡಿ ಅವರು ತಮ್ಮ ಅಧಿಕೃತ ನಿವಾಸದ ಮುಂಭಾಗವಿರುವ ಕಬ್ಬಿಣದ ಬ್ಯಾರಿಕೇಡ್ ಅನ್ನು ತೆಗೆಸಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿಯುವುದಕ್ಕೂ ಮೊದಲೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ. ಹಲವಾರು ಬುಲ್ಡೋಜರ್‌ಗಳು, ಟ್ರ್ಯಾಕ್ಟರ್‌ಗಳು ಹಾಗೂ ಕಟ್ಟಡ ಕಾರ್ಮಿಕರು ಈ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕುವುದು ಕಂಡುಬಂದಿದೆ.

    ಈ ಬ್ಯಾರಿಕೇಡ್ ಹಿಂದೆ ಪಾದಚಾರಿಗಳ ಪ್ರವೇಶವನ್ನು ನಿರ್ಬಂಧಿಸುತ್ತಿತ್ತು. ಹಲವು ವರ್ಷಗಳಿಂದ ಈ ಬ್ಯಾರಿಕೇಡ್‌ನಿಂದಾಗಿ ಚಲಿಸುವ ವಾಹನಗಳ ದಟ್ಟಣೆಯೂ ಉಂಟಾಗುತ್ತಿತ್ತು. ಈ ಹಿನ್ನೆಲೆ ರೇವಂತ್ ರೆಡ್ಡಿ ತಮ್ಮ ಚುನಾವಣಾ ಪ್ರಚಾರದ ವೇಳೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಬ್ಯಾರಿಕೇಡ್ ಅನ್ನು ತೆಗೆಸುವುದಾಗಿ ಭರವಸೆ ನೀಡಿದ್ದರು. ಇದೀಗ ಪ್ರಮಾಣವಚನ ಸ್ವೀಕರಿಸುತ್ತಲೇ ಅವರು ತಮ್ಮ ಮೊದಲ ಭರವಸೆಯನ್ನು ಪೂರೈಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇವಂತ್‌ ರೆಡ್ಡಿ

    ಕಳೆದ ತಿಂಗಳು ನಡೆದ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಂದು ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ. ರೇವಂತ್ ರೆಡ್ಡಿ ಸಿಎಂ ಆಗಿ, ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಮಲ್ಲು ಭಟ್ಟಿ ವಿಕ್ರಮಾರ್ಕ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ರೇವಂತ್ ರೆಡ್ಡಿಗೆ ಶುಭಕೋರಿ ಬೆಂಬಲದ ಭರವಸೆ ಕೊಟ್ಟ ಪ್ರಧಾನಿ ಮೋದಿ

  • ಬ್ಯಾರಿಕೇಡ್‌ಗೆ ಪೊಲೀಸ್‌ ಚಲಾಯಿಸುತ್ತಿದ್ದ ಬೈಕ್‌ ಡಿಕ್ಕಿ – ಪೇದೆ ಸಾವು

    ಬ್ಯಾರಿಕೇಡ್‌ಗೆ ಪೊಲೀಸ್‌ ಚಲಾಯಿಸುತ್ತಿದ್ದ ಬೈಕ್‌ ಡಿಕ್ಕಿ – ಪೇದೆ ಸಾವು

    ಕೋಲಾರ: ಪೊಲೀಸ್ ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolara) ನಡೆದಿದೆ.

    ಕೆಜಿಎಫ್ ಡಿಎಆರ್ ಪೊಲೀಸ್ ಪೇದೆ ಚಿರಂಜೀವಿ (37) ಅಪಘಾತದಲ್ಲಿ ಮೃತಪಟ್ಟವರು. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಮಾರಿಕುಪ್ಪಂ ಬಳಿ ಮೂರು ದಿನದ ಹಿಂದೆ ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ: ಪತ್ನಿ ಕೊಲೆಗೈದು ನಾಪತ್ತೆ ಕತೆ ಕಟ್ಟಿದ ಪತಿ – 2 ತಿಂಗಳ ಬಳಿಕ ಪ್ರಕರಣ ಬಯಲು

    ಅವರನ್ನು ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ ಪೊಲೀಸ್ ಪೇದೆ ಚಿರಂಜೀವಿ ಇಂದು (ಶುಕ್ರವಾರ) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಂಡರ್‌ಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಕೆಜಿಎಫ್ ಡಿಎಆರ್ ಪೊಲೀಸ್ ಸಿಬ್ಬಂದಿಯಿಂದ ಸಹೊದ್ಯೋಗಿ ಅಂತಿಮ ದರ್ಶನ ಪಡೆದು ವಿಧಾಯ ಹೇಳಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಇದನ್ನೂ ಓದಿ: ಗಂಡನಿಗೆ ದೀರ್ಘಾಯುಷ್ಯ ಸಿಗಲೆಂದು ಪ್ರಾರ್ಥಿಸುವ ಹಬ್ಬಕ್ಕೆ ಮನೆಗೆ ಬಾರದ ಪತ್ನಿ – ಪತಿ ನೇಣಿಗೆ ಶರಣು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯಾರಿಕೇಡ್ ಯಾಕೆ ಹಾಕಿಲ್ಲ?- ಪೊಲೀಸರಿಗೆ ಸಿದ್ದರಾಮಯ್ಯ ಕ್ಲಾಸ್

    ಬ್ಯಾರಿಕೇಡ್ ಯಾಕೆ ಹಾಕಿಲ್ಲ?- ಪೊಲೀಸರಿಗೆ ಸಿದ್ದರಾಮಯ್ಯ ಕ್ಲಾಸ್

    ಬೆಂಗಳೂರು: ಅಂಡರ್ ಪಾಸ್‍ನಲ್ಲಿ ನೀರು ನಿಂತುಕೊಳ್ಳುತ್ತೆ ಅಂದಾಗ ಬ್ಯಾರಿಕೇಡ್ ಹಾಕಬೇಕಿತ್ತು. ಯಾಕೆ ಬ್ಯಾರಿಕೇಡ್ ಹಾಕಿಲ್ಲ ಎಂದು ನೂತನ ಸಿಎಂ ಸಿದ್ದರಾಮಯ್ಯ (Siddaramaiah) ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಅಂಡರ್ ಪಾಸ್ (Underpass) ದುರಂತ ಸಂಬಂಧ ಸಿಎಂ ಅವರು ತಮ್ಮ ನಿವಾಸಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (Tushar Giri Nath) ಅವರನ್ನು ಕರೆಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಆಯುಕ್ತರಿಂದ ಮಾಹಿತಿ ಪಡೆದಿದ್ದಾರೆ. ಮಳೆ ಅವಾಂತರ ಎಲ್ಲೆಲ್ಲಿ ಆಗಿದೆ ಅಲ್ಲಿ ಅಧಿಕಾರಿಗಳು ಕೂಡಲೇ ತೆರಳಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ಸಿಎಂ ಸೂಚಿಸಿದರು. ಇದನ್ನೂ ಓದಿ: ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

    ಅಧಿಕಾರಿಗಳಿಗೆ ಸಿಎಂ ಸೂಚನೆ ಏನು..?: ಎಲ್ಲೆಲ್ಲಿ ಮರ ಬಿದ್ದಿದೆ ಅದನ್ನ ತಕ್ಷಣವೇ ತೆರವು ಮಾಡಿ. ತಕ್ಷಣವೇ ಟ್ರಾಫಿಕ್ ಕ್ಲಿಯರ್ ಮಾಡಲಿ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಿದರು. ನೀರು ನುಗ್ಗಿರೋ ಮನೆಗಳಿಗೆ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಹಾರ ಮಾಡಬೇಕು. ವಸತಿ ಸಮಸ್ಯೆ ಆಗಿರೋರಿಗೆ ತಕ್ಷಣವೇ ತಾತ್ಕಾಲಿಕ ವ್ಯವಸ್ಥೆ ಮಾಡಿ. ಹೂಳು ತುಂಬಿರೋ ರಾಜಕಾಲುವೆಗಳನ್ನ ಹುಡುಕಿ ಕೂಡಲೇ ಹೂಳೆತ್ತಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.

    ಯಾವ ಭಾಗದಿಂದ ದೂರು ಬರುತ್ತೆ ತಕ್ಷಣವೇ ಅಲ್ಲಿಗೆ ತೆರಳಿ ಸಮಸ್ಯೆ ಪರಿಹಾರ ಮಾಡಿ. ಬಿಬಿಎಂಪಿ ಸಹಾಯವಾಣಿ ಆಕ್ಟೀವ್ ಆಗಿ ಇರುವಂತೆ ನೋಡಿಕೊಳ್ಳಿ. ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು ಎಂದು ಬಿಬಿಎಂಪಿ ಆಯುಕ್ತ, ನಗರ ಪೆÇಲೀಸ್ ಆಯುಕ್ತರಿಗೆ ಸಿಎಂ ಸೂಚನೆ ನೀಡಿದರು.

  • ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ

    ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ

    ಬೆಂಗಳೂರು: ಬ್ಯಾರಿಕೇಡ್ ಮೇಲಿಂದ ಹಾರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

    ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆ ಮಾಡುತ್ತಿದೆ. ಈ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಶಾಂತಿನಗರ ಇಡಿ ಕಚೇರಿಯಲ್ಲಿ ಎದುರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಶಾಂತಿನಗರದ ವಿಲ್ಸನ್ ಗಾರ್ಡನ್ ಮತ್ತು ಶೇಷಾದ್ರಿ ಪುರಂನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಡಿ ವಿರುದ್ಧ ಆಕ್ರೋಶ – ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಕೈ ಕಾರ್ಯಕರ್ತರು

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಕೆಶಿ, ಕಾರಿಗೆ ಬೆಂಕಿ ಹಾಕಿದ್ದು ಜನರ ಭಾವನೆ. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು. ಅಲ್ಲದೇ ಪ್ರತಿಭಟನೆ ವೇಳೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್‍ನ್ನು ಡಿಕೆಶಿ, ದಿನೇಶ್ ಗುಂಡೂರಾವ್, ನಲಪಾಡ್ ಹಾರಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಶೇಷಾದ್ರಿಪುರಂ ಮತ್ತು ಶಾಂತಿ ನಗರಕ್ಕೆ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿದ್ದು, ಕಿಡಿಗೇಡಿಗಳ ಕೃತ್ಯ ಪ್ರಕರಣ ದಾಖಲಿಸಿ ಆಗಿದೆ. ಆರೋಪಿಗಳು ಭಯ ಹುಟ್ಟಿಸೋ ಯತ್ನ ಮಾಡಿದ್ದಾರೆ ಅವರನ್ನು ಬಂಧಿಸಲಾಗುವುದು ಎಂದು ಸ್ಪಷ್ಟನೆ ಕೊಟ್ಟರು. ಇದನ್ನೂ ಓದಿ: ವಾಹನ ತೊಳೆಯಲು ಹೋಗಿ ನೀರು ಪಾಲಾದ ತಂದೆ, ಮಗ

    Live Tv
    [brid partner=56869869 player=32851 video=960834 autoplay=true]

  • ಮದ್ಯ ಸೇವಿಸಿ ಯದ್ವಾತದ್ವಾ ಲಾರಿ ಓಡಿಸಿದ ಚಾಲಕ- ಸಾರ್ವಜನಿಕರಿಂದ ಆಕ್ರೋಶ

    ಮದ್ಯ ಸೇವಿಸಿ ಯದ್ವಾತದ್ವಾ ಲಾರಿ ಓಡಿಸಿದ ಚಾಲಕ- ಸಾರ್ವಜನಿಕರಿಂದ ಆಕ್ರೋಶ

    ಉಡುಪಿ: ಕಂಟೈನರ್ ಲಾರಿ ಚಾಲಕನೋರ್ವ ಮದ್ಯ ಸೇವಿಸಿ ಲಾರಿಯನ್ನು ಯದ್ವಾತದ್ವಾ ಓಡಿಸಿ ಆತಂಕ ಸೃಷ್ಟಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ಉಡುಪಿ ಸಮೀಪ ನಡೆದಿದೆ.

    ಕಂಟೈನರ್ ಲಾರಿ ಚಾಲಕ ಮದ್ಯದ ನಶೆಯಲ್ಲಿ ವೇಗ ತಡೆಗಾಗಿ ಮುಳ್ಳಿಕಟ್ಟೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಎಳೆದೊಯ್ದಿದ್ದಾನೆ. ಸುಮಾರು ನಾಲ್ಕು ಕಿ.ಮೀ ತನಕ ಬ್ಯಾರಿಕೇಡ್ ಎಳೆದು ತಂದ ಕಂಟೈನರ್ ಜನರಲ್ಲಿ ಆತಂಕ ಸೃಷ್ಟಿಸಿದೆ. ಅರಾಟೆ ಸೇತುವೆ ತಡೆಗೋಡೆಗೂ ಢಿಕ್ಕಿಯಾಗಿದೆ. ಕೊಂಚ ಜೋರಾಗಿ ಡಿಕ್ಕಿಯಾಗಿದ್ದರೆ ಲಾರಿ ಸಮೇತ ಚಾಲಕ ನದಿಗೆ ಉರುಳುತ್ತಿದ್ದ ಎಂದು ಸ್ಥಳೀಯ ಮುಳ್ಳಿಕಟ್ಟೆ ನಿವಾಸಿ ಜಯರಾಮ್ ಆಲೂರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶ್ವಾನಕ್ಕಾಗಿ ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸಿ ಕ್ಯಾಬಿನ್ ಬುಕ್ ಮಾಡಿದ ಮಾಲೀಕ

    ಮುಳ್ಳಿಕಟ್ಟೆಯ ರಿಕ್ಷಾ ಚಾಲಕರು ಕಂಟೈನರ್ ನಿಲ್ಲಿಸಲು ಆರಂಭದಲ್ಲಿ ಹರಸಾಹಸಪಟ್ಟಿದ್ದಾರೆ. ಕೊನೆಗೂ ಕಂಟೈನರ್ ಗಾಜಿಗೆ ಕಲ್ಲೆಸೆದು ರಿಕ್ಷಾಚಾಲಕರು ಮತ್ತು ಸ್ಥಳೀಯರು ಕಂಟೈನರ್ ನಿಲ್ಲಿಸಿದ್ದಾರೆ. ಹೆಮ್ಮಾಡಿಯ ಸರ್ಕಲ್ ಸಮೀಪ ಕಂಟೈನರ್ ತಡೆದ ಸಾರ್ವಜನಿಕರು ಚಾಲಕನನ್ನು ಹಿಡಿದು ಬಾರಿಸಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

    ಕಂಟೈನರ್ ಲಾರಿಯಲ್ಲಿ ಬೈಹುಲ್ಲಿನ ಕಂತೆಗಳು ಇರುವುದು ನಮಗೆ ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಛತ್ತಿಸ್‌ಗಢ ನೋಂದಣಿಯ ಕಂಟೈನರ್ ನಲ್ಲಿ ಭತ್ತದ ಹುಲ್ಲು ಸಾಗಿಸಲಾಗುತ್ತಿತ್ತು. ಮಂಗಳೂರಿಗೆ ಸರಕು ಸಾಗಾಣಿಕೆಗಾಗಿ ಲಾರಿ ಬಂದಿರಬಹುದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಪಘಾತದಿಂದ ಜೀವ ಉಳಿಸಲು ಅಂಗಲಾಚಿದ ಯುವಕ, ಯುವತಿ

  • ಕರ್ನಾಟಕದ ಗಡಿ ಬಂದ್ ಮಾಡಿ ಕೇರಳ ಸರ್ಕಾರ ಉದ್ಧಟತನ

    ಕರ್ನಾಟಕದ ಗಡಿ ಬಂದ್ ಮಾಡಿ ಕೇರಳ ಸರ್ಕಾರ ಉದ್ಧಟತನ

    – ಬ್ಯಾರಿಕೇಡ್ ಕಿತ್ತೆಸೆದ ಬಿಜೆಪಿ ಕಾರ್ಯಕರ್ತರು

    ಮಂಗಳೂರು: ದೇಶದ ಎಲ್ಲಾ ರಾಜ್ಯದ ಗಡಿಗಳನ್ನು ಓಪನ್ ಮಾಡಿ ಅಂತರ್ ರಾಜ್ಯ ಸಂಪರ್ಕಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಆದೇಶ ಮಾಡಿದೆ. ಆದರೂ ಕೇರಳ ಸರ್ಕಾರ ಮಾತ್ರ ಕರ್ನಾಟಕದ ಗಡಿ ಬಂದ್ ಮಾಡಿ ಉದ್ಧಟತನ ತೋರಿದೆ.

    ಮಂಗಳೂರಿನ ತಲಪಾಡಿಯಲ್ಲಿರುವ ಕೇರಳ ಗಡಿ ಚೆಕ್ ಪೋಸ್ಟ್ ನಲ್ಲಿ ಕೇರಳಕ್ಕೆ ಪ್ರವೇಶಿಸದಂತೆ ಕೇರಳ ಪೊಲೀಸರು ತಡೆಯುತ್ತಿದ್ದಾರೆ. ಕೇರಳದ ಸಿಪಿಎಂ ಸರ್ಕಾರದ ಈ ನಡೆಯಿಂದ ಗಡಿನಾಡ ಕನ್ನಡಿಗರು ಅತಂತ್ರರಾಗಿದ್ದಾರೆ. ತಕ್ಷಣ ಗಡಿಯನ್ನು ಓಪನ್ ಮಾಡಬೇಕೆಂದು ಆಗ್ರಹಿಸಿ ಕಾಸರಗೋಡು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಈ ವೇಳೆ ಕಾಸರಗೋಡು ಬಿಜೆಪಿ ಕಾರ್ಯಕರ್ತರು ಹಾಗೂ ಕೇರಳ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರು ಬ್ಯಾರಿಕೇಡ್ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ಗಡಿ ಸಂಪೂರ್ಣ ತೆರೆದಿದ್ದು, ಕೇರಳದಿಂದ ಮಂಗಳೂರಿಗೆ ಪ್ರವೇಶಿಸಲು ಅನುಮತಿ ಇದೆ. ಆದರೆ ಕೇರಳಕ್ಕೆ ಪ್ರವೇಶಿಸಲು ಪೊಲೀಸರು ತಡೆಯೊಡ್ಡುತ್ತಿದ್ದಾರೆ. ಕೇರಳ ಸರ್ಕಾರ ತಕ್ಷಣ ಎಲ್ಲಾ ಗಡಿಯನ್ನು ತೆರೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

  • ಸೀಲ್‍ಡೌನ್, ಕಂಟೈನ್ಮೆಂಟ್ ಝೋನ್‍ಗಳು ಏರಿಕೆ- ಎದುರಾಯ್ತು ಬ್ಯಾರಿಕೇಡ್‍ಗಳ ಸಮಸ್ಯೆ

    ಸೀಲ್‍ಡೌನ್, ಕಂಟೈನ್ಮೆಂಟ್ ಝೋನ್‍ಗಳು ಏರಿಕೆ- ಎದುರಾಯ್ತು ಬ್ಯಾರಿಕೇಡ್‍ಗಳ ಸಮಸ್ಯೆ

    ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್‍ಗಳು ಸಹ ಅಧಿಕವಾಗುತ್ತಿವೆ. ಹೀಗಾಗಿ ಬ್ಯಾರಿಕೇಡ್‍ಗಳ ಸಮಸ್ಯೆ ಎದುರಾಗುತ್ತಿದೆ.

    ಬೆಂಗಳೂರು ನಗರದಲ್ಲಿ ಸೀಲ್‍ಡೌನ್ ಏರಿಯಾಗಳೇನು ಕಡಿಮೆ ಆಗುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿವೆ. ಅಲ್ಲದೇ ಕಂಟೈನ್ಮೆಂಟ್, ಸೀಲ್‍ಡೌನ್ ಏರಿಯಾಗಳಿಂದ ಒಂದಿಲ್ಲ ಒಂದು ಸಂಕಷ್ಟ ಬರುತ್ತಲೆ ಇದೆ. ಈಗ ಸೀಲ್‍ಡೌನ್, ಕಂಟೈನ್ಮೆಂಟ್ ಝೋನ್‍ಗಳು ಹೆಚ್ಚಾಗಿರುವುದರಿಂದ ಸೀಲ್ ಮಾಡುವುದಕ್ಕೆ ಬ್ಯಾರಿಕೇಡ್‍ಗಳೇ ಇಲ್ಲದಂತಾಗಿದೆ.

    ಸೀಲ್ ಮಾಡುವಾಗ ಬ್ಯಾರಿಕೇಡ್‍ಗಳ ಅವಶ್ಯಕತೆ ತುಂಬಾ ಇದೆ. ಆದರೆ ಈಗ ಎಲ್ಲೆಲ್ಲೂ ಸೀಲ್‍ಡೌನ್ ಆಗಿರುವುದರಿಂದ ಪೊಲೀಸರ ಬ್ಯಾರಿಕೇಡ್‍ಗಳು ಮುಗಿದು ಹೋಗಿದೆ. ಜೊತೆಗೆ ಪೊಲೀಸರು ಅನಿವಾರ್ಯವಾಗಿ ಶಾಮಿಯಾನದವರ ಬಳಿ ಬ್ಯಾರಿಕೇಡ್‍ಗಳನ್ನು ತಂದು ಸೀಲ್‍ಡೌನ್ ಮಾಡುತ್ತಿದ್ದಾರೆ.

    ಬಾಡಿಗೆಗೆ ತಂದು ಸೀಲ್ ಮಾಡುವುದು ಕಷ್ಟ ಆಗುತ್ತಿದೆ. ಶಾಮಿಯಾನದವರೂ ಕೂಡ ಸೀಲ್‍ಡೌನ್ ಏರಿಯಾ ಅಂದರೆ ಬಾಡಿಗೆಗೆ ಬ್ಯಾರಿಕೇಡ್ ಕೊಡುತ್ತಿಲ್ಲ. ಇನ್ನೂ ಸ್ವಲ್ಪ ದಿನ ಹೀಗೆ ಕೊರೊನಾ ಪ್ರಕರಣ ಜಾಸ್ತಿಯಾದರೆ ಸೀಲ್ ಮಾಡುವುದನ್ನೇ ಬಿಡಬೇಕಾಗುತ್ತೆ ಎಂದು ಪೊಲೀಸ್ ಸಿಬ್ಬಂದಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

     

  • ಬಾರ್‌ಗಳ ಮುಂದೆ ಸ್ವತಃ ತಾವೇ ಬ್ಯಾರಿಕೇಡ್ ನಿರ್ಮಿಸಿದ ಮದ್ಯ ಪ್ರಿಯರು

    ಬಾರ್‌ಗಳ ಮುಂದೆ ಸ್ವತಃ ತಾವೇ ಬ್ಯಾರಿಕೇಡ್ ನಿರ್ಮಿಸಿದ ಮದ್ಯ ಪ್ರಿಯರು

    – ನಾಳೆ ಮದ್ಯದಂಗಡಿಗೆ ಪೂಜೆ ಸಲ್ಲಿಸಲು ಸಿದ್ಧತೆ

    ಹುಬ್ಬಳ್ಳಿ: ಲಾಕ್‍ಡೌನ್ ಜಾರಿಯಾದ ದಿನದಿಂದಲೂ ಎಣ್ಣೆ ಸಿಗದೆ ಪರದಾಡಿದ ಕುಡುಕರು ನಾಳೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಮೇ 4ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ಕುಡುಕರಲ್ಲಿ ಸಂಭ್ರಮ ಮನೆ ಮಾಡಿದೆ.

    ಹೀಗಾಗಿ ಮದ್ಯಪ್ರಿಯರು ನಗರದ ಕಾಟನ್ ಮಾರ್ಕೆಟ್ ನಲ್ಲಿ ಸ್ವತ ತಾವೇ ಮುಂದೆ ನಿಂತು ಬಾರ್‍ಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಟನ್ ಮಾರ್ಕೆಟ್‍ನ ಎಂಎಸ್‍ಐಎಲ್ ಮುಂದೆ ನೂಕುನುಗ್ಗಲು ಆಗದಂತೆ ತಾವೇ ಕಟ್ಟಿಗೆಯ ಬ್ಯಾರಿಕೇಡ್ ಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ.

    ಸರತಿ ಸಾಲಿನಲ್ಲಿ ನಿಂತುಕೊಳ್ಳಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಬಾಕ್ಸ್ ಗಳನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ನಾಳೆಯ ದಿನವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಹಾಗೂ ಯಾವುದೇ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಕುಡುಕರು ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆ ಎಂಎಸ್‍ಐಎಲ್ ಪ್ರಾರಂಭವಾಗುತ್ತಿದಂತೆ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ.

  • ಬೆಂಗ್ಳೂರು ಗ್ರಾಮಾಂತರ ಜಿಲ್ಲಾ ಗಡಿಯಲ್ಲಿ ವಾಹನಗಳಿಗೆ ಯೂಟರ್ನ್ – ನಗರದ ಪ್ರವೇಶಕ್ಕೆ ಬ್ರೇಕ್

    ಬೆಂಗ್ಳೂರು ಗ್ರಾಮಾಂತರ ಜಿಲ್ಲಾ ಗಡಿಯಲ್ಲಿ ವಾಹನಗಳಿಗೆ ಯೂಟರ್ನ್ – ನಗರದ ಪ್ರವೇಶಕ್ಕೆ ಬ್ರೇಕ್

    ಬೆಂಗಳೂರು: ಕೊರೊನಾ ಭೀತಿಯಿಂದ ರಾಜ್ಯ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಯಲ್ಲಿ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳಿಗೆ ನಿಷೇಧವನ್ನು ಯೂಟರ್ನ್ ಮುಖಾಂತರ ಮಾಡಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. 144 ಸೆಕ್ಷನ್ ಜಾರಿ ಹಿನ್ನೆಲೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಯಲಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲದ ಜಾಸ್ ಟೋಲ್‍ನಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ, ಬೆಂಗಳೂರು ನಗರಕ್ಕೆ ಬರುವ ವಾಹನಕ್ಕೆ ಬ್ರೇಕ್ ಹಾಕಲಾಗಿದೆ. ನೆಲಮಂಗಲ ಟ್ರಾಫಿಕ್ ಪೊಲೀಸರು ರಸ್ತೆ ತಡೆ ಮಾಡಿದ್ದಾರೆ.

    ದಿನ ನಿತ್ಯದ ತುರ್ತು ಸ್ಥಿತಿಗೆ ಬೇಕಾದ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಸಾಕಷ್ಟು ಜನ ಬೆಂಗಳೂರು ನಗರದಿಂದ ಹೊರಗೆ ತೆರಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಹಳೇ ನಿಜಗಲ್ಲು ಬಳಿ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳಿಗೆ ಬ್ರೇಕ್ ಹಾಕಲಾಗಿದೆ. ಮೈಸೂರು ಜಿಲ್ಲೆ ಮಾದರಿಯಂತೆ ವಾಹನಗಳ ವಾಪಸ್ ಕಳುಹಿಸುತ್ತಿದ್ದಾರೆ. ಅವಶ್ಯಕತೆ ಇದ್ದರೆ ಮಾತ್ರ ಬೆಂಗಳೂರಿಗೆ ಪ್ರವೇಶ ನೀಡಲಾಗುತ್ತಿದೆ. ಅಂಬುಲೆನ್ಸ್ ಮತ್ತು ತುರ್ತು ವಿಚಾರದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಭಾಗವಾದ ಹಳೇ ನಿಜಗಲ್ಲು ಮತ್ತು ಮಹದೇವಪುರ ಗಡಿ ಭಾಗದ ಚೆಕ್ ಪೋಸ್ಟ್‌ಗೆ ನೆಲಮಂಗಲ ಸರ್ಕಲ್ ಇನ್ಸ್‌ಪೆಕ್ಟರ್ ಶಿವಣ್ಣ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ಚೆಕ್ ಪೋಸ್ಟ್ ಸ್ಥಳದಲ್ಲೇ ಭಾನುವಾರ ರಾತ್ರಿಯಿಂದ ಥರ್ಮಾಲ್ ಪರೀಕ್ಷೆ ಸಹ ಇಲಾಖೆಗಳು ಮಾಡುತ್ತಿತ್ತು. ನೆಲಮಂಗಲ ಉಪವಿಭಾಗ ಪೊಲೀಸರಿಂದ ಕಠಿಣ ಕ್ರಮ ಕೈಗೊಂಡು, ರಾಜಧಾನಿಗೆ ಸಂಪೂರ್ಣ ವಾಹನ ನಿಷೇಧ ಹೇರಿದ್ದಾರೆ.

  • 2 ದಿನಗಳ ಮುನ್ನವೇ ಮಂಡ್ಯದಲ್ಲಿ ಬಿಗಿ ಬಂದೋಬಸ್ತ್

    2 ದಿನಗಳ ಮುನ್ನವೇ ಮಂಡ್ಯದಲ್ಲಿ ಬಿಗಿ ಬಂದೋಬಸ್ತ್

    ಮಂಡ್ಯ: ಹೈವೋಲ್ಟೇಜ್ ಕ್ಷೇತ್ರ ಮಂಡ್ಯ ಮತ ಎಣಿಕೆ ಕೇಂದ್ರದ ಬಳಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಮತ ಎಣಿಕೆ ಕೇಂದ್ರದ ಬಳಿ ಬ್ಯಾರಿಕೇಡ್ ರೀತಿ ಮರದ ಕಂಬಗಳನ್ನು ನೆಡಲಾಗಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದರಿಂದ ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಇಬ್ಬರು ಅಭ್ಯರ್ಥಿಗಳು ಕೂಡ ಜಿದ್ದಾಜಿದ್ದಿನ ಪ್ರಚಾರ ನಡೆಸಿದ್ದರು.

    ಇದೀಗ ಮತ ಎಣಿಕೆಯ ದಿನವೂ ಮತ ಎಣಿಕಾ ಕೇಂದ್ರದ ಬಳಿ ಬೃಹತ್ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮತ ಎಣಿಕಾ ಕೇಂದ್ರ ಬಳಿ ಸಂಪೂರ್ಣ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಹೆಚ್ಚಿನ ಜನ ಸೇರಿದಾಗ ನೂಕು ನುಗ್ಗಲು ಆಗದಂತೆ ಬ್ಯಾರಿಕೇಡ್ ರೀತಿ ಮರದ ಕಂಬಗಳನ್ನು ಈಗಾಗಲೇ ನೆಡಲಾಗಿದೆ.

    ಒಂದು ವೇಳೆ ಗಲಾಟೆ ಆದರೂ ಒಮ್ಮೆಲೆ ಹೆಚ್ಚು ಜನ ನುಗ್ಗದಂತೆ ಜನ ಪ್ರತ್ಯೇಕವಾಗಿ ನಿಲ್ಲುವಂತೆ ಮಧ್ಯೆ ಮಧ್ಯೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗುತ್ತಿದೆ.