Tag: ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ

  • ʻಪಡ್ಡೆಹುಲಿʼ ಶ್ರೇಯಸ್‌ಗೆ ಪ್ರಿಯಾಂಕಾ ಕುಮಾರ್‌ ನಾಯಕಿ

    ʻಪಡ್ಡೆಹುಲಿʼ ಶ್ರೇಯಸ್‌ಗೆ ಪ್ರಿಯಾಂಕಾ ಕುಮಾರ್‌ ನಾಯಕಿ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) `ಪಡ್ಡೆಹುಲಿ’, ರಾಣಾ, ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ಶ್ರೇಯಸ್ (Shreyas) ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ರಾಣಾ ಶ್ರೇಯಸ್‌ಗೆ ಜೋಡಿಯಾಗಿ `ಬ್ಯಾಡ್ ಮ್ಯಾನರ್ಸ್’ (Bad Manners) ನಾಯಕಿ ಪ್ರಿಯಾಂಕಾ ಕುಮಾರ್ (Priyanka Kumar) ಸಾಥ್ ನೀಡ್ತಿದ್ದಾರೆ. ಇದನ್ನೂ ಓದಿ:ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

     

    View this post on Instagram

     

    A post shared by Shreyas k manju (@shreyaskmanju5)

    ಕಣ್ಸನೆ ಬೆಡಗಿ ಪ್ರಿಯಾ ವಾರಿಯರ್ (Priya Varrier) ಜೊತೆಗಿನ `ವಿಷ್ಣುಪ್ರಿಯ’ (Vishnu Priya) ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಿರ್ಮಾಪಕ ಕೆ.ಮಂಜು (K.Manju) ಸುಪುತ್ರ ಶ್ರೇಯಸ್ ಇದೀಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

    ಮಾಸ್ ಎಂಟರ್ ಟೈನರ್ ಹಾಗೂ ಕಾಲೇಜ್ ಲವ್ ಸ್ಟೋರಿಯಾಗಿರುವ ಈ ಸಿನಿಮಾಗೆ ಪ್ರಿಯಾಂಕಾ ಕುಮಾರ್ ನಾಯಕಿಯಾಗಿದ್ದಾರೆ. ಅಭಿಷೇಕ್ ಅಂಬರೀಷ್ ನಟನೆಯ `ಬ್ಯಾಡ್ ಮ್ಯಾನರ್ಸ್’ ಮತ್ತು ವಿರಾಟ್ ನಟನೆಯ `ಅದ್ಧೂರಿ ಲವರ್’ (Adduri Lover) ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿರುವ ಪ್ರಿಯಾಂಕಾಗೆ ಇದು ಮೂರನೇ ಚಿತ್ರವಾಗಿದೆ. ಏಷ್ಯಾನೆಟ್ ಮೂವೀ ಬ್ಯಾನರ್ ಕಡೆಯಿಂದ ಆರ್.ಸಂತೋಷ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ.

    ಇದೇ 31ಕ್ಕೆ ಮುಹೂರ್ತ ನೆರವೇರಲಿದ್ದು, ಏಪ್ರಿಲ್ ತಿಂಗಳಿಂದ ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಕೇರಳದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ನಮ್ಮಿಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಫಸ್ಟ್ ಕಾಂಪ್ರಮೈಸ್ ಆಗೋದು ಅವಿವಾ: ಅಭಿಷೇಕ್

    ನಮ್ಮಿಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಫಸ್ಟ್ ಕಾಂಪ್ರಮೈಸ್ ಆಗೋದು ಅವಿವಾ: ಅಭಿಷೇಕ್

    ಜ್ಯೂ.ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಇತ್ತೀಚಿಗಷ್ಟೇ ಬಹುಕಾಲದ ಗೆಳತಿ ಅವಿವಾ (Aviva Bidapa) ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಎಲ್ಲೂ ಕೂಡ ತಮ್ಮ ಲವ್ ಸ್ಟೋರಿ ಬಗ್ಗೆ ಅಂಬಿ ಪುತ್ರ ಅಭಿಷೇಕ್ ಹೇಳಿರಲಿಲ್ಲ. ಇದೀಗ `ಬ್ಯಾಡ್ ಮ್ಯಾನರ್ಸ್’ (Bad Manners) ಚಿತ್ರ ರಿಲೀಸ್‌ಗೆ ರೆಡಿಯಾಗಿರುವ ಬೆನ್ನಲ್ಲೇ ನಟ ಅಭಿಷೇಕ್ ತಮ್ಮ ಲವ್ ಲೈಫ್ (Love Life) ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ. ಸುಬ್ರಹ್ಮಣ್ಯಂ ನಿಧನ

    ನಟ ಅಂಬರೀಶ್ (Actor Ambareesh) ಮತ್ತು ಅವಿವಾ ತಂದೆ ಪ್ರಕಾಶ್ ಬಿದ್ದಪ್ಪ (Prakash Bidapa) ಹಲವು ವರ್ಷಗಳಿಂದ ಸ್ನೇಹಿತರು. ಎರಡು ಫ್ಯಾಮಿಲಿ ಸಾಕಷ್ಟು ವರ್ಷಗಳಿಂದ ಪರಿಚಿತರು. ಫ್ಯಾಷನ್ ಇವೆಂಟ್‌ವೊಂದರಲ್ಲಿ ಅಭಿಷೇಕ್ ಮತ್ತು ಅವಿವಾ ಅವರ ಮೊದಲು ಭೇಟಿಯಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಲು ಸಾಕಷ್ಟು ಸಮಯ ಹಿಡಿಯಲಿಲ್ಲ. ಕಳೆದ 4-5 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಜೋಡಿ ತಮ್ಮ ಕುಟುಂಬಕ್ಕೆ ಪ್ರೀತಿಯ ವಿಚಾರ ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ಇತ್ತೀಚಿಗೆ ಎಂಗೇಜ್‌ಮೆಂಟ್ ಆಗಿದ್ದಾರೆ.

    ಅವಿವಾ ನನಗೆ ತುಂಬಾ ಸಪೋರ್ಟ್ ಮಾಡುತ್ತಾಳೆ. ಮಾಡಿದ ಎಲ್ಲಾ ಕೆಲಸಗಳನ್ನು ಖುಷಿ ಖುಷಿಯಾಗಿ ನೋಡುತ್ತಾಳೆ. ಇಬ್ಬರ ನಡುವೆ ಮ್ಯೂಚುಯಲ್ ಸಪೋರ್ಟ್ ಇದೆ. ಕಪಲ್ ಅಂದ್ಮೇಲೆ ಜಗಳ ಸಹಜ. ಜಗಳ ಮಾಡಿದ್ದರೂ ಬಿಟ್ಟು ಹೋಗದೇ ಇರುತ್ತೀನಿ ಎನ್ನುವವರನ್ನು ಮದುವೆ ಮಾಡಿಕೊಳ್ಳಬೇಕು ಅಂತಾ ನನ್ನ ತಾಯಿ ಹಾಗೂ ಅವಿವಾ ತಂದೆ-ತಾಯಿ ಹೇಳುತ್ತಾರೆ. ನಮ್ಮ ನಡುವೆ ಜಗಳ ನಡೆದರೆ ತಪ್ಪು ಮಾಡಿರುವವರು ಮೊದಲು ಕ್ಷಮೆ ಕೇಳಬೇಕು. ನಾನು ತಪ್ಪು ಮಾಡಿದರೆ ಅವಿವಾ ಕಾಂಪ್ರಮೈಸ್ ಆಗುತ್ತಾರೆ. ಅವರು ತಪ್ಪು ಮಾಡಿದ್ದರೂ ಅವರೇ ಕಾಂಪ್ರಮೈಸ್ ಆಗುತ್ತಾರೆ. ಮನೆಯಲ್ಲಿ ಸಪೋರ್ಟ್ ಚೆನ್ನಾಗಿದ್ದರೆ ವೃತ್ತಿ ಬದುಕಿನಲ್ಲಿ ಸಾಧನೆ ಮಾಡಬಹುದು. ಅದಕ್ಕೆ ನನ್ನ ತಂದೆ ತಾಯಿನೇ ಸಾಕ್ಷಿ ಎಂದು ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.

    ಅಭಿಷೇಕ್ ನಟನೆಯ 2ನೇ ಸಿನಿಮಾ `ಬ್ಯಾಡ್ ಮ್ಯಾನರ್ಸ್’ ಮೇ ಅಂತ್ಯಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್ ಬಳಿಕ ಅಭಿಷೇಕ್ ಮತ್ತು ಅವಿವಾ ಜೋಡಿ ಜೂನ್‌ನಲ್ಲಿ ಹಸೆಮಣೆ (Wedding) ಏರಲಿದ್ದಾರೆ ಎನ್ನಲಾಗುತ್ತಿದೆ.