Tag: ಬ್ಯಾಡ್ ನ್ಯೂಸ್

  • ನಟನೆ ಚೆನ್ನಾಗಿದೆ ಅಂತಾರೆ ಆದರೆ ಸಿನಿಮಾ ಆಫರ್ ಕೊಡಲ್ಲ: ನೇಹಾ ಧೂಪಿಯಾ ಬೇಸರ

    ನಟನೆ ಚೆನ್ನಾಗಿದೆ ಅಂತಾರೆ ಆದರೆ ಸಿನಿಮಾ ಆಫರ್ ಕೊಡಲ್ಲ: ನೇಹಾ ಧೂಪಿಯಾ ಬೇಸರ

    ಬಾಲಿವುಡ್ ಬೆಡಗಿ ನೇಹಾ ಧೂಪಿಯಾ (Neha Dhupia) ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ರೂ ತನಗೆ ಸರಿಯಾಗಿ ಸಿನಿಮಾವಕಾಶ ಸಿಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಸ್ವೀಟ್ ಹಾರ್ಟ್ ಎಂದ ವಿಕ್ಕಿ ಕೌಶಲ್

    ಕಳೆದ 3-4 ತಿಂಗಳಿಂದ ನನಗೆ ದಕ್ಷಿಣದ ಚಿತ್ರರಂಗದಿಂದ ಸಿನಿಮಾ ಆಫರ್‌ಗಳು ಅರಸಿ ಬರುತ್ತಿವೆ. ಅಲ್ಲಿನವರ ಬಗ್ಗೆ ನನಗೆ ಗೊತ್ತಿಲ್ಲ. ಹಾಗಾಗಿ ಸಿನಿಮಾ ಅವಕಾಶ ಒಪ್ಪಿಕೊಳ್ತಿಲ್ಲ. ಆದರೆ ಬಾಲಿವುಡ್‌ನಲ್ಲಿ ನಮ್ಮವರು, ನನ್ನ ಸಾಮರ್ಥ್ಯದ ಬಗ್ಗೆ ಗೊತ್ತಿದ್ದರೂ ಆಫರ್ ಕೊಡುತ್ತಿಲ್ಲ ಎಂದಿದ್ದಾರೆ. ನಿಮ್ಮ ನಟನೆ ಚೆನ್ನಾಗಿದೆ ಅಂತಾರೆ, ಆದರೆ ಸಿನಿಮಾ ಅವಕಾಶ ಕೊಡಲ್ಲ ಎಂದು ಬೇಸರ ಹೊರಹಾಕಿದ್ದಾರೆ ನಟಿ ನೇಹಾ ಧೂಪಿಯಾ.

    ಪಾತ್ರಕ್ಕಾಗಿ ಕಡೆಯ ಬಾರಿ ನನಗೆ ಯಾವಾಗ ಕರೆ ಬಂದಿತ್ತು ಎಂಬುದು ನೆನಪಿಲ್ಲ ಎಂದು ನೇಹಾ ಹೇಳಿದ್ದಾರೆ. ಸಿನಿಮಾದಲ್ಲಿ ಬೇಡ ಕೊನೆ ಪಕ್ಷ ವೆಬ್ ಸರಣಿಯಲ್ಲಿ ಆದರೂ ಅವಕಾಶ ಕೊಡಬಹುದು. ಆದರೆ ಅಲ್ಲಿಯೂ ಅವಕಾಶಕ್ಕೆ ಕಲ್ಲು ಹಾಕುವವರು ಜಾಸ್ತಿ. ಇಂದಿಗೂ ಸಿನಿಮಾ ಆಫರ್‌ಗಾಗಿ ಕಷ್ಟಪಡುತ್ತಿದ್ದೇನೆ ಎಂದು ನಟಿ ನೇಹಾ ಮಾತನಾಡಿದ್ದಾರೆ.

    ಇದೀಗ 3 ವರ್ಷಗಳ ನಂತರ ನೇಹಾ ಅವರು ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾದಲ್ಲಿ ನಟಿಸಿದ್ದಾರೆ. ವಿಕ್ಕಿ ಕೌಶಲ್  (Vicky Kaushal) ಮತ್ತು ತೃಪ್ತಿ ದಿಮ್ರಿ ನಟನೆಯ ಸಿನಿಮಾ ಇದಾಗಿದೆ.

  • ‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

    ‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

    ಬಾಲಿವುಡ್ ನಟ ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ (Triptii Dimri), ಆಮಿ ವಿರ್ಕ್ ನಟನೆಯ ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾ ಇದೇ ಜು.19ರಂದು ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಹಾಟ್ ಸಾಂಗ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್ನೂ ಚಿತ್ರದ 27 ಸೆಕೆಂಡ್‌ಗಳ ಕಿಸ್ಸಿಂಗ್ ದೃಶ್ಯಕ್ಕೆ ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದೆ.

    ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಲಿಪ್‌ಲಾಕ್ ದೃಶ್ಯಗಳಿಗೆ ಕತ್ತರಿ ಹಾಕಿದೆ. ಈ ದೃಶ್ಯಗಳಲ್ಲಿ ಒಂದು 9 ಸೆಕೆಂಡುಗಳ ಕಾಲ ಕಿಸ್ಸಿಂಗ್ ಸೀನ್ ಇದ್ದರೆ, ಇನ್ನೆರಡು ದೃಶ್ಯಗಳಲ್ಲಿ 10 ಸೆಕೆಂಡುಗಳು ಮತ್ತು 8 ಸೆಕೆಂಡುಗಳು ಕಾಲ ಕಿಸ್ಸಿಂಗ್ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಬೆಚ್ಚಿಬಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿ

     

    View this post on Instagram

     

    A post shared by Vicky Kaushal (@vickykaushal09)

    ‘ಅನಿಮಲ್’ ಸಿನಿಮಾದ ಸಕ್ಸಸ್ ಬಳಿಕ ತೃಪ್ತಿ ದಿಮ್ರಿ ‘ಬ್ಯಾಡ್ ನ್ಯೂಸ್’ ಚಿತ್ರ ಒಪ್ಪಿಕೊಂಡಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಜೊತೆ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರದ ‘ತೌಬಾ ತೌಬಾ’ ಸಾಂಗ್ ಹಿಟ್ ಆದ ಬಳಿಕ ಇಬ್ಬರ ರೊಮ್ಯಾಂಟಿಕ್ ಸಾಂಗ್ ಕೂಡ ಪಡ್ಡೆಹುಡುಗರ ನಿದ್ದೆಗೆಡಿಸಿದೆ.

    ಈ ಚಿತ್ರವನ್ನು ಆನಂದ್ ತಿವಾರಿ ನಿರ್ದೇಶನವನ್ನು ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾ ರಿಲೀಸ್‌ಗಾಗಿ ಪಡ್ಡೆಹುಡುಗರು ಎದುರು ನೋಡ್ತಿದ್ದಾರೆ.

  • ‘ಬ್ಯಾಡ್ ನ್ಯೂಸ್’ ಬಗ್ಗೆ ಖುಷಿ ಇದೆ ಅಂತಿದ್ದಾರೆ ತೃಪ್ತಿ ದಿಮ್ರಿ

    ‘ಬ್ಯಾಡ್ ನ್ಯೂಸ್’ ಬಗ್ಗೆ ಖುಷಿ ಇದೆ ಅಂತಿದ್ದಾರೆ ತೃಪ್ತಿ ದಿಮ್ರಿ

    ನಿಮಲ್ ಚಿತ್ರ ಖ್ಯಾತಿಯ ತೃಪ್ತಿ ದಿಮ್ರಿ ಥಕಥಕ ಅಂತ ಕುಣೀತಾ ಇದ್ದಾರೆ. ಅನಿಮಲ್ ಹಿಟ್ ಆಗಿದ್ದೇ ತಡ, ಅವರನ್ನು ಅದೃಷ್ಟಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ ಅವರು ಬ್ಯಾಡ್ ನ್ಯೂಸ್ ಅಲೆಯಲ್ಲಿ ತೇಲುತ್ತಿದ್ದು, ಈ ಚಿತ್ರ ಕೂಡ ತಮ್ಮ ವೃತ್ತಿ ಬದುಕಿಗೆ ದೊಡ್ಡ ಸಕ್ಸಸ್ ಕೊಡಲಿದೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಹೋದ ಕಡೆಗೆಲ್ಲ ಬ್ಯಾಡ್ ನ್ಯೂಸ್ ಬಗ್ಗೆ ಖುಷಿಯಿಂದಲೇ ಮಾತನಾಡುತ್ತಿದ್ದಾರೆ.

    ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ‘ಅನಿಮಲ್’ (Animal) ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ತೃಪ್ತಿ ದಿಮ್ರಿ (Tripti Dimri) ಈಗ ಇಬ್ಬರು ಸ್ಟಾರ್ ನಟರ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ರೊಮ್ಯಾನ್ಸ್ ಮಾಡಿದ್ಮೇಲೆ ತೃಪ್ತಿ ಲಕ್ ಬದಲಾಗಿದೆ. ಬಾಲಿವುಡ್‌ನಲ್ಲಿ ನಟಿಗೆ ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡುತ್ತಿದ್ದಾರೆ. ಆಫರ್ ಮೇಲೆ ಆಫರ್ ತೃಪ್ತಿ ಕಡೆ ಅರಸಿ ಬರುತ್ತಿದೆ.

    ವಿಕ್ಕಿ ಕೌಶಲ್, ಆಮಿ ವಿರ್ಕ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾದಲ್ಲಿ ಇಬ್ಬರ ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಲಿದ್ದಾರೆ. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ತೃಪ್ತಿ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ನಟರ ಇಷ್ಟೋಂದು ಬೋಲ್ಡ್ ಆಗಿ ಕಾಣಿಕೊಳ್ತಾರಾ ಎಂದು ಪ್ರಶ್ನೆಗಳ ಸರಿಮಳೆಯನ್ನೇ ಹರಿಸಿದ್ದಾರೆ.

     

    ‘ಬ್ಯಾಡ್ ನ್ಯೂಸ್’ (Bad Newz) ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಿದ್ದಾರೆ. ವಿಕ್ಕಿ ಕೌಶಲ್, ಆಮಿಗೆ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಸಿನಿಮಾ ಇದೇ ಜುಲೈ 19ಕ್ಕೆ ರಿಲೀಸ್ ಆಗಲಿದೆ.