Tag: ಬ್ಯಾಟಿಂಗ್ ರನ್

  • ಬೌಂಡರಿ ಗೆರೆಯ ಬಳಿ ಅತ್ಯುತ್ತಮ ಕ್ಯಾಚ್ ಹಿಡಿದ ಕಾರ್ತಿಕ್!- ವಿಡಿಯೋ ನೋಡಿ

    ಬೌಂಡರಿ ಗೆರೆಯ ಬಳಿ ಅತ್ಯುತ್ತಮ ಕ್ಯಾಚ್ ಹಿಡಿದ ಕಾರ್ತಿಕ್!- ವಿಡಿಯೋ ನೋಡಿ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅತ್ಯುತ್ತಮ ರೀತಿಯಲ್ಲಿ ಕ್ಯಾಚ್ ಪಡೆದಿದ್ದು, ಕಾರ್ತಿಕ್ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    ಪಂದ್ಯದಲ್ಲಿ ಕಿವೀಸ್ ತಂಡದ ವಿಕೆಟ್ ಕೀಪರ್ ಸಿಫರ್ಟ್ ನೀಡಿದ ಕ್ಯಾಚ್ ಕೈ ಚೆಲ್ಲಿದ್ದ ದಿನೇಶ್, ಮಿಚೆಲ್ ನೀಡಿದ ಕ್ಯಾಚ್ ಪಡೆದು ಸರಿದೂಗಿಸಿದಂತೆ ಕಂಡು ಬಂತು. ಕೃಣಾಲ್ ಪಾಂಡ್ಯ ಎಸೆದ 14 ಓವರಿನ 2ನೇ ಎಸೆತವನ್ನು ಸಿಕ್ಸರ್ ಗಟ್ಟಲು ಮಿಚೆಲ್ ಪ್ರಯತ್ನಿಸಿದ್ದರು. ಆದರೆ ಬೌಂಡರಿ ಗೆರೆಯ ಬಳಿ ದಿನೇಶ್ ಕಾರ್ತಿಕ್ ಕ್ಯಾಚ್ ಪಡೆದರು. ಆ ವೇಳೆಗೆ ಬೌಡರಿ ಗೆರೆ ದಾಟುವುದನ್ನು ಮನಗಂಡ ದಿನೇಶ್ ಚೆಂಡನ್ನು ಮೇಲಕ್ಕೆ ಎಸೆದು ಮತ್ತೆ ಫಿಲ್ಡ್ ಒಳಗೆ ಡೈವ್ ಮಾಡಿ ಕ್ಯಾಚ್ ಪಡೆದರು. ಪರಿಣಾಮ 6 ಎಸೆತಗಳಲ್ಲಿ 8 ರನ್ ಗಳಿಸಿದ್ದ ಮಿಚೆಲ್ ಪೆವಿಲಿಯನ್‍ಗೆ ನಡೆದರು.

    ಕಿವೀಸ್ ತಂಡ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿದೆ. ಸೋಲಿಲ್ಲದ ಸರದಾರನಂತೆ ಸಾಗುತ್ತಿರುವ ಟೀಂ ಇಂಡಿಯಾ ಗೆಲ್ಲಲು 220 ರನ್ ಗುರಿ ಪಡೆದಿದೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಕಿವೀಸ್ ತಂಡದ ಆಟಗಾರರು ಏಕದಿನ ಸರಣಿಯ ಸೋಲಿನ ಸೇಡು ತೀರಿಸುವಂತೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಕಿವೀಸ್ ಪರ ಆರಂಭಿಕ ಸಿಫರ್ಟ್ ಕೇವಲ 30 ಎಸೆತಗಳಲ್ಲೇ ಅರ್ಧ ಶತಕ ಸಿಡಿದರೆ, ತಲಾ 34 ರನ್ ಗಳಿಸಿದ ಮ್ರನೋ ಹಾಗೂ ವಿಲಿಯಮ್ಸನ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡ ಸ್ಕೋರ್ ಹೆಚ್ಚಾಗಲು ಕಾರಣರಾದರು. 4.4 ಓವರ್ ಗಳಲ್ಲಿ ಕಿವೀಸ್ ತಂಡ 50 ರನ್ ಗಡಿದಾಟಿದರೆ, 10.2 ಓವರ್ ಗಳಲ್ಲಿ ಶತಕ ಗಳಿಸಿತು.

    ಸ್ಫೋಟಕ ಬ್ಯಾಟಿಂಗ್ ನಿಂದ ಶತಕದತ್ತ ಮುನ್ನುಗುತ್ತಿದ್ದ ಸಿಫರ್ಟ್ ವಿಕೆಟ್ ಪಡೆಯಲು ಖಲೀಲ್ ಅಹ್ಮದ್ ಯಶಸ್ವಿಯಾದರೆ, 34 ರನ್ ಗಳಿಸಿದ್ದ ಮನ್ರೋ ವಿಕೆಟನ್ನು ಕೃಣಾಲ್ ಪಾಂಡ್ಯ ಪಡೆದರು. ಸಿಫರ್ಟ್ 7 ಬೌಂಡರಿ ಹಾಗೂ 6 ಸಿಕ್ಸರ್ ನೊಂದಿಗೆ 84 ರನ್ ಗಳಿಸಿ ನಿರ್ಗಮಿಸಿದರು.

    ನ್ಯೂಜಿಲೆಂಡ್ ಬ್ಯಾಟಿಂಗ್ ವೇಗಕ್ಕೆ ಹಾರ್ದಿಕ್ ಪಾಂಡ್ಯ ಬ್ರೇಕ್ ಹಾಕಲು ಯತ್ನಿಸಿ ಪ್ರಮುಖ ವಿಕೆಟ್ ಪಡೆದರು. 164 ರನ್ ಗಳಿಸಿದ್ದ ವೇಳೆ ಕಿವೀಸ್ ತಂಡ 1 ರನ್ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡಿತು. ಉಳಿದಂತೆ ಸ್ಲಾಗ್ ಓವರ್ ಗಳಲ್ಲಿ ರಾಸ್ ಟೇಲರ್ 23 ರನ್, ಸ್ಕಾಟ್ ಕುಗ್ಗೆಲಿಜೆನ್ 20 ರನ್ ಸಿಡಿಸಿ ತಂಡದ ಮೊತ್ತ 200 ರನ್ ಗಡಿದಾಟುವಂತೆ ಮಾಡಿದರು. ಅಂತಿಮವಾಗಿ ನಿಗದಿತ 20 ಓವರ ಗಳಲ್ಲಿ ಕಿವೀಸ್ ತಂಡ 6 ವಿಕೆಟ್ ಕಳೆದುಕೊಂಡು 219 ರನ್ ಗಳಸಿತು.

    ಪಂದ್ಯದಲ್ಲಿ ದುಬಾರಿಯಾದ ಟೀಂ ಇಂಡಿಯಾ ಬೌಲರ್ ಗಳಲ್ಲಿ ಹಾರ್ದಿಕ್ ಪಾಂಡ್ಯ 51 ರನ್ ನೀಡಿ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಕೃಣಾಲ್ ಪಾಂಡ್ಯ, ಚಹಲ್ ತಲಾ ಒಂದೊಂದು ವಿಕೆಟ್ ಪಡೆದರು.

    https://twitter.com/SanjeevAaspal/status/1093063304480780288

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv