Tag: ಬ್ಯಾಟರಿ

  • ಲೈಂಗಿಕ ತೃಪ್ತಿಗಾಗಿ ಶಿಶ್ನಕ್ಕೆ ಬಟನ್ ಬ್ಯಾಟರಿ ಸಿಕ್ಕಿಸಿಕೊಂಡು 73ರ ವೃದ್ಧ ಎಡವಟ್ಟು!

    ಲೈಂಗಿಕ ತೃಪ್ತಿಗಾಗಿ ಶಿಶ್ನಕ್ಕೆ ಬಟನ್ ಬ್ಯಾಟರಿ ಸಿಕ್ಕಿಸಿಕೊಂಡು 73ರ ವೃದ್ಧ ಎಡವಟ್ಟು!

    – ಶಸ್ತ್ರಚಿಕಿತ್ಸೆ ವೇಳೆ ಬೆಚ್ಚಿಬಿದ್ದ ವೈದ್ಯರು

    ಕಾನ್ಪೆರಾ: ಇತ್ತೀಚಿನ ದಿನಗಳಲ್ಲಿ ಲೈಂಗಿಕ ತೃಷೆಗಾಗಿ ಚಿತ್ರವಿಚಿತ್ರ ವಿಧಾನಗಳನ್ನು ಅನುಸರಿಸುತ್ತಿರುವುದು ಆಗಾಗ್ಗೆ ಕಂಡುಬರುತ್ತಿದೆ. ಅದೇ ರೀತಿ ಆಸ್ಟ್ರೇಲಿಯಾದ (Australia) ವೃದ್ಧನೊಬ್ಬ ತಾತ್ಕಾಲಿಕ ಲೈಂಗಿಕ ತೃಪ್ತಿ ಪಡೆಯಲು ಮಾಡಿಕೊಂಡ ಎಡವಟ್ಟಿನಿಂದ ಆಸ್ಪತ್ರೆಗೆ (Hospital) ದಾಖಲಾಗಿದ್ದಾನೆ.

    ಹೌದು. 73 ವರ್ಷದ ವೃದ್ಧ ತನ್ನ ಲೈಂಗಿಕ ತೃಪ್ತಿಗಾಗಿ ಬಟನ್ ಶೈಲಿಯ ಬ್ಯಾಟರಿಗಳನ್ನು ತನ್ನ ಶಿಶ್ನಕ್ಕೆ ಅಳವಡಿಸಿಕೊಂಡಿದ್ದಾನೆ. ನಂತರ ಅದು ಶಿಶ್ನದಲ್ಲೇ ಸಿಕ್ಕಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ವೈದ್ಯರ ಮೊರೆಹೋಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  284 ಕೇಸ್, 1.40 ಲಕ್ಷ ರೂ. ಫೈನ್ – ಪೊಲೀಸರ ಬಲೆಗೆ ಬಿದ್ದ ಯುವಕ

    ಮೂತ್ರಶಾಸ್ತ್ರ ವೈದ್ಯಕೀಯ ಅಧ್ಯಯನ (Medical Study) ವರದಿ ಪ್ರಕಾರ, ಅಪರಿಚಿತ ವ್ಯಕ್ತಿಯು ಉದ್ದೇಶಪೂರ್ವಕವಾಗಿಯೇ ಶಿಶ್ನದ ಒಳಕ್ಕೆ ಬ್ಯಾಟರಿ ತಳ್ಳುವ ಮೂಲಕ ತಾತ್ಕಾಲಿಕ ಲೈಂಗಿಕ ತೃಪ್ತಿ ಅನುಭವಿಸಿದ್ದಾನೆ. ಈ ವೇಳೆ ಬ್ಯಾಟರಿಗಳು ಮೂತ್ರನಾಳದಲ್ಲೇ ಸಿಕ್ಕಿಕೊಂಡಿವೆ. ಇದು ಮೂತ್ರನಾಳ ನೈಕ್ರೋಸಿಸ್‌ನ ಮೊದಲ ಕೇಸ್ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

    ಬಟನ್ ಬ್ಯಾಟರಿ ಅಳವಡಿಕೆಯಿಂದ ಏನಾಗುತ್ತದೆ?
    ಈ ರೀತಿ ಲೈಂಗಿಕ ತೃಷೆಗಾಗಿ ಬಟನ್ ಬ್ಯಾಟರಿ ಅಳವಡಿಸಿಕೊಳ್ಳುವುದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಶಿಶ್ನಕ್ಕೆ ಬಟನ್ ಬ್ಯಾಟರಿ ಸೇರಿಸಿದ ನಂತರ ನಿಧಾನವಾಗಿ ನೋವು ಕಾಣಿಸಿಕೊಳ್ಳುತ್ತದೆ. ಶಿಶ್ನದ ಮುಂಭಾಗದ ಮುಚ್ಚಿಕೊಳ್ಳಲು ಪ್ರಾರಂಭಿಸಿದ ನಂತರ ಮೂತ್ರ ವಿಸರ್ಜನೆ ವೇಳೆ ತೀವ್ರ ನೋವುಂಟಾಗುತ್ತದೆ. ದೇಹದಲ್ಲಿ ಆಯಾಸವಾಗುತ್ತದೆ, ಮೂತ್ರ ಕೋಶಗಳಲ್ಲಿ ಸಮಸ್ಯೆಯಾಗುತ್ತದೆ. ಈ ಲಕ್ಷಣಗಳು ಕಂಡುಬಂದ ನಂತರ ವ್ಯಕ್ತಿಯೂ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾನೆ.

    ಬ್ಯಾಟರಿಯು ಸ್ವದೇಶಿತವಾಗಿ ನಿರ್ಮಿತವಾದುದ್ದಲ್ಲ, ಅದಲ್ಲಿ ಅನೇಕ ವಿದೇಶಿ ವಸ್ತುಗಳೂ ಇವೆ ಎಂದು ವ್ಯಕ್ತಿ ಒಪ್ಪಿಕೊಂಡಿದ್ದಾನೆ. ನಂತರ ವೈದ್ಯರು ಶಸ್ತçಚಿಕಿತ್ಸೆ ಮೂಲಕ ಅದನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ:  ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ದೋಖಾ – ಅಪ್ಲೈ ಮಾಡುವ ಮುನ್ನ ಎಚ್ಚರ!

    ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಂತಹ ಯಡವಟ್ಟುಗಳನ್ನು ಮಾಡಿಕೊಳ್ಳುವುದರಿಂದ ಗ್ಯಾಂಗ್ರಿನ್ ಸಂಭವಿಸುವ ಸಾಧ್ಯತೆಯಿದೆ. ಮಾರಣಾಂತಿಕ ಕಾಯಿಲೆ ಸಂಭವಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

  • ಮಹಿಳೆಯ ಹೊಟ್ಟೆಯಿಂದ ವೈದ್ಯರು ತೆಗೆದರು 55 ಬ್ಯಾಟರಿ

    ಮಹಿಳೆಯ ಹೊಟ್ಟೆಯಿಂದ ವೈದ್ಯರು ತೆಗೆದರು 55 ಬ್ಯಾಟರಿ

    ಡಬ್ಲಿನ್: 66 ವರ್ಷದ ಮಹಿಳೆಯ (Woman) ಹೊಟ್ಟೆ ಹಾಗೂ ಕರುಳಿನಿಂದ ಬರೋಬ್ಬರಿ 55 ಬ್ಯಾಟರಿಗಳನ್ನು (Battery) ವೈದ್ಯರು (Doctor) ಹೊರ ತೆಗೆದಿರುವ ವಿಚಿತ್ರ ಘಟನೆ ಐರ್ಲೆಂಡಿನಲ್ಲಿ (Ireland) ನಡೆದಿದೆ. ಮಹಿಳೆ ಉದ್ದೇಶಪೂರ್ವಕವಾಗಿಯೇ ತನ್ನನ್ನು ತಾನು ಘಾಸಿಗೊಳಿಸುವ ಉದ್ದೇಶದಿಂದ ಬ್ಯಾಟರಿಗಳನ್ನು ನುಂಗಿದ್ದಾಳೆ ಎಂದು ತಿಳಿದುಬಂದಿದೆ.

    ಮಹಿಳೆ ಕೈಗೆ ಸಿಕ್ಕ ಬ್ಯಾಟರಿಗಳನ್ನೆಲ್ಲಾ ನುಂಗಿರುವುದಾಗಿ ತಿಳಿಸಿದ್ದಾಳೆ. ಆದರೆ ಎಷ್ಟು ಬ್ಯಾಟರಿಗಳನ್ನು ನುಂಗಿದ್ದಾಳೆ ಎಂಬ ಲೆಕ್ಕ ಆಕೆಯೂ ಇಟ್ಟುಕೊಂಡಿರಲಿಲ್ಲ. ಆಕೆ ಆಸ್ಪತ್ರೆಗೆ ದಾಖಲಾದ ಬಳಿಕ ಆಕೆಯ ಹೊಟ್ಟೆಯ ಭಾಗದ ಎಕ್ಸ್-ರೇ ಪರೀಕ್ಷೆಯ ವೇಳೆ ಹೊಟ್ಟೆಯಲ್ಲಿ ಹಾಗೂ ಕರುಳಿನಲ್ಲಿ ಹಲವು ಬ್ಯಾಟರಿಗಳು ಇರುವುದನ್ನು ನೋಡಿ ದಂಗಾಗಿದ್ದಾರೆ.

    ಆರಂಭದಲ್ಲಿ ವೈದ್ಯರು ಮಹಿಳೆಯ ದೇಹದಿಂದ ಬ್ಯಾಟರಿಗಳನ್ನು ನೈಸರ್ಗಿಕವಾಗಿಯೇ ಹೊರ ಹಾಕಲು ಕಾದಿದ್ದಾರೆ. 1 ವಾರದ ಬಳಿಕ ಮತ್ತೆ ಸ್ಕ್ಯಾನ್ ಮಾಡಿ ನೋಡಿದಾಗ ಮತ್ತಷ್ಟು ಬ್ಯಾಟರಿಗಳು ಇದ್ದುದನ್ನು ನೋಡಿದ್ದಾರೆ. ಆಕೆ ತಾನಾಗಿಯೇ AA ಬ್ಯಾಟರಿಗಳನ್ನು ಮಾತ್ರವೇ ಹೊರ ಹಾಕಲು ಸಾಮರ್ಥ್ಯಳಾಗಿದ್ದು, AAA ಬ್ಯಾಟರಿಗಳನ್ನು ಹೊರ ಹಾಕಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಸತತ ಎರಡೂವರೆ ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದ 6ರ ಬಾಲಕ

    ಬ್ಯಾಟರಿಗಳ ತೂಕದಿಂದಾಗಿ ಆಕೆಯ ಹೊಟ್ಟೆ ಹಿಗ್ಗಿದ್ದು ಮಾತ್ರವಲ್ಲದೇ ಅವು ಗುದದ್ವಾರದ ಮೂಳೆಗಳಲ್ಲೂ ನೇತಾಡಿಕೊಂಡಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಎಲ್ಲಾ ಬ್ಯಾಟರಿಗಳನ್ನೂ ತೆಗೆದುಹಾಕಿದ್ದಾರೆ.

    ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಒಟ್ಟು 55 ಬ್ಯಾಟರಿಗಳನ್ನು ತೆಗೆದಿದ್ದು, ಇದು ಇಲ್ಲಿಯವರೆಗೆ ಶಸ್ತ್ರಚಿಕಿತ್ಸೆಯಲ್ಲಿ ಮನಿಷ್ಯರ ಹೊಟ್ಟೆಯಿಂದ ತೆಗೆಯಲಾದ ಅತಿ ಹೆಚ್ಚು ಬ್ಯಾಟರಿಗಳು ಎಂದು ತಿಳಿಸಿದ್ದಾರೆ. ಮಾತ್ರವಲ್ಲದೇ ಆ ಬ್ಯಾಟರಿಗಳು ಆಕೆಯ ಜೀರ್ಣಕ್ರಿಯೆಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಟೈಂನಲ್ಲಿ ನಾಪತ್ತೆಯಾಗಿದ್ದ ಬೆಕ್ಕು 2 ವರ್ಷಗಳ ನಂತರ ತಾನೇ ಮನೆಗೆ ಬಂತು!

    Live Tv
    [brid partner=56869869 player=32851 video=960834 autoplay=true]

  • ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ

    ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ

    ಬೆಂಗಳೂರು: ವಿಶ್ವದಲ್ಲೇ ಅತೀ ವೇಗವಾಗಿ ಚಾರ್ಜ್ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ಅಲ್ಯೂಮಿನಿಯಂ ಇಯಾನ್ ಗ್ರಾಫೇನ್ ಪೌಚ್ ಸೆಲ್(Aluminum Ion Graphene Pouch Cells) ತಂತ್ರಜ್ಞಾನವನ್ನು ಬೆಂಗಳೂರಿನ ಸ್ಟಾರ್ಟ್ಅಪ್ ನೋರ್ಡಿಶ್ಚೇ ಟೆಕ್ನಾಲಜೀಸ್(NORDISCHE TECHNOLOGIES) ಸಿದ್ದಪಡಿಸಿದೆ. ಇದು ಲಿಥೀಯಂ ಇಯಾನ್ ಸೆಲ್ಸ್ ಬ್ಯಾಟರಿಗಿಂತಲೂ 50 ಪಟ್ಟು ಹೆಚ್ಚು ವೇಗದಲ್ಲಿ ಚಾರ್ಜ್ ಆಗುವ ಹಾಗೂ ಅಷ್ಟೇ ಮಟ್ಟದ ಬ್ಯಾಟರಿ ಸಾಮರ್ಥ್ಯ ಹೊಂದಿರುವ, ನಾನ್ ಟಾಕ್ಸಿಕ್ ಮತ್ತು ಅಗ್ನಿ ನಿರೋಧಕ ತಂತ್ರಜ್ಞಾನವನ್ನು ಹೊಂದಿದೆ.

    ಬ್ಯಾಟರಿ ಕ್ಷೇತ್ರದಲ್ಲಿನ ಈ ವಿನೂತನ ಹಾಗೂ ಕ್ರಾಂತಿಕಾರಿ ತಂತ್ರಜ್ಞಾನವನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮುಖ್ಯಸ್ಥ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

    ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಈಗ ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳಲ್ಲಿ  ಬಳಸಲಾಗುತ್ತಿರುವ ಲೀಥಿಯಂ ಬ್ಯಾಟರಿ ತಂತ್ರಜ್ಞಾನದಿಂದ ಬಹಳಷ್ಟು ಸಮಸ್ಯೆಗಳು ಕಂಡುಬರುತ್ತಿವೆ. ವಾಹನಗಳಲ್ಲಿ ಬಳಸಲಾಗಿರುವ ಬ್ಯಾಟರಿಗಳು ಬೆಂಕಿ ಹತ್ತಿಕೊಳ್ಳುವುದು, ಸರಿಯಾದ ಸಾಮರ್ಥ್ಯತೆ ಹೊಂದದೇ ಇರುವುದು. ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರವೆಂಬಂತೆ ಅಲ್ಯೂಮಿನಿಯಂ ಇಯಾನ್ ಗ್ರಾಫೇನ್ ಪೌಚ್ ಸೆಲ್ ತಂತ್ರಜ್ಞಾನವನ್ನು ಬೆಂಗಳೂರಿನ ಸ್ಟಾರ್ಟ್ಅಪ್ ನೋರ್ಡಿಶ್ಚೇ ಟೆಕ್ನಾಲಜೀಸ್ – ಸಿಪಿಟ್ (ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನೀಯರಿಂಗ್ & ಟೆಕ್ನಾಲಜಿ)ಯ ಜೊತೆಗೂಡಿ ಸಂಶೋಧಿಸಿದೆ. ರಫ್ತು ಅವಲಂಬಿತ ಲೀಥೀಯಂ ಬ್ಯಾಟರಿ ತಂತ್ರಜ್ಞಾನದಷ್ಟೇ ಸಾಮರ್ಥ್ಯ ಹೊಂದಿರುವ ಈ ತಂತ್ರಜ್ಞಾನ ನಮ್ಮ ದೇಶದ ಆವಿಷ್ಕಾರಗಳಲ್ಲಿ ಬಹಳ ಮಹತ್ವದ್ದು ಎಂದು ಹೇಳಿದರು. ಇದನ್ನೂ ಓದಿ: ಆಡಳಿತ ಮಂಡಳಿ ಎಚ್ಚರಿಕೆಗೆ ಡೋಂಟ್‍ಕೇರ್- ಹಿಜಬ್ ಧರಿಸಿ ಬಂದ 15 ವಿದ್ಯಾರ್ಥಿನಿಯರು!

    ಬೆಂಗಳೂರಿನ ಸ್ಟಾರ್ಟ್ಅಪ್ ನೋರ್ಡಿಶ್ಚೇ ಟೆಕ್ನಾಲಜೀಸ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಸಬ್ಯಸಾಚಿ ದಾಸ್ ಮಾತನಾಡಿ, ಕಳೆದ 5 ವರ್ಷಗಳಿಂದ ನಮ್ಮ ಸಂಸ್ಥೆ ನಡೆಸಿದ ಸಂಶೋಧನೆಯ ಫಲವಾಗಿ ಈ ವಿನೂತನ ಅಲ್ಯೂಮಿನಿಯಂ-ಗ್ರಾಫೇನ್ ಪೌಚ್ ಸೆಲ್ ಮತ್ತು ಭವಿಷ್ಯದ ಇಲೆಕ್ಟ್ರಿಕಲ್ ವೆಹಿಕಲ್ ಬ್ಯಾಟರಿ ತಂತ್ರಜ್ಞಾನವನ್ನು ಸಂಶೋಧಿಸಲಾಗಿದೆ. ಈ ಬ್ಯಾಟರಿಗಳು ಬಹಳಷ್ಟು ಹಗುರ ಹಾಗೂ ವಿಶ್ವದಲ್ಲೇ ಅತೀ ವೇಗವಾಗಿ ಚಾರ್ಜ್ ಆಗಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲದೇ, ಈ ಬ್ಯಾಟರಿ ಕೆಲಸ ಮಾಡುವ ಉಷ್ಣಾಂಶದ ರೇಂಜ್ ಬಹಳಷ್ಟಿದ್ದು(-25ಸೆಲ್ಸಿಯಸ್ ನಿಂದ 60 ಡಿಗ್ರಿ ಸೆಲ್ಸಿಯಸ್), ಬೆಂಕಿ ಹತ್ತಿಕೊಳ್ಳುವುದಿಲ್ಲ. ಹೆಚ್ಚಿನ ಸಾಮರ್ಥ್ಯ ಹೊಂದಿರುವ ಮತ್ತು 5 ರಿಂದ 7 ವರ್ಷಗಳ ಬಾಳಿಕೆ ಬರುತ್ತದೆ. ಅಲ್ಲದೇ ಈ ರಿಚಾರ್ಜೆಬಲ್ ಬ್ಯಾಟರಿಗಳನ್ನು 3,000 ಸೈಕಲ್‌ಗಳಲ್ಲಿ ಬಳಸಬಹುದಾಗಿದೆ. ಈ ತಂತ್ರಜ್ಞಾವನ್ನು ಎಲೆಕ್ಟ್ರಿಕ್ ವೆಹಿಕಲ್‌ಗಳಲ್ಲೂ ಬಳಸಬಹುದು ಎಂದು ಹೇಳಿದರು. ಇದನ್ನೂ ಓದಿ: ಜಾರಂದಾಯ ದೈವದ ಪವಾಡ – ಮದುವೆ ಹಾಲ್‍ನಲ್ಲಿ ಕಳ್ಳತನವಾದ ಚಿನ್ನದ ಸರ ಅಚ್ಚರಿಯ ರೀತಿಯಲ್ಲಿ ಪತ್ತೆ

    ವಿಶೇಷತೆಗಳೇನು?
    ಹಗುರ ಮತ್ತು ಅತಿವೇಗವಾಗಿ ಚಾರ್ಜ್ ಅಗುವ ಸಾಮರ್ಥ್ಯ
    ಹೈ ಎನರ್ಜಿ ಡೆನ್ಸಿಟಿ – 150ವ್ಯಾಟ್/ಕೆಜಿ
    ಕೈಗೆಟಕುವ ದರ
    ಫ್ಲೆಕ್ಸಿಬಲ್ ಸೋರ್ಸ್ ಆಫ್ ಎನರ್ಜಿ ಸ್ಟೋರೇಜ್
    ಲಾರ್ಜ್ ರೇಂಜ್ ಆಫ್ ಟೆಂಪರೇಚರ್‌ನಲ್ಲಿ ಕಾರ್ಯನಿರ್ವಹಣೆ (ಈಡಿom -25ಅ ಣo 60ಅ)
    5 ರಿಂದ 7 ವರ್ಷಗಳ ಬಾಳಿಕೆ
    ಸುಮಾರು 3,000 ಬಾರಿ ರಿಚಾರ್ಜ್ ಮಾಡಬಹುದು
    ಪರಿಸರ ಸ್ನೇಹಿ, ಹೊಗೆ ರಹಿತ ಮತ್ತು ಬೆಂಕಿ ಹತ್ತಿಕೊಳ್ಳದೇ ಇರುವುದು

  • ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

    ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

    ಹೈದರಾಬಾದ್: ಮನೆಯಲ್ಲಿ ಚಾರ್ಜ್‍ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ತೆಲಂಗಾಣದ ನಿಜಾಮಾಬಾದ್‍ನಲ್ಲಿ ಬುಧವಾರ ನಡೆದಿದೆ.

    ಬಿ ರಾಮಸ್ವಾಮಿ (80) ಮೃತ ವ್ಯಕ್ತಿ. ಟೈಲರ್ ಆಗಿರುವ ಅವರ ಮಗ ಬಿ ಪ್ರಕಾಶ್ ಒಂದು ವರ್ಷದಿಂದ ಇವಿ ಸ್ಕೂಟರ್ ಬಳಸುತ್ತಿದ್ದರು. ಘಟನೆ ಕುರಿತು ಮಾತನಾಡಿದ ನಿಜಾಮಾಬಾದ್‍ನ ಸಹಾಯಕ ಪೊಲೀಸ್ ಕಮಿಷನರ್ ಎ ವೆಂಕಟೇಶ್ವರಲು, ಸ್ಕೂಟರ್ ತಯಾರಕ ಮತ್ತು ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    ತ್ರೀ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಯಿನಾಥ್ ಹೇಳಿಕೆ ಪ್ರಕಾರ, ಪ್ರಕಾಶ್ ಅವರು 12:30 ರ ಸುಮಾರಿಗೆ ಸ್ಕೂಟರ್‌ನಿಂದ ಬ್ಯಾಟರಿಯನ್ನು ತೆಗೆದು ಚಾರ್ಜ್ ಮಾಡಲು ಇಟ್ಟುಕೊಂಡಿದ್ದರು. ಅವರ ತಂದೆ ರಾಮಸ್ವಾಮಿ, ತಾಯಿ ಕಮಲಮ್ಮ ಮತ್ತು ಮಗ ಕಲ್ಯಾಣ್ ಲಿವಿಂಗ್ ರೂಮಿನಲ್ಲಿ ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಮತ್ತು ಅವರ ಪತ್ನಿ ಕೃಷ್ಣವೇಣಿ ಕೂಡ ಬೆಂಕಿಯನ್ನು ನಂದಿಸುವಾಗ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಮಸ್ವಾಮಿ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಸಾಗಿಸುವಾಗ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬ್ಯಾಟರಿ ಕಳವು ಮಾಡ್ತಿದ್ದ ಕುಖ್ಯಾತ ದಂಪತಿ ಅರೆಸ್ಟ್

    ಬ್ಯಾಟರಿ ಕಳವು ಮಾಡ್ತಿದ್ದ ಕುಖ್ಯಾತ ದಂಪತಿ ಅರೆಸ್ಟ್

    ಬೆಂಗಳೂರು: ಟ್ರಾಫಿಕ್ ಸಿಗ್ನಲ್‍ಗಳಲ್ಲಿನ ಬ್ಯಾಟರಿ ಕಳವು ಮಾಡುತ್ತಿದ್ದ ಕುಖ್ಯಾತ ದಂಪತಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

    ಸಿಕಂದರ್, ನಜ್ಮಾ ಬಂಧಿತ ಕಳ್ಳ ದಂಪತಿ. ಆರೋಪಿಗಳು ಟ್ರಾಫಿಕ್ ಸಿಗ್ನಲ್‍ಗಳಲ್ಲಿನ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದರು. ಕಳವು ಮಾಡುತ್ತಿದ್ದ ಬ್ಯಾಟರಿಗಳನ್ನು ಧನಶೇಖರ್ ಎಂಬಾತನಿಗೆ ಕೆ.ಜಿ. ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 69 ಕಳವು ಪ್ರಕರಣ ಬೆಳಕಿಗೆ ಬಂದಿದ್ದು, 20 ಲಕ್ಷ ಮೌಲ್ಯದ 169 ಬ್ಯಾಟರಿ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಅಕ್ರಮವಾಗಿ ಎಮ್ಮೆ, ಹಸುಗಳನ್ನ ಸಾಗಿಸುತ್ತಿದ್ದ ವಾಹನ ಲಾಕ್!

    ಕಳವು ಮಾಡಿದ ಬ್ಯಾಟರಿಗಳನ್ನು ಖರೀದಿ ಮಾಡಿದ ಆರೋಪದಲ್ಲಿ ಧನಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿ ತರಕಾರಿ ಮಾರಾಟ ನೆಪದಲ್ಲಿ ಬಂದು ಕಳವು ಮಾಡುತ್ತಿದ್ದರು. ಒಂದೊಂದು ದಿನ ಒಂದೊಂದು ಡಿವಿಜನ್‍ನಲ್ಲಿ ಕಳವು ಮಾಡುತ್ತಿದ್ದರು. ಪೊಲೀಸರಿಗೆ ಜೆ.ಪಿ.ನಗರ ಬಳಿ ಸಿಕ್ಕ ಸಿಸಿಟಿವಿ ಆಧಾರದ ಮೇಲೆ ಶೋಧ ಕಾರ್ಯ ನಡೆಸಿದ್ದರು. ಕೊನೆಗೆ ಗೊರಗುಂಟೆಪಾಳ್ಯದ ಪೆಟ್ರೋಲ್ ಬಂಕ್ ಬಳಿ ಬೈಕ್‍ಗೆ ನಂಬರ್ ಪ್ಲೇಟ್ ಇಲ್ಲದೆ ಸಂಚಾರ ಮಾಡುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ.

  • ಹಳೆಯ ಮೊಬೈಲ್ ಬ್ಯಾಟರಿ ಸ್ಫೋಟ – 10ರ ಬಾಲಕನ ಕೈಗೆ ಗಾಯ

    ಹಳೆಯ ಮೊಬೈಲ್ ಬ್ಯಾಟರಿ ಸ್ಫೋಟ – 10ರ ಬಾಲಕನ ಕೈಗೆ ಗಾಯ

    ಹಾವೇರಿ: ಆಟವಾಡುತ್ತಿದ್ದ ವೇಳೆ ಮೊಬೈಲ್‍ನ ಹಳೆಯ ಬ್ಯಾಟರಿ ಸ್ಫೋಟಗೊಂಡು 10 ವರ್ಷದ ಬಾಲಕನ ಕೈಯ ಮೂರು ಬೆರಳುಗಳು ಕಟ್ ಹಾಗೂ ಮುಖಕ್ಕೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

    ಗಾಯಗೊಂಡ ಬಾಲಕನನ್ನ ಕಾರ್ತಿಕ್ ಕಲಾದಗಿ(10) ಎಂದು ಗುರುತಿಸಲಾಗಿದೆ. ಮನೆಯ ಪಕ್ಕದಲ್ಲಿ ಎಸೆದಿದ್ದ ಮೊಬೈಲ್ ನ ಹಾಳಾದ ಬ್ಯಾಟರಿ ತೆಗೆದುಕೊಂಡು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಹಳೆಯ ಮೊಬೈಲ್ ಬ್ಯಾಟರಿಯಲ್ಲಿ ಲೈಟ್ ಹಚ್ಚಲು ಹೋಗಿ ಬ್ಯಾಟರಿ ಸಾರ್ಟ್ ಆಗಿ ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳು ಕಾರ್ತಿಕನನ್ನು ಸದ್ಯ ಸವಣೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ:ಡಿನ್ನರ್ ಮೀಟಿಂಗ್ ಪಾಲಿಟಿಕ್ಸ್ ನಡುವೆ ಡಿಕೆಶಿ ರಿವೆಂಜ್ ಪಾಲಿಟಿಕ್ಸ್

  • ಮೊಬೈಲ್ ಬ್ಯಾಟರಿ ಸ್ಫೋಟ- 12 ವರ್ಷದ ಬಾಲಕ ದಾರುಣ ಸಾವು

    ಮೊಬೈಲ್ ಬ್ಯಾಟರಿ ಸ್ಫೋಟ- 12 ವರ್ಷದ ಬಾಲಕ ದಾರುಣ ಸಾವು

    ಲಕ್ನೋ: ಮುಖದ ಬಳಿ ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 12 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ.

    ಮಿರ್ಜಾಪುರ ಜಿಲ್ಲೆಯ ಹಳಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮತ್ವಾರ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಾಲಕ ‘ಜಡೂ ಚಾರ್ಜರ್’ ಮೂಲಕ ಬ್ಯಾಟರಿ ಚಾರ್ಜ್ ಮಾಡಿದ್ದಾನೆ ಬಳಿಕ ಎಷ್ಟು ಚಾರ್ಜ್ ಆಗಿದೆ ಎಂಬುದನ್ನು ಟೆಸ್ಟ್ ಮಾಡುವಾಗ ಈ ಅವಘಡ ಸಂಭವಿಸಿದೆ. ಸಾವನ್ನಪ್ಪಿದ ವಿದ್ಯಾರ್ಥಿಯನ್ನು 6ನೇ ತರಗತಿಯ ಮೋನು ಎಂದು ಗುರುತಿಸಲಾಗಿದ್ದು, ಮುಖದ ಬಳಿಯೇ ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಹೀಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

    ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮೋನು ‘ಜಡೂ ಚಾರ್ಜರ್’ನಲ್ಲಿ ಮೊಬೈಲ್ ಚಾರ್ಜ್‍ಗೆ ಹಾಕಿದ್ದಾನೆ. ಒಂದು ಗಂಟೆ ಬಳಿಕ ಎಷ್ಟು ಚಾರ್ಜ್ ಆಗಿದೆ ಎಂಬುದನ್ನು ಚೆಕ್ ಮಾಡಲು ಬಾಲಕ ನಾಲಿಗೆಗೆ ಬಾಟರಿಯನ್ನು ಮುಟ್ಟಿಸಿದ್ದಾನೆ. ತಕ್ಷಣವೇ ಬ್ಯಾಟರಿ ಸ್ಫೋಟಗೊಂಡಿದ್ದು, ಮುಖಕ್ಕೆ ಗಂಭೀರ ಗಾಯಗಳಾಗಿವೆ.

    ಈ ಕುರಿತು ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು ಬಾಲಕನ ರೂಂಗೆ ಧಾವಿಸಿದ್ದು, ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ತಕ್ಷಣವೇ ಮತ್ವಾರ್‍ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪೋಷಕರು ಪೊಲೀಸರಿಗೆ ಮಾಹಿತಿ ನೀಡದೆ ಬಾಲಕನ ಅಂತ್ಯಸಂಸ್ಕಾರ ಮಾಡಿದ್ದಾರೆ.

  • ಒಂದು ಬಾರಿ ಚಾರ್ಜ್ ಮಾಡಿದ್ರೆ 300 ಕಿ.ಮೀ – ಸೋಲಾರ್‌ ಕಾರ್ ಕಂಡು ಹಿಡಿದ ರೈತ

    ಒಂದು ಬಾರಿ ಚಾರ್ಜ್ ಮಾಡಿದ್ರೆ 300 ಕಿ.ಮೀ – ಸೋಲಾರ್‌ ಕಾರ್ ಕಂಡು ಹಿಡಿದ ರೈತ

    ಭುವನೇಶ್ವರ: ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ರೈತನೋರ್ವ ಸೋಲಾರ್ ಬ್ಯಾಟರಿ ಮೂಲಕ ಚಲಿಸುವ ನಾಲ್ಕು ಚಕ್ರದ ವಾಹನವನ್ನು ತಯಾರಿಸಿದ್ದಾರೆ.

    ಮಯೂರ್ ಭಂಜ್‍ನ ಕಾರಂಜಿಯಾ ಉಪವಿಭಾಗದ ಸುಶೀಲ್ ಅಗರ್‍ವಾಲ್ ಎಂಬವರು 850 ವ್ಯಾಟ್ಸ್ ಮೋಟಾರ್ ಹಾಗೂ 100 ಎಎಚ್/54 ವೋಲ್ಟ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಕಾರನ್ನು ತಯಾರಿಸಿದ್ದಾರೆ. ಅಲ್ಲದೆ ಒಂದು ಬಾರಿ ಚಾರ್ಜ್ ಮಾಡಿದರೆ ಈ ವಾಹನ 300 ಕಿ.ಮೀವರೆಗೂ ಚಲಿಸುತ್ತದೆ.

    ಪುಸ್ತಕಗಳನ್ನು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ನೋಡುವ ಮೂಲಕ ಲಾಕ್‍ಡೌನ್ ಸಮಯದಲ್ಲಿ ಸುಶೀಲ್ ಅಗರ್‍ವಾಲ್ ಈ ಕಾರನ್ನು ಮನೆಯಲ್ಲಿಯೇ ತಯಾರಿಸಿದ್ದಾರೆ. ಜೊತೆಗೆ ಕಾರಿನ ಬ್ಯಾಟರಿಯನ್ನು ಎಂಟೂವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ತಿಳಿಸಿದ್ದಾರೆ.

    ನಾನು ಮನೆಯಲ್ಲಿಯೇ ವರ್ಕ್ ಶಾಪ್ ಹೊಂದಿದ್ದು, ಕೋವಿಡ್-19 ಲಾಕ್‍ಡೌನ್ ಸಮಯದಲ್ಲಿ ಕಾರನ್ನು ತಯಾರಿಸಲು ಆರಂಭಿಸಿದೆ. ಇದು 300 ಕಿಮೀ ವರೆಗೂ ಚಲಿಸುತ್ತದೆ. ಅಲ್ಲದೆ ಈ ವಾಹನದ ಬ್ಯಾಟರಿಯು ನಿಧಾನವಾಗಿ ಚಾರ್ಜ್ ಆಗುತ್ತದೆ. ಅಲ್ಲದೆ ಈ ಬ್ಯಾಟರಿ ಹತ್ತು ವರ್ಷ ಗ್ಯಾರಂಟಿ ಹೊಂದಿದೆ ಎಂದು ಸುಶೀಲ್ ಅಗರ್‍ವಾಲ್ ಹೇಳಿದ್ದಾರೆ. ಅಲ್ಲದೆ ತಮ್ಮ ಮನೆಯಲ್ಲಿರುವ ವರ್ಕ್‍ಶಾಪ್‍ನಲ್ಲಿ ಮೋಟಾರ್ ವಿಂಡಿಂಗ್, ಎಲೆಕ್ಟ್ರಿಕಲ್ ಫಿಟ್ಟಿಂಗ್ ಮತ್ತು ಚಾಸಿಸ್ ಎಲ್ಲ ಕೆಲಸಗಳನ್ನು ಇಬ್ಬರು ಮೆಕಾನಿಕ್ಸ್ ಮತ್ತು ಸ್ನೇಹಿತರೊಬ್ಬರ ಸಹಾಯದಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಲಾಕ್‍ಡೌನ್ ವೇಳೆ ನಾನು ಮನೆಯಲ್ಲೇ ಇದ್ದಿದ್ದರಿಂದ ಬೇಸರವಾಗುತ್ತಿತ್ತು ಈ ವೇಳೆ ಕಾರನ್ನು ನಿರ್ಮಿಸಲು ಯೋಚಿಸಿದೆ. ಲಾಕ್‍ಡೌನ್ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿಕ ಇಂಧನ ಬೆಲೆ ಹೆಚ್ಚಾಗುತ್ತದೆ ಎಂದು ನನಗೆ ತಿಳಿದಿತ್ತು. ಹಾಗಾಗಿ ನಾನು ಸೋಲಾರ್ ಬ್ಯಾಟರಿ ಮೂಲಕ ಚಲಿಸುವ ಕಾರನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ನುಡಿದರು.

  • ಜಸ್ಟ್‌ 2 ನಿಮಿಷದಲ್ಲಿ ಕಾರು ಬ್ಯಾಟರಿ ಕಳ್ಳತನ – ಬೆಂಗಳೂರಿಗರ ನಿದ್ದೆಗೆಡಿಸಿದೆ ಗ್ಯಾಂಗ್‌

    ಜಸ್ಟ್‌ 2 ನಿಮಿಷದಲ್ಲಿ ಕಾರು ಬ್ಯಾಟರಿ ಕಳ್ಳತನ – ಬೆಂಗಳೂರಿಗರ ನಿದ್ದೆಗೆಡಿಸಿದೆ ಗ್ಯಾಂಗ್‌

    – ಫಟಾಫಟ್ ಕಳ್ಳರಿಗಾಗಿ ಪೊಲೀಸ್ ಬೇಟೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಾರ್ ಬ್ಯಾಟರಿ ಕಳ್ಳತನ ಮಾಡುವ ಗ್ಯಾಂಗ್ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಬ್ಯಾಟರಿ ಜೊತೆಗೆ ಸಿಸ್ಟಮನ್ನೂ ಕಳ್ಳತನ ಮಾಡುತ್ತಿರುವ ಗ್ಯಾಂಗ್ ಜನರ ನಿದ್ದೆಗೆಡುವಂತೆ ಮಾಡಿದೆ.

    ಇತ್ತೀಚೆಗಷ್ಟೇ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ಕೇವಲ 2 ನಿಮಿಷದಲ್ಲಿ ಕಾರಿನ ಬ್ಯಾಟರಿ ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ಖತರ್ನಾಕ್ ಬ್ಯಾಟರಿ ಕಳ್ಳರ ಗ್ಯಾಂಗ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಗ್ಯಾಂಗ್ ಬ್ಯಾಟರಿ ಕಳ್ಳತನದ ಕೃತ್ಯವನ್ನು ನಡೆಸುತ್ತಿದ್ದು, ದೃಶ್ಯಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಬರುವ ಕಳ್ಳರು ಕೇವಲ 2 ನಿಮಿಷದಲ್ಲಿ ಕಾರಿನ ಬ್ಯಾಟರಿ ಕಳ್ಳತನ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಬಹುತೇಕ ಕಡೆ ಕಳ್ಳರ ಕೈ ಚಳಕ ಹೆಚ್ಚಾಗಿದ್ದು, ಕೃತ್ಯಕ್ಕೆ ಆಟೋವನ್ನು ಬಳಕೆ ಮಾಡಿರುವ ಆರೋಪಿಗಳು ಕೃತ್ಯದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ಎದ್ದು ಕಾರಿನ ಮಾಲೀಕರು ತಮ್ಮ ವಾಹನವನ್ನು ನೋಡಿದಾಗಲೇ ಕಳ್ಳತನ ಬೆಳಕಿಗೆ ಬರುತ್ತಿದೆ.

  • ಮೊಬೈಲ್ ರಿಪೇರಿ ಮಾಡುವಾಗ ಬ್ಯಾಟರಿ ಬ್ಲಾಸ್ಟ್ – ತಪ್ಪಿದ ಭಾರಿ ಅನಾಹುತ

    ಮೊಬೈಲ್ ರಿಪೇರಿ ಮಾಡುವಾಗ ಬ್ಯಾಟರಿ ಬ್ಲಾಸ್ಟ್ – ತಪ್ಪಿದ ಭಾರಿ ಅನಾಹುತ

    ಬೀದರ್: ಲೆನೊವೊ ಕಂಪನಿ ಸೇರಿದ ಮೊಬೈಲ್ ರಿಪೇರಿ ಮಾಡುವಾಗ ಅದರ ಬ್ಯಾಟರಿ ಬ್ಲಾಸ್ಟ್ ಆಗಿದ್ದು ಭಾರಿ ಅನಾಹುತ ತಪ್ಪಿದೆ.

    ಬೀದರ್ ಜಿಲ್ಲೆಯ ಕಮಲಾನಗರ ಪಟ್ಟಣದ ಓಂ ಶಿವ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಇಂದು ಕೆಲಸಗಾರ ಓಂಕಾರ್ ಮಠಪತಿ ಎಂದಿನಂತೆ ಮೊಬೈಲ್ ರಿಪೇರಿ ಮಾಡುವಾಗ ಸಣ್ಣದೊಂದು ಹೊಗೆ ಕಾಣಿಸಿಕೊಂಡ ಬಳಿಕ ಮೊಬೈಲ್ ಬ್ಯಾಟರಿ ಬ್ಲಾಸ್ಟ್ ಆಗಿದೆ.

    ಇದರಿಂದ ಭಯಗೊಂಡ ರಿಪೇರಿ ಮಾಡುವವರು ಮೊಬೈಲ್ ದೂರ ಎಸೆದು ಘಟನೆಯಿಂದ ಪಾರಾಗಿದ್ದಾರೆ. ಓಂಕಾರ್ ರಿಪೇರಿ ಮಾಡುವಾಗ ಈ ಅವಘಡ ಸಂಭವಿಸಿದ್ದು, ಬದುಕಿದೆ ಬಡ ಜೀವ ಎನ್ನುವಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಿಪೇರಿ ಮಾಡುವಾಗ ಸಣ್ಣಗೆ ಹೊಗೆ ಬಂತು ಆದರೂ ರಿಪೇರಿ ಮಾಡಲು ಪ್ರಯತ್ನ ಮಾಡಿದಾಗ ಬ್ಯಾಟರಿ ಬ್ಲಾಸ್ಟ್ ಆಯ್ತು ಎಂದು ರಿಪೇರಿ ಮಾಡಿದ ಓಂಕಾರ್ ಹೇಳಿದ್ದಾರೆ.