Tag: ಬ್ಯಾಟರಾಯನಪುರ

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – ರಾತ್ರಿಯಿಡೀ ಕಾರ್ಯಾಚರಣೆ ನಡೆದ್ರೂ ಆರದ ಜ್ವಾಲೆ

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – ರಾತ್ರಿಯಿಡೀ ಕಾರ್ಯಾಚರಣೆ ನಡೆದ್ರೂ ಆರದ ಜ್ವಾಲೆ

    – ವಾಹನಗಳು ಧಗಧಗ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಹೊಸಗುಡ್ಡದಹಳ್ಳಿಯಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅವಘಡದಲ್ಲಿ ಇನ್ನೂ ಬೆಂಕಿ ಸಂಪೂರ್ಣವಾಗಿ ನಂದಿಲ್ಲ. ಕಳೆದ 20 ಗಂಟೆಯಿಂದ ಬೆಂಕಿ ಧಗ ಧಗನೇ ಉರಿಯುತ್ತಿದೆ.

    ಸ್ಥಳಕ್ಕೆ ನೂರಾರು ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ರಾತ್ರಿಯಿಡೀ ಬೆಂಕಿ ನಂದಿಸೋ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದರು. ಬೆಂಕಿ ಅವಘಡದಲ್ಲಿ 2 ರಿಂದ 3 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 7 ವಾಹನಗಳು, 2 ವಿದ್ಯುತ್ ಕಂಬ ನಾಶವಾಗಿವೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಾಯ್ ಪಾಷ ಎಂಬವರ ದೂರಿನ ಮೇಲೆ ಈ ಕೇಸ್ ದಾಖಲಾಗಿದೆ.

    ನಿನ್ನೆ ಮಧ್ಯಾಹ್ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎಷ್ಟೇ ಪ್ರಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿರುವುದರಿಂದ ಅಕ್ಕ ಪಕ್ಕದ ಮನೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಅಕ್ಕಪಕ್ಕದ ಮನೆಯವರನ್ನು ಸ್ಥಳಾಂತರಿಸಲು ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದರು. ಇಡೀ ರಸ್ತೆಯಲ್ಲಿ ಎಲ್ಲಿ ನೋಡಿದರೂ ಬೆಂಕಿಮಯವಾಗಿದ್ದು, ಸಂಪೂರ್ಣ ಹೊಗೆ ಆವರಿಸಿಕೊಂಡಿತ್ತು. ಫ್ಯಾಕ್ಟರಿ ಅಕ್ಕ-ಪಕ್ಕ ನಿಲ್ಲಿಸಿದ್ದ ವಾಹನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದವು.

  • ಬ್ಯಾಟರಾಯನಪುರ ಮಾರ್ಕೆಟ್‍ನಲ್ಲಿ ಜನವೋ ಜನ

    ಬ್ಯಾಟರಾಯನಪುರ ಮಾರ್ಕೆಟ್‍ನಲ್ಲಿ ಜನವೋ ಜನ

    ಬೆಂಗಳೂರು: ಒಂದು ವಾರದ ಕಾಲ ಲಾಕ್‍ಡೌನ್ ಜಾರಿಯಾಗಿ ಮೂರು ದಿನ ಕಳೆದಿದೆ. ಆದರೂ ಜನರು ಮಾತ್ರ ಎಂದಿನಿಂದ ಓಡಾಡುತ್ತಿದ್ದು, ವ್ಯಾಪಾರ-ವಹಿವಾಟಿನಲ್ಲಿ ಬ್ಯುಸಿಯಾಗಿದ್ದಾರೆ.

    ಬ್ಯಾಟರಾಯನಪುರ ಮಾರ್ಕೆಟ್‍ನಲ್ಲಿ ಬೆಳ್ಳಂಬೆಳಗ್ಗೆ ನೂರಾರು ಜನರು ವ್ಯಾಪಾರಕ್ಕೆ ಮುಗಿಬಿದ್ದಿದ್ದಾರೆ. ಇದರಿಂದ ಮಾರ್ಕೆಟ್ ಏರಿಯಾದಲ್ಲಿ ವಾಹನಗಳ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಮಾರ್ಕೆಟ್‍ನಲ್ಲಿ ಯಾವುದೇ ಲಾಕ್‍ಡೌನ್ ನಿಯಮವನ್ನು ಪಾಲನೆ ಮಾಡುತ್ತಿಲ್ಲ.

    ಈ ಹಿಂದೆ ಯಲಹಂಕ ಬಳಿ ಈ ಮಾರ್ಕೆಟ್ ನಡೆಯುತ್ತಿತ್ತು. ಕೊರೊನಾ ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ಯಲಹಂಕದಿಂದ ಬ್ಯಾಟರಾಯನಪುರಕ್ಕೆ ಶಿಫ್ಟ್ ಮಾಡಲಾಗಿತ್ತು. ವಿಶಾಲವಾದ ಖಾಲಿ ಜಾಗದಲ್ಲಿ ಮಾರ್ಕೆಟ್ ನಡೆಸಲು ಬಿಬಿಎಂಪಿ ಅವಕಾಶ ನೀಡಿತ್ತು. ಆದರೆ ಲಾಕ್‍ಡೌನ್ ನಿಯಮ ಗಾಳಿಗೆ ತೋರಿ ಅಡ್ಡಾದಿಡ್ಡಿಯಾಗಿ ಜನರು ಮತ್ತು ವಾಹನಗಳು ಓಡಾಡುತ್ತಿವೆ.

    ಇತ್ತ ಯಶವಂತಪುರ ಸಿಗ್ನಲ್ ಬಳಿಯೂ ವಾಹನ ಸಂಚಾರ ಹೆಚ್ಚಾಗಿದೆ. ಅನಗತ್ಯವಾಗಿ ವಾಹನಗಳು ಓಡಾಡುತ್ತಿವೆ. ಇನ್ನೂ ನಗರದ ಬಳ್ಳಾರಿ ರಸ್ತೆಯಲ್ಲಿ ಎಂದಿನಂತೆ ವಾಹನಗಳ ಓಡಾಟ ಹೆಚ್ಚಾಗಿದೆ. ಫ್ಲೈಓವರ್‌ಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಜನರು ವಾಕ್ ಮಾಡುತ್ತಿದ್ದಾರೆ. ಅಲ್ಲದೇ ರಸ್ತೆಯ ಪಕ್ಕದ ಅಲ್ಲಲ್ಲಿ ಹಣ್ಣು, ಹೂ, ತರಕಾರಿ ವ್ಯಾಪಾರ ಕೂಡ ಜೋರಾಗಿ ನಡೆಯುತ್ತಿದೆ.

  • ಪ್ರಿಯತಮೆ ಮೇಲೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪ್ರೇಮಿ!

    ಪ್ರಿಯತಮೆ ಮೇಲೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪ್ರೇಮಿ!

    ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸಿದಾಕೆಯ ಮೇಲೆಯೇ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಆರೋಪಿ ಪ್ರಿಯತಮನನ್ನು ವಶಕ್ಕೆ ಪಡೆದಿದ್ದಾರೆ.

    ಜಮಾದ್ ಪಾಷಾ (22) ಬಂಧಿತ ಆರೋಪಿಯಾಗಿದ್ದು, ಈತ ನಾಯಂಡಹಳ್ಳಿ ನಿವಾಸಿಯಾಗಿದ್ದಾನೆ. ಜಮಾದ್ ಪಾಷಾ ಯುವತಿಗೆ ಪರಿಚಯಸ್ಥನಾಗಿದ್ದ. ಈತ ಯುವತಿಗೆ ಪ್ರೀತಿಸುವಂತೆ ಕಾಡುತ್ತಿದ್ದ. ಆದ್ರೆ ಪ್ರೀತಿಸಲು ಯುವತಿ ಒಲ್ಲೆ ಎಂದಿದ್ದಾಳೆ. ಇದರಿಂದ ಸಿಟ್ಟುಗೊಂಡ ಪಾಷಾ ಆಕೆಯ ಮನೆಗೆ ನುಗ್ಗಿ ಸೀಮೆ ಎಣ್ಣೆ ಸುರಿದು ಬೆಂಕಿಯಿಟ್ಟು ಹತ್ಯೆಗೈಯಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಬಂದು ಯುವತಿಯನ್ನು ರಕ್ಷಿಸಿದ್ದಾರೆ.

    ಘಟನೆಯಿಂದ ಯುವತಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಸುಟ್ಟು ಭಸ್ಮವಾಗಿವೆ. ಈ ಘಟನೆಯು ಮೂರು ದಿನಗಳ ಹಿಂದೆ ನಡೆದಿದೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.