ಭಾನುವಾರ ರಾತ್ರಿ ಕೌಶಿಕ್, ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವೇಳೆ ಜಗಳ ನಡೆದಿದೆ. ಬಳಿಕ ಜೊತೆಯಲ್ಲಿದ್ದ ಸ್ನೇಹಿತರೇ ಕೌಶಿಕ್ನನ್ನು ಹತ್ಯೆಗೈದಿದ್ದಾರೆ ಎನ್ನಲಾಗುತ್ತಿದೆ. ಮಧ್ಯರಾತ್ರಿ 2:30ರ ಸುಮಾರಿಗೆ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ದೇಶ ಕಾಯೋ ಯೋಧನಿಂದಲೇ ಕೊಲೆ – ಡೀಸೆಲ್ ಸುರಿದು ಸಹೋದರನ ಹತ್ಯೆಗೈದ ಮೂವರು ಅರೆಸ್ಟ್
ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಒಂಟಿ ಪ್ರಯಾಣಿಕರನ್ನೇ (Passengers) ಟಾರ್ಗೆಟ್ ಮಾಡಿ, ಜ್ಯೂಸ್ ಕುಡಿಸಿ ಮೊಬೈಲ್, ಪರ್ಸ್, ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿಯೊಬ್ಬಳನ್ನು ಬ್ಯಾಟರಾಯನಪುರ ಪೊಲೀಸರು (Byatarayanapura Police) ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಲತಾ ಬಂಧಿತ ಮಹಿಳೆ. ಬಿಎಂಟಿಸಿ ಬಸ್ನಲ್ಲಿ (BMTC Bus) ಒಂಟಿ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಕಳ್ಳಿ, ಪರಿಚಯ ಮಾಡಿಕೊಂಡು ಜ್ಯೂಸ್ ಕುಡಿಯಲು ಕರೆದುಕೊಂಡು ಹೋಗ್ತಿದ್ದಳು. ಜ್ಯೂಸ್ ಕುಡಿದು ಪ್ರಜ್ಞೆ ಕಳೆದುಕೊಂಡ ತಕ್ಷಣ ಮೊಬೈಲ್, ಪರ್ಸ್, ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದಳು. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ ಸಹನಾ – ಕುಟುಂಬದಲ್ಲಿ ಹರ್ಷ
ಈ ಬಗ್ಗೆ ಮಾಹಿತಿ ಪಡೆದ ಬ್ಯಾಟರಾಯನಪುರ ಪೊಲೀಸರು ಆಕೆಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಠಾಣೆಗೆ ಕರೆತಂದ ಕೆಲವೇ ನಿಮಿಷಗಳಲ್ಲಿ ಹಿಳೆ ವಿಷಪೂರಿತ ಚಾಕೊಲೆಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಹಿಳೆ ಕುಸಿದುಬಿದ್ದ ನಂತರ ಪೊಲೀಸರು ಆಕೆಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಟ್ರ್ಯಾಕ್ಗೆ ಬಿದ್ದ ಮರ: ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು: ಇಲ್ಲಿನ ನಾಯಂಡಹಳ್ಳಿ ಫ್ಲೈಓವರ್ ಮೇಲಿನಿಂದ ಜಿಗಿದು ಕರ್ನಾಟಕ ವಿದ್ಯುತ್ ಕಾರ್ಖಾನೆಯ (Karnataka Power Factory )ಗುತ್ತಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನವೀನ್ ಕುಮಾರ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ತನ್ನ ಬೈಕನ್ನ ಫ್ಲೈಓವರ್ (Nayandahalli Flyover) ಮೇಲೆ ಪಾರ್ಕಿಂಗ್ ಮಾಡಿ ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: I.N.D.I.A ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಮೋದಿ ಜೈಲಿಗೆ – ಮಿಸಾ ಭಾರತಿ
ಕಳೆದ 3-4 ತಿಂಗಳಿನಿಂದ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನವೀನ್, ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದಾನೆ. ಬಳಿಕ ಬೈಕ್ ಪಾರ್ಕ್ (Bike Parking) ಮಾಡಿ, ಫ್ಲೈಓವರ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್ಗೆ ಬಿಗ್ ಶಾಕ್- ಕಾಂಗ್ರೆಸ್ನಿಂದ ಮಿಡ್ನೈಟ್ ಆಪರೇಷನ್
2 ತಿಂಗಳ ಹಿಂದೆಯಷ್ಟೇ ಮದುವೆ:
ಆತ್ಮಹತ್ಯೆ ಮಾಡಿಕೊಂಡ ನವೀನ್ 2 ತಿಂಗಳ ಹಿಂದೆ ಮದುವೆಯಾಗಿದ್ದ, ಕವಿಕಾ (ಕರ್ನಾಟಕ ವಿದ್ಯುತ್ ಕಾರ್ಖಾನೆ)ದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ಮೇಲೆ ಹೋಗಿ ಬರ್ತೀನಿ ಅಂತಾ ಏಪ್ರಿಲ್ 11ರಂದು ಮನೆಯಿಂದ ಹೊರಟಿದ್ದ ನವೀನ್, ಇಂದು (ಏ.12) ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಯುವತಿಯೊಬ್ಬಳನ್ನು ಅರುಣ್ ಪ್ರೀತಿಸುತ್ತಿದ್ದ. ಮುಂದಿನ ತಿಂಗಳು ಮದುವೆ (Marriage) ಕೂಡ ಫಿಕ್ಸ್ ಆಗಿತ್ತು ಎನ್ನಲಾಗಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಇದು ಸಿನಿಮಾ ಶೈಲಿಯಂತೆ ಒನ್ ವೇ ಲವ್ ಸ್ಟೋರಿ (Love Storty). ಆದ್ರೆ ಕಥೆಯಲ್ಲಿ ಪ್ರೇಮಿಯೇ ವಿಲನ್ ಆಗಿದ್ದಾನೆ. ಜೈಲಿನಿಂದಲೇ ಪ್ರಿಯತಮೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಮತ್ತೆ ಅಕ್ರಮಗಳ ಅಡ್ಡೆಯಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ.
ಇದು ಒಂಥರಾ ಒನ್ವೇ ಲವ್ಸ್ಟೋರಿ ಪತಿಯಿಂದ ದೂರವಾಗಿದ್ದ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿ, ಪ್ರೀತಿ ಮಾಡುವಂತೆ ಆಕೆಯನ್ನ ಕಾಡತೊಡಗಿಸಿದ್ದ. ಶ್ರೀನಿವಾಸ ಎಂಬಾತ ಮಹಿಳೆಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡತೊಡಗಿದ್ದ. ಪ್ರೀತಿಸದೇ ಇದ್ರೆ ಆ್ಯಸಿಡ್ ಹಾಕ್ತೀನಿ ಅಂತಾನೂ ಬೆದರಿಕೆ ಹಾಕಿದ್ದನಂತೆ. ಈಗಾಗಲೇ ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ, ಈತನ ಹುಚ್ಚುತನಕ್ಕೆ ಮನಸೋತು ಪ್ರೀತಿಗೆ ಸಮ್ಮತಿಸಿದ್ದಳು. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ್ದಾರೆ. ಆದ್ರೆ ಮಹಿಳೆ ಮದುವೆ (Marriage) ವಿಚಾರ ತೆಗೆದಿದ್ದೇ ತಡ ಶ್ರೀನಿವಾಸ ಉಲ್ಟಾ ಹೊಡೆದಿದ್ದಾನೆ. ನಿನ್ನನ್ನ ಮದುವೆ ಆಗಲ್ಲ ಜೊತೆಯಲ್ಲೇ ಇರು ಸಾಕು ಅಂದಿದ್ದನಂತೆ. ಇದರೊಂದಿಗೆ ಶ್ರೀನಿವಾಸ ಮತ್ತು ಆತನ ತಾಯಿ ಸೇರ್ಕೊಂಡು ಮಹಿಳೆ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಇದರಿಂದ ನೊಂದ ಮಹಿಳೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಶ್ರೀನಿವಾಸನನ್ನ ಜೈಲಿಗೆ ಕಳುಹಿಸಿದ್ದಾಳೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್ನಲ್ಲೇ ಪ್ಯಾಂಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ಇತ್ತ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶ್ರೀನಿವಾಸ ಜೈಲಿನಲ್ಲಿದ್ದುಕೊಂಡೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ಮತ್ತೊಂದು ಆರೋಪ ಮಾಡಿದ್ದಾರೆ. ಶ್ರೀನಿವಾಸ ಜೈಲಿನಿಂದಲೇ ವಾಟ್ಸಪ್ ಕರೆ ಮಾಡಿ ತನ್ನನ್ನ ನೋಡಲು ಜೈಲಿಗೆ ಬರಬೇಕು ಅಂತಾ ಧಮ್ಕಿ ಹಾಕಿದ್ದನಂತೆ. ನನ್ನನ್ನ ಜೈಲಿಗೆ ಹಾಕಿಸಿದ್ದೀಯಾ ಅಲ್ವಾ, ನೀನು ಜೈಲಿಗೆ ಬಾ ನನ್ನೊಟ್ಟಿಗೆ ಇರು, ಇಲ್ಲದಿದ್ದರೆ ಹೊರಗೆ ಬಂದು ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿದ್ದಾಳೆ.
ಇದೀಗ ಮತ್ತೆ ಆರೋಪಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ಇದರಿಂದ ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಆರಾಮಾಗಿ ಸಿಗ್ತಿದೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಿಂತಾಗಿದೆ .