Tag: ಬ್ಯಾಟನ್ ಆಫ್ ಆನರ್

  • ಬ್ಯಾಟನ್ ಆಫ್ ಆನರ್ ಪ್ರಶಸ್ತಿ ಸ್ವೀಕರಿಸಿದ ಕಿರಣ್ ಬೇಡಿ

    ಬ್ಯಾಟನ್ ಆಫ್ ಆನರ್ ಪ್ರಶಸ್ತಿ ಸ್ವೀಕರಿಸಿದ ಕಿರಣ್ ಬೇಡಿ

    ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್‍ರವರು ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರಿಗೆ ಬ್ಯಾಟನ್ ಆಫ್ ಆನರ್ ಹಾಗೂ ಮೆಚ್ಚುಗೆಯ ಪತ್ರ ನೀಡಿ ಸೋಮವಾರ ರಾಷ್ಟ್ರಪತಿ ಭವನದಲ್ಲಿ ಗೌರವಿಸಿದರು.

    ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರು ಪುದುಚೇರಿಯ ಕೇಂದ್ರಾಡಳಿತಕ್ಕಾಗಿ ಸಲ್ಲಿಸಿದ ಸೇವೆಗಳನ್ನು ಗುರುತಿಸಿ ಬ್ಯಾಟನ್ ಆಫ್ ಆನರ್ ಪ್ರಶಸ್ತಿಯನ್ನು ನೀಡಲಾಗಿದ್ದು, ಇದು ಭಾರತದ ಗಣರಾಜ್ಯದ ಲಾಂಛನ ಚಿಹ್ನೆಯನ್ನು ಹೊಂದಿದೆ. ಇದನ್ನು ಓದಿ: ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ವಜಾ

    ಪ್ರಶಸ್ತಿ ಕುರಿತಂತೆ ಕಿರಣ್ ಬೇಡಿಯವರು, ಆತ್ಮೀಯ ಸಹೋದರ ಹಾಗೂ ಸಹೋದರಿಯರೇ, ಭಾರತದ ಗೌರವಾನ್ವಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ರವರ ಕೈಯಾರೆ ರಾಷ್ಟ್ರಪತಿ ಭವನದಲ್ಲಿ ನನಗೆ ನೀಡಿದ ಬ್ಯಾಟನ್ ಆಫ್ ಆನರ್ ಮತ್ತು ಮೆಚ್ಚುಗೆ ಪತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    https://twitter.com/thekiranbedi/status/1368811846292054018

    ಫೆಬ್ರವರಿ 16ರಂದು ರಾಷ್ಟ್ರಪತಿಗಳು ಕಿರಣ್ ಬೇಡಿಯವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ತೆಗೆದು, ಫೆಬ್ರವರಿ 18ರಂದು ತಮಿಳುನಾಡಿನ ಸೌಂಡರಾಜನ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ಹೆಚ್ಚುವರಿ ಉಸ್ತುವಾರಿಯಾಗಿ ನೇಮಿಸಿದರು.