Tag: ಬ್ಯಾಕ್ ಜಂಪ್

  • ಟಿಕ್‍ಟಾಕ್ ಮಾಡೋ ಯುವಕ, ಯುವತಿಯರೇ ಹುಷಾರ್ -ಸ್ಪೈನಲ್ ಕಾರ್ಡ್ ಮುರಿದ್ಕೊಂಡ ಹುಡುಗ

    ಟಿಕ್‍ಟಾಕ್ ಮಾಡೋ ಯುವಕ, ಯುವತಿಯರೇ ಹುಷಾರ್ -ಸ್ಪೈನಲ್ ಕಾರ್ಡ್ ಮುರಿದ್ಕೊಂಡ ಹುಡುಗ

    ತುಮಕೂರು: ಟಿಕ್‍ಟಾಕ್ ಮಾಡುವ ಯುವಕ ಯುವತಿಯರೆ ಸ್ವಲ್ಪ ಎಚ್ಚರವಾಗಿರಿ. ಯಾಕೆಂದರೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿ ಯುವಕನೊಬ್ಬ ಟಿಕ್‍ಟಾಕ್ ಮಾಡಲು ಹೋಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

    ಕುಮಾರ್ ಟಿಕ್‍ಟಾಕ್ ಮಾಡುವಾಗ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಾಳು ಕುಮಾರ್ ಸ್ನೇಹಿತನ ಜೊತೆ ಟಿಕ್‍ಟಾಕ್ ನಲ್ಲಿ ಸಾಹಸ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದಾನೆ.

    ಕುಮಾರ್ ಸ್ನೇಹಿತನ ಜೊತೆಯಲ್ಲಿ ಟಿಕ್‍ಟಾಕ್ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಿದ್ದ ಫೋರ್ಸ್ ಗೆ ತಲೆ ಮೂಳೆ ಮತ್ತು ಬೆನ್ನು ಮೂಳೆ ಗಳು ಪುಡಿ ಪುಡಿಯಾಗಿವೆ. ತಕ್ಷಣವೇ ಅವನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇತ್ತೀಚೆಗೆ ಟಿಕ್‍ಟಾಕ್ ಹುಚ್ಚಿನಿಂದ ದುರಂತಗಳು ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಟಿಕ್‍ಟಾಕ್ ಮಾಡುವಾಗ ಶೂಟ್ ಮಾಡಿಕೊಂಡು ಬಾಲಕನೊಬ್ಬ ಮೃತಪಟ್ಟಿದ್ದನು. ಇನ್ನೂ ಟಿಕ್‍ಟಾಕ್ ಮಾಡೋದು ಬಿಟ್ಟು ಮಕ್ಕಳನ್ನು ನೋಡಿಕೋ ಎಂದು ಬೈದಿದ್ದಕ್ಕೆ ಟಿಕ್‍ಟಾಕ್ ಮಾಡುತ್ತಲೇ ಗೃಹಿಣಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ರೀತಿ ಟಿಕ್‍ಟಾಕ್ ನಿಂದ ಅನೇಕ ಘಟನೆಗಳು ನಡೆಯುತ್ತಿದೆ.