Tag: ಬ್ಯಾಂಡೇಜ್

  • ಒಪ್ಪಂದ ಕೊನೆಗೊಳಿಸಲು ಮುಂದಾದ ಸಿಟ್ಟಲ್ಲಿ ಕಂಪನಿಗೆ ಬ್ಯಾಂಡೇಜ್‌, ಕಾಂಡೋಮ್‌ ತುಂಬಿ ಸಮೋಸಾ ಪೂರೈಕೆ!

    ಒಪ್ಪಂದ ಕೊನೆಗೊಳಿಸಲು ಮುಂದಾದ ಸಿಟ್ಟಲ್ಲಿ ಕಂಪನಿಗೆ ಬ್ಯಾಂಡೇಜ್‌, ಕಾಂಡೋಮ್‌ ತುಂಬಿ ಸಮೋಸಾ ಪೂರೈಕೆ!

    – ಓರ್ವನ ಬಂಧನ, ಐವರ ವಿರುದ್ಧ ಎಫ್‌ಐಆರ್‌

    ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿರುವ ಕಂಪನಿಯ (Pune Company) ಕ್ಯಾಂಟೀನ್‌ನಲ್ಲಿ ಸಮೋಸಾದೊಳಗೆ (Samosa) ಬ್ಯಾಂಡೇಜ್‌, ಕಾಂಡೋಮ್, ಕಲ್ಲುಗಳು ಮತ್ತು ತಂಬಾಕು ಮುಂತಾದ ವಸ್ತುಗಳು ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

    ಆರೋಪಿಗಳನ್ನು ರಹೀಮ್ ಶೇಖ್, ಅಜರ್ ಶೇಖ್, ಮಜರ್ ಶೇಖ್, ಅಜರ್ ಶೇಖ್ ಮತ್ತು ವಿಕ್ಕಿ ಶೇಖ್ ಎಂದು ಗುರುತಿಸಲಾಗಿದೆ. ಕಂಪನಿಯು ತಮ್ಮ ಒಪ್ಪಂದವನ್ನು ರದ್ದುಪಡಿಸಿದ ಕೋಪದಿಂದ ಆರೋಪಿಗಳೆಲ್ಲರೂ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 3 ದಿನದಲ್ಲಿ ಸತತ 36 ಗಂಟೆ ವೀಡಿಯೋ ಕಾಲ್‌ – ಸೈಬರ್‌ ವಂಚನೆಗೆ ಸಿಕ್ಕಿ 15 ಲಕ್ಷ ರೂ. ಕಳೆದುಕೊಂಡ ಮಹಿಳೆ

    ಮಾಧ್ಯಮ ವರದಿಗಳ ಪ್ರಕಾರ, ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಚಿಖಾಲಿ ಮೂಲದ ಕಂಪನಿಯೊಂದರ ಅಧಿಕಾರಿ ಕೀರ್ತಿಕುಮಾರ್ ಶಂಕರರಾವ್ ದೇಸಾಯಿ ಅವರು ಏ.7 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಖಾಲಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ತಮ್ಮ ಕಂಪನಿಯು ಚಿಖಾಲಿಯ ಮತ್ತೊಂದು ದೊಡ್ಡ ಕಂಪನಿಯಿಂದ ಆಹಾರ ಪೂರೈಕೆಗಾಗಿ ಆದೇಶವನ್ನು ಪಡೆದಿದೆ. ಅದರಂತೆ ಕೀರ್ತಿಕುಮಾರ್ ಅವರು ರಹೀಮ್ ಖಾನ್ ಮಾಲೀಕತ್ವದ SRS ಎಂಟರ್ ಪ್ರೈಸಸ್ ಹೆಸರಿನ ಕಂಪನಿಯೊಂದಿಗೆ ಸಮೋಸಾ ಪೂರೈಕೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

    ಆಗಿದ್ದೇನು..?: ಕೀರ್ತಿಕುಮಾರ್ ಪ್ರಕಾರ , ಒಂದು ದಿನ SRS ಕಂಪನಿಯಿಂದ ಸರಬರಾಜಾಗುತ್ತಿದ್ದ ಸಮೋಸದಲ್ಲಿ ಗಾಯಗಳಿಗೆ ಹಾಕುವ ಬ್ಯಾಂಡೇಜ್ (Bandage) ಪತ್ತೆಯಾಗಿದೆ. ಸಿಬ್ಬಂದಿಯಿಂದ ಈ ಕುರಿತು ದೂರು ಸ್ವೀಕರಿಸಿದ ಕೀರ್ತಿಕುಮಾರ್ ಅವರ ಕಂಪನಿಯು ಎಸ್‌ಆರ್‌ಎಸ್‌ನೊಂದಿಗಿನ ಒಪ್ಪಂದವನ್ನು ಮುರಿದುಕೊಳ್ಳಲಾಯಿತು. ಬಳಿಕ ಪುಣೆ ಮೂಲದ ಮತ್ತೊಂದು ಕಂಪನಿಯಾದ ಮನೋಹರ್ ಎಂಟರ್‌ಪ್ರೈಸಸ್‌ಗೆ ಸಮೋಸಾಗಳನ್ನು ಪೂರೈಸಲು ಸೂಚನೆ ನೀಡಿತು. ಇದರಿಂದ ಸಿಟ್ಟಿಗೆದ್ದ SRS ಮಾಲೀಕ ರಹೀಮ್ ಖಾನ್ ತನ್ನ ಸಹಚರರಾದ ಅಜರ್ ಶೇಖ್ ಮತ್ತು ಮಜರ್ ಶೇಖ್ ಜೊತೆ ಸೇರಿ ದೊಡ್ಡ ಸಂಚು ರೂಪಿಸಿದ್ದ.

    ಅದರಂತೆ ಮಾರ್ಚ್ 27 ರಂದು ರಹೀಮ್ ಖಾನ್, ತನ್ನ ಕೆಲಸಗಾರರಿಗೆ ಕಾಂಡೋಮ್‌ಗಳು (Condoms), ಗುಟ್ಕಾ (Gutkha) ಮತ್ತು ಕಲ್ಲುಗಳನ್ನು ಸಮೋಸಾಳ ಒಳಗೆ ತುಂಬಲು ಸೂಚಿಸಿದ್ದಾನೆ. ಬಳಿಕ ಒಪ್ಪದ ಕೊನೆಗೊಳಿಸಲು ಮುಂದಾದ ಕಂಪನಿಗೆ ಬೆಳಗ್ಗೆ 7:30 ರಿಂದ 9 ರ ನಡುವೆ ಈ ಸಮೋಸಗಳನ್ನು ವಿತರಿಸಿದರು. ಈ ವೇಳೆ ಕಾಂಡೋಮ್‌, ಗುಟ್ಕಾ ಮೊದಲಾದ ವಸ್ತುಗಳು ಸಿಕ್ಕಿವೆ. ಈ ಕುರಿತು ಸಿಬ್ಬಂದಿಯು ಕೀರ್ತಿಕುಮಾರ್ ಅವರಿಗೆ ದೂರು ನೀಡಿದ್ದಾರೆ. ಕೂಡಲೇ ಕೀರ್ತಿ ಕುಮಾರ್‌ ಅವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರು ಸ್ವೀಕರಿಸಿದ ಪೊಲೀಸರು ರಹೀಮ್ ಶೇಖ್, ಫಿರೋಜ್ ಶೇಖ್, ವಿಕ್ಕಿ ಶೇಖ್, ಅಜರ್ ಶೇಖ್ ಮತ್ತು ಮಜರ್ ಶೇಖ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 328 (ವಿಷದ ಮೂಲಕ ನೋವುಂಟುಮಾಡುವುದು), 120-ಬಿ (ಕ್ರಿಮಿನಲ್‌ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.

  • ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆ!

    ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆ!

    ಚೆನ್ನೈ: ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಉಪಯೋಗಿಸಿದ ರಕ್ತದ ಕಲೆಗಳು ಇರುವ ಬ್ಯಾಂಡೇಜ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ತಪ್ಪು ಮಾಡಿರುವ ರೆಸ್ಟೋರೆಂಟ್ ಹೆಸರನ್ನು ತನ್ನ ಆ್ಯಪ್‍ನಿಂದ ಅಮಾನತು ಮಾಡಿದೆ.

    ಭಾನುವಾರದಂದು ಚೆನ್ನೈ ಮೂಲದ ಗ್ರಾಹಕ ಬಾಲಮುರುಘನ್ ಸ್ವಿಗ್ಗಿ ಆಪ್ ಮೂಲಕ ರೆಸ್ಟೋರೆಂಟ್‍ವೊಂದರಿಂದ ನೂಡಲ್ಸ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಕೊಟ್ಟ ನೂಡಲ್ಸ್ ನಲ್ಲಿ ರಕ್ತದ ಕಲೆಗಳು ಇದ್ದ ಬಳಕೆಯಾದ ಬ್ಯಾಂಡೇಜ್ ಪತ್ತೆಯಾಗಿತ್ತು. ಈ ವೇಳೆ ಕೋಪಗೊಂಡ ಗ್ರಾಹಕ ಆರ್ಡರ್ ಮಾಡಿದ್ದ ನೂಡಲ್ಸ್ ಫೋಟೋ ತೆಗೆದು ಸ್ವಿಗ್ಗಿ ಗ್ರಾಹಕರ ಸೇವೆಗೆ ದೂರು ನೀಡಿದ್ದಾರೆ.

    ಆರ್ಡರ್ ಮಾಡಿದ್ದ ನೂಡಲ್ಸ್ ನಲ್ಲಿ ಗ್ರಾಹಕ ಅರ್ಧ ತಿಂದು ಮುಗಿಸಿ ಇನ್ನರ್ಧ ತಿನ್ನುವಾಗ ಅದರಲ್ಲಿ ಬ್ಯಾಂಡೇಜ್ ಪತ್ತೆಯಾಗಿತ್ತು. ಆಗ ಗ್ರಾಹಕ ಈ ಕುರಿತು ಸ್ವಿಗ್ಗಿ ಗ್ರಾಹಕರ ಸೇವೆಗೆ ಹಲವು ಬಾರಿ ಮೆಸೆಜ್ ಕಳುಹಿಸಿದ್ದರು. ಆದರೆ ಮೊದಲು ಈ ದೂರಿಗೆ ಸ್ವಿಗ್ಗಿ ಕಡೆಯಿಂದ ಯಾವ ಪ್ರತಿಕ್ರಿಯೆ ದೊರಕಿರಲಿಲ್ಲ. ಬಳಿಕ ನೂಡಲ್ಸ್ ನಲ್ಲಿ ಪತ್ತೆಯಾದ ಬ್ಯಾಂಡೆಜ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕ ಶೇರ್ ಮಾಡಿದ ಬಳಿಕ ಎಚ್ಚೆತ್ತುಕೊಂಡ ಸ್ವಿಗ್ಗಿ ಕಂಪನಿ ಗ್ರಾಹಕ ಶೇರ್ ಮಾಡಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದೆ.

    ಬಾಲಮುರುಘನ್ ಅವರ ದೂರಿಗೆ ಪ್ರತಿಕ್ರಿಯಿಸಿದ ಸ್ವಿಗ್ಗಿ ಕಂಪನಿ ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಅದರಂತೆ ಬೇಜವಾಬ್ದಾರಿಯಿಂದ ಗ್ರಾಹಕರಿಗೆ ಆಹಾರ ಕಳುಹಿಸಿರುವ ರೆಸ್ಟೋರೆಂಟ್ ಮೇಲೆ ಸ್ವಿಗ್ಗಿ ಕ್ರಮ ತೆಗೆದುಕೊಂಡಿದೆ. ತನ್ನ ರೆಸ್ಟೋರೆಂಟ್ ಪಟ್ಟಿಯಿಂದ ಬೇಜವಾಬ್ದಾರಿ ತೋರಿದ ಆ ರೆಸ್ಟೋರೆಂಟ್ ಅನ್ನು ಅಮಾನತು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಣ್‍ಬೀರ್ ಕಪೂರ್ ಟ್ಯಾಟೂ ಮೇಲೆ ಬ್ಯಾಂಡೇಜ್ ಹಾಕಿಕೊಂಡ್ರಾ ದೀಪಿಕಾ!- ಇಲ್ಲಿದೆ ಅಸಲಿ ಸತ್ಯ

    ರಣ್‍ಬೀರ್ ಕಪೂರ್ ಟ್ಯಾಟೂ ಮೇಲೆ ಬ್ಯಾಂಡೇಜ್ ಹಾಕಿಕೊಂಡ್ರಾ ದೀಪಿಕಾ!- ಇಲ್ಲಿದೆ ಅಸಲಿ ಸತ್ಯ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ‘ಆರ್ ಕೆ’ ಟ್ಯಾಟೂ ಮೇಲೆ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ. ದೀಪಿಕಾ ಮುಂಬೈ ವಿಮಾನ ನಿಲ್ದಾಣನಿಂದ ಹೈದರಾಬಾದ್‍ಗೆ ತೆರಳುತ್ತಿದ್ದಾಗ ಅವರ ಕುತ್ತಿಗೆಗೆ ಬ್ಯಾಂಡೇಜ್ ಹಾಕಿದ್ದು ಕಂಡುಬಂದಿದೆ.

    ಮುಂಬೈನ ವಿಮಾನ ನಿಲ್ದಾಣದಲ್ಲಿ ದೀಪಿಕಾ ಗ್ರೇ ಕ್ರಾಪ್ ಟಾಪ್ ಹಾಕಿ ಅದಕ್ಕೆ ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶೂ ಧರಿಸಿ, ಕುತ್ತಿಗೆ ಮೇಲೆ ಇದ್ದ ‘ಆರ್ ಕೆ’ ಟ್ಯಾಟೂ ಮೇಲೆ ಬ್ಯಾಂಡೇಜ್ ಹಾಕಿದ್ದ ಫೋಟೋ ಮಾಧ್ಯಮಗಳಿಗೆ ಸಿಕ್ಕಿದೆ.

    ದೀಪಿಕಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟಾಗ ನಟ ರಣ್‍ಬೀರ್ ಕಪೂರ್ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು. ಅಷ್ಟೇ ಅಲ್ಲದೇ ತಮ್ಮ ಕುತ್ತಿಗೆ ಮೇಲೆ ‘ಆರ್ ಕೆ’ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ರಣ್‍ಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಆದ ನಂತರ ಕಳೆದ ವರ್ಷ ನಡೆದ ಬ್ರ್ಯಾಂಡ್ ಫೋಟೋಶೂಟ್‍ಗಾಗಿ ದೀಪಿಕಾ ಆ ಟ್ಯಾಟೂವನ್ನು ತೆಗೆಸಿದ್ದರು ಎಂದು ಹೇಳಲಾಗಿತ್ತು.

    ದೀಪಿಕಾ ಹಾಕಿರುವ ಬ್ಯಾಂಡೇಜ್ ಬೆನ್ನು ನೋವಿಗೆ ಹಾಕಿಕೊಳ್ಳುವ ಬ್ಯಾಂಡೇಜ್ ಆಗಿದ್ದು ರಣ್‍ಬೀರ್ ಕಪೂರ್ ಟ್ಯಾಟೂ ಮತ್ತು ಬ್ಯಾಂಡೇಜ್‍ಗೂ ಯಾವುದೇ ಸಂಬಂಧವಿಲ್ಲ.

    ರಣ್‍ಬೀರ್ ಹಾಗೂ ದೀಪಿಕಾ ಬಾಲಿವುಡ್‍ನಲ್ಲಿ ಹತ್ತು ವರ್ಷಗಳಿಂದ ಇದ್ದು, ಇಬ್ಬರು ಒಟ್ಟಿಗೆ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದಾರೆ. ಮೊದಲು ಒಬ್ಬರಿಗೊಬ್ಬರೂ ಪ್ರೀತಿಸುತ್ತಿದ್ದರು. ಆದರೆ ಅವರ ಬ್ರೇಕ್ ಅಪ್ ಆದ ನಂತರ ಇಬ್ಬರು ಒಳ್ಳೆಯ ಸ್ನೇಹಿತರಾಗಿ ಒಟ್ಟಿಗೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

    ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮದ ಸಂರ್ದಶನವೊಂದರಲ್ಲಿ ದೀಪಿಕಾ ಯಾವ ಗುಣ ನಿಮಗೆ ಇಷ್ಟವಿಲ್ಲ ಎಂದು ಕೇಳಿದ ಪ್ರಶ್ನೆಗೆ ರಣ್‍ಬೀರ್ “ದೀಪಿಕಾ ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತಾಳೆ. ಇದು ಅವಳ ಆರೋಗ್ಯಕ್ಕೆ ಸರಿಯಿಲ್ಲ. ಆಕೆ ಕೆಲವು ದಿನಗಳ ಕಾಲ ಕೆಲಸದಿಂದ ದೂರವಿದ್ದು, ರಜೆ ತೆಗೆದುಕೊಳ್ಳಬೇಕು. ಆಕೆಗಾಗಿ ಕೊಂಚ ಸಮಯವಾದ್ದರೂ ಆಕೆ ತೆಗೆದುಕೊಳ್ಳಬೇಕು” ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಈ ಟ್ಯಾಟೂಯಿಂದಾಗಿ ನಡೀತಿಲ್ಲ ರಣ್‍ವೀರ್-ದೀಪಿಕಾ ಮದ್ವೆ!

  • 700 ಗ್ರಾಂ ಚಿನ್ನದ ಪುಡಿಯನ್ನ ಬ್ಯಾಂಡೇಜ್‍ ನಲ್ಲಿ ಇರಿಸಿ ಸಾಗಾಟ ಮಾಡ್ತಿದ್ದ!

    700 ಗ್ರಾಂ ಚಿನ್ನದ ಪುಡಿಯನ್ನ ಬ್ಯಾಂಡೇಜ್‍ ನಲ್ಲಿ ಇರಿಸಿ ಸಾಗಾಟ ಮಾಡ್ತಿದ್ದ!

    ಚೆನ್ನೈ: 26 ಲಕ್ಷ ರೂ. ಮೌಲ್ಯದ ಸುಮಾರು 700 ಗ್ರಾಂನಷ್ಟು ಚಿನ್ನದ ಪುಡಿಯನ್ನು ಪ್ರಯಾಣಿಕನೊಬ್ಬನಿಂದ ವಶಪಡಿಸಿಕೊಂಡ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.

    ಏರ್ ಅರೇಬಿಯಾ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನಿಂದ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಪೌಡರ್ ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ಪ್ರಯಾಣಿಕ ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 4.30ರ ವೇಳೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಕಂಡ ಅಧಿಕಾರಿಗಳು ಆತನನ್ನು ತಡೆದು ವಿಚಾರನೆ ನಡೆಸಿದ್ದರು.

    ಪರಿಶೀಲನೆ ನಡೆಸಿದ ಬಳಿಕ 26.34 ಲಕ್ಷ ರೂ. ಮೌಲ್ಯದ ಚಿನ್ನದ ಪುಡಿಯನ್ನ ತನ್ನ ಎರಡೂ ಕಲುಗಳಲ್ಲಿ ಇಟ್ಟು ಬ್ಯಾಂಡೇಜ್ ಸುತ್ತಿದ್ದು ಪತ್ತೆಯಾಯ್ತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

    ಈ ಚಿನ್ನವನ್ನು ಲಾಭಕ್ಕಾಗಿ ಕೇರಳದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗಲಾಗ್ತಿತ್ತು ಎಂದು ವರದಿಯಾಗಿದೆ.

  • ಫ್ರೈಡ್ ರೈಸ್ ಪಾರ್ಸೆಲ್ ತಗೊಂಡ್ರೆ ಬ್ಯಾಂಡೇಜ್ ಬಂತು!

    ಫ್ರೈಡ್ ರೈಸ್ ಪಾರ್ಸೆಲ್ ತಗೊಂಡ್ರೆ ಬ್ಯಾಂಡೇಜ್ ಬಂತು!

    ಬೆಂಗಳೂರು: ಹೊಟೇಲ್‍ಗಳಲ್ಲಿ ಪಾರ್ಸೆಲ್ ತಗೊಳ್ಳೋ ಮುನ್ನ ಸ್ವಲ್ಪ ಎಚ್ಚರವಾಗಿರಿ. ಯಾಕಂದ್ರೆ ಹಲ್ಲಿ, ಜಿರಲೆ ಬರೋದನ್ನು ಇಲ್ಲಿವರೆಗೂ ನೋಡಿದ್ವಿ. ಆದ್ರೆ, ಈಗ ಫ್ರೈಡ್ ರೈಸ್ ಪಾರ್ಸೆಲ್ ತಗೆದುಕೊಂಡರೆ ಅದರ ಜೊತೆ ಬ್ಯಾಂಡೇಜ್ ಪಾರ್ಸೆಲ್ ಬಂದಿದೆ.

    ಕೆಲ ವಿದ್ಯಾರ್ಥಿನಿಯರು ರಾಮಯ್ಯ ಕಾಲೇಜ್ ಬಸ್‍ಸ್ಟಾಪ್ ಬಳಿ ಇರುವ ಉಡುಪಿ ಗಾರ್ಡನ್ ಹೊಟೇಲ್‍ನಲ್ಲಿ ಫ್ರೈಡ್ ರೈಸ್ ಪಾರ್ಸೆಲ್ ತಗೊಂಡಿದ್ದಾರೆ. ಮನೆಗೆ ಹೋಗಿ ಪಾರ್ಸೆಲ್ ಓಪನ್ ಮಾಡಿ ತಿನ್ನಲು ಮುಂದಾಗಿದ್ದಾರೆ.

    ಎರಡ್ಮೂರು ತುತ್ತು ತಿಂದ ಮೇಲೆ ರೈಸ್ ಜೊತೆಗೆ ಬಳಕೆಯಾಗಿರುವ ಬ್ಯಾಂಡೇಜ್ ಕೂಡ ಸಿಕ್ಕಿದೆ. ಬ್ಯಾಂಡೇಜ್ ನೋಡಿದ ಕೂಡಲೇ ವಿದ್ಯಾರ್ಥಿನಿ ವಾಂತಿ ಮಾಡಿಕೊಂಡಿದ್ದಾಳೆ.

    ಬ್ಯಾಂಡೇಜ್ ಪಾರ್ಸೆಲ್ ಅನ್ನು ಹೊಟೇಲ್‍ನವರಿಗೆ ತೋರಿಸಿದರೆ ಬೈ ಮಿಸ್ಟೇಕ್ ಆಗಿದೆ. ಆಡುಗೆ ಮಾಡುವ ವ್ಯಕ್ತಿ ಹೊಸಬ. ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.